For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು, ಎದೆ ಹಾಲುಣಿಸುವವರು ಕೋವಿಡ್ 19 ಲಸಿಕೆ ಪಡೆಯಬಹುದು, ಆದರೆ ಈ ಅಂಶಗಳು ತಿಳಿದಿರಲಿ

|

ಕೊರೊನಾದ 2ನೇ ಅಲೆ ಭಾರತದಲ್ಲಿ ಭೀಕರವಾಗಿರುವಾಗ ಕೊರೊನಾದಿಂದ ಪಾರಾಗಲು ಲಸಿಕೆಯಿಂದಲೇ ಸಾಧ್ಯ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಭಾರತದಲ್ಲಿ 18 ವರ್ಷದ ಮೇಲ್ಪಟ್ಟವರು ಲಸಿಕೆ ತೆಗೆದುಕೊಳ್ಳಲು ಅನುಮತಿ ಸಿಕ್ಕಿದೆ. ಆದರೆ ಗರ್ಭಿಣಿಯರು ಹಾಗೂ ಎದೆ ಹಾಲುಣಿಸುವ ತಾಯಂದಿರು ಲಸಿಕೆ ಪಡೆಯಬಹುದೇ ಎಂಬ ಸಂದೇಃ ಜನರಲ್ಲಿತ್ತು. ಗರ್ಭಿಣಿಯರು ಹಾಗೂ ಎದೆ ಹಾಲುಣಿಸುವ ತಾಯಂದಿರು ತಾವು ಇಚ್ಛೆಪಟ್ಟರೆ ಲಸಿಕೆಯನ್ನು ಪಡೆಯಬಹುದೆಂದು NTAGI (ದಿ ನ್ಯಾಷನಲ್ ಟೆಕ್ನಿಕಲ್ ಅಡ್ವಿಸೈರಿ ಗ್ರೂಪ್ ಆನ್ ಇಮ್ಯೂನೈಸೇಷನ್) ಹೇಳಿದೆ.

ನೀವು ಕೊರೊನಾ ಲಸಿಕೆ ಪಡೆಯಬೇಕೇ , ಬೇಡ್ವೆ ಎಂಬ ಗೊಂದಲ್ಲಿದ್ದರೆ ಕೋವಿಡ್‌ ಲಸಿಕೆ ತೆಗೆದುಕೊಳ್ಳುವುದರಿಂದ ಪ್ರಯೋಜನವೇನು, ಅಡ್ಡಪರಿಣಾಮವೇನು ಎಂಬುವುದರ ಬಗ್ಗೆ ಮಾಹಿತಿ ಇಲ್ಲಿದೆ:

ಕೊರೊನಾ ಸೋಂಕು ಗರ್ಭಿಣಿಯರಿಗೆ ತಗುಲಿದರೆ ತುಂಬಾ ಸಮಸ್ಯೆಯಾಗುವುದು

ಕೊರೊನಾ ಸೋಂಕು ಗರ್ಭಿಣಿಯರಿಗೆ ತಗುಲಿದರೆ ತುಂಬಾ ಸಮಸ್ಯೆಯಾಗುವುದು

ಕೊರೊನಾ ತಗಲಿ ಸಾವನ್ನಪ್ಪುತ್ತಿರುವ ಗರ್ಭಿಣಿಯರನ್ನು ನೋಡುತ್ತೇವೆ. ಗರ್ಭಾವಸ್ಥೆಯಲ್ಲಿ ಕೊರೊನಾ ತಾಗಿದರೆ ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಕಷ್ಟ. ಕೆಲವರಿಗೆ ಗರ್ಭಪಾತವಾದರೆ ಇನ್ನು ಕೆಲ ಕೇಸ್‌ನಲ್ಲಿ ಗರ್ಭಿಣಿಯ ಪ್ರಾಣಕ್ಕೆ ಅಪಾಯ ಉಂಟಾಗುವುದು ಇಲ್ಲದಿದ್ದರೆ ಅವದಿಪೂರ್ವ ಮಗುವಿನ ಜನನವಾಗುವುದು.

ಲಸಿಕೆ ಪಡೆಯುವುದರಿಂದ ಏನು ಪ್ರಯೋಜನ?

ಲಸಿಕೆ ಪಡೆಯುವುದರಿಂದ ಏನು ಪ್ರಯೋಜನ?

ಕೊರೊನಾ ಲಸಿಕೆ ಪಡೆಯುವುದರಿಂದ ಗರ್ಭಿಣಿಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಒಂದು ವೇಳೆ ಸೋಂಕು ತಗುಲಿದರೂ ಆರೋಗ್ಯ ಸ್ಥಿತಿ ಗಂಭೀರವಾಗುವುದನ್ನು ತಪ್ಪಿಸಲು ಲಸಿಕೆ ನೆರವಾಗುವುದು. ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೊವಾಕ್ಸಿನ್ ಲಸಿಕೆ ಲಭ್ಯವಿದ್ದು ಗರ್ಭಿಣಿಯರು ಇದರಲ್ಲಿ ಯಾವ ಲಸಿಕೆ ಬೇಕಾದರೂ ಎರಡು ಡೋಸ್‌ನಂತೆ ತೆಗೆದುಕೊಳ್ಳಬಹುದಾಗಿದೆ.

ಲಸಿಕೆ ಪಡೆಯಬೇಕೆ, ಬೇಡ್ವೆ ಎಂಬುವುದು ನಿಮ್ಮ ಇಚ್ಛೆಗೆ ಬಿಟ್ಟದ್ದು

ಲಸಿಕೆ ಪಡೆಯಬೇಕೆ, ಬೇಡ್ವೆ ಎಂಬುವುದು ನಿಮ್ಮ ಇಚ್ಛೆಗೆ ಬಿಟ್ಟದ್ದು

ನೀವು ಗರ್ಭಿಣಿಯಾಗಿದ್ದು ಲಸಿಕೆ ಪಡೆಯ ಬಯಸುವುದಾದರೆ ತೆಗೆಯಬಹುದು. ಇದರ ಬಗ್ಗೆ ಏನಾದರೂ ಸಂದೇಹವಿದ್ದರೆ ನಿಮ್ಮ ವೈದ್ಯರ ಬಳಿ ಕೇಳಿ ಸಂಶಯ ಬಗೆಹರಿಸಬಹುದು.

ನೀವು ಈ ಪ್ರಶ್ನೆಗಳನ್ನು ಕೇಳುವುದು ಒಳ್ಳೆಯದು

* ಒಂದು ವೇಳೆ ಕೋವಿಡ್ 19 ವೈರಸ್ ತಗಲಿದರೆ ಮಗುವಿಗೆ ಏನಾದರೂ ಅಪಾಯವಿದೆಯೇ?

* ಕೋವಿಡ್ 19ನಿಂದ ಉಂಟಾಗುವ ಅಪಾಯಗಳೇನು?

ಲಸಿಕೆ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು

* ಕೊರೊನಾ ಲಸಿಕೆ ಗರ್ಭದಲ್ಲಿರುವ ಮಗುವನ್ನು ಹೇಗೆ ರಕ್ಷಿಸುತ್ತದೆ?

* ಲಸಿಕೆಯಿಂದ ಅಡ್ಡಪರಿಣಾಮವಿದೆಯೇ?

* ಗರ್ಭದಲ್ಲಿರುವ ಮಗುವಿಗೆ ರೋಗನಿರೋಧಕ ಸಾಮರ್ಥ್ಯ (antibodies) ಸಿಗುವುದೇ?

ಈ ರೀತಿಯ ಪ್ರಶ್ನೆಗಳಿಗೆ ಉತ್ತರ ಪಡೆದುಕೊಳ್ಳಿ.

ಇತ್ತೀಚೆಗೆ ನಡೆಸಿದ ಸಂಶೋಧನೆ ಪ್ರಕಾರ 3ನೇ ತ್ರೈಮಾಸಿಕದಲ್ಲಿ ಲಸಿಕೆ ಪಡೆದವರಲ್ಲಿ ಆ್ಯಂಟಿಬಾಡೀಸ್ ಸಾಮರ್ಥ್ಯ ಭ್ರೂಣಕ್ಕೂ ಸಿಕ್ಕಿರುವುದು ತಿಳಿದು ಬಂದಿದೆ. ಇದರಿಂದ ಜನನದ ಬಳಿಕ ಕೂಡ ಮಗುವಿಗೆ ರಕ್ಷಣೆ ಸಿಗುವುದು.

ಲಸಿಕೆ ಅಡ್ಡಪರಿಣಾಮಗಳು

ಲಸಿಕೆ ಅಡ್ಡಪರಿಣಾಮಗಳು

ಕೊರೊನಾ ಲಸಿಕೆ ಪಡೆವರಲ್ಲಿ ಕೆಲವರಲ್ಲಿ ಅಡ್ಡಪರಿಣಾಮಗಳು ಉಂಟಾಗಿವೆ. ಈ ಲಸಿಕೆಯ ಅಡ್ಡಪರಿಣಾಮ ಗರ್ಭಿಣಿಯರಲ್ಲಿ ಬೇರೆ, ಇತರರಲ್ಲಿ ಬೇರೆ ಎಂದು ಇರುವುದಿಲ್ಲ.

ಇನ್ನು ನಿಮಗೆ ಅಲರ್ಜಿ ಸಮಸ್ಯೆ ಇದ್ದರೆ ಲಸಿಕೆ ಪಡೆಯದಿರುವುದು ಸೂಕ್ತ, ನಿಮ್ಮ ವೈದ್ಯರ ಸಲಹೆ ಪಡೆದು ಈ ನಿರ್ಧಾರ ತೆಗೆದುಕೊಳ್ಳಿ.

ಎದೆ ಹಾಲುಣಿಸುವ ತಾಯಂದಿರು ಲಸಿಕೆ ಪಡೆಯಬಹುದೇ?

ಎದೆ ಹಾಲುಣಿಸುವ ತಾಯಂದಿರು ಲಸಿಕೆ ಪಡೆಯಬಹುದೇ?

ಈ ಲಸಿಕೆ ದೇಹದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುವುದರ ಆಧಾರದ ಮೇಲೆ ಹೇಳುವುದಾದರೆ ತಾಯಿ ಲಸಿಕೆ ಪಡೆಯುವುದರಿಂದ ಮಗುವಿಗೆ ಪ್ರಯೋಜನವೇ ದೊರೆಯದಲಿದೆ. ಎದೆ ಹಾಲಿನ ಮೂಲಕ ಲಸಿಕೆಯ ಗುಣಗಳು ಮಗುವಿನ ದೇಹವನ್ನು ಸೇರುತ್ತದೆ. ಇದರಿಂದ ಮಗುವಿನಲ್ಲಿ ಕೊರೊನಾ ವಿರುದ್ಧ ಹೋರಾಡುವ ರೋಗ ನಿರೋಧಕ ಶಕ್ತಿ ಹೆಚ್ಚುವುದು.

ಮಗುವಿಗಾಗಿ ಪ್ರಯತ್ನಿಸುತ್ತಿದ್ದರೆ

ಮಗುವಿಗಾಗಿ ಪ್ರಯತ್ನಿಸುತ್ತಿದ್ದರೆ

ನೀವು ಗರ್ಭಧಾರಣೆಗೆ ಪ್ರಯತ್ನ ಮಾಡುತ್ತಿದ್ದರೆ ಕೂಡ ಲಸಿಕೆ ಪಡೆಯಬಹುದು. ಗರ್ಭಧಾರಣೆಗೆ ಮುನ್ನವೇ ಲಸಿಕೆ ಪಡೆದರೆ ಮುಂದೆ ಗರ್ಭಿಣಿಯಾದಾಗ ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.

ಸಲಹೆ: ಕೋವಿಡ್ 19 ಲಸಿಕೆ ಬಗ್ಗೆ ನಿಮ್ಮಲ್ಲಿ ಯಾವುದೇ ಸಂಶಯ ಅಥವಾ ಗೊಂದಲವಿದ್ದರೆ ನಿಮ್ಮ ವೈದ್ಯರ ಬಳಿ ಸಲಹೆ ಪಡೆದ ಬಳಿಕವಷ್ಟೇ ಲಸಿಕೆ ಪಡೆಯಬಹುದೇ, ಇಲ್ಲವೇ ಎಂದು ತೀರ್ಮಾನಿಸಿ.

English summary

Information About COVID-19 Vaccines For Pregnant Or Breastfeeding Women in Kannada

Information about COVID-19 Vaccines for Pregnant or Breastfeeding Women in Kannada, read on..
Story first published: Friday, May 14, 2021, 16:04 [IST]
X
Desktop Bottom Promotion