For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆಯ ಮುಂಚೆಯೇ ವಿಟಮಿನ್ ಸಪ್ಲಿಮೆಂಟ್‌ ತಗೆದುಕೊಳ್ಳುವ ಅಗ್ಯತತೆ ಏನು?

|

ಗರ್ಭಧಾರಣೆಗೆ ಪ್ರಯತ್ನಿಸುವ ಮೊದಲು ಒಂದು ಪ್ರಸವಪೂರ್ವ ಜೀವಸತ್ವವನ್ನು ಪ್ರತಿದಿನವೂ ತೆಗೆದುಕೊಳ್ಳುವ ಅಭ್ಯಾಸವನ್ನು ಇಟ್ಟುಕೊಂಡವರು ನೀವಾಗಿದ್ದರೆ, ಮುಂದಿನ ದಿನಗಳಲ್ಲಿ ಆ ಒಂದು ಉತ್ತಮ ನಿರ್ಧಾರಕ್ಕಾಗಿ ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳುವಂತಾದೀತು!

ನೀವು ಸೇವಿಸುವ ಆಹಾರವು ಅದೆಷ್ಟೇ ಆರೋಗ್ಯಯುತವಾದದ್ದೇ ಆಗಿರಲೀ, ಅದಕ್ಕೆ ಪೂರಕವಾಗಿ ಜೀವಸತ್ವಗಳನ್ನು ತೆಗೆದುಕೊಳ್ಳುವುದು ಅತ್ಯಂತ ಸೂಕ್ತ. ನಿಜ ಹೇಳಬೇಕೆಂದರೆ, ಪೋಷಕಾಂಶಗಳಿಂದ ಪರಿಪೂರ್ಣವಾದ ಆಹಾರವನ್ನು ಪ್ರತಿದಿನವೂ ಪಡೆದುಕೊಳ್ಳುವುದು ಯಾರಿಂದಲೂ ಸಾಧ್ಯವಿಲ್ಲ ಎಂದೇ ಹೇಳಬೇಕು! ವಿಶೇಷವಾಗಿ ಗರ್ಭಿಣಿಯಾದ ಪೂರ್ವಾವಧಿಯಲ್ಲಂತೂ ಮುಂಜಾವಿನ ಕಿರಿಕಿರಿಯು (ಮಾರ್ನಿಂಗ್ ಸಿಕ್ನೆಸ್) ಹಸಿವನ್ನು ಹತ್ತಿಕ್ಕುವ ಒಂದು ಅತ್ಯಂತ ಸಾಮಾನ್ಯ ಕಾರಕವೆಂದೇ ಹೇಳಬಹುದು.

ಹೆರಿಗೆಯ ಪೂರ್ವಾವಧಿಯಲ್ಲಿ ತೆಗೆದುಕೊಳ್ಳುವ ಒಂದು ಉತ್ತಮ ಭೋಜನದ ಸ್ಥಾನವನ್ನು ಪ್ರತಿದಿನವೂ ಸೇವಿಸುವ ಪ್ರಸವಪೂರ್ವ ಜೀವಸತ್ವಗಳು ತುಂಬುವುದಿಲ್ಲವಾದರೂ, ಅವು ಒಂದು "ಪೌಷ್ಟಿಕ ಆಹಾರ ವಿಮೆ" ಯ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಅದು ಹೇಗೆಂದರೆ, ಪ್ರತಿದಿನಕ್ಕೆಂದು ನಿಗದಿಗೊಳಿಸಲಾಗಿರುವ ಪೋಷಕಾಂಶದ ಮಿತಿಯನ್ನು ತಲುಪಲು ಆಗೊಮ್ಮೆ ಈಗೊಮ್ಮೆ ನೀವು ವಿಫಲರಾದರೂ ಕೂಡ, ನೀವು ಪ್ರತಿದಿನವೂ ತಪ್ಪದೇ ಸೇವಿಸುವ ಆ ಪ್ರಸವಪೂರ್ವ ಜೀವಸತ್ವಗಳು, ಹುಟ್ಟಲಿರುವ ನಿಮ್ಮ ಭಾವೀ ಮಗುವಿಗೆ ಯಾವುದೇ ಪೋಷಕಾಂಶದ ಕೊರತೆಯಾಗದಿರುವುದನ್ನು ಅವು ಖಚಿತಪಡಿಸುತ್ತವೆ.

ಉದಾಹರಣೆಗೆ, ಅನೇಕ ಮಹಿಳೆಯರಲ್ಲಿ ವಿಟಮಿನ್ ಡಿ ಯ ಕೊರತೆ ಇರುತ್ತದೆ. ಆದರೆ, ಈ ಪ್ರಸವಪೂರ್ವ ಜೀವಸತ್ವಗಳನ್ನು ಸೇವಿಸಿದಲ್ಲಿ, ಅವು ನಿಮ್ಮ ಶರೀರದ ವಿಟಮಿನ್ ಡಿ ಯ ಕೊರತೆಯನ್ನು ನಿವಾರಿಸುವುದರ ಮೂಲಕ, ವಿಟಮಿನ್ ಡಿ ಯ ಮಟ್ಟವನ್ನು ಅಪೇಕ್ಷಿತ ಮಟ್ಟಕ್ಕೆ ತಲುಪಿಸುತ್ತವೆ.

ವಾಕರಿಕೆಯ ಕಿರಿಕಿರಿಯನ್ನು ಹಿಮ್ಮೆಟ್ಟಿಸುತ್ತದೆ

ವಾಕರಿಕೆಯ ಕಿರಿಕಿರಿಯನ್ನು ಹಿಮ್ಮೆಟ್ಟಿಸುತ್ತದೆ

ವಿಟಮಿನ್ ಬಿ6 ವಾಕರಿಕೆಯನ್ನು ತಗ್ಗಿಸುವಲ್ಲಿ ನೆರವಾಗುತ್ತದೆ - ಸಂಶೋಧನೆಯು ತೋರಿಸಿಕೊಟ್ಟಿರುವ ಪ್ರಕಾರ, ಗರ್ಭಧಾರಣೆಗೆ ಮೊದಲು ಮತ್ತು/ಅಥವಾ ಗರ್ಭಧಾರಣೆಯ ನಂತರದ ಮೊದಲ ಕೆಲವು ವಾರಗಳವರೆಗೆ, ಕನಿಷ್ಟ 10 ಎಮ್.ಸಿ.ಜಿ. ಯಷ್ಟು ಬಿ6 ಜೀವಸತ್ವವನ್ನು ಹೊಂದಿರುವ ಮಲ್ಟಿವಿಟಮಿನ್ ಅನ್ನು ಪ್ರತಿದಿನವೂ ಸೇವಿಸಿದ ಮಹಿಳೆಯರಲ್ಲಿ, ಅವರ ಪ್ರಥಮ ತ್ರೈಮಾಸಿಕದ ಅವಧಿಯಲ್ಲಿ ವಾಕರಿಕೆಯು ಕಿರಿಕಿರಿಯು (ಅರ್ಥಾತ್ ಮುಂಜಾವಿನ ಕಿರಿಕಿರಿ) ಅದೆಷ್ಟೋ ಕಡಿಮೆಯಾಗಿತ್ತು.

ಜನನ ದೋಷಗಳ ಅಪಾಯವನ್ನು ಕಡಿಮೆ ಮಾಡಿರಿ

ಜನನ ದೋಷಗಳ ಅಪಾಯವನ್ನು ಕಡಿಮೆ ಮಾಡಿರಿ

ಪ್ರಸವಪೂರ್ವ ಜೀವಸತ್ವವನ್ನು ತೆಗೆದುಕೊಳ್ಳುವುದಕ್ಕೆ ಅತ್ಯಂತ ಪ್ರಮುಖ ಕಾರಣವು (ಹಾಗೂ ಅತ್ಯಂತ ಪ್ರಚುರಗೊಳಿಸಲ್ಪಟ್ಟಿರುವ) ಪ್ರಾಯಶ: ಅದರಲ್ಲಿ ಅಡಕವಾಗಿರುವ ಫ಼ೋಲಿಕ್ ಆಮ್ಲದ ಅಂಶ (ವಿಟಮಿನ್ ಬಿ9 ಅಥವಾ ಆಹಾರವಸ್ತುವಿನ ರೂಪದಲ್ಲಾದರೆ ಫ಼ೋಲೇಟ್). ಅಧ್ಯಯನಗಳು ತೋರಿಸಿಕೊಟ್ಟಿರುವ ಪ್ರಕಾರ, ವೀರ್ಯಾಣುವು ಅಂಡಾಣುವನ್ನು ತಲುಪುವುದಕ್ಕೆ ಮುಂಚೆ ಹಾಗೂ ಗರ್ಭಧಾರಣೆಯ ಪೂರ್ವಾವಧಿಯಲ್ಲಿ ಸಾಕಷ್ಟು ಪೋಲಿಕ್ ಆಮ್ಲವನ್ನು ಮತ್ತು ಬಿ12 ತೆಗೆದುಕೊಳ್ಳುವುದರಿಂದ, ನ್ಯೂರಲ್ ಟ್ಯೂಬ್ ದೋಷಗಳು (ಸ್ಪೈನಾ ಬಿಫಿಡಾದಂತಹ) ನಾಟಕೀಯ ರೀತಿಯಲ್ಲಿ ಕಡಿಮೆಯಾಗುತ್ತವೆ ಹಾಗೂ ಜೊತೆಗೆ ಬೆಳೆಯುತ್ತಿರುವ ಭ್ರೂಣದ ಹುಟ್ಟು ಹೃದಯ ದೋಷಗಳ ಅಪಾಯವೂ ಕಡಿಮೆಯಾಗುತ್ತದೆ.

ಆಟಿಸಮ್ ನ ಅಪಾಯವನ್ನು ತಗ್ಗಿಸುತ್ತದೆ

ಆಟಿಸಮ್ ನ ಅಪಾಯವನ್ನು ತಗ್ಗಿಸುತ್ತದೆ

ಹಲವಾರು ಅಧ್ಯಯನಗಳು ತೋರಿಸಿಕೊಟ್ಟಿರುವ ಪ್ರಕಾರ, ಗರ್ಭಿಣಿಯಾಗುವುದಕ್ಕೆ ಮೊದಲು ಅಥವಾ ಗರ್ಭಿಣಿಯಾಗಿರುವಾಗ, ನಿಯಮಿತವಾಗಿ ಪ್ರಸವಪೂರ್ವ ಜೀವಸತ್ವಗಳನ್ನು ಸೇವಿಸುವ ತಾಯಂದಿರ ಮಕ್ಕಳು ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್ ಗೆ ತುತ್ತಾಗುವ ಸಾಧ್ಯತೆ ಕಡಿಮೆಯಾಗಿರುತ್ತದೆ.

ಅವಧಿಪೂರ್ವ ಜನನವನ್ನು ತಡೆಯಲು ನೆರವಾಗುತ್ತದೆ

ಅವಧಿಪೂರ್ವ ಜನನವನ್ನು ತಡೆಯಲು ನೆರವಾಗುತ್ತದೆ

ಗರ್ಭಿಣಿಯಾಗಿರುವ ಎಲ್ಲ ದಿನಗಳಲ್ಲೂ ಪ್ರಸವಪೂರ್ವ ಜೀವಸತ್ವವನ್ನು ತೆಗೆದುಕೊಳ್ಳುವ ವಿಚಾರವು ಅವಧಿಪೂರ್ವ ಜನನದ ಅಪಾಯವು ಕಡಿಮೆಯಾಗುವುದರೊಂದಿಗೆ ಸಂಬಂಧ ಹೊಂದಿದೆ. ಪ್ರಾಯಶ: ಇದಕ್ಕೆ ಕಾರಣ, ಪ್ರಸವಪೂರ್ವ ಜೀವಸತ್ವವು ವಿಶೇಷವಾಗಿ ವಿಟಮಿನ್ ಬಿ12 ಅನ್ನು ಒಳಗೊಂಡಿರುವುದು. ವಿಟಮಿನ್ ಬಿ12 ನ ಕೊರತೆಯು ಕಡಿಮೆ ಜನನ ತೂಕಕ್ಕೆ ಹಾಗೂ ಅವಧಿಪೂರ್ವ ಜನನಕ್ಕೆ ಕಾರಣವಾಗುತ್ತದೆ.

ಅತ್ಯುತ್ತಮ ಪ್ರಸವಪೂರ್ವ ಜೀವಸತ್ವವನ್ನು ಆಯ್ದುಕೊಳ್ಳುವುದಕ್ಕೆ ಸಲಹೆಗಳು ಇಲ್ಲಿವೆ:

ಅತ್ಯುತ್ತಮ ಪ್ರಸವಪೂರ್ವ ಜೀವಸತ್ವವನ್ನು ಆಯ್ದುಕೊಳ್ಳುವುದಕ್ಕೆ ಸಲಹೆಗಳು ಇಲ್ಲಿವೆ:

ಮಾರುಕಟ್ಟೆಯಲ್ಲಂತೂ ಪ್ರಸವಪೂರ್ವ ಜೀವಸತ್ವದ ಸಪ್ಲಿಮೆಂಟ್ ಗಳು ದಂಡಿಯಾಗಿ ದೊರೆಯುತ್ತವೆ - ಹಾಗಾದರೆ ನಿಮಗೆ ಬೇಕಾದ ಅತ್ಯುತ್ತಮ ಪ್ರಸವಪೂರ್ವ ಜೀವಸತ್ವವನ್ನು ನೀವು ಹೇಗೆ ಆಯ್ದುಕೊಳ್ಳುವಿರಿ ? ಸಾಮಾನ್ಯವಾಗಿ ವೈಯಕ್ತಿಕ ಅಗತ್ಯಗಳು ಬೇರೆ ಬೇರೆಯಾಗಿರುವ ಸಾಧ್ಯತೆ ಇರುತ್ತದೆ. ಆದ್ದರಿಂದ, ನಿಮಗೆ ಸರಿಹೊಂದುವ ಸೂಕ್ತವಾದ ಪ್ರಸವಪೂರ್ವ ಜೀವಸತ್ವದ ಕುರಿತು ನಿರ್ಧರಿಸುವುದಕ್ಕಾಗಿ, ನೇರವಾಗಿ ನಿಮ್ಮ ವೈದ್ಯರೊಡನೆ ಚರ್ಚಿಸುವುದು ಅತ್ಯುತ್ತಮ ಉಪಾಯ.

ಅದೇ ವೇಳೆಗೆ, ನಿಮಗೆ ಸೂಕ್ತವಾದ ಅತ್ಯುತ್ತಮ ಪ್ರಸವಪೂರ್ವ ಜೀವಸತ್ವವನ್ನು ಆಯ್ದುಕೊಳ್ಳಲು ನೆರವಾಗುವುದಕ್ಕಾಗಿ ನಾವೂ ಕೂಡ ನಿಮಗಾಗಿ ಒಂದಿಷ್ಟು ಸಲಹೆಗಳನ್ನಿಲ್ಲಿ ಕೊಡುತ್ತಿದ್ದೇವೆ:

ಸರಿಯಾದ ಪೋಷಕತತ್ತ್ವಗಳಿರುವ ವಿಟಮಿನ್ ಅನ್ನು ಪಡೆದುಕೊಳ್ಳಿರಿ

ಫೋಲಿಕ್ ಆಮ್ಲ (ವಿಟಮಿನ್ ಬಿ9): 400-600 ಮೈಕ್ರೋಗ್ರಾಂ.

ಫೋಲಿಕ್ ಆಮ್ಲ (ವಿಟಮಿನ್ ಬಿ9): 400-600 ಮೈಕ್ರೋಗ್ರಾಂ.

ಭ್ರೂಣದ ನ್ಯೂರಲ್ ಟ್ಯೂಬ್ ಗರ್ಭಧಾರಣೆಯ ಮೊದಲ ತಿಂಗಳಲ್ಲೇ ರೂಪುಗೊಳ್ಳುವುದರಿಂದ, ಹೆಚ್ಚಿನ ಮಹಿಳೆಯರು ತಾವು ಗರ್ಭಿಣಿಯರೆಂದು ಅರಿತುಕೊಳ್ಳುವುದಕ್ಕೆ ಮೊದಲೇ ಅಥವಾ ಗರ್ಭಧಾರಣೆಗೆ ಪ್ರಯತ್ನಿಸುವುದಕ್ಕೆ ಮೊದಲೇ ಪ್ರಸವಪೂರ್ವ ಜೀವಸತ್ವವನ್ನು ಸೇವಿಸಲಾರಂಭಿಸುವುದು ಅತ್ಯುತ್ತಮ ವಿಚಾರ. ಫ಼ೋಲೇಟ್ ನಿಂದ ಸಮೃದ್ಧವಾಗಿರುವ ಆಹಾರವಸ್ತುಗಳನ್ನು ಯಥೇಚ್ಛವಾಗಿ ಸೇವಿಸುವುದರ ಜೊತೆಗೆ, ಕನಿಷ್ಟ 400 ಮೈಕ್ರೋಗ್ರಾಂ ಗಳಷ್ಟಾದರೂ ಫೋಲಿಕ್ ಆಮ್ಲ (ಅರ್ಥಾತ್ ವಿಟಮಿನ್ ಬಿ9) ಇರುವ ಜೀವಸತ್ವವೊಂದನ್ನು ಆಯ್ದುಕೊಳ್ಳಿರಿ. ಜೊತೆಗೆ ನೀವು ಗರ್ಭಿಣಿಯಾಗಿರುವವರೆಗೂ ಎಲ್ಲ ಮೂಲಗಳಿಂದಲೂ 600 ಮೈಕ್ರೋಗ್ರಾಂ ಗಳಷ್ಟು ಪೋಲಿಕ್ ಆಮ್ಲವನ್ನು ಸೇವಿಸಿರಿ. ನ್ಯೂರಲ್ ದೋಷದ ಸಾಂಸಾರಿಕ ಹಿನ್ನೆಲೆಯಿರುವ ಮಹಿಳೆಯರಿಗೆ, ಮಾರ್ಗದರ್ಶೀ ಸೂತ್ರವು ಸಲಹೆ ಮಾಡುವುದೇನೆಂದರೆ, ಅವರು ಮೇಲೆ ಸೂಚಿಸಿರುವುದಕ್ಕಿಂತಲೂ ಹತ್ತು ಪಟ್ಟು ಅಧಿಕ (ಅಥವಾ 4 ಮಿಲಿಗ್ರಾಂ ನಷ್ಟು) ಫೋಲಿಕ್ ಆಮ್ಲವನ್ನು ಫೋಲಿಕ್ ಆಮ್ಲದ ಸಪ್ಲಿಮೆಂಟ್ ಗಳಿಂದ ಪಡೆದುಕೊಳ್ಳಬೇಕೆಂದು. ಯಾವುದೇ ಹೆಚ್ಚುವರಿ ಸಪ್ಲಿಮೆಂಟ್ ಗಳನ್ನು ತೆಗೆದುಕೊಳ್ಳುವುದಕ್ಕೆ ಮೊದಲು ಯಾವಾಗಲೂ ನಿಮ್ಮ ವೈದ್ಯರೊಡನೆ ಸಮಾಲೋಚಿಸಿರಿ.

ಕಬ್ಬಿಣಾಂಶ: 30 ಮಿಲಿಗ್ರಾಂ.

ಕಬ್ಬಿಣಾಂಶ: 30 ಮಿಲಿಗ್ರಾಂ.

ಮಗುವಿನ ದೇಹದ ಜೀವಕೋಶಗಳ ನಿರ್ಮಾಣದ ಬುನಾದಿಯೇ ಈ ಖನಿಜವಾಗಿದೆ ಹಾಗೂ ಬೇರಾವುದೇ ಸಮಯಕ್ಕಿಂತಲೂ ನೀವು ಗರ್ಭಿಣಿಯಾಗಿರುವಾಗ ನಿಮ್ಮ ಮಗುವಿಗೆ ಈ ಖನಿಜದ ಅಗತ್ಯ ಇನ್ನಷ್ಟು ಹೆಚ್ಚಾಗಿರುತ್ತದೆ. ಅನೇಕ ಮಹಿಳೆಯರ ಹಾಗೆ, ಗರ್ಭಿಣಿಯಾಗಿರುವಾಗ ನೀವೂ ಒಂದೊಮ್ಮೆ ರಕ್ತಹೀನತೆಗೆ ತುತ್ತಾದಲ್ಲಿ, ಇನ್ನೂ ಹೆಚ್ಚಿನ ಕಬ್ಬಿಣಾಂಶವನ್ನು ಸೇವಿಸುವಂತೆ ನಿಮ್ಮ ವೈದ್ಯರು ನಿಮಗೆ ಸಲಹೆ ಮಾಡಿಯಾರು.

ಅಯೋಡಿನ್: 150 ಮೈಕ್ರೋಗ್ರಾಂ

ಅಯೋಡಿನ್: 150 ಮೈಕ್ರೋಗ್ರಾಂ

ಜನಿಸಲಿರುವ ನಿಮ್ಮ ಭಾವೀ ಶಿಶುವಿನ ಥೈರಾಯಿಡ್ ಹಾಗೂ ಮೆದುಳಿನ ಬೆಳವಣಿಗೆಯಲ್ಲಿ ಅಯೋಡಿನ್ ಪಾತ್ರವು ಮಹತ್ವದ್ದಾಗಿದೆ. ಅನೇಕ ಅಮೇರಿಕನ್ ಮಹಿಳೆಯರು ಈ ಅವಶ್ಯಕ ಖನಿಜವನ್ನು ಸಾಕಷ್ಟು ಪ್ರಮಾಣದಲ್ಲಿ ಪಡೆಯುತ್ತಿಲ್ಲವೆಂದು ಅಧ್ಯಯನಗಳು ತೋರಿಸಿವೆ. ಆದ್ದರಿಂದಲೇ, ಗರ್ಭಿಣಿಯರು 150 ಮೈಕ್ರೋಗ್ರಾಂ ನಷ್ಟು ಅಯೋಡಿನ್ ಅನ್ನು ಒಳಗೊಂಡಿರುವ ಸಪ್ಲಿಮೆಂಟ್ ಅನ್ನು ಪ್ರತಿದಿನವೂ ಸೇವಿಸಬೇಕೆಂದು ಅಮೇರಿಕನ್ ಅಕಾಡೆಮಿ ಆಫ಼್ ಪೇಡಿಯಾಟ್ರಿಕ್ಸ್ (ಎ.ಎ.ಪಿ) ಸಲಹೆ ಮಾಡುತ್ತದೆ. ಎಲ್ಲ ಪ್ರಸವಪೂರ್ವ ಜೀವಸತ್ವಗಳೂ ಅಷ್ಟೊಂದು ಪ್ರಮಾಣದಲ್ಲಿ ಅಯೋಡಿನ್ ಅನ್ನು ಒಳಗೊಂಡಿರಲಾರವು. ಹಾಗಾಗಿ, ಒಂದೊಮ್ಮೆ ನೀವು ತೆಗೆದುಕೊಳ್ಳಬೇಕೆಂದು ಉದ್ದೇಶಿಸಿರುವ ಸಪ್ಲಿಮೆಂಟ್ ಕೂಡ ಅಷ್ಟೊಂದು ಪ್ರಮಾಣದ ಅಯೋಡಿನ್ ಅನ್ನು ಒಳಗೊಂಡಿಲ್ಲವೆಂದಾದಲ್ಲಿ, ಅಯೋಡಿನ್ ಸಪ್ಲಿಮೆಂಟ್ ಅನ್ನು ಪ್ರತ್ಯೇಕವಾಗಿ ತೆಗೆದುಕೊಳ್ಳುವುದರ ಕುರಿತು ನಿಮ್ಮ ವೈದ್ಯರೊಡನೆ ಸಮಾಲೋಚಿಸಿರಿ.

ವಿಟಮಿನ್ ಬಿ6: 2 ಮಿಲಿಗ್ರಾಮ್

ವಿಟಮಿನ್ ಬಿ6: 2 ಮಿಲಿಗ್ರಾಮ್

ವಿಟಮಿನ್ ಬಿ ಯ ಈ ಪ್ರಕಾರವು, ಮುಂಜಾವಿನ ಕಿರಿಕಿರಿಯು ತಲೆದೋರುವ ಸಾಧ್ಯತೆಯನ್ನು ತಗ್ಗಿಸುವಲ್ಲಿ ನೆರವಾಗುತ್ತದೆ. ನಿಜ ಹೇಳಬೇಕೆಂದರೆ, ಮುಂಜಾವಿನ ಕಿರಿಕಿರಿಗೆಂದೇ ಸಲಹೆ ಮಾಡುವ ಔಷಧಗಳು ಪಿರಿಡೋಕ್ಸಿನ್ (ವಿಟಮಿನ್ ಬಿ6) ಹಾಗೂ ಡಾಕ್ಸೈಲಮೈನ್ (ಒಂದು ಬಗೆಯ ಆ್ಯಂಟಿ-ಹಿಸ್ಟಮಿನ್) ಗಳ ಸಂಯೋಜನೆಯೇ ಆಗಿರುತ್ತದೆ.

ಡಿ.ಹೆಚ್.ಎ.

ಡಿ.ಹೆಚ್.ಎ.

ಇದರ ಕುರಿತಂತೆ ನಿಮ್ಮ ವೈದ್ಯರೊಡನೆ ಸಮಾಲೋಚಿಸಿರಿ. ನಿಯಮಿತವಾದ ಪ್ರಸವಪೂರ್ವ ಜೀವಸತ್ವಗಳು ಡಿ.ಹೆಚ್.ಎ. ಯನ್ನು ಒಳಗೊಂಡಿರಲಾರವು. ಅನೇಕ ಬಗೆಯ ಮೀನುಗಳಲ್ಲಿ ಕಂಡುಬರುವ ಒಮೇಗಾ - 3 ಕೊಬ್ಬಿನಾಮ್ಲವೇ ಡಿ.ಹೆಚ್.ಎ. ಡಿ.ಹೆಚ್.ಎ., ಜನನಕ್ಕೆ ಮೊದಲೂ ಹಾಗೂ ಜನನದ ಬಳಿಕವೂ ಮಗುವಿನ ಮೆದುಳಿನ ವಿಕಾಸಕ್ಕೆ ನೆರವಾಗುತ್ತದೆ. ಶಿಫಾರಿಸಲ್ಪಡುವ ಎರಡರಿಂದ ಮೂರು ಸರ್ವಿಂಗ್ ಗಳಷ್ಟು (8 ರಿಂದ 12 ಜೌನ್ಸ್ ಗಳಷ್ಟು) ಡಿ.ಹೆಚ್.ಎ. ಯನ್ನು ಪಡೆಯಲು ನೀವು ಅಸಮರ್ಥರಾದಲ್ಲಿ, ಒಮೇಗಾ - 3 ಕೊಬ್ಬಿನಾಮ್ಲದ ಸಪ್ಲಿಮೆಂಟ್ ಅನ್ನು ತೆಗೆದುಕೊಳ್ಳುವ ಅಗತ್ಯವಿದೆಯೇ ಎಂದು ನಿಮ್ಮ ವೈದ್ಯರನ್ನು ಕೇಳಿ ತಿಳಿದುಕೊಳ್ಳಿರಿ. ಸರ್ವೇಸಾಮಾನ್ಯವಾಗಿ, ನಿಮಗೆ ದಿನವೊಂದಕ್ಕೆ 200 ರಿಂದ 300 ಮಿಲಿಗ್ರಾಂ ನಷ್ಟು ಡಿ.ಹೆಚ್. ಎ. ಯ ಅಗತ್ಯವಿರುತ್ತದೆ.

ಕ್ಯಾಲ್ಸಿಯಂ:

ಕ್ಯಾಲ್ಸಿಯಂ:

ಮಹಿಳೆಯರ ಪಾಲಿನ ಅತ್ಯಂತ ಮಹತ್ತರವಾದ ಮತ್ತೊಂದು ಪೋಷಕ ತತ್ತ್ವವು ಕ್ಯಾಲ್ಸಿಯಂ. ವಿಶೇಷವಾಗಿ, ನಿಮ್ಮ ಶಿಶುವಿನ ಇನ್ನೊಂದಿಷ್ಟು ಎಲುಬುಗಳ ಬೆಳವಣಿಗೆಗೆ ನೀವು ಆಸರೆಯಾಗಿರುವಾಗ, ಅರ್ಥಾತ್ ನೀವು ಗರ್ಭಿಣಿಯಾಗಿರುವಾಗ. ಗರ್ಭಿಣಿಯರನ್ನೂ ಒಳಗೊಂಡಂತೆ, 19 ರಿಂದ 50 ರ ನಡುವಿನ ಎಲ್ಲ ಮಹಿಳೆಯರಿಗೂ ದಿನವೊಂದಕ್ಕೆ 1000 ಮಿಲಿಗ್ರಾಮ್ ನಷ್ಟು ಕ್ಯಾಲ್ಸಿಯಂ ನ ಅವಶ್ಯಕತೆ ಇದ್ದೇ ಇದೆ. ಹಾಲು, ಗಿಣ್ಣು, ಹಾಗೂ ಇನ್ನಿತರ ಕ್ಯಾಲ್ಸಿಯಂ ನಿಂದ ಸಮೃದ್ಧವಾಗಿರುವ ಆಹಾರವಸ್ತುಗಳ ರೂಪದಲ್ಲಿ ನಿಮ್ಮ ಆಹಾರಕ್ರಮದ ಮೂಲಕವೇ ನೀವು ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಅನ್ನು ಪಡೆದುಕೊಳ್ಳುವುದರ ಜೊತೆಗೆ, ಪ್ರಸವಪೂರ್ವ ಜೀವಸತ್ವದಿಂದಲೂ ನೀವು ನಿಮ್ಮ ದೇಹಕ್ಕೆ ಅಗತ್ಯವಿರುವ ಹೆಚ್ಚುವರಿ ಕ್ಯಾಲ್ಸಿಯಂ ನ್ನು ಪಡೆದುಕೊಳ್ಳಬಹುದು. ಕಬ್ಬಿಣಾಂಶಕ್ಕಾಗಿ ಸಪ್ಲಿಮೆಂಟ್ ಅನ್ನು ತೆಗೆದುಕೊಳ್ಳುವಾಗಲೇ ಕ್ಯಾಲ್ಸಿಯಂ ಅನ್ನು 250 ಮಿಲಿಗ್ರಾಂ ಗಳಿಗಿಂತಲೂ ಹೆಚ್ಚಿಗೆ ತೆಗೆದುಕೊಳ್ಳಬೇಡಿರಿ. ಏಕೆಂದರೆ, ದೇಹದಿಂದ ಕಬ್ಬಿಣಾಂಶವು ಹೀರಿಕೊಳ್ಳಲ್ಪಡುವಲ್ಲಿ ಕ್ಯಾಲ್ಸಿಯಂ ಅಡ್ಡಿಯನ್ನುಂಟು ಮಾಡುತ್ತದೆ. ನೀವು ಅಗತ್ಯ ಪ್ರಮಾಣದಷ್ಟು ಕ್ಯಾಲ್ಸಿಯಂ ಅನ್ನು ಸೇವಿಸುತ್ತಿಲ್ಲವೆಂದು ನಿಮ್ಮ ವೈದ್ಯರಿಗೆ ಅನಿಸಿದಲ್ಲಿ, ಅವರು ಹೆಚ್ಚುವರಿ ಸಪ್ಲಿಮೆಂಟ್ ಅನ್ನು ತೆಗೆದುಕೊಳ್ಳುವಂತೆ ನಿಮಗೆ ಸಲಹೆ ಮಾಡಿಯಾರು.

ವಿಟಮಿನ್ ಎ

ವಿಟಮಿನ್ ಎ

4,000 ಐ.ಯು. ಅಥವಾ 800 ಮೈಕ್ರೋ ಗ್ರಾಂಗಳಿಗಿಂತಲೂ ಹೆಚ್ಚಿಗೆ ಬೇಡ. 10,000 ಐ.ಯು. ಗಳಿಗಿಂತಲೂ ಅಧಿಕವಾದರೆ, ಅದು ವಿಷಕಾರಿಯಾಗುವ ಸಾಧ್ಯತೆಯೇ ಹೆಚ್ಚು. ಅನೇಕ ಉತ್ಪಾದಕರು ತಮ್ಮ ಉತ್ಪಾದನೆಯ ವಿಟಮಿನ್ ಸಪ್ಲಿಮೆಂಟ್ ಗಳಲ್ಲಿ ವಿಟಮಿನ್ ಎ ಯ ಪ್ರಮಾಣವನ್ನು ಕಡಿತಗೊಳಿಸಿದ್ದಾರೆ ಇಲ್ಲವೇ ವಿಟಮಿನ್ ಎ ಹೆಚ್ಚು ಸುರಕ್ಷಿತ ಮೂಲವಾಗಿರುವ ಬೇಟಾ-ಕೆರೋಟಿನ್ ನಿಂದ ವಿಟಮಿನ್ ಎ ಯನ್ನು ಪಲ್ಲಟಗೊಳಿಸಿದ್ದಾರೆ.

ವಿಟಮಿನ್ ಡಿ

ಕನಿಷ್ಟ 400 ಐ.ಯು. ನಿಮ್ಮ ಶಿಶುವಿನ ಮೂಳೆಗಳ ಬೆಳವಣಿಗೆಗೆ ಹಾಗೂ ಶಿಶುವಿನ ತಾಯಿಯಾಗಿರುವ ನಿಮ್ಮ ಮೂಳೆಗಳು ಗಟ್ಟಿಮುಟ್ಟಾಗಿರುವುದಕ್ಕೆ ಕ್ಯಾಲ್ಸಿಯಂ ಜೊತೆಗೆ ನಿಮ್ಮ ದೇಹಕ್ಕೆ ವಿಟಮಿನ್ ಡಿ ಯ ಅಗತ್ಯವೂ ಇದೆ. ಬಹುತೇಕ ಪ್ರಸವಪೂರ್ವ ಜೀವಸತ್ವಗಳು 400 ಐ.ಯು. ನಷ್ಟು ವಿಟಮಿನ್ ಡಿ ಯನ್ನು ಒಳಗೊಂಡಿವೆ, ಆದರೆ 600 ಐ.ಯು. ನಷ್ಟು ತೆಗೆದುಕೊಳ್ಳುವಂತೆ ಅಮೇರಿಕನ್ ಕಾಲೇಜ್ ಆಫ಼್ ಆಬ್ಸ್ಟೇಟ್ರಿಷಿಯನ್ಸ್ ಆ್ಯಂಡ್ ಗೈನೇಕಾಲಜಿಸ್ಟ್ಸ್ (ಎ.ಸಿ.ಒ.ಜಿ) ಸಲಹೆ ಮಾಡುತ್ತದೆ. ಉಳಿದ ವ್ಯತ್ಯಾಸವನ್ನು ನೀವು ವಿಟಮಿನ್ ಡಿ - ಫ಼ೋರ್ಟಿಫ಼ೈಡ್ ಹಾಲು, ಸಾಲ್ಮನ್ ಹಾಗೂ ಮೊಟ್ಟೆಯ ಹಳದಿ ಲೋಳೆಗಳಿಂದ ಪಡೆದುಕೊಳ್ಳಬಹುದು. ಸಾಕಷ್ಟು ವಿಟಮಿನ್ ಡಿ ಯನ್ನು ನಿಮ್ಮ ಶರೀರವು ಪಡೆದುಕೊಳ್ಳುತ್ತಿಲ್ಲವೆಂದು ನಿಮ್ಮ ವೈದ್ಯರಿಗೆ ಅನಿಸಿದಲ್ಲಿ (ಮಹಿಳೆಯರಲ್ಲಿ ಸಾಪೇಕ್ಷವಾಗಿ ಕಂಡುಬರುವ ಒಂದು ಸಾಮಾನ್ಯ ಸಮಸ್ಯೆ), ನಿಮ್ಮ ಪ್ರಥಮ ಪ್ರಸವಪೂರ್ವ ತಪಾಸಣೆಯಲ್ಲಿ ಅವರು ನಿಮ್ಮ ಶರೀರದ ವಿಟಮಿನ್ ಡಿ ಯ ಮಟ್ಟಗಳನ್ನು ಸ್ಕ್ರೀನಿಂಗ್ ಮಾಡಿಯಾರು. ಒಂದೊಮ್ಮೆ, ನಿಮ್ಮಲ್ಲಿ ಕೊರತೆಯಿರುವುದು ಕಂಡುಬಂದಲ್ಲಿ, ಹೆಚ್ಚುವರಿ ಸಪ್ಲಿಮೆಂಟ್ ಅನ್ನು ತೆಗೆದುಕೊಳ್ಳುವಂತೆ ಅವರು ನಿಮಗೆ ಸಲಹೆ ಮಾಡಿಯಾರು.

ಸತು

11 ರಿಂದ 15 ಮಿಲಿಗ್ರಾಂ ಹಾಗೂ 40 ಮಿಲಿಗ್ರಾಂ ಗಿಂತಲೂ ಅಧಿಕ ಸೇವನೆ ತರವಲ್ಲ. ಈ ಖನಿಜವು ನಿಮ್ಮ ಶರೀರದ ರೋಗನಿರೋಧಕ ವ್ಯವಸ್ಥೆಯನ್ನು ಹಾಗೂ ಆರೋಗ್ಯಪೂರ್ಣ ಕೋಶ ವಿಭಜನೆಯನ್ನು ಬೆಂಬಲಿಸುತ್ತದೆ.

ತಾಮ್ರ: 2 ಮಿಲಿಗ್ರಾಂ.

ತಾಮ್ರ: 2 ಮಿಲಿಗ್ರಾಂ.

ನಿಮ್ಮ ಶರೀರವು ಈ ಧಾತುವನ್ನು ಅಲ್ಪ ಪ್ರಮಾಣದಲ್ಲಿ, ರಕ್ತಕಣಗಳನ್ನು ಉತ್ಪಾದಿಸುವುದಕ್ಕೂ ಹಾಗೂ ಜೊತೆಗೆ ನರ, ಮೂಳೆ, ಹಾಗೂ ರೋಗನಿರೋಧಕ ವ್ಯವಸ್ಥೆಯ ಆರೋಗ್ಯವನ್ನು ಕಾಪಿಡುವುದಕ್ಕೆ ಬಳಸಿಕೊಳ್ಳುತ್ತದೆ.

ವಿಟಮಿನ್ ಸಿ: 50-85 ಮಿಲಿಗ್ರಾಂ

ನಿಮ್ಮ ಶರೀರವು ಕಬ್ಬಿಣಾಂಶವನ್ನು ಹೀರಿಕೊಳ್ಳಲು ನೆರವಾಗುವ ಹಾಗೂ ನಿಮ್ಮ ಶರೀರದ ರೋಗನಿರೋಧಕ ವ್ಯವಸ್ಥೆಗೆ ಬೆಂಗಾವಲಾಗಿರುವ ಈ ಜೀವಸತ್ವವು ನಿಮ್ಮ ಪ್ರಸವಪೂರ್ವ ಆಹಾರಕ್ರಮದಲ್ಲಿ ಹೇರಳವಾಗಿ ದೊರೆಯುತ್ತದೆ. ಆದರೆ, 2,000 ಮಿಲಿಗ್ರಾಂ ಗಳಿಗಿಂತಲೂ ಅಧಿಕ ವಿಟಮಿನ್ ಸಿ ನಿಮ್ಮ ಶಿಶುವಿನ ಪಾಲಿಗೆ ಅಪಾಯಕರವಾಗಬಲ್ಲದು. ಹಾಗಾಗಿ, ಯಾವಾಗಲಿನಂತೆಯೇ, ನಿಮ್ಮ ವೈದ್ಯರು ಸಲಹೆ ಮಾಡದ ಹೊರತು ನಿಮ್ಮ ಪ್ರಸವಪೂರ್ವ ಜೀವಸತ್ವದೊಂದಿಗೆ ಇದರ ಸಪ್ಲಿಮೆಂಟ್ ಅನ್ನೂ ತೆಗೆದುಕೊಳ್ಳಲು ಮುಂದಾಗಬೇಡಿರಿ.

ಇತರ ಪೋಷಕಾಂಶಗಳು

ಇತರ ಜೀವಸತ್ವಗಳು ಹಾಗೂ ಖನಿಜಗಳ ಕುರಿತು ತಿಳಿಯಬೇಕಾದರೆ, ಡಯಟರಿ ರೆಫ಼ರೆನ್ಸ್ ಇನ್ಟೇಕ್ (ಡಿ.ಆರ್.ಐ) ನ ಮೇಲೆ ಒಮ್ಮೆ ಕಣ್ಣಾಡಿಸಬೇಕು. 15 ಮಿಲಿಗ್ರಾಂ ನಷ್ಟು ವಿಟಮಿನ್ ಇ, 1.4 ಮಿಲಿಗ್ರಾಂ ನಷ್ಟು ಥಯಾಮಿನ್, 1.4 ಮಿಲಿಗ್ರಾಂ ನಷ್ಟು ರೈಬೊಫ಼್ಲಾವಿನ್, 18 ಮಿಲಿಗ್ರಾಂ ನಷ್ಟು ನಿಯಾಸಿನ್, ಹಾಗೂ 2.6 ಮೈಕ್ರೋಗ್ರಾಂ ನಷ್ಟು ವಿಟಮಿನ್ ಬಿ12 ಅನ್ನು ಸೇವಿಸಬೇಕೆಂದು ಡಿ.ಆರ್. ಐ. ಸಲಹೆ ಮಾಡುತ್ತದೆ. ಬಹುತೇಕ ಪ್ರಸವಪೂರ್ವ ಜೀವಸತ್ವಗಳು ಮೇಲೆ ಉಲ್ಲೇಖಿಸಿರುವ ಜೀವಸತ್ವಗಳನ್ನು/ಪೋಷಕಾಂಶಗಳನ್ನು ಡಿ.ಆರ್.ಐ. ನ ಸಲಹೆಯ ಎರಡು ಅಥವಾ ಮೂರು ಪಟ್ಟು ಅಧಿಕ ಪ್ರಮಾಣದಲ್ಲಿ ಒಳಗೊಂಡಿರುತ್ತವೆ ಹಾಗೂ ಅಂತಹ ಅಧಿಕ ಪ್ರಮಾಣಗಳಿಂದ ಯಾವುದೇ ಗೊತ್ತಾದ ಹಾನಿಕಾರಕ ಪರಿಣಾಮಗಳು ಕಂಡುಬಂದಿಲ್ಲ. ಕೆಲವು ಪ್ರಸವಪೂರ್ವ ಜೀವಸತ್ವಗಳು ಮೆಗ್ನೀಷಿಯಂ, ಸೆಲೇನಿಯಂ, ಫ಼್ಲೋರೈಡ್, ಬಯೋಟಿನ್, ಕೋಲೈನ್, ರಂಜಕ, ಪಾಂಟೋಥೆನಿಕ್ ಆಮ್ಲ, ಹೆಚ್ಚುವರಿ ಬಿ6 (ವಾಕರಿಕೆಯ ವಿರುದ್ಧ ಸೆಣೆಸಾಡಲು) ಮತ್ತು/ಅಥವಾ ಶುಂಠಿಯನ್ನೂ ಒಳಗೊಂಡಿರುತ್ತವೆ. ಗರ್ಭಿಣಿಯಾಗಿರುವಾಗ ನೀವು ಸಸ್ಯಾಹಾರಿ ಅಥವಾ ಶಾಕಾಹಾರಿಯಾಗಿದ್ದಲ್ಲಿ, ಅದರ ಕುರಿತು ನಿಮ್ಮ ವೈದ್ಯರಿಗೆ ತಿಳಿಸಲು ಮರೆಯದಿರಿ. ಹಾಗೆ ಮಾಡಿದಾಗ ನಿಮ್ಮ ಸಪ್ಲಿಮೆಂಟ್ ಗಳಲ್ಲಿ ನೀವು ಸರಿಯಾದ ಪೋಷಕ ತತ್ತ್ವಗಳನ್ನು ಪಡೆದುಕೊಳ್ಳುತ್ತಿರುವುದನ್ನು ಖಚಿತಪಡಿಸಿ ಕೊಂಡಂತಾಗುತ್ತದೆ.

English summary

Importance of Prenatal Vitamins in Kannada

Here are importance of prenatal vitamins, read on...
Story first published: Wednesday, March 17, 2021, 12:00 [IST]
X