For Quick Alerts
ALLOW NOTIFICATIONS  
For Daily Alerts

ಇಂಪ್ಲ್ಯಾಂಟ್ಸ್ vs IUD: ಈ ಗರ್ಭನಿರೋಧಕಗಳ ನಡುವಿನ ವ್ಯತ್ಯಾಸವೇನು?

|

ಒಂದು ಅಥವಾ ಎರಡು ಮಕ್ಕಳಾಗಿದೆ ಇನ್ನು ನಮಗೆ ಮಕ್ಕಳು ಬೇಡ ಎಂದು ದಂಪತಿ ಬಯಸಿದಾಗ ತಜ್ಞರು ಗರ್ಭ ನಿರೋಧಕ ಶಸ್ತ್ರ ಚಿಕಿತ್ಸೆ ಮಾಡಿಸಲು ಸಲಹೆ ನೀಡುತ್ತಾರೆ. ಆದರೆ ಕೆಲವರಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಇಷ್ಟವಿರುವುದಿಲ್ಲ... ಆಗ ಇತರ ಗರ್ಭನಿರೋಧಕ ವಿಧಾನ ಅನುಸರಿಸಲು ಮುಂದಾಗುತ್ತಾರೆ. ಇನ್ನು ಕೆಲವರು ಒಂದು ಮಗುವಿನಿಂದ ಮತ್ತೊಂದು ಮಗುವಿಗೆ ತುಂಬಾ ಅಂತರವಿರಲಿ ಎಂದು ಗರ್ಭನಿರೋಧಕ ವಿಧಾನಗಳನ್ನು ಅನುಸರಿಸುತ್ತಾರೆ.

ಹಲವಾರು ಗರ್ಭ ನಿರೋಧಕ ವಿಧಾನಗಳಿವೆ. ಕೆಲವರು ಹಾರ್ಮೋನಲ್‌ ಇಂಪ್ಲ್ಯಾಂಟ್ಸ್ ಬಳಸಿದರೆ ಇನ್ನು ಕೆಲವರು IUD ವಿಧಾನ ಬಳಸುತ್ತಾರೆ. ಇವುಗಳಲ್ಲಿ ಯಾವುದು ಸುರಕ್ಷಿತ, ಎರಡರ ನಡುವೆ ಇರುವ ವ್ಯತ್ಯಾಸವೇನು ಎಮದು ನೋಡೋಣ ಬನ್ನಿ:

ಎರಡೂ ಸುರಕ್ಷಿತ

ಎರಡೂ ಸುರಕ್ಷಿತ

ಗರ್ಭ ನಿರೋಧಕ ದೃಷ್ಟಿಯಿಂದ ಹಾರ್ಮೋನಲ್‌ ಇಂಪ್ಲ್ಯಾಂಟ್ಸ್ ಹಾಗೂ IUD ಎರಡೂ ಸುರಕ್ಷಿತ.

ಇವುಗಳು ದೀರ್ಘಾವಧಿಯ ಗರ್ಭನಿರೋಧಕಗಳಾಗಿವೆ. ಒಮ್ಮೆ ಈ ವಿಧಾನ ಅನುಸರಿಸಿದರೆ ಗರ್ಭಧಾರಣೆ ತಡೆಗಟ್ಟುವ ಬಗ್ಗೆ ಮತ್ತೆ ಚಿಂತಿಸಬೇಕಾಗಿಲ್ಲ.

ಇಂಪ್ಲ್ಯಾಂಟ್ಸ್ ಹಾಗೂ IUD ಎರಡರ ನಡುವೆ ಇರುವ ಹೋಲಿಕೆ

ಇಂಪ್ಲ್ಯಾಂಟ್ಸ್ ಹಾಗೂ IUD ಎರಡರ ನಡುವೆ ಇರುವ ಹೋಲಿಕೆ

ಇಂಪ್ಲ್ಯಾಂಟ್ಸ್ ಹಾಗೂ IUD ಎರಡೂ ಪರಿಣಾಮಕಾರಿ. ಈ ಗರ್ಭನಿರೋಧಕ ವಿಧಾನದಲ್ಲಿ ಗರ್ಭಧಾರಣೆಯ ಸಾಧ್ಯತೆ ತುಂಬಾನೇ ಕಡಿಮೆ. ಮೊದಲ ವರ್ಷದಲ್ಲಿ ಅಕಸ್ಮಾತ್‌ ಗರ್ಭಧಾರಣೆಯಾಗುವ ಸಾಧ್ಯತೆ 100ರಲ್ಲಿ 1, ಅದೇ ಗರ್ಭನಿರೋಧಕ ಮಾತ್ರೆ ತೆಗೆದುಕೊಂಡವರಲ್ಲಿ ಮೊದಲ ವರ್ಷದಲ್ಲಿ ಗರ್ಭಧಾರಣೆಯ ಸಾಧ್ಯತೆ 100ರಲ್ಲಿ 10.

ಇಂಪ್ಲ್ಯಾಂಟ್ಸ್ ಹಾಗೂ IUD ಇವುಗಳನ್ನು ವೈದ್ಯರು ಅಥವಾ ನರ್ಸ್‌ಗಳೇ ಹಾಕಬೇಕು, ನೀವಾಗಿ ಹಾಕಲು ಸಾಧ್ಯವಿಲ್ಲ. ಇವುಗಳನ್ನು ತೆಗೆದ ತಕ್ಷಣ ಗರ್ಭಧಾರಣೆಯಾಗಬಹುದು. ಇತರ ಗರ್ಭನಿರೋಧಕ ವಿಧಾನಗಳಿಗಿಂತ ಇವುಗಳು ಸ್ವಲ್ಪ ದುಬಾರಿ, ಆದರೆ ಇವುಗಳನ್ನು ಒಮ್ಮೆ ಒಳಗೆ ಹಾಕಿದರೆ ಅದನ್ನು ಹೊರ ತೆಗೆಯುವವರಿಗೆ ಗರ್ಭಧಾರಣೆಯಾಗುವುದಿಲ್ಲ.ಆದ್ದರಿಂದ ದುಬಾರಿ ಅನಿಸಿದರೂ ತುಂಬಾ ಸಮಯ ಬಳಸಬಹುದಾದರಿಂದ ಲಾಭವೇ.

ಇಂಪ್ಲ್ಯಾಂಟ್ಸ್ ಹಾಗೂ IUD ನಡುವಿನ ವ್ಯತ್ಯಾಸವೇನು?

ಇಂಪ್ಲ್ಯಾಂಟ್ಸ್ ಹಾಗೂ IUD ನಡುವಿನ ವ್ಯತ್ಯಾಸವೇನು?

IUD 'T' ಆಕಾರದ ಸಾಧನವಾಗಿದೆ. ಇದರಲ್ಲಿ 2 ಬಗೆ ಹಾರ್ಮೋನಲ್ ಮತ್ತು ತಾಮ್ರದ್ದು.

ಹಾರ್ಮೋನಲ್‌ IUD ಹಾರ್ಮೋನ್‌ ಪ್ರೊಗೆಸ್ಟಿನ್‌ ಉತ್ಪತ್ತಿ ಮಾಡುವುದು. ಇದು ಗರ್ಭಕಂಠದ ಮೂಲಕ ವೀರ್ಯಾಣು ಒಳ ಹೋಗುವುದನ್ನು ತಡೆಗಟ್ಟುತ್ತದೆ ಅಲ್ಲದೆ ಸಂತೋತ್ಪತ್ತಿ ಸಾಮಾರ್ಥ್ಯ ಅಂಡಾಣುಗಳು ಗರ್ಭಾಶಯಕ್ಕೆ ಅಂಟಿಕೊಂಡು ಇರುವುದನ್ನು ತಡೆಗಟ್ಟುತ್ತದೆ.

ಹಾರ್ಮೋನಲ್‌ ಇಂಪ್ಲ್ಯಾಂಟ್ ಬೆಂಕಿಕಡ್ಡಿ ಗಾತ್ರದ ಒಂದು ಟ್ಯೂಬ್ ಆಗಿದ್ದು ಅದನ್ನು ತ್ವಚೆ ಅಡಿಯಲ್ಲಿ ಹಾಲಾಗುವುದು. ಇದು ಅಲ್ಪ ಪ್ರಮಾಣದಲ್ಲಿ ಪ್ರೊಗೆಸ್ಟಿನ್‌ ಉತ್ಪತ್ತಿ ಮಾಡಿ ಅಂಡಾಣು ಬಿಡುಗಡೆಯನ್ನು ತಡೆಗಟ್ಟುತ್ತದೆ. ಅಲ್ಲದೆ ಗರ್ಭಕಂಠ ದಪ್ಪವಾಗುವುದರಿಂದ ವೀರ್ಯಾಣುಗಳ ಒಳ ಹೋಗುವುದನ್ನು ತಡೆಗಟ್ಟುತ್ತದೆ.

ಎಷ್ಟು ಸಮಯ ಕಾರ್ಯ ನಿರ್ವಹಿಸುತ್ತದೆ

ಎಷ್ಟು ಸಮಯ ಕಾರ್ಯ ನಿರ್ವಹಿಸುತ್ತದೆ

ಹಾರ್ಮೋನಲ್‌ IUD 3ರಿಂದ 5 ವರ್ಷಗಳವರೆಗೆ ಕಾರ್ಯ ನಿವರ್ಹಿಸುತ್ತದೆ, ತಾಮ್ರದ IUD 10 ವರ್ಷದವರೆಗೆ ಇರುತ್ತದೆ. ಇಂಪ್ಲ್ಯಾಂಟ್ಸ್ 3 ವರ್ಷಗಳ ಕಾಲ ಇರುತ್ತದೆ.

IUD ಹಾಕಿದ ತಕ್ಷಣ ಕಾರ್ಯ ನಿರ್ವಹಿಸಲು ಪ್ರಾರಂಭಿಸುತ್ತದೆ. ಹಾರ್ಮೋನಲ್‌ IUD ಮುಟ್ಟಾದ 7 ದಿನಗಳ ಒಳಗೆ ಹಾಕಬೇಕು.

ಇಂಪ್ಲ್ಯಾಟ್ಸ್‌ ಮುಟ್ಟಾದ 5 ದಿನಗಳ ಒಳಗಾಗಿ ಹಾಕಬೇಕು.

ಅಡ್ಡಪರಿಣಾಮಗಳು

ಅಡ್ಡಪರಿಣಾಮಗಳು

IUD ಹಾಕಿದ ಬಳಿಕ ಮುಟ್ಟಿನ ನೋವು ಕಡಿಮೆಯಾಗುವುದು, ರಕ್ತಸ್ರಾವವಯ ಕಡಿಮೆಯಾಗುವುದು, ಅಡ್ಡಪರಿಣಾಮಗಳೆಂದರೆ ಅನಿಯಮಿತ ಮುಟ್ಟಿನ ಸಮಸ್ಯೆ ಕಂಡು ಬರಬಹುದು. ಇನ್ನು ತಾಮ್ರದ್ದು IUD ಬಳಸಿದರೆ ಅಧಿಕ ರಕ್ತಸ್ರಾವ, ಕಿಬ್ಬೊಟ್ಟೆ ನೋವು, ಮುಟ್ಟು ನಿಂತ ಬಳಿಕ ಕೂಡ ಕೆಲವೊಮ್ಮೆ ರಕ್ತಸ್ರಾವ ಕಂಡು ಬರುವುದು.

ಇಂಪ್ಲ್ಯಾಂಟ್ಸ್‌ ಹಾಕಿದರೆ ಅಡ್ಡಪರಿಣಾಮಗಳೆಂದರೆ ಮೊದಲ 6-12 ತಿಂಗಳವರೆಗೆ ಆಗಾಗ ರಕ್ತ ಕಲೆಗು ಕಾಣಬಹುದು, ಜೊತೆಗೆ ತಲೆನೋವು, ತೂಕ ಹೆಚ್ಚಾಗುವುದು, ಮೂಡ್‌ ಸ್ವಿಂಗ್‌ (ಮೂಡ್ ಬದಲಾವಣೆ) ಮುಂತಾದ ಸಮಸ್ಯೆ ಕಂಡು ಬರುವುದು.

ಯಾರು ಬಳಸಬಾರದು?

ಯಾರು ಬಳಸಬಾರದು?

* ಮುಟ್ಟಿನ ಸಮಯ ಅಲ್ಲದಿದ್ದರೂ ರಕ್ತಸ್ರಾವವಾಗುವ ಸಮಸ್ಯೆ ಇರುವವರು

* ಕ್ಯಾನ್ಸರ್ ಅಥವಾ ಗರ್ಭಕಂಠದ ಕ್ಯಾನ್ಸರ್ ಇರುವವರು

* ಏಡ್ಸ್ ರೋಗಿಗಳು

* ಗರ್ಭಧಾರಣೆಗೆ ಪ್ರಯತ್ನಿಸುವವರು

* ಸ್ತನ ಕ್ಯಾನ್ಸರ್ ಇರುವವರು

* ಲಿವರ್‌ನಲ್ಲಿ ಗಡ್ಡೆಯ ಸಮಸ್ಯೆ ಇರುವವರು

* ಲಿವರ್ ಕಾಯಿಲೆ ಇರುವವರು

* ಲೈಂಗಿಕ ಕಾಯಿಲೆ ಇರುವವರು

English summary

Implant vs. IUD for Birth Control: What's the Difference in Kannada?

Implant vs. IUD for Birth Control: What's the Difference in Kannada?, Read on...
Story first published: Tuesday, July 13, 2021, 10:52 [IST]
X
Desktop Bottom Promotion