For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆಗೆ ಅಂಡೋತ್ಪತ್ತಿ ಸಮಯ ತುಂಬಾ ಮುಖ್ಯ, ಈ ದಿನಗಳನ್ನು ಟ್ರ್ಯಾಕ್ ಮಾಡುವುದು ಹೇಗೆ?

|

ಹೆಚ್ಚಿನವರು ಮದುವೆಯಾದ ಒಂದು ಅಥವಾ ಒಂದೂವರೆ ವರ್ಷದ ನಂತರ ಗರ್ಭ ಧರಿಸಲು ಯೋಜಿಸುತ್ತಾರೆ. ಆದರೆ ಕೆಲವೊಂದು ಕಾರಣಗಳಿಂದ ಗರ್ಭಧಾರಣೆ ಸಾಧ್ಯವಾಗದೇ ಇರಬಹುದು. ಇದಕ್ಕೆ ಅಂಡೋತ್ಪತ್ತಿ ಸಮಯದಲ್ಲಿ ಲೈಂಗಿಕ ಸಂಪರ್ಕ ಮಾಡದೇ ಇರುವುದೂ ಕಾರಣವಾಗಿರಬಹುದು. ಅನೇಕ ಮಹಿಳೆಯರಿಗೆ ಈ ಬಗ್ಗೆ ಮಾಹಿತಿ ತಿಳಿಯದೇ ಇರಬಹುದು. ಅಂಡೋತ್ಪತ್ತಿ ಯಾವಾಗ ಉಂಟಾಗುತ್ತೆ, ಇದನ್ನು ಲೆಕ್ಕ ಮಾಡುವುದು ಹೇಗೆ ಎನ್ನುವ ಪ್ರಶ್ನೆಗಳು ಮೂಡಬಹುದು.

ovulation

ನಿಮ್ಮ ಅಂಡೋತ್ಪತ್ತಿಗೆ ಸಂಬಂಧಿಸಿದಂತಹ ನಿಮ್ಮೆಲ್ಲಾ ಪ್ರಶ್ನೆಗಳಿಗೆ ವಿವರಣೆ ಈ ಲೇಖನದಲ್ಲಿದೆ ನೋಡಿ.

ಮುಟ್ಟಾದ ಎಷ್ಟು ದಿನಗಳ ನಂತರ ಅಂಡೋತ್ಪತ್ತಿಯಾಗುತ್ತೆ..?

ಮುಟ್ಟಾದ ಎಷ್ಟು ದಿನಗಳ ನಂತರ ಅಂಡೋತ್ಪತ್ತಿಯಾಗುತ್ತೆ..?

ಮುಟ್ಟಾದ ಎಷ್ಟು ದಿನಗಳ ನಂತರ ಅಂಡೋತ್ಪತ್ತಿಯಾಗುತ್ತೆ ಎನ್ನುವ ಪ್ರಶ್ನೆ ನಿಮ್ಮದಾದರೆ. ಅದಕ್ಕೆ ನಿಮ್ಮ ಮುಟ್ಟಿನ ದಿನವನ್ನು ಲೆಕ್ಕಹಾಕಬೇಕು. ಮುಟ್ಟಾದ ಎಷ್ಟು ದಿನಗಳ ನಂತರ ಅಂಡಾಣು ಉತ್ಪತ್ತಿಯಾಗಲು ಪ್ರಾರಂಭವಾಗುತ್ತದೆ ಎನ್ನುವುದನ್ನು ತಿಳಿಯಲು ನಿಮ್ಮ ಋತುಚಕ್ರದ ಅವಧಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾಗುತ್ತದೆ. ಕೆಲವರಿಗೆ ಅನಿಯಮಿತ ಮುಟ್ಟು ಇರುತ್ತೆ ಅಂದರೆ ಸಾಮಾನ್ಯವಾಗಿ 23 ರಿಂದ 25 ದಿನಗಳ ನಂತರ ಋತುಚಕ್ರದ ಅವಧಿಯು ಪ್ರಾರಂಭವಾಗುತ್ತದೆ. ಕೆಲವರಿಗೆ 20 ಮುಂಚೆ ಮುಟ್ಟಾಗಬಹುದು, ಕೆಲವರಿಗೆ ಇನ್ನೂ ತಡವಾಗಬಹುದು. ನಿಮ್ಮ ಮುಟ್ಟಿನ ಅವಧಿ ನಿಯಮಿತವಾಗಿದ್ದರೆ ನಿಮ್ಮಷ್ಟು ಅದೃಷ್ಟವಂತರು ಯಾರಿಲ್ಲ.

ನಿಮ್ಮ ಮುಟ್ಟಿನ ಮೊದಲ ದಿನ ಯಾವಾಗ ಎಂದು ಲೆಕ್ಕಾಚಾರ ಮಾಡಿ ಮತ್ತು ಹದಿನಾಲ್ಕು ದಿನಗಳನ್ನು ಹಿಂದಕ್ಕೆ ಎಣಿಸಿ. ಈ ಚಕ್ರದಲ್ಲಿ ಹಿಂದಿನ ಎರಡು ಮೂರು ದಿನಗಳು ನಿಮ್ಮ ಅಂಡೋತ್ಪತ್ತಿಯ ದಿನಗಳಾಗಿರುತ್ತವೆ. ಮುಖ್ಯವಾಗಿ ಅಂಡೋತ್ಪತ್ತಿಯ ದಿನಗಳನ್ನು ಪತ್ತೆಹಚ್ಚಲು ನಿಮ್ಮ ಮುಟ್ಟಿನ ಅವಧಿಯನ್ನು ಟ್ರ್ಯಾಕ್‌ ಮಾಡಲೇಬೇಕಾಗುತ್ತೆ.

ನೀವು ದೀರ್ಘವಾದ ಮುಟ್ಟಿನ ಅವಧಿಯನ್ನು ಹೊಂದಿದ್ದರೆ ಅಂದರೆ ಒಂದೂವರೆ ತಿಂಗಳಿಗೊಮ್ಮೆ ಮುಟ್ಟಾಗುತ್ತಿದ್ದರೆ ಅಂಡೋತ್ಪತ್ತಿಯ ದಿನಗಳನ್ನು ಪತ್ತೆ ಹಚ್ಚುವುದು ಕಷ್ಟ. ಆದರೆ ಕೆಲವೊಂದು ಲಕ್ಷಣಗಳಿಂದ ಅಂಡೋತ್ಪತ್ತಿಯ ದಿನವನ್ನು ಕಂಡುಹಿಡಿಯಬಹುದು. ಹೇಗೆಂದರೆ ನಿಮ್ಮ ಗರ್ಭಕಂಠದ ಲೋಳೆಯಲ್ಲಿನ ಬದಲಾವಣೆ.ಬಿಳಿಮುಟ್ಟಿನಂತೇ ಸ್ವಲ್ಪ ಮೊಟ್ಟೆಯ ಬಿಳಿ ಭಾಗದಂತಿರುವ ಲೋಳೆಯಂತೆ ಸ್ರಾವವಾಗಬಹುದು. ಜೊತೆಗೆ ನಿಮ್ಮಕೆಳಭಾಗದ ದೇಹದ ಉ‍ಷ್ಣತೆಯಲ್ಲಿ ಬದಲಾವಣೆಯಾಗಬಹುದು.

ಅಂಡೋತ್ಪತ್ತಿಯನ್ನು ಪರಿಗಣಿಸಿದರೆ ಗರ್ಭಿಣಿಯಾಗಲು ಎಷ್ಟು ಸಮಯ ಬೇಕಾಗುತ್ತೆ..?

ಅಂಡೋತ್ಪತ್ತಿಯನ್ನು ಪರಿಗಣಿಸಿದರೆ ಗರ್ಭಿಣಿಯಾಗಲು ಎಷ್ಟು ಸಮಯ ಬೇಕಾಗುತ್ತೆ..?

ಗರ್ಭಧಾರಣೆಯು ಮುಖ್ಯವಾಗಿ ನಿಮ್ಮ ವಯಸ್ಸು ಮತ್ತು ಆರೋಗ್ಯವನ್ನೂ ಅವಲಂಬಿಸಿರುತ್ತದೆ. ಮಹಿಳೆಯರಲ್ಲಿ 20ನೇ ವಯಸ್ಸಿನಿಂದ 30ರವರೆಗೂ ತಮ್ಮ ಋತುಚಕ್ರದ ಅವಧಿಯಲ್ಲಿ ಗರ್ಭಿಣಿಯಾಗುವ ಅವಕಾಶ ಶೇಕಡಾ ಸುಮಾರು 25ರಿಂದ 30ರಷ್ಟಿರುತ್ತದೆ. ಇದನ್ನು ಹೊರತುಪಡಿಸಿ ನಿಮ್ಮ ಅಂಡಾಣುವು ಸುಮಾರು 12ರಿಂದ 24 ಗಂಟೆಗಳವರೆಗೆ ಆಕ್ಟೀವ್‌ ಆಗಿದ್ದರೂ ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಯಾಕೆಂದರೆ ವೀರ್ಯವು ಹೆಚ್ಚು ಕಾಲ ಬದುಕಬಲ್ಲದು. ಅಂದರೆ ಸಾಮಾನ್ಯವಾಗಿ ಮೂರರಿಂದ ಐದುದಿನಗಳವರೆಗೆ ಇರುತ್ತದೆ. ಆದ್ದರಿಂದ ನಿಮ್ಮ ಅಂಡಾಣು ಸೇರುವ ಸಮಯದಲ್ಲಿ ಉತ್ಪತ್ತಿಯಾಗದಿದ್ದರೂ ವೀರ್ಯಾಣುವು ನಾಲ್ಕೈದು ದಿನಗಳವರೆಗೆ ಇರುತ್ತದೆ. ಅಂಡೋತ್ಪತ್ತಿಯಾಗುವ ಸಮಯದಲ್ಲಿ ವೀರ್ಯಾಣುವು ಅಂಡಾಣುವನ್ನು ಸೇರಬಹುದು.

ಅಂಡೋತ್ಪತ್ತಿ ಲಕ್ಷಣಗಳನ್ನು ಗುರುತಿಸುವುದು ಅಥವಾ ಲಕ್ಷಣಗಳನ್ನು ಕಂಡುಕೊಂಡರೂ ನೂರಕ್ಕೆ ನೂರು ಪ್ರತಿಶತ ಗರ್ಭ ಧರಿಸುತ್ತೀರಿ ಎಂದು ಹೇಳಲಾಗದು. ಅಂಡೋತ್ಪತ್ತಿ ಸಮಯವನ್ನು ನಿಖರವಾಗಿ ಗುರುತಿಸಿದರೂ ನೀವು ಆ ತಿಂಗಳು ಗರ್ಭಧರಿಸುತ್ತೀರಿ ಎನ್ನುವ ಗ್ಯಾರಂಟಿ ಇಲ್ಲ. ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದೀರಿ ಎಂದರೆ ತಾಳ್ಮೆ ಅಗತ್ಯ.

ಅಂಡೋತ್ಪತ್ತಿ ಟ್ರ್ಯಾಕ್‌ ಮಾಡುವ ವಿಧಾನ

ಅಂಡೋತ್ಪತ್ತಿ ಟ್ರ್ಯಾಕ್‌ ಮಾಡುವ ವಿಧಾನ

ಅಂಡೋತ್ಪತ್ತಿಯನ್ನು ಪತ್ತೆಹಚ್ಚಲು ನೀವು ವಿವಿಧ ವಿಧಾನಗಳನ್ನು ಬಳಸಬಹುದು. ಇದೂ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸಬಹುದು. ಅವೆಂದರೆ,

ಕ್ಯಾಲೆಂಡರ್‌ ವಿಧಾನ

ರಿದಂ ವಿಧಾನ ಎಂದೂ ಕರೆಯಲ್ಪಡುವ ಇದು ನಿಮ್ಮ ಅಂಡೋತ್ಪತ್ತಿಯ ದಿನಗಳನ್ನು ಪತ್ತೆಹಚ್ಚುವ ಸರಳವಾದ ವಿಧಾನವಾಗಿದೆ. ಇದು ನಿಮ್ಮ ಋತುಚಕ್ರದ ದಿನಗಳನ್ನು ಪತ್ತೆಹಚ್ಚುವುದನ್ನು ಅಲವಂಬಿಸಿದೆ. ಇದನ್ನು ಪತ್ತೆ ಹಚ್ಚಲು ಕಳೆದ ಆರು ತಿಂಗಳಲ್ಲಿ ನೀವು ಮುಟ್ಟಾದ ದಿನವನ್ನು ನೋಟ್‌ ಮಾಡಿ. ಕಡಿಮೆ ಮತ್ತು ದೀರ್ಘವಾದ ಮುಟ್ಟಿನ ಅವಧಿಯನ್ನು ಲೆಕ್ಕಮಾಡಿ. ನಿಮ್ಮ ಫಲವತ್ತತೆಯ ದಿನವನ್ನು ಪತ್ತೆಹಚ್ಚಲು ಗಣಿತವನ್ನು ಬಳಸಬೇಕಾಗುತ್ತದೆ. ನೀವು 26ರಿಂದ 32ದಿನಗಳ ನಡುವೆ ಮುಟ್ಟಾಗಿದ್ದರೆ ನಿಮ್ಮ ಅತ್ಯಂತ ಫಲವತ್ತತೆಯ ದಿನಗಳು 8 ಮತ್ತು 19ದಿನಗಳ ನಡುವೆ ಇರುತ್ತದೆ.

 ದೇಹದ ಕೆಳಭಾಗದ ತಾಪಮಾನ ವಿಧಾನ

ದೇಹದ ಕೆಳಭಾಗದ ತಾಪಮಾನ ವಿಧಾನ

ದೇಹದ ತಳಭಾಗದ ತಾಪಮಾನವನ್ನು ಕಂಡುಹಿಡಿಯಲು ವಿಶೇಷ ಥರ್ಮಾಮೀಟರ್‌ ಬಳಸಿ. ನಿಮ್ಮ ಅಂಡೋತ್ಪತ್ತಿಯ ಮಾದರಿಯನ್ನು ತಿಳಿಯಲು ದೇಹದ ತಳದ ಉ‍ಷ್ಣತೆಯನ್ನು ಟ್ರ್ಯಾಕ್‌ ಮಾಡಿ.ನಿಮ್ಮ ದೇಹದ ಉಷ್ಣತೆಯು ಕಡಿಮೆಯಾಗಿದ್ದಾಗ ತಾಪಮಾನ ಎಷ್ಟಿರುತ್ತದೆ ನೋಡಿ, ನಂತರ ನಿಮಗೆ ಅಂಡೋತ್ಪತ್ತಿಯಾಗುತ್ತಿದೆ ಎನ್ನುವ ಭಾವನೆ ಮೂಡಿದರೆ ಆಗ ನಿಮ್ಮ ದೇಹದ ತಾಪಮಾನ ನೋಡಿ. ಅದರಲ್ಲಿ ಏರಿಕೆಯಾದಲ್ಲಿ ಅಂಡೋತ್ಪತ್ತಿ ಸಂಭವಿಸಿದೆ ಎನ್ನುವುದನ್ನು ತಿಳಿಯಬಹುದು.

 ಗರ್ಭಕಂಠದ ಲೋಳೆ

ಗರ್ಭಕಂಠದ ಲೋಳೆ

ನಿಮ್ಮ ಗರ್ಭಕಂಠದಲ್ಲಿನ ವಿಸರ್ಜನೆಯಲ್ಲಿನ ಬದಲಾವಣೆಯು ಮತ್ತೊಂದು ಸೂಚಕವಾಗಿದೆ. ನೀವು ಅಂಡೋತ್ಪತ್ತಿ ಸಮೀಪಿಸುವಾಗ ಯೋನಿ ಸ್ರಾವವಾಗಬಹುದು. ಇದು ತೆಳು ಮತ್ತು ಮೊಟ್ಟೆಯ ಬಿಳಿ ಭಾಗದಂತಿರುತ್ತದೆ ಮತ್ತು ಸ್ಪಷ್ಟವಾಗಿರುತ್ತದೆ.

ಅಂಡೋತ್ಪತ್ತಿ ಪರೀಕ್ಷಾ ಕಿಟ್‌

ಈ ಅಂಡೋತ್ಪತ್ತಿ ಪರೀಕ್ಷಾ ಕಿಟ್‌ 80 ಪ್ರತಿಶತ ನಿಖರವಾಗಿ ನಿಮ್ಮ ಅಂಡೋತ್ಪತ್ತಿ ದಿನವನ್ನು ಪತ್ತೆಹಚ್ಚುತ್ತದೆ. ಇದು ನಿಮ್ಮ ಮೂತ್ರದಲ್ಲಿನ LH ಅಥವಾ ಲ್ಯುಟೆನೈಜಿಂಗ್‌ ಹಾರ್ಮೋನ್‌ ಮಟ್ಟವನ್ನು ಅಳೆಯುತ್ತದೆ. LH ಹೆಚ್ಚಾದಂತೆ ಮತ್ತು ನಿಮ್ಮ ಅಂಡಾಶಯವು ಮೊಟ್ಟೆಯನ್ನು ಬಿಡುಗಡೆಗೊಳಿಸುತ್ತಿದೆ ಎಂದರ್ಥ, ೀ ಸಮಯದಲ್ಲಿ ಮೂತ್ರ ವಿಸರ್ಜಿಸಿದ ನಂತರ ಒಂದೆರಡು ಹನಿ ಪರೀಕ್ಷಾ ಪಟ್ಟಿಯ ಮೇಲೆ ಹಾಕಿ ಮತ್ತು ಪ್ರಕಾರವನ್ನು ಅವಲಂಬಿಸಿ ಗಾಢವಾದ ರೇಖೆ ಅಥವಾ ಡಿಜಿಟಲ್ ಓದುವಿಕೆಯನ್ನು ನೋಡಿ. ಸಕಾರಾತ್ಮಕ ಫಲಿತಾಂಶ ಕಂಡುಬಂದರೆ ಅಂದರೆ LH ಮಟ್ಟ ಹೆಚ್ಚಾಗಿದ್ದರೆ ಮುಂದಿನ 12 ರಿಂದ 24 ಗಂಟೆಗಳಲ್ಲಿ ನೀವು ಅಂಡೋತ್ಪತ್ತಿ ಮಾಡುತ್ತೀರಿ ಎನ್ನುವುದನ್ನು ತಿಳಿದುಕೊಳ್ಳಬಹುದು. ಗರ್ಭಧರಿಸಲು ಪ್ರಯತ್ನಿಸಲು ಇದು ಸೂಕ್ತ ಸಮಯ.

ಅಂಡೋತ್ಪತ್ತಿ ಟ್ರ್ಯಾಕರ್ ಅಪ್ಲಿಕೇಶನ್‌ಗಳು

ಅಂಡೋತ್ಪತ್ತಿ ಟ್ರ್ಯಾಕರ್ ಅಪ್ಲಿಕೇಶನ್‌ಗಳು

ಇದು ಆಧುನಿಕ ತಂತ್ರಜ್ಞಾನದ ಯುಗ. ನಿಮ್ಮ ಮುಟ್ಟಿನಚಕ್ರದ ದಿನಗಳನ್ನು ಎಣಿಸಲು ಅದಕ್ಕೆಂದೇ ಕೆಲವೊಂದು ಟ್ರ್ಯಾಕರ್‌ ಅಪ್ಲಿಕೇಷನ್‌ಗಳಿವೆ ಮತ್ತು ನೀವು ಅಂಡೋತ್ಪತ್ತಿಯಾಗುವ ಸಾಧ್ಯತೆಯನ್ನು ಗಮನಿಸಲು ಅಲ್ಗಾರಿದಮ್ ಅನ್ನು ಬಳಸಿ. ಮಾರುಕಟ್ಟೆಯಲ್ಲಿಯೂ ಅಂಡೋತ್ಪತ್ತಿಯನ್ನು ಪರೀಕ್ಷಿಸಲು ಥರ್ಮಾಮೀಟರ್‌ಗಳು ಮತ್ತು ವಿವಿಧ ಡಿಜಿಟಲ್ ಮತ್ತು ಫಲವತ್ತತೆ ಮಾನಿಟರ್‌ಗಳು ಸಹ ಲಭ್ಯವಿರುತ್ತದೆ.

ವೈದ್ಯರ ಸಲಹೆ

ನೀವು ಒಂದು ವರ್ಷದಿಂದ ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೆ ಮತ್ತು ನೀವು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ವೈದ್ಯರೊಂದಿಗೆ ಮಾತನಾಡಿ. ಕೆಲ ವೊಮ್ಮೆ ಅನಿಯಮಿತ ಅವಧಿಗಳು ಅಥವಾ ನೀವು ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ಸಮಸ್ಯೆ ಇದ್ದಾಗ ಅಂಡೋತ್ಪತ್ತಿಯನ್ನು ಪತ್ತೆಹಚ್ಚಲು ಸಾಧ್ಯವಾಗದಿರಬಹುದು. ಯಾಕೆಂದರೆ ಈ ಸಮಸ್ಯೆಗಳಿದ್ದಾಗ ಹಾರ್ಮೋನುಗಳ ಅಸಮತೋಲನ ಉಂಟಾಗುತ್ತೆ. ಹೀಗಿದ್ದಾಗ ಅಂಡೋತ್ಪತ್ತಿಯನ್ನು ಪತ್ತೆಹಚ್ಚಲು ಕೆಲವು ವೃತ್ತಿಪರ ಮಾರ್ಗದರ್ಶನ ಬೇಕೇ ಬೇಕಾಗುತ್ತದೆ.

 ನಿಮ್ಮ ಮುಟ್ಟಿನ ಅವಧಿಯನ್ನು ಗಮನಿಸಿ

ನಿಮ್ಮ ಮುಟ್ಟಿನ ಅವಧಿಯನ್ನು ಗಮನಿಸಿ

ನಿಮ್ಮ ಮುಟ್ಟಿನ ಅವಧಿ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ ಎಂಬುದನ್ನು ಟ್ರ್ಯಾಕ್ ಮಾಡುವುದು ನಿಮ್ಮ ಮಾಸಿಕ ಚಕ್ರವನ್ನು ನೋಡುವ ಇನ್ನೊಂದು ವಿಧಾನವಾಗಿದೆ. ನಿಮ್ಮ ಮುಟ್ಟಿನ ದಿನವು ಯಾವಾಗ ಆರಂಭವಾಗುತ್ತದೆ. ಯಾವಾಗ ಕೊನೆಗೊಳ್ಳುತ್ತದೆ ಎನ್ನುವುದನ್ನು ನೋಡಿ. ನಿಮ್ಮ ಮುಟ್ಟಿನ ಅವಧಿಯು ಪ್ರಾರಂಭವಾಗುವುದಕ್ಕೆ 14 ದಿನಗಳ ಮೊದಲು ನಿಮ್ಮ ಅಂಡೋತ್ಪತ್ತಿ ಉತ್ಪತ್ತಿಯಾಗುವ ಸಮಯವಾಗಿರುತ್ತದೆ.

ನಿಮ್ಮ ಮುಟ್ಟಿನ ಕೊನೆಯ ದಿನ ನೀವು ಲೈಂಗಿಕ ಸಂಪರ್ಕಹೊಂದಿದ್ದರೂ ಗರ್ಭಿಣಿಯಾಗುವ ಸಾಧ್ಯತೆ ಇರುತ್ತದೆ. ವೀರ್ಯವು ನಾಲ್ಕೈದು ದಿನಗಳವರೆಗೆ ನಿಮ್ಮ ಅಂಡನಾಳದಲ್ಲಿ ಜೀವಂತವಾಗಿರುತ್ತದೆ. ನಿಮಗೆ ಮುಟ್ಟಾದ ನಂತರ ಬೇಗನೆ ಅಂಡೋತ್ಪತ್ತಿಯಾಗುತ್ತಿದ್ದಲ್ಲಿ ಗರ್ಭಿಣಿಯಾಗಬಹುದು.

ನಿಮ್ಮ ಅವಧಿಯನ್ನು ಹೊಂದಿರುವಾಗ ಗರ್ಭಧರಿಸುವ ಸಾಧ್ಯತೆಗಳು ಕಡಿಮೆಯಾಗಿದ್ದರೂ, ಅವು ಶೂನ್ಯವಾಗಿರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಕಾರಣ? ನಿಮ್ಮ ಅವಧಿಯ ಕೊನೆಯ ದಿನದಂದು ನೀವು ಸಂಭೋಗಿಸಬಹುದು ಮತ್ತು ನೀವು ಬೇಗನೆ ಅಂಡೋತ್ಪತ್ತಿ ಮಾಡಬಹುದು, ಅಂದರೆ ಜೀವಂತ ವೀರ್ಯವು ಒಳಗೆ ಡೆಕ್‌ನಲ್ಲಿರಬಹುದು ಮತ್ತು ನೀವು ಗರ್ಭಿಣಿಯಾಗಬಹುದು.

ಸರಳವಾಗಿ ಹೇಳುವುದಾದರೆ ನೀವು ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೆ ಮುಖ್ಯವಾಗಿ ನಿಮ್ಮ ಮುಟ್ಟಿನ ದಿನಗಳನ್ನು ನೆನಪಿಟ್ಟುಕೊಳ್ಳಿ. ಅಂಡೋತ್ಪತ್ತಿಯನ್ನು ಗುರುತಿಸುವಾಗ ತಾಳ್ಮೆಯಿಂದ ಇರಿ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದತ್ತಲೂ ಗಮನ ಹರಿಸಿ.

English summary

How To Track Ovulation Period To Get Pregnant in kannada

Here are tips to how to track ovulation period to get pregnant in kannada, read on...
X
Desktop Bottom Promotion