For Quick Alerts
ALLOW NOTIFICATIONS  
For Daily Alerts

ಮಕ್ಕಳು ತುಂಬಾ ಹಠ ಮಾಡುತ್ತಿದ್ದರೆ ಅದು ಒಳ್ಳೆಯದೇ ಗೊತ್ತಾ? ಹೇಗೆ?

|

ಒಂದು ವರ್ಷ, ಒಂದೂವರೆ ವರ್ಷ ದಾಟಿದ ಮಕ್ಕಳನ್ನು ಮನೆಯ ಹೊರಗೆ ಕರೆದುಕೊಂಡು ಹೋಗುವುದೆಂದರೆ ಪೋಷಕರಿಗೆ ಒಂದು ಸವಾಲು. ನೋಡಿದ್ದೆಲ್ಲಾ, ಕಾಣಿಸಿದ್ದೆಲ್ಲಾ ಬೇಕು ಎನ್ನುವ ಹಠ, ಸೂಪರ್‌ ಮಾರ್ಕೆಟ್‌ ಗೆ ಹೋದರೆ ಜೋಡಿಸಿಟ್ಟ ವಸ್ತುಗಳನ್ನು ಎಳೆಯುವುದು, ಬೇಕೆಂದು ಹಠ ಮಾಡುವುದನ್ನು ಕಂಡಾಗ ಕೋಪ ನೆತ್ತಿಗೇರುತ್ತದೆ. ಮಕ್ಕಳ ಹಠಮಾರಿತನವನ್ನು ನೆನೆಸಿಕೊಂಡಾಗ ಚಿಕ್ಕ ಮಗುವಾಗಿದ್ದಾಗಲೇ ಜೀವನ ಚೆನ್ನಾಗಿತ್ತು ಎಂದು ಒಮ್ಮೊಮ್ಮೆ ಅನಿಸಿಬಿಡುತ್ತದೆ ಹೆತ್ತವರಿಗೆ.

ಮಕ್ಕಳೆಂದ ಮೇಲೆ ಕೋಪ, ಹಠಮಾರಿತನ ಸಾಮಾನ್ಯವಲ್ಲವೇ ಇತರರು ಅಂದರೆ, ಪೋಷಕರಾದ ನಾವು 'ಇದು ಬ್ಯಾಡ್‌ ಬಿಹೇವಿಯರ್‌'' ಎಂದು ಒಂದು ಬಾರಿಸಿ ಬಿಡುವುದೋ, ಬೈಯುವುದೋ ಮಾಡುತ್ತೇವೆ. ಆದರೆ ಹಠಮಾರಿತನವನ್ನು ಹೊಂದಿರುವ ಮಕ್ಕಳ ಪೋಷಕರೇ ಸ್ವಲ್ಪ ತಾಳ್ಮೆ ವಹಿಸಿ.. ಯಾಕೆ ಗೊತ್ತಾ. ಇದೂ ಕೂಡಾ ಮಗುವಿನ ಬೆಳವಣಿಗೆಯ ಹಂತವೇ..!

ನೋಡುವ ವಸ್ತುವನ್ನು ಪಡೆಯುವ ತಂತ್ರಗಳು ಮಗುವಿನ ಬೆಳವಣಿಗೆಯ ಅಗತ್ಯ ಭಾಗವಾಗಿದೆ ಮತ್ತು ಅವು ಎಲ್ಲಾ ವಿಧ ಮತ್ತು ರೂಪದಲ್ಲೂ ಬರುತ್ತವೆ. ಅವುಗಳನ್ನು ನಿಭಾಯಿಸುವುದು ಹೇಗೆ ಎಂದರೆ ಮೊದಲು ನೀವು ಅವರನ್ನು ನೀವು ಅರ್ಥಮಾಡಿಕೊಳ್ಳಬೇಕು. ಹಠಮಾರಿ, ತುಂಟ ಮಕ್ಕಳನ್ನು ನಿಭಾಯಿಸುವ ತಂತ್ರ ಹೇಗೆ ಎನ್ನುವುದನ್ನು ತಿಳಿದುಕೊಳ್ಳಬೇಕಾದರೆ ಮುಂದೆ ಓದಿ.

ಮಕ್ಕಳಲ್ಲಿ ಕೋಪ ಯಾಕೆ ಉಂಟಾಗುತ್ತೆ ಎಂದರೆ,

ಮಕ್ಕಳಲ್ಲಿ ಕೋಪ ಯಾಕೆ ಉಂಟಾಗುತ್ತೆ ಎಂದರೆ,

ಸಾಮಾನ್ಯವಾಗಿ ದೊಡ್ಡವರೇ ಆದರೂ ಕೋಪ, ಅಸಮಾಧಾನಗೊಂಡಾಗ ಅದನ್ನು ಹೊರಹಾಕಲು ಬೇರೆ ಬೇರೆ ಮಾರ್ಗಗಳನ್ನು ಹುಡುಕುತ್ತೇವೆ. ನಮ್ಮ ಕೋಪವನ್ನು ಹೊರ ಹಾಕುತ್ತೇವೆ. ನಮ್ಮ ಮಕ್ಕಳೂ ಕೂಡಾ ಹೀಗೇನೆ.. ಅವಿನ್ನೂ ಬೆಳೆಯುತ್ತಿರುವ ಕೂಸುಗಳು. ಅವರ ತಂತ್ರ ಒಂದೇ ಆಗಿರುತ್ತದೆ. ಅದೇ ಕೋಪ, ಹಠಮಾರಿತನ. ಅದು ಕೋಪ, ಹತಾಶೆ, ಭಯ ಅಥವಾ ದುಃಖವೇ ಆಗಿರಲಿ ಮಗು ಅನುಭವಿಸುವಂತಹ ಭಾವನೆಗಳಿಗೆ ಕೋಪೋದ್ರೇಕವೇ ಪ್ರತಿಕ್ರಿಯೆಯಾಗಿರುತ್ತದೆ. ಅದನ್ನು ಹೇಗೆ ಎದುರಿಸಬೇಕೆನ್ನುವುದು ಮಗುವಿಗೆ ತಿಳಿದಿರುವುದಿಲ್ಲ. ಹಾಗಾಗಿ ಕೋಪ ಬಂದಾಗ ಅಳುವುದು, ಕೆಳಗೆ ನೆಲದಲ್ಲಿ ಬಿದ್ದು ಹೊರಳಾಡುವುದು, ಇತರರಿಗೆ ಒದೆಯುವುದು, ಬಡಿಯುವುದು, ಕೂದಲು ಎಳೆಯುವ ಮೂಲಕ ತಮ್ಮ ಕೋಪ ಪ್ರದರ್ಶಿಸುತ್ತಾರೆ. ಇದು ನಿಮಗೆ ಸರಿ ಕಾಣಿಸದಿದ್ದರೂ, ಮಗು ತುಂಬಾ ಹಠಮಾರಿಯಾಗಿ ಬೆಳೆಯುತ್ತಿದೆ ಎಂದು ನೀವಣದುಕೊಂಡರೂ ಇದು ಮಕ್ಕಳ ಸಾಮಾನ್ಯ ನಡವಳಿಕೆಯಾಗಿರುತ್ತದೆ.

ಕೋಪೋದ್ರೆಕ ಸಾಮ್ಯಾನವೇ..?

ಕೋಪೋದ್ರೆಕ ಸಾಮ್ಯಾನವೇ..?

ಮಗು ಅಂಬೆಗಾಲಿಡುತ್ತಾ ಮನೆ ತುಂಬಾ ಓಡಾಡುವ ಹಂತದಲ್ಲಿ ಈ ಕೋಪಗಳು ಕಂಡುಬರುತ್ತದೆ. ಏಕೆಂದರೆ ಈ ಸಮಯದಲ್ಲಿ ಅವರ ಸಾಮಾಜಿಕ ಮತ್ತು ಭಾವನಾತ್ಮಕ ಕೌಶಲ್ಯಗಳು ಅಭಿವೃದ್ಧಿಗೊಳ್ಳಲು ಪ್ರಾರಂಭಿಸುತ್ತವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಆಗ ತಾನೆ ಪುಟ್ಟ ಪುಟ್ಟ ಹೆಜ್ಜೆಯಿಡುತ್ತಿರುವ ಮಗು ಮಾತನಾಡಲು ಪ್ರಾರಂಭಿಸಿರುವುದಿಲ್ಲ. ಆ ಸಮಯದಲ್ಲಿ ತಮ್ಮ ಭಾವನೆಗಳನ್ನು ಹೇಗೆ ವ್ಯಕ್ತಪಡಿಸಬೇಕೆನ್ನುವುದು ತಿಳಿಯುವುದಿಲ್ಲ.

ಈ ವಯಸ್ಸಿನಲ್ಲಿ ಮಗು ಸ್ವತಂತ್ರವಾಗಿರಲು ಬಯಸುತ್ತದೆ ಇದನ್ನು ಹೇಗೆ ಗುರುತಿಸಬಹುದೆಂದರೆ, ಅಲ್ಲಿ ಓಡಾಡಬೇಡ ಎಂದರೆ ಬಿಡಿಸಿಕೊಂಡು ಮತ್ತೆ ಅಲ್ಲಿಗೇ ಓಡುವುದು, ಒಂದು ವಸ್ತು ನೋಡಿದರೆ ಅದನ್ನು ತೆಗೆದುಕೊಳ್ಳಲು ಪ್ರಯತ್ನಿಸುವುದು, ಅದೇ ಬೇಕೆಂದು ಅಳುವುದು, ನಿಯಂತ್ರಿಸಲು ಹೋದರೆ ಕಿತ್ತೆಸೆದುಬಿಡುವುದು ಹೀಗೆ ತಾವೇ ಮಾಡಬೇಕೆನ್ನುವ ಹಠ ಹೊಂದಿರುತ್ತಾರೆ. ಇದಲ್ಲದೇ ಮಕ್ಕಳಲ್ಲಿ ಹೊಸದನ್ನು ಅನ್ವೇಷಿಸುವ ಗುಣ ಬೆಳೆಯುತ್ತದೆ. ಹೊಸ ವಸ್ತುವನ್ನು ನೋಡಿದಾಗ ಅದನ್ನು ಎಳೆಯುವುದು, ಕೈಗೆ ಸಿಕ್ಕಿದ ವಸ್ತುವನ್ನು ತಿರುಗಿಸಿ ತಿರುಗಿಸಿ ನೋಡುವ ಕುತೂಹಲ ಪುಟ್ಟ ಕಂಗಳಲ್ಲಿರುತ್ತದೆ.

ಮಗು ಎಷ್ಟೇ ಆಟದಲ್ಲಿ ಮುಳುಗಿರಲಿ ಅವರಿಂದ ಸ್ವಲ್ಪ ದೂರ ಸರಿದರೂ ಎಲ್ಲವನ್ನೂ ಬಿಟ್ಟು ಅಮ್ಮನನ್ನು ಹುಡುಕುತ್ತದೆ, ಅಮ್ಮನ ಹಿಂದೆಯೇ ಇರುತ್ತಾರೆ. ಯಾಕೆಂದರೆ ಮಕ್ಕಳು ಬೇರ್ಪಡಲು ಭಯಪಡುತ್ತಾರೆ. ಅಂಬೆಗಾಲಿಡುವ ಮಗು ಇನ್ನೂ ಪರಿಸರವನ್ನು ಗ್ರಹಿಸಲು ಕಲಿಯುತ್ತಿದೆ ಮತ್ತು ಅವರ ಕ್ರಿಯೆಗಳು ತಮ್ಮ ಸುತ್ತ ಏನು ನಡೆಯುತ್ತಿದೆ ಎನ್ನುವುದನ್ನು ಅವಲೋಕಿಸುತ್ತಾರೆ, ಇಂಥಹ ಸಂದರ್ಭದಲ್ಲಿ ಪೋಷಕರಾದ ನಾವು ಮಕ್ಕಳು ಕಂಡುಕೊಳ್ಳುತ್ತಿದ್ದಾರೆ, ಅವರಲ್ಲಿ ಏನು ಬದಲಾವಣೆ ತರಬಹುದು ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.

ತಂತ್ರಗಳ ಪ್ರಾಮುಖ್ಯತೆ

ತಂತ್ರಗಳ ಪ್ರಾಮುಖ್ಯತೆ

ತಂತ್ರವು ಮಕ್ಕಳಿಗೆ ಅಗತ್ಯವಾದ ಬೆಳವಣಿಗೆಯ ಹಂತವಾಗಿದೆ ಏಕೆಂದರೆ ನಿಮ್ಮ ಮಗು ತನ್ನ ಸುತ್ತಲಿನ ಪ್ರಪಂಚದೊಂದಿಗೆ ಹೆಚ್ಚು ಪ್ರತಿಕ್ರಿಯಿಸುತ್ತದೆ, ಮತ್ತು ಸಂವಹನ ನಡೆಸುತ್ತಿದೆ ಎನ್ನುವುದನ್ನು ಸೂಚಿಸುತ್ತದೆ, ಜೊತೆಗೆ ಅವರ ಸ್ವಂತ ಭಾವನೆಗಳು, ಆಲೋಚನೆಗಳು ಮತ್ತು ಭಾವನೆಗಳೊಂದಿಗೆ. ಅವರು ಅದನ್ನು ಹೇಗೆ ನಿರ್ವಹಿಸಬೇಕೆಂದು ಕಲಿಯಲು ಪ್ರಯತ್ನಿಸುತ್ತಾರೆ. ಆಟವಾಡುವಾಗ ಬಾಟಲಿಯ ಮುಚ್ಚಳ ತೆಗೆಯಲು ಪ್ರಯತ್ನಿಸುವುದು, ಮತ್ತೆ ಅದನ್ನು ತಿರುಗಿಸಿ ಹಾಕುವುದು. ಆಟದ ವಸ್ತುಗಳನ್ನು ಒಂದರ ಮೇಲೊಂದು ಇಡುವುದು ಮಾಡುತ್ತಿರುತ್ತಾರೆ. ಕೆಲವೊಮ್ಮೆ ಇದು ಸಾಧ್ಯವಾಗದಿದ್ದಾಗ ಹತಾಶೆ ಮತ್ತು ಕೋಪೋದ್ರೇಕಕ್ಕೆ ಕಾರಣವಾಗುತ್ತದೆ.

ಈ ಹಂತವು ಬಹಳ ಮುಖ್ಯವಾಗಿದೆ ಏಕೆಂದರೆ ಅವರು ತಮ್ಮ ಜೀವನದುದ್ದಕ್ಕೂ ಕಷ್ಟಕರ ಸಂದರ್ಭಗಳನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದಕ್ಕೆ ಇದು ಪೂರ್ವನಿದರ್ಶನವನ್ನು ಹೊಂದಿಸುತ್ತದೆ. ಇದರರ್ಥ ನೀವು ಅವರ ಕೋಪೋದ್ರೇಕಗಳನ್ನು ನಕಾರಾತ್ಮಕವಾಗಿ ನಿಗ್ರಹಿಸಬೇಕು ಮತ್ತು ಅನ್ನು ನಿವಾರಿಸಬೇಕು ಎಂದಲ್ಲ. ಇದನ್ನು ಒಂದು ಪ್ರಕ್ರಿಯೆಯಾಗಿ ತೆಗೆದುಕೊಳ್ಳಿ ಮತ್ತು ಅವರ ಕಷ್ಟದ ಭಾವನೆಗಳನ್ನು ಹೇಗೆ ನಿರ್ವಹಿಸಬೇಕೆಂದು ಅವರಿಗೆ ಕಲಿಸಿ. ಇದು ವಯಸ್ಕರಾದಂತೆ ಅವರ ಜೀವನದಲ್ಲಿ ಭಾರಿ ಬದಲಾವಣೆಯನ್ನು ಉಂಟುಮಾಡಬಹುದು. ಅದು ಅವರಲ್ಲಿ ತಾಳ್ಮೆಯನ್ನು ಕಲಿಸಬಹುದು. ಮಕ್ಕಳೊಂದಿಗೆ ಅವರ ಆಟದಲ್ಲಿ ನೀವೂ ಪಾಲ್ಗೊಳ್ಳುವ ಮೂಲಕ, ಅವರ ಕೋಪದ ಸಂದರ್ಭಗಳನ್ನು ನೀವೇ ತಾಳ್ಮೆಯಿಂದ ನಿಭಾಯಿಸುವುದನ್ನು ಕಲಿಯಿರಿ.

ಇದನ್ನೂ ಓದಿ

ತಾಳ್ಮೆ ಕಳೆದುಕೊಳ್ಳುವ ಪೋಷಕರಿಗಾಗಿ ಸಲಹೆಗಳು

ತಾಳ್ಮೆ ಕಳೆದುಕೊಳ್ಳುವ ಪೋಷಕರಿಗಾಗಿ ಸಲಹೆಗಳು

ಹೆಚ್ಚಿನ ಮಕ್ಕಳು ಕೋಪೋದ್ರಿಕ್ತರಾದಾಗ, ಮಕ್ಕಳು ಹಠಮಾಡಿದಾಗ ಪೋಷಕರೂ ಕಿರುಚಾಡುವುದು, ಹೊಡೆಯುವುದು ಇದೆ. ಇನ್ನು ನನ್ನಿಂದ ನಿಭಾಯಿಸುವುದಿಕ್ಕಾಗಲ್ಲಪ್ಪ ಎಂದು ತಾಳ್ಮೆ ಕಳೆದುಕೊಳ್ಳುವ ಪೋಷಕರೇನು ಕಡಿಮೆ ಇಲ್ಲ. ಆದರೆ ನೀವು ಅರ್ಥಮಾಡಿಕೊಳ್ಳಬೇಕಿರುವುದಿಷ್ಟೇ.. ನೀವು ಅವರ ಹಂತವನ್ನು ದಾಟಿ ಬಂದಿರುತ್ತೀರಿ. ಇದು ಮಕ್ಕಳ ಬೆಳವಣಿಗೆಯಲ್ಲಿ ಸಹಜ. ಮಕ್ಕಳು ಕೋಪವನ್ನು ತೋರ್ಪಡಿಸುವಾಗ ನೀವು ಮಾಡಬೇಕಾದುದು ಇಷ್ಟೇ..

ತಾಳ್ಮೆ ಕಳೆದುಕೊಳ್ಳಬೇಡಿ

ತಾಳ್ಮೆ ಕಳೆದುಕೊಳ್ಳಬೇಡಿ

ಮೊದಲನೆಯದಾಗಿ ನಿಮ್ಮ ತಾಳ್ಮೆಯನ್ನು ಕಳೆದುಕೊಳ್ಳಬೇಡಿ. ನಿಮ್ಮ ಮಗು ಕೋಪಗೊಂಡಾಗ ಅಥವಾ ಹತಾಶೆಗೊಂಡರೆ, ಅವರು ಕೋಪೋದ್ರೇಕವ ವ್ಯಕ್ತಪಡಿಸಿದಾಗ ನೀವು ಕಿರುಚುವ ಮೂಲಕ ಅಥವಾ ಶಿಕ್ಷೆಗೆ ಬೆದರಿಕೆ ಹಾಕುವ ಮೂಲಕ ಪ್ರತಿಕ್ರಿಯಿಸಿದರೆ, ನಿಮ್ಮ ನಡವಳಿಕೆಯೇ ಅವರನ್ನು ಇನ್ನಷ್ಟು ಹದಗೆಡಿಸಬಹುದು. ಮಕ್ಕಳು ಸಾಮಾನ್ಯವಾಗಿ ಅವರು ಅನುಭವಿಸುವ ಭಾವನೆಯನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಅವರನ್ನು ಒಂಟಿಯಾಗಿ ಬಿಡಬೇಡಿ ಮತ್ತು ಅವರು ಅದನ್ನು ಎದುರಿಸುತ್ತಿರುವಾಗ ಅವರೊಂದಿಗೆ ಕುಳಿತುಕೊಳ್ಳಬೇಡಿ. ಸಾಧ್ಯವಾದರೆ ಅಂತಹ ಸಂದರ್ಭದಲ್ಲಿ ಅವರನ್ನು ಅಪ್ಪಿಕೊಂಡು ಸಾಂತ್ವಾನ ಮಾಡಿ.

ಶಿಕ್ಷಿಸಬೇಡಿ

ಶಿಕ್ಷಿಸಬೇಡಿ

ಮಕ್ಕಳ ಕೋಪೋದ್ರೇಕವನ್ನು ಪೋಷಕರು ಬಯಸುವುದಿಲ್ಲ ಇದು ಅವರನ್ನು ನಿರುತ್ಸಾಹಗೊಳಿಸಬೇಕಾದ ನಡವಳಿಕೆಯಾಗಿದೆ, ಆದರೆ ಅಂತಹ ಸಂದರ್ಭದಲ್ಲಿ ನಿಮ್ಮ ಮಗುವಿಗೆ ಶಿಕ್ಷೆ ನೀಡಿದಾಗ ಅವರಿಗೆ ಸಹಾಯ ಮಾಡಲು ಬೇಕಾದ ಸಮಯದಲ್ಲಿ ನಿಮ್ಮನ್ನು ನಂಬಲು ಸಾಧ್ಯವಿಲ್ಲ ಎನ್ನುವುದನ್ನು ಕಲಿಯುತ್ತಾರೆ. ನೀವು ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಅವರು ಭಾವಿಸಬಹುದು ಮತ್ತು ಅವರು ಏಕಾಂಗಿಯಾಗಿರಬಹುದು. ಇದು ನಿಮ್ಮ ಮಗು ಬೆಳೆದಂತೆ ಋಣಾತ್ಮಕ ಪರಿಣಾಮಗಳನ್ನು ಬೀರಬಹುದು.

ಪರಿಸ್ಥಿತಿ ತಿಳಿಯಾದ ನಂತರ ಮಾತನಾಡಿ

ಪರಿಸ್ಥಿತಿ ತಿಳಿಯಾದ ನಂತರ ಮಾತನಾಡಿ

ನಿಮ್ಮ ಮಗು ಭಾವನಾತ್ಮಕ ಪ್ರಕ್ಷುಬ್ಧತೆಯಲ್ಲಿದ್ದಾಗ ಅದಕ್ಕೆ ತಾರ್ಕಿಕವಾಗಿ ಯಾವುದೇ ಅರ್ಥವಿಲ್ಲ. ಕೋಪ ಕಡಿಮೆಯಾದ ನಂತರ, ಏನಾಯಿತು ಎಂಬುದರ ಕುರಿತು ಆರಾಮದಾಯಕ ಮತ್ತು ತಾಳ್ಮೆಯಿಂದ ಮಾತನಾಡಲು ಸಮಯವಿರುತ್ತದೆ. ಮಕ್ಕಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಅದನ್ನು ನಾವು ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಅತ್ಯಗತ್ಯ, ಆದ್ದರಿಂದ ಅದನ್ನು ಸರಳ ಪದಗಳಲ್ಲಿ ಚರ್ಚಿಸಿ.

ನೀವು ಅವರನ್ನು ಪ್ರೀತಿಸುತ್ತೀರಿ ಎಂದು ಅವರಿಗೆ ತಿಳಿಸಿ

ನೀವು ಅವರನ್ನು ಪ್ರೀತಿಸುತ್ತೀರಿ ಎಂದು ಅವರಿಗೆ ತಿಳಿಸಿ

ನಿಮ್ಮ ಅಂಬೆಗಾಲಿಡುವ ಮಗು ಶಾಂತವಾಗಿದ್ದರೆ ಮತ್ತು ಯಾಕೆ ಹಠ ಮಾಡಿದೆ ಎಂದು ನೀವು ಚರ್ಚಿಸಿದ ನಂತರ, ನಿಮ್ಮ ಮಗುವಿಗೆ ಅಪ್ಪುಗೆಯನ್ನು ನೀಡುವ ಮೂಲಕ ಮತ್ತು ನೀವು ಅವರನ್ನು ಪ್ರೀತಿಸುತ್ತೀರಿ ಎಂದು ಹೇಳುವ ಮೂಲಕ ಸಕಾರಾತ್ಮಕವಾಗಿ ಅದನ್ನು ಕೊನೆಗೊಳಿಸಿ. ಇದು ಆರೋಗ್ಯಕರ ಸಂವಹನದಲ್ಲಿ ತೊಡಗಿಸಿಕೊಳ್ಳಲು ಪ್ರತಿಫಲವಾಗಿ ಕಾರ್ಯನಿರ್ವಹಿಸುತ್ತದೆ, ಭಾವನೆಗಳು ಬೆಳೆದಂತೆ ಅವುಗಳನ್ನು ನಿರ್ವಹಿಸಲು ಉತ್ತಮ ಆದ್ಯತೆಯನ್ನು ನೀಡುತ್ತದೆ.

ಮಕ್ಕಳಿಗೆ ಮಾತನಾಡಲು ಕಲಿಸಿ

ಮಕ್ಕಳು ಶಾಂತವಾಗಿರುವಾಗ ನಿಮ್ಮ ಮಗುವಿಗೆ ಅವರ ಪದಗಳನ್ನು ಬಳಸಲು ಕಲಿಸಿ - ಮುಂದಿನ ಬಾರಿ ಅವರು ಈ ರೀತಿ ಭಾವಿಸಿದಾಗ ಅವರು ಏನು ಹೇಳಬೇಕು, ಬದಲಿಗೆ ವರ್ತಿಸಬೇಕು ಎನ್ನುವುದನ್ನು ತಿಳಿಸಿಕೊಡಿ. ಉದಾಹರಣೆ ಅವರಿಗೆ ಇಷ್ಟವಾದ ವಸ್ತು ಬೇಕೆನ್ನುವಾಗ, ಬೇಡವೆನ್ನುವಾಗ ಏನು ಹೇಳಬೇಕೆಂದು ಪ್ರೀತಿಯಿಂದ ಕಲಿಸಿಕೊಡಿ.

ಬೆಳವಣಿಗೆಯ ಹಂತದಲ್ಲೇ ಮಕ್ಕಳು ಹಠ ಮಾಡಿದಾಗ ಅಥವಾ ಕೋಪಗೊಂಡು ಚೀರಿದಾಗ ನಾವು ಇನ್ನಷ್ಟು ಪರಿಸ್ಥಿತಿಯನ್ನು ಕೆಡಿಸುವ ಪ್ರಯತ್ನ ಮಾಡಬಾರದು. ಮಕ್ಕಳನ್ನು ಅರ್ಥಮಾಡಿಕೊಳ್ಳುವ ಮನೋಭಾವ ನಮ್ಮದಾದಲ್ಲಿ ಹೊರಗಡೆ ಹೋದಾಗ ಮುಜುಗರಕ್ಕೊಳಗಾಗುವುದೂ ತಪ್ಪುತ್ತದೆ. ಮಕ್ಕಳ ಬೆಳವಣಿಗೆಗೆ ನಮ್ಮ ಗುಣಗಳೂ ಮುಖ್ಯವಾಗುತ್ತೆ ಎನ್ನುವುದನ್ನು ಮರೆಯದಿರಿ. ಮಕ್ಕಳು ನಮ್ಮನ್ನು ನೋಡಿಯೇ ಅದನ್ನು ಅನುಸರಿಸುತ್ತಾರೆ ಎನ್ನುವ ಸಂಗತಿ ಮನದಲ್ಲಿರಲಿ.

English summary

How To Respond Temper Tantrums in Children in kannada

you must know how to respond temper tantrums in childrens in kannada, read on....
X
Desktop Bottom Promotion