For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆ ಮುನ್ನ ಈ ಕೆಲಸ ಮಾಡಿದರೆ, ಮಗುವಿಗೆ ಹೊಟ್ಟೆಯಲ್ಲಿ ಯಾವುದೇ ಸಮಸ್ಯೆಯಾಗುವುದಿಲ್ಲ

|

ದೇಹವನ್ನು ನಿರ್ವಿಷಗೊಳಿಸುವ ಬಗ್ಗೆ ನೀವು ಕೇಳಿರಬೇಕು, ಆದರೆ ಗರ್ಭಾಶಯದ ನಿರ್ವಿಶೀಕರಣದ ಬಗ್ಗೆ ನಿಮಗೆ ತಿಳಿದಿದೆಯೇ?, ಹೌದು, ಗರ್ಭಧಾರಣೆಯನ್ನು ಯೋಜಿಸುವ ಮೊದಲು ಮಹಿಳೆಯು ಗರ್ಭಕೋಶವನ್ನು ಡಿಟಾಕ್ಸ್ ಮಾಡಬೇಕು. ಇದರಿಂದ ಗರ್ಭಧಾರಣೆಯು ಆರೋಗ್ಯಕರ ಮತ್ತು ಸುರಕ್ಷಿತವಾಗಿರುವ ಸಾಧ್ಯತೆ ಹೆಚ್ಚಾಗುವುದು. ಹಾಗಾದರೆ, ಪ್ರೆಗ್ನೆನ್ಸಿ ಡಿಟಾಕ್ಸ್ ಎಂದರೇನು?, ಅದನ್ನು ಮಾಡುವ ವಿಧಾನ ಹೇಗೆ ಎಂಬುದನ್ನು ಇಲ್ಲಿ ನೋಡೋಣ.

ಪ್ರೆಗ್ನೆನ್ಸಿ ಡಿಟಾಕ್ಸ್ ಎಂದರೇನು?:

ಪ್ರೆಗ್ನೆನ್ಸಿ ಡಿಟಾಕ್ಸ್ ಎಂದರೇನು?:

ನಿಯಮಿತವಾದ ವ್ಯಾಯಾಮದ ಜೊತೆಗೆ ಉತ್ತಮ ಆಹಾರ ಪದ್ಧತಿಯು ದೇಹವನ್ನು ಸ್ವಚ್ಛವಾಗಿಡುವುದು. ಆದರೆ, ಕಲುಷಿತ ಗಾಳಿ, ನೀರು, ಪ್ಯಾಕ್ ಮಾಡಿದ ಆಹಾರ, ಬಟ್ಟೆ, ಸೌಂದರ್ಯವರ್ಧಕಗಳು, ಸಿಗರೇಟ್, ಆಲ್ಕೋಹಾಲ್, ಹೆಚ್ಚುವರಿ ಹಾರ್ಮೋನುಗಳು ಮತ್ತು ಕೀಟನಾಶಕಗಳು ವರ್ಷದಿಂದ ವರ್ಷಕ್ಕೆ ದೇಹದಲ್ಲಿ ವಿಷ ಮತ್ತು ರಾಸಾಯನಿಕಗಳನ್ನು ಸಂಗ್ರಹಿಸಲು ಕಾರಣವಾಗುತ್ತವೆ. ಆದ್ದರಿಂದ ಗರ್ಭಧಾರಣೆ ಮುನ್ನ ಇವುಗಳನ್ನು ಸ್ವಚ್ಛಗೊಳಿಸುವುದು ಮುಖ್ಯ.

ಪ್ರೆಗ್ನೆನ್ಸಿ ಡಿಟಾಕ್ಸನ್ನು ಗರ್ಭಕೋಶದ ಶುದ್ಧೀಕರಣ ಎಂದು ಕರೆಯಬಹುದು. ಇದರಿಂದ ಗರ್ಭಾಶಯದಲ್ಲಿನ ವಿಷವನ್ನು ತೆಗೆದುಹಾಕಲಾಗುತ್ತದೆ. ನೀವೇನಾದರೂ ಗರ್ಭಧರಿಸಲು ತಯಾರಿ ನಡೆಸುತ್ತಿದ್ದರೆ, ಪ್ರೆಗ್ನೆನ್ಸಿ ಡಿಟಾಕ್ಸ್ ಪ್ರಾರಂಭಿಸಬೇಕು. ಇದು ಯಕೃತ್ತು, ಕರುಳು ಮತ್ತು ಗರ್ಭಾಶಯದ ನಿರ್ವಿಶೀಕರಣವನ್ನು ಒಳಗೊಂಡಿರುತ್ತದೆ. ಆದರೆ ಈ ಲೇಖನದಲ್ಲಿ ನಾವು ಗರ್ಭಾಶಯವನ್ನು ಮಾತ್ರ ನಿರ್ವಿಷಗೊಳಿಸುವ ಬಗ್ಗೆ ಹೇಳುತ್ತಿದ್ದೇವೆ. ಈ ವಿಧಾನವು ಗರ್ಭಾಶಯದಲ್ಲಿರುವ ಕೊಳಕು ರಕ್ತವನ್ನು ಸ್ವಚ್ಛಗೊಳಿಸಿ, ರಕ್ತದ ಹರಿವನ್ನು ಹೆಚ್ಚಿಸುತ್ತದೆ ಮತ್ತು ಗರ್ಭಾಶಯದ ಸ್ನಾಯುಗಳನ್ನು ಟೋನ್ ಮಾಡುತ್ತದೆ.

ಗರ್ಭಾಶಯದ ಶುದ್ಧೀಕರಣ:

ಗರ್ಭಾಶಯದ ಶುದ್ಧೀಕರಣ:

ಗರ್ಭಧರಿಸಲು, ನಿಮ್ಮ ಗರ್ಭಾಶಯವು ಸ್ವಚ್ಛ ಮತ್ತು ಆರೋಗ್ಯಕರವಾಗಿರುವುದು ಬಹಳ ಮುಖ್ಯ. ಕೆಲವೊಮ್ಮೆ ಮುಟ್ಟಿನ ಅವಧಿಯ ಹಳೆಯ ರಕ್ತವು ಗರ್ಭಾಶಯದಲ್ಲಿ ಉಳಿಯುತ್ತದೆ, ಅದನ್ನು ಸ್ವಚ್ಛಗೊಳಿಸುವುದು ಅನಿವಾರ್ಯ, ಏಕೆಂದರೆ ಇದು ಭ್ರೂಣದ ಬೆಳವಣಿಗೆಗೆ ಒಳ್ಳೆಯದಲ್ಲ.

ಗರ್ಭಾಶಯದ ಡಿಟಾಕ್ಸ್ ಏಕೆ ಮುಖ್ಯ?:

ಗರ್ಭಾಶಯದ ಡಿಟಾಕ್ಸ್ ಏಕೆ ಮುಖ್ಯ?:

ಗರ್ಭಾಶಯದಲ್ಲಿನ ರಕ್ತದ ಹೊರತಾಗಿ, ಹಾರ್ಮೋನುಗಳ ಅಸಮತೋಲನ, ರಕ್ತದ ಹರಿವಿನ ಕೊರತೆ, ಗರ್ಭಾಶಯದ ಸ್ಥಾನ ಬದಲಾವಣೆ, ಕಳಪೆ ಆಹಾರ ಮತ್ತು ವ್ಯಾಯಾಮದ ಕೊರತೆಯು ಗರ್ಭಾಶಯದ ನಿರ್ವಿಶೀಕರಣದ ಅಗತ್ಯವನ್ನು ಸೃಷ್ಟಿಸಬಹುದು. ಆದ್ದರಿಂದ ಈ ವಿಧಾನಗಳನ್ನು ಅಳವಡಿಸಿಕೊಂಡು, ನಿಮ್ಮ ಗರ್ಭಕೋಶವನ್ನು ಸ್ವಚ್ಛಗೊಳಿಸುವುದು ಒಳ್ಳೆಯದು.

ಶುಂಠಿ ಮತ್ತು ಚೆಂಡು ಹೂ ಟೀ:

ಶುಂಠಿ ಮತ್ತು ಚೆಂಡು ಹೂ ಟೀ:

ಶುಂಠಿಯು ಉರಿಯೂತವನ್ನು ಕಡಿಮೆ ಮಾಡಿ, ಗರ್ಭಾಶಯಕ್ಕೆ ರಕ್ತ ಮತ್ತು ಆಮ್ಲಜನಕದ ಹರಿವನ್ನು ಹೆಚ್ಚಿಸುತ್ತದೆ. ಇದು ಗರ್ಭಾಶಯವನ್ನು ಮಾತ್ರವಲ್ಲದೆ ಇಡೀ ದೇಹವನ್ನು ಶುದ್ಧೀಕರಿಸುತ್ತದೆ ಜೊತೆಗೆ ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅದೇ ರೀತಿ, ಚೆಂಡು ಹೂ ಸಹ ಗರ್ಭಾಶಯವನ್ನು ಶುದ್ಧೀಕರಿಸುತ್ತದೆ ಮತ್ತು ಲೋಳೆಯ ಪೊರೆಯನ್ನು ಕಿರಿಕಿರಿಗೊಳಿಸುವುದಿಲ್ಲ. ಚೆಂಡು ಹೂವಿನ ಟೀ ಕುಡಿಯುವುದರಿಂದ ಮುಟ್ಟಿನ ರಕ್ತಸ್ರಾವವನ್ನು ನಿಯಂತ್ರಿಸಬಹುದು, ಜೊತೆಗೆ ಸೆಳೆತವನ್ನು ಕಡಿಮೆ ಮಾಡಬಹುದು.

ಗರ್ಭಧಾರಣೆಗೆ ನಿಮ್ಮ ದೇಹವನ್ನು ನಿರ್ವಿಷಗೊಳಿಸಲು ಬಯಸಿದರೆ, ಈ ಸಲಹೆಗಳನ್ನು ಅನುಸರಿಸಿ:

ಗರ್ಭಧಾರಣೆಗೆ ನಿಮ್ಮ ದೇಹವನ್ನು ನಿರ್ವಿಷಗೊಳಿಸಲು ಬಯಸಿದರೆ, ಈ ಸಲಹೆಗಳನ್ನು ಅನುಸರಿಸಿ:

ಹಾರ್ಮೋನುಗಳನ್ನು ಸಮತೋಲನಗೊಳಿಸಲು ಮತ್ತು ಪೌಷ್ಟಿಕಾಂಶದ ಕೊರತೆಯನ್ನು ತಪ್ಪಿಸಲು ದಿನಕ್ಕೆ ಮೂರು ಬಾರಿ ಆಹಾರ ಸೇವಿಸಿ.

ಸಣ್ಣ ಪ್ರಮಾಣದಲ್ಲಿ ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ವಿಶ್ರಾಂತಿ ಸಿಗುವುದು.

ಪಿತ್ತಜನಕಾಂಗದ ಕಾರ್ಯನಿರ್ವಹಣೆಗೆ ಸಹಾಯ ಮಾಡುವ ಚಟುವಟಿಕೆಗಳನ್ನು ಮಾಡಿ, ರಕ್ತದ ಹರಿವನ್ನು ಹೆಚ್ಚಿಸಿ ಮತ್ತು ವಿಷವನ್ನು ವೇಗವಾಗಿ ಹೊರಹಾಕಿ.

English summary

How to Detox Your Uterus to Get Pregnant in Kannada

Here we talking about How to detox your uterus to get pregnant in Kannada, read on
X
Desktop Bottom Promotion