For Quick Alerts
ALLOW NOTIFICATIONS  
For Daily Alerts

ಮಹಿಳೆಯರೇ, ಗರ್ಭಿಣಿಯಾಗಿದ್ದಾಗ ಕಾಣಿಸಿಕೊಳ್ಳುವ ಮಧುಮೇಹದ ಬಗ್ಗೆ ಎಚ್ಚರವಿರಲಿ!!

|

ಪ್ರತಿಯೊಂದು ಹೆಣ್ಣಿನ ಜೀವನದಲ್ಲೂ ಗರ್ಭಾವಸ್ಥೆಯು ಅತ್ಯಂತ ಸುಂದರ, ಅಷ್ಟೇ ಸವಾಲಿನ ಹಂತವಾಗಿದೆ. ಈ ಸಮಯದಲ್ಲಿ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಇಲ್ಲವಾದಲ್ಲಿ ನಾನಾ ಸಮಸ್ಯೆಗಳು ತಾಯಿ ಹಾಗೂ ಮಗು ಇಬ್ಬರನ್ನೂ ಕಾಡುತ್ತದೆ. ಅಂತಹ ಒಂದು ಸಮಸ್ಯೆಗಳಲ್ಲಿ ಗರ್ಭಾವಸ್ಥೆಯ ಮಧುಮೇಹ ಕೂಡ ಒಂದು.

ಇದೊಂದು ಡಯಾಬಿಟಿಸ್ ಸ್ಥಿತಿಯಾಗಿದ್ದು, ಗರ್ಭಿಣಿಯಾಗಿದ್ದಾಗ ಮಾತ್ರ ಕಾಣಿಸಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ತಾಯಿ ಸಾಧ್ಯವಾದಷ್ಟು ಎಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಅದು ಮಗುವಿನ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಹಾಗಾದರೆ, ಈ ಸಮಸ್ಯೆಯ ಬಗ್ಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಗರ್ಭಾವಸ್ಥೆಯ ಮಧುಮೇಹ ಎಂದರೇನು?:

ಗರ್ಭಾವಸ್ಥೆಯ ಮಧುಮೇಹ ಎಂದರೇನು?:

ಗರ್ಭಾವಸ್ಥೆಯ ಮಧುಮೇಹವು ಒಂದು ರೀತಿಯ ಮಧುಮೇಹವಾಗಿದ್ದು ಅದು ಗರ್ಭಾವಸ್ಥೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ 6 ರಿಂದ 9 ಪ್ರತಿಶತ ಗರ್ಭಿಣಿಯರು ಗರ್ಭಾವಸ್ಥೆಯ ಮಧುಮೇಹವನ್ನು ಅಭಿವೃದ್ಧಿಪಡಿಸುತ್ತಾರೆ. ಗರ್ಭಾವಸ್ಥೆಯ ಮಧುಮೇಹವು ಸಾಮಾನ್ಯವಾಗಿ ಗರ್ಭಧಾರಣೆಯ 24 ನೇ ವಾರ ಮತ್ತು 28 ನೇ ವಾರದ ನಡುವೆ ಪ್ರಾರಂಭವಾಗುತ್ತದೆ.

ಗರ್ಭಾವಸ್ಥೆಯ ಮಧುಮೇಹಕ್ಕೆ ಕಾರಣವೇನು?:

ಗರ್ಭಾವಸ್ಥೆಯ ಮಧುಮೇಹಕ್ಕೆ ಕಾರಣವೇನು?:

ಇನ್ಸುಲಿನ್ ಎಂಬುದು ಮೇದೋಜ್ಜೀರಕ ಗ್ರಂಥಿಯಲ್ಲಿ ಉತ್ಪತ್ತಿಯಾಗುವ ಹಾರ್ಮೋನ್ ಆಗಿದ್ದು, ಅದು ದೇಹದ ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳ ಚಯಾಪಚಯವನ್ನು ನಿಯಂತ್ರಿಸುತ್ತದೆ ಮತ್ತು ದೇಹವು ಸಕ್ಕರೆಯನ್ನು ಶಕ್ತಿಯನ್ನಾಗಿ ಮಾಡಲು ಸಹಾಯ ಮಾಡುತ್ತದೆ. ಆದರೆ, ಜರಾಯುವಿನ ಹಾರ್ಮೋನುಗಳು ಇನ್ಸುಲಿನ್ ಅನ್ನು ನಿರ್ಬಂಧಿಸಿದಾಗ ಗರ್ಭಾವಸ್ಥೆಯ ಮಧುಮೇಹ ಸಂಭವಿಸುತ್ತದೆ. ಇದು ಗರ್ಭಾವಸ್ಥೆಯಲ್ಲಿ ಹೆಚ್ಚಾಗಿರುವ ರಕ್ತದಲ್ಲಿನ ಸಕ್ಕರೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದರಿಂದ ದೇಹವನ್ನು ತಡೆಯುತ್ತದೆ. ಇದರಿಂದ ನಿಮ್ಮ ದೇಹದಲ್ಲಿನ ನರಗಳು, ರಕ್ತನಾಳಗಳು ಮತ್ತು ಅಂಗಗಳಿಗೆ ಹಾನಿಯನ್ನುಂಟುಮಾಡುವ ಹೈಪರ್ಗ್ಲೈಸೀಮಿಯಾ (ಅಥವಾ ರಕ್ತದಲ್ಲಿ ಹೆಚ್ಚಿನ ಮಟ್ಟದ ಸಕ್ಕರೆ) ಕಾರಣವಾಗುತ್ತದೆ.

ಗರ್ಭಾವಸ್ಥೆಯ ಮಧುಮೇಹಕ್ಕೆ ಯಾರು ಹೆಚ್ಚು ಗುರಿಯಾಗುತ್ತಾರೆ?

ಗರ್ಭಾವಸ್ಥೆಯ ಮಧುಮೇಹಕ್ಕೆ ಯಾರು ಹೆಚ್ಚು ಗುರಿಯಾಗುತ್ತಾರೆ?

ಅಧಿಕ ತೂಕ ಹೊಂದಿರುವವರು:. ಗರ್ಭಾವಸ್ಥೆಯಲ್ಲಿ 30 ಅಥವಾ ಅದಕ್ಕಿಂತ ಹೆಚ್ಚಿನ BMI ಹೊಂದುವುದು ಗರ್ಭಾವಸ್ಥೆಯ ಮಧುಮೇಹಕ್ಕೆ ಸಾಮಾನ್ಯ ಅಪಾಯಕಾರಿ ಅಂಶಗಳಲ್ಲಿ ಒಂದಾಗಿದೆ, ಏಕೆಂದರೆ ಹೆಚ್ಚುವರಿ ತೂಕವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಇನ್ಸುಲಿನ್ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

ಹೆಚ್ಚು ಹೊಟ್ಟೆಯ ಕೊಬ್ಬು ಹೊಂದಿದ್ದರೆ: ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್‌ನ ಜರ್ನಲ್ ಡಯಾಬಿಟಿಸ್ ಕೇರ್‌ನಲ್ಲಿ ಪ್ರಕಟವಾದ ಸಂಶೋಧನೆಯು ಗರ್ಭಾವಸ್ಥೆಯ ಮೊದಲ ತ್ರೈಮಾಸಿಕದಲ್ಲಿ ಹೆಚ್ಚಿನ ಪ್ರಮಾಣದ ಹೊಟ್ಟೆಯ ಕೊಬ್ಬನ್ನು ಹೊಂದಿರುವ ಮಹಿಳೆಯರು ನಂತರ ಗರ್ಭಾವಸ್ಥೆಯ ಮಧುಮೇಹ ಪಡೆಯುವ ಸಾಧ್ಯತೆ ಇದೆ ಎಂದು ವರದಿ ಮಾಡಿದೆ.

ವಯಸ್ಸಾಗಿದ್ದರೆ: 25-30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಈ ಮಧುಮೇಹವನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ ಎಂದು ವೈದ್ಯರು ಗಮನಿಸಿದ್ದಾರೆ. ನಿಮಗೆ ವಯಸ್ಸಾದಂತೆ ಆ ಅಪಾಯವು ಹೆಚ್ಚಾಗುತ್ತದೆ.

ಕೌಟುಂಬಿಕ ಇತಿಹಾಸವಿರುವವರಿಗೆ: ನಿಮ್ಮ ಪ್ರಾಥಮಿಕ ಸಂಬಂಧಿಕರಲ್ಲಿ ಮಧುಮೇಹ ಇದ್ದ ಇತಿಹಾಸವಿದ್ದರೆ, ನೀವು ಈ ಗರ್ಭಾವಸ್ಥೆ ಮಧುಮೇಹದ ಹೆಚ್ಚು ಅಪಾಯವನ್ನು ಹೊಂದಿರಬಹುದು. ಅಷ್ಟೇ ಅಲ್ಲ, ಹಿಂದಿನ ಗರ್ಭಾವಸ್ಥೆಯಲ್ಲಿ ನೀವು ಇದಕ್ಕೆ ತುತ್ತಾಗಿದ್ದರೆ, ನಂತರದ ಗರ್ಭಾವಸ್ಥೆಯಲ್ಲಿ ಅದಕ್ಕೆ ಮತ್ತೆ ಗುರಿಯಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆ ಸೂಚಿಸುತ್ತದೆ.

ಇತರ ಕಾರಣಗಳು: ಗರ್ಭಾವಸ್ಥೆಯ ಮೊದಲು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವು ಸ್ವಲ್ಪಮಟ್ಟಿಗೆ ಹೆಚ್ಚಿದ್ದರೆ, ಗರ್ಭಾವಸ್ಥೆಯಲ್ಲಿ ಮಧುಮೇಹ ಬರುವ ಸಾಧ್ಯತೆಯಿದೆ. ಜೊತೆಗೆ ಬೆಡ್‌ರೆಸ್ಟ್‌ನಲ್ಲಿದ್ದರೆ, ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಅಂದರೆ ಅವಳಿ, ತ್ರಿವಳಿ ಮಕ್ಕಳಿದ್ದರೆ ಇದರ ಅಪಾಯ ಹೆಚ್ಚು.

ಗರ್ಭಾವಸ್ಥೆಯ ಮಧುಮೇಹದ ಲಕ್ಷಣಗಳೇನು?:

ಗರ್ಭಾವಸ್ಥೆಯ ಮಧುಮೇಹದ ಲಕ್ಷಣಗಳೇನು?:

ಗರ್ಭಾವಸ್ಥೆಯ ಮಧುಮೇಹ ಹೊಂದಿರುವ ಹೆಚ್ಚಿನ ಮಹಿಳೆಯರು ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ, ಆದರೂ ಕೆಲವರು ಈ ಲಕ್ಷಣಗಳನ್ನು ಅನುಭವಿಸಬಹುದು:

ಅಸಾಮಾನ್ಯ ಬಾಯಾರಿಕೆ

ದೊಡ್ಡ ಪ್ರಮಾಣದಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆ

ಆಯಾಸ

ಮೂತ್ರದಲ್ಲಿ ಸಕ್ಕರೆ

ಈ ಗರ್ಭಾವಸ್ಥೆಯ ಮಧುಮೇಹದ ಪರಿಣಾಮವೇನು?:

ಈ ಗರ್ಭಾವಸ್ಥೆಯ ಮಧುಮೇಹದ ಪರಿಣಾಮವೇನು?:

ಸರಿಯಾದ ಚಿಕಿತ್ಸೆ ಮತ್ತು ನಿಮ್ಮ ವೈದ್ಯರ ನಿಯಮಿತ ಮೇಲ್ವಿಚಾರಣೆಯೊಂದಿಗೆ, ಗರ್ಭಾವಸ್ಥೆಯ ಮಧುಮೇಹವನ್ನು ನಿರ್ವಹಿಸಬಹುದು. ಇದು ನಿಮಗೆ ಅಥವಾ ನಿಮ್ಮ ಮಗುವಿಗೆ ಹಾನಿಕಾರಕವಲ್ಲ. ಆದರೆ ಚಿಕಿತ್ಸೆ ನೀಡದಿದ್ದರೆ, ಅತಿಯಾದ ಸಕ್ಕರೆಯು ತಾಯಿಯ ಮತ್ತು ಮಗುವಿನ ರಕ್ತದಲ್ಲಿ ಪರಿಚಲನೆಗೊಂಡರೆ, ತಾಯಿ ಮತ್ತು ಮಗುವಿಗೆ ಸಂಭವನೀಯ ಸಮಸ್ಯೆಗಳು ಗಂಭೀರವಾಗಿರುತ್ತವೆ. ಇದರಿಂದ ಸಾಮಾನ್ಯಕ್ಕಿಂತ ಹೆಚ್ಚು ಮಗು ಬೆಳೆಯುವ ಸಾಧ್ಯತೆಯಿದೆ. ಜೊತೆಗೆ ಹೆರಿಗೆಯು ಕಷ್ಟಕರವಾಗಬಹುದು, ಸಿಸೇರಿಯನ್ ಹೆಚ್ಚು ಮಾಡುವ ಸಾಧ್ಯತೆಯಿದೆ.

ಗರ್ಭಾವಸ್ಥೆಯ ಮಧುಮೇಹವನ್ನು ತಡೆಗಟ್ಟಲು ಏನು ಮಾಡಬಹುದು?

ಗರ್ಭಾವಸ್ಥೆಯ ಮಧುಮೇಹವನ್ನು ತಡೆಗಟ್ಟಲು ಏನು ಮಾಡಬಹುದು?

ಗರ್ಭಾವಸ್ಥೆಯ ಮಧುಮೇಹಕ್ಕೆ ಕೌಟುಂಬದ ಇತಿಹಾಸ ಅಥವಾ ಹೆಚ್ಚಾದ ತಾಯಿಯ ವಯಸ್ಸು ಆಗಿದ್ದರೆ, ಇದನ್ನು ತಡೆಯಲು ನೀವು ಏನನ್ನೂ ಮಾಡಲಾಗುವುದಿಲ್ಲ. ಆದರೆ ನೀವು ಅಧಿಕ ತೂಕ ಹೊಂದಿದ್ದರೆ, ಸಮತೋಲಿತ ಆಹಾರವನ್ನು ಸೇವಿಸಿ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಿ. ಇಂತಹ ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ನೀವು ದೊಡ್ಡ ವ್ಯತ್ಯಾಸವನ್ನು ಕಾಣಬಹುದು.

ಗರ್ಭಾವಸ್ಥೆಯ ಮಧುಮೇಹಕ್ಕೆ ಹೇಗೆ ಚಿಕಿತ್ಸೆ ನೀಡಲಾಗುತ್ತದೆ? :

ಗರ್ಭಾವಸ್ಥೆಯ ಮಧುಮೇಹಕ್ಕೆ ಹೇಗೆ ಚಿಕಿತ್ಸೆ ನೀಡಲಾಗುತ್ತದೆ? :

ಅದೃಷ್ಟವಶಾತ್, ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಎಚ್ಚರಿಕೆಯಿಂದ ನಿಯಂತ್ರಿಸುವ ಮೂಲಕ ಗರ್ಭಾವಸ್ಥೆಯಲ್ಲಿ ಮಧುಮೇಹಕ್ಕೆ ಸಂಬಂಧಿಸಿದ ಎಲ್ಲಾ ಸಂಭಾವ್ಯ ಅಪಾಯಗಳನ್ನು ತೊಡೆದುಹಾಕಬಹುದು.

ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ದಿನಕ್ಕೆ ಹಲವಾರು ಬಾರಿ ಮೇಲ್ವಿಚಾರಣೆ ಮಾಡಿ:

ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತಿಳಿಯಲು ಬೆಳಿಗ್ಗೆ ಮೊದಲ ಬಾರಿಗೆ ಪರಿಶೀಲಿಸಿ. ನಂತರ ಪ್ರತಿ ಊಟವನ್ನು ಸೇವಿಸಿದ ಒಂದು ಗಂಟೆಯ ನಂತರ ನಿಮ್ಮ ರಕ್ತದಲ್ಲಿನ ಸಕ್ಕರೆಯು ಆರೋಗ್ಯಕರ ವ್ಯಾಪ್ತಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು ಮತ್ತೆ ಮಧುಮೇಹವನ್ನು ಪರೀಕ್ಷಿಸಿ. ಇದಕ್ಕೆ ಅವಶ್ಯವಿರುವ ಕಿಟ್‌ಗಳನ್ನು ವೈದ್ಯರಿಂದ ಕೇಳಿ ಪಡೆಯಿರಿ.

ಆಹಾರ ತಜ್ಞರನ್ನು ಭೇಟಿ ಮಾಡಿ:

ಆಹಾರ ತಜ್ಞರನ್ನು ಭೇಟಿ ಮಾಡಿ:

ಆರೋಗ್ಯಕರ ಆಹಾರ ಆಯ್ಕೆಗಳನ್ನು ಪರಿಶೀಲಿಸಲು ಮತ್ತು ಊಟದ ಯೋಜನೆಯನ್ನು ಮಾಡಲು ಆಹಾರ ತಜ್ಞರನ್ನು ಸಂಪರ್ಕಿಸಿ.

ಆಹಾರದ ಪಟ್ಟಿ ತಯಾರಿಸಿ:

ಪ್ರತಿ ಊಟದ ನಂತರ, ನಿಮ್ಮ ರಕ್ತದಲ್ಲಿನ ಗ್ಲೂಕೋಸ್ ಸಂಖ್ಯೆಯೊಂದಿಗೆ ನೀವು ಸೇವಿಸಿದ ಎಲ್ಲವನ್ನೂ ಬರೆಯಿರಿ. ಯಾವ ಆಹಾರಗಳು ನಿಮ್ಮ ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುತ್ತವೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಇದು ನಿಮಗೆ ಸಹಾಯ ಮಾಡುತ್ತದೆ. ನಂತರ ಅವುಗಳನ್ನು ತಪ್ಪಿಸಬಹುದು.

ಓಡಾಡಿ

ನಿಮ್ಮ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಊಟದ ನಂತರ ನಡೆಯಲು ಹೋಗಿ ಅಥವಾ ಮೆಟ್ಟಿಲುಗಳನ್ನು ಹತ್ತಿಳಿರಿಯಿರಿ.

ಜನನದ ನಂತರ ಈ ಮಧುಮೇಹ ನಿಮ್ಮ ಮಗುವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?:

ಜನನದ ನಂತರ ಈ ಮಧುಮೇಹ ನಿಮ್ಮ ಮಗುವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ?:

ಗರ್ಭಾವಸ್ಥೆಯ ಮಧುಮೇಹ ಹೊಂದಿರುವ ತಾಯಂದಿರಿಗೆ ಜನಿಸಿದ ಶಿಶುಗಳು ಯಾವುದೇ ರೋಗಲಕ್ಷಣಗಳಿಲ್ಲದಿದ್ದರೂ ಸಹ, ಜನನದ ನಂತರ ಸರಳ ರಕ್ತ ಪರೀಕ್ಷೆಯನ್ನು ಮಾಡಿಸಬೇಕು. ಇದು ನೀವು ಮತ್ತು ಮಗು ಇನ್ನೂ ಆಸ್ಪತ್ರೆಯಲ್ಲಿದ್ದಾಗ, ಹೆರಿಗೆಯಾದ ತಕ್ಷಣ ನಡೆಯುತ್ತದೆ.

ನೀವು ಗರ್ಭಾವಸ್ಥೆಯ ಮಧುಮೇಹವನ್ನು ಹೊಂದಿದ್ದರೆ, ನಿಮ್ಮ ಮಗುವಿಗೆ ಆರೋಗ್ಯ ಸಮಸ್ಯೆಗಳ ಹೆಚ್ಚಿನ ಅಪಾಯವಿದೆ, ಮಗು ಅಥವಾ ಹದಿಹರೆಯದವರಲ್ಲಿ ಸ್ಥೂಲಕಾಯತೆ ಮತ್ತು ನಂತರದ ಜೀವನದಲ್ಲಿ ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ನಿಮ್ಮ ಮಗುವಿಗೆ ಉತ್ತಮ ಆಹಾರ ಮತ್ತು ವ್ಯಾಯಾಮದ ಅಭ್ಯಾಸಗಳನ್ನು ಮೊದಲೇ ಕಲಿಸಿ. ಆರೋಗ್ಯಕರ ಜೀವನಶೈಲಿಯಿಂದ ಸಮಸ್ಯೆಗಳನ್ನು ದೂರವಿಡಬಹುದು.

English summary

How Does Gestational Diabetes (GD) Affect Your Pregnancy and Baby in Kannada

Here we talking about How Does Gestational Diabetes (GD) Affect Your Pregnancy and Baby in Kannada, read on
X
Desktop Bottom Promotion