For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಮಧುಮೇಹ ಬಂದರೆ ತಾಯಿ ಹಾಗೂ ಮಗುವಿಗೆ ಉಂಟಾಗುವ ಅಪಾಯಗಳೇನು?

|

ಗರ್ಭಾವಸ್ಥೆಯಲ್ಲಿ ಮಧುಮೇಹ..! ಹೌದು, ಗರ್ಭಿಣಿಯಾಗದೇ ಇರುವ ಮುಂಚೆ ಇಲ್ಲದಿರುವ ಮಧುಮೇಹ ಗರ್ಭಧಾರಣೆಯಾದ ನಂತರ ಕಾಣಿಸಿಕೊಳ್ಳಬಹುದು. ಇದಕ್ಕೆ ಗೆಸ್ಚೇಶನಲ್‌ ಡಯಾಬಿಟಿಸ್‌ ಎನ್ನುತ್ತಾರೆ. ಈವಾಗ ಹೇಗೆ ಮಧುಮೇಹ ಇರಲು ಸಾಧ್ಯ. ಜೀವನಪೂರ್ತಿ ಡಯಾಬಿಟಿಕ್‌ ಆಗಿ ಇರಬೇಕಾ, ಇದರಿಂದ ಮಗುವಿಗೇನಾದರೂ ತೊಂದರೆ ಇದೆಯಾ ಎನ್ನುವ ಹತ್ತು ಹಲವು ಪ್ರಶ್ನೆಯ ಜೊತೆಗೆ ಆತಂಕವೂ ಗರ್ಭಿಣಿಯರನ್ನೂ ಕಾಡಬಹುದು. ಆದರೆ ಭಯ ಬೇಡ.. ಗರ್ಭಧಾರಣೆಯಲ್ಲಿ ಉಂಟಾಗುವ ಮಧುಮೇಹದ ಕುರಿತು ನೀವು ತಿಳಿದುಕೊಳ್ಳಲೇಬೇಕಾದ ಸಂಗತಿಗಳಿವು.

ಗರ್ಭಾವಸ್ಥೆಯ ಮಧುಮೇಹ ಎಂದರೆ

ಗರ್ಭಾವಸ್ಥೆಯ ಮಧುಮೇಹ ಎಂದರೆ

ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಮಧುಮೇಹ ಒಂದು ವಿಧವಾಗಿದ್ದು, ಇದು ಗರ್ಭಾವಸ್ಥೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತೆ. ಸೆಂಟರ್ಸ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆಂಡ್‌ ಪ್ರವೆನ್ಷನ್‌ ಪ್ರಕಾರ 6ರಿಂದ 9ರಷ್ಟು ಗರ್ಭಿಣಿಯರು ಈ ಮಧುಮೇಹವನ್ನು ಹೊಂದಿರುತ್ತಾರಂತೆ.

ಗರ್ಭಾವಸ್ಥೆಯ ಮಧುಮೇಹಕ್ಕೆ ಕಾರಣ

ಗರ್ಭಾವಸ್ಥೆಯ ಮಧುಮೇಹಕ್ಕೆ ಕಾರಣ

ಸಾಮಾನ್ಯವಾಗಿ ಮಧುಮೇಹಕ್ಕೆ ಕಾರಣವಾಗುವುದೇ ಇನ್ಸುಲಿನ್‌ನ ಮಟ್ಟ. ಇನ್ಸುಲಿನ್‌ ದೇಹವು ಸಕ್ಕರೆಯನ್ನು ಶಕ್ತಿಯಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ. ಗರ್ಭಿಣಿಯರಲ್ಲಿ ಜರಾಯುವಿನಲ್ಲಿರುವ ಹಾರ್ಮೋನ್‌ಗಳು ಇನ್ಸುಲಿನ್‌ ಅನ್ನು ನಿರ್ಬಂಧಿಸಿದಾಗ ಗರ್ಭಾವಸ್ಥೆಯ ಮಧುಮೇಹ ಉಂಟಾಗುತ್ತದೆ. ಇದು ಗರ್ಭಧಾರಣೆಯು ಹೆಚ್ಚಿದ ಸಕ್ಕರೆಯ ಪ್ರಮಾಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದನ್ನು ತಡೆಯುತ್ತದೆ. ಇದು ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗುವುದಕ್ಕೆ ಕಾರಣವಾಗುತ್ತದೆ. ಇದು ನರ, ರಕ್ತನಾಳವನ್ನು ಹಾಗೂ ಅಂಗಾಂಗಳನ್ನು ಕಾರ್ಯನಿರ್ವಹಿಸದ ಮಟ್ಟಿಗೆ ಹಾನಿಗೊಳಿಸಬಹುದು.

ಗರ್ಭಾವಸ್ಥೆಯ ಮಧುಮೇಹ ಯಾವ ಹಂತದಲ್ಲಿ ಕಾಣಿಸಿಕೊಳ್ಳುತ್ತೆ..?

ಗರ್ಭಾವಸ್ಥೆಯ ಮಧುಮೇಹ ಯಾವ ಹಂತದಲ್ಲಿ ಕಾಣಿಸಿಕೊಳ್ಳುತ್ತೆ..?

ಗರ್ಭಾವಸ್ಥೆಯಲ್ಲಿ ಮಧುಮೇಹವನ್ನು ಸಾಮಾನ್ಯವಾಗಿ 24ನೇ ವಾರ ಮತ್ತು 28ನೇ ವಾರದ ನಡುವೆ ಕಂಡುಹಿಡಿಯಬಹುದು. ಆದರೆ ಕೆಲವೊಮ್ಮೆ ಇದಕ್ಕಿಂತ ಮೊದಲೇ ಮಧುಮೇಹದ ಸ್ಥಿತಿ ಉಂಟಾಗಿರಬಹುದು.

ಗರ್ಭಾವಸ್ಥೆಯ ಮಧುಮೇಹಕ್ಕೆ ಕಾರಣಗಳು

ಗರ್ಭಾವಸ್ಥೆಯ ಮಧುಮೇಹಕ್ಕೆ ಕಾರಣಗಳು

ಅಧಿಕ ತೂಕ: ಗರ್ಭಾವಸ್ಥೆಯಲ್ಲಿ 30 ಅಥವಾ ಅದಕ್ಕಿಂತ ಹೆಚ್ಚಿನ ದೇಹದ ತೂಕ ಹೊಂದುವುದು ಗರ್ಭಾವಸ್ಥೆಯಲ್ಲಿನ ಮಧುಮೇಹಕ್ಕೆ ಕಾರಣವಾಗುವ ಅಪಾಯಕಾರಿ ಅಂಶಗಳಲ್ಲಿ ಒಂದಾಗಿದೆ.

ವಯಸ್ಸು: ಇಪ್ಪತ್ತೈದರಿಂದ ಮೂವತ್ತು ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಲ್ಲಿ ಗರ್ಭಾವಸ್ಥೆ ಮಧುಮೇಹದ ಸಾಧ್ಯತೆಗಳು ಹೆಚ್ಚು. ವಯಸ್ಸಾದಂತೆ ಈ ಅಪಾಯವು ಇನ್ನೂ ಹೆಚ್ಚಾಗುತ್ತದೆ.

ಅನುವಂಶಿಕ ಕಾರಣ:ನನಿಮ್ಮ ಕುಟುಂಬದಲ್ಲಿ ವಿಶೇಷವಾಗಿ ನಿಮ್ಮ ಮೊದಲನೇ ಹಂತದ ಸಂಬಂಧಿಕರಲ್ಲಿ ಅಂದರೆ ನಿಮ್ಮ ತಾಯಿ ಮತ್ತು ತಾಯಿಯ ಕಡೆಯಲ್ಲಿ ಯಾರಿಗಾದರೂ ಗರ್ಭಾವಸ್ಥೆಯಲ್ಲಿ ಮಧುಮೇಹ ಇದ್ದಲ್ಲಿ ನೀವೂ ಗರ್ಭಿಣಿಯಾದರೆ ನಿಮಗೂ ಈ ಮಧುಮೇಹ ಉಂಟಾಗುವ ಸಾಧ್ಯತೆ ಹೆಚ್ಚು.

ಹಿಂದೆ ಗರ್ಭಿಣಿಯಾಗಿದ್ದಾಗ ಮಧುಮೇಹ ಇದ್ದಲ್ಲಿ : ಹಿಂದಿನ ಗರ್ಭಧಾರಣೆಯಲ್ಲಿ ನೀವು ಮಧುಮೇಹವನ್ನು ಹೊಂದಿದ್ದರೆ ನಂತರದ ಗರ್ಭಾವಸ್ಥೆಯಲ್ಲಿ ಮತ್ತೆ ಮಧುಮೇಹ ಮರುಕಳಿಸುವ ಸಾಧ್ಯತೆ ಹೆಚ್ಚು.

ಗರ್ಭಾವಸ್ಥೆಯ ಮೊದಲೇ ಮಧುಮೇಹ: ಗರ್ಭಾವಸ್ಥೆಗಿಂತ ಮೊದಲೇ ನಿಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟವು ಸ್ವಲ್ಪ ಹೆಚ್ಚಾಗಿದ್ದರೆ ನೀವು ಕೂಡಾ ಈ ಮಧುಮೇಹದ ಅಪಾಯವನ್ನು ಎದುರಿಸಬಹುದು.

ಬೆಡ್‌ರೆಸ್ಟ್‌: ಕೆಲವೊಮ್ಮೆ ಐವಿಎಫ್‌ ಮುಖಾಂತರ ಗರ್ಭಿಣಿಯಾದವರಿಗೆ ಅಥವಾ ಗರ್ಭಧಾರಣೆಯಲ್ಲಿ ಸಮಸ್ಯೆ ಇರೋರಿಗೆ ಕೆಲವೊಮ್ಮೆ ಹೆಚ್ಚಿನ ಬೆಡ್‌ರೆಸ್ಟ್‌ ಮಾಡಲು ಹೇಳುತ್ತಾರೆ. ಈ ಕಾರಣದಿಂದ ದೈಹಿಕ ಚಟುವಟಿಕೆಯಿಲ್ಲದೆ ತೂಕ ಹೆಚ್ಚಾಗಿ ಮಧುಮೇಹಕ್ಕೆ ಕಾರಣವಾಗುತ್ತೆ.

ಇನ್ನಿತರ ಕಾರಣಗಳು: ಮಧುಮೇಹಕ್ಕೆ ಸಂಬಂಧಿಸಿದಂತೆ ಮೆಟಬಾಲಿಕ್‌ ಸಿಂಡ್ರೋಮ್‌, ಪಾಲಿಸಿಸ್ಟಿಕ್‌ ಓವರಿ ಸಿಂಡ್ರೋಮ್‌ ಅಂದರೆ ಪಿಸಿಒಎಸ್‌, ಅಧಿಕ ರಕ್ತದೊತ್ತಡ ಅಥವಾ ಹೃದಯ ರಕ್ತನಾಳಗಳ ಸಮಸ್ಯೆಯೂ ಮಧುಮೇಹದ ಅಪಾಯವನ್ನು ಹೆಚ್ಚಿಸಬಹುದು. ಅಲ್ಲದೇ ಗರ್ಭಧಾರಣೆಯಲ್ಲಿ ಒಂದಕ್ಕಿಂತ ಹೆಚ್ಚು ಮಗು ಅಂದರೆ ಅವಳಿ, ತ್ರಿವಳಿ ಹೀಗಿದ್ದರೂ ಮಧುಮೇಹ ಉಂಟಾಗುವ ಸಾಧ್ಯತೆಗಳಿವೆ.

ಗರ್ಭಾವಸ್ಥೆಯ ಮಧುಮೇಹದ ಲಕ್ಷಣಗಳು

ಗರ್ಭಾವಸ್ಥೆಯ ಮಧುಮೇಹದ ಲಕ್ಷಣಗಳು

ಗರ್ಭಾವಸ್ಥೆಯಲ್ಲಿ ಮಧುಮೇಹದ ಲಕ್ಷಣಗಳು ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. ಪರೀಕ್ಷೆಯನ್ನು ಮಾಡುವುದರ ಮೂಲಕ ಕೆಲವೊಮ್ಮೆ ಮಧುಮೇಹ ಇದೆಯಾ, ಇಲ್ಲವೋ ಎನ್ನುವುದನ್ನು ವೈದ್ಯರು ಪರೀಕ್ಷಿಸುತ್ತಾರೆ, ಆದರೂ ಕೆಲವೊಂದು ಲಕ್ಷಣಗಳು ಕಂಡುಬರಬಹುದು,

ಅತಿಯಾದ ಬಾಯಾರಿಕೆ

ಗರ್ಭಧಾರಣೆಯಲ್ಲಿ ಆಗಾಗ ಸ್ವಲ್ಪ ಮೂತ್ರವಿಸರ್ಜನೆಯಾಗುವುದು ಸಹಜ ಆದರೆ ದೊಡ್ಡ ಪ್ರಮಾಣದಲ್ಲಿಆಗಾಗ್ಗೆ ಮೂತ್ರವಿಸರ್ಜನೆ ಮಧುಮೇಹದ ಲಕ್ಷಣವಾಗಿರಬಹುದು.

ಆಯಾಸ: ಆಯಾಸ ಸಾಮಾನ್ಯವಾಗಿ ಗರ್ಭಿಣಿಯರಲ್ಲಿ ಇದ್ದಿದ್ದೇ, ಇದನ್ನು ಪರಿಗಣಿಸುವುದರಿಂದ ಮಧುಮೇಹವಿದೆಯೆಂದೂ ಹೇಳಲಾಗದು.

ಮೂತ್ರದಲ್ಲಿ ಸಕ್ಕರೆಯ ಅಂಶ: ಸಾಮಾನ್ಯವಾಗಿ ವೈದ್ಯರು ಮೂತ್ರಪರೀಕ್ಷೆ ಮಾಡಿದಾಗ ಅದರಲ್ಲಿ ಹೆಚ್ಚು ಸಕ್ಕರೆಯ ಅಂಶ ಕಂಡುಬಂದರೆ ಮಧುಮೇಹವಿದೆಯೆನ್ನಬಹುದು.

ಮಧುಮೇಹ ಪತ್ತೆಹಚ್ಚುವುದು ಹೇಗೆ

ಮಧುಮೇಹ ಪತ್ತೆಹಚ್ಚುವುದು ಹೇಗೆ

ನೀವು ಗರ್ಭಿಣಿಯಾದ ಮೇಲೆ ವೈದ್ಯರನ್ನು ಕಾಣುವ ಪ್ರತಿ ಸಂದರ್ಭದಲ್ಲಿಯೂ ಅವರು ಮೂತ್ರ ಪರೀಕ್ಷೆಯನ್ನು ಮಾಡಲು ಹೇಳಿಯೇ ಹೇಳುತ್ತಾರೆ. ಈ ಮೂಲಕ ಮೂತ್ರದಲ್ಲಿ ಸಕ್ಕರೆಯ ಅಂಶವನ್ನು ಪತ್ತೆಹಚ್ಚುತ್ತಾರೆ, ಇದರಿಂದಾಗಿ ನಿಮಗೆ ಮಧುಮೇಹ ಇದೆಯೋ, ಇಲ್ಲವೋ ಎನ್ನುವುದನ್ನು ಹೇಳುತ್ತಾರೆ. ಅಲ್ಲದೇ ಗರ್ಭಧಾರಣೆಯ 24 ಮತ್ತು 28 ವಾರದ ಮಧ್ಯೆ ವೈದ್ಉರು ಗ್ಲುಗೋಸ್‌ ಟೆಸ್ಟ್ ಕೂಡಾ ಮಾಡುತ್ತಾರೆ ಒಮ್ಮೆ ಖಾಲಿ ಹೊಟ್ಟೆಗೆ ಗ್ಲುಗೋಸ್‌ ಟೆಸ್ಟ್ ಮಾಡಿದರೆ, ಇನ್ನೊಮ್ಮೆ ಸಕ್ಕರೆಯ ದ್ರವವನ್ನು ಕುಡಿದ ಒಂದು ಗಂಟೆಯ ನಂತರ ಟೆಸ್ಟ್ ಮಾಡುತ್ತಾರೆ. ಈ ರಕ್ತ ಪರೀಕ್ಷೆಯ ಮೂಲಕ ಮಧುಮೇಹವಿದೆಯೋ ಎನ್ನುವುದನ್ನು ಪತ್ತೆಹಚ್ಚುತ್ತಾರೆ.

ಗರ್ಭಾವಸ್ಥೆಯ ಮಧುಮೇಹ ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ..?

ಗರ್ಭಾವಸ್ಥೆಯ ಮಧುಮೇಹ ಮಗುವಿನ ಮೇಲೆ ಪರಿಣಾಮ ಬೀರುತ್ತದೆಯೇ..?

ಗರ್ಭಾವಸ್ಥೆಯ ಮಧುಮೇಹ ಗಂಭೀರವಾದ ಸಮಸ್ಯೆ ಎಂದು ಭಯಪಡಬೇಡಿ, ನಿಮಗೆ ಅಥವಾ ನಿಮ್ಮ ಮಗುವಿಗಾಗಲಿ ಈ ಮಧುಮೇಹ ಹಾನಿ ಮಾಡದು. ಆದರೆ ಮಧುಮೇಹಕ್ಕೆ ಚಿಕಿತ್ಸೆ ನೀಡದಿದ್ದಲ್ಲಿ ನೀವು ಚಿಂತೆ ಮಾಡಲೇಬೇಕು. ಯಾಕೆಂದರೆ ಅತಿಯಾದ ಸಕ್ಕರೆ ಪ್ರಮಾಣ ತಾಯಿಯ ರಕ್ತ ಮತ್ತು ಮಗುವಿನ ರಕ್ತದಲ್ಲಿ ಸೇರಿಕೊಂಡರೆ ಸಮಸ್ಯೆಗಳು ಶುರುವಾಗಬಹುದು.

ನಿಯಂತ್ರಣವಿಲ್ಲದ ಮಧುಮೇಹವು ಗರ್ಭದಲ್ಲಿನ ಶಿಶುವಿನ ತೂಕದಲ್ಲಿನ ಹೆಚ್ಚಳಕ್ಕೆ ಕಾರಣವಾಗುತ್ತದೆ ಇದನ್ನು ಮ್ಯಾಕ್ರೋಸೋಮಿಯಾ ಎಂದು ಕರೆಯುತ್ತಾರೆ. ಇದು ಹೆರಿಗೆಯನ್ನು ಕಷ್ಟವಾಗಿಸುತ್ತದೆ. ಹೀಗಾದಾಗ ವೈದ್ಯರು ಸಿ ಸೆಕ್ಷನ್‌ ಮಾಡುವ ಸಾಧ್ಯತೆ ಹೆಚ್ಚು. ಕೆಲವರು ಪ್ರಿಕ್ಲಾಂಪ್ಸಿಯಾ ಅಥವಾ ಗರ್ಭದಲ್ಲಿಯೇ ಮಗುವಿನ ಮರಣದ ಅಪಾಯ ಹೆಚ್ಚಿಸುತ್ತದೆ.

ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಮಧುಮೇಹವಿದ್ದರೆ ಸಮಸ್ಯೆಯೇ ಹೆಚ್ಚು. ಯಾಕೆಂದರೆ ಈ ಸ್ಥಿತಿಯಿದ್ದಾಗ ವೈದ್ಯರು ಅವಧಿಪೂರ್ವ ಹೆರಿಗೆಯನ್ನು ಮಾಡಿಸಬಹುದು. ಅಲ್ಲದೇ ನೀವು ಮಧುಮೇಹವನ್ನು ನಿಯಂತ್ರಿಸದೇ ಇದ್ದಲ್ಲಿ ಶಿಶು ಜನಿಸಿದ ನಂತರ ಆ ಶಿಶುವಿಗೆ ಕಾಮಾಲೆ, ಉಸಿರಾಟದ ತೊಂದರೆ, ರಕ್ತದಲ್ಲಿ ಸಕ್ಕರೆಯ ಮಟ್ಟ ಕಡಿಮೆ ಮುಂತಾದ ಗಂಭೀರ ಸಮಸ್ಯೆಗಳಾಗಬಹುದು. ಮಗು ಬೆಳವಣಿಗೆಯಾದಂತೆ ಬೊಜ್ಜು ಮತ್ತು ಟೈಪ್‌ -2 ಡಯಾಬಿಟೀಸ್‌ ಉಂಟಾಗುವ ಸಾಧ್ಯತೆಯೂ ಹೆಚ್ಚಿದೆ. ಆದರೆ ವೈದರು ಹೇಳಿದಂತೆ ನೀವು ಮಧುಮೇಹವನ್ನು ನಿಯಂತ್ರಿಸುವ ಕ್ರಮ ಕೈಗೊಂಡಲ್ಲಿ ಈ ಅಪಾಯಗಳ್ಯಾವುದೂ ಕಂಡುಬರದು.

ಗರ್ಭಾವಸ್ಥೆಯ ಮಧುಮೇಹ ತಡೆಗಟ್ಟುವ ವಿಧಾನ

ಗರ್ಭಧರಿಸುವ ಮೊದಲು ಹಾಗೂ ಗರ್ಭಧರಿಸಿದ ನಂತರವೂ ಈ ದಿನಚರಿಯನ್ನು ಅಳವಡಿಸಿಕೊಂಡರೆ ಮಧುಮೇಹವನ್ನು ತಡೆಗಟ್ಟಬಹುದು.

ಕ್ರಿಯಾಶೀಲರಾಗಿರಿ

ಕೆಲವರು ಗರ್ಭಧರಿಸಿದ ನಂತರ ಏನೂ ಕೆಲಸ ಮಾಡಲು ಹೋಗುವುದಿಲ್ಲ, ದಿನನಿತ್ಯದ ಕೆಲಸಕ್ಕೂ ವಿರಾಮ ಹಾಕುತ್ತಾರೆ, ಬರೀ ತಿಂದುಂಡು ಮಲಗುವುದು, ಸುಮ್ಮನೆ ಕೂರುವುದಾಗಿರುತ್ತೆ. ನೀವು ಆರೋಗ್ಯವಾಗಿರಬೇಕು, ಹೊಟ್ಟೆಯಲ್ಲಿರುವ ಮಗುವೂ ಆರೋಗ್ಯಕರವಾಗಿರಬೇಕು ಎನ್ನುವುದು ಮನಸ್ಸಿನಲ್ಲಿರಲಿ. ಅದಕ್ಕಾಗಿ ಫಿಟ್‌ನೆಸ್‌ ಡಯಟ್‌ ವೈದ್ಯರ ಮಾರ್ಗದರ್ಶನದೊಂದಿಗೆ ಮಾಡಿ. ಮಧ್ಯಾಹ್ನ ಮತ್ತು ರಾತ್ರಿ ಊಟದ ನಂತರ ಹದಿನೈದು ನಿಮಿಷಗಳ ಸಣ್ಣ ವಾಕ್‌ ಮಾಡಿ. ಇದರಿಂದ ನಿಮ್ಮ ದೇಹವು ಗ್ಲುಗೋಸ್‌ ಕರಗುವಂತೆ ಮಾಡುತ್ತದೆ. ಇದು ರಕ್ತದಲ್ಲಿ ಸಕ್ಕರೆಯ ಮಟ್ಟ ನಿಯಂತ್ರಣದಲ್ಲಿಡಲು ಉತ್ತಮ.

ಆರೋಗ್ಯಕರ ಆಹಾರ

ಗರ್ಭಿಣಿಯಾದ ಮೇಲೆ ಸಿಹಿ ತಿನ್ನಬೇಕು, ಜಂಕ್‌ ತಿನ್ನಬೇಕು ಎನ್ನುವ ಅತಿಯಾದ ಬಯಕೆಗಳಿರುತ್ತದೆ. ಇದನ್ನು ಬದಿಗಿಟ್ಟು ಆರೋಗ್ಯಕರ ಆಹಾರಕ್ಕೆ ಆದ್ಯತೆ ನೀಡಿ. ಹಣ್ಣುಗಳು, ತರಕಾರಿಗಳನ್ನು ಹೆಚ್ಚು ಸೇವಿಸಿ, ಇದರೊಂದಿಗೆ ಧಾನ್ಯಗಳು, ಕಾಳುಗಳು, ಬೀಜಗಳು, ಪನೀರ್‌, ಮೀನು, ಕೆಂಪು ಮಾಂಸ, ಕೋಳಿ ಮತ್ತು ಕಡಿಮೆ ಕೊಬ್ಬಿರುವ ಹಾಲಿನ ಉತ್ಪನ್ನಗಳನ್ನು ಸೇವಿಸಿ.

ಸ್ಥಿರ ತೂಕ

ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು ಸಾಮಾನ್ಯ, ಹದಿನಾಲ್ಕರಿಂದ ಹದಿನಾರರಷ್ಟು ತೂಕ ಹೆಚ್ಚಾಗುವುದು ತಲೆಕೆಡಿಸಿಕೊಳ್ಳುವ ವಿಚಾರವಲ್ಲ, ಆದರೆ ಇದಕ್ಕಿಂತ ಹೆಚ್ಚಾದಲ್ಲಿ ಅಪಾಯಗಳು ಹೆಚ್ಚಾಗಬಹುದು. ಹಾಗಾಗಿ ತೂಕವನ್ನು ಸ್ಥಿರವಾಗಿ ಕಾಯ್ದುಕೊಳ್ಳಲು ಟ್ರೈ ಮಾಡಿ. ಈ ಮೇಲೆ ತಿಳಿಸಿದ ಆರೋಗ್ಯಕರ ಅಭ್ಯಾಸಗಳನ್ನು ಅಳವಡಿಸಿಕೊಂಡರೂ ಅನುವಂಶಿಕತೆಯಿಂದ ಬರುವ ಮಧುಮೇಹವನ್ನೂ ಕೂಡಾ ತಡೆಗಟ್ಟಬಹುದು.

ಗರ್ಭಾವಸ್ಥೆಯಲ್ಲಿ ಮಧುಮೇಹ ಇದ್ದರೂ ಕೂಡಾ, ಈ ಮೇಲೆ ವಿವರಿಸಿದ ಆರೋಗ್ಯಕರ ಆಹಾರ ಹಾಗೂ ಜೀವನಶೈಲಿಯನ್ನು ಅಳವಡಿಸಿಕೊಂಡರೆ ಮಧುಮೇಹವನ್ನು ನಿಯಂತ್ರಿಸಬಹುದು. ಜೊತೆಗೆ ನಿಮ್ಮ ಮಗುವಿನ ಆರೋಗ್ಯಕ್ಕೂ ತೊಂದರೆಯಾಗದಂತೆ ನೋಡಿಕೊಳ್ಳಬಹುದು. ಹಾಗಾಗಿ ನಿಮ್ಮಲ್ಲಿ ಗ್ಲುಗೋಸ್‌ ಮಟ್ಟವನ್ನು ನಿಯಂತ್ರಿಸಲು ಆದಷ್ಟು ಸಾಧ್ಯವಾಗುವಂತಹ ದೈನಂದಿನ ಕೆಲಸ ಮಾಡಿ, ನಡಿಗೆಯನ್ನು ಮಾಡಿ. ಇದರೊಂದಿಗೆ ವೈದ್ಯರ ಸಲಹೆ ಪಡೆದು ಯೋಗ, ವ್ಯಾಯಾಮ, ಧ್ಯಾನವನ್ನು ಮಾಡಿ. ಜೊತೆಗೆ ಸಣ್ಣ ನಡಿಗೆಯನ್ನು ಮರೆಯಬೇಡಿ. ಸುಸೂತ್ರವಾದ ಹೆರಿಗೆಗೆ ಇದೂ ಸಹಾಯಕ.

English summary

How Does Gestational Diabetes Affect Your Pregnancy and Baby in kannada

Gestational Diabetes: How it affects to and your baby, how to prevent it, read on...
Story first published: Friday, July 22, 2022, 18:01 [IST]
X
Desktop Bottom Promotion