For Quick Alerts
ALLOW NOTIFICATIONS  
For Daily Alerts

ಲ್ಯಾಪ್ರೋಸ್ಕೋಪಿ ಬಳಿಕ ಗರ್ಭಧಾರಣೆ ಸಾಧ್ಯತೆ: ನೀವು ತಿಳಿಯಲೇ ಬೇಕಾದ ಸಂಗತಿಗಳು

|

ಲ್ಯಾಪ್ರೋಸ್ಕೋಪಿ ಅಥವಾ ಕೀ ಹೋಲ್‌ ಸರ್ಜರಿ ಎಂಬುವುದು ಒಂದು ಚಿಕ್ಕ ಶಸ್ತ್ರಚಿಕಿತ್ಸೆಯಾಗಿದ್ದು ಬಂಜೆತನಕ್ಕೆ ಸಂಬಂಧಿಸಿದ ಸಮಸ್ಯೆ ಪತ್ತೆ ಮಾಡಿ ಅದನ್ನು ನಿವಾರಿಸಲು ಈ ಶಸ್ತಚಿಕಿತ್ಸೆ ಮಾಡಲಾಗುವುದು. ಅಪೆಂಡೆಕ್ಸ್, ಗಾಲ್‌ ಬ್ಲೇಡರ್ ಇಂಥ ಶಸ್ತ್ರ ಚಿಕಿತ್ಸೆಯಂತೆ ಇದೊಂದು ಸಾಮಾನ್ಯ ಚಿಕಿತ್ಸೆಯಾಗಿದ್ದು ಇದನ್ನು ಸಂತಾನೋತ್ಪತ್ತಿ ಚಿಕಿತ್ಸೆಯಲ್ಲಿ ಮಾಡಲಾಗುವುದು.

ಲ್ಯಾಪ್ರೋಸ್ಕೋಪಿ ಬಗ್ಗೆ ಕೆಲವರಿಗೆ ಆತಂಕವಿರುತ್ತದೆ. ಈ ಚಿಕಿತ್ಸೆ ಮಾಡಿದ ಬಳಿಕ ಗರ್ಭಧಾರಣೆಯ ಸಾಧ್ಯತೆ ಕಡಿಮೆಯಾಗಬಹುದೇ ಎಂಬುವುದೇ ಅವರ ಆತಂಕವಾಗಿರುತ್ತದೆ, ಈ ಕುರಿತು ವೈದ್ಯರ ಬಳಿ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆ ಮಾಡಿಸಿದ ಬಳಿಕ ಅಡ್ಡ ಪರಿಣಾಮ ಉಂಟಾಗುವುದು ತುಂಬಾ ಕಡಿಮೆ, ಇದು ಗರ್ಭಧಾರಣೆಯ ಸಾಧ್ಯತೆ ಹೆಚ್ಚಿಸುವುದು.

ಈ ಲೇಖನದಲ್ಲಿ ಲ್ಯಾಪ್ರೋಸ್ಕೋಪಿ ಶಸ್ತ್ರ ಚಿಕಿತ್ಸೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗಿದೆ ನೋಡಿ:

ಈ ಲೇಖನದಲ್ಲಿ ಲ್ಯಾಪ್ರೋಸ್ಕೋಪಿ ಶಸ್ತ್ರ ಚಿಕಿತ್ಸೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗಿದೆ ನೋಡಿ:

ಇದೊಂದು ಔಟ್‌ ಪೇಷಂಟ್‌ ಸರ್ಜರಿಯಾಗಿದೆ. ಈ ಶಸ್ತ್ರ ಚಿಕಿತ್ಸೆ ಆದ ದಿನವೇ ರೋಗಿ ಮನೆಗೆ ಹೋಗಬಹುದು. ಸಾಮಾನ್ಯ ಅರವಳಿಕೆ(ಅನಸ್ತೇಷಿಯಾ) ನೀಡಿ ಈ ಶಸ್ತ್ರ ಚಿಕಿತ್ಸೆ ಮಾಡಲಾಗುವುದು. ಈ ಚಿಕಿತ್ಸೆಯಾದ ಕೆಲವು ಗಂಟೆಗಳ ಬಳಿಕ ರೋಗಿಯನ್ನು ಮನೆಗೆ ಕಳುಹಿಸಿಕೊಡುತ್ತಾರೆ, ಕೆಲವೊಂದು ಕೇಸ್‌ಗಳಲ್ಲಿ ಮಾತ್ರ ಒಂದು ದಿನ ಇದ್ದು ಹೋಗಲು ಹೇಳುತ್ತಾರೆ. ಈ ಶಸ್ತ್ರ ಚಿಕಿತ್ಸೆಯಲ್ಲಿ ಲ್ಯಾಪ್ರೋಸ್ಕೋಪ್‌ ಅನ್ನು ಹೊಟ್ಟೆಯ ಒಳಗಡೆ ಹಾಕಿ ಸರ್ಜನ್‌ ಸಂತಾನೋತ್ಪತ್ತಿ ಅಂಗಗಳಲ್ಲಿರುವ ತೊಂದರೆಯನ್ನು ಕಂಡು ಹಿಡಿಯಲಾಗುವುದು. ಇದೊಂದು ತೆಳುವಾದ ಫೈಬರ್ ಆಪ್ಸಟಿಕ್ ಟ್ಯೂಬ್‌ ಆಗಿದ್ದು, ಇದರಲ್ಲಿ ಕ್ಯಾಮರಾ ಇರುತ್ತದೆ, ಇದರ ಮೂಲಕ ಸರ್ಜನ್‌ ಹೊಟ್ಟೆಯ ಒಳಗಡೆ ಪರೀಕ್ಷಿಸಿ, ಸಂತಾನೋತ್ಪತ್ತಿ ಅಂಗಗಳಲ್ಲಿ ಏನಾದರೂ ತೊಂದರೆಯಾಗಿದ್ದರೆ ಅದನ್ನು ಸರಿ ಪಡಿಸುತ್ತಾರೆ.

ಲ್ಯಾಪ್ರೋಸ್ಕೋಪಿ ಶಸ್ತ್ರ ಚಿಕಿತ್ಸೆ ಬಳಿಕ ಇತರ ಶಸ್ತ್ರ ಚಿಕಿತ್ಸೆಯಂತೆ ತುಂಬಾ ನೋವುಂಟಾಗುವುದಿಲ್ಲ. ಅಲ್ಲದೆ ಬೇಗನೆ ಚೇತರಿಸಿಕೊಳ್ಳಬಹುದು.

ಸಂತಾನೋತ್ಪತ್ತಿಗೆ ಈ ಶಸ್ತ್ರ ಚಿಕಿತ್ಸೆ ಹೇಗೆ ಸಹಕಾರಿ?

ಸಂತಾನೋತ್ಪತ್ತಿಗೆ ಈ ಶಸ್ತ್ರ ಚಿಕಿತ್ಸೆ ಹೇಗೆ ಸಹಕಾರಿ?

ಅನೇಕ ಜನರಿಗೆ 'ಪೆಲ್ವಿಕ್ ಫ್ಯಾಕ್ಟರ್ ಇನ್‌ಫರ್ಟಿಲಿಟಿ' ಕಾರಣದಿಂದ ಗರ್ಭಧರಿಸಲು ತೊಂದರೆಯಾಗುತ್ತದೆ. ಅನೇಕ ಕಾರಣಗಳಿಂದ ಪೆಲ್ವಿಕ್ ಫ್ಯಾಕ್ಟರ್ ಇನ್‌ಫರ್ಟಿಲಿಟಿ ಉಂಟಾಗುತ್ತದೆ. ನರಗಳಿಗೆ ಪೆಟ್ಟಾದಾಗ ಅಥವಾ ಶಸ್ತ್ರ ಚಿಕಿತ್ಸೆ, ಓವರಿಯನ್ ಸಿಸ್ಟ್, ಪೋಲಿಪ್ಸ್, ಫೈಬ್ರೋಯ್ಡ್‌, ಎಂಡೋಮೆಟ್ರೋಸಿಸ್ ಈ ಕಾರಣಗಳಿಂದ ಗರ್ಭಧಾರಣೆಗೆ ತೊಂದರೆಯಾಗಬಹುದು. ಲ್ಯಾಪ್ರೋಸ್ಕೋಪಿ ಮಾಡುವುದರಿಂದ ಏನು ತೊಂದರೆ ಅಂತ ಪತ್ತೆ ಹಚ್ಚಿ ಆ ಸಮಸ್ಯೆ ನಿವಾರಿಸಲು ತಜ್ಞರಿಗೆ ಸಾಧ್ಯವಾಗುವುದು.

ಲ್ಯಾಪ್ರೋಸ್ಕೋಪಿ ಮಾಡಿಸುವುದರಿಂದ ಗರ್ಭಧಾರಣೆಗೆ ಏನಾದರೂ ತೊಂದರೆಯಾಗವುದು?

ಇಲ್ಲ, ಲ್ಯಾಪ್ರೋಸ್ಕೋಪಿ ಮಾಡಿಸುವುದರಿಂದ ಗರ್ಭಧಾರಣೆಯ ಸಾಧ್ಯತೆ ಹೆಚ್ಚುವುದು. ಇದರಲ್ಲಿ ಸಮಸ್ಯೆ ಏನೆಂದು ಪತ್ತೆ ಹಚ್ಚಿ ನಿವಾರಿಸುವುದರಿಂದ ಗರ್ಭ ನಿಲ್ಲಲು ಸಾಧ್ಯವಾಗುವುದು.

ಗುಣಮುಖವಾಗಲು ಬೇಕಾಗುವ ಸಮಯ

ಗುಣಮುಖವಾಗಲು ಬೇಕಾಗುವ ಸಮಯ

ಲ್ಯಾಪ್ರೋಸ್ಕೋಪಿ ಮಾಡಿಸಿದರೆ ಸರ್ಜರಿಯಿಂದ ಗುಣಮುಖರಾಗಲು ಸ್ವಲ್ಪ ವಾರಗಳು ಬೇಕಾಗುವುದು. ಚಿಕ್ಕದಾಗಿ ನೋವು ಹಾಹೂ ಹೊಟ್ಟೆ ಉಬ್ಬುವ ಸಮಸ್ಯೆ ಕೆಲವು ದಿನಗಳವರೆಗೆ ಇರುತ್ತವೆ, ಆದ್ದರಿಂದ ಸ್ವಲ್ಪ ದಿನಗಳವರೆಗೆ ದೇಹಕ್ಕೆ ವಿಶ್ರಾಂತಿ ನೀಡಬೇಕಾಗುತ್ತದೆ. ಸಂಪೂರ್ಣ ಗುಣಮುಖರಾಗುವವರೆಗೆ ಲೈಂಗಿಕ ಕ್ರಿಯೆ ನಡೆಸದಂತೆ ವೈದ್ಯರು ಸೂಚಿಸುತ್ತಾರೆ. ಕೆಲವರು ಒಂದೆರಡು ವಾರದಲ್ಲಿ ಚೇತರಿಸಿಕೊಂಡರೆ, ಕೆಲವರಿಗೆ ಕೆಲವು ವಾರಗಳು ಬೇಕಾಗಬಹುದು. ನಿಮ್ಮ ದೇಹ ಏನು ಹೇಳುತ್ತದೆ ಅದರತ್ತ ಗಮನ ನೀಡಿ ಅಂದ್ರೆ ದೇಹಕ್ಕೆ ತುಂಬಾ ದಣಿವು ಉಂಟು ಮಾಡಬೇಡಿ. ಚೇತರಿಸಿದ ಬಳಿಕ ಲೈಂಗಿಕ ಕ್ರಿಯೆಯ ವೇಳೆ ನೋವು ಕಾಣಿಸಿದರೆ ವೈದ್ಯರಿಗೆ ತಿಳಿಸಿ.

ಲ್ಯಾಪ್ರೋಸ್ಕೋಪಿ ಮಾಡಿಸಿಕೊಂಡ ಬಳಿಕ ಒಳ್ಳೆಯ ವಿಶ್ರಾಂತಿ ತೆಗೆದುಕೊಳ್ಳಬೇಕು ಹಾಗೂ ಪೋಷಕಾಂಶಗಳಿರುವ ಆಹಾರ ಸೇವಿಸಬೇಕು.

ಕಲೆ

ಕಲೆ

ಲ್ಯಾಪ್ರೋಸ್ಕೋಪಿ ಶಸ್ತ್ರ ಚಿಕಿತ್ಸೆ ಮಾಡಿದಾಗ ದೊಡ್ಡದಾಗಿ ಕಲೆ ಬೀಳುವುದಿಲ್ಲ. ಆದರೆ ಈ ಚಿಕಿತ್ಸೆಯನ್ನು ನುರಿತ ತಜ್ಞರ ಬಳಿ ಮಾಡಿಸಬೇಕು, ಏಕೆಂದರೆ ಇತರ ಚಿಕಿತ್ಸೆಯಲ್ಲಿ ಸರ್ಜನ್‌ ತಮ್ಮ ಕೈಗಳನ್ನು ಹಾಕಿ ಶಸ್ತ್ರಕ್ರಿಯೆ ನಡೆಸಿದರೆ, ಇದರಲ್ಲಿ ಲ್ಯಾಪ್ರೋಸ್ಕೋಪಿ ಒಳಗಡೆ ಹಾಕಿ ಮಾಡುವುದರಿಂದ ಕೆಲವೊಮ್ಮೆ ಎಷ್ಟು ಫೋರ್ಸ್‌ ಬೇಕಾಗುತ್ತೆ ಅಂತ ಗೊತ್ತಾಗಲ್ಲ, ಆಗ ಫಾಲೋಪಿಯನ್ ಟ್ಯೂಬ್‌ಗೆ ಪೆಟ್ಟಾದರೆ ಗರ್ಭಧಾರಣೆಯಾಗುವುದಿಲ್ಲ, ಆದ್ದರಿಂದ ಈ ಶಸ್ತ್ರ ಚಿಕಿತ್ಸೆಯಲ್ಲಿ ವೈದ್ಯರು ತುಂಬಾ ಎಚ್ಚರಿಕೆವಹಿಸಬೇಕು. ಫಾಲೋಪಿಯನ್ ಟ್ಯೂಬ್ ಓಪನ್ ಇದೆಯೇ ಅಥವಾ ಬ್ಲಾಕ್ ಆಗಿದೆಯೇ ಎಂದು ಪರೀಕ್ಷಿಸಲಾಗುವುದು.

* IVF ಅತ್ಯುತ್ತಮವಾದ ವಿಧಾನವಾಗಿದೆ, ಉಳಿದ ವಿಧಾನಗಳಿಗಿಂತ ಇದರಲ್ಲಿ ಗರ್ಭಧಾರಣೆಯ ಸಾಧ್ಯತೆ ಹೆಚ್ಚು.

ಇತರ ಚಿಕಿತ್ಸಾ ವಿಧಾನಗಳೇನು?

ಇತರ ಚಿಕಿತ್ಸಾ ವಿಧಾನಗಳೇನು?

ಅಲ್ಟ್ರಾಸೌಂಡ್‌ ಅಥವಾ HSG(hysterosalpingogram) ಮೂಲಕ ಸಮಸ್ಯೆಯನ್ನು ಕಂಡು ಹಿಡಿಯಲಾಗುವುದು. ಇದೊಂದು ಸ್ಪೆಷಲ್ ಎಕ್ಸ್‌ ರೇ ಆಗಿದೆ. ಇದರಲ್ಲಿ ಕಾಂಟ್ರಾಸ್ಟ್‌ ಮೆಟೀರಿಯಲ್ (dye) ಕ್ಯಾತಿಟರ್ ಮೂಲಕ ಗರ್ಭಕಂಠದಲ್ಲಿ ಗರ್ಭಕೋಶಕ್ಕೆ ಇಟ್ಟು ಎಕ್ಸ್ ರೇ ತೆಗೆಯಲಾಗುವುದು. ಈ ಮೂಲಕ

FAQ's
  • ಲ್ಯಾಪ್ರೋಸ್ಕೋಪಿ ಚಿಕಿತ್ಸೆಯಾದ ಬಳಿಕ ಗರ್ಭಧಾರಣೆಗೆ ಎಷ್ಟು ಸಮಯಬೇಕಾಗುವುದು?

    ಅಧ್ಯಯನಗಳ ಪ್ರಕಾರ ಹೆಚ್ಚಿನವರು ಲ್ಯಾಪ್ರೋಸ್ಕೋಪಿ ಚಿಕಿತ್ಸೆಯಾಗಿ 6 ತಿಂಗಳ ಬಳಿಕ ಗರ್ಭಧರಿಸಿದ್ದಾರೆ. ಇನ್ನು ಗರ್ಭಧಾರಣೆಯಲ್ಲಿ ವ್ಯಕ್ತಿಯ ವಯಸ್ಸು, ಆರೋಗ್ಯ ಪ್ರಮುಖವಾಗಿರುತ್ತದೆ.

  • ಲ್ಯಾಪ್ರೋಸ್ಕೋಪಿ ಬಳಿಕ ನೈಸರ್ಗಿಕವಾಗಿ ಗರ್ಭಧಾರಣೆಯಾಗುವುದೇ?

    ಅಧ್ಯಯನಗಳ ಪ್ರಕಾರ ಲ್ಯಾಪ್ರೋಸ್ಕೋಪಿ ಶಸ್ತ್ರ ಚಿಕಿತ್ಸೆ ಆಗಿ ಮೊದಲ ಒಂದು ವರ್ಷದ ಒಳಗೆ ಶೇ. 41.9ರಷ್ಟು ಜನರು ನೈಸರ್ಗಿಕವಾಗಿ ಗರ್ಭಧರಿಸಿದ್ದಾರೆ.

  • ಲ್ಯಾಪ್ರೋಸ್ಕೋಪಿ ಶಸ್ತ್ರ ಚಿಕಿತ್ಸೆಗೆ ತಗುಲುವ ವೆಚ್ಚವೆಷ್ಟು?

    ಬೆಂಗಳೂರಿನಲ್ಲಿ ಸಾಮಾನ್ಯವಾಗಿ 30 ಸಾವಿರಕ್ಕಿಂತ ಅಧಿಕ ಖರ್ಚಾಗಬಹುದು. ಈ ಚಿಕಿತ್ಸೆಗೆ 24, 00ರಿಂದ ಹಿಡಿದು 70 ಸಾವಿರದಷ್ಟು ತಗುಲಬಹುದು. ದೇಶದಲ್ಲಿ ಸಾಮಾನ್ಯವಾಗಿ ಎಲ್ಲಾ ಕಡೆ ಇಷ್ಟು ಖರ್ಚಾಗಬಹುದು. ಇನ್ನು ಹೈಟೆಕ್ ಆಸ್ಪತ್ರೆಗಳಿಗೆ ಹೋದರೆ ಹೆಚ್ಚು ಹಣ ಬೇಕಾಗಬಹುದು.

English summary

Getting Pregnant after Laparoscopy: Everything You Need to Know in Kannada

Getting Pregnant after Laparoscopy: Everything You Need to Know in Kannada, read on...
Story first published: Thursday, August 12, 2021, 10:00 [IST]
X
Desktop Bottom Promotion