For Quick Alerts
ALLOW NOTIFICATIONS  
For Daily Alerts

ಬಾಣಂತಿಯರು ಅಜ್ಜಿ ಮಾಡುತ್ತಿದ್ದ ಈ ಸೂಪ್‌ ಕುಡಿದರೆ ಎದೆ ಹಾಲು ಹೆಚ್ಚುವುದು

|

ಹೆರಿಗೆಯಾದ ಮೇಲೆ ಎದೆಹಾಲು ಉತ್ಪತ್ತಿ ಹೆಚ್ಚಾಗೋದಿಕ್ಕೆ ಎಲ್ಲರೂ ಕೆಲವೊಂದು ಆಹಾರಗಳನ್ನು ಸಜೆಸ್ಟ್‌ ಮಾಡ್ತಾರೆ. ಅದರಲ್ಲೂ ಕೆಲವರು ಅದು ತಿಂದರೆ ಒಳ್ಳೆಯದು, ಇದು ತಿಂದರೆ ಒಳ್ಳೆಯದು ಎನ್ನುವ ಭರಪೂರ ಸಲಹೆ ನೀಡುತ್ತಾರೆ. ಎದೆಹಾಲು ಹೆಚ್ಚಾಗಲು ಬೆಳ್ಳುಳ್ಳಿ ಹೆಚ್ಚು ತಿನ್ನಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಬೆಳ್ಳುಳ್ಳಿಯನ್ನು ಹಾಗೇ ಸೇವನೆ ಮಾಡೊದು ಕಷ್ಟ. ಕೆಲವೊಂದು ಆಹಾರಗಳಲ್ಲಿ ಬೆಳ್ಳುಳ್ಳಿಯನ್ನು ಸೇರಿಸುವ ಮೂಲಕ ಸೇವಿಸಬಹುದು. ಎದೆಹಾಲು ಹೆಚ್ಚಿಸಲು ಸಹಾಯಕವಾಗುವಂತಹ ಬೆಳ್ಳುಳ್ಳಿ- ರಸಂನ ರೆಸಿಪಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಓದಿ ನೀವೂ ಟ್ರೈ ಮಾಡಿ ನೋಡಿ.

Garlic, Ginger and Tomato soup may boost breast milk supply Here is How to Prepare in Kannada

ಬೆಳ್ಳುಳ್ಳಿಯು ಗ್ಯಾಲಕ್ಟೋಗೇಜ್‌ ಆಹಾರವಾಗಿದ್ದು, ವರ್ಷಗಳಿಂದಲೂ ಇದನ್ನು ಎದೆಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಎದೆ ಹಾಲಿನ ಪೂರೈಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅಧ್ಯಯನದ ಪ್ರಕಾರ ಬೆಳ್ಳುಳ್ಳಿಯ ವಾಸನೆಯು ಎದೆಹಾಲಿಗೆ ಹರಡುತ್ತದೆ ಇದು ಶಿಶು ಹಾಲು ಹೀರುವ ಸಮಯವನ್ನು ಹೆಚ್ಚಿಸುತ್ತದೆ. ಇದು ದೀರ್ಘಾವಧಿಯವರೆಗೂ ಶಿಶುವಿಗೆ ಬೇಕಾದಷ್ಟು ಹಾಲು ಪೂರೈಸಲು ಸಹಾಯ ಮಾಡುತ್ತದೆ ಎನ್ನಲಾಗುತ್ತದೆ.

ಈ ಶುಂಠಿ ಬೆಳ್ಳುಳ್ಳಿ ರಸಂ ಬಾಣಂತಿಯರಿಗೆ ಎದೆಹಾಲು ಹೆಚ್ಚಿಸಲು ಮಾತ್ರವಲ್ಲ, ಈ ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲೂ ಅತ್ಯುತ್ತಮ. ಈ ರಸಂ ಜೀಣಕ್ರಿಯೆಗೆ ಉತ್ತವಲ್ಲದೇ, ಶೀತ, ಕೆಮ್ಮು ಮತ್ತು ತೂಕ ಇಳಿಸಲೂ ಸಹಕಾರಿ. ಹಾಗಾದ್ರೆ ಈ ಶುಂಠಿ ಬೆಳ್ಳುಳ್ಳಿ ರಸಂ ಹೇಗೆ ಮಾಡೋದು ಎನ್ನುವುದನ್ನು ತಿಳಿದುಕೊಳ್ಳೋಣ.

ರೆಸಿಪಿ

ಶುಂಠಿ ಬೆಳ್ಳುಳ್ಳಿ ರಸಂ- ಬೇಕಾಗುವ ಪದಾರ್ಥಗಳು
ಮಧ್ಯಮ ಗಾತ್ರದ ಒಂದು ಟೊಮ್ಯಾಟೋ
ಹುಣಸೇ ರಸ- ಒಂದು ಕಪ್‌
ಶುಂಠಿ- ಬೆಳ್ಳುಳ್ಳಿ ಪೇಸ್ಟ್‌- 2 ಟೀಸ್ಪೂನ್‌
ತೊಗರಿ ಬೇಳೆ- 2 ಟೀ ಸ್ಪೂನ್‌
ರುಚಿಗೆ ತಕ್ಕಷ್ಟು ಉಪ್ಪು
ಕರಿಮೆಣಸು, ಜೀರಿಗೆ ಪುಡಿ- 1ಟೀ ಸ್ಪೂನ್‌
ಅರಿಶಿನ ಪುಡಿ- ಅರ್ಧ ಟೀ ಸ್ಪೂನ್‌
ಎಣ್ಣೆ/ತುಪ್ಪ- 2ಟೀ ಸ್ಪೂನ್
ಸಾಸಿವೆ- ಅರ್ಧ ಟೀಸ್ಪೂನ್‌
ಮೆಂತ್ಯ ಕಾಳು- ಅರ್ಧ ಟೀ ಸ್ಪೂನ್‌
ಹಿಂಗು ಒಂದು ಚಿಟಿಕೆ
ಕೆಂಪು ಮೆಣಸಿನಕಾಯಿ- ಒಂದು ಅಥವಾ ರುಚಿಗೆ ಅನುಗುಣವಾಗಿ
ಕೊತ್ತಂಬರಿ ಸೊಪ್ಪು ಅಲಂಕಾರಕ್ಕಾಗಿ

ಮಾಡುವ ವಿಧಾನ

* ತೊಗರಿ ಬೇಳೆಯನ್ನು ಅರ್ಧಗಂಟೆ ನೆನೆಸಿಡಿ
* ಟೊಮೆಟೋವನ್ನು ಕತ್ತರಿಸಿ ನುಣ್ಣಗೆ ರುಬ್ಬಿಕೊಳ್ಳಿ
* ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಕಾಳು ಮೆಣಸು, ಜೀರಿಗೆ ಪುಡಿ ಮತ್ತು ತೊಗರಿ ಬೇಳೆಯನ್ನು ನುಣ್ಣಗೆ ಪೇಸ್ಟ್‌ನಂತೆ ರುಬ್ಬಿಟ್ಟುಕೊಳ್ಳಿ
* ಒಂದು ಪ್ಯಾನ್‌ನಲ್ಲಿ ರುಬ್ಬಿದ ಟೊಮ್ಯಾಟೋ ಪೇಸ್ಟ್, ಹುಣಸೇ ರಸ ಹಾಗೂ ಅರಿಶಿನ ಪುಡಿ ಸೇರಿಸಿ ಕುದಿಸಿ
* ಇದಕ್ಕೆ ರುಬ್ಬಿದ ಬೇಳೆಯ ಪೇಸ್ಟ್‌ ಸೇರಿಸಿ, ಹಸಿ ವಾಸನೆ ಹೋಗುವವರೆಗೆ ಏಳರಿಂದ ಹತ್ತು ನಿಮಿಷಗಳ ಕಾಲ ಕುದಿಸಿ
* ನಂತರ ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ನಿಮಗೆ ಬೇಕಾಗುವಷ್ಟು ಹದ ಬರುವವರೆಗೆ ಕುದಿಸಿ
* ಒಗ್ಗರಣೆಗಾಗಿ ಇನ್ನೊಂದು ಪ್ಯಾನ್‌ನಲ್ಲಿ ತುಪ್ಪ ಅಥವಾ ಎಣ್ಣೆ ಹಾಕಿ
* ಸಾಸಿವೆ ಹಾಕಿ ಅದು ಸಿಡಿದ ನಂತರ ಮೆಂತ್ಯಕಾಳು , ಕೆಂಪು ಮೆಣಸಿನಕಾಯಿ, ಚಿಟಿಕೆಯಷ್ಟು ಹಿಂಗು ಹಾಕಿ
* ಒಗ್ಗರಣೆಯನ್ನು ರಸಂಗೆ ಸೇರಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
* ಬಿಸಿ ಅನ್ನದೊಂದಿಗೆ ಬಿಸಿಯಾಗಿಯೇ ಬಡಿಸಿ ಅಥವಾ ಸೂಪ್‌ನಂತೆಯೂ ಕುಡಿಯಬಹುದು.

English summary

Garlic, Ginger and Tomato soup may boost breast milk supply Here is How to Prepare in Kannada

Breast milk is low? This drink this spicy soup to increase breast milk, here are recipe have a look,
Story first published: Saturday, August 13, 2022, 15:20 [IST]
X
Desktop Bottom Promotion