Just In
- 10 hrs ago
ವಾರ ಭವಿಷ್ಯ- ಡಿಸೆಂಬರ್ 15ರಿಂದ ಡಿಸೆಂಬರ್ 21ರ ತನಕ
- 12 hrs ago
ಭಾನುವಾರದ ದಿನ ಭವಿಷ್ಯ (15-12-2019)
- 22 hrs ago
ಮನೆ ನವೀಕರಣ ಮಾಡುತ್ತಿದ್ದೀರಾ? ತಪ್ಪದೇ ಲೇಖನ ಓದಿ
- 24 hrs ago
ಆರು ಬೆರಳಿಗೆ ಕಾರಣ ಹಾಗೂ ಚಿಕಿತ್ಸೆ
Don't Miss
- News
ಜನರಲ್ಲಿ ಹೊಸ ಕನಸು ಬಿತ್ತಿದ ಮಲ್ಲಿಪಟ್ಟಣ ಏತ ನೀರಾವರಿ ಯೋಜನೆ
- Finance
ಅಸ್ಸಾಂನಲ್ಲಿ ಚಿಕನ್ ಕೇಜಿಗೆ 500 ರುಪಾಯಿ, ಈರುಳ್ಳಿಗೆ 250 ರುಪಾಯಿ
- Technology
ಎಂಆಧಾರ್ ಆಪ್ ಅಪ್ಡೇಟ್ ಮಾಡಿ, ಹೆಚ್ಚಿನ ಸೇವೆ ಆನಂದಿಸಿ..!
- Movies
'ಎಲ್ಲಿಗೆ ಪಯಣ ಯಾವುದೋ ದಾರಿ' ಸಿನಿಮಾ ಶುಭಾರಂಭ
- Sports
ಏಕದಿನ ಸರಣಿ; ಭಾರತದ ಟಾಪ್ ಆರ್ಡರ್ ವಿಕೆಟ್ ಕಿತ್ತು ಸಂಭ್ರಮಿಸಿದ ವಿಂಡೀಸ್ ಬೌಲರ್ಸ್; live ಸ್ಕೋರ್
- Automobiles
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ನೀವು ಗರ್ಭಿಣಿಯಾಗಿರುವುದನ್ನು ನಿಮ್ಮ ಪತಿಗೆ ವಿಭಿನ್ನವಾಗಿ ತಿಳಿಸಬೇಕೆ? ಈ ವಿಶಿಷ್ಟ ವಿಧಾನಗಳನ್ನು ಪ್ರಯತ್ನಿಸಿ ನೋಡಿ
ಮದುವೆ ಬಳಿಕ ಪತಿ ಹಾಗು ಎರಡೂ ಕುಟುಂಬದವರ ಬಹು ಅಪೇಕ್ಷತ ನಿರೀಕ್ಷೆ ಎಂದರೆ ಹೊಸ ಮದುಮಗಳು ಬೇಗನೆ ಗರ್ಭಿಣಿ ಆಗಬೇಕು ಎನ್ನುವುದು. ಕೆಲವೇ ತಿಂಗಳಲ್ಲಿ ಆಕೆ ಗರ್ಭ ಧರಿಸಿದರೆ ಆಗ ಆಗುವಂತಹ ಸಂತೋಷ ಹೇಳತೀರದು. ಆದರೆ ಪತ್ನಿ ಆಗಿರುವಾಕೆ ಇದನ್ನು ತನ್ನ ಪತಿಗೆ ಮೊದಲು ಹೇಳುವಳು. ಇದರ ಬಳಿಕ ಪರೀಕ್ಷೆಯಿಂದ ಇದನ್ನು ದೃಢಪಡಿಸಿಕೊಳ್ಳಬಹುದು. ಆದರೆ ಕೆಲವೊಂದು ಸಲ ಗರ್ಭ ಧರಿಸಿದ ವಿಚಾರವನ್ನು ಪತಿಗೆ ತಿಳಿಸುವುದು ಹೇಗೆ ಎನ್ನುವ ಗೊಂದಲ ಇದ್ದೇ ಇರುತ್ತದೆ. ನೀವು ಗರ್ಭಿಣಿ ಎನ್ನುವುದನ್ನು ಪತಿಗೆ ಹೇಳಲು ನೂರಾರು ವಿಧಾನಗಳು ಇವೆ. ಇದರಲ್ಲಿ ನಿಮಗೆ ಬೇಕಿರುವುದನ್ನು ಆಯ್ಕೆ ಮಾಡಿಕೊಳ್ಳಬಹುದು. ಕೆಲವೊಂದು ತಮಾಷೆಯ ವಿಧಾನದಿಂದಲೂ ಪತಿಗೆ ನೀವು ಗರ್ಭಿಣಿ ಎನ್ನುವ ವಿಚಾರ ತಿಳಿಸುವುದು ಹೇಗೆ ಎಂದು ಇಲ್ಲಿ ತಿಳಿಯುವ.
ಗರ್ಭ ಧರಿಸಲು ತಿಂಗಳ ಯಾವ ದಿನಗಳ ಪ್ರಯತ್ನ ಹೆಚ್ಚಿನ ಫಲ ನೀಡುತ್ತದೆ?

1. ಪುಸ್ತಕದೊಂದಿಗೆ ಇದನ್ನು ಘೋಷಿಸಿ
ಮೊದಲ ಸಲ ನೀವು ತಾಯಿಯಾಗುತ್ತಿದ್ದರೆ ಆಗ ನೀವು ತಂದೆಯಾಗಿ ಏನೆಲ್ಲಾ ಕಲಿಯಬೇಕು ಎನ್ನುವ ಪುಸ್ತಕ ಖರೀದಿಸಿ ಮತ್ತು ಈ ಪುಸ್ತಕದಲ್ಲಿ ತಂದೆಯಾಗಿ ಏನು ಮಾಡಬೇಕು ಎನ್ನುವ ಸಲಹೆಗಳು ಇರುವುದು. ಇದನ್ನು ನೀಡಿದ ಬಳಿಕ ನೀವು ಗರ್ಭಿಣಿ ಎನ್ನುವುದು ಸ್ಪಷ್ಟವಾಗುವುದು.
2. ಒವೆನ್ ನಲ್ಲಿ ಬನ್ ಇಡಿ
ಗರ್ಭದಲ್ಲಿರುವ ಭ್ರೂಣದ ಆರೋಗ್ಯ-ಅನಾರೋಗ್ಯದ ಬಗ್ಗೆ ತಿಳಿಯುವುದು ಹೇಗೆ? ಇಲ್ಲಿದೆ ಸೂಚನೆಗಳು

3. ಪ್ರೆಗ್ನೆಸ್ಸಿ ಪರೀಕ್ಷೆಯನ್ನು ಸುತ್ತಿಕೊಳ್ಳಿ
ಪ್ರೆಗ್ನೆಸ್ಸಿ ಪರೀಕ್ಷೆ ಸ್ಟ್ರಿಪ್ ನ್ನು ಸುರುಳಿ ಮಾಡಿ ಮತ್ತು ಅದನ್ನು ನಿಮ್ಮ ಸಂಗಾತಿಯು ನೋಡುವ ಜಾಗದಲ್ಲಿ ಇಟ್ಟುಬಿಡಿ. ಇದನ್ನು ತೆರೆದ ವೇಳೆ ಖಂಡಿತವಾಗಿಯೂ ಆತನಿಗೆ ಅಚ್ಚರಿ ಆಗುವುದು.
4. ಮಗುವಿನ ಶೂ ಖರೀದಿ ಮಾಡಿ
ಮಗುವಿನ ಒಂದು ಶೂ ಖರೀದಿ ಮಾಡಿ ಮತ್ತು ನಿಮ್ಮ ಸಂಗಾತಿಗೆ ಶಾಪಿಂಗ್ ನಿಂದ ಒಂದು ಉಡುಗೊರೆ ತಂದಿದ್ದೇನೆ ಎಂದು ಹೇಳಿ. ಶೂ ಕ್ಯಾಬಿನೆಟ್ ನಲ್ಲಿ ನೀವು ಮಗುವಿನ ಶೂ ಇಡಿ ಮತ್ತು ಅದನ್ನು ಆತ ಗುರುತಿಸುವಂತೆ ಮಾಡಿ.

5. ಚಾಕ್ ಬೋರ್ಡ್ ನಲ್ಲಿ ಬರೆಯಿರಿ
ಚಾಕ್ ಬೋರ್ಡ್ ನಲ್ಲಿ ನಿಮ್ಮ ಕ್ರಿಯಾತ್ಮಕತೆ ಪ್ರದರ್ಶನ ಮಾಡಬಹುದು. ನೀವು ಇದರಲ್ಲಿ ಒಂದು ಮಗುವಿನ ಚಿತ್ರ, ಅದಕ್ಕೆ ಸಂಬಂಧಿಸಿದ ವಸ್ತು ಅಥವಾ ಗರ್ಭಧರಿಸಿದ ದಿನ ಮತ್ತು ಹೆರಿಗೆ ದಿನ ಬರೆಯಬಹುದು.
6. ಬಲೂನ್ ಮೂಲಕ ಸುದ್ದಿ ನೀಡಿ
ಗರ್ಭ ಧರಿಸಿದ ವಿಚಾರವನ್ನು ಬಲೂನ್ ಮೂಲಕ ನೀವು ಹೇಳಬಹುದು. ಬಲೂನ್ ನಲ್ಲಿ ಸಂದೇಶ ಬರೆಯಿರಿ ಮತ್ತು ಇದನ್ನು ಕಪಾಟು ಅಥವಾ ಕೋಣೆಯಲ್ಲಿ ತೂಗು ಹಾಕಿ. ಇದನ್ನು ಗುರುತಿಸಿ ಖಂಡಿತವಾಗಿಯೂ ನಿಮ್ಮ ಪತಿಗೆ ತಿಳಿದುಬರಲಿದೆ.

7. ಗರ್ಭಧಾರಣೆ ಕ್ಷಣಗಣನೆ
ಇದು ತುಂಬಾ ಒಳ್ಳೆಯ ಆಲೋಚನೆಯಾಗಿದೆ. ನೀವು ಗರ್ಭಧಾರಣೆ ಕ್ಷಣಗಣನೆ ಮಾಡುವಂತಹ ಟೀಶರ್ಟ್ ಧರಿಸಿ. ಇದರಲ್ಲಿ ಕ್ಯಾಲೆಂಡರ್ ಇರಲಿ ಮತ್ತು ಇದು ಅದ್ಭುತವಾಗಿ ಕೆಲಸ ಮಾಡುವುದು.
8. ಮಗುವಿನ ಮೂಲಕ ಹೇಳಿಸಿ
ಇದು ನಿಮಗೆ ಮೊದಲ ಮಗು ಅಲ್ಲದೆ ಇದ್ದರೆ ಆಗ ನೀವು ಇದನ್ನು ಹಿರಿಯ ಮಗುವಿನ ಮೂಲಕ ಹೇಳಿಸಬಹುದು. ಅದಕ್ಕೆ ಒಂದು ಒಳ್ಳೆಯ ಬಟ್ಟೆ ಹಾಕಿಬಿಟ್ಟು, ನಾನು ಸೋದರ ಅಥವಾ ಸೋದರಿಯನ್ನು ಎದುರು ನೋಡುತ್ತಿದ್ದೇನೆ ಮತ್ತು ಶೀಘ್ರದಲ್ಲಿ ಅವನು/ಅವಳನ್ನು ಭೇಟಿಯಾಗಲಿದ್ದೇನೆ ಎನ್ನುವ ಸಂದೇಶವು ಬಟ್ಟೆಯಲ್ಲಿ ಇರಲಿ. ಇದು ನಿಮ್ಮ ಪತಿಗೆ ಅಚ್ಚರಿ ನೀಡುವುದು.

9. ಕುಕ್ಕಿ ಬೇಕ್ ಮಾಡಿ
ಸುದ್ದಿ ನೀಡಲು ನೀವು ಒಂದು ಕುಕ್ಕಿ ಬೇಕ್ ಮಾಡಿ. ಇದನ್ನು ರಾತ್ರಿ ಊಟದ ವೇಳೆ ನಿಮ್ಮ ಪತಿಯು ನೋಡಲಿ. ಆತನಿಗೆ ಇದು ಸಿಹಿ ಅಚ್ಚರಿ ಸುದ್ದಿ ಆಗಿರುವುದು.
10. ಡೈಪರ್ ತಂದಿಡಿ
ನೀವು ಒಂದು ಪ್ಯಾಕೆಟ್ ಡೈಪರ್ ಅನ್ನು ತಂದು ಬಾಗಿಲ ಬಳಿ ಇಟ್ಟುಬಿಡಿ. ಆಗ ನಿಮ್ಮ ಪತಿಗೆ ಖಂಡಿತವಾಗಿಯೂ ಗೊಂದಲವಾಗುವುದು. ಇದರ ಮೇಲಿನ ವಿಳಾಸ ನೋಡಿದ ಬಳಿಕ ಆತನಿಗೆ ಸರಿಯಾಗಿ ಮನವರಿಕೆ ಆಗುವುದು. ಇನ್ನೊಂದು ವಿಧಾನವೆಂದರೆ ನೀವು ಸೂಪರ್ ಮಾರ್ಕೆಟ್ ಗೆ ಆತನನ್ನು ಕರೆದುಕೊಂಡು ಹೋಗಿ ಡೈಪರ್ ಖರೀದಿ ಮಾಡಿ. ಆಗ ಗೊಂದಲದಲ್ಲಿರುವ ಪತಿಗೆ ಸುದ್ದಿ ಹೇಳಿ.

11. ಪರಿಸ್ಥಿತಿ ನೋಡಿಕೊಂಡು…
ನೀವು ಕುಟುಂಬದ ಶೂಟಿಂಗ್ ಆಯೋಜಿಸಿ ಮತ್ತು ಈ ವೇಳೆ ನೀವು ನಾನು ಗರ್ಭಿಣಿ ಎಂದು ಹೇಳಿಬಿಡಿ. ಆಗ ನೀವು ಪತಿಯ ಪ್ರತಿಕ್ರಿಯೆಯನ್ನು ಯಾವತ್ತಿಗೂ ಹಿಡಿದಿಟ್ಟುಕೊಳ್ಳಬಹುದು.
12. ಪದಬಂಧ ನೀಡಿ
ಗರ್ಭಧಾರಣೆ ಬಗ್ಗೆ ಕೆಲವೊಂದು ಪದಬಂಧ ಮಾಡಿ ಅಥವಾ ಅಲ್ಟ್ರಾಸೌಂಡ್ ನ ಚಿತ್ರದಿಂದ ಅದನ್ನು ಜೋಡಿಸಲು ಹೇಳಿದರೆ ಆಗ ಅಚ್ಚರಿ ನಿಮ್ಮ ಪತಿಗೆ ಆಗುವುದು ಖಚಿತ.

13. ಮಗುವಿಗೆ ಕೋಣೆ ತಯಾರಿಸಿ
ಮಲಗುವ ಕೋಣೆಯಲ್ಲಿ ನೀವು ಒಂದು ಕಪಾಟನ್ನು ಖಾಲಿ ಮಾಡಿಕೊಳ್ಳಿ ಮತ್ತು ಅದರಲ್ಲಿ "ಅಪ್ಪ, ನನಗಾಗಿ ಒಂದು ಕೋಣೆ ತಯಾರಿಸಿ'' ಎಂದು ಬರೆದಿಡಿ. ಇಲ್ಲಿ ಮಗುವಿನ ಆಟಿಕೆ, ಬಟ್ಟೆ ಅಥವಾ ಶೂಗಳನ್ನು ಇಡಬಹುದು. ಆತನಿಗೆ ಇದನ್ನು ನೋಡಿ ಅಚ್ಚರಿ ಆಗುವುದು.
14. ಫೋಟೊ ಫ್ರೇಮ್ ನಲ್ಲಿ ಸಂದೇಶ ಬರೆಯಿರಿ
ಹೆರಿಗೆ ಬಳಿಕ ನೈಸರ್ಗಿಕವಾಗಿ ನಿಮ್ಮ ದೇಹವನ್ನು ಮೊದಲಿನ ಆಕಾರದಲ್ಲಿ ಪಡೆಯುವುದು ಹೇಗೆ?

15. ಹೆಚ್ಚುವರಿ ಪ್ಲೇಟ್ ಇಡಿ
ನೀವು ಊಟಕ್ಕೆ ಕುಳಿತುಕೊಳ್ಳುವ ವೇಳೆ ಮಗು ಊಟ ಮಾಡುವಂತಹ ಸಣ್ಣ ಪ್ಲೇಟ್ ನ್ನು ಇಟ್ಟುಬಿಡಿ ಅಥವಾ ಸಣ್ಣ ಕುರ್ಚಿ ಇಡಿ. ಇದನ್ನು ನಿಮ್ಮ ಸಂಗಾತಿ ಖಂಡಿತವಾಗಿಯೂ ಗಮನಿಸುವರು.
16. ಹಾಲಿನ ಬಾಟಲಿಯಿಂದ ಲೋಟ ತುಂಬಿ
ಮುಂದಿನ ಸಲ ಸಂಗಾತಿಯು ಜ್ಯೂಸ್ ಅಥವಾ ನೀರು ಕೇಳಿದರೆ ಆಗ ನೀವು ಮಗುವಿಗೆ ಹಾಲುಣಿಸುವ ಬಾಟಲಿಯಿಂದ ಲೋಟ ತುಂಬಿ. ಆತನಿಗೆ ಗೊಂದಲವಾದರೆ ಆಗ ನೀವು ನಕ್ಕು ಹೊಟ್ಟೆಯ ಕಡೆ ಬೊಟ್ಟು ಮಾಡಿ.

17. ಟೀ ಶರ್ಟ್ ನಲ್ಲಿ ಮೆಸೇಜ್
ಟೀ ಶರ್ಟ್ ನಲ್ಲಿ ಮಗುವಿನ ಪಾದಗಳು ಅಥವಾ ಕಾಲುಗಳು ಇರುವುದನ್ನು ಪ್ರಿಂಟ್ ಮಾಡಿಸಿಕೊಳ್ಳಿ. ಇದನ್ನು ನೀವು ಧರಿಸಿ ನಡೆದಾಡಿದರೆ ಆಗ ಖಂಡಿತವಾಗಿಯೂ ಅದು ನಿಮ್ಮ ಸಂಗಾತಿಗೆ ತಿಳಿಯುವುದು.
18. ಬಾಟಲಿಯಲ್ಲಿ ಬರೆದಿಡಿ
ಇಂದು ತುಂಬಾ ಹಳೆಯದು ಎಂದು ಅನಿಸಿದರೂ ತುಂಬಾ ಒಳ್ಳೆಯ ವಿಧಾನ. ನೀವು ಬೇಗನೆ ತಂದೆಯಾಗಲಿದ್ದೀರಿ ಎಂದು ಬಾಟಲಿ ಮೇಲೆ ಬರೆದಿಟ್ಟು, ಅದನ್ನು ಆತ ಬೇಗನೆ ಗುರುತಿಸುವ ಜಾಗದಲ್ಲಿ ಇಟ್ಟುಬಿಡಿ.

19. ಸ್ಕ್ರಾಬ್ಬಲ್
ನಿಮ್ಮ ಪತಿಗೆ ಸ್ಕ್ರಾಬಲ್ ನಂತಹ ಆಟವು ತುಂಬಾ ಇಷ್ಟವಾಗಿದ್ದರೆ ಆಗ ನೀವು ಇದನ್ನು ಆತನೊಂದಿಗೆ ಆಡಿ. ನಿಮ್ಮ ಸರದಿ ಬಂದ ವೇಳೆ ಆತನಿಗೆ ಆ ಸುದ್ದಿಯ ಬಗ್ಗೆ ಅಥವಾ ಅದಕ್ಕೆ ಸಂಬಂಧಿಸಿದ ವಿಚಾರದ ಸ್ಪೆಲ್ ಮಾಡಲು ಹೇಳಿ. ಆತನಿಗೆ ಸುದ್ದಿ ತಿಳಿದು ಅಚ್ಚರಿ ಆಗುವುದು.
20. ಹೊಟ್ಟೆಯಲ್ಲಿ ಬರೆಯಿರಿ
"ಮಗು ಒಳಗಡೆಯಿದೆ, ಶೀಘ್ರದಲ್ಲೇ ಬರಲಿದೆ'' ಅಥವಾ "ನೀವು ತಂದೆ'' ಎನ್ನುವುದನ್ನು ಹೊಟ್ಟೆ ಮೇಲೆ ಬರೆಯಿರಿ. ಈ ಸಂದೇಶ ನೋಡಿ ಆತನ ಖುಷಿಗೆ ಪಾರವೇ ಇರಲ್ಲ.

21. ಸಾಕು ಪ್ರಾಣಿ ನೆರವು ಪಡೆಯಿರಿ
ಸಾಕು ಪ್ರಾಣಿಯು ಸುದ್ದಿ ನೀಡಲು ತಯಾರು ಮಾಡಿಕೊಳ್ಳಿ. ``ಮೇಡಂ ಗರ್ಭಿಣಿ'' ಎಂದು ಬರೆದ ಕಾಗವನ್ನು ಅಂಟಿಸಿ ಇದನ್ನು ನಿಮ್ಮ ಸಂಗಾತಿಯ ಕಚೇರಿಗೆ ಕಲಿಸಿ. ಇದು ತುಂಬಾ ಖುಷಿಯ ಅಚ್ಚರಿ ಆಗಿರುವುದು.
22. ಕ್ರೀಡಾ ವಿಧಾನ ಅನುಸರಿಸಿ
ನಿಮ್ಮ ಪತಿಯು ಕ್ರೀಡೆಯ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರೆ ಆಗ ನೀವು ಆತನಿಗೆ ಇಷ್ಟವಾಗಿರುವ ಕ್ರೀಡೆಯ ಮಕ್ಕಳಿಗಾಗಿ ಧರಿಸುವ ಜೆರ್ಸಿ ಅಥವಾ ಶೂವನ್ನು ಖರೀದಿ ಮಾಡಿ ಆತನಿಗೆ ಉಡುಗೊರೆ ನೀಡಿ. ಆತನಿಗೆ ಇದರಿಂದ ಖಂಡಿತವಾಗಿಯೂ ಅಚ್ಚರಿ ಆಗುವುದು.

23. ಕಲೆಯ ಮೂಲಕ
ನೀವು ಚಿತ್ರ ಕಲಾವಿದೆಯಾಗಿದ್ದರೆ ಆಗ ನೀವು ಪತಿ, ನೀವು ಮತ್ತು ಮಗು ಇರುವಂತಹ ಚಿತ್ರವನ್ನು ಬಿಡಿಸಿ. ಇದನ್ನು ನೀವು ಸಂಗಾತಿಗೆ ಉಡುಗೊರೆ ನೀಡಬಹುದು ಅಥವಾ ಆತ ನೋಡುವಂತಹ ಜಾಗದಲ್ಲಿ ಇದನ್ನು ಇಟ್ಟುಬಿಡಿ.
24. ಸ್ಲೈಡ್ ಶೋ
ಸ್ಲೈಡ್ ಶೋ ತಯಾರಿಸಿಕೊಳ್ಳಿ ಮತ್ತು ಇದರಲ್ಲಿ ನಿಮ್ಮ ಸಂಬಂಧದ ಆರಂಭದ ದಿನದಿಂದ ಸಂತೋಷದ ಕ್ಷಣಗಳ ಫೋಟೊಗಳನ್ನು ಹಾಕಿ. ಕೊನೆಯಲ್ಲಿ ನೀವು ಇದರಲ್ಲಿ ಪ್ರೆಗ್ನೆಸ್ಸಿ ಪರೀಕ್ಷೆಯ ಫೋಟೊ ಹಾಕಿ. ಇದು ಸುದ್ದಿ ನೀಡಲು ತುಂಬಾ ಕ್ರಿಯಾತ್ಮಕ ವಿಧಾನ.

25. ಮೊಬೈಲ್ ಫೋನ್ ಬಳಸಿ
ಪ್ರೆಗ್ನೆಸ್ಸಿ ಪರೀಕ್ಷೆಯ ಫೋಟೊ ಅಥವಾ ಒಂದು ಕವಿತೆ ಅಥವಾ ಗರ್ಭಧಾರಣೆ ಬಗ್ಗೆ ಒಂದು ಸಂದೇಶವನ್ನು ಬರೆದು ನಿಮ್ಮ ಪತಿಗೆ ಕಳುಹಿಸಿ. ಆತ ಖಂಡಿತವಾಗಿಯೂ ಕರೆ ಮಾಡಿ ಇದನ್ನು ದೃಢಪಡಿಸುತ್ತಾನೆ ಅಥವಾ ಕೂದಲೇ ಮನೆಗೆ ಓಡಿ ಬರುವನು.
26. ಕನ್ನಡಿ ಮೇಲೆ ಬರೆಯಿರಿ
ಇದು ತುಂಬಾ ಸಾಂಪ್ರದಾಯಿಕವಾದರೂ ಸುದ್ದಿ ನೀಡಲು ತಮಾಷೆಯ ವಿಧಾನವಾಗಿದೆ. ನೀವು ಲಿಪ್ ಸ್ಟಿಕ್ ಬಳಸಿ ಅದರಿಂದ ಕನ್ನಡಿ ಮೇಲೆ ಬರೆಯಿರಿ.

27. ಕಪ್ ನಲ್ಲಿ ಸಂದೇಶ ಬರೆಯಿರಿ
ಕಪ್ ನಲ್ಲಿ ಏನಾದರೂ ಇದೆ ಎನ್ನುವಂತೆ ನೀವು ಅದನ್ನು ಪತಿಗೆ ನೀಡಿ. ಅದರಲ್ಲಿ ಇರುವ ಸಂದೇಶ ನೋಡಿ ಆತನಿಗೆ ಖಂಡಿತವಾಗಿಯೂ ಅಚ್ಚರಿ ಆಗಲಿದೆ.
28. ಪುಸ್ತಕದಲ್ಲಿ ಬರೆಯಿರಿ
ಗರ್ಭಧಾರಣೆ ವೇಳೆ ಡ್ರೈ ಫ್ರೂಟ್ಸ್ ಮತ್ತು ನಟ್ಸ್ ಸೇವನೆ: ಪ್ರಯೋಜನಗಳು, ಅಪಾಯ ಮತ್ತು ತಿನ್ನುವ ವಿಧಾನ

29. ಪ್ಯಾಕ್ ಮಾಡಿಕೊಳ್ಳಿ
ಒಂದು ಬಾಸ್ಕೆಟ್ ತೆಗೆದುಕೊಂಡು ಅದರಲ್ಲಿ ಮಗುವಿಗೆ ಬೇಕಾಗಿರುವಂತಹ ಬಟ್ಟೆ, ಶೂ, ಆಟಿಕೆ ಇತ್ಯಾದಿಗಳನ್ನು ಹಾಕಿಡಿ. ನಿಮ್ಮ ಪತಿಯು ಮನೆಗೆ ಬಂದ ವೇಳೆ ಅದನ್ನು ಗಮನಿಸವರು.
30. ಬೇಬಿ ಒನ್ಸೆ
ಇದು ಹೃದಯಸ್ಪರ್ಶಿ ಆಗಿರುವುದು. ನೀವು ಒಂದು ಬೇಬಿ ಒನ್ಸೆ ಖರೀದಿ ಮಾಡಿ ಮತ್ತು ಅದರಲ್ಲಿ ತಂದೆಯಾಗಲಿದ್ದೀರಿ ಎನ್ನುವ ಸಂದೇಶ ಹಾಕಿ ಮತ್ತು ಅದನ್ನು ಬಟ್ಟೆ ಇಡುವ ಜಾಗದಲ್ಲಿ ತೂಗು ಹಾಕಿ.

31. ಮಗು ಪತ್ತೆಯಾಗಿದೆ ಎನ್ನುವ ಪಿಗ್ಗಿ ಬ್ಯಾಂಕ್
ಒಂದು ಪಿಗ್ಗಿ ಬ್ಯಾಂಕ್ ಖರೀದಿ ಮಾಡಿ ಮತ್ತು ಅದರಲ್ಲಿ "ಮಗು ಪತ್ತೆಯಾಗಿದೆ'' ಎಂದು ಬರೆಯಿರಿ. ಇದರಲ್ಲಿ ನೀವು "ನಾವು ಒಂಭತ್ತು ತಿಂಗಳು ಉಳಿಸಬೇಕು'' ಎಂದು ಬರೆದಿಡಿ. ಆತ ಇದನ್ನು ನೋಡಿದ ಕೂಡಲೇ ಅರ್ಥ ಮಾಡಿಕೊಳ್ಳುವನು.
32. ಪ್ರಪೋಸ್ ಮಾಡಿ
ನೀವು ಮೊದಲ ಸಲ ಪ್ರಪೋಸ್ ಮಾಡಿದ ಜಾಗಕ್ಕೆ ಆತನನ್ನು ಕರೆದುಕೊಂಡು ಹೋಗಿ ಮತ್ತು ಆಗಿನ ಕ್ಷಣಗಳನ್ನು ನೆನಪಿಸಿಕೊಳ್ಳಿ. ಉಂಗುರದ ಬದಲು ಪ್ರೆಗ್ನೆಸ್ಸಿ ಟೆಸ್ಟ್ ನ ಸ್ಟ್ರಿಪ್ ನೀಡಿ.

33. ರಾತ್ರಿ ಊಟ ಮಾಡಿ
ಆತನೊಂದಿಗೆ ನೀವು ರಾತ್ರಿ ಊಟ ಮಾಡಿ. ಈ ವೇಳೆ ನೀವು ಬೇಬಿ ಕಾರ್ನ್, ಬೇಬಿ ಕ್ಯಾರೆಟ್, ಬೇಬಿ ರಿಬ್ಸ್ ಮತ್ತು ಹೀಗೆ ಆರ್ಡರ್ ಮಾಡಿ. ಕಪ್ ಕೇಕ್ ನೀಡಿ ಮತ್ತು ಆತನಿಗೆ ಇದೆಲ್ಲವೂ ಅರ್ಥವಾಗುತ್ತದೆಯಾ ಎಂದು ನೋಡಿ.
34. ಹಣ್ಣಿನ ಟ್ರೀಟ್ ನೀಡಿ
ಹಣ್ಣನ್ನು ಬಳಸಿಕೊಂಡು ನಿಮ್ಮ ಕ್ರಿಯಾತ್ಮಕತೆ ಹೊರಗೆ ಹಾಕಿ. ಡ್ಯಾಡಿ ಎಂದು ಬರೆದಿರುವಂತಹ ಪತ್ರವನ್ನು ಹಣ್ಣಿನ ಮೇಲೆ ಇಡಿ ಮತ್ತು ಅದನ್ನು ಊಟದ ಟೇಬಲ್ ಮೇಲೆ ಇಟ್ಟುಬಿಡಿ. ಸಿಹಿ ಸುದ್ದಿ ಹೇಳಲು ಇದಕ್ಕಿಂತ ಒಳ್ಳೆಯ ವಿಧಾನ ಬೇರೆ ಇಲ್ಲ.

35. ಐಸ್ ಕ್ರಿಮ್ ಡೇಟ್
ಆತನನ್ನು ಹೊರಗಡೆ ಕರೆದುಕೊಂಡು ಹೋಗಿ ಐಸ್ ಕ್ರೀಮ್ ತಿನ್ನಿಸಿ ಮತ್ತು ನೀವು ಎರಡು ಆರ್ಡರ್ ಮಾಡಿ. ಆತನಿಗೆ ಇದರಿಂದ ಅಚ್ಚರಿ ಆಗುವುದು ಮತ್ತು ನೀವು ಯಾಕೆ ಎರಡು ತಿನ್ನುತ್ತಿದ್ದೀರಿ ಎಂದು ಆತನಿಗೆ ಹೇಳಿ.
36. ಬಾಟಲಿ ಮೇಲೆ
ಇದು ಮತ್ತೊಂದು ಬಾಟಲಿ ಐಡಿಯಾ. ಆತನಿಗೆ ಇಷ್ಟವಾಗಿರುವಂತಹ ಡ್ರಿಂಕ್ಸ್ ಅನ್ನು ನೀವು ರಾತ್ರಿ ಊಟಕ್ಕೆ ತೆಗೆದುಕೊಳ್ಳಿ ಮತ್ತು ಮತ್ತು ಆ ಲೋಟದ ಮೇಲೆ ನೀವು ಸಂದೇಶವನ್ನು ಬರೆದು ಅಂಟಿಸಿ.

37. ಪುಶ್ ನೋಟಿಫಿಕೇಶನ್
ಆತನ ಮೊಬೈಲ್ ನಲ್ಲಿ ಬೇಬಿ ಟ್ರ್ಯಾಕಿಂಗ್ ಆಪ್ ಡೌನ್ ಲೋಡ್ ಮಾಡಿ ಮತ್ತು ಅದರಲ್ಲಿ ಪುಶ್ ನೋಟಿಫಿಕೇಶನ್ ಹಾಕಿ. ಅದರಲ್ಲಿ ನೀವು ತುಂಬಾ ಸುಂದರವಾಗಿರುವಂತಹ ಸಂದೇಶವನ್ನು ಬರೆಯಿರಿ. ಆತನಿಗೆ ಇದರಿಂದ ಖಂಡಿತವಾಗಿಯೂ ಅರ್ಥವಾಗಲಿದೆ.
ಗರ್ಭಧಾರಣೆಯ ವಿಷಯ ತಿಳಿಸುವುದು ಖಂಡಿತವಾಗಿಯೂ ತುಂಬಾ ಸುಂದರ ಕ್ಷಣ. ಇದನ್ನು ನೀವು ತಪ್ಪಿಸಿಕೊಳ್ಳಬೇಡಿ. ಮೇಲೆ ಹೇಳಿರುವಂತಹ ವಿಧಾನಗಳನ್ನು ಬಳಸಿಕೊಂಡು ನೀವು ಸಿಹಿ ಸುದ್ದಿ ತಿಳಿಸಬಹುದು. ಈ ಕ್ಷಣವನ್ನು ನೀವು ತುಂಬಾ ಆನಂದಮಯ ಹಾಗೂ ಜೀವನದಲ್ಲಿ ಎಂದೂ ಮರೆಯದ ಕ್ಷಣವಾಗಿಸಿಕೊಳ್ಳಿ.