For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆಗೆ ಪ್ರಯತ್ನಿಸುವವರು, ಗರ್ಭಿಣಿಯರು ಫಾಲಿಕ್‌ ಆಮ್ಲ ತೆಗೆದುಕೊಳ್ಳಲೇಬೇಕು, ಏಕೆ?

|

ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವ ಮಹಿಳೆಯರಿಗೆ ಪ್ರಸೂತಿ ತಜ್ಞರು ಸಲಹೆ ನೀಡುತ್ತಾರೆ. ಫಾಲಿಕ್‌ ಆಮ್ಲ ಸಪ್ಲಿಮೆಂಟ್‌ ತೆಗೆದುಕೊಳ್ಳುವುದರಿಂದ ಗರ್ಭಧಾರಣೆಯ ಸಾಧ್ಯತೆ ಹೆಚ್ಚುವುದು. ಗರ್ಭಿಣಿಯಾದ ಮೇಲೂ ಫಾಲಿಕ್ ಆಮ್ಲ ಸಪ್ಲಿಮೆಂಟ್‌ ತೆಗೆದುಕೊಳ್ಳಲೇಬೇಕೆಂದು ತಜ್ಞರು ಸೂಚಿಸುತ್ತಾರೆ. ತಾಯಿ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ ಫಾಲಿಕ್ ಆಮ್ಲ ಅತ್ಯವಶ್ಯಕವಾಗಿದೆ.

ಗರ್ಭಧಾರಣೆಗೆ, ಗರ್ಭನಿಂತ ಮೇಲೆ ಮಗುವಿನ ಮೂಳೆ,ಬೆರಳುಗಳು, ಉಗುರುಗಳು, ಬೆನ್ನುಮೂಳೆ, ಮೆದುಳು ಇವುಗಳ ಬೆಳವಣಿಗೆಗೆ ಫಾಲಿಕ್ ಆಮ್ಲ ಅತ್ಯವಶ್ಯಕವಾಗಿದೆ. ಫಾಲಿಕ್ ಆಮ್ಲದ ಕೊರತೆ ಉಂಟಾದರೆ ಮಗುವಿನ ಆರೋಗ್ಯದಲ್ಲಿ ನ್ಯೂನತೆ ಕಂಡು ಬರುವುದು.

ಆದ್ದರಿಂದ ಗರ್ಭಧಾರಣೆಗೆ ಬಯಸುವವರು, ಗರ್ಭಿಣಿಯಾದವರು ಫಾಲಿಕ್ ಆಮ್ಲ ಕಡ್ಡಾಯವಾಗಿ ಸೇವಿಸಬೇಕು. ಫಾಲಿಕ್ ಆಮ್ಲ ನೈಸರ್ಗಿಕವಾಗಿ ಕೆಲವೊಂದು ಹಣ್ಣು, ತರಕಾರಿ, ಧಾನ್ಯಗಳು, ನಟ್ಸ್‌ಗಳಲ್ಲಿ ಇರುತ್ತದೆ.

ಫಾಲಿಕ್ ಆಮ್ಲ ಏಕೆ ಅವಶ್ಯಕ?

ಫಾಲಿಕ್ ಆಮ್ಲ ಏಕೆ ಅವಶ್ಯಕ?

ಫಾಲಿಕ್ ಆಮ್ಲ ಮತ್ತು ಫೋಲೆಟ್ ದೇಹದಲ್ಲಿ ಹೊಸ ಕೆಂಪು ರಕ್ತ ಕಣಗಳ ಉತ್ಪತ್ತಿಗೆ ಸಹಕಾರಿಯಾಗಿದೆ. ಕೆಂಪು ರಕ್ತ ಕಣಗಳು ದೇಹದಲ್ಲಿ ಎಲ್ಲಾ ಭಾಗಗಳಿಗೆ ಆಮ್ಲಜನಕ ಪೂರೈಕೆ ಮಾಡುತ್ತದೆ. ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪತ್ತಿ ಕಡಿಮೆಯಾದರೆ ದೇಹದ ಭಾಗಗಳಿಗೆ ಆಮ್ಲಜನಕದ ಪೂರೈಕೆ ಕಡಿಮೆಯಾಗುವುದು. ಫಾಲಿಕ್ ಆಮ್ಲ ಕೊರತೆ ಉಂಟಾದರೆ ರಕ್ತ ಹೀನತೆ ಸಮಸ್ಯೆ ಉಂಟಾಗುವುದು.

ಗರ್ಭಾವಸ್ಥೆಯಲ್ಲಿ ಫಾಲಿಕ್ ಆಮ್ಲ ತುಂಬಾ ಅವಶ್ಯಕ ಏಕೆ?

ಗರ್ಭಾವಸ್ಥೆಯಲ್ಲಿ ಫಾಲಿಕ್ ಆಮ್ಲ ತುಂಬಾ ಅವಶ್ಯಕ ಏಕೆ?

ಗರ್ಭಾವಸ್ಥೆಯ ಮೊದಲನೇ ವಾರದಲ್ಲಿ ಫಾಲಿಕ್ ಆಮ್ಲ ರೂಪಗೊಂಡಿರುವ ಭ್ರೂಣದ ಮೆದುಳು ಹಾಗೂ ಬೆನ್ನುಮೂಳೆ ಸರಿಯಾದ ರೀತಿಯಲ್ಲಿ ಕೂಡಿಕೊಳ್ಳುವಂತೆ ಮಾಡುವುದು. ಇದು ಮಗುವಿನಲ್ಲಿ ಅಂಗ ವೈಕ್ಲಯ ಉಂಟಾಗುವುದನ್ನು ತಡೆಗಟ್ಟಬಹುದು.

ಫಾಲಿಕ್ ಆಮ್ಲ ದ್ರವರೂಪದಲ್ಲಿ ಇರುವುದರಿಂದ ಇದನ್ನು ನಮ್ಮ ದೇಹ ಸಂಗ್ರಹಿಸಿ ಇಡುವುದಿಲ್ಲ, ಇದು ಮೂತ್ರದಲ್ಲಿ ಹೊರ ಹೋಗುತ್ತದೆ. ಆದ್ದರಿಂದ ಫಾಲಿಕ್ ಆಮ್ಲದ ಕೊರತೆ ಉಂಟಾಗದಿರಲು ಗರ್ಭಿಣಿ ಪ್ರತಿದಿನ ಫಾಲಿಕ್ ಆಮ್ಲ ಸಪ್ಲಿಮೆಂಟ್ ಹಾಗೂ ಫಾಲಿಕ್ ಆಮ್ಲ ಇರುವ ಆಹಾರಗಳನ್ನು ಸೇವಿಸಬೇಕು. ಏಕೆಂದರೆ ಮಗುವಿನಲ್ಲಿ ದೈಹಿಕ ನ್ಯೂನತೆ ಹಾಗೂ ಮಾನಸಿಕ ನ್ಯೂನತೆ ಮೊದಲ ವಾರಗಳಲ್ಲಿ ಉಂಟಾಗುವುದು. ಆದ್ದರಿಂದ ಅದನ್ನು ತಡೆಗಟ್ಟಲು ಗರ್ಭಾವಸ್ಥೆಯ ಪ್ರಾರಂಭದಲ್ಲಿ ಫಾಲಿಕ್ ಆಮ್ಲ ಕಡ್ಡಾಯವಾಗಿ ತೆಗೆದುಕೊಳ್ಳಬೇಕು.

ಫಾಲಿಕ್ ಆಮ್ಲ ತೆಗೆದುಕೊಳ್ಳುವುದರಿಂದ ಇತರ ಪ್ರಯೋಜನಗಳು

ಫಾಲಿಕ್ ಆಮ್ಲ ತೆಗೆದುಕೊಳ್ಳುವುದರಿಂದ ಇತರ ಪ್ರಯೋಜನಗಳು

ಗರ್ಭಪಾತ ತಡೆಗಟ್ಟುವುದು: ಗರ್ಭಪಾತದ ಅಪಯ ತಡೆಗಟ್ಟುವುದು ಎಂದು ಅಧ್ಯಯನಗಳು ಹೇಳಿವೆ.

ಮಗುವಿನ ಮೆದುಳಿನ ಬೆಳವಣಿಗೆಗೆ ಅವಶ್ಯಕ: ಫಾಲಿಕ್ ಆಮ್ಲ ಕೊರತೆಯಾದರೆ ಮಗುವಿನ ಬೆಳವಣಿಗೆಗೆ ತೊಂದರೆಯಾಗಬಹುದು. ಇದನ್ನು ತಡೆಗಟ್ಟಲು ಫಾಲಿಕ್ ಆಮ್ಲ ಅವಶ್ಯಕವಾಗಿದೆ.

ಹೃದಯದ ಆರೋಗ್ಯಕ್ಕೆ ಅವಶ್ಯಕ: ಹೃದಯ ಸಂಬಂಧಿ ಕಾಯಿಲೆ ಮಗುವಿಗೆ ಉಂಟಾಗದಿರಲು ಫಾಲಿಕ್ ಆಮ್ಲದ ಕೊರತೆ ಉಂಟಾಗಬಾರದು.

ಅವಧಿ ಪೂರ್ವ ಹೆರಿಗೆ ತಡೆಗಟ್ಟುವುದು: ಆರೋಗ್ಯಕರ ಆಹಾರಕ್ರಮದಿಂದ ಗರ್ಭಿಣಿ ಅವಧಿಪೂರ್ವ ಹೆರಿಗೆಯಾಗುವುದನ್ನು ತಡೆಗಟ್ಟಬಹುದಾಗಿದೆ.

ಫಾಲಿಕ್ ಆಮ್ಲ ಇರುವ ಆಹಾರಗಳು

ಫಾಲಿಕ್ ಆಮ್ಲ ಇರುವ ಆಹಾರಗಳು

ಗರ್ಭಿಣಿಯು ನಾರಿನಂಶ, ಕ್ಯಾಲ್ಸಿಯಂ, ವಿಟಮಿನ್ ಎ, ವಿಟಮಿನ್ ಸಿ ಜೊತೆಗೆ ಫಾಲಿಕ್ ಆಮ್ಲ ಇರುವ ಆಹಾರಗಳನ್ನು ಸೇವಿಸಬೇಕು. ಈ ಆಹಾರಗಳಲ್ಲಿ ಫಾಲಿಕ್ ಆಮ್ಲ ಹೆಚ್ಚಿರುತ್ತದೆ.

* ಸೊಪ್ಪುಗಳಲ್ಲಿ ಫಾಲಿಕ್ ಆಮ್ಲ ಅಧಿಕವಿರುತ್ತದೆ: ಪಾಲಾಕ್, ಸಾಸಿವೆ ಸೊಪ್ಪು, ಬ್ರೊಕೋಲಿ, ಅಶ್ವಗಂಧ, ಲೆಟ್ಯೂಸೆ ಇವುಗಳಲ್ಲಿ ಫಾಲಿಕ್ ಆಮ್ಲ ಇದೆ.

* ಹಸರು ಬಟಾಣಿ, ಬೀಟ್‌ರೂಟ್‌, ಪಪ್ಪಾಯಿ, ಬಾಳೆಹಣ್ಣು, ಕಿತ್ತಳೆ ಈ ಹಣ್ಣುಗಳಲ್ಲಿ ಫಾಲಿಕ್ ಆಮ್ಲ ಇವೆ.

* ಧಾನ್ಯಗಳು, ಬ್ರೆಡ್, ಪಾಸ್ತಾ, ಅನ್ನ ಇವುಗಳಲ್ಲಿಯೂ ಫಾಲಿಕ್ ಆಮ್ಲ ಇದೆ.

FAQ's
  • ಗರ್ಭಾವಸ್ಥೆಯಲ್ಲಿ ಎಷ್ಟು ಫಾಲಿಕ್‌ ಆಮ್ಲ ಸೇವಿಸಬೇಕು?

    ಗರ್ಭಣಿಯರು ಪ್ರತಿದಿ 400mcgನಷ್ಟು ಸಪ್ಲಿಮೆಂಟ್‌ ತೆಗೆದುಕೊಳ್ಳಬೇಕು. ಗರ್ಭಧಾರಣೆಯ ಮೊದಲು ಕೂಡ ಫಾಲಿಕ್ ಆಮ್ಲ ಸಪ್ಲಿಮೆಂಟ್‌ ಇದೇ ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು.ಆದರೆ ಆ ಸಪ್ಲಿಮೆಂಟ್‌ನಲ್ಲಿ ವಿಟಮಿನ್ ಎ ಇರಬಾರದು. ವಿಟಮಿನ್ ಎ ಡೋಸ್ ಅಧಿಕವಾಗುವುದು ಕೂಡ ಒಳ್ಳೆಯದು.

  • ಈ ಕೆಳಗಿನ ಆರೋಗ್ಯ ಸಮಸ್ಯೆ ಇರುವವರಿಗೂ ಕೂಡ ಫಾಲಿಕ್ ಆಮ್ಲ ಅವಶ್ಯಕ

    * ಕಿಡ್ನಿ ಕಾಯಿಲೆ ಇದ್ದು ಡಯಾಲಿಸಿಸ್ ಮಾಡುತ್ತಿದ್ದರೆ
    * ರಕ್ತ ಹೀನತೆ
    * ಲಿವರ್‌ ಸಮಸ್ಯೆ
    * ಹೆಚ್ಚು ಮದ್ಯಪಾನ ಮಾಡಿದರೆ
    * ಎಪಿಲೆಪ್ಸಿ, ಟೈಪ್ 2 ಮಧುಮೇಹ, ಸೋರೋಸಿಸ್, ಸಂಧಿವಾತ, ಅಸ್ತಮಾ, ಉರಿಯೂತ ಮುಂತಾದ ಸಮಸ್ಯೆಯಿದ್ದರೆ ಫಾಲಿಕ್ ಆಮ್ಲ ಅವಶ್ಯಕ.

English summary

Folic Acid Rich Foods To Add To Your Pregnancy Diet in kannada

Folic Acid Rich Foods To Add To Your Pregnancy Diet in kannada, Read on...
X
Desktop Bottom Promotion