For Quick Alerts
ALLOW NOTIFICATIONS  
For Daily Alerts

ಫಸ್ಟ್ ಟೈಮ್‌ ಪ್ರೆಗ್ನೆನ್ಸಿ?ನೀವು ತಿಳಿಯಲೇಬೇಕಾದ ಸಂಗತಿಗಳಿವು

|

ತಾಯ್ತನ ಎಂಬುವುದು ಒಂದು ಸುಂದರವಾದ ಅನುಭವ. ಅದರಲ್ಲೂ ಫಸ್ಟ್‌ ಪ್ರೆಗ್ನೆನ್ಸಿ ಅಂದರೆ ಎಲ್ಲವೂ ಹೊಸ ಅನು ಅನುಭವ. ಒಮದು ಕಡೆ ಖುಷಿ, ಮತ್ತೊಂದು ಕಡೆ ಸ್ವಲ್ಪ ಆತಂಕ, ಶರೀರದಲ್ಲಿ ಸ್ವಲ್ಪ ಬದಲಾವಣೆಯಾದರೆ, ಸಣ್ಣದಾಗಿ ಹೊಟ್ಟೆ ನೋವು ಕಾಣಿಸಿದರೆ ಒಂದು ರೀತಿಯ ಆತಂಕ.

ಮನೆಯಲ್ಲಿ ಅಜ್ಜಿ, ಅಮ್ಮ ಯಾರಾದರೂ ಇದ್ದರೆ ಟೆನ್ಷನ್ ಬೇಡ, ಅವೆಲ್ಲಾ ಇದ್ದಿದ್ದೆ ಅಥವಾ ಏನೋ ತೊಂದರೆಯಿದೆ ಕಾಣುತ್ತೆ ಬೇಗ ಆಸ್ಪತ್ರೆಗೆ ಹೋಗು ಎಂದೆಲ್ಲಾ ಹೇಳುತ್ತಾರೆ, ಗಂಡ-ಹೆಂಡತಿ ಮಾತ್ರ ಇದ್ದರೆ ಸ್ವಲ್ಪ ಏನಾದರೂ ವ್ಯತ್ಯಾಸವಾದರೆ ಭಯ, ಆತಂಕ. ಇನ್ನು ಕೆಲವರಿಗೆ ಯಾವ ಆಹಾರ ತಿನ್ನಬೇಕು, ಯಾವುದು ತಿನ್ನಬಾರದು ಎಂಬ ಮಾಹಿತಿ ಇರಲ್ಲ. ಕೆಲ ವೈದ್ಯರು ಇದರ ಬಗ್ಗೆ ಸಲಹೆ ನೀಡುತ್ತಾರೆ, ಆದರೆ ಇನ್ನು ಕೆಲವರು ನೀವು ಕೇಳಿದರೆ ಮಾತ್ರ ಹೇಳುತ್ತಾರೆ. ಆದ್ದರಿಂದ ನೀವು ವೈದ್ಯರ ಬಳಿ ಹೋದಾಗ ನೀವು ನಿಮ್ಮ ಆಹಾರಕ್ರಮ ಹಾಗೂ ನಿಮ್ಮಲ್ಲಿರುವ ಸಂಶಯವನ್ನು ವೈದ್ಯರ ಬಳಿ ಚರ್ಚಿಸಿ.

ಚೊಚ್ಚಲ ಗರ್ಭಧರಿಸಿದಾಗ ಈ ಅಂಶಗಳು ಗಮನದಲ್ಲಿರಲಿ:

ಚೊಚ್ಚಲ ಗರ್ಭಧರಿಸಿದಾಗ ಈ ಅಂಶಗಳು ಗಮನದಲ್ಲಿರಲಿ:

* ಕೆಫೀನ್‌ ಆಹಾರ ಸೇವಿಸಬೇಡಿ, ದೇಹದ ಉಷ್ಣತೆ ಹೆಚ್ಚಿಸುವ ಆಹಾರ ಸೇವಿಸಬೇಡಿ

ಮೊದಲ ತ್ರೈ ಮಾಸಿಕದಲ್ಲಿ ನೀವು ಕೆಫೀನ್‌ ಆಹಾರ ಸೇವಿಸಬೇಡಿ. ಏಕೆಂದರೆ ಕೆಫೀನ್‌ ಆಹಾರ ತಿಂದರೆ ಹೃದಯ ಬಡಿತ ಹೆಚ್ಚಾಗಬಹುದು, ರಕ್ತದೊತ್ತಡ ಹೆಚ್ಚಾಗಬಹುದು. ಹೀಗೆಲ್ಲಾಆದರೆ ಹೊಟ್ಟೆಯಲ್ಲಿರುವ ಮಗುವಿಗೆ ಅಪಾಯ, ಆದ್ದರಿಂದ ಕೆಫೀನ್ ಪದಾರ್ಥ ಸೇವಿಸಬೇಡಿ, ಅಲ್ಲದೆ ದೇಹದ ಉಷ್ಣತೆ ಹೆಚ್ಚಿಸುವ ಆಹಾರ ಕೂಡ ಸೇವಿಸಬೇಡಿ.

ನಿಯಮಿತ ವ್ಯಾಯಾಮ ಮಾಡಿ

ನಿಯಮಿತ ವ್ಯಾಯಾಮ ಮಾಡಿ

ಕೆಲವರು ಗರ್ಭಿಣಿಯಾದರೆ ಮೈಕೈ ಅಲ್ಲಾಡಬಾರದು ಎಂದು ಭಾವಿಸುತ್ತಾರೆ. ಆದರೆ ಅದು ತಪ್ಪು ನಿಯಮಿತವಾದ ವ್ಯಾಯಾಮ ಮಾಡಿ. ಡ್ಯಾನ್ಸ್, ವಾಕ್ ಎಲ್ಲಾ ಮಾಡಬಹುದು. ಆದರೆ ಜಿಮ್ ವರ್ಕೌಟ್‌, ಯೋಗಾಸನದಲ್ಲಿ ಕೆಲವೊಂದು ಭಂಗಿಗಳನ್ನು ನೀವು ತಜ್ಞರ ಮಾರ್ಗದರ್ಶನವಿಲ್ಲದೆ ಮಾಡಬಾರದು.

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ಮಗುವಿಗೆ ಸಾಕಷ್ಟು ನೀರು ಬೇಕು, ಹೊಟ್ಟೆ ನೀರು ಕಡಿಮೆಯಾದರೆ ತೊಂದರೆಯಾಗುತ್ತೆ. ನೀವು ಜ್ಯೂಸ್‌, ನೀರು ಕುಡಿಯಿರಿ, ತಾಜಾ ಜ್ಯೂಸ್‌ ಮಾತ್ರ ಕುಡಿಯಿರಿ, ಸಕ್ಕರೆ ಹಾಕದೇ ಕುಡಿದರೆ ಒಳ್ಳೆಯದು.

ನಿದ್ದೆ ಮಾಡಿ

ನಿದ್ದೆ ಮಾಡಿ

ಮೊದಲ ತ್ರೈ ಮಾಸಿಕದಲ್ಲಿ ಒಳ್ಳೆಯ ನಿದ್ದೆ ಮಾಡಿ. ಮಧ್ಯಾಹ್ನ ಹೊತ್ತಿನಲ್ಲಿ ಸ್ವಲ್ಪ ಹೊತ್ತು ನಿದ್ದೆ ಮಾಡಿ. ರಾತ್ರಿ ಹೊತ್ತು ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿ. ಹೆಚ್ಚು ಹೊತ್ತು ಮೊಬೈಲ್‌ನಲ್ಲಿ ಸಮಯ ಕಳೆಯಬೇಡಿ.

ಗರ್ಭಧಾರಣೆಯ ಮುನ್ನ ಮಸಾಜ್‌ ಮಾಡಿ

ಗರ್ಭಧಾರಣೆಯ ಮುನ್ನ ಮಸಾಜ್‌ ಮಾಡಿ

ಗರ್ಭಾವಸ್ಥೆಯ ಸಮಯದಲ್ಲಿ ಕೈ-ಕಾಲುಗಳಲ್ಲಿ ಊತ ಕಂಡು ಬರುತ್ತದೆ. ಆಗ ಲೈಟ್‌ ಮಸಾಜ್‌ ಮಾಡಿಸಿದರೆ ಊತ ಕಡಿಮೆಯಾಗುವುದು ಹಾಗೂ ರಕ್ತ ಸಂಚಾರ ಚೆನ್ನಾಗಿರುತ್ತದೆ. ಆದರೆ ನೀವೇ ಮಸಾಜ್ ಮಾಡಬೇಡಿ, ಪಾರ್ಲರ್‌ಗೆ ಹೋಗಿಯೂ ಮಾಡಿಸಬೇಡಿ, ಅನುಭವಸ್ಥರ ಬಳಿಯಿಂದ ಅಷ್ಟೇ ಮಾಡಿಸಿ. ಏಕೆಂದರೆ ಗರ್ಭಿಣಿಯ ಮೈಗೆ ತುಂಬಾ ಒತ್ತಡ ಕೂಡ ಬೀಳಬಾರದು.

ಸ್ತನ ಮಸಾಜ್ ಮಾಡಿ

ಸ್ತನ ಮಸಾಜ್ ಮಾಡಿ

ಮಗುವಾದ ಬಳಿಕ ನವಜಾತ ಶಿಶು ಮಗು ಹಾಲನ್ನು ಸರಾಗವಾಗಿ ಕುಡಿಯಲು ನೀವು ಗರ್ಭಿಣಿಯಾಗಿದ್ದಾಗಲೇಆ ಸ್ತನಕ್ಕೆ ಮಸಾಜ್‌ ಮಾಡುವುದು ಒಳ್ಳೆಯದು, ಮೊಲೆ ತೊಟ್ಟುಗಳನ್ನು ಎಳೆದು ಮಗುವಿಗೆ ಕುಡಿಯಲು ಅನುಕೂಲವಾಗುವಂತೆ ಸಿದ್ಧ ಮಾಡಿ, ಇಲ್ಲಾಂದರೆ ಮಗುವಾದ ಮೇಲೆ ಸಿರೆಂಜ್‌ ಹಾಕಿ ಎಳೆಯಬೇಕಾಗುತ್ತದೆ, ಅದು ತುಂಬಾ ನೋವು ಕೊಡುತ್ತೆ, ಬದಲಿಗೆ ಗರ್ಭಿಣಿಯಾಗಿರುವಾಗ ಸ್ತನಕ್ಕೆ ಮಸಾಜ್‌ ಮಾಡಿ.

ನಿಯಮಿತ ಚೆಕಪ್‌ ಮಾಡಿಸಿ

ನಿಯಮಿತ ಚೆಕಪ್‌ ಮಾಡಿಸಿ

ನೀವು ನಿಯಮಿತವಾಗಿ ಚೆಕಪ್ ಮಾಡಿಸಿ ಹಾಗೂ ವೈದ್ಯರು ನೀಡಿರುವ ವಿಟಮಿನ್‌ ಸಪ್ಲಿಮೆಂಟ್ಸ್ ನಿಯಮಿತವಾಗಿ ತೆಗೆದುಕೊಳ್ಳಿ. ಕೆಲವರು ಸಪ್ಲಿಮೆಂಟ್‌ ತೆಗೆದುಕೊಳ್ಳುವುದಿಲ್ಲ, ಹಾಗೇ ಮಾಡಬೇಡಿ, ಮಗುವಿನ ದೈಹಿಕ ಆರೋಗ್ಯಕ್ಕೆ, ಮಗುವಿನಲ್ಲಿ ಯಾವುದೇ ದೈಹಿಕ ನ್ಯೂನತೆ ಉಂಟಾಗದಿರಲು ಈ ಸಪ್ಲಿಮೆಂಟ್ಸ್ ಅವಶ್ಯಕವಾಗಿದೆ.

ಪೋಷಕಾಂಶವಿರುವ ಆಹಾರ ಸೇವಿಸಿ

ಪೋಷಕಾಂಶವಿರುವ ಆಹಾರ ಸೇವಿಸಿ

ಕೆಲವರಿಗೆ ವಾಂತಿ ಸಮಸ್ಯೆ ಇರುತ್ತೆ, ಹಾಗಂತ ಪೋಷಕಾಂಶವಿರುವ ಆಹಾರ ಸೇವಿಸದಿರಬೇಡಿ, ಎಷ್ಟು ಬಾರಿ ವಾಂತಿಯಾಗುತ್ತೆ ಎಂದು ತಲೆ ಕೆಡಿಸಿಕೊಳ್ಳದೆ ಪೋಷಕಾಂಶದ ಆಹಾರದ ಕಡೆ ಗಮನ ನೀಡಿ, ಮಗುವಿನ ಬೆಳವಣಿಗೆ ಚೆನ್ನಾಗಿ ಆಗಲು ಪೋಷಕಾಂಶವಿರುವ ಆಹಾರ ಸೇವಿಸುವುದು ಮುಖ್ಯವಾಗಿದೆ.

ಶಾಪಿಂಗ್‌ ಮಾಡಿ

ಕೂಸು ಹುಟ್ಟುವ ಮುನ್ನ ತೊಟ್ಟಿಲು ಕಟ್ಟಬಾರದು ಎಂಬುವುದು ಹಲವರ ನಂಬಿಕೆ, ಆದರೆ ಹೆರಿಗೆಗೆ ಮುನ್ನ ನೀವು ಕೆಲವೊಂದು ಅವಶ್ಯಕ ವಸ್ತುಗಳನ್ನು ಶಾಪಿಂಗ್‌ ಮಾಡಬೇಕು. ಮಗುವಿಗೆ ಬೇಕಾದ ಡಯಾಪರ್, ಬಟ್ಟೆ, ಬೆಡ್‌, ನಿಮ್ಮ ಮೆಟರ್ನಿಟಿ ಡ್ರೆಸ್‌ಗಳು ಎಲ್ಲವನ್ನು ಮೊದಲೇ ಖರೀದಿಸಿ.

English summary

First-Time Pregnancy: Tips New Moms Should Follow in kannada

First-Time Pregnancy: Tips New Moms Should Follow in kannada, read on....
X
Desktop Bottom Promotion