For Quick Alerts
ALLOW NOTIFICATIONS  
For Daily Alerts

ತುರ್ತು ಗರ್ಭನಿರೋಧಕ: ಯಾವಾಗ ಬಳಸಬಹುದು, ಎಷ್ಟು ಪರಿಣಾಮಕಾರಿ?

|

ಯಾವುದೇ ಗರ್ಭನಿರೋಧಕ ಸುರಕ್ಷಿತಾ ವಿಧಾನಗಳನ್ನು ಅನುಸರಿಸದೆ ಮಿಲನ ಕ್ರಿಯೆ ನಡೆಸಿದಾಗ, ಇದರಿಂದ ಗರ್ಭಧಾರಣೆಯಾಗಬಹುದು ಎಂಬ ಭಯವಿದ್ದಾಗ ಗರ್ಭಧಾರಣೆ ತಡೆಗಟ್ಟಲು ಎಮೆರ್ಜೆನ್ಸಿ ಕಾಂಟ್ರಾಸೆಪ್ಷನ್ ಅಂದರೆ ತುರ್ತು ಗರ್ಭನಿರೋಧಕ ತೆಗೆದುಕೊಳ್ಳುವುದು ಸೂಕ್ತ.

ಇದನ್ನು ಮಿಲನ ಕ್ರಿಯೆ ನಡೆದ 5 ದಿನದ ಒಳಗಾಗಿ ಬಳಸಬೇಕು, ಈ ಗರ್ಭನಿರೋಧಕ ವಿಧಾನದಿಂದ ಶೇ. 95ರಷ್ಟು ಗರ್ಭಧಾರಣೆಯಾಗುವುದನ್ನು ತಡೆಗಟ್ಟಬಹುದು. ನಾವಿಲ್ಲಿ ತುರ್ತು ಗರ್ಭನಿರೋಧಕದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದೇವೆ ನೋಡಿ.

ಪ್ರಶ್ನೆ: ತುರ್ತು ಗರ್ಭನಿರೋಧಕ ಕ್ರಮ (emergency contraception) ಎಂದರೇನು?

ಪ್ರಶ್ನೆ: ತುರ್ತು ಗರ್ಭನಿರೋಧಕ ಕ್ರಮ (emergency contraception) ಎಂದರೇನು?

ಉತ್ತರ: ತುರ್ತು ಗರ್ಭನಿರೋಧಕ ಕ್ರಮವನ್ನು ಸಮಾಗಮದ ಬಳಿಕ ನಿರ್ವಹಿಸುವ ಗರ್ಭ ನಿರೋಧಕ ಕ್ರಮ ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ ಅಸುರಕ್ಷಿತ ಮಿಲನ ಹೊಂದಿದ ಬಳಿಕ ಮಹಿಳೆಯರು ಕೈಗೊಳ್ಳುವ ವಿಧಾನಗಳು ಅಥವಾ ಬೇರಾವುದೋ ಗರ್ಭ ನಿರೋಧಕ ಕ್ರಮ ಕೈಗೊಂಡಿದ್ದು ಅಸಫಲವಾಗಿದ್ದಾಗ ಕೈಗೊಳ್ಳುವ ಕ್ರಮಗಳಾಗಿವೆ. ಇದರಲ್ಲಿ ಎರಡು ವಿಧಗಳಿವೆ: * ಪ್ಲಾನ್ ಬಿ ಎಂದೂ ಕರೆಯಲ್ಪಡುವ ಗರ್ಭ ನಿರೋಧಕ ಗುಳಿಗೆಗಳ ಸೇವನೆ (I pill, Unwanted 72 , smart 72 ಎಂಬ ಹೆಸರಿನಲ್ಲಿ ದೊರಕುತ್ತದೆ), ಅಥವಾ ಅಸುರಕ್ಷಿತ ಮಿಲನದ ಬಳಿಕ 72 ಘಂಟೆಗಳ ಒಳಗಾಗಿ Levonorgestrel ಎಂಬ ಅಂಶವಿರುವ ಮಾತ್ರೆಯನ್ನು ಸೇವಿಸುವುದು. * IUD - intrauterine contraception devices ಅಥವಾ ಗರ್ಭ ನಿರೋಧಕ ಉಪಕರಣಗಳು. ಇವು ಮಾತ್ರೆಗಳಿಗಿಂತಲೂ ಹೆಚ್ಚು ಸುರಕ್ಷಿತವಾಗಿವೆ ಹಾಗೂ ಅನೈಚ್ಛಿಕ ಗರ್ಭಧಾರಣೆಯನ್ನು ತಡೆಯುತ್ತವೆ. ಇವನ್ನು ಸುಮಾರು ನೂರಿಪ್ಪತ್ತು ಘಂಟೆ ಅಥವಾ ಐದು ದಿನಗಳವರೆಗೆ ಉಪಯೋಗಿಸಬಹುದು.

ಪ್ರಶ್ನೆ: ತುರ್ತು ಗರ್ಭನಿರೋಧಕ ಕ್ರಮದಲ್ಲಿ ಎಷ್ಟು ವಿಧಗಳಿವೆ ?

ಪ್ರಶ್ನೆ: ತುರ್ತು ಗರ್ಭನಿರೋಧಕ ಕ್ರಮದಲ್ಲಿ ಎಷ್ಟು ವಿಧಗಳಿವೆ ?

ಉತ್ತರ: ಲಭ್ಯವಿರುವ ಆಯ್ಕೆಗಳೆಂದರೆ: LNG ಇರುವ ECPಗಳು (Emergency Contraceptive Pill ಅಥವಾ ತುರ್ತು ಗರ್ಭ ನಿರೋಧಕ ಗುಳಿಗೆಗಳು); ಬಾಯಿಯ ಮೂಲಕ ಸೇವಿಸಬಹುದಾದ ಸಂಯುಕ್ತ ಗರ್ಭನಿರೋಧಕ ಗುಳಿಗೆಗಳು, ಕಾಪರ್-ಬೇರಿಂಗ್ ಗರ್ಭ ನಿರೋಧಕ ಉಪಕರಣಗಳು (ಕಾಪರ್ ಟಿ)

ಪ್ರಶ್ನೆ: ಇವನ್ನು ನಿಯಮಿತ ಗರ್ಭ ನಿರೋಧಕವಾಗಿ ಬಳಸಬಹುದೇ?

ಉತ್ತರ: ಇವನ್ನು ನಿಯಮಿತ ರೂಪದಲ್ಲಿ ಅಳವಡಿಸಲು ಸಾಧ್ಯವಿಲ್ಲ. ಈ ವಿಧಾನಗಳು ಕೆಲವು ವಿಶಿಷ್ಟ ಸಂದರ್ಭಗಳಿಗೆ ಮಾತ್ರವೇ ಅನ್ವಯವಾಗುತ್ತವೆ.

ಪ್ರಶ್ನೆ: ಯಾವ ತುರ್ತು ಸಂದರ್ಭಗಳಲ್ಲಿ ಅನ್ವಯವಾಗುತ್ತವೆ ಮತ್ತು ಬಳಸಬಹುದು?

ಉತ್ತರ: ತುರ್ತು ಗರ್ಭನಿರೋಧಕ ಕ್ರಮವನ್ನು ಮಿಲನದ ಬಳಿಕ ಎದುರಾಗುವ ಕೆಲವು ಸಂದರ್ಭಗಳಲ್ಲಿ ಬಳಸಬಹುದು: ಗರ್ಭ ನಿರೋಧಕ ಕ್ರಮಗಳನ್ನು ಅನುಸರಿಸದೇ ಇದ್ದಲ್ಲಿ, ಲೈಂಗಿಕ ಅಪರಾಧದ ಮೂಲಕ, ಅದರಲ್ಲೂ ಮಹಿಳೆ ಯಾವುದೇ ಗರ್ಭ ನಿರೋಧಕ ಕ್ರಮ ಕೈಗೊಂಡಿರದೇ ಇದ್ದಲ್ಲಿ; ಬಳಸಿದ ವಿಧಾನ ವಿಫಲವಾದ ಸಂದರ್ಭ ಇದ್ದಲ್ಲಿ ಅಥವಾ ಯಾವುದೋ ಕ್ರಮವನ್ನು ತಪ್ಪಾಗಿ ಅಥವಾ ಸರಿಯಲ್ಲದ ಕ್ರಮದಲ್ಲಿ ನಿರ್ವಹಿಸಿದ್ದಾಗ ಇದು ಅನ್ವಯವಾಗುತ್ತದೆ.

ಪ್ರಶ್ನೆ: ಈ ವಿಧಾನ ಗರ್ಭಪಾತಕ್ಕೆ ಬಳಸಬಹುದೇ?

ಪ್ರಶ್ನೆ: ಈ ವಿಧಾನ ಗರ್ಭಪಾತಕ್ಕೆ ಬಳಸಬಹುದೇ?

ಉತ್ತರ: ಈ ವಿಧಾನ ಗರ್ಭಧಾರಣೆಯನ್ನು ತಡೆಗಟ್ಟುವುದೇ ಹೊರತು ಕೊನೆಗೊಳಿಸುವುದಲ್ಲ

ಪ್ರಶ್ನೆ: ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?

ಉತ್ತರ: ತುರ್ತು ಗರ್ಭನಿರೋಧಕ ಕ್ರಮದಲ್ಲಿ ಅಂಡೋತ್ಪನ್ನಿಯನ್ನು ತಡವಾಗಿಸುವ ಮೂಲಕ ಗರ್ಭಧಾರಣೆಯಾಗದಂತೆ ಮಾಡಲಾಗುತ್ತದೆ ಹಾಗೂ ಇದು ಗರ್ಭಪಾತಕ್ಕೆ ಕಾರಣವಾಗುವುದಿಲ್ಲ. ಕಾಪರ್ ಟಿ ವಿಧಾನದಲ್ಲಿ ಅಂಡಾಣು ಮತ್ತು ವೀರ್ಯಾಣುಗಳ ಮಿಲನವಾಗುವ ಭಾಗದಲ್ಲಿ ರಾಸಾಯನಿಕ ವಾತಾವರಣ ಮೂಡಿಸಿ ಮಿಲನ ಸಾಧ್ಯವಾಗದಂತೆ ತಡೆಯುತ್ತದೆ. ಆದರೆ, ಈಗಾಗಲೇ ಮಿಲನವಾಗಿದ್ದರೆ ಇದರ ಬೆಳವಣಿಗೆಯನ್ನು ತಡೆಯುವುದಿಲ್ಲ ಅಥವಾ ಭ್ರೂಣಕ್ಕೆ ಅಪಾಯಕಾರಿಯಲ್ಲ.

ಪ್ರಶ್ನೆ: ತುರ್ತು ಗರ್ಭನಿರೋಧಕ ಕ್ರಮವನ್ನು ಯಾರು ಬಳಸಬಹುದು?

ಉತ್ತರ: ಗರ್ಭಧಾರಣೆಯ ವಯಸ್ಸಿಯ ಯಾವುದೇ ಯುವತಿ ಅಥವಾ ಮಹಿಳೆಗೆ ಅನೈಚ್ಛಿಕ ಗರ್ಭಧಾರಣೆಯನ್ನು ತಡೆಯಲು ತುರ್ತು ಗರ್ಭನಿರೋಧಕ ಕ್ರಮದ ಅಗತ್ಯ ಎದುರಾಗಬಹುದು. ಇದನ್ನು ಬಳಸಲೇಬಾರದು ಎಂಬಂತಹ ವೈದ್ಯಕೀಯ ಪರಿಸ್ಥಿತಿಯ ಹೊರತಾಗಿ ಈ ವಿಧಾನವನ್ನು ಗರ್ಭಧಾರಣೆಯ ವಯಸ್ಸಿಯ ಯಾವುದೇ ಯುವತಿ ಅಥವಾ ಮಹಿಳೆ ಬಳಸಬಹುದು. ವಯಸ್ಸಿನ ಮಿತಿಯೂ ಇಲ್ಲ. ಕಾಪರ್ ಟಿ ಬಳಕೆಗೂ ಸಾಮಾನ್ಯ ಆರೋಗ್ಯದ ಅರ್ಹತೆಯೇ ಸಾಕಾಗುತ್ತದೆ.

ಪ್ರಶ್ನೆ: ತುರ್ತು ಗರ್ಭನಿರೋಧಕ ಕ್ರಮಗಳನ್ನು ಬಳಸುವ ಸಮಯದ ಮಿತಿಗಳೇನು?

ಪ್ರಶ್ನೆ: ತುರ್ತು ಗರ್ಭನಿರೋಧಕ ಕ್ರಮಗಳನ್ನು ಬಳಸುವ ಸಮಯದ ಮಿತಿಗಳೇನು?

ಉತ್ತರ: * ಗುಳಿಗೆಗಳು - 72 ಘಂಟೆಗಳ ಒಳಗಾಗಿ

* IUD -- 120 ಘಂಟೆಗಳ ಒಳಗಾಗಿ

ಪ್ರಶ್ನೆ: ತುರ್ತು ಗರ್ಭನಿರೋಧಕ ಕ್ರಮಗಳು ಎಷ್ಟು ಮಟ್ಟಿಗೆ ಫಲಕಾರಿ?

ಉತ್ತರ: ಅಧ್ಯಯನಗಳ ಪ್ರಕಾರ LNG ಇರುವ ECPಗಳಿಂದ ಸುಮಾರು 1.2 ರಿಂದ 2.1 ಶೇಖಡಾದಷ್ಟು ಪ್ರಕರಣಗಳಲ್ಲಿ ಗರ್ಭಧಾರಣೆಯಾಗಿರುವುದು ಕಂಡುಬಂದಿದೆ. ನಿಜವಾಗಿ ಹೇಳಬೇಕೆಂದರೆ ಗುಳಿಗೆಗಳನ್ನು ಮಿಲನದ ಬಳಿಕ ಆದಷ್ಟೂ ಬೇಗ ಸೇವಿಸಬೇಕು. ತಡವಾದಷ್ಟೂ ಗರ್ಭಧಾರಣೆಯ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ. ಕಾಪರ್ ಟಿ ಅಥವಾ IUD ಗಳನ್ನು ಅಸುರಕ್ಷಿತ ಮಿಲನದ 120 ಒಳಗಾಗಿ ಧರಿಸಿದರೆ ಇದರ ಯಶಸ್ಸು 99 ಶೇಖಡಾದಷ್ಟಿರುತ್ತದೆ.

ಪ್ರಶ್ನೆ: ಈ ಕ್ರಮಗಳು ಎಷ್ಟು ಸುರಕ್ಷಿತವಾಗಿವೆ ?

ಪ್ರಶ್ನೆ: ಈ ಕ್ರಮಗಳು ಎಷ್ಟು ಸುರಕ್ಷಿತವಾಗಿವೆ ?

ಉತ್ತರ: ತುರ್ತು ಗರ್ಭನಿರೋಧಕ ಗುಳಿಗೆಗಳಿಂದ ಎದುರಾಗುವ ಅಡ್ಡ ಪರಿಣಾಮಗಳು ಬಾಯಿಯಿಂದ ಸೇವಿಸುವ ಗುಳಿಗೆಗಳ ಅಡ್ಡ ಪರಿಣಾಮಗಳ ತರಹವೇ ಇರುತ್ತವೆ. ವಾಕರಿಕೆ, ವಾಂತಿ, ಕೊಂಚ ಅಸಹಜ ಜನನಾಂಗದ ಸ್ರಾವ, ಸುಸ್ತು ಇತ್ಯಾದಿ. ಆದರೆ ಇವು ಅತಿ ಎನಿಸುವಷ್ಟು ಗಂಭೀರವೇನೂ ಇರುವುದಿಲ್ಲ. ಸಾಮಾನ್ಯ ಔಷಧಿಗಳ ಮೂಲಕ ಇವು ಸರಿಹೋಗುತ್ತವೆ. ಕಾಪರ್ ಟೀ ಅಥವಾ ಉಪಕರಣಗಳು ಹೆಚ್ಚು ಸುರಕ್ಷಿತವಾಗಿವೆ.

ಪ್ರಶ್ನೆ: ತುರ್ತು ಗರ್ಭನಿರೋಧಕ ಗುಳಿಗೆ ಸೇವಿಸಿದ ತಕ್ಷಣ ವಾಂತಿಯಾದರೆ?

ಪ್ರಶ್ನೆ: ತುರ್ತು ಗರ್ಭನಿರೋಧಕ ಗುಳಿಗೆ ಸೇವಿಸಿದ ತಕ್ಷಣ ವಾಂತಿಯಾದರೆ?

ಉತ್ತರ: ಮಾತ್ರೆ ಸೇವಿಸಿದ ಎರಡು ಘಂಟೆಗಳ ಒಳಗಾಗಿ ವಾಂತಿಯಾದರೆ, ಈ ಗುಳಿಗೆಯನ್ನು ಮತ್ತೊಮ್ಮೆ ಸೇವಿಸಬೇಕು.

ಪ್ರಶ್ನೆ: ಈ ಕ್ರಮದಿಂದ ಫಲವತ್ತತೆ ಕುಂದುತ್ತದೆಯೇ ?

ಉತ್ತರ: ಈ ವಿಧಾನಗಳಿಂದ ಫಲವತ್ತತೆ ಕುಂದುವುದಿಲ್ಲ. ಈ ಕ್ರಮಗಳನ್ನು ನಿಲ್ಲಿಸಿದ ಬಳಿಕ ಮತ್ತೊಮ್ಮೆ ಗರ್ಭಧಾರಣೆ ಸಾಧ್ಯವಿದೆ.

ಪ್ರಶ್ನೆ: ಈ ಕ್ರಮ ಸ್ಥೂಲದೇಹಿ ಮಹಿಳೆಯರಿಗೂ ಸೂಕ್ತವೇ?

ಉತ್ತರ: ತುರ್ತು ಗರ್ಭನಿರೋಧಕ ಕ್ರಮಗಳು ಸ್ಥೂಲದೇಹಿ ಮಹಿಳೆಯರಲ್ಲಿ ಕಡಿಮೆ ಫಲಕಾರಿಯಾಗಿರುವುದು ಕಂಡುಬಂದಿದೆ. (30 kg/m2 ಗಿಂತಲೂ ಹೆಚ್ಚು ಬಿಎಂಐ ಅಥವಾ ಎತ್ತರಕ್ಕೆ ತಕ್ಕ ತೂಕ ಇರುವವರಲ್ಲಿ). ಆದರೆ ಸುರಕ್ಷತೆಯ ವಿಷಯದಲ್ಲಿ ಇವುಗಳಿಂದ ಏನೂ ತೊಂದರೆ ಇಲ್ಲ. ಈ ಮಹಿಳೆಯರಿಗೂ ಈ ಕ್ರಮಗಳು ಬೇಕು ಎನಿಸಿದಾಗ ಇದನ್ನು ನಿರಾಕರಿಸುವಂತಿಲ್ಲ.

ಪ್ರಶ್ನೆ: ಇದು ಲೈಂಗಿಕ ರೋಗಗಳ ವಿರುದ್ದ ರಕ್ಷಣೆ ನೀಡುತ್ತದೆಯೇ?

ಪ್ರಶ್ನೆ: ಇದು ಲೈಂಗಿಕ ರೋಗಗಳ ವಿರುದ್ದ ರಕ್ಷಣೆ ನೀಡುತ್ತದೆಯೇ?

ಉತ್ತರ: ಇಲ್ಲ, ಲೈಂಗಿಕ ರೋಗಗಳ ವಿರುದ್ದ ರಕ್ಷಣೆ ದೊರಕಲಾರದು.

ಪ್ರಶ್ನೆ: ಇದು ಒಂದೇ ಮಾಸಿಕ ಚಕ್ರದಲ್ಲಿ ಮತ್ತೊಮ್ಮೆ ರಕ್ಷಿಸಬಲ್ಲುದೇ?

ಉತ್ತರ: ಒಂದೇ ಮಾಸಿಕ ಚಕ್ರದಲ್ಲಿ ಅಸುರಕ್ಷಿತ ಮಿಲನವನ್ನು ಮತ್ತೊಮ್ಮೆ ನಿರ್ವಹಿಸಿದರೆ ಈ ಕ್ರಮ ಸುರಕ್ಷತೆ ನೀಡಲಾರದು. ಇದಕ್ಕಾಗಿ ಕಾಂಡಮ್ಮುಗಳು ಅಥವಾ ಬೇರೆ ವಿಧಾನಗಳನ್ನು ಅನುಸರಿಸಬೇಕು.

ಪ್ರಶ್ನೆ: ಈಗಾಗಲೇ ಮಹಿಳೆ ಗರ್ಭವತಿಯಾಗಿದ್ದರೆ ಈ ವಿಧಾನವನ್ನು ಬಳಸಿದರೆ ಏನಾಗುತ್ತದೆ?

ಉತ್ತರ: ಈಗಾಗಲೇ ಗರ್ಭಧಾರಣೆಯಾಗಿದ್ದರೆ Levonorgestrel ಈ ಗರ್ಭಧಾರಣೆಯ ಮೇಲೆ ಪ್ರಭಾವ ಬೀರುವುದಿಲ್ಲ.

English summary

Emergency contraception Common Questions And Answers In Kannada

Emergency contraception Common Questions And Answers In Kannada...
X
Desktop Bottom Promotion