For Quick Alerts
ALLOW NOTIFICATIONS  
For Daily Alerts

ಎಕ್ಟೋಪಿಕ್ ಪ್ರೆಗ್ನೆನ್ಸಿ: ಗರ್ಭಕೋಶದ ಹೊರಗಡೆ ಬೆಳೆಯುವ ಮಗು ಉಳಿಯುವುದೇ?

|

ಕೆಲವರಿಗೆ ಎಕ್ಟೋಪಿಕ್‌ ಪ್ರೆಗ್ನೆನ್ಸಿ ಉಂಟಾಗುವುದು. ಎಕ್ಟೋಪಿಕ್‌ ಪ್ರೆಗ್ನೆನ್ಸಿ ಎಂದರೆ ಗರ್ಭಕೋಶದಿಂದ ಹೊರಗಡೆ ಭ್ರೂಣದ ಬೆಳವಣಿಗೆಯಾಗುವುದು. ಈ ರೀತಿಯಾದರೆ ಗರ್ಭಿಣಿಯ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಇದೆ.

ಯಾವಾಗ ಫಲವತ್ತತೆಯ ಅಂಡಾಣು ಗರ್ಭಾಕೋಶದ ಹೊರಗಡೆ ಇದ್ದಾಗ ಈ ರೀತಿ ಎಕ್ಟೋಪಿಕ್‌ ಪ್ರೆಗ್ನೆನ್ಸಿ ಉಂಟಾಗುವುದು. ಸಾಮಾನ್ಯವಾಗಿ ಫಲವತ್ತತೆಯ ಅಂಡಾಣು ಗರ್ಭಕೋಶದ ಒಳಗಡೆ ಬೆಳೆದು ಮಗುವಿನ ರೂಪ ತಾಳುತ್ತಿದೆ. ಆದರೆ ಈ ಕೇಸ್‌ನಲ್ಲಿ ಇದು ಗರ್ಭಕೋಶದ ಹೊರಗಡೆ ಬೆಳೆಯುವುದರಿಂದ ಭ್ರೂಣ ಬೆಳೆಯುತ್ತಿದ್ದಂತೆ ಗರ್ಭಿಣಿಯ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚು.

ಆದ್ದರಿಂದ ಈ ರೀತಿ ಗರ್ಭಧಾರಣೆಯಾದಾಗ ಅದನ್ನು ತೆಗೆಯಬೇಕಾಗುತ್ತದೆ ಅಥವಾ ಕರಗಿಸಬೇಕಾಗುತ್ತದೆ, ಇಲ್ಲದಿದ್ದರೆ ಆ ಗರ್ಭಧಾರಣೆ ತುಂಬಾ ಕಷ್ಟಕರವಾಗುವುದು. ಈ ಎಕ್ಟೋಪಿಕ್ ಪ್ರೆಗ್ನೆನ್ಸಿ ಕುರಿತು ಮತ್ತಷ್ಟು ಮಾಹಿತಿ ಇಲ್ಲಿದೆ:

ಎಕ್ಟೋಪಿಕ್‌ ಪ್ರೆಗ್ನೆನ್ಸಿಯಲ್ಲಿ ಭ್ರೂಣ ಎಲ್ಲಿ ಬೆಳೆಯುತ್ತದೆ?

ಎಕ್ಟೋಪಿಕ್‌ ಪ್ರೆಗ್ನೆನ್ಸಿಯಲ್ಲಿ ಭ್ರೂಣ ಎಲ್ಲಿ ಬೆಳೆಯುತ್ತದೆ?

ಗರ್ಭಕೋಶದಿಂದ ಹೊರಗಡೆ ಬೆಳೆಯುವ ಭ್ರೂಣ ಫಾಲೋಪಿಯನ್‌ ಟ್ಯೂಬ್‌ ,ಅಂಡಾಶಯ, ಗರ್ಭಕಂಠ, ಅಥವಾ ಕಿಬ್ಬೊಟ್ಟೆಯಲ್ಲಿ ಬೆಳೆಯಬಹುದು.

ಆದರೆ ಈ ರೀತಿಯ ಪ್ರೆಗ್ನೆನ್ಸಿ ಸಾಮಾನ್ಯವಾಗಿ ಫಾಲೋಪಿಯನ್‌ ಟ್ಯೂಬ್‌ನಲ್ಲಿ ಕಂಡು ಬರುತ್ತದೆ.

ಎಕ್ಟೋಪಿಕ್‌ ಪ್ರೆಗ್ನೆನ್ಸಿ ಹೇಗೆ ಉಂಟಾಗುತ್ತದೆ?

ಎಕ್ಟೋಪಿಕ್‌ ಪ್ರೆಗ್ನೆನ್ಸಿ ಹೇಗೆ ಉಂಟಾಗುತ್ತದೆ?

ಫಾಲೋಪಿಯನ್‌ ಟ್ಯೂಬ್‌ ಬ್ಲಾಕ್‌ ಆಗಿದ್ದರೆ ಫಲವತ್ತತೆಯ ಅಂಡಾಣು ಗರ್ಭಕೋಶದ ಒಳಗಡೆ ಹೋಗದೆ ಆ ಟ್ಯೂಬ್‌ನಲ್ಲಿಯೇ ಉಳಿದು ಅಲ್ಲಿ ಬೆಳೆಯಲಾರಂಭಿಸುತ್ತದೆ. ಇನ್‌ಫೆಕ್ಷನ್‌ ಅಥವಾ ಉರಿಯೂತದಿಂದಾಗಿ ಈ ರೀತಿ ಫಾಲೋಪಿಯನ್ ಟ್ಯೂಬ್‌ ಬ್ಲಾಕ್ ಆಗುತ್ತದೆ. ಈ ಟ್ಯೂಬ್ ನಲ್ಲಿ ಬ್ಲಾಕ್‌ ಸರ್ಜರಿ ಅಥವಾ ಕಿಬ್ಬೊಟ್ಟೆಯ ಸರ್ಜರಿ ಮಾಡಿದಾಗ ನರಕ್ಕೆ ಪೆಟ್ಟಾದಾಗ ಕೂಡ ಉಟಾಗುವುದು.

ಯಾವಾಗ ಎಕ್ಟೋಪಿಕ್ ಪ್ರೆಗ್ನೆನ್ಸಿ ಉಂಟಾಗುವುದು?

ಯಾವಾಗ ಎಕ್ಟೋಪಿಕ್ ಪ್ರೆಗ್ನೆನ್ಸಿ ಉಂಟಾಗುವುದು?

1. ಈ ಮೊದಲು ಎಕ್ಟೋಪಿಕ್‌ ಪ್ರೆಗ್ನೆನ್ಸಿ ಉಂಟಾಗಿದ್ದರೆ

2. ಪೆಲ್ವಿಕ್‌ ಭಾಗದಲ್ಲಿ ಸರ್ಜರಿ ಅಥವಾ ಪೆಲ್ವಿಕ್‌ ಇನ್‌ಫ್ಲೇಮಟರಿ ಕಾಯಿಲೆ ಇರುವ ಮಹಿಳೆಯರಲ್ಲಿ ಈ ರೀತಿಯ ಸಮ್ಯೆ ಉಂಟಾಗುವುದು.

3. ಗರ್ಭಿಣಿ ಟ್ಯೂಬಲ್‌ ರಿಕನ್ಸ್‌ಸ್ಟ್ರಕ್ಷನ್ ಮತ್ತು ರೀಕ್ಯಾನಲೈಸೇಷನ್ ಸರ್ಜರಿ ಮಾಡಿಸಿದ್ದರೆ ಉಂಟಾಗುವ ಸಾಧ್ಯತೆ ಇದೆ.

4. CU T, LNG-IUDನಂಥ ಗರ್ಭನಿರೋಧಕಗಳನ್ನು ತುಂಬಾ ಬಳಸಿದ್ದರೆ

* ಗರ್ಭಧಾರಣೆಗೆ ಸಮಸ್ಯೆಯಾಗಿ ಸಂತಾನೋತ್ಪತ್ತಿ ಚಿಕಿತ್ಸೆ ಪಡೆದಿದ್ದರೆ

* ತುಂಬಾ ಧೂಮಪಾನ ಮಾಡುತ್ತಿದ್ದರೆ

ಎಕ್ಟೋಪಿಕ್‌ ಪ್ರೆಗ್ನೆನ್ಸಿ ಉಂಟಾದಾಗ ಕಂಡು ಬರುವ ಲಕ್ಷಣಗಳು

ಎಕ್ಟೋಪಿಕ್‌ ಪ್ರೆಗ್ನೆನ್ಸಿ ಉಂಟಾದಾಗ ಕಂಡು ಬರುವ ಲಕ್ಷಣಗಳು

1. ಅಸಾಮಾನ್ಯ ರಕ್ತಸ್ರಾವ

2. ತುಂಬಾ ಸೊಂಟನೋವು

3. ಕಿಬ್ಬೊಟ್ಟೆ ಹಾಗೂ ಪೆಲ್ವಿಕ್‌ ಭಾಗದಲ್ಲಿ ನೋವು

4. ಪೆಲ್ವಿಕ್‌ ಭಾಗದಲ್ಲಿ ಬಿಗಿಯಾದ ಅನುಭವ

ಎಕ್ಟೋಪಿಕ್ ಪ್ರೆಗ್ನೆನ್ಸಿ ತುಂಬಾ ರಿಸ್ಕಿ. ಭ್ರೂಣ ಬೆಳೆಯುತ್ತಿದ್ದಂತೆ ಟ್ಯೂಬ್‌ ಒಡೆದು ಒಳಗಡೆ ರಕ್ತಸ್ರಾವವಾಗುವುದು.

 ಎಕ್ಟೋಪಿಕ್‌ ಪ್ರೆಗ್ನೆನ್ಸಿ ನಿರ್ವಹಿಸುವುದು ಹೇಗೆ?

ಎಕ್ಟೋಪಿಕ್‌ ಪ್ರೆಗ್ನೆನ್ಸಿ ನಿರ್ವಹಿಸುವುದು ಹೇಗೆ?

ಎಕ್ಟೋಪಿಕ್‌ ಪ್ರೆಗ್ನೆನ್ಸಿ ತಡೆಗಟ್ಟಲು ಸಾಧ್ಯವಿಲ್ಲದಿದ್ದರೆ ಅದರ ಅಪಾಯವನ್ನು ತಡೆಗಟ್ಟಬಹುದು. ಧೂಮಪಾನ ಮಾಡುತ್ತಿದ್ದರೆ ಗರ್ಭಧಾರಣೆಯ ಮುನ್ನ ಧೂಮಪಾನ ಬಿಡಬೇಕು. ನೀವು ವೈದ್ಯರಿಗೆ ಗರ್ಭಧಾರಣೆಯಾದ ಪ್ರಾರಂಭದಲ್ಲಿಯೇ ತೋರಿಸಬೇಕು, ಆಗ ಏನಾದರೂ ಸಮಸ್ಯೆಯಿದ್ದರೆ ಬೇಗನೆ ಪತ್ತೆಹಚ್ಚಬಹುದು.

ಎಕ್ಟೋಪಿಕ್‌ ಪ್ರೆಗನ್ಸಿ ಅಂತ ತಿಳಿದರೆ ಏನು ಮಾಡಬೇಕು?

ಎಕ್ಟೋಪಿಕ್‌ ಪ್ರೆಗ್ನೆನ್ಸಿಅಮತ ತಿಳಿದು ಬಂದರೆ ಅದನ್ನು ತೆಗಿಸಬೇಕು. ಔಷಧಿ ಅಥವಾ ಸರ್ಜರಿ ಮೂಲಕ ತೆಗೆಯಬಹುದು. ಔಷಧಿ ಭ್ರೂಣದ ಬೆಳವಣಿಗೆಯನ್ನು ತಡೆಗಟ್ಟುತ್ತೆ. ಆ ಎಕ್ಟೋಪಿಕ್ ಟಿಶ್ಯೂ ಅನ್ನು ದೇಹ ಹೀರಿಕೊಳ್ಳುವುದು.. ಈ ರೀತಿ ಪ್ರೆಗ್ನೆನ್ಸಿ ಕಂಡು ಬಂದರೆ ಸಾಮಾನ್ಯವಾಗಿ ಲ್ಯಾಪ್ರೋಸ್ಕೋಪಿ ಮಾಡಿಸಲಾಗುವುದು. ಕೆಲವೊಮ್ಮೆ ಫಾಲೋಪಿಯನ್ ಟ್ಯೂಬ್ ಅಥವಾ ಇತರ ಅಂಗ ಒಡೆದಿದ್ದರೆ ಅದನ್ನು ತೆಗೆಯಬೇಕಾಗುವುದು.

English summary

Ectopic Pregnancy: Signs, Causes, Diagnosis, and Treatment in Kannada

Ectopic Pregnancy: Signs, Causes, Diagnosis, and Treatment in Kannada, Read on...
X
Desktop Bottom Promotion