For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಅರಿಶಿನ ಸೇವನೆಯ ಪ್ರಯೋಜನಗಳು

|

ನಾವು ದಿನನಿತ್ಯ ಅಡುಗೆಯಲ್ಲಿ ಬಳಸುವ ಅರಿಶಿನ ಎಷ್ಟು ಔಷಧೀಯ ಗುಣಗಳನ್ನು, ಆರೋಗ್ಯಕರ ಲಕ್ಷಣಗಳನ್ನು ಹೊಂದಿದೆ ಎಂಬುದು ಶತಶತಮಾನಗಳಿಂದ ಸಾಬೀತಾದ ವಿಷಯ. ಹಾಗಾಗಿ ನಾವೆಲ್ಲರು ತುಸು ಹೆಚ್ಚಾಗಿಯೇ ಅರಿಶಿನವನ್ನು ನಮ್ಮ ಆಹಾರ ಪದಾರ್ಥಗಳಲ್ಲಿ ಅಳವಡಿಸಿಕೊಂಡಿದ್ದೇವೆ.

During Pregnancy Health Benefits of Taking Turmeric

ಗರ್ಭಿಣಿ ಸ್ತ್ರೀಯರಿಗೆ ಕೂಡ ಅರಿಶಿನ ಸಾಕಷ್ಟು ಆರೋಗ್ಯಕರ ಪ್ರಯೋಜನವನ್ನು ನೀಡುತ್ತದೆ. ಅರಿಶಿನವು, ಮ್ಯಾಂಗನೀಸ್, ಪೊಟ್ಯಾಸಿಯಮ್, ಕಬ್ಬಿಣದಂತಹ ಖನಿಜಗಳಿಂದ ಸಮೃದ್ಧವಾಗಿದೆ ಮತ್ತು ವಿಟಮಿನ್ ಬಿ 6 ಮತ್ತು ವಿಟಮಿನ್ ಸಿ ಯಂತಹ ವಿಟಮಿನ್ ಗಳನ್ನು ಕೂಡ ಯಥೇಚ್ಛವಾಗಿ ಹೊಂದಿದೆ. ಅರಿಶಿನವನ್ನು ಸಾವಿರಾರು ವರ್ಷಗಳಿಂದ ಅದರ ಔಷಧೀಯ ಗುಣಗಳಿಗಾಗಿ ಬಳಸುತ್ತಾ ಬರಲಾಗಿದೆ.

ಆದರೆ ಗರ್ಭಾವಸ್ಥೆಯಲ್ಲಿ, ಮಹಿಳೆಯರು ಅವರು ಸೇವಿಸುವ ಎಲ್ಲ ವಿಷಯದ ಜಾಗೃತರಾಗಿರಬೇಕು. ಅರಿಶಿನವನ್ನು ಮೌಖಿಕ ಅಂದರೆ ನೇರವಾಗಿ ಸೇವಿಸುವುದನ್ನು ಸಾಮಾನ್ಯವಾಗಿ ಸೂಚಿಸಲಾಗುವುದಿಲ್ಲ. ಆದಾಗ್ಯೂ, ಹಾಲಿನೊಂದಿಗೆ ಸಂಯೋಜಿಸಿ ಕುಡಿಯುವ ಮೂಲಕ, ಅರಿಶಿನವು ಗರ್ಭಾವಸ್ಥೆಯಲ್ಲಿ ವಿವಿಧ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ-

ಕೀಲು ನೋವಿಗೆ ಚಿಕಿತ್ಸೆ ನೀಡುತ್ತದೆ

ಕೀಲು ನೋವಿಗೆ ಚಿಕಿತ್ಸೆ ನೀಡುತ್ತದೆ

ಉರಿಯೂತ ನಿವಾರಿಸುವ ಔಷಧಿಯ ಗುಣಲಕ್ಷಣಗಳಿಂದಾಗಿ, ಅರಿಶಿನ ಹಾಲು ನೋವುಗಳಿಂದ ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತದೆ.

ಮಲಬದ್ಧತೆಯನ್ನು ತಡೆಯುತ್ತದೆ

ಮಲಬದ್ಧತೆಯನ್ನು ತಡೆಯುತ್ತದೆ

ಕರುಳಿನ ಚಲನೆಯನ್ನು ಹೆಚ್ಚಿಸಲು ಮತ್ತು ಮಲಬದ್ಧತೆಯನ್ನು ತಡೆಯುವಲ್ಲಿ ಅರಿಶಿನವು ಚೆನ್ನಾಗಿ ಕೆಲಸ ಮಾಡುತ್ತದೆ.

ಕೊಲೆಸ್ಟ್ರಾಲ್ (ಕೊಬ್ಬು) ಮಟ್ಟವನ್ನು ನಿಯಂತ್ರಿಸುತ್ತದೆ

ಕೊಲೆಸ್ಟ್ರಾಲ್ (ಕೊಬ್ಬು) ಮಟ್ಟವನ್ನು ನಿಯಂತ್ರಿಸುತ್ತದೆ

ಗರ್ಭಾವಸ್ಥೆಯಲ್ಲಿ, ಕೊಲೆಸ್ಟ್ರಾಲ್ ಮಟ್ಟವು ಏರಿಳಿತಗೊಳ್ಳುವುದು ಸಾಮಾನ್ಯವಾಗಿದೆ. ಅರಿಶಿನ ಹಾಲು ಆರೋಗ್ಯಕರ ರಕ್ತದ ಕೊಲೆಸ್ಟ್ರಾಲ್ ಅನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಅರಿಶಿನ ಹಾಲು, ಉತ್ಕರ್ಷಣ ನಿರೋಧಕ (ಆಂಟಿಆಕ್ಸಿಡೆಂಟ್) ಗಳಿಂದ ತುಂಬಿರುತ್ತದೆ. ಇದು ದೇಹದಿಂದ ಸ್ವತಂತ್ರ ರಾಡಿಕಲ್ ಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ಸೌಮ್ಯವಾದ ಸೋಂಕುಗಳನ್ನು ದೂರವಿಡುತ್ತದೆ.

ರಕ್ತವನ್ನು ಶುದ್ಧೀಕರಿಸುತ್ತದೆ

ರಕ್ತವನ್ನು ಶುದ್ಧೀಕರಿಸುತ್ತದೆ

ಅರಿಶಿನ ಹಾಲು ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ರಕ್ತದ ಹರಿವನ್ನು ಸುಧಾರಿಸುತ್ತದೆ. ಇದು ವಾಕರಿಕೆ ಮತ್ತು ತಲೆತಿರುಗುವಿಕೆಯನ್ನು ತಡೆಯುತ್ತದೆ.

English summary

Health Benefits of Turmeric During Pregnancy

Here we are discussing about During Pregnancy Health Benefits of Taking Turmeric. during pregnancy, one must be conscious of everything they consume. It is generally not advised to take turmeric as an oral supplement. Read more.
X
Desktop Bottom Promotion