For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಗರ್ಭಿಣಿಯರ ಆಹಾರ ಕ್ರಮ ಹೀಗಿದ್ದರೆ ಉತ್ತಮ

|

ಮಳೆಗಾಲವು ಪ್ರತಿಯೊಬ್ಬರಿಗೂ ಎಚ್ಚರವಾಗಿರಬೇಕಾದ ಋತುಮಾನ. ಏಕೆಂದರೆ, ಈ ಋತುವಿನಲ್ಲಿ ಗಾಳಿಯಿಂದ ಹರಡುವ ಮತ್ತು ನೀರಿನಿಂದ ಹರಡುವ ರೋಗಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತದೆ. ಆದ್ದರಿಂದ ಹೊರಗೆ ತಿನ್ನುವುದು ಒಳ್ಳೆಯದಲ್ಲ. ಅದರಲ್ಲೂ ನೀವು ಗರ್ಭಿಣಿಯಾಗಿದ್ದರೆ, ಏನು ತಿನ್ನುತ್ತೀರಿ ಎಂಬುದರ ಕುರಿತು ಹೆಚ್ಚು ಜಾಗರೂಕರಾಗಿರಬೇಕು. ಇಲ್ಲವಾದಲ್ಲಿ ಸಮಸ್ಯೆಗೆ ಗುರಿಯಾಗಬಹುದು. ಆದ್ದರಿಂದ ಗರ್ಭಿಣಿಯರ ಆಹಾರಕ್ರಮ ಮಳೆಗಾಲದಲ್ಲಿ ಹೇಗಿರಬೇಕು ಎಂಬುದನ್ನು ನೋಡೋಣ.

ಮಳೆಗಾಲದಲ್ಲಿ ಗರ್ಭಿಣಿಯರ ಆಹಾರ ಕ್ರಮ ಹೇಗಿರಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಹೊರಗೆ ತಿನ್ನುವುದನ್ನು ತಪ್ಪಿಸಿ:

ಹೊರಗೆ ತಿನ್ನುವುದನ್ನು ತಪ್ಪಿಸಿ:

ಬೀದಿ ಬದಿಯ ಅಂಗಡಿಗಳಲ್ಲಿ ತಯಾರಿಸಿದ ರುಚಿಕರವಾದ ಮಸಾಲೆಯುಕ್ತ ಭಕ್ಷ್ಯಗಳನ್ನು ನೀವು ಎಷ್ಟೇ ಹಂಬಲಿಸಿದರೂ, ಮಳೆಗಾಲದಲ್ಲಿ ಅವುಗಳನ್ನು ತಪ್ಪಿಸುವುದು ಒಳ್ಳೆಯದು. ಏಕೆಂದರೆ ಇದು ನಮ್ಮ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾಲವಾಗಿದ್ದು, ಇದು ದೇಹವನ್ನು ರೋಗಗಳಿಗೆ ಹೆಚ್ಚು ಒಳಗಾಗುವಂತೆ ಮಾಡುತ್ತದೆ. ಗರ್ಭಾವಸ್ಥೆಯಲ್ಲಿ, ಅಂತಹ ಆಹಾರಗಳನ್ನು, ವಿಶೇಷವಾಗಿ ಬೀದಿ ಆಹಾರಗಳನ್ನು ತಪ್ಪಿಸುವುದು ಹೆಚ್ಚು ಮುಖ್ಯವಾಗುತ್ತದೆ. ಏಕೆಂದರೆ ಅಂತಹ ಆಹಾರವು ಸೋಂಕುಗಳಿಗೆ ಕಾರಣವಾಗಬಹುದು ಮತ್ತು ಈ ಸಮಯದಲ್ಲಿ ಔಷಧಿಗಳ ಮೊರೆ ಹೋಗುವುದು ಒಳ್ಳೆಯದಲ್ಲ.

ಬೇಯಿಸಿದ ಆಹಾರ ಸೇವಿಸಿ:

ಬೇಯಿಸಿದ ಆಹಾರ ಸೇವಿಸಿ:

ಗರ್ಭಾವಸ್ಥೆಯಲ್ಲಿ ಸಣ್ಣದೊಂದು ಆರೋಗ್ಯ ಸಮಸ್ಯೆಗೂ ಹೆಚ್ಚಿನ ಗಮನವನ್ನು ನೀಡಬೇಕು. ಏಕೆಂದರೆ, ಮಳೆಗಾಲದಲ್ಲಿ ಸೂಕ್ಷ್ಮಜೀವಿಗಳ ಸಂತಾನೋತ್ಪತ್ತಿ ಹೆಚ್ಚಾಗುತ್ತದೆ, ಇದು ತಾಜಾ ಉತ್ಪನ್ನಗಳನ್ನು ಕಲುಷಿತಗೊಳಿಸುತ್ತದೆ. ಆದ್ದರಿಂದ, ವಿಶೇಷವಾಗಿ ಗರ್ಭಾವಸ್ಥೆಯಲ್ಲಿ ಹಸಿ ಆಹಾರ ಅಂದರೆ, ಹಸಿ ತರಕಾರಿ ಸೇವಿಸುವುದನ್ನು ತಡೆಯಲು ಸಲಹೆ ನೀಡಲಾಗುತ್ತದೆ. ಅಂತಹ ಅಲರ್ಜಿನ್‌ಗಳಿಂದ ದೂರವಿರಲು ಉತ್ತಮ ಮಾರ್ಗವೆಂದರೆ ಬೇಯಿಸಿದ ಆಹಾರವನ್ನು ಸೇವಿಸುವುದು. ಅಲ್ಲದೆ, ಬೆಚ್ಚಗಿನ ನೀರು ಮತ್ತು ಉಪ್ಪಿನೊಂದಿಗೆ ಹಣ್ಣುಗಳು ಮತ್ತು ತರಕಾರಿಗಳನ್ನು ಸ್ವಚ್ಛಗೊಳಿಸುವುದು ಸಹ ಸೂಕ್ಷ್ಮಜೀವಿಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಸೋಂಕಿತ ಕಚ್ಚಾ ಉತ್ಪನ್ನಗಳ ಸೇವನೆಯು ಬೆಳೆಯುತ್ತಿರುವ ಭ್ರೂಣಕ್ಕೆ ಹಲವಾರು ಸಮಸ್ಯೆಗಳನ್ನು ಉಂಟುಮಾಡಬಹುದು.

ತಾಜಾ ಆಹಾರವನ್ನು ಸೇವಿಸಿ:

ತಾಜಾ ಆಹಾರವನ್ನು ಸೇವಿಸಿ:

ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿದ ಆಹಾರವನ್ನು ತಿನ್ನುವುದು ನಿಮ್ಮ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರಬಹುದು. ಇದರಿಂದ ಹಲವಾರು ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳನ್ನು ಉಂಟುಮಾಡಬಹುದು. ಅದಕ್ಕಾಗಿಯೇ ಬೇಯಿಸಿದ ಆಹಾರವನ್ನು ಮೂರು ಗಂಟೆಗಳ ಅವಧಿಯಲ್ಲಿ ಅಥವಾ ಅದಕ್ಕಿಂತ ಮುಂಚೆಯೇ ಸೇವಿಸಬೇಕು, ಏಕೆಂದರೆ ಈ ಸಮಯದಲ್ಲಿ ಬೆಚ್ಚಗಿನ ಮತ್ತು ತಾಜಾ ಆಹಾರವನ್ನು ಸೇವಿಸುವುದು ಸುಗಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಹೈಡ್ರೇಟೆಡ್ ಆಗಿರಿ:

ಹೈಡ್ರೇಟೆಡ್ ಆಗಿರಿ:

ಇದು ಉತ್ತಮ ಆರೋಗ್ಯದ ಕೀಲಿಯಾಗಿದೆ. ಸಾಕಷ್ಟು ದ್ರವಗಳನ್ನು ಕುಡಿಯುವುದು ದೇಹದಲ್ಲಿ ಆರೋಗ್ಯಕರ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದಾಗ್ಯೂ, ಗಾಳಿ ತುಂಬಿದ ಅಥವಾ ಸಂಸ್ಕರಿಸಿದ ಜ್ಯೂಸ್‌ಗಳನ್ನು ಕುಡಿಯುವುದು ಒಳ್ಳೆಯದಲ್ಲ ಏಕೆಂದರೆ ಅವುಗಳು ಸೇರ್ಪಡೆಗಳು ಮತ್ತು ಸಂರಕ್ಷಕಗಳೊಂದಿಗೆ ತಯಾರಿಸಲ್ಪಡುತ್ತವೆ, ಇದು ಭ್ರೂಣದ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಇದಲ್ಲದೆ, ಕುಡಿಯುವ ನೀರು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಖನಿಜಗಳು ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಗರ್ಭಿಣಿಯರು ಪಾಲಿಸಬೇಕಾದ ಇತರ ಕ್ರಮಗಳು:

ಗರ್ಭಿಣಿಯರು ಪಾಲಿಸಬೇಕಾದ ಇತರ ಕ್ರಮಗಳು:

ಕತ್ತರಿಸಿಟ್ಟಿರುವಂತಹ ತರಕಾರಿ ಅಥವಾ ಹಣ್ಣುಗಳನ್ನು ಖರೀದಿಸಬೇಡಿ.

ಹಲಸಿನ ಹಣ್ಣು, ಜಾಮೂನು ಇತ್ಯಾದಿ ಹಣ್ಣುಗಳಿಂದ ದೂರವಿರಿ.

ಚಟ್ನಿ, ಉಪ್ಪಿನಕಾಯಿಯಂತಹ ಹುಳಿಯಾಗಿರುವ ಆಹಾರದಿಂದ ದೂರವಿರಿ. ಇದು ದೇಹದಲ್ಲಿ ನೀರಿನಾಂಶ ಶೇಖರಣೆ ಮಾಡುವುದು.

ಹಾಗಲಕಾಯಿ, ಮೆಂತ್ಯೆ, ತುಳಸಿ, ಅರಶಿನವನ್ನು ಈ ಸಮಯದಲ್ಲಿ ಹೆಚ್ಚಾಗಿ ಸೇವನೆ ಮಾಡಿ.

ಪೀಚ್, ಪಿಯರ್ಸ್, ಪ್ಲಮ್ಸ್, ದಾಳಿಂಬೆ, ಪಪ್ಪಾಯಿ ಮತ್ತು ಬಾಳೆಹಣ್ಣು ಸೇವನೆ ಮಾಡಿ. ಆಲೂಗಡ್ಡೆ, ಬೀನ್ಸ್ ಮತ್ತು ಮೊಳೆಕಾಳುಗಳನ್ನು ಕಡೆಗಣಿಸಿ. ಇದು ಅಜೀರ್ಣ ಉಂಟು ಮಾಡುವುದು.

ಯಾವಾಗಲೂ ಬೇಯಿಸಿದ ಆಹಾರಗಳನ್ನು ಸರಿಯಾದ ರೀತಿಯಲ್ಲಿ ಮುಚ್ಚಿಟ್ಟುಕೊಳ್ಳಿ. ಸರಿಯಾದ ರೀತಿಯಲ್ಲಿ ಆಹಾರ ಬೇಯಿಸಿದರೆ ಅದರಿಂದ ಜೀರ್ಣಕ್ರಿಯೆಗೆ ಸುಲಭವಾಗುವುದು.

English summary

Diet Tips For Pregnant Women To Follow This Monsoon in kannada

Here we talking about Diet Tips For Pregnant Women To Follow This Monsoon in kannada, read on
X
Desktop Bottom Promotion