For Quick Alerts
ALLOW NOTIFICATIONS  
For Daily Alerts

ತಂದೆಯಾಗಲು ಸೂಕ್ತ ವಯಸ್ಸು ಯಾವುದು ಗೊತ್ತೇ?

|

ತಂದೆಯಾಗಲು ಸೂಕ್ತ ವಯಸ್ಸು ಎಂಬುವುದು ಇದೆಯೇ? ಪೋಷಕರಾಗಬೇಕೆಂದು ಬಯಸುವಾಗ ವಯಸ್ಸು ಕೂಡ ಮುಖ್ಯವಾಗುತ್ತೆ. ತಾಯಿಯಾಗಲು 20ರಿಂದ 30ರ ವಯಸ್ಸಿನೊಳಗೆ ಒಳ್ಳೆಯದು, ಲೇಟ್‌ ಆದಂತೆ ಗರ್ಭಧಾರಣೆಯ ಸಾಧ್ಯತೆ ಕಡಿಮೆಯಾಗುವುದು, ಹಾಗಿಯೇ ಪುರುಷರಿಗೂ ತಂದೆಯಾಗಲೂ ಸೂಕ್ತ ವಯಸ್ಸು ಎಂಬುವುದು ಇದೆಯೇ? ವಯಸ್ಸಾದಂತೆ ಪೋಷಕರಾಗಲು ಏನಾದರೂ ತೊಂದರೆ ಎದುರಾಗುವುದೇ ಎಂಬ ಆತಂಕ ವಯಸ್ಸು 35 ದಾಟಿದ ಮೇಲೆ ತಂದೆಯಾಗ ಬಯಸುವ ಪ್ರತಿಯೊಬ್ಬ ಪುರುಷರಲ್ಲಿ ಇರುತ್ತದೆ.

ಪುರುಷರಿಗೂ ವಯಸ್ಸು ಹೆಚ್ಚಾದರೆ ತಂದೆಯಾಗಲು ಕಷ್ಟವಾಗುವುದೇ? ತಂದೆಯಾಗಲು ಸೂಕ್ತವಾದ ಪ್ರಾಯ ಯಾವುದು, ವಯಸ್ಸು ಹೆಚ್ಚಾದರೆ ಉಂಟಾಗುವ ತೊಂದರೆಗಳೇನು ಎಂದು ನೋಡೋಣ ಬನ್ನಿ:

ವೀರ್ಯಾಣುಗಳ ಗುಣಮಟ್ಟ:

ವೀರ್ಯಾಣುಗಳ ಗುಣಮಟ್ಟ:

ಪುರುಷರಲ್ಲಿ ವೀರ್ಯಾಣುಗಳು ವಯಸ್ಸಾದ ಮೇಲೂ ಉತ್ಪತ್ತಿಯಾಗುವುದು, ಆದರೆ ಅದರ ಸಂಖ್ಯೆಗಳು ವಯಸ್ಸಾದಂತೆ ಕಡಿಮೆಯಾಗುವುದು. ಪುರುಷನಲ್ಲಿ ವಯಸ್ಸು ಹೆಚ್ಚಾದಂತೆ DNA ಹಾನಿಯಾಗಬಹುದು. ಇದು ಆತನ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ಪ್ರಭಾವ ಬೀರುವುದು. ಅದರ ಜೊತೆಗೆ ಅನಾರೋಗ್ಯಕರ ಜೀವನಶೈಲಿ ಹಾಗೂ ಮಾನಸಿಕ ಒತ್ತಡ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು. ಇವೆಲ್ಲಾ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಕುಗ್ಗಿಸಬಹುದು.

ಗರ್ಭಧಾರಣೆಗೆ ಪುರುಷ ಆರೋಗ್ಯಕರ ವೀರ್ಯಾಣುಗಳನ್ನು ಹೊಂದಿರಬೇಕಾಗುತ್ತೆ, ಪುರುಷ ವೀರ್ಯಾಣು ಚೆನ್ನಾಗಿದ್ದರೆ ಆತ ಯಾವುದೇ ವಯಸ್ಸಿನಲ್ಲೂ ತಂದೆಯಾಗಬಹುದು, ವೀರ್ಯಾಣುಗಳ ಉತ್ಪತ್ತಿಯಲ್ಲಿ ತೊಂದರೆಯಿದ್ದರೆ ಆತನಿಗೆ ತಂದೆಯಾಗುವುದು ಕಷ್ಟವಾಗುವುದು.

ಆರೋಗ್ಯಕರ ಜೀವನಶೈಲಿ ಇದ್ದರೆ ವೀರ್ಯಾಣುಗಳು ಆರೋಗ್ಯಕರವಾಗಿರುತ್ತೆ.

ಆತನ ಆರ್ಥಿಕ ಸ್ಥಿತಿ:

ಆತನ ಆರ್ಥಿಕ ಸ್ಥಿತಿ:

ತಂದೆಯಾಗಲು ಆರ್ಥಿಕ ಸ್ಥಿತಿ ಕೂಡ ಈಗೀನ ವ್ಯವಸ್ಥೆಯಲ್ಲಿ ಮುಖ್ಯವಾಗುವುದು. ಮಗು ಜನಿಸಿದ ಮೇಲೆ ಅದಕ್ಕೆ ಸೂಕ್ತ ವಾತಾವರಣವನ್ನು ಕಲ್ಪಿಸಬೇಕಾಗುತ್ತದೆ, ಒಳ್ಳೆಯ ಓದು, ಮಗುವಿಗೆ ಅಗ್ಯತವಾದ ಸೌಲಭ್ಯಗಳನ್ನು ಕಲ್ಪಿಸಲು ಆರ್ಥಿಕ ಸ್ಥಿತಿ ಕೂಡ ತಕ್ಕಮಟ್ಟಿಗೆ ಇದ್ದರೆ ಮಗುವಿಗೆ ಕೂಡ ಒಳ್ಳೆಯ ಬದುಕು ಸಿಗುವುದು.

ಆರ್ಥಿಕ ಸ್ಥಿತಿಗೂ, ವೀರ್ಯಾಣುಗಳ ಆರೋಗ್ಯಕ್ಕೂ ಯಾವುದೇ ನೇರ ಸಂಬಂಧವಿಲ್ಲ, ಎಂಥ ಬಡವನೂ ತಂದೆಯಾಗಬಹುದು, ಆದರೆ ಮಗುವಿಗೆ ಉತ್ತಮ ವಿದ್ಯಾಭ್ಯಾಸ ನೀಡುವುದು ಪೋಷಕರ ಮುಖ್ಯ ಕರ್ತವ್ಯವಾಗಿರುತ್ತೆ.

ವಯಸ್ಸು:

ವಯಸ್ಸು:

ವಯಸ್ಸಾದಂತೆ ತಂದೆಯಾಗುವ ಸಾಧ್ಯತೆ ಕಡಿಮೆಯಾಗುವುದು, ಏಕೆಂದರೆ ಯೌವನ ಪ್ರಾಯದಲ್ಲಿ ವೀರ್ಯಾಣುಗಳ ಸಂಖ್ಯೆ ಉತ್ತಮವಾಗಿರುತ್ತೆ, ಅದೇ ವಯಸ್ಸಾದಮತೆ ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು. ವೀರ್ಯಾಣು ಚೆನ್ನಾಗಿದ್ದರೆ 70 ವರ್ಷದಲ್ಲೂ ತಂದೆಯಾಗಬಹುದು, ಆದರೆ ವೀರ್ಯಾಣು ಚೆನ್ನಾಗಿರಲು ಆರೋಗ್ಯಕರ ಹಾಗೂ ಒತ್ತಡ ಮುಕ್ತ ಬದುಕನ್ನು ನಡೆಸಬೇಕಾಗುತ್ತದೆ.

ಜವಾಬ್ದಾರಿ ತೆಗೆದುಕೊಳ್ಳಬೇಕು

ಜವಾಬ್ದಾರಿ ತೆಗೆದುಕೊಳ್ಳಬೇಕು

ಪೋಷಕರಾಗುವುದು ಎಂಬುವುದು ಒಂದು ದೊಡ್ಡ ಜವಾಬ್ದಾರಿ. ಮಕ್ಕಳನ್ನು ಚೆನ್ನಾಗಿ ಬೆಳೆಸಲು ಮಕ್ಕಳಿಗೆ ಸಮಯ ನೀಡಬೇಕಾಗುತ್ತೆ, ಅವರನ್ನು ಚೆನ್ನಾಗಿ ಬೆಳೆಸುವ ಜವಾಬ್ದಾರಿ ಪೋಷಕರ ಮೇಲಿರುತ್ತದೆ, ಆ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧರಾದಾಗ ಮಾತ್ರ ಪೋಷಕರಾಗಲು ಪ್ರಯತ್ನಿಸಿ, ಇಲ್ಲದಿದ್ದರೆ ಅದರ ನೆಗೆಟಿವ್‌ ಪ್ರಭಾವ ಮಕ್ಕಳ ಮಾನಸಿಕ ಬೆಳವಣಿಗೆ ಮೇಲೆ ಉಂಟಾಗುವುದು. 4-5 ವರ್ಷದವರೆಗೆ ಮಕ್ಕಳಿಗೆ ತುಂಬಾ ಕೇರ್‌ ಬೇಕಾಗುತ್ತೆ, ನೀವು ಯಾವಾಗ ಮಕ್ಕಳ ಜವಾಬ್ದಾರಿ ಸಂಪೂರ್ಣವಾಗಿ ತೆಗೆಯು ಸಿದ್ಧರಾಗುತ್ತೀರೋ ಆಗ ಪೋಷಕರಾಗಲು ಸರಿಯದ ಸಮಯವೆಂದು ಅರ್ಥ.

ನಿಮಗೆ ತಂದೆಯಾಗಲು ಯಾವಾಗ ಸೂಕ್ತ ಅನಿಸುವುದೋ ಆಗ ಟ್ರೈ ಮಾಡಿ

ನಿಮಗೆ ತಂದೆಯಾಗಲು ಯಾವಾಗ ಸೂಕ್ತ ಅನಿಸುವುದೋ ಆಗ ಟ್ರೈ ಮಾಡಿ

ತಂದೆಯಾಗುವುದು ಎಂದರೆ ಬರೀ ದೈಹಿಕವಾಗಿ ಸಮರ್ಥರಾಗಿದ್ದಾಗ ಪ್ರಯತ್ನಿಸುವುದು ಎಂದಲ್ಲ, ನಿಮ್ಮ ಸುತ್ತಲಿನ ಪರಿಸರ, ನಿಮ್ಮ ಸಾಮಾಜಿಕ, ಆರ್ಥಿಕ ಸ್ಥಿತಿ, ನಿಮ್ಮ ಕುಟುಂಬದ ಬೆಂಬಲ, ಜವಾಬ್ದಾರಿ ತೆಗೆದುಕೊಳ್ಳುವ ಮನಸ್ಥಿತಿ ಎಲ್ಲವೂ ಮುಖ್ಯವಾಗುವುದು. ಮಗುವಿಗೆ ಆರೋಗ್ಯಕರ ವಾತಾವರಣ ನೀಡಲು ಸಾಧ್ಯವಾದಾಗ ಮಗುವಿಗಾಗಿ ಪ್ರಯತ್ನಿಸಿ. ಮಗು ಯಾವಾಗ ಬೇಕು ಎಂಬುವುದು ನಿಮ್ಮ ವೈಯಕ್ತಿಕ ತೀರ್ಮಾನ ಆಗಿರಬೇಕು, ಆಗ ಮಾತ್ರ ತಂದೆಯ ಜವಾಬ್ದಾರಿಯನ್ನು ಆನಂದಿಲು ಸಾಧ್ಯವಾಗುವುದು.

English summary

Correct Age To Become A Dad as Per Studies

Do you know when is the correct age to become father, what are factors influence for fatherhood, read on...
Story first published: Wednesday, August 3, 2022, 13:36 [IST]
X
Desktop Bottom Promotion