For Quick Alerts
ALLOW NOTIFICATIONS  
For Daily Alerts

ಈ ತಪ್ಪುಗಳಿಂದಲೇ ಗರ್ಭಾವಸ್ಥೆಯಲ್ಲಿ ಬಹುತೇಕ ಮಹಿಳೆಯರು ಸಮಸ್ಯೆ ಎದುರಿಸುತ್ತಾರೆ

|

ಗರ್ಭಾವಸ್ಥೆಯು ಹೆಣ್ಣಿನ ಜೀವನದಲ್ಲಿ ನಡೆಯುವಂತಹ ಸುಂದರವಾದ ಅನುಭವಗಳ ಗುಚ್ಛ. ಗರ್ಭ ಧರಿಸಿದ ಆರಂಭದಿಂದ ಹಿಡಿದು ಮಗುವಿನ ಜನನದವರೆಗೂ ಒಂದಲ್ಲಾ ಒಂದು ಅನುಭವಗಳನ್ನು ತಾಯಿಯು ಪಡೆಯುತ್ತಾಳೆ. ಮಾತ್ರವಲ್ಲ ಗರ್ಭದಲ್ಲಿ ಕೂಸು ಬೆಳೆಯಲು ಆರಂಭಿಸಿದಾಗಿನಿಂದ ಹೆಣ್ಣಿನ ದೇಹದಲ್ಲಿ, ಮನೋಸ್ಥಿತಿಯಲ್ಲೂ ಹಲವು ಬದಲಾವಣೆಗಳಾಗುತ್ತವೆ. ಹಾರ್ಮೋನ್‌ ಏರಿಳಿತ, ತೂಕದಲ್ಲಿ ಹೆಚ್ಚಳ, ಸ್ತನಗಳ ಗಾತ್ರದಲ್ಲಿ ಬದಲಾವಣೆ, ದೇಹದ ಇತರ ಭಾಗದಲ್ಲಿ ಬದಲಾವಣೆಗಳು ನಿಧಾನವಾಗಿ ಕಾಣಲುತೊಡಗುತ್ತದೆ.

pregnancy mistakes

ಹೆಣ್ಣು ಗರ್ಭ ಧರಿಸಿದಾನಂತರ ಮೊದಲ ಆದ್ಯತೆ ಆಕೆಯ ಹಾಗೂ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಕಾಳಜಿ. ಈ ಸಂದರ್ಭದಲ್ಲಿ ಅನೇಕ ತ್ಯಾಗಗಳನ್ನು ಹೆಣ್ಣು ಮಾಡಬೇಕಾಗುತ್ತದೆ. ಕೆಲವೊಮ್ಮೆ ಮೊದಲನೇಯ ಬಾರಿಗೆ ತಾಯಿಯಾಗುತ್ತಿರುವವರಿಗೆ ಅನುಭಗಳ ಕೊರತೆ ಉಂಟಾಗುತ್ತದೆ. ಅವರಿವರು ಅದು ಮಾಡಬಾರದು, ಇದು ಮಾಡಬಾರದು ಎನ್ನುವುದರೊಂದಿಗೆ ಹಲವು ಗೊಂದಲಗಳು ಕಾಡಬಹುದು. ಹೀಗಿದ್ದಾಗ ಕೆಲವೊಂದು ಗೊತ್ತಿಲ್ಲದೆ, ಅಥವಾ ಗೊತ್ತಿದ್ದೂ ಮಾಡುವ ತಪ್ಪುಗಳು ಸಮಸ್ಯೆಗೆ ಕಾರಣವಾಗಬಹುದು. ಹೊಸ ತಾಯಂದಿರು ಮಾಡುವಂತಹ ಆ ತಪ್ಪುಗಳೇನು, ಅದಾಗದಂತೆ ಹೇಗೆ ಗರ್ಭಾವಸ್ಥೆಯನ್ನು ಸುಂದರ ನೆನಪಾಗಿ ಕಟ್ಟಿಕೊಳ್ಳಬೇಕು ಎನ್ನುವ ವಿವರಣೆ ಇಲ್ಲಿದೆ.

ಊಟವನ್ನು ಬಿಟ್ಟುಬಿಡುವುದು

ಊಟವನ್ನು ಬಿಟ್ಟುಬಿಡುವುದು

ಗರ್ಭಿಣಿಯಾದ ಮೇಲೆ ಮೊದಲು ಉಂಟಾಗುವ ಅನುಭವವೇ ಮಾರ್ನಿಂಗ್‌ ಸಿಕ್‌ನೆಸ್‌ ಇದರ ಜೊತೆಗೆ ಏನೇ ತಿನ್ನಲು ಹೋದರೂ ವಾಕರಿಕೆ ಬಂದಂತಾಗುತ್ತದೆ. ಈ ರೀತಿ ಇದ್ದಾಗ ಹೆಚ್ಚಿನವರು ಊಟ ಮಾಡುವುದನ್ನು ತಪ್ಪಿಸುತ್ತಾರೆ. ಕೆಲವೊಮ್ಮೆ ಆಹಾರ ಪದಾರ್ಥಗಳ ವಾಸನೆಯೂ ಆಗಿಬರದಿರಬಹುದು, ವಾಂತಿಯಾಗುತ್ತೆ ಎನ್ನುವ ಕಾರಣದಿಂದ ಏನೂ ತಿನ್ನಲು ಹೋಗುವುದಿಲ್ಲ. ಆದರೆ ಇದು ತಪ್ಪು.

ಗರ್ಭಿಣಿಯಾಗಿರುವಾಗ ಹಸಿವಿನ ಕೊರತೆ, ವಾಕರಿಕೆ ಮುಂತಾದ ಲಕ್ಷಣಗಳು ಸಾಮಾನ್ಯ. ಈ ಅವಧಿಯಲ್ಲಿ ನಿಮಗೊಬ್ಬರಿಗಾಗಿ ಮಾತ್ರವಲ್ಲ, ಇಬ್ಬರಿಗಾಗಿ ಆಹಾರ ಸೇವಿಸಬೇಕಾಗುತ್ತದೆ. ಗರ್ಭಾವಸ್ಥೆಯಲ್ಲಿ ದೇಹಕ್ಕೆ ಮುಖ್ಯವಾಗಿ ಖನಿಜಗಳ, ಪೋಷಕಾಂಶಗಳ ಅಗತ್ಯವಿರುತ್ತದೆ. ಹಾಗಾಗಿ ನೀವು ಸೇವಿಸುವ ಆಹಾರದಿಂದಲೇ ಪೋಷಕಾಂಶವನ್ನು ಪೂರೈಸಲು ಸಾಧ್ಯ. ಹಾಗಾಗಿ ಊಟವನ್ನು ಎಂದಿಗೂ ತಪ್ಪಿಸಬೇಡಿ.

ತೂಕ ಹೆಚ್ಚಾಗುತ್ತೆ ಎನ್ನುವ ಆತಂಕ

ತೂಕ ಹೆಚ್ಚಾಗುತ್ತೆ ಎನ್ನುವ ಆತಂಕ

ಹೆಚ್ಚಿನವರು ಗರ್ಭಧರಿಸಿದ ಮೇಲೆ ತೂಕದಲ್ಲಿ ಹೆಚ್ಚಳವಾಗುವುದು ಸಾಮಾನ್ಯ ಸಂಗತಿ. ತೂಕದಲ್ಲಿ ಹೆಚ್ಚಳಕ್ಕೆ ಕಾರಣಗಳು ಆರೋಗ್ಯಕರ ಆಹಾರ ಸೇವನೆ ಮತ್ತು ಆಹಾರ ತಿಂಡಿ, ತಿನಿಸುಗಳನ್ನು ತಿನ್ನುವ ಬಯಕೆಯಿಂದ ಮಿತಿಯಿಲ್ಲದೆ ತಿನ್ನುವುದು. ಹಾರ್ಮೋನ್‌ ಮಟ್ಟವು ಬದಲಾಗುತ್ತಲೇ ಇರುವ ಕಾರಣ, ತೂಕದಲ್ಲಿ ಹೆಚ್ಚಳ ಅಗೇ ಆಗುತ್ತದೆ. ಇದರಿಂದ ಒತ್ತಡ, ಆತಂಕಕ್ಕೊಳಗಾಗುವ ಅವಶ್ಯವಿಲ್ಲ. ಒತ್ತಡ ನಿಮ್ಮ ಮನೋಸ್ಥಿತಿಯನ್ನು ಹದಗೆಡಿಸಬಹುದು. ಆದಷ್ಟು ಮನಸ್ಸನ್ನು ನಿರಾಳವಾಗಿಟ್ಟುಕೊಳ್ಳಿ, ಆರೋಗ್ಯಕರ ಆಹಾರ ಸೇವಿಸಿ.

ತಮಗೆ ತಾವೇ ವೈದ್ಯರಾಗುವುದು

ತಮಗೆ ತಾವೇ ವೈದ್ಯರಾಗುವುದು

ಇದೊಂದು ದೊಡ್ಡ ತಪ್ಪು..! ಯಾಕೆಂದರೆ ಗರ್ಭಧಾರಣೆಯೆನ್ನುವುದು ಅತ್ಯಂತ ಸೂಕ್ಷ್ಮ ಹಾಗೂ ಕಾಳಜಿಯ, ಆರೈಕೆಯ ಅವಧಿ. ತೂಕದಲ್ಲಿನ ಹೆಚ್ಚಳದಿಂದಾಗಿ ಸ್ನಾಯುಗಳಲ್ಲಿ ನೋವು, ಬೆನ್ನು ನೋವು, ಗ್ಯಾಸ್ಟ್ರಿಕ್‌ ಸಂಬಂಧಿ ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ. ಹೀಗಿದ್ದಾಗ ನಿಮಗೆ ನೀವೇ ವೈದ್ಯರಾಗಿ ಬಿಡುವುದು ದೊಡ್ಡ ತಪ್ಪು.ಅಲ್ಲದೇ ಅವರಿವರು ಹೇಳಿದರೆಂದು ಔಷಧಿಗಳ ಸೇವನೆ ಮಾಡಲು ಹೋಗುವುದು ನಿಮ್ಮ ಹಾಗೂ ಉದರದಲ್ಲಿರುವ ನಿಮ್ಮ ಮಗುವಿನ ಜೀವಕ್ಕೆ ಕಂಟಕವಾಗಬಹುದು. ನಿಮಗೇನೇ ಸಮಸ್ಯೆ ಉಂಟಾದರೂ ನಿಮ್ಮ ವೈದ್ಯರ ಸಲಹೆ ಪಡೆಯುವುದು ಮೊದಲು ಮಾಡಬೇಕಾದ ಕೆಲಸ. ವೈದ್ಯರು ಸೂಚಿಸಿದ ಮಾತ್ರೆಗಳನ್ನು ಮಾತ್ರ ಸೇವಿಸಿ.

ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದಿರುವುದು

ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಸುಸ್ತು, ಆಯಾಸ ಕಾಣಿಸಿಕೊಳ್ಳುತ್ತದೆ. ಕಾಲು ನೋವು, ಸೊಂಟ ನೋವು ಬರುತ್ತದೆಂದು ಕೆಲವರು ಏನೂ ಕೆಲಸ ಮಾಡಲು ಹೋಗುವುದಿಲ್ಲ. ಹೆಚ್ಚು ಕೆಲಸ, ವಾಕಿಂಗ್‌, ವ್ಯಾಯಾಮ ಮಾಡಿದರೆ ಗರ್ಭಪಾತವಾದರೆ ಎನ್ನುವ ಭಯ ಹಲವರಲ್ಲಿರುತ್ತದೆ. ಆದರೆ ನಿಮ್ಮ ದೇಹ ಗರ್ಭಾವಸ್ಥೆಯಲ್ಲಿ ಚಟುವಟಿಕೆಯಿಂದಿದ್ದರೆ ತುಂಬಾ ಒಳ್ಳೆಯದು. ಸರಳವಾದ ದೈಹಿಕ ಚಟುವಟಿಕೆಗಳನ್ನು ಮಾಡಿ.

ವ್ಯಾಯಾಮ, ನಡಿಗೆಯನ್ನು ಮಾಡುವ ಮೊದಲೊಮ್ಮೆ ನಿಮ್ಮ ವೈದ್ಯರನ್ನೊಮ್ಮೆ ಕೇಳಿಕೊಳ್ಳಿ, ಸಾಮಾನ್ಯವಾಗಿ ನಾಲ್ಕೈದು ತಿಂಗಳು ತುಂಬಿದ ಮೇಲೆ ವೈದ್ಯರು ನಡಿಗೆ, ಸರಳ ವ್ಯಾಯಾಮ, ಪ್ರಾಣಾಯಾಮ ಮಾಡಲು ಹೇಳಿಯೇ ಹೇಳುತ್ತಾರೆ. ಇದು ದೇಹವನ್ನು ಚಟುವಟಿಕೆಯಿಂದ ಇಡುವುದಲ್ಲದೇ, ಸಹಜ ಹೆರಿಗೆಗೂ ತುಂಬಾ ಸಹಾಯವಾಗುತ್ತದೆ,

ಆತುರದ ಆರೋಗ್ಯ ಆಯ್ಕೆಗಳನ್ನು ಮಾಡುವುದು

ಮೊದಲೇ ಹೇಳಿದಂತೆ ಗರ್ಭಿಣಿಯಾದ ಮೇಲೆ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಿಗೆ ಇರಬೇಕಾಗುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಆರೋಗ್ಯಕರ ಗರ್ಭಧಾರಣೆಗೆ ಉತ್ತಮ ಯೋಜನೆಯ ಅಗತ್ಯವಿರುತ್ತದೆ. ಮೊದಲನೇಯದಾಗಿ ನೀವು ಮುಕ್ತವಾಗಿ ಮಾತನಾಡಬಹುದಾದ, ಉತ್ತಮ ವೈದ್ಯರನ್ನು ಆಯ್ಕೆ ಮಾಡುವುದು ಮುಖ್ಯ. ಯಾಕೆಂದರೆ ಈ ಅವಧಿಯಲ್ಲಿ ನೀವು ವೈದ್ಯರೊಂದಿಗೆ ಮುಕ್ತವಾಗಿ ಸಮಾಲೋಚನೆ ಮಾಡುವುದು ಅಗತ್ಯವಾಗಿರುತ್ತದೆ, ಸಂಕೋಚಕ್ಕೆ ಇಲ್ಲಿ ಆಸ್ಪದವಿರುವುದಿಲ್ಲ.

ಉತ್ತಮ ಪ್ರಸೂತಿ ಅಥವಾ ಮಹಿಳಾ ರೋಗ ತಜ್ಞರನ್ನು ನೀವು ಕಂಡ ನಂತರ ಅವರು ಕಾಲಕಾಲಕ್ಕೆ ಮಾಡಲು ಹೇಳುವ ರಕ್ತದೊತ್ತಡ ಪರೀಕ್ಷೆ, ಸ್ಕ್ಯಾನಿಂಗ್‌, ಚುಚ್ಚುಮದ್ದು ಹಾಗೂ ಔಷಧಿಗಳ ಸೇವನೆಯನ್ನಂತೂ ತಪ್ಪಿಸಬಾರದು. ಯಾವುದೇ ಕಾರಣಕ್ಕೂ ನಿಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡದಿರಿ, ನಿಮ್ಮ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ, ಹೊಟ್ಟೆಯೊಳಗೆ ಬೆಳವಣಿಗೆ ಹೊಂದುತ್ತಿರುವ ಶಿಶುವಿನ ಆರೋಗ್ಯವೂ ಉತ್ತಮಗೊಳ್ಳುತ್ತದೆ.

ಆರೋಗ್ಯಕರ ಗರ್ಭಧಾರಣೆಗೆ ಉತ್ತಮ ಯೋಜನೆ ಅಗತ್ಯವಿರುತ್ತದೆ, ಅಂದರೆ, ಇದು ಎರಡು ಜೀವಗಳಿಗೆ ಸಂಬಂಧಿಸಿದ ಕಾರಣ, ನೀವು ಬುದ್ಧಿವಂತ ಆರೋಗ್ಯ ಆಯ್ಕೆಗಳನ್ನು ಮಾಡಬೇಕು. ನಿಮ್ಮನ್ನು ನೋಡಿಕೊಳ್ಳಲು ಉತ್ತಮ ವೈದ್ಯರನ್ನು ಆಯ್ಕೆ ಮಾಡಲು ನೀವು ಹಿಂಜರಿಯುವುದನ್ನು ತಪ್ಪಿಸಬೇಕು, ವಿಶೇಷವಾಗಿ ನಿಮ್ಮ ನಿರ್ಧಾರಗಳನ್ನು ಗೌರವಿಸುವ ಮತ್ತು ಬೆಂಬಲಿಸುವ ವ್ಯಕ್ತಿ.

ಈ ಸಂಗತಿಗಳನ್ನು ನೆನಪಿಟ್ಟುಕೊಳ್ಳಿ

ಕೆಲವೊಮ್ಮೆ ಗರ್ಭಧಾರಣೆಯಲ್ಲಿ ಗೊತ್ತಿದ್ದೂ ತಪ್ಪು ಮಾಡುವವರಿದ್ದಾರೆ, ಆ ಸಾಮಾನ್ಯ ತಪ್ಪೆಂದರೆ ಧೂಮಪಾನ, ಮದ್ಯಪಾನ ಹಾಗೂ ಕೆಫೀನ್‌ ಸೇವನೆ. ಗರ್ಭಧಾರಣೆಗೆ ಯೋಜಿಸುವುದಾದರೆ ಈ ಮೂರು ತಪ್ಪುಗಳನ್ನು ಮಾಡುವ ಯೋಚನೆಯನ್ನೇ ಮಾಡಬಾರದು. ಅದಲ್ಲದೇ ಕೆಲವರು ತಿನ್ನುವ ಬಯಕೆಯಿಂದ ಜಂಕ್‌ಫುಡ್‌, ಸಂಸ್ಕರಿಸಿದ ಆಹಾರ, ಹೆಚ್ಚು ಸಕ್ಕರೆ ಅಂಶವಿರುವ ಸಿಹಿ ಪದಾರ್ಥಗಳನ್ನು ತಿನ್ನುತ್ತಾರೆ. ಇದು ಸಮಸ್ಯೆಗೆ ಕಾರಣವಾಗಬಹುದು.

ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಎಂದರೆ ಕಡಿಮೆ ನಿದ್ದೆ. ಹೊಟ್ಟೆಯಲ್ಲಿ ಮಗು ಬೆಳೆಯುತ್ತಿರುವ ಕಾರಣ ಹೇಗೆ ಮಲಗಿದರೂ ಒಂದು ರೀತಿ ಅನ್‌ಕಂಫರ್ಟೇಬಲ್‌ ಅನಿಸಿಬಿಡುತ್ತದೆ. ಜೊತೆಗೆ ನಾನಾ ರೀತಿಯ ಯೋಚನೆಗಳು, ಹೆರಿಗೆಯ ಬಗ್ಗೆ, ಮಗುವಿನ ಬಗ್ಗೆ ಯೋಚನೆಗಳು ಕಡಿಮೆ ನಿದ್ದೆಗೆ ಕಾರಣವಾಗುತ್ತದೆ. ಕಡಿಮೆ ನಿದ್ದೆಯಿಂದಾಗಿ ದೇಹವೂ ಆಯಾಸಗೊಳ್ಳುತ್ತದೆ. ಹಾಗಾಗಿ ಗರ್ಭಾವಸ್ಥೆಯು ಒಂದು ಆರೋಗ್ಯ ಸಮಸ್ಯೆ ಎಂದುಕೊಳ್ಳದೇ, ಚಟುವಟಿಕೆಯಿಂದ ಇರಿ. ಕೆಟ್ಟ ಆಲೋಚನೆಗಳಿಗೆ ಕಡಿವಾಣ ಹಾಕಿ. ಅವರಿವರ ಮಾತನ್ನು ಕೇಳಿಸಿಕೊಳ್ಳುವ ಬದಲು, ವೈದ್ಯರ ಸಲಹೆಯನ್ನು ಮೊದಲು ಸಕಾರಾತ್ಮಕವಾಗಿ ಸ್ವೀಕರಿಸಿದರೆ, ಆರೋಗ್ಯಪೂರ್ಣ ಗರ್ಭಾವಸ್ಥೆಯು ನಿಮ್ಮದಾಗುವುದು.

ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದಿರುವುದು

ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದಿರುವುದು

ಗರ್ಭಾವಸ್ಥೆಯಲ್ಲಿ ದೇಹದಲ್ಲಿ ಸುಸ್ತು, ಆಯಾಸ ಕಾಣಿಸಿಕೊಳ್ಳುತ್ತದೆ. ಕಾಲು ನೋವು, ಸೊಂಟ ನೋವು ಬರುತ್ತದೆಂದು ಕೆಲವರು ಏನೂ ಕೆಲಸ ಮಾಡಲು ಹೋಗುವುದಿಲ್ಲ. ಹೆಚ್ಚು ಕೆಲಸ, ವಾಕಿಂಗ್‌, ವ್ಯಾಯಾಮ ಮಾಡಿದರೆ ಗರ್ಭಪಾತವಾದರೆ ಎನ್ನುವ ಭಯ ಹಲವರಲ್ಲಿರುತ್ತದೆ. ಆದರೆ ನಿಮ್ಮ ದೇಹ ಗರ್ಭಾವಸ್ಥೆಯಲ್ಲಿ ಚಟುವಟಿಕೆಯಿಂದಿದ್ದರೆ ತುಂಬಾ ಒಳ್ಳೆಯದು. ಸರಳವಾದ ದೈಹಿಕ ಚಟುವಟಿಕೆಗಳನ್ನು ಮಾಡಿ.

ವ್ಯಾಯಾಮ, ನಡಿಗೆಯನ್ನು ಮಾಡುವ ಮೊದಲೊಮ್ಮೆ ನಿಮ್ಮ ವೈದ್ಯರನ್ನೊಮ್ಮೆ ಕೇಳಿಕೊಳ್ಳಿ, ಸಾಮಾನ್ಯವಾಗಿ ನಾಲ್ಕೈದು ತಿಂಗಳು ತುಂಬಿದ ಮೇಲೆ ವೈದ್ಯರು ನಡಿಗೆ, ಸರಳ ವ್ಯಾಯಾಮ, ಪ್ರಾಣಾಯಾಮ ಮಾಡಲು ಹೇಳಿಯೇ ಹೇಳುತ್ತಾರೆ. ಇದು ದೇಹವನ್ನು ಚಟುವಟಿಕೆಯಿಂದ ಇಡುವುದಲ್ಲದೇ, ಸಹಜ ಹೆರಿಗೆಗೂ ತುಂಬಾ ಸಹಾಯವಾಗುತ್ತದೆ.

ಆತುರದ ಆರೋಗ್ಯ ಆಯ್ಕೆಗಳನ್ನು ಮಾಡುವುದು

ಆತುರದ ಆರೋಗ್ಯ ಆಯ್ಕೆಗಳನ್ನು ಮಾಡುವುದು

ಮೊದಲೇ ಹೇಳಿದಂತೆ ಗರ್ಭಿಣಿಯಾದ ಮೇಲೆ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಿಗೆ ಇರಬೇಕಾಗುತ್ತದೆ. ಯಾವುದೇ ಕಾರಣಕ್ಕೂ ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಆರೋಗ್ಯಕರ ಗರ್ಭಧಾರಣೆಗೆ ಉತ್ತಮ ಯೋಜನೆಯ ಅಗತ್ಯವಿರುತ್ತದೆ. ಮೊದಲನೇಯದಾಗಿ ನೀವು ಮುಕ್ತವಾಗಿ ಮಾತನಾಡಬಹುದಾದ, ಉತ್ತಮ ವೈದ್ಯರನ್ನು ಆಯ್ಕೆ ಮಾಡುವುದು ಮುಖ್ಯ. ಯಾಕೆಂದರೆ ಈ ಅವಧಿಯಲ್ಲಿ ನೀವು ವೈದ್ಯರೊಂದಿಗೆ ಮುಕ್ತವಾಗಿ ಸಮಾಲೋಚನೆ ಮಾಡುವುದು ಅಗತ್ಯವಾಗಿರುತ್ತದೆ, ಸಂಕೋಚಕ್ಕೆ ಇಲ್ಲಿ ಆಸ್ಪದವಿರುವುದಿಲ್ಲ.

ಉತ್ತಮ ಪ್ರಸೂತಿ ಅಥವಾ ಮಹಿಳಾ ರೋಗ ತಜ್ಞರನ್ನು ನೀವು ಕಂಡ ನಂತರ ಅವರು ಕಾಲಕಾಲಕ್ಕೆ ಮಾಡಲು ಹೇಳುವ ರಕ್ತದೊತ್ತಡ ಪರೀಕ್ಷೆ, ಸ್ಕ್ಯಾನಿಂಗ್‌, ಚುಚ್ಚುಮದ್ದು ಹಾಗೂ ಔಷಧಿಗಳ ಸೇವನೆಯನ್ನಂತೂ ತಪ್ಪಿಸಬಾರದು. ಯಾವುದೇ ಕಾರಣಕ್ಕೂ ನಿಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡದಿರಿ, ನಿಮ್ಮ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ, ಹೊಟ್ಟೆಯೊಳಗೆ ಬೆಳವಣಿಗೆ ಹೊಂದುತ್ತಿರುವ ಶಿಶುವಿನ ಆರೋಗ್ಯವೂ ಉತ್ತಮಗೊಳ್ಳುತ್ತದೆ.

ಆರೋಗ್ಯಕರ ಗರ್ಭಧಾರಣೆಗೆ ಉತ್ತಮ ಯೋಜನೆ ಅಗತ್ಯವಿರುತ್ತದೆ, ಅಂದರೆ, ಇದು ಎರಡು ಜೀವಗಳಿಗೆ ಸಂಬಂಧಿಸಿದ ಕಾರಣ, ನೀವು ಬುದ್ಧಿವಂತ ಆರೋಗ್ಯ ಆಯ್ಕೆಗಳನ್ನು ಮಾಡಬೇಕು. ನಿಮ್ಮನ್ನು ನೋಡಿಕೊಳ್ಳಲು ಉತ್ತಮ ವೈದ್ಯರನ್ನು ಆಯ್ಕೆ ಮಾಡಲು ನೀವು ಹಿಂಜರಿಯುವುದನ್ನು ತಪ್ಪಿಸಬೇಕು, ವಿಶೇಷವಾಗಿ ನಿಮ್ಮ ನಿರ್ಧಾರಗಳನ್ನು ಗೌರವಿಸುವ ಮತ್ತು ಬೆಂಬಲಿಸುವ ವ್ಯಕ್ತಿ.

ಈ ಸಂಗತಿಗಳನ್ನು ನೆನಪಿಟ್ಟುಕೊಳ್ಳಿ

ಈ ಸಂಗತಿಗಳನ್ನು ನೆನಪಿಟ್ಟುಕೊಳ್ಳಿ

ಕೆಲವೊಮ್ಮೆ ಗರ್ಭಧಾರಣೆಯಲ್ಲಿ ಗೊತ್ತಿದ್ದೂ ತಪ್ಪು ಮಾಡುವವರಿದ್ದಾರೆ, ಆ ಸಾಮಾನ್ಯ ತಪ್ಪೆಂದರೆ ಧೂಮಪಾನ, ಮದ್ಯಪಾನ ಹಾಗೂ ಕೆಫೀನ್‌ ಸೇವನೆ. ಗರ್ಭಧಾರಣೆಗೆ ಯೋಜಿಸುವುದಾದರೆ ಈ ಮೂರು ತಪ್ಪುಗಳನ್ನು ಮಾಡುವ ಯೋಚನೆಯನ್ನೇ ಮಾಡಬಾರದು. ಅದಲ್ಲದೇ ಕೆಲವರು ತಿನ್ನುವ ಬಯಕೆಯಿಂದ ಜಂಕ್‌ಫುಡ್‌, ಸಂಸ್ಕರಿಸಿದ ಆಹಾರ, ಹೆಚ್ಚು ಸಕ್ಕರೆ ಅಂಶವಿರುವ ಸಿಹಿ ಪದಾರ್ಥಗಳನ್ನು ತಿನ್ನುತ್ತಾರೆ. ಇದು ಸಮಸ್ಯೆಗೆ ಕಾರಣವಾಗಬಹುದು.

ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಎಂದರೆ ಕಡಿಮೆ ನಿದ್ದೆ. ಹೊಟ್ಟೆಯಲ್ಲಿ ಮಗು ಬೆಳೆಯುತ್ತಿರುವ ಕಾರಣ ಹೇಗೆ ಮಲಗಿದರೂ ಒಂದು ರೀತಿ ಅನ್‌ಕಂಫರ್ಟೇಬಲ್‌ ಅನಿಸಿಬಿಡುತ್ತದೆ. ಜೊತೆಗೆ ನಾನಾ ರೀತಿಯ ಯೋಚನೆಗಳು, ಹೆರಿಗೆಯ ಬಗ್ಗೆ, ಮಗುವಿನ ಬಗ್ಗೆ ಯೋಚನೆಗಳು ಕಡಿಮೆ ನಿದ್ದೆಗೆ ಕಾರಣವಾಗುತ್ತದೆ. ಕಡಿಮೆ ನಿದ್ದೆಯಿಂದಾಗಿ ದೇಹವೂ ಆಯಾಸಗೊಳ್ಳುತ್ತದೆ. ಹಾಗಾಗಿ ಗರ್ಭಾವಸ್ಥೆಯು ಒಂದು ಆರೋಗ್ಯ ಸಮಸ್ಯೆ ಎಂದುಕೊಳ್ಳದೇ, ಚಟುವಟಿಕೆಯಿಂದ ಇರಿ. ಕೆಟ್ಟ ಆಲೋಚನೆಗಳಿಗೆ ಕಡಿವಾಣ ಹಾಕಿ. ಅವರಿವರ ಮಾತನ್ನು ಕೇಳಿಸಿಕೊಳ್ಳುವ ಬದಲು, ವೈದ್ಯರ ಸಲಹೆಯನ್ನು ಮೊದಲು ಸಕಾರಾತ್ಮಕವಾಗಿ ಸ್ವೀಕರಿಸಿದರೆ, ಆರೋಗ್ಯಪೂರ್ಣ ಗರ್ಭಾವಸ್ಥೆಯು ನಿಮ್ಮದಾಗುವುದು.

English summary

Common mistakes most women make during pregnancy in Kannada

you must avoid these simple mistakes during pregnancy in kannada. Read more.
X
Desktop Bottom Promotion