Just In
- 40 min ago
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
- 8 hrs ago
ಶನಿವಾರದ ದಿನ ಭವಿಷ್ಯ (14-12-2019)
- 18 hrs ago
ಅಸ್ತಮಾ ರಾತ್ರಿ ಹೊತ್ತೇ ಏಕೆ ಹೆಚ್ಚಾಗುತ್ತದೆ?
- 19 hrs ago
ಮಗುವಿಗೆ ಸೀಬೆ ಹಣ್ಣು ತಿನಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ
Don't Miss
- News
ಮದರಸಾ ಕೆಲಸದಾಕೆ ಮೇಲೆ ಅತ್ಯಾಚಾರವೆಸಗಿ ಐರನ್ ಬಾಕ್ಸ್ನಿಂದ ಸುಟ್ಟ ಮೌಲ್ವಿ
- Sports
ಆಸ್ಟ್ರೇಲಿಯಾ vs ನ್ಯೂಜಿಲೆಂಡ್, 1ನೇ ಟೆಸ್ಟ್, Live: ಸ್ಟಾರ್ ಆಗಿ ಹೊಳೆದ ಸ್ಟಾರ್ಕ್
- Automobiles
ವಾಹನ ಡೀಲರ್ಗಳ ಟ್ರೇಡ್ ಸರ್ಟಿಫಿಕೇಟ್ ಅಮಾನತುಗೊಳಿಸಿದ ಸಾರಿಗೆ ಇಲಾಖೆ
- Technology
ಹುವಾವೇ P40 ಲೈಟ್ ಸ್ಮಾರ್ಟ್ಫೋನ್ನ ಫೀಚರ್ಸ್ ಲೀಕ್!
- Education
NPCIL: 137 ಹುದ್ದೆಗಳ ನೇಮಕಾತಿ..ಜ.6ರೊಳಗೆ ಅರ್ಜಿ ಹಾಕಿ
- Finance
ಡಿಸೆಂಬರ್ 15 ಫಾಸ್ಟ್ಟ್ಯಾಗ್ ಡೆಡ್ಲೈನ್: ತಪ್ಪಿದರೆ ದುಪ್ಪಟ್ಟು ಟೋಲ್ ಶುಲ್ಕ
- Movies
ಡಿಸೆಂಬರ್ 21ಕ್ಕೆ 'ಕೆಜಿಎಫ್' ಅಭಿಮಾನಿಗಳಿಗೆ 'ಬಿಗ್' ನ್ಯೂಸ್
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಗರ್ಭನಿರೋಧಕ ಮಾತ್ರೆ ತೆಗೆದುಕೊಂಡಾಗ ಗರ್ಭಧಾರಣೆಯಾಗಲು ಸಾಧ್ಯವೇ?
ಅವರಿಬ್ಬರು ಮದುವೆಯಾಗಿ ಕೆಲವು ತಿಂಗಳಾಗಿದ್ದೆವು ಅಷ್ಟೆ, ಈಗಲೇ ಮಗು ಬೇಡ, ಮೊದಲು ವೃತ್ತಿ ಜೀವನ ಹಾಗೂ ಆರ್ಥಿಕ ಬದುಕು ಸುಧಾರಿಸಬೇಕು, ಆ ನಂತರ ಮಗು ಮಾಡಿಕೊಳ್ಳೋಣ ಎಂದು ಗರ್ಭ ನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ ಫ್ಯಾಮಲಿ ಪ್ಲ್ಯಾನಿಂಗ್ನಲ್ಲಿದ್ದರು. ಆದರೆ ಅವರ ನಿರೀಕ್ಷೆಗಳನ್ನು ಮೀರಿ ಆಕೆ ಗರ್ಭಿಣಿ ಎಂಬ ಸುದ್ದಿಯನ್ನು ವೈದ್ಯರು ಹೇಳಿದಾಗ ಇಬ್ಬರಿಗೂ ಶಾಕ್.
ಗರ್ಭನಿರೋಧಕ ಮಾತ್ರೆ ತೆಗೆದುಕೊಂಡರೂ ಗರ್ಭಧಾರಣೆಯಾಗಲು ಸಾಧ್ಯವೇ? ಯಾವ ಸಮಯದಲ್ಲಿ ಗರ್ಭನಿರೋಧಕಗಳು ಮಾತ್ರೆಗಳು ಪರಿಣಾಮ ಬೀರುವುದಿಲ್ಲ ಎಂಬುವುದರ ಬಗ್ಗೆ ಹೆಚ್ಚಿನ ಮಾಹಿತಿ ನೋಡಿ ಇಲ್ಲಿದೆ.
ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಂಡಾಗ ಅದರಲ್ಲಿರುವ ಹಾರ್ಮೋನ್ಗಳು ಅಂಡಾಣುಗಳು ಬಿಡುಗಡೆಯಾಗುವುದನ್ನು ತಡೆಯುತ್ತದೆ. ಇನ್ನು ಕೆಲವೊಂದು ಗರ್ಭನಿರೋಧಕ ಮಾತ್ರೆಗಳು ವೀರ್ಯಾಣುಗಳು ಅಂಡಾಣುಗಳ ಸಂಪರ್ಕಕಕ್ಕೆ ಬರದಂತೆ ತಡೆಯುತ್ತದೆ. ಆದರೆ ಗರ್ಭನಿರೋಧಕ ಮಾತ್ರೆ ತೆಗೆದುಕೊಂಡರೆ ಗರ್ಭಧಾರಣೆಯಾಗುವುದೇ ಇಲ್ಲ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುತ್ತಿರುವ 100 ಮಹಿಳೆಯರಲ್ಲಿ ಒಬ್ಬ ಮಹಿಳೆ ಗರ್ಭಧಾರಣೆಯಾಗುವ ಸಾಧ್ಯತೆ ಇದೆ.
ಇಲ್ಲಿ ಗರ್ಭನಿರೋಧಕ ಮಾತ್ರೆಗಳು ಯಾವಾಗ ಗರ್ಭ ನಿಲ್ಲುವುದನ್ನು ತಡೆಯುವಲ್ಲಿ ವಿಫಲವಾಗುತ್ತವೆ ಎಂದು ಹೇಳಲಾಗಿದೆ ನೋಡಿ:

ಪ್ರತಿದಿನ ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳದಿದ್ದರೆ
ಮಗು ಸದ್ಯಕ್ಕೆ ಬೇಡ ಎಂದು ತೀರ್ಮಾನಿಸಿದವರು ಗರ್ಭ ನಿರೋಧಕ ಮಾತ್ರೆಗಳನ್ನು ಪ್ರತಿದಿನ ತೆಗೆದುಕೊಳ್ಳಬೇಕು. ಒಂದು ದಿನ ತೆಗೆಯದಿದ್ದರೂ ಗರ್ಭಧಾರಣೆಯಾಗುವ ಸಾಧ್ಯತೆ ಇರುತ್ತದೆ. ಒಮ್ಮೆ ಲೈಂಗಿಕ ಕ್ರಿಯೆ ಮಾಡಿದರೆ ಪುರುಷರ ವೀರ್ಯಾಣುಗಳು ಮಹಿಳೆಯರ ದೇಹದಲ್ಲಿ 5 ದಿನದವರಿಗೆ ಇರುತ್ತದೆ, ಆದ್ದರಿಂದ ಗರ್ಭನಿರೋಧಕ ಮಾತ್ರೆ ತೆಗದುಕೊಳ್ಳಲು ಮಿಸ್ ಮಾಡಿದರೆ ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚು.
ಪ್ರತಿದಿನ ಮಾತ್ರೆ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವವರು ಸ್ತ್ರೀರೋಗ ತಜ್ಞರನ್ನು ಭೇಟಿ, ಗರ್ಭಧಾರಣೆ ತಡೆಗಟ್ಟಲು ಬೇರೆ ಯಾವ ವಿಧಾನ ಅನುಸರಿಸಿದರೆ ಒಳ್ಳೆಯದು ಎಂಬ ಸಲಹೆ ಕೇಳಬಹುದು.

ವಾಂತಿಯಾದರೆ
ಗರ್ಭನಿರೋಧಕ ಮಾತ್ರೆ ತೆಗೆದುಕೊಂಡ ದಿನ ಹುಷಾರಿಲ್ಲದೆ ಅಥವಾ ಆಹಾರದಲ್ಲಿ ವ್ಯತ್ಯಾಸವಾಗಿ ವಾಂತಿ ಮಾಡಿದರೆ ಗರ್ಭನಿರೋಧಕ ಮಾತ್ರೆ ಪರಿಣಾಮ ಬೀರುವುದಿಲ್ಲ. ಆದ್ದರಿಂದ ಗರ್ಭನಿರೋಧಕ ಮಾತ್ರೆ ನುಂಗಿದ ಸ್ವಲ್ಪ ಹೊತ್ತಿನಲ್ಲಿಯೇ ವಾಂತಿ ಮಾಡಿದರೆ ಮತ್ತೊಂದು ಮಾತ್ರೆ ತೆಗೆದುಕೊಳ್ಳಬೇಕು. ಮಾರನೆಯ ದಿನ ಮಾಮೂಲಿಯಂತೆ ತೆಗೆದುಕೊಂಡರೆ ಸಾಕು.

ಬೇರೆ-ಬೇರೆ ಸಮಯದಲ್ಲಿ ಮಾತ್ರೆ ತೆಗೆದುಕೊಳ್ಳುವುದು
ನೀವು ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ದಿನಾಲೂ ಒಂದೇ ಸಮಯದಲ್ಲಿ ತೆಗೆದುಕೊಳ್ಳಬೇಕು. ಇವತ್ತು 8 ಗಂಟೆ ರಾತರಿ ತೆಗೆದುಕೊಂಡು ಮಾರನೆಯ ದಿನ ಸಂಜೆ ಅಥವಾ ತಡ ರಾತ್ರಿ ತೆಗೆದುಕೊಳ್ಳುವುದು ಮಾಡಬಾರದು. ಪ್ರತಿದಿನ ಯಾವ ಸಮಯದಲ್ಲಿ ತೆಗೆದುಕೊಳ್ಳುತ್ತೀರೋ ಆ ಸಮಯದಲ್ಲಿ ಒಂದೆರಡು ತಾಸು ವ್ಯತ್ಯಾಸವಾದರೆ ತೊಂದರೆಯಿಲ್ಲ, ಆದರೆ ತಪ್ಪದೆ ತೆಗೆದುಕೊಳ್ಳಬಹುದು. ಒಂದು ವೇಳೆ ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುವ ಸಮಯದಲ್ಲಿ ತುಂಬಾ ವ್ಯತ್ಯಾಸವಾದರೆ ಕಾಂಡೋಮ್ ಬಳಸುವುದು ಸುರಕ್ಷಿತ.

ಗರ್ಭನಿರೋಧಕ ಮಾತ್ರೆಯ ಪ್ಯಾಕ್ ಮುಗಿದ ಕೂಡಲೇ ಹೊಸ ಪ್ಯಾಕ್ ಬಳಸಬೇಕು
ಗರ್ಭನಿರೋಧಕ ಮಾತ್ರೆಯ ಒಂದು ಪ್ಯಾಕ್ ಮುಗಿದು ಒಂದೆರಡು ದಿನ ಬಿಟ್ಟು ಮತ್ತೆ ಗರ್ಭನಿರೋಧಕ ಮಾತ್ರೆಗಳನ್ನು ತೆಗೆದುಕೊಳ್ಳುವುದು ಮಾಡಿದರೆ ಗರ್ಭಧಾರಣೆಯಾಗುವ ಸಾಧ್ಯತೆ ಇದೆ. ಒಂದೆರಡು ದಿನ ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳದೆ, ಮತ್ತೆ ತೆಗೆದುಕೊಂಡರೆ ಬೇರೆ ಆಗ ಗರ್ಭನಿರೋಧಕ ಮಾತ್ರೆ ಅಷ್ಟು ಪರಿಣಾಮ ಬೀರುವುದಿಲ್ಲ, ಇದರಿಂದಾಗಿ ಗರ್ಭಪಾತವಾಗುವುದು.

ಇತರ ಔಷಧಿಗಳನ್ನು ತೆಗೆದುಕೊಂಡಾಗ
ಅಲರ್ಜಿ, ಸೋಂಕು ಹೀಗೆ ಇತರ ಆರೋಗ್ಯ ಸಮಸ್ಯೆಗಳಿಗೆ ಔಷಧಿಗಳನ್ನು ತೆಗೆದುಕೊಂಡಾಗ, ಗರ್ಣ ನಿರೋಧಕ ಮಾತ್ರೆ ತೆಗೆದುಕೊಂಡಿದ್ದರೂ ಅದು ಅಷ್ಟು ಪ್ರಭಾವ ಬೀರುವುದಿಲ್ಲ. ಇನ್ನು ಕಾಯಿಲೆಗೆ ದೀರ್ಘಕಾಲದವರೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಕೂಡ ಗರ್ಭನಿರೋಧಕ ಮಾತ್ರೆಗಳು ಪರಿಣಾಮ ಬೀರುವುದಿಲ್ಲ. ಆಗ ಗರ್ಭಧಾರಣೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಗರ್ಭನಿರೋಧಕ ಮಾತ್ರೆಗಳು ಪರಿಣಾಮಕಾರಿ ಕಾರ್ಯ ನಿರ್ವಹಿಸಲು ಏನು ಮಾಡಬೇಕು?
* ಗರ್ಭನಿರೋಧಕ ಮಾತ್ರೆಯ ಕವರ್ನ ಮೇಲಿರುವ ಸೂಚನೆಗಳನ್ನು ಓದಿ, ಇದರಿಂದ ಅದನ್ನು ಹೇಗೆ ಬಳಸಿದರೆ ಒಳ್ಳೆಯದು ಎಂಬ ಮಾಹಿತಿ ದೊರೆಯುತ್ತದೆ.
* ಪ್ರತಿದಿನ ನಿಗದಿತ ಸಮಯಕ್ಕೆ ಗರ್ಭನಿರೋಧಕ ಔಷಧಿ ತೆಗೆದುಕೊಳ್ಳಿ.
* ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳಲು ಮರೆರು ಹೋಗದಿರಲು ಆ್ಯಪ್ಸ್ ಬಳಸಿ.
* ಬಳಸುತ್ತಿದ್ದ ಮಾತ್ರೆಯ ಪ್ಯಾಕ್ಮುಗಿಯುತ್ತಿದ್ದಂತೆ ಹೊಸದು ತನ್ನಿ, ಸಂಪೂರ್ಣ ಖಾಲಿಯಾಗುವವರೆಗೆ ಕಾಯಬೇಡಿ.
* ಆ ಪ್ಯಾಕ್ನಲ್ಲಿ ಒಂದು ಅಥವಾ ಎರಡು ಮಾತ್ರೆ ತೆಗೆದುಕೊಳ್ಳಲು ಮರೆತು ಹೋದರೆ ಗರ್ಭಧಾರಣೆ ತಡೆಯಲು ಕಾಂಡೋಮ್ ಬಳಸಿ.
ಗರ್ಭಧಾರಣೆಯಾಗುವುದನ್ನು ತಡೆಗಟ್ಟಲು ಮಾತ್ರೆ ಮಾತ್ರವಲ್ಲ, ಇನ್ನು ಹಲವಾರು ವಿಧಾನಗಳಿವೆ, ಯಾರಿಗೆ ಪ್ರತಿನಿತ್ಯ ಮಾತ್ರೆ ತೆಗೆದುಕೊಳ್ಳಲು ಸಾಧ್ಯವಿಲ್ಲವೋ ಅವರು ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವುದು ಸೂಕ್ತ.