For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಸೇವಿಸಬಹುದಾದ ಹಾಗೂ ಸೇವಿಸಲೇಬಾರದ ಪಾನೀಯಗಳು

|

ಇತರ ಸಮಯಕ್ಕಿಂತಲೂ ಗರ್ಭಾವಸ್ಥೆಯಲ್ಲಿ ದೇಹಕ್ಕೆ ಹೆಚ್ಚಿನ ನೀರಿನಂಶದ ಅಗತ್ಯವಿದೆ. ಏಕೆಂದರೆ ಬೆಳೆಯುತ್ತಿರುವ ಮಗುವಿನ ಹಲವಾರು ಕಾರ್ಯಗಳಿಗೆ ನೀರು ಅವಶ್ಯಕ. ಆಹಾರ ಸೇವಿಸುವುದೇ ಆಗಲಿ, ಕಲ್ಮಶಗಳನ್ನು ಹೊರ ಹಾಕುವುದೇ ಆಗಲಿ, ಮಗುವನ್ನು ಸುತ್ತುವರೆದಿರುವ ಆಮ್ನಿಯಾಟಿಕ್ ದ್ರವದ ಉತ್ಪಾದನೆಗೇ ಆಗಲಿ, ದೇಹದ ಅಂಗಾಂಶಗಳನ್ನು ನಿರ್ಮಿಸುವುದಾಗಲೀ, ಮೆದುಳಿನ ಬೆಳವಣಿಗೆಯಾಗಲಿ, ನೀರು ಬೇಕೇ ಬೇಕು ಮತ್ತು ಗರ್ಭಿಣಿ ಈ ಅಗತ್ಯತೆಯನ್ನು ಪೂರೈಸಲು ದಿನದಲ್ಲಿ ಹಲವಾರು ಬಾರಿ ನೀರನ್ನು ಮತ್ತು ನೀರಿನಂಶ ಇರುವ ಅಹಾರಗಳನ್ನು ಹೆಚ್ಚು ಹೆಚ್ಚು ಬಾರಿ ಸೇವಿಸಲೇಬೇಕಾಗುತ್ತದೆ.

Best Drinks to Have And Avoid During Pregnancy

ಗರ್ಭಾವಸ್ಥೆಯಲ್ಲಿ ಎಷ್ಟು ನೀರು ಬೇಕು ಎಂಬ ಪ್ರಶ್ನೆಗೆ ಸಾಕಷ್ಟು ಎಂಬ ಒಂದೇ ಉತ್ತರವನ್ನೇ ನೀಡಬಹುದೇ ಹೊರತು ಪ್ರತಿ ಗರ್ಭಿಣಿಯ ಆರೋಗ್ಯ, ದೇಹದ ತೂಕ ಮೊದಲಾದ ಅಂಶಗಳನ್ನು ಆಧರಿಸಿ ಈ ಪ್ರಮಾಣ ಹೆಚ್ಚು ಕಡಿಮೆಯಾಗಬಹುದು. ಆದರೂ ಸರಾಸರಿ ಅಂದಾಜಿನ ಪ್ರಕಾರ ಪ್ರತಿ ಗರ್ಭವತಿಯೂ ದಿನದಲ್ಲಿ ಏನಿಲ್ಲವೆಂದರೂ ಒಂದರಿಂದ ಎರಡು ಲೀಟರ್ ನೀರು ಕುಡಿಯಲೇ ಬೇಕು.

ಗರ್ಭವತಿಯ ನೀರಿನ ಅಗತ್ಯತೆಯ ಬಹುತೇಕ ಬೇಡಿಕೆಯನ್ನು ಸಾದಾ ನೀರು ಕುಡಿಯುವುದರಿಂದ ಪೂರೈಸಿಕೊಳ್ಳಬಹುದು. ಆದರೆ ಕೇವಲ ನೀರನ್ನೇ ಕುಡಿಯುತ್ತಿರಲು ಮತ್ತು ಇತರ ಇಷ್ಟದ ಪೇಯ ಅಥವಾ ಪಾನೀಯಗಳನ್ನು ಸೇವಿಸದೇ ಇರುವುದು ಸಾಧ್ಯವೂ ಇಲ್ಲ, ತರವೂ ಅಲ್ಲ! ಹಾಗೆಂದು, ಗರ್ಭವತಿ, ತನಗೆ ಇಷ್ಟ ಎಂದು ಮನಬಂದ ಪೇಯ ಅಥವಾ ಪಾನೀಯಗಳನ್ನು ಕುಡಿಯುವಂತಿಲ್ಲ. ಆಕೆಯ ಆರೋಗ್ಯಕ್ಕೆ ಯಾವುದು ಒಳ್ಳೆಯದು ಮತ್ತು ಒಳ್ಳೆಯದಲ್ಲ ಎಂಬುದನ್ನು ಪ್ರಸೂತಿ ತಜ್ಞರು ವಿವರಿಸಿದ್ದು ಇವುಗಳಲ್ಲಿ ಪ್ರಮುಖವಾದುವನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ.

(ಪೇಯ, ಮತ್ತು ಪಾನೀಯ - ಎರಡೂ ಮೇಲ್ನೋಟಕ್ಕೆ ಒಂದೇ ಎನಿಸಿದರೂ, ಕನ್ನಡ ಭಾಷೆಯಲ್ಲಿ ಇವುಗಳಿಗೆ ಸ್ಪಷ್ಟ ವಿವರಣೆ ಇದೆ. ಪೇಯ ಎಂದರೆ ಬಿಸಿಯಾಗಿರುವುದು ಎಂದೂ, ಪಾನೀಯ ಎಂದರೆ ತಣ್ಣಗಿರುವುದು ಎಂದೇ ಇವುಗಳ ಅರ್ಥ)

1. ಸ್ಮೂಥಿಗಳು

1. ಸ್ಮೂಥಿಗಳು

ಗರ್ಭಾವಸ್ಥೆ ಪ್ರಾರಂಭವಾದ ದಿನದಿಂದಲೇ ಗರ್ಭಿಣಿಗೆ ಏನೇನನ್ನೋ ತಿನ್ನುವ ಕುಡಿಯುವ ಬಯಕೆಯಾಗುತ್ತದೆ. ಹಲವು ಸಂಪ್ರದಾಯಗಳಲ್ಲಿ 'ಬಯಕೆ' ಎಂಬ ವಿಧಿಯನ್ನೂ ಆಚರಿಸಲಾಗುತ್ತದೆ. ವಿಶೇಷವಾಗಿ ಮೊದಲ ತ್ರೈಮಾಸಿಕದಲ್ಲಿ ಬೆಳಗ್ಗಿನ ಹೊತ್ತು ಈ ಬಯಕೆಗಳು ಭುಗಿಲೇಳುತ್ತವೆ. ಈ ಬಯಕೆಯಲ್ಲಿ ಸ್ಮೂಥಿ ಅಥವಾ ಹಣ್ಣಿನ ತಿರುಳನ್ನು ನುಣ್ಣಗೆ ಅರೆದು ದಪ್ಪನೆಯ ದ್ರವರೂಪದ ಪಾನೀಯವಾಗಿ ಸೇವಿಸುವುದೂ ಸೇರಿರುತ್ತದೆ.

ಆದರೆ ಈ ಸ್ಮೂಥಿಗಳಲ್ಲಿ ಸಕ್ಕರೆಯ ಪ್ರಮಾಣವೂ ಅಧಿಕವಾಗಿರುವ ಕಾರಣ ಗರ್ಭಿಣಿಯ ರಕ್ತದಲ್ಲಿ ಸಕ್ಕರೆಯ ಮಟ್ಟಗಳನ್ನು ಧಿಗ್ಗನೇ ಏರಿಸಬಹುದು. ಆದರೂ, ಸ್ಮೂಥಿ ಸೇವನೆಯ ಬಯಕೆ ವಿಶ್ವದ ಎಲ್ಲಾ ಕಡೆಯ ಮಹಿಳೆಯರಲ್ಲಿಯೂ ಕಾಣಿಸಿಕೊಳ್ಳುತ್ತದೆ ಹಾಗೂ ಈ ಮೂಲಕ ಅಗತ್ಯಕ್ಕೂ ಅತಿ ಹೆಚ್ಚು ಪ್ರಮಾಣದ ಸಕ್ಕರೆಯನ್ನು ಇವರು ಸೇವಿಸುತ್ತಾರೆ.

ಹಾಗಾಗಿ, ಈ ಬಯಕೆಯನ್ನು ಹತ್ತಿಕ್ಕಿಕೊಳ್ಳಬಾರದು ಮತ್ತು ಇದನ್ನು ಪೂರೈಸಲು ಸಕ್ಕರೆಯ ಅಂಶ ಕಡಿಮೆ ಇರುವ ಹಣ್ಣುಗಳನ್ನು ಆಯ್ದುಕೊಳ್ಳುವುದೇ ಜಾಣತನದ ಕ್ರಮವಾಗಿದೆ. ಈ ಅಗತ್ಯತೆಯನ್ನು ಪೂರೈಸುವ ಸೂಕ್ತ ಹಣ್ಣುಗಳೆಂದರೆ ಕಿವಿ, ಚೆರ್‍ರಿ, ಸ್ಟ್ರಾಬೆರಿ, ಮತ್ತು ಬೆಣ್ಣೆಹಣ್ಣು (ಅವೋಕ್ಯಾಡೋ). ಇವುಗಳಲ್ಲಿ ಹೆಚ್ಚಿನ ಪ್ರೋಟೀನ್ ಅಂಶ ಸೇರಿಸಲು ಒಣಫಲಗಳು, ಚಿಯಾ ಬೀಜಗಳು ಅಥವಾ ಕಾಟೇಜ್ ಚೀಸ್ ಮೊದಲಾದವುಗಳನ್ನೂ ಬೆರೆಸಿ ಸ್ಮೂಥಿ ತಯಾರಿಸಿಕೊಳ್ಳಬಹುದು. ಹಣ್ಣಿನಲ್ಲಿಯೇ ಸಕ್ಕರೆಯ ಅಂಶ ಇರುವ ಕಾರಣ ಹೆಚ್ಚುವರಿ ಸಕ್ಕರೆ ಸೇರಿಸಬಾರದು.

2. ಹಾಲು

2. ಹಾಲು

ಇತರ ಸಮಯಕ್ಕಿಂತಲೂ ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಅಗತ್ಯತೆ ಹೆಚ್ಚಿರುತ್ತದೆ. ಹಾಗಾಗಿ ಗರ್ಭವತಿಯರು ತಪ್ಪದೇ ನಿತ್ಯವೂ ಹಾಲು ಸೇವಿಸುವಂತೆ ತಜ್ಞರು ಸಲಹೆ ಮಾಡುತ್ತಾರೆ.

ತಾಜಾ ಹಾಲು ಮತ್ತು ಹಾಲಿನ ಪುಡಿಯಿಂದ ತಯಾರಿಸಲಾದ ಹಾಲು ಇವುಗಳ ಆಯ್ಕೆ ಬಂದಾಗ ತಾಜಾ ಹಾಲಿನಲ್ಲಿ ಕೊಂಚ ಹೆಚ್ಚೇ ಕೊಬ್ಬಿನ ಅಂಶ ಇರುವ ಕಾರಣ ಗರ್ಭಿಣಿಗೆ ಸ್ಥೂಲಕಾಯವಿದ್ದರೆ ಹಾಲಿನ ಪುಡಿಯ ಹಾಲೇ ಉತ್ತಮ. ಸಾಮಾನ್ಯ ಆರೋಗ್ಯ ಇರುವ ಇತರ ಗರ್ಭವತಿಯರಿಗೆ ತಾಜಾ ಹಾಲೇ ಸೂಕ್ತ. ಹಾಲು ಒಲ್ಲದ ಅಥವಾ ಹಾಲಿನ ಲಾಕ್ಟೋಸ್ ಸಹಿಸಿಕೊಳ್ಳಲಾರದ (lactose intolerance) ಗರ್ಭವತಿಯರು ಹೆಚ್ಚಿನ ಕ್ಯಾಲ್ಸಿಯಂ ಬೆರೆಸಿರುವ ಸೋಯಾ ಅವರೆಯ ಹಾಲನ್ನು ಸೇವಿಸಬಹುದು.

3. ಹಣ್ಣುಗಳನ್ನು ನೆನೆಸಿಟ್ಟ ನೀರು

3. ಹಣ್ಣುಗಳನ್ನು ನೆನೆಸಿಟ್ಟ ನೀರು

ಬರೆಯ ನೀರನ್ನು ಸೇವಿಸುವ ಬದಲು ಒಂದು ದಿನವಿಡೀ ಫ್ರಿಜ್ಜಿನಲ್ಲಿ ಹಣ್ಣಿನ ತಿರುಳನ್ನು ಮುಳುಗಿಸಿಟ್ಟ ನೀರನ್ನು(Fruit-infused water) ಕುಡಿಯಬಹುದು. ಇದನ್ನು ತಯಾರಿಸಲು ದೊಡ್ಡ ನೀರಿನ ಪಾತ್ರೆಯಲ್ಲಿ ನಿಮ್ಮ ಇಷ್ಟದ ಹಣ್ಣುಗಳ ತಿರುಳುಗಳನ್ನು ಚಿಕ್ಕದಾಗಿ ಕತ್ತರಿಸಿ ನೀರಿಗೆ ಹಾಕಿ ಪಾತ್ರೆಯನ್ನು ಒಂದು ದಿನವಿಡೀ ಫ್ರಿಜ್ಜಿನಲ್ಲಿರಿಸಬೇಕು. ಕರಬೂಜ, ಕಲ್ಲಂಗಡಿ, ಸೇಬು, ಲಿಂಬೆ, ಕಿತ್ತಳೆ, ಸೌತೆಕಾಯಿ, ಪಾರ್ಸೆ ಎಲೆಗಳು (ಚಿಕ್ಕದಾಗಿ ಹೆಚ್ಚಿ) ಮೊದಲಾದ ನಿಮ್ಮ ಇಷ್ಟದ ಯಾವುದೇ ಹಣ್ಣುಗಳನ್ನು ಆಯ್ದುಕೊಳ್ಳಬಹುದು. ರುಚಿಗಾಗಿ ಕೊಂಚ ಲವಂಗ ಅಥವಾ ದಾಲ್ಚಿನ್ನಿ ಚೆಕ್ಕೆಯ ಪುಡಿಯನ್ನೂ ಬೆರೆಸಬಹುದು. ಬಳಿಕ ಇದನ್ನು ಸೋಸಿ ನೀರನ್ನು ಸಂಗ್ರಹಿಸಿ ದಿನವಿಡೀ ಕೊಂಚ ಕೊಂಚವಾಗಿ ಸೇವಿಸಬಹುದು.

4. ಎಳನೀರು

4. ಎಳನೀರು

ಗರ್ಭವತಿಯರಿಗೆ ಈ ನೀರು ಅಮೃತಸಮಾನವಾಗಿದೆ. ಎಳನೀರಿನಲ್ಲಿ ಆಂಟಿ ಆಕ್ಸಿಡೆಂಟುಗಳೂ, ಪೊಟ್ಯಾಶಿಯಂ, ಮೆಗ್ನೀಶಿಯಂ, ವಿಟಮಿನ್ ಸಿ ಮೊದಲಾದ ಪೋಷಕಾಂಶಗಳೂ ಇವೆ. ಅಲ್ಲದೇ ಗರ್ಭವತಿಯ ರಕ್ತದ ಒತ್ತಡ ಹೆಚ್ಚಿದ್ದರೆ ನೀರಿನ ಬದಲು ಎಳನೀರನ್ನೇ ಹೆಚ್ಚಾಗಿ ಸೇವಿಸಬೇಕು. ಅಲ್ಲದೇ ರಕ್ತದಲ್ಲಿ ಸಕ್ಕರೆಯ ಮಟ್ಟಗಳನ್ನು ನಿಯಂತ್ರಣದಲ್ಲಿರಿಸಲೂ ಎಳನೀರು ನೆರವಾಗುತ್ತದೆ.

ಗರ್ಭಾವಸ್ಥೆಯಲ್ಲಿ ಎದುರಾಗುವ ಸಾಮಾನ್ಯ ತೊಂದರೆ ಎಂದರೆ ವಾಕರಿಕೆ ಮತ್ತು ವಾಂತಿ (Nausea and Vomiting of Pregnancy [NVP]. 85% ಶೇಖಡಾ ಗರ್ಭವತಿಯರಿಗೆ ಇದು ಸಾಮಾನ್ಯ.

ಮೂರನೆಯ ವಾರದಿಂದ ಹದಿನಾರನೆಯ ವಾರದವರೆಗೂ ಇದು ಕಾಣಿಸಿಕೊಳ್ಳಬಹುದು. ಈ ಗರ್ಭಿಣಿಯರು ಸದಾ ಮನೆಯಲ್ಲಿ ಎಳನೀರಿನ ದಾಸ್ತಾನು ಇರಿಸಿ ನಿತ್ಯವೂ ಸೇವಿಸುವ ಮೂಲಕ ಈ ತೊಂದರೆಯನ್ನು ಸಾಕಷ್ಟು ಮಟ್ಟಿಗೆ ಕಡಿಮೆ ಮಾಡಿಕೊಳ್ಳಬಹುದು. ಎಳನೀರಿನಲ್ಲಿರುವ ಎಲೆಕ್ಟ್ರೋಲೈಟುಗಳು ಈ ವಾಕರಿಕೆಯನ್ನು ಆದಷ್ಟೂ ಮಟ್ಟಿಗೆ ಕಡಿಮೆ ಮಾಡುತ್ತವೆ.

ಗರ್ಭಾವಸ್ಥೆಯಲ್ಲಿ ಸೇವಿಸಬಾರದ ಪೇಯ ಮತ್ತು ಪಾನೀಯಗಳು

ಗರ್ಭಿಣಿಯರು ಸುರಕ್ಷಿತವಾಗಿ ಕುಡಿಯಬಹುದಾದ ಅನೇಕ ಪಾನೀಯಗಳು ಇದ್ದರೂ, ಕೆಲವು ಪಾನೀಯಗಳನ್ನುಸೇವಿಸಲೇ ಬಾರದು ಅಥವಾ ಮಿತಪ್ರಮಾಣದಲ್ಲಿ ಸೇವಿಸಬೇಕು.. ಗರ್ಭಪಾತ ಅಥವಾ ಚಲನೆಯಿಲ್ಲದ ಮಗುವಿನ ಜನನ ಮೊದಲಾದ ಅಪಾಯಗಳಿಗೆ ಸಂಬಂಧಿಸಿದಂತೆ ಗರ್ಭಿಣಿ ಸೇವಿಸಬಾರದ ದ್ರವಗಳಲ್ಲಿ ಮದ್ಯ ಅಥವಾ ಆಲ್ಕೊಹಾಲ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಸಾಫ್ಟ್ ಡ್ರಿಂಕ್ಸ್‌

ಸಾಫ್ಟ್ ಡ್ರಿಂಕ್ಸ್‌

ಸಾಫ್ಟ್ ಡ್ರಿಂಕ್ ಅಥವಾ ಬುರುಗು ಬರುವ ಯಾವುದೇ ಲಘು ಪಾನೀಯಗಳನ್ನೂ ಗರ್ಭವತಿ ಸೇವಿಸಬಾರದು. ಎನ್ ಸಿ ಬಿ ಐ (National Center for Biotechnology Information [NCBI]) ಸಂಸ್ಥೆಯು ಈ ಬಗ್ಗೆ ನಡೆಸಿದ ಅಧ್ಯಯನದ ಬಳಿಕ ವಿವಿಧ ಸಂಸ್ಥೆಗಳ ವಿವಿಧ ಹೆಸರಿನ ಈ ಉತ್ಪನ್ನಗಳಲ್ಲಿ ಪ್ರತಿಯೊಂದರಲ್ಲಿಯೂ ಗರ್ಭವತಿಯ ದೇಹ ಸಹಿಸಿಕೊಳ್ಳಬಹುದಕ್ಕಿಂತಲೂ "ಹೆಚ್ಚಿನ ಸಾಂದ್ರತೆಯಲ್ಲಿ ಕೆಫೀನ್ ಮತ್ತು ಕ್ವಿನೈನ್ ಎಂಬ ರಾಸಾಯನಿಕಗಳಿವೆ" ಎಂದು ಪ್ರಕಟಿಸಿದೆ.

ಇವೆರಡೂ ರಾಸಾಯನಿಕಗಳು ಪ್ರಬಲವಾಗಿದ್ದು ಬೆಳೆಯುತ್ತಿರುವ ಮಗುವಿನ ಮೇಲೆ ಮಾರಕ ಪ್ರಭಾವ ಬೀರಬಹುದು. ಆದರೆ ಈ ಸಂಸ್ಥೆಗಳು ಚಾಪೆ ಕೆಳಗೆ ತೂರುವ ಇನ್ನೊಂದು ಕ್ರಮವನ್ನು ಅನುಸರಿಸುತ್ತವೆ. ಅವೆಂದರೆ ತಮ್ಮ ಉತ್ಪನ್ನದಲ್ಲಿ ಸಕ್ಕರೆ ಇಲ್ಲ ಎಂದು ಹೇಳಿಕೊಂಡು ಈ ಉತ್ಪನ್ನಗಳನ್ನು ಸಕ್ಕರೆಯಿಲ್ಲದ 'ಡಯೆಟ್' ಅಥವಾ 'ಶುಗರ್ ಫ್ರೀ' ಎಂಬ ದೊಡ್ಡ ಹಣೆಪಟ್ಟಿಗಳನ್ನು ಅಂಟಿಸಿ ಈ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತವೆ.

ಆದರೆ ಸಕ್ಕರೆ ಇಲ್ಲ ಎಂದರೆ ಇದರಲ್ಲಿ ಸಕ್ಕರೆಯ ಬದಲು 'ಸ್ಯಾಕರೀನ್' (saccharine) ಅಥವಾ ಸಕ್ಕರೆಯಂತಹ ರುಚಿ ಹೊಂದಿರುವ ಆಸ್ಪರ್ಟೇಮ್ (aspertame) ಎಂಬ ರಾಸಾಯನಿಕಗಳಿರಬಹುದು. ಆದರೆ ಇವೂ ಗರ್ಭವತಿಯರಿಗೂ, ಇತರರಿಗೂ ಸುರಕ್ಷಿತವಲ್ಲ. ಅಲ್ಲದೇ ಸ್ಯಾಕರೀನ್ ಬೆಳೆಯುತ್ತಿರುವ ಮಗುವಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತದೆ ಎಂದೂ ಗಮನಿಸಲಾಗಿದೆ.

ಇತರೆ ಸೇವಿಸಬಾರದ ಪಾನೀಯಗಳು

ಇತರೆ ಸೇವಿಸಬಾರದ ಪಾನೀಯಗಳು

  • ಪ್ಶಾಶ್ಚರೀಕರಿಸದ ಹಾಲು ಸಹಾ ಗರ್ಭವತಿಯರಿಗೆ ಸೂಕ್ತವಲ್ಲ. ಇದರಿಂದ ಬ್ಯಾಕ್ಟೀರಿಯಾಗಳು ದೇಹ ಸೇರಬಹುದು.
  • ಟೀ ಕಾಫಿಗಳಲ್ಲೂ ಕೆಫೀನ್ ಇರುವ ಕಾರಣ ಇವನ್ನು ಕುಡಿಯದೇ ಇರುವುದೇ ಸೂಕ್ತ. ಆದರೆ ವ್ಯಸನವಿದ್ದರೆ ಈ ಪ್ರಮಾಣವನ್ನು ಆದಷ್ಟೂ ತಗ್ಗಿಸಬೇಕು. ಇದರ ಬದಲಿಗೆ ಪ್ಯಾಶ್ಚರೀಕರಿಸಿದ ತಾಜಾ ಹಾಲಿನಿಂದ ತಯಾರಿಸಲಾದ ಮೊಸರು, ಮಜ್ಜಿಗೆಗಳನ್ನು ಸೇವಿಸಬಹುದು.
  • ಗರ್ಭಧಾರಣೆಯು ನಿಜಕ್ಕೂ ಗರ್ಭವತಿಯ ಜೀವನವನ್ನು ಬದಲಾಯಿಸುವ ಅನುಭವವೇ ಆಗಿದೆ. ಗರ್ಭಿಣಿ ಎಂದಾಕ್ಷಣ ಪ್ರತಿಯೊಬ್ಬರೂ ತಮ್ಮ ಸಲಹೆಯನ್ನು ನೀಡಲು ಮುಂದಾಗುತ್ತಾರೆ. ಇಷ್ಟವಿಲ್ಲದಿದ್ದರೂ ಈ ಸಲಹೆಗಳನ್ನು ಆಕೆ ಕೇಳಬೇಕಾಗುತ್ತದೆ ಮತ್ತು ಕಟ್ಟುನಿಟ್ಟಾದ ಆಹಾರ ಮಾರ್ಗಸೂಚಿಗಳಿಂದ ಮತ್ತೊಂದೆಡೆ ಸ್ತನತೊಟ್ಟುಗಳ ತುರಿಕೆ ಮೊದಲಾದವನ್ನೂ ಆಕೆ ಎದುರಿಸಬೇಕಾಗುತ್ತದೆ.
  • ಆರೋಗ್ಯಕರ ಪಾನೀಯಗಳು ಒತ್ತಡವನ್ನು ಉತ್ತಮವಾಗಿ ನಿಭಾಯಿಸಲು ನಿಮಗೆ ಸಹಾಯ ಮಾಡುತ್ತದೆ - ದೈಹಿಕ ಮತ್ತು ಭಾವನಾತ್ಮಕ - ಗರ್ಭಧಾರಣೆಯು ಒಡ್ಡುತ್ತದೆ.
  • ಹಾಗಾಗಿ ಆರೋಗ್ಯದ ಜೊತೆಗೇ ಮಾನಸಿಕ ಏರುಪೇರುಗಳನ್ನೂ ಎದುರಿಸಬೇಕಾಗಿರುವ ಗರ್ಭವತಿಯ ಆರೋಗ್ಯದಲ್ಲಿ ಆರೋಗ್ಯಕರ ಪಾನೀಯ ಮತ್ತು ಪೇಯಗಳು ಮಹತ್ತರ ಪಾತ್ರ ವಹಿಸುತ್ತವೆ.
English summary

Best Drinks to Have And Avoid During Pregnancy

Here we are discussing about best drinks to have and avoid during pregnancy. A major part of the daily fluid requirement will be fulfilled by water. Nevertheless, there are many other drinks that you can safely drink during pregnancy. Let's take a look at some of the best drinks to have during pregnancy. Read more.
X
Desktop Bottom Promotion