For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ತೆಂಗಿನಕಾಯಿ ನೀರು ಕುಡಿಯುವುದರಿಂದ ಎಂತಹ ಪ್ರಯೋಜನ ಸಿಗುತ್ತೆ ಗೊತ್ತಾ?

|

ತೆಂಗಿನಕಾಯಿ ನೀರು ಆರೋಗ್ಯಕ್ಕೆ ತುಂಬಾ ಉತ್ತಮವಾದ ಪಾನೀಯ. ಅದರಲ್ಲಿರುವ ಪೋಷಕಾಂಶಗಳು ವ್ಯಕ್ತಿಯೊಬ್ಬನನ್ನು ಆರೋಗ್ಯ ಹಾಗೂ ಉಲ್ಲಾಸದಾಯಕವಾಗಿಸಲು ಸಹಾಯ ಮಾಡುವುದು. ಆದರೆ ಇದು ಗರ್ಭಿಣಿಯರ ಪಾಲಿನ ಅಮೃತವೆಂಬಂತೆ ಕಾರ್ಯನಿರ್ವಹಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಹೌದು, ತೆಂಗಿನಕಾಯಿ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ಗರ್ಭಿಣಿಯರಿಗೆ ಸಾಕಷ್ಟು ಪ್ರಯೋಜನಗಳಿವೆ. ಅವುಗಳಾಗುವುವು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.

ಗರ್ಭಾವಸ್ಥೆಯಲ್ಲಿ ತೆಂಗಿನ ನೀರನ್ನು ಸೇವಿಸುವುದು ಸುರಕ್ಷಿತವೇ?

ಗರ್ಭಾವಸ್ಥೆಯಲ್ಲಿ ತೆಂಗಿನ ನೀರನ್ನು ಸೇವಿಸುವುದು ಸುರಕ್ಷಿತವೇ?

ಹೌದು, ಗರ್ಭಾವಸ್ಥೆಯಲ್ಲಿ ತೆಂಗಿನ ನೀರನ್ನು ಕುಡಿಯುವುದು ಸುರಕ್ಷಿತವಾಗಿದೆ. ಆದರೆ ಇತರ ಯಾವುದೇ ಆಹಾರದಂತೆ, ಮಿತವಾಗಿರುವುದು ಮುಖ್ಯ. ತೆಂಗಿನಕಾಯಿ ನೀರಿನಲ್ಲಿ ಪೊಟ್ಯಾಸಿಯಮ್‌ನಂತಹ ಖನಿಜಗಳು ಸಮೃದ್ಧವಾಗಿದ್ದು, ಅದರ ಅತಿಯಾದ ಸೇವನೆಯು ರಕ್ತದಲ್ಲಿ ಹೆಚ್ಚು ಪೊಟ್ಯಾಸಿಯಮ್‌ಗೆ ಕಾರಣವಾಗಬಹುದು. ಈ ಸ್ಥಿತಿಯನ್ನು ಹೈಪರ್‌ಕೆಲೆಮಿಯಾ ಎಂದು ಕರೆಯಲಾಗುತ್ತದೆ. ಇದು ಹೃದಯ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗಬಹದು. ಆದ್ದರಿಂದ ಮಿತವಾಗಿ ಸೇವಿಸಿ.

ಗರ್ಭಾವಸ್ಥೆಯಲ್ಲಿ ತೆಂಗಿನಕಾಯಿ ನೀರಿನ ಆರೋಗ್ಯ ಪ್ರಯೋಜನಗಳನ್ನು ಈ ಕೆಳಗೆ ನೀಡಲಾಗಿದೆ:

1. ನೈಸರ್ಗಿಕ ಮೂತ್ರವರ್ಧಕ:

1. ನೈಸರ್ಗಿಕ ಮೂತ್ರವರ್ಧಕ:

ತೆಂಗಿನಕಾಯಿ ನೀರನ್ನು ನೈಸರ್ಗಿಕ ಮೂತ್ರವರ್ಧಕ ಎಂದು ಪರಿಗಣಿಸಲಾಗುತ್ತದೆ. ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಇತರ ಖನಿಜಗಳು ಇರುವುದರಿಂದ ಇದು ಮೂತ್ರ ವಿಸರ್ಜಿಸುವ ಪ್ರಚೋದನೆಯನ್ನು ಹೆಚ್ಚಿಸುತ್ತದೆ. ತೆಂಗಿನ ನೀರಿನಲ್ಲಿರುವ ಆಂಟಿಲಿಥೋಜೆನಿಕ್ ಗುಣಲಕ್ಷಣಗಳು ಮೂತ್ರಪಿಂಡದ ಕಲ್ಲುಗಳು ಮತ್ತು ಸೋಂಕುಗಳನ್ನು ತಡೆಯಬಹುದು. ಆದ್ದರಿಂದ ಅವಧಿಪೂರ್ವ ಹೆರಿಗೆ ನೋವಿನ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.

2. ನಿರ್ಜಲೀಕರಣ ನಿವಾರಣೆ:

2. ನಿರ್ಜಲೀಕರಣ ನಿವಾರಣೆ:

ಗರ್ಭಾವಸ್ಥೆಯಲ್ಲಿ ಶಕ್ತಿಯ ಅಗತ್ಯವು ಹೆಚ್ಚಾಗಿರುತ್ತದೆ ಏಕೆಂದರೆ ವಾಕರಿಕೆ ಮತ್ತು ಅತಿಸಾರದಂತಹ ಪರಿಸ್ಥಿತಿಗಳು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ. ತೆಂಗಿನ ನೀರನಲ್ಲಿ ಖನಿಜಗಳು, ಸೋಡಿಯಂ, ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ರಂಜಕ ಇದ್ದು, ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

3. ಎದೆಯುರಿ ಮತ್ತು ಮಲಬದ್ಧತೆಯಿಂದ ಪರಿಹಾರ::

3. ಎದೆಯುರಿ ಮತ್ತು ಮಲಬದ್ಧತೆಯಿಂದ ಪರಿಹಾರ::

ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಬದಲಾವಣೆಗಳು ಎದೆಯುರಿ, ಮಲಬದ್ಧತೆ ಮತ್ತು ಅಜೀರ್ಣ ಮುಂತಾದ ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು. ತೆಂಗಿನ ನೀರಿನಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಅಂಶವು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು, ಜೀರ್ಣಕ್ರಿಯೆಯನ್ನು ಹೆಚ್ಚಿಸಲು, ಪಿಹೆಚ್ ಮಟ್ಟವನ್ನು ನಿಯಂತ್ರಿಸಲು ಮತ್ತು ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ.

4. ಸೋಂಕುಗಳನ್ನು ಎದುರಿಸಲು:

4. ಸೋಂಕುಗಳನ್ನು ಎದುರಿಸಲು:

ತೆಂಗಿನಕಾಯಿ ನೀರಿನಲ್ಲಿ ಸಾಕಷ್ಟು ಪ್ರಮಾಣದ ಜೀವಸತ್ವಗಳು, ಅಗತ್ಯ ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಇರುತ್ತವೆ, ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಸೋಂಕುಗಳಿಂದ ರಕ್ಷಣೆ ನೀಡುತ್ತವೆ.

5. ಹೃದಯದ ಆರೋಗ್ಯವನ್ನು ಕಾಪಾಡುವುದು:

5. ಹೃದಯದ ಆರೋಗ್ಯವನ್ನು ಕಾಪಾಡುವುದು:

ಕಡಿಮೆ ಎಲೆಕ್ಟ್ರೋಲೈಟ್ಸ ಮಟ್ಟವು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ತೆಂಗಿನ ನೀರನ್ನು ಕುಡಿಯುವುದರಿಂದ ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಲಾರಿಕ್ ಆಮ್ಲದ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ನ್ನು ಎದುರಿಸಿ, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವುದು.

6. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ:

6. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ:

ತೆಂಗಿನ ನೀರು ಕೊಬ್ಬು ರಹಿತ ಮತ್ತು ಕಡಿಮೆ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಆದ್ದರಿಂದ, ಸಕ್ಕರೆ ತುಂಬಿದ ಪಾನೀಯಗಳ ಬದಲಿಗೆ ಇದರ ನಿಯಮಿತ ಸೇವನೆಯು ಗರ್ಭಾವಸ್ಥೆಯಲ್ಲಿ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಗರ್ಭಧಾರಣೆಯು ನಿಮ್ಮ ದೇಹಕ್ಕೆ ಹೆಚ್ಚುವರಿ ತೂಕವನ್ನು ಸೇರಿಸುವುದರಿಂದ, ತೆಂಗಿನ ನೀರು ಒಟ್ಟು ಕ್ಯಾಲೊರಿ ಬಳಕೆಯನ್ನು ನಿಯಂತ್ರಿಸುವ ಮೂಲಕ, ಹಸಿವಿನ ಜೊತೆಗೆ ತೂಕವನ್ನು ಕಾಪಾಡಿಕೊಳ್ಳಲು ಸಹಾಯವಾಗುವುದು.

7. ಕಡಿಮೆ ಸಕ್ಕರೆ ಅಂಶ:

7. ಕಡಿಮೆ ಸಕ್ಕರೆ ಅಂಶ:

ಗರ್ಭಾವಸ್ಥೆಯಲ್ಲಿ ಆಲಸ್ಯ ಸಾಮಾನ್ಯವಾಗಿದೆ. ಆದ್ದರಿಂದ, ನೀವು ಶಕ್ತಿ ನೀಡುವ ಪಾನೀಯಗಳತ್ತ ಹೋಗಬಹುದು. ಆ ಕ್ಷಣದಲ್ಲಿ ತೆಂಗಿನಕಾಯಿ ಒಳ್ಳೆ ಉಪಾಯ. ನೂರು ಗ್ರಾಂ ತೆಂಗಿನಕಾಯಿ 2.1 ಗ್ರಾಂ ಸಕ್ಕರೆಯನ್ನು ಹೊಂದಿರುತ್ತದೆ, ಇದು ಇತರ ಶಕ್ತಿ ಪಾನೀಯಗಳಿಗಿಂತ ಕಡಿಮೆ. ಇದು ಯಾವುದೇ ತೂಕವನ್ನು ಹೆಚ್ಚಿಸುವುದಿಲ್ಲ, ಈ ಸಕ್ಕರೆ ಕಡಿಮೆ ಇರುವ ಆಹಾರವು ಗರ್ಭಾವಸ್ಥೆಯ ಮಧುಮೇಹವನ್ನು ಅಪಾಯವನ್ನು ಕಡಿಮೆ ಮಾಡುತ್ತದೆ.

8. ಭ್ರೂಣದ ಬೆಳವಣಿಗೆಗೆ ಸಹಾಯ:

8. ಭ್ರೂಣದ ಬೆಳವಣಿಗೆಗೆ ಸಹಾಯ:

ತೆಂಗಿನಕಾಯಿ ನೀರಿನಲ್ಲಿ ಜೈವಿಕವಾಗಿ ಸಕ್ರಿಯವಾಗಿರುವ ಸಂಯುಕ್ತಗಳು ಭ್ರೂಣದ ಬೆಳವಣಿಗೆಯನ್ನು ಉತ್ತೇಜಿಸುವ ಅಂಶಗಳು ಇರುತ್ತವೆ ಎಂದು ಕೆಲವು ಸಂಶೋಧಕರು ಕಂಡುಹಿಡಿದಿದ್ದಾರೆ.

9. ಆಮ್ನಿಯೋಟಿಕ್ ದ್ರವದ ಮಟ್ಟವನ್ನು ಸುಧಾರಣೆ:

9. ಆಮ್ನಿಯೋಟಿಕ್ ದ್ರವದ ಮಟ್ಟವನ್ನು ಸುಧಾರಣೆ:

ತೆಂಗಿನ ನೀರನ್ನು ವಿಶೇಷವಾಗಿ ಮೂರನೇ ತಿಂಗಳಲ್ಲಿ ತೆಗೆದುಕೊಳ್ಳಲಾಗುವುದರಿಂದ ಇದು ಆಮ್ನಿಯೋಟಿಕ್ ದ್ರವದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುವುದು. ಜೊತೆಗೆ ರಕ್ತದ ಪ್ರಮಾಣ ಮತ್ತು ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ.

English summary

Benefits Of Drinking Coconut Water During Pregnancy in Kannada

Here we talking about Benefits Of Drinking Coconut Water During Pregnancy in Kannada, read on
X
Desktop Bottom Promotion