Just In
Don't Miss
- Movies
ದರ್ಶನ್ ಸೋ ನೈಸ್, ರಾಕಿ ಭಾಯ್ ನಾಟ್ ಮೈ ಬಾಯ್ ಎಂದಳು ಸನ್ನಿಲಿಯೋನಿ!
- News
ಕಾಳಿ ಪೋಸ್ಟರ್ ವಿವಾದ: ಕ್ರಮಕ್ಕೆ ಭಾರತೀಯ ಹೈಕಮಿಷನ್ ಆಗ್ರಹ
- Sports
ನೆಟ್ ಅಭ್ಯಾಸ ಆರಂಭಿಸಿದ ರೋಹಿತ್; ಆದರೂ ಇಂಗ್ಲೆಂಡ್ ವಿರುದ್ಧ ಟಿ20 ಆಡುವುದು ಅನುಮಾನ ಎಂದ ಬಿಸಿಸಿಐ!
- Automobiles
ಮ್ಯಾಗ್ನೈಟ್ ಕಾರು ಮಾದರಿಯಲ್ಲಿ ಪ್ರಮುಖ ವೆರಿಯೆಂಟ್ಗಳನ್ನು ತೆಗೆದುಹಾಕಿದ ನಿಸ್ಸಾನ್
- Technology
ಶಿಯೋಮಿ 12S ಸರಣಿಯಲ್ಲಿ ಮೂರು ಹೊಸ ಸ್ಮಾರ್ಟ್ಫೋನ್ಗಳ ಅನಾವರಣ!
- Education
Mysore University Recruitment 2022 : ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಷೇರು ಪೇಟೆ ಶುಭಾರಂಭ: ಮತ್ತೆ ಎಲ್ಐಸಿ ಸ್ಟಾಕ್ ಜಿಗಿತ
- Travel
ಪಶ್ಚಿಮಘಟ್ಟಗಳಲ್ಲಿ ಮಾನ್ಸೂನ್ ನಲ್ಲಿ ಅನ್ವೇಷಿಸಬಹುದಾದ ಸ್ಥಳಗಳು
ಮಾಸಿಕ ಋತುಚಕ್ರ ತಪ್ಪುವ ಮುನ್ನ ಕಾಣಿಸುವ ಗರ್ಭಾವಸ್ಥೆಯ ಸೂಚನೆ
ಗರ್ಭಿಣಿಯಾಗುವುದು ಅದರಲ್ಲೂ ಮೊದಲ ಬಾರಿಗೆ ಗರ್ಭ ಧರಿಸುವುದು ಮಹಿಳೆಯರಲ್ಲಿ ಎಲ್ಲಿಲ್ಲದ ರೋಮಾಂಚನವನ್ನು ಉಂಟು ಮಾಡುವ ವಿಷಯ. ಆದರೆ ತಾವು ಇಷ್ಟು ದಿನ ಕಾದ ಗರ್ಭಧಾರಣೆಯನ್ನು ದೃಢೀಕರಿಸಿಕೊಳ್ಳುವುದು ಹೇಗೆ ಎಂಬ ಕುತೂಹಲ ಇದ್ದೇ ಇರುತ್ತದೆ. ಇದರ ಜೊತೆಗೆ ಯಾರು ಗರ್ಭಧಾರಣೆಯನ್ನು ಎದುರುನೋಡುತ್ತಿಲ್ಲವೋ ಅವರೂ ಸಹ ಋತುಚಕ್ರದ ಅವಧಿಯ ಆಧಾರದ ಮೇಲೆ ಕೆಲವೊಮ್ಮೆ ಆತಂಕಕ್ಕೊಳ್ಳಗಾಗುತ್ತಾರೆ. ಹಾಗಾಗಿ ನಿಮ್ಮ ಗರ್ಭದಾರಣೆಯ ಆರಂಭಿಕ ಲಕ್ಷಣಗಳ ಬಗ್ಗೆ ಇಲ್ಲಿದೆ ಒಂದಿಷ್ಟು ಉಪಯುಕ್ತ ಮಾಹಿತಿ!

ನೀವು ತಿಳಿದಿರಬೇಕಾದ ಗರ್ಭಧಾರಣೆಯ ಆರಂಭಿಕ ಲಕ್ಷಣಗಳು
ಋತುಚಕ್ರ ಅಥವಾ ಮುಟ್ಟು ತಪ್ಪುವುದು, ಮಹಿಳೆಯರಿಗೆ ಗರ್ಭಧಾರಣೆಯ ಮೊದಲ ಲಕ್ಷಣವಾಗಿದೆ.
ಗರ್ಭಧಾರಣೆಯನ್ನು ಖಚಿತಪಡಿಸಿಕೊಳ್ಳಲು ಕಾಯುವುದು, ಗರ್ಭಿಣಿಯಾಗಲು ಬಯಸುವವರಿಗೆ ಮತ್ತು ಬೇಡದವರಿಗೆ ಇಬ್ಬರಿಗೂ ಸಾಕಷ್ಟು ಆತಂಕ ಮತ್ತು ಒತ್ತಡವನ್ನು ಉಂಟುಮಾಡುತ್ತದೆ. ಆದರೆ ತಿಂಗಳ ಅವಧಿ ತಪ್ಪುವುದಕ್ಕೂ ಮೊದಲೇ ನೀವು ಗರ್ಭಿಣಿ ಯಾಗಿದ್ದೀರಿ ಎಂಬ ಸಕಾರಾತ್ಮಕ ಸುದ್ದಿಯನ್ನು ತಿಳಿಯಲು ನಿಮ್ಮ ದೇಹದಲ್ಲಾಗುವ ಕೆಲವು ಸೂಕ್ಷ್ಮ ಬದಲಾವಣೆಗಳು ಸಾಕು. ಇದರಿಂದ ಪರೀಕ್ಷೆಯನ್ನು ತೆಗೆದುಕೊಳ್ಳದೆ ನಿಮ್ಮ ದೇಹವು ಸಕಾರಾತ್ಮಕ ಸುದ್ದಿಗಳನ್ನು ಖಚಿತಪಡಿಸುತ್ತದೆ.

ಇದು ಗರ್ಭಧಾರಣೆಯೇ ಅಥವಾ ಪಿಎಂಎಸ್? (Premenstrual Syndrome)
ಗರ್ಭಧಾರಣೆಯ ಆರಂಭಿಕ ಲಕ್ಷಣಗಳು ಹಾರ್ಮೋನುಗಳ ಬದಲಾವಣೆಗಳನ್ನು ಉಂಟುಮಾಡುವುದರಿಂದ, ಅನೇಕರಿಗೆ, ಅದು ಪಿಎಂಎಸ್ ನಂತೆಯೇ ಕಾಣಿಸಬಹುದು. ಆದಾಗ್ಯೂ, ಪಿಎಂಎಸ್ ಕೆಲವೇ ದಿನಗಳವರೆಗೆ ಇದ್ದು ನಂತರ ಸರಿಯಾಗಬಹುದು, ಆದರೆ ಗರ್ಭಧಾರಣೆಯ ಲಕ್ಷಣಗಳು ದೀರ್ಘವಾಗುತ್ತವೆ ಮತ್ತು ದೇಹದಲ್ಲಿನ ಕೆಲವು ವಿಲಕ್ಷಣ ಬದಲಾವಣೆಗಳನ್ನು ಹೊಂದುತ್ತಾ ಸಾಗುತ್ತವೆ. ಈ ಬಗ್ಗೆ ತಿಳಿದುಕೊಳ್ಳಲು ಮುಂದೆ ಓದಿ.

ಸೆಳೆತ
ಮುಂಬರುವ ಮುಟ್ಟು ಅವಧಿ ಅಥವಾ ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ನ ಅತ್ಯಂತ ನಿರ್ಣಾಯಕ ಲಕ್ಷಣವೆಂದರೆ, ನಿಮ್ಮ ಹೊಟ್ಟೆಯಲ್ಲಿ ಮಗು ಇರುವ ಸಂಕೇತವೂ ಆಗಿರಬಹುದು. ಕೆಲವೊಮ್ಮೆ, ಭ್ರೂಣವು ಗರ್ಭಾಶಯದಲ್ಲಿ ಅಳವಡಿಕೆಯಾಗುವಾಗ ಮಹಿಳೆಯರು ಸೆಳೆತ ಮತ್ತು ನೋವನ್ನು ಅನುಭವಿಸಬಹುದು. ಇದು ಯಾವಾಗಲೂ ಸಂಭವಿಸದೆ ಇರಬಹುದು, ಆದರೆ ಇದು ಗರ್ಭಧಾರಣೆಯ ಸಕಾರಾತ್ಮಕ ಸಂಕೇತವಾಗಿದೆ.

ಕೆಲವು ಆಹಾರಗಳು ಇಷ್ಟವಾಗದೇ ಇರುವುದು
ಗರ್ಭಧಾರಣೆಯಲ್ಲಿ, ಈಸ್ಟ್ರೊಜೆನ್ ನಿಮ್ಮ ಇಂದ್ರಿಯಗಳ ಮೇಲೆ ಪರಿಣಾಮ ಬೀರುತ್ತಿರುವುದರಿಂದ ವಾಸನೆ ಒಂದು ಅತ್ಯಂತ ದೊಡ್ಡ ಸಮಸ್ಯೆ. ಗರ್ಭಾವಸ್ಥೆಯ ಆರಂಭಿಕ ದಿನಗಳಲ್ಲಿ ನೀವು ಕೆಲವು ಆಹಾರಗಳನ್ನು ದ್ವೇಷ ಮಾಡಬಹುದು ಅಥವಾ ಅಂತಹವುಗಳನ್ನು ಕಂಡರೆ ವಾಕರಿಕೆ ಅನುಭವಿಸಬಹುದು. ಕೆಲವರಿಗೆ, ಇದು ಭೀಕರವಾದ ಬೆಳಗಿನ ಕಾಯಿಲೆಯಾಗಿಯೂ ಸಹ ಆರಂಭವಾಗಬಹುದು. ಹಾಗಾಗಿ ನಿಮ್ಮ ಋತು ಚಕ್ರದಲ್ಲಿ ನೀವು ಹಸಿವಿನಿಂದ ಬಳಲುತ್ತಿದ್ದರೆ ಅಥವಾ ಹಸಿವಿನ ಕೊರತೆಯನ್ನು ಅನುಭವಿಸುತ್ತಿದ್ದರೆ ಎಲ್ಲಾ ಸೂಕ್ಷ್ಮ ಬದಲಾವಣೆಗಳನ್ನು ಸರಿಯಾಗಿ ಗಮನಿಸಿ.

ಕೋಮಲವಾದ, ಉಬ್ಬಿದ ಸ್ತನಗಳು
ಗರ್ಭಧಾರಣೆ ಸಂಭವಿಸಿದಾಗ, ಆರಂಭಿಕ ಲಕ್ಷಣಗಳು ಯಾವಾಗಲೂ ಸ್ತನಗಳ ಸುತ್ತಲೂ ಕಂಡುಬರುತ್ತವೆ. ಮೃದುತ್ವ ಅಥವಾ ಕೋಮಲತೆ, ಊತ, ನೋವು ಅಥವಾ ಐಸೊಲಾಗಳ ಬಣ್ಣ ಅಥವಾ ಗಾತ್ರದಲ್ಲಿನ ಬದಲಾವಣೆಗಳು ಈಸ್ಟ್ರೊಜೆನ್ ಮಟ್ಟವು ಹೆಚ್ಚಾದಂತೆ ಪ್ರಾರಂಭವಾಗುತ್ತವೆ. ನಿಮ್ಮಲ್ಲಿ ಗರ್ಭಧಾರಣೆಯಾಗಿದ್ದರೆ ಸ್ತನಗಳಲ್ಲಿ ನೋವೂ ಹಾಗೂ ಸಂವೇದನೆ ಉಂಟಾಗಬಹುದು.

ಆಗಾಗ ಮೂತ್ರ ವಿಸರ್ಜಿಸುವುದು
ಮುಟ್ಟಿಗಾಗಿ ಕಾಯುತ್ತಿರುವಾಗ, ಮೊದಲಿಗಿಂತ ಹೆಚ್ಚಾಗಿ ಮೂತ್ರ ವಿಸರ್ಜಿಸಲು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆಯೇ? ಹಾಗಾದರೆ ಇದು ನೀವು ಗರ್ಭಧಾರಣೆಯ ಪರೀಕ್ಷೆ ತೆಗೆದುಕೊಳ್ಳುವ ಸಮಯ. ಗರ್ಭಧಾರಣೆಯ ಸಮಯದಲ್ಲಿ ಮೂತ್ರಪಿಂಡಗಳು ತ್ಯಾಜ್ಯವನ್ನು ಹೊರಹಾಕಲು ಪ್ರಾರಂಭಿಸುತ್ತವೆ ಮತ್ತು 'ಗಾಳಿಗುಳ್ಳೆಯ ಒತ್ತಡ/ ತಳ್ಳುವಿಕೆ' ಗರ್ಭಧಾರಣೆಯ ನಂತರದ ಎರಡು ವಾರಗಳಲ್ಲಿ ಸಂಭವಿಸಲು ಪ್ರಾರಂಭಿಸುತ್ತದೆ, ಇದರಿಂದಾಗಿ ನೀವು ಹೆಚ್ಚಾಗಿ ಮೂತ್ರ ವಿಸರ್ಜನೆ ಮಾಡುತ್ತೀರಿ ಎಂದು ಅಧ್ಯಯನಗಳು ಹೇಳುತ್ತವೆ.

ಗರ್ಭಕಂಠದ ಲೋಳೆಯ ಬದಲಾವಣೆ
ಗರ್ಭಕಂಠದ ಲೋಳೆಯ ಬದಲಾವಣೆಯು, ಗರ್ಭಧಾರಣೆಯ ಉಪಸ್ಥಿತಿಯನ್ನು ನಿರ್ಧರಿಸುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಇದು ಅಂಡೋತ್ಪತ್ತಿಗೆ ಸಂಬಂಧಿಸಿದ್ದಾಗಿದ್ದು, ಲೋಳೆಯು ಕೆನೆಯಂತೆ ಅಥವಾ ದಪ್ಪವಾಗಿದ್ದರೆ ಮತ್ತು ನೀರಿಲ್ಲದಂತೆ ತೋರುತ್ತಿದ್ದರೆ, ನೀವು ತಪಾಸಣೆ ಮಾಡಿಸುವುದು ಒಳ್ಳೆಯದು.

ಬಿಬಿಟಿಯಲ್ಲಿ ಬದಲಾವಣೆ
ಬಾಸಲ್ ಬಾಡಿ ಟೆಂಪರೇಚರ್ (ಬಿಬಿಟಿ) ವಿಶ್ರಾಂತಿ ಪಡೆಯುವಾಗ ನಿಮ್ಮ ದೇಹದ ಉಷ್ಣತೆಯನ್ನು ಅಳೆಯುವ ಒಂದು ಮಾರ್ಗವಾಗಿದೆ. ಇದು ಸಾಮಾನ್ಯವಾಗಿ ಅಂಡೋತ್ಪತ್ತಿ ಸಮಯದಲ್ಲಿ ಏರುತ್ತದೆ, ಆದರೆ ಪ್ರೊಜೆಸ್ಟರಾನ್ ಬಿಡುಗಡೆಯು, ಋತುಚಕ್ರದ ಮಧ್ಯದ ಅವಧಿಯಲ್ಲಿ ತಾಪಮಾನವು ಕಡಿಮೆಯಾಗುತ್ತದೆ ಎಂದು ಖಚಿತಪಡಿಸುತ್ತದೆ. 10 ದಿನಗಳ ಅಥವಾ ಅದಕ್ಕಿಂತ ಹೆಚ್ಚಿನ ಸಮಯದವರೆಗೆ ಬಿಬಿಟಿಯನ್ನು ಪ್ರತಿದಿನ ಗಮನಿಸುವುದು, ನಿಮ್ಮ ಗರ್ಭಧಾರಣೆಯನ್ನು ಖಚಿತ ಪಡಿಸುವ ಒಂದು ಮಾರ್ಗವಾಗಿದೆ, ಏಕೆಂದರೆ ಇದು ಸಾಮಾನ್ಯವಾಗಿ ಗರ್ಭಧಾರಣೆಯ ಸಮಯದಲ್ಲಿ ಹೆಚ್ಚಾಗಿರುತ್ತದೆ.