For Quick Alerts
ALLOW NOTIFICATIONS  
For Daily Alerts

ಈ ಅತ್ಯಾಧುನಿಕ ಸಂತಾನೋತ್ಪತ್ತಿ ಚಿಕಿತ್ಸೆಯಿಂದ ಗರ್ಭಧಾರಣೆ ಸಾಧ್ಯತೆ ಹೆಚ್ಚು

|

ಹಲವು ವರ್ಷಗಳಿಂದ ಗರ್ಭಧಾರಣೆಗೆ ಪ್ರಯತ್ನಿಸುವ ದಂಪತಿಗೆ ಒಂದು ಆಶಾಕಿರಣ ಐಇಎಫ್‌(IVF). ಆದರೆ ಕೆಲವರಿಗೆ 2-3 ಬಾರಿ ಐವಿಎಫ್‌ ಮಾಡಿಸಿದರೂ ಬಯಸಿದ ಫಲ ಸಿಕ್ಕಿರುವುದಿಲ್ಲ, ಆಗ ಇನ್ನು ಗರ್ಭಧಾರಣೆ ಅಸಾಧ್ಯ ಎಂದೇ ಭಾವಿಸುತ್ತಾರೆ. ಆದರೆ ವಿಜ್ಞಾನ ತುಂಬಾ ಮುಂದುವರೆದಿದೆ. ಹಲವಾರು ಮುಂದುವರೆದ ಚಿಕಿತ್ಸಾ ವಿಧಾನಗಳಿವೆ, ಆದರೆ ಅವುಗಳ ಕುರಿತು ಹೆಚ್ಚಿನವರಿಗೆ ತಿಳಿದಿರುವುದೇ ಇಲ್ಲ.

ಆದರೆ ಈ ಚಿಕಿತ್ಸೆ ಮೂಲಕ ಗರ್ಭಧಾರಣೆಗೆ ಪ್ರಯತ್ನಿಸಬಹುದು. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ:

ಸ್ಪರ್ಮ್ ವಾಶಿಂಗ್

ಸ್ಪರ್ಮ್ ವಾಶಿಂಗ್

ಸ್ಪರ್ಮ್‌ ವಾಶಿಂಗ್ ಅಂದ್ರೆ ಆರೋಗ್ಯಕರ ವೀರ್ಯಾಣುಗಳನ್ನು ಅನಾರೋಗ್ಯಕರ ವೀರ್ಯಾಣುಗಳಿಂದ ಬೇರ್ಪಡಿಸುವುದು. ಹೀಗೆ ಮಾಡಿದರೆ IVF ಮತ್ತು IUI ಚಿಕಿತ್ಸೆಯಿಂದ ಮಕ್ಕಳಾಗುವ ಸಾಧ್ಯತೆ ಹೆಚ್ಚು.

ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ?

ಆರೋಗ್ಯಕರ ವೀರ್ಯಾಣುವನ್ನು ಬೇರ್ಪಡಿಸಿ, ಅದರಲ್ಲಿರು ಬೇಡದ ಕಶ್ಮಲ ಹಾಗೂ ದ್ರವವನ್ನು ತೆಗೆದು ಅದನ್ನು ಅಂಡಾಣುಗಳ ಜೊತೆ ಸೇರಿಸಿ ಸಂತಾನೋತ್ಪತ್ತಿ ಮಾಡಲಾಗುವುದು

ಸ್ಪರ್ಮ್‌ ವಾಶಿಂಗ್‌ನಿಂದ ತೊಂದರೆ ಉಂಟಾಗುವುದೇ?

ಈ ವಿಧಾನ IUI ಅಥವಾ IVF ಚಕಿತ್ಸೆ ಫಲಕಾರಿಯಾಗಿ ಮಾಡುವ ಸಾಧ್ಯತೆ ಹೆಚ್ಚು ಹಾಗೂ ಯಾವುದೇ ಅಡ್ಡಪರಿಣಾಮವಿಲ್ಲ.

ಈ ಚಿಕಿತ್ಸೆಯ ಯಶಸ್ಸಿನ ಪ್ರಮಾಣ

ಸ್ಪರ್ಮ್ ವಾಶಿಂಗ್ ವಿಧಾನದಲ್ಲಿ ಗರ್ಭಧಾರಣೆಯಾಗುವ ಸಾಧ್ಯತೆ IUI ಚಿಕಿತ್ಸೆಯಲ್ಲಿ ಶೇಕಡ 5-20ರಷ್ಟು, IVF ಚಿಕಿತ್ಸೆಯಲ್ಲಿ ಶೇಕಡ 4-50ರಷ್ಟಿದೆ.

ಎಷ್ಟು ಖರ್ಚಾಗಬಹುದು?

ಇದು ಸ್ವಲ್ಪ ದುಬಾರಿ ಚಿಕಿತ್ಸೆಯಾಗಿದೆ.IVF ಆದರೆ 10 ಲಕ್ಷಕ್ಕೂ ಅಧಿಕ ಖರ್ಚಾಗಬಹುದು. ಇನ್ನು IUI ವಿಧಾನವಾದರೆ ಐವತ್ತು ಸಾವಿರಕ್ಕಿಂತಲೂ ಅಧಿಕ, ಲಕ್ಷದವರೆಗೆ ಖರ್ಚಾಗಬಹುದು.

 ಮನೆಯಲ್ಲಿಯೇ ಕೃತಕ ಗರ್ಭಧಾರಣೆ (At-home artificial insemination)

ಮನೆಯಲ್ಲಿಯೇ ಕೃತಕ ಗರ್ಭಧಾರಣೆ (At-home artificial insemination)

ಇದು ವೈದ್ಯರನ್ನು ಭೇಟಿ ಮಾಡುವ ಮೊದಲು ಪ್ರಯತ್ನಿಸಬಹುದಾಗಿದೆ. ಅಲ್ಲದೆ ಮದುವೆ ಬೇಡ ಮಗು ಬೇಕು, ಲೆಸಿಬಿಯನ್ ಮಗು ಬಯಸಿದರೆ ಈ ವಿಧಾನ ಪ್ರಯತ್ನಿಸಬಹುದು.

ಇದು ಹೇಗೆ ಸಾಧ್ಯ?

ಈ ವಿಧಾನದಲ್ಲಿ ಪುರುಷ ವೀರ್ಯಾಣುಗಳ ಸ್ಯಾಂಪಲ್ ನೀಡಬೇಕು, ಅದನ್ನು ಸಿರೆಂಜ್ ಮುಖಾಂತರ ಮಹಿಳೆ ತನ್ನ ಓವ್ಯೂಲೇಷನ್ ಸಮಯದಲ್ಲಿ ಜನನಾಂಗದ ಮೂಲಕ ದೇಹ ಸೇರಿಸಬೇಕು.

ಇದರ ಪರಿಣಾಮವೇನು?

ಇದರ ಪರಿಣಾಮ ನೀವು ಊಹಿಸಿರುವುದಕ್ಕಿಂತಲೂ ಅಧಿಕವಿದೆ. ಸಿರೆಂಜ್ ತುಂಬಾ ಆಳವಾಗಿ ಹಾಕಿದರೆ ಅಥವಾ ಸರಿಯಾದ ರೀತಿಯಲ್ಲಿ ಹಾಕದಿದ್ದರೆ ಗರ್ಭಕೋಶದಲ್ಲಿ ಸೋಂಕು ಉಂಟಾಗಬಹುದು, ಅಲ್ಲದೆ ವೀರ್ಯ ಕೊಟ್ಟವರು ಮುಂದೆ ಪೋಷಕ ಹಕ್ಕು ಹೇಳಿ ಬಂದರೆ ಕಷ್ಟ, ಅಲ್ಲದೆ ಓವ್ಯೂಲೇಷನ್ ಸರಿಯಾಗಿಲ್ಲವೆಂದರೆ ಈ ವಿಧಾನದಲ್ಲಿ ಗರ್ಭಧಾರಣೆ ಕಷ್ಟ.

ಇದರ ಯಶಸ್ಸಿನ ಪ್ರಮಾಣ

ದಂಪತಿ ಈ ವಿಧಾನ ;ಪ್ರಯತ್ನಿಸುವುದಕ್ಕಿಂತ ಲೈಂಗಿಕ ಕ್ರಿಯೆ ಮೂಲಕ ಮಗು ಪಡೆಯುವುದೇ ಪರಿಣಾಮಕಾರಿಯಾದ ಹಾಗೂ ಸುರಕ್ಷಿತವಾದ ವಿಧಾನ. ಪುರುಷನ ಸಂಪರ್ಕವಿಲ್ಲದೆ ತಾಯಿಯಾಗ ಬಯಸುವವರು, ಹಾಗೂ ಲೆಸೆಬಿಯನ್‌ ಮಗು ಪಡೆಯಲು ಈ ವಿಧಾನ ಬಳಸಬಹುದು. ಇದರಲ್ಲಿ ಗರ್ಭಧಾರಣೆಯ ಸಾಧ್ಯತೆ ಶೇ.69ರಷ್ಟಿದೆ.

ಖರ್ಚು ಎಷ್ಟಾಗಬಹುದು?

ನೀವು ವೀರ್ಯ ದಾನಿಗಳಿಂದ ಪಡೆಯುವುದಾದರೆ ಕೆಲವು ಸಾವಿರಗಳಷ್ಟೇ ಆಗುವುದು.

ICSI(Intracytoplasmic sperm injection)

ICSI(Intracytoplasmic sperm injection)

ಇದು IVFಗಿಂತ ಒಂದು ಸ್ಟೆಪ್ ಮುಂದಿದೆ. ಇದನ್ನು IVF ಚಿಕಿತ್ಸೆಯಿಂದ ಫಲ ಸಿಗದೇ ಹಹೋದರೆ, ಪುರುಷರ ವೀರ್ಯಾಣುಗಳಲ್ಲಿ ತೊಂದರೆ ಅಂದರೆ ಕಡಿಮೆ ಪ್ರಮಾಣದ ವೀರ್ಯಾಣು, ಗುಣಮಟ್ಟವಲ್ಲದ ವೀರ್ಯಾಣು, ವಯಸ್ಸಾದ ದಂಪತಿ ಈ ಸಮಸ್ಯೆಯಿದ್ದರೆ ICSI ವಿಧಾನ ಪ್ರಯತ್ನಿಸಿದರೆ ಮಗು ಪಡೆಯುವ ಸಾಧ್ಯತೆ ಹೆಚ್ಚು.

ಇದು ಹೇಗೆ ಸಾಧ್ಯ?

ವೀರ್ಯಾಣು ಹಾಗೂ ಅಂಡಾಣುಗಳನ್ನು petri dishನಲ್ಲಿ ಹಾಕಿ ಸಂತಾನೋತ್ಪತ್ತಿಗೆ ಪ್ರಯತ್ನಿಸುವುದಕ್ಕಿಂತ ವೀರ್ಯಾಣುವನ್ನು ಒಂದು ಅಂಡಾಣುವಿಗೆ ಇಂಜೆಕ್ಟ್ ಮಾಡಲಾಗುವುದು.

ಯಶಸ್ಸಿನ ಪ್ರಮಾಣ

ಈ ವಿಧಾನದಲ್ಲಿ ಗರ್ಭಧಾರಣೆಯಾಗುವ ಸಾಧ್ಯತೆ ಶೇ.80. 35 ವರ್ಷ ಕೆಳಗಿನ ಮಹಿಳೆಯರಲ್ಲಿ ಗರ್ಭಧಾರಣೆಯಾಗುವ ಸಾಧ್ಯತೆ ಶೇ.50ರಷ್ಟು, ಮೂವತ್ತೈದು ವರ್ಷ ಮೇಲ್ಪಟ್ಟ ಮಹಿಳೆಯರಲ್ಲ ಶೇ12ರಷ್ಟು ಇದ್ದು ವಯಸ್ಸು ಅಧಿಕವಾಗುತ್ತಿದ್ದಂತೆ ಗರ್ಭಧಾರಣೆಯ ಸಾಧ್ಯತೆ ಕಡಿಮೆ.

ಇದರ ಪರಿಣಾಮ?

ಈ ಚಿಕಿತ್ಸೆಯಲ್ಲಿ ಮೊದಲಿಗೆ ಹಾರ್ಮೋನ್‌ ಚುಚ್ಚುಮದ್ದು ತಗೋಬೇಕು. ಇದರಿಂದಾಗಿ ಒಂದಕ್ಕಿಂತ ಅಧಿಕ ಮಕ್ಕಳಾಗುವ ಸಾಧ್ಯತೆ ಹೆಚ್ಚು.

ಅಲ್ಲದೆ ಈ ಹಿಂದೆ ನಡೆಸಿದ ಅಧ್ಯಯನವು ಈ ವಿಧಾನದಲ್ಲಿ ಆಟಿಸಂ, ವಿಶೇಷ ಚೇತನ ಅಥವಾ ದೈಹಿಕ ನ್ಯೂನತೆ ಇರುವ ಮಕ್ಕಳು ಹುಟ್ಟುವ ಸಾಧ್ಯತೆ ಇದೆ. ಇದಕ್ಕಿಂತ IVF ಹೆಚ್ಚು ಸುರಕ್ಷಿತ.

ಸಂತಾನೋತ್ಪತ್ತಿ ಶಸ್ತ್ರ ಚಿಕಿತ್ಸೆ

ಸಂತಾನೋತ್ಪತ್ತಿ ಶಸ್ತ್ರ ಚಿಕಿತ್ಸೆ

ಕೆಲವೊಂದು ಆರೋಗ್ಯ ಸಮಸ್ಯೆಯಿಂದಾಗಿ ವೀರ್ಯಾಣು ಅಂಡಾಣು ತಲುಪಲು ಕಷ್ಟವಾಗುವುದು. ಶಸ್ತ್ರ ಚಿಕಿತ್ಸೆ ಮೂಲಕ ಈ ಸಮಸ್ಯೆ ತಡೆಗಟ್ಟಬಹುದು. ಯೂಟ್ರೈನ್ ಫೈಬ್ರೋಯ್ಡ್, ಪೆಲ್ವಿಕ್ ಇನ್ಫ್ಲೇಮಟರಿ, ಎಂಡೋಮೀರೋಸಿಸ್ (uterine fibroids, pelvic inflammatory disease, endometriosis, Asherman's syndrome) ಮುಂತಾದ ತೊಂದರೆ ಇರುವವರು

ಸಂತಾನೋತ್ಪತ್ತಿ ಶಸ್ತ್ರ ಚಿಕಿತ್ಸೆ ಮಾಡಿಸಿದರೆ ಮಗುವಾಗುವುದು.

ಈ ಚಿಕಿತ್ಸೆ ಹೇಗೆ ಸಹಕಾರಿ?

ಈ ಚಿಕಿತ್ಸೆ ಮೂಲಕ ವೀರ್ಯಾಣುಗಳು ಅಂಡಾಣುಗಳನ್ನು ಸೇರಲು ಸಾಧ್ಯವಾಗುವುದು. ಆದರೆ ಇದು ದುಬಾರಿ ಚಿಕಿತ್ಸೆಯಾಗಿದೆ.

ಯಶಸ್ಸಿನ ಪರಿಣಾಮ?

ಗರ್ಭಧಾರಣೆಯಾಗುವ ಸಾಧ್ಯತೆ ನಿಮ್ಮ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿದೆ. ಈ ಚಿಕಿತ್ಸೆ ಪಡೆದುಕೊಂಡರೆ 35 ವರ್ಷ ಒಳಗಿನವರು ಗರ್ಭಧಾರಣೆಯಾಗುವ ಸಾಧ್ಯತೆ ಶೇ.50ರಷ್ಟಿದೆ... ವಯಸ್ಸು ಅಧಿಕವಾಗುತ್ತಿದ್ದಂತೆ ಗರ್ಭಧಾರಣೆಯ ಸಾಧ್ಯತೆ ಕಡಿಮೆ.

ಎಂಬ್ರೋಯೊ ಅಡಾಪ್ಷನ್ (Embryo adoption)

ಎಂಬ್ರೋಯೊ ಅಡಾಪ್ಷನ್ (Embryo adoption)

ಮಗು ದತ್ತು ಪಡೆಯುವುದಕ್ಕಿಂತ ನಮ್ಮದೇ ಮಗು ಬೇಕು ಎಂದು ಬಯಸುವುದಾದರೆ ಈ ವಿಧಾನ ಪ್ರಯತ್ನಿಸಬಹುದು. ತಮ್ಮದೇ ಅಂಡಾಣು ಮತ್ತು ವೀರ್ಯಾಣುಗಳಿಂದ ಗರ್ಭಧಾರಣೆ ಅಸಾಧ್ಯವಾಗಿದ್ದು, ಆದರೆ ಮಹಿಳೆ ಗರ್ಭ ಹೊರಬಹುದಾದರೆ ಈ ವಿಧಾನ ಆಯ್ಕೆ ಮಾಡಬಹುದು.

ಇದು ಹೇಗೆ ಪರಿಣಾಮಕಾರಿ?

ಯಾರಾದರೂ ಸರ್‌ಪ್ಲಸ್ ಎಂಬ್ರಾಯೋ ನೀಡಲು ತಯಾರಿದ್ದರೆ ಅದನ್ನು IVF ಮೂಲಕ ಗರ್ಭಧಾರಣೆಗೆ ಶ್ರಮಿಸಬಹುದು. ಈ ವಿಧಾನ ಸಾಮಾನ್ಯ IVFಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಈ ಚಿಕಿತ್ಸೆಗೆ ಮೊದಲು ನಿಮಗೆ ಎಂಬ್ರಾಯೋ ಕೊಡುವ ದಂಪತಿ ಕಂಡು ಹಿಡಿಯಬೇಕು.

ಇದರ ಪರಿಣಾಮಗಳು?

ಸರಿಯಾದ ದಾನಿಗಳ ಕುಟುಂಬ ಹುಡುಕುವುದೇ ಒಂದು ದೊಡ್ಡ ಕೆಲಸ. ಇನ್ನು ದಾನಿಗಳಲ್ಲಿ ಸಂತಾನೋತ್ಪತ್ತಿಗೆ ಏನಾದರೂ ತೊಂದರೆ ಅವರ ಎಂಬ್ರಾಯೋ ಪಡೆದರೆ ಮತ್ತಷ್ಟು ತೊಂದರೆಯಾಗಬಹುದು.

ಸಕ್ಸಸ್ ಪ್ರಮಾಣ:

ಈ ವಿಧಾನದಲ್ಲಿ ಗರ್ಭಧಾರಣೆಯಾಗುವ ಸಾಧ್ಯತೆ ಶೇ. 37ರಷ್ಟು. ಇಲ್ಲಿ ಕೂಡ ಎಂಬ್ರಾಯೋ ಗುಣಮಟ್ಟ, ವಯಸ್ಸು ಕೂಡ ಮುಖ್ಯವಾಗಿರುತ್ತದೆ.

ಎಷ್ಟು ಖರ್ಚಾಗಬಹುದು?

ಈ ಚಿಕಿತ್ಸೆಗೂ ಲಕ್ಷಾಂತರ ರುಪಾಯಿ ಖರ್ಚು ತಗುಲಬಹುದು. ಕಡಿಮೆಯೆಂದರೂ 10 ಲಕ್ಷಕ್ಕೂ ಅಧಿಕ ಬೇಕು.

 ಇತರ ಆಯ್ಕೆಗಳು

ಇತರ ಆಯ್ಕೆಗಳು

ಅಸಿಸ್ಟೆಡ್ ಹ್ಯಾಚಿಂಗ್‌ (Assisted hatching): ಎಂಬ್ರಾಯೋದಲ್ಲಿ ಸಮಸ್ಯೆಯಿದ್ದಾಗ IVF ಚಕಿತ್ಸೆ ಫೇಲ್ ಆಗುವುದು. Assisted hatching ಲೇಸರ್ ಚಿಕಿತ್ಸೆಯಾಗಿದೆ ಇದರಿಂದ IVF ಫಲಕಾರಿಯಾಗುವ ಸಾಧ್ಯತೆ ಹೆಚ್ಚು.

ಎಂಡೋಮೆಟೀರಿಯಲ್ ಸ್ಕ್ರಾಚ್ (Endometrial scratch)

ಜಿಐಎಫ್‌ಟಿ (Gamete intrafallopian transfer)

ಝೆಡ್ಐಎಫ್‌ಟಿ (Zygote intrafallopian transfer)

English summary

Advanced Fertility Treatments for Couples Who Need Help Getting Pregnant

Advanced fertility Treatment for couples who need help getting pregnant,read on,
Story first published: Wednesday, February 10, 2021, 19:51 [IST]
X
Desktop Bottom Promotion