For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಚಿಕನ್ ತಿನ್ನಬಹುದೇ? ಇದು ಅವರ ಆರೋಗ್ಯಕ್ಕೆ ಸುರಕ್ಷಿತವೇ?

|

ಚಿಕನ್ ತಿನ್ನುವುದರ ಬಗ್ಗೆ ಯಾರಾದರೂ ಎಚ್ಚರಿಕೆ ನೀಡಲು ಬಂದಲ್ಲಿ ಅವರ ತಪ್ಪು ಅಭಿಪ್ರಾಯವನ್ನು ಹೋಗಲಾಡಿಸಿ.ಗರ್ಭಿಣಿ ಮಹಿಳೆಗೆ ಜಿಂಕ್ ಉತ್ಪತ್ತಿ ಅಧಿಕವಾಗಿ ವಿವಿಧ ರೀತಿಯ ಬಯಕೆಗಳಾಗುತ್ತವೆ,ಚಿಕನ್ ನಲ್ಲಿರುವ ಮಿನರಲ್ಸ್ ಮತ್ತು ಕಬ್ಬಿಣದ ಅಂಶ ಈ ಸಮಯದಲ್ಲಿ ದೇಹಕ್ಕೆ ಅವಶ್ಯಕ ಕೂಡ ಹೌದು. ಗರ್ಭಿಣಿ ಮಹಿಳೆ ಚಿಕನ್ ತಿನ್ನುತ್ತಾಳೆಯೇ ?ಎಂಬುದು ನಿಮ್ಮ ಪ್ರಶ್ನೆಯಾಗಿದ್ದಲ್ಲಿ ಅದು ಸಂಪೂರ್ಣವಾಗಿ ಆಕೆಯ ಬಯಕೆಯ ಮೇಲೆ ಅವಲಂಬಿಸಿರುತ್ತದೆ.

ಗರ್ಭಿಣಿ ಮಹಿಳೆ ಏಕೆ ಕೋಳಿ ತಿನ್ನಬೇಕು ?

ಗರ್ಭಿಣಿ ಮಹಿಳೆ ಏಕೆ ಕೋಳಿ ತಿನ್ನಬೇಕು ?

ಇತರ ಎಲ್ಲಾ ಪ್ರಾಣಿಗಳಿಗಿಂತ ಚಿಕನ್ ನಲ್ಲಿ ಕಡಿಮೆ ಪ್ರಮಾಣದ ಕೊಬ್ಬು ಮತ್ತು ಕೊಬ್ಬಿನ ಆಮ್ಲವಿರುತ್ತದೆ.ಜೊತೆಗೆ ಇದರಲ್ಲಿ ಒಮೇಗಾ 6 ಮತ್ತು ಒಮೇಗಾ 3 ಕೊಬ್ಬಿನಂಶಗಳು ಹೇರಳವಾಗಿರುತ್ತದೆ.ಕೋಳಿ ತಿನ್ನುವಾಗ ಕೊಲೆಸ್ಟ್ರಾಲ್ ಬಗ್ಗೆ ಕೂಡ ಯೋಚಿಸಬೇಕಿಲ್ಲ.ಈ ಎಲ್ಲಾ ಕಾರಣಗಳಿಂದಾಗಿ ಗರ್ಭಿಣಿ ಮಹಿಳೆ ಚಿಕನ್ ತಿನ್ನುವಾಗ ಯೋಚಿಸುವ ಅಗತ್ಯವಿಲ್ಲ.ಸಾಮನ್ಯವಾಗಿ ಗರ್ಭಿಣಿ ಮಹಿಳೆಯರು ಅನುಭವಿಸುವ ಜೀರ್ಣಕ್ರಿಯೆಯ ಸಮಸ್ಯೆಯನ್ನು ಕೂಡ ಚಿಕನ್ ತಿನ್ನುವುದರಿಂದ ಹೋಗಲಾಡಿಸಬಹುದು.ಆದರೆ ಗರ್ಭಿಣಿ ಮಹಿಳೆಯು ಕೋಳಿ ತಿನ್ನುವಾಗ ಕೋಳಿಯ ಚರ್ಮವನ್ನು ಸಂಪೂರ್ಣವಾಗಿ ತೆಗೆದು ಅಡುಗೆ ತಯಾರಿಸಿ ಉಪಯೋಗಿಸಬೇಕು.ಈ ನಿಯಮವನ್ನು ಪಾಲಿಸಿದಲ್ಲಿ ಗರ್ಭಿಣಿ ಮಹಿಳೆಯು ಚಿಕನ್ ತಿನ್ನುವ ತನ್ನ ಬಯಕೆಯನ್ನು ಪೂರೈಸಿಕೊಂಡಲ್ಲಿ ಆರೋಗ್ಯಕ್ಕೆ ಯಾವುದೇ ತೊಂದರೆಯಿರುವುದಿಲ್ಲ.

ಗರ್ಭಿಣಿಯಾದಾಗ ಏನನ್ನು ತಿನ್ನಬಾರದು ?

ಗರ್ಭಿಣಿಯಾದಾಗ ಏನನ್ನು ತಿನ್ನಬಾರದು ?

ಈ ಕೆಳಗೆ ನೀಡಿರುವ ಮಾಹಿತಿಯನ್ನು ಓದಿದಲ್ಲಿ ಗರ್ಭಿಣಿ ಮಹಿಳೆ ಏನನ್ನು ತಿನ್ನಬಹುದು ಮತ್ತು ಏನು ತಿನ್ನಬಾರದು ಎಂಬುದು ತಿಳಿಯುತ್ತದೆ.

Most Read: ಗರ್ಭಿಣಿಯರು ಅರಿಶಿನ ಬೆರೆಸಿದ ಹಾಲು ಕುಡಿಯಬಹುದೇ? ಖಂಡಿತವಾಗಿಯೂ ಮಿತವಾಗಿ ಸೇವಿಸಬಹುದು

ಅರೆ ಬೆಂದ ಅಥವಾ ಹಾಫ್ ಬೇಕ್ ಆದ ಚಿಕನ್

ಅರೆ ಬೆಂದ ಅಥವಾ ಹಾಫ್ ಬೇಕ್ ಆದ ಚಿಕನ್

ಸರಿಯಾಗಿ ಬೆಂದಿರದ ಚಿಕನ್ ನಲ್ಲಿ ಇ ಕೋಲಿ ಎಂಬ ಬ್ಯಾಕ್ಟೀರಿಯಾವಿರುತ್ತದೆ.ಚಿಕನ್ ಅರ್ಧ ಬೆಂದಿದ್ದಲ್ಲಿ ಈ ಸೂಕ್ಷ್ಮಜೀವಿಯು ದೇಹವನ್ನು ಸೇರುವ ಎಲ್ಲಾ ಸಾಧ್ಯತೆಗಳು ಕೂಡ ಇರುತ್ತವೆ.ಆದ್ದರಿಂದ ಇದನ್ನು ಗರ್ಭಿಣಿ ಮಹಿಳೆ ಬಳಸುವುದನ್ನು ನಿರಾಕರಿಸಲಾಗಿದೆ.ಪ್ರಾಣಿಗಳಿಂದ ಬೇರ್ಪಡಿಸಿ ಶೇಖರಿಸಿಟ್ಟ ಯಾವುದೇ ಆಹಾರ ಗರ್ಭಾವಸ್ಥೆಯಲ್ಲಿ ಉಪಯೋಗಿಸುವುದು ಸುರಕ್ಷಿತವಲ್ಲ.

ಫ್ರೋಜನ್ ಚಿಕನ್ ಸಲಾಡ್

ಫ್ರೋಜನ್ ಚಿಕನ್ ಸಲಾಡ್

ಚಿಕನ್ ಸಲಾಡ್ ಆರೋಗ್ಯಕರ ಎಂಬುದು ನಿಜವಾದರೂ ಕೂಡ ಗರ್ಭಿಣಿ ಮಹಿಳೆಯು ಫ್ರೋಜನ್ ಚಿಕನ್ ತಿನ್ನುವುದು ಕ್ಷೇಮವಲ್ಲ.ಇದರಲ್ಲಿ ಶುಚಿತ್ವ ಕಡಿಮೆ ಇರುವುದೇ ಇದಕ್ಕೆ ಮುಖ್ಯ ಕಾರಣ.ಜೊತೆಗೆ ಇದು ತಾಜಾವಾಗಿರದಿರುವುದೇ ಗರ್ಭಿಣಿ ಮಹಿಳೆಯರು ಇದನ್ನು ತಿನ್ನಬಾರದು ಎಂಬುದಕ್ಕೆ ಮುಖ್ಯ ಕಾರಣ.

ಬಿರಿಯಾನಿ

ಬಿರಿಯಾನಿ

ನಿಮಗೆ ಮುಘಲೈ ಖಾದ್ಯ ತಿನ್ನಲು ಮನಸ್ಸಾಗುತ್ತಿದೆಯೇ ?ಬಿರಿಯಾನಿ ತಿನ್ನಲು ಮನಸ್ಸಾದಲ್ಲಿ ಈ ಕೆಳಗೆ ನೀಡಿರುವ ವಿಧಾನವನ್ನು ಪಾಲಿಸಿ. ಖಾರವಿಲ್ಲದ ಬಿರಿಯಾನಿ ಸೇವಿಸಿ.ಗರ್ಭಿಣಿಯಾಗಿದ್ದಲ್ಲಿ ಖಾರವಾಗಿರುವ ಬಿರಿಯಾನಿ ತಿನ್ನಲು ಮನಸ್ಸಾಗುವುದು ಸಾಮಾನ್ಯ ಆದರೆ ಇದನ್ನು ಸೇವಿಸುವುದರಿಂದ ಎದೆ ಉರಿ ಮತ್ತು ವಾಕರಿಕೆ ಉಂಟಾಗುತ್ತದೆ ಆದ್ದರಿಂದ ಖಾರವಿಲ್ಲದ ಬಿರಿಯಾನಿಯನ್ನು ಸೇವಿಸಿ.

ಮನೆಯಲ್ಲಿಯೇ ಮಾಡಿದ ಬಿರಿಯಾನಿ ಹೆಚ್ಚು ಆರೋಗ್ಯಕರ

ಮನೆಯಲ್ಲಿಯೇ ಮಾಡಿದ ಬಿರಿಯಾನಿ ಹೆಚ್ಚು ಆರೋಗ್ಯಕರ

ಗರ್ಭಿಣಿ ಮಹಿಳೆಗೆ ಮನೆಯಲ್ಲಿಯೇ ಮಾಡಿದ ಬಿರಿಯಾನಿ ಹೆಚ್ಚು ಆರೋಗ್ಯಕರ.ಆದರೆ ನಿಮಗೆ ರೆಸ್ಟೋರೆಂಟ್ ನ ಬಿರಿಯಾನಿಯನ್ನೇ ತಿನ್ನಬೇಕು ಎಂದು ಮನಸ್ಸಾದಲ್ಲಿ ಬಿರಿಯಾನಿ ಮಾಡುವಾಗ ಮೀಟ್ ಟೆಂಡರೈಸ್ ಅನ್ನು ಬಳಸಿದ್ದಾರೆಯೇ ಎಂಬುದನ್ನು ಕೇಳಿ ತಿಳಿದುಕೊಳ್ಳಿ.ಮೀಟ್ ಟೆಂಡರೈಸ್ ಎಂದರೆ ಮಾಂಸವು ಬೇಗ ಬೇಯಲು ಬಳಸುವ ಒಂದು ರೀತಿಯ ಅಂಶ ಎಂಬುದು ನಿಮಗೆ ತಿಳಿದಿರಲಿ.ಟೆಂಡರೈಸರ್ ಗರ್ಭಿಣಿ ಮಹಿಳೆಯರಿಗೆ ಹಾನಿಕಾರಕ ಇದರ ಜೊತೆಗೆ ಪಪ್ಪಾಯಿ ಕಾಯಿಯನ್ನು ಕೂಡ ಈ ಸಮಯದಲ್ಲಿ ತಿನ್ನುವುದನ್ನು ತಪ್ಪಿಸಬೇಕು.

Most Read: ಗರ್ಭಿಣಿಯರು ಪಪ್ಪಾಯ, ದ್ರಾಕ್ಷಿ ಹಾಗೂ ಅನಾನಸ್ ಹಣ್ಣುಗಳನ್ನು ತಿನ್ನಲೇಬಾರದು!

ಖಾರ ಮತ್ತು ಸ್ಮೋಕಿ ತಂದೂರಿ ಚಿಕನ್

ಖಾರ ಮತ್ತು ಸ್ಮೋಕಿ ತಂದೂರಿ ಚಿಕನ್

ನೀವು ಮಾಂಸದಡುಗೆ ಇಷ್ಟಪಡುವವರಾಗಿದ್ದಲ್ಲಿ ಸ್ಪೈಸಿ,ಸ್ಮೋಕಿ ತಂದೂರಿ ಚಿಕನ್ ನಿಮ್ಮ ಬಯಕೆಯಲ್ಲಿ ಒಂದಾಗಿರುತ್ತದೆ.ಆದರೆ ಇದರಲ್ಲಿ ಮೀಟ್ ಟೆಂಡರೈಸರ್ ಅನ್ನು ಅಧಿಕ ಪ್ರಮಾಣದಲ್ಲಿ ಬಳಸಲಾಗುತ್ತದೆ.ಆದ್ದರಿಂದ ಗರ್ಭಿಣಿ ಮಹಿಳೆಯು ಇದನ್ನು ತಿನ್ನುವಾಗ ಹೆಚ್ಚು ಕಾಳಜಿವಹಿಸಬೇಕಾಗುತ್ತದೆ.ಕಿತ್ತಳೆ ಬಣ್ಣದ ತಂದೂರಿ ಚಿಕನ್ ಕಂಡರೆ ಎಷ್ಟೇ ಬಯಕೆಯಾದರೂ ಕೂಡ ಗರ್ಭಿಣಿ ಮಹಿಳೆಯರು ಇದನ್ನು ತಿನ್ನದಿರುವುದು ಆರೋಗ್ಯಕರ.

English summary

Is It Safe To Eat Chicken During Pregnancy?

Have you ever come across someone cautioning you to stay from eating chicken during pregnancy? Well, the next time they say the same, please clarify their misconception about the diet during pregnancy. Explain to them how the requirement of zinc increases manifold in the would-be mom’s body, so consuming chicken laden with iron and minerals becomes absolutely essential.
X
Desktop Bottom Promotion