For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ಪಪ್ಪಾಯ, ದ್ರಾಕ್ಷಿ ಹಾಗೂ ಅನಾನಸ್ ಹಣ್ಣುಗಳನ್ನು ತಿನ್ನಲೇಬಾರದು!

|

ಗರ್ಭಾವಸ್ಥೆ ಎನ್ನುವುದು ಹೆಣ್ಣಿಗೊಂದು ವಿಶೇಷವಾದ ಘಟ್ಟ. ಈ ಸ್ಥಿತಿಯು ಮಹಿಳೆಗೆ ಸಂತೋಷ ಹಾಗೂ ಧನ್ಯತೆಯ ಭಾವವನ್ನು ನೀಡುವ ಅವಧಿಯಾಗಿರುತ್ತದೆ. ಹಾಗೆಯೇ ಈ ಸ್ಥಿತಿಯಲ್ಲಿ ಕೊಂಚ ಆರೋಗ್ಯದ ತೊಂದರೆಗಳು ಉಂಟಾದರೂ ತಾಯಿ ಮತ್ತು ಮಗುವಿನ ಆರೋಗ್ಯದಲ್ಲಿ ಗಂಭೀರತೆ ಪಡೆದುಕೊಳ್ಳುವುದು. ಹಾಗಾಗಿ ಗರ್ಭಾವಸ್ಥೆಯಲ್ಲಿ ಮಹಿಳೆಯರು ಸಾಮಾನ್ಯ ದಿನಗಳಿಗಿಂತಲೂ ಹೆಚ್ಚಿನ ಕಾಳಜಿ ಹಾಗೂ ಆರೈಕೆಯನ್ನು ಪಡೆದುಕೊಳ್ಳಬೇಕಾಗುವುದು. ತಾಯಿಯ ದೇಹದಲ್ಲಿ ಬೆಳೆಯುತ್ತಿರುವ ಮಗುವು ಬಹಳ ಸೂಕ್ಷ್ಮ ಅಥವಾ ನಾಜೂಕು ರೀತಿಯಲ್ಲಿ ಬೆಳವಣಿಗೆ ಹೊಂದುತ್ತಾ ಇರುತ್ತದೆ. ಅಂತೆಯೇ ತಾಯಿಯ ಆರೋಗ್ಯದಲ್ಲೂ ಸಾಕಷ್ಟು ಬದಲಾವಣೆಗಳು ಹಾಗೂ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅವೆಲ್ಲವನ್ನೂ ಸೂಕ್ತ ರೀತಿಯಲ್ಲಿ ನಿರ್ವಹಿಸುವುದು ತಾಯಿಗೆ ಒಂದು ಸವಾಲು ಎನ್ನಬಹುದು.

ಮಗು ತನ್ನ ಬೆಳವಣಿಗೆಗೆ ಬೇಕಾದ ಪೋಷಕಾಂಶ ಹಾಗೂ ಆಸರೆಯನ್ನು ತಾಯಿಯ ದೇಹದಿಂದ ಪಡೆದುಕೊಳ್ಳುತ್ತಿರುತ್ತದೆ. ಈ ಬದಲಾವಣೆ ಅಥವಾ ಬೆಳವಣಿಗೆಯು ತಾಯಿಯ ರೋಗನಿರೋಧಕ ಶಕ್ತಿಯನ್ನು ಅವಲಂಬಿಸಿರುತ್ತದೆ. ತಾಯಿ ಯಾವ ಆಹಾರವನ್ನು ಸೇವಿಸುತ್ತಾಳೆ ಹಾಗೂ ಎಂತಹ ವಾತಾವರಣದಲ್ಲಿ ಇರುತ್ತಾಳೆ ಎನ್ನುವುದರ ಆಧಾರದ ಮೇಲೆ ತಾಯಿ ಮತ್ತು ಮಗುವಿನ ಆರೋಗ್ಯವು ನಿಂತಿರುತ್ತವೆ. ಆಹಾರದಲ್ಲಿ ಕಾಯಿಲೆಯನ್ನುಂಟುಮಾಡುವಂತಹ ಬ್ಯಾಕ್ಟೀರಿಯಾ ಮತ್ತು ವೈರಸ್ಗಳು ಇವೆ ಎಂದಾದರೆ ಅವು ಗರ್ಭಾವಸ್ಥೆಯ ಮೇಲೆ ಬಹುಬೇಗ ಪರಿಣಾಮ ಬೀರುತ್ತವೆ. ಆ ಸಂದರ್ಭದಲ್ಲಿ ಸೂಕ್ತ ಆರೈಕೆ ಅಥವಾ ತಪಾಸಣೆ ಪಡೆದುಕೊಂಡರೆ ಉಂಟಾಗಲಿರುವ ದೊಡ್ಡ ಸಮಸ್ಯೆಯನ್ನು ತಪ್ಪಿಸಬಹುದು. ಸಮಸ್ಯೆಯ ಸೂಕ್ಷ್ಮತೆ ತಾಯಿಯ ಗಮನಕ್ಕೆ ಬಂದಿಲ್ಲ ಎಂದಾದರೆ ಸಾಕಷ್ಟು ತೊಂದರೆಗಳು ಉಂಟಾಗಬಹುದು.

ತಜ್ಞರು ಹೇಳುವ ಪ್ರಕಾರ

ತಜ್ಞರು ಹೇಳುವ ಪ್ರಕಾರ

ತಜ್ಞರು ಹೇಳುವ ಪ್ರಕಾರ ನೈಸರ್ಗಿಕವಾಗಿ ಸಿಗುವ ಹಣ್ಣು-ತರಕಾರಿಗಳು ಜೀವ ಸಂಕುಲಕ್ಕೆ ಅನುಕೂಲ ಆಗುವಂತಹ ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಆದರೆ ಕೆಲವೊಮ್ಮೆ ಆ ಪೋಷಕಾಂಶಗಳು ಆರೋಗ್ಯದ ಮೇಲೆ ಹಾನಿಯನ್ನು ಸಹ ಉಂಟುಮಾಡುವ ಸಾಧ್ಯತೆಗಳಿವೆ. ಅದರಲ್ಲೂ ಗರ್ಭಾವಸ್ಥೆ ಯಲ್ಲಿರುವ ಮಹಿಳೆಯರಿಗೆ ಕೆಲವು ತರಕಾರಿಗಳು ಮತ್ತು ಹಣ್ಣುಗಳು ಋಣಾತ್ಮಕ ಪರಿಣಾಮವನ್ನುಂಟುಮಾಡುವ ಸಾಧ್ಯತೆಗಳಿರುತ್ತವೆ. ಅದರಲ್ಲೂ ಕೆಲವು ಆಯ್ದ ಹಣ್ಣುಗಳು ಗರ್ಭವನ್ನು ಕರಗಿಸುವ ಸಾಮಥ್ರ್ಯವನ್ನು ಹೊಂದಿರುತ್ತವೆ. ಹಾಗಾಗಿ ಗರ್ಭಿಣಿಯರು ಕೆಲವು ಸೂಕ್ತ ಹಣ್ಣುಗಳನ್ನು ತಿನ್ನದೆ ಇರುವುದು ಉತ್ತಮ. ಬಯಕೆಯಲ್ಲಿ ಹಣ್ಣನ್ನು ತಿನ್ನಲು ಮನಸ್ಸು ಬಯಸಬಹುದು. ಆದರೆ ಅದರ ನಿಯಂತ್ರಣ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಮಗುವಿನ ಬೆಳವಣಿಗೆಯ ಕುರಿತು ಸಾಕಷ್ಟು ಗಮನವನ್ನು ನೀಡಬೇಕಾಗುವುದು.

ತಜ್ಞರು ಹೇಳುವ ಪ್ರಕಾರ

ತಜ್ಞರು ಹೇಳುವ ಪ್ರಕಾರ

ಮಹಿಳೆಗೆ ತನ್ನ ಹುಟ್ಟು ಪರಿಪೂರ್ಣ ಎನ್ನುವ ಭಾವನೆ ತುಂಬಿಕೊಡುವುದು ಗರ್ಭಾವಸ್ಥೆ. ಇಂತಹ ಒಂದು ಅಪೂರ್ವವಾದ ಸಂದರ್ಭದಲ್ಲಿ ಮಗುವಿನ ಆರೈಕೆ ಹಾಗೂ ನಿಮ್ಮ ಆರೋಗ್ಯ ಎರಡು ಬಹುಮುಖ್ಯವಾದ್ದು. ಆ ವೇಳೆಯಲ್ಲಿ ನೀವು ಕಟ್ಟುನಿಟ್ಟಾಗಿ ಕೆಲವು ಹಣ್ಣುಗಳಿಂದ ದೂರ ಇರಬೇಕು. ಹಾಗಾದರೆ ಆ ಹಣ್ಣುಗಳು ಯಾವವು? ಅವುಗಳ ಸೇವನೆಯಿಂದ ಗರ್ಭದ ಮೇಲೆ ಯಾವ ಪರಿಣಾಮ ಬೀರುತ್ತವೆ? ಎನ್ನುವುದರ ಸಂಪೂರ್ಣ ವಿವರಣೆಯನ್ನು ಬೋಲ್ಡ್ ಸ್ಕೈ ಲೇಖನದ ಮುಂದಿನ ಭಾಗದಲ್ಲಿ ವಿವರಿಸಿದೆ. ನಿಮಗೆ ಈ ವಿಷಯದ ಕುರಿತು ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ಅಥವಾ ಕಾತರವಿದ್ದರೆ ಲೇಖನದ ಮುಂದಿನ ಭಾಗವನ್ನು ಪರಿಶೀಲಿಸಿ.

ಪಪ್ಪಾಯ

ಪಪ್ಪಾಯ

ಗರ್ಭಾವಸ್ಥೆಯಲ್ಲಿ ಇರುವ ಮಹಿಳೆಯರು ಸಾಮಾನ್ಯವಾಗಿ ಪಪ್ಪಾಯವನ್ನು ತಿನ್ನುವುದಿಲ್ಲ. ಗರ್ಭಿಣಿಯರಿಗೆ ಪಪ್ಪಾಯವನ್ನು ತಿನ್ನುವಿರಾ ಎಂದು ಖೇಳಿದರೆ ಸಾಮಾನ್ಯವಾಗಿ ಇಲ್ಲ ಎನ್ನುವ ಉತ್ತರ ಬರುವುದು ಸಹಜ. ಶ್ರೀಲಂಕಾ, ಬಾಂಗ್ಲಾದೇಶ್, ಭಾರತ ಮತ್ತು ಪಾಕಿಸ್ತಾನದ ಬಹಳಷ್ಟು ಮಹಿಳೆಯರು ಗರ್ಭಾವಸ್ಥೆಯಲ್ಲಿ ಇರುವಾಗ ಪಪ್ಪಾಯದಿಂದ ಆದಷ್ಟು ದೂರ ನಿಲ್ಲುತ್ತಾರೆ. ಆರೋಗ್ಯಕ್ಕೆ ಅತ್ಯಮೂಲ್ಯವಾದ ಪೋಷಕಾಂಶವನ್ನು ನೀಡುವ ಹಣ್ಣು ಎನಿಸಿಕೊಂಡಿದ್ದರೂ ಸಹ ಗರ್ಭಾವಸ್ಥೆಯಲ್ಲಿರುವಾಗ ಇದನ್ನು ಸೇವಿಸಿದರೆ ಇದರಿಂದ ಉಂಟಾಗುವ ಧನಾತ್ಮಕ ಪರಿಣಾಮಗಳಿಗಿಂತ ಋಣಾತ್ಮಕ ಪರಿಣಾಮಗಳೇ ಹೆಚ್ಚು. ಪಪ್ಪಾಯ ಹಣ್ಣು ಮತ್ತು ಅರೆ ಹಣ್ಣಾದ ಕಾಯಿಯನ್ನು ಸೇವಿಸಿದರೆ ಗರ್ಭಪಾತ ಆಗುವ ಸಾಧ್ಯತೆಗಳು ಹೆಚ್ಚು. ಇದರಲ್ಲಿರುವ ಸತ್ವಗಳು ಗರ್ಭಾಶಯದ ಕುಗ್ಗುವಿಕೆಗೆ ಪ್ರಚೋದಿಸುವುದು.

Most Read:ಗರ್ಭಿಣಿಯರು ಪ್ರತಿದಿನ ದಿನಕ್ಕೆ ಒಂದಾದರೂ ಬಾಳೆಹಣ್ಣು ತಿನ್ನಬೇಕಂತೆ

ಪಪ್ಪಾಯ

ಪಪ್ಪಾಯ

ಹಸಿರು ಪಪ್ಪಾಯ ಅಥವಾ ಕಾಯಾಗಿರುವ ಪಪ್ಪಾಯವನ್ನು ಸಲಾಡ್ ರೂಪದಲ್ಲಿ ಸೇವಿಸಿದರೆ ಗರ್ಭಕ್ಕೆ ನೇರವಾಗಿ ಪರಿಣಾಮ ಬೀರುವುದು. ಇದರಲ್ಲಿ ಇರುವ ಪಾಪೈನ್ ಕಿಣ್ವಗಳು ಗರ್ಭದ ಮೇಲೆ ಋಣಾತ್ಮಕ ಪರಿಣಾಮ ಬೀರುವುದು. ಮೂರನೇ ತ್ರೈ ಮಾಸಿಕದ ಅವಧಿಯೊಳಗೆ ಈ ಹಣ್ಣನ್ನು ಸೇವಿಸಿದರೆ ಅಪಾಯವು ಹೆಚ್ಚೆಂದು ಹೇಳಲಾಗುವುದು. ಹಾಗಾಗಿ ತಾಯಿ ಆದವಳು ಗರ್ಭಾವಸ್ಥೆಯಲ್ಲಿ ಸೇವಿಸಬೇಕಾದ ಆಹಾರದ ಪಟ್ಟಿಯಿಂದ ಹೊರಗೆ ಇಡಬೇಕು.

Most Read:ಗರ್ಭಿಣಿಯರು ಮಶ್ರೂಮ್ ತಿನ್ನಬಹುದೇ? ಇದರಿಂದ ಏನಾದರೂ ತೊಂದರೆ ಇದೆಯೇ?

ಅನಾನಸ್ ಹಣ್ಣು

ಅನಾನಸ್ ಹಣ್ಣು

ಆರೋಗ್ಯಕರ ಹಣ್ಣುಗಳಲ್ಲಿ ಒಂದು ಅನಾನಸ್. ಆದರೆ ಗರ್ಭಾವಸ್ಥೆಯಲ್ಲಿ ಇರುವ ಮಹಿಳೆಯರು ಇದನ್ನು ಸೇವಿಸಬಾರದು ಎಂದು ಹೇಳಲಾಗುವುದು. ಇದರಲ್ಲಿ ಇರುವ ಬ್ರೊಮೆಲಿನ್ ಅಂಶವು ಸಮೃದ್ಧವಾಗಿರುತ್ತವೆ. ಇದು ಗರ್ಭ ಕಂಠದ ಮೃದುತ್ವವನ್ನು ನಾಶಪಡಿಸುವುದು. ಜೊತೆಗೆ ಅಕಾಲಿಕ ಪ್ರಸವ ಅಥವಾ ಗರ್ಭವನ್ನು ಕರಗಿಸುವಂತಹ ಗುಣವನ್ನು ಒಳಗೊಂಡಿರುತ್ತವೆ. ಈ ಹಣ್ಣನ್ನು ತಿನ್ನ ಬೇಕು ಎನ್ನುವ ಬಯಕೆ ಹೆಚ್ಚಾದರೂ ಸಹ ಮೊದಲ ತ್ರೈಮಾಸಿಕದಲ್ಲಿ ಈ ಹಣ್ಣನ್ನು ಸೇವಿಸಬಾರದು ಎನ್ನುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಕೆಲವರು ಅನಾನಸ್ ಹಣ್ಣಿನ ರಸವನ್ನು ಸೇವಿಸುವುದರಿಂದ ಪ್ರಸವಕ್ಕೆ ಅನುಕೂಲವಾಗುವುದು ಎಂದು ತಪ್ಪಾಗಿ ಗ್ರಹಿಸುತ್ತಾರೆ. ಈ ಹಣ್ಣಿನಿಂದ ಸಾಕಷ್ಟು ಅಪಾಯಗಳೇ ಹೆಚ್ಚಾಗಿರುವುದರಿಂದ ಆದಷ್ಟು ಈ ಹಣ್ಣನ್ನು ಹಾಗೂ ಹಣ್ಣಿನ ರಸವನ್ನು ಸೇವಿಸದೆ ಇರುವಂತೆ ನೋಡಿಕೊಳ್ಳುವುದು ಉತ್ತಮ.

ದ್ರಾಕ್ಷಿ ಹಣ್ಣು

ದ್ರಾಕ್ಷಿ ಹಣ್ಣು

ಗರ್ಭಾವಸ್ಥೆಯಲ್ಲಿ ಇರುವಾಗ ನಾವು ದ್ರಾಕ್ಷಿ ಹಣ್ಣನ್ನು ತಿನ್ನಬಹುದೇ? ಎನ್ನುವ ಪ್ರಶ್ನೆ ಕಾಡುವುದು ಸಹಜ. ಇದಕ್ಕೆ ಉತ್ತರವು ವಿವಾದದಿಂದ ಕೂಡಿರುತ್ತವೆ. ಕೆಲವರು ಗರ್ಭಾವಸ್ಥೆಯಲ್ಲಿ ಇರುವಾಗ ದ್ರಾಕ್ಷಿ ಹಣ್ಣನ್ನು ಸೇವಿಸುವುದು ಉತ್ತಮವಲ್ಲ ಎಂದು ಹೇಳುತ್ತಾರೆ. ಇನ್ನೂ ಕೆಲವರು ಸೇವಿಸುವುದು ಉತ್ತಮ ಎನ್ನುತ್ತಾರೆ. ದ್ರಾಕ್ಷಿ ಹಣ್ಣಿನ ಮೇಲೆ ಸಾಕಷ್ಟು ರಾಸಾಯನಿಕ ಔಷಧಗಳನ್ನು ಸಿಂಪಡಿಸಿರುತ್ತಾರೆ. ಅದನ್ನು ಸೂಕ್ತ ರೀತಿಯಲ್ಲಿ ತೊಳೆಯದೆ ಸೇವಿಸುತ್ತಾರೆ. ಅದು ಗರ್ಭದ ಮೇಲೆ ಅಥವಾ ಮಗುವಿನ ಬೆಳವಣಿಗೆಯ ಮೇಲೆ ಸಾಕಷ್ಟು ಋಣಾತ್ಮಕ ಪರಿಣಾಮವನ್ನು ಬೀರುವುದು.

Most Read:ಗರ್ಭದ ಚಲನೆಯ ಮೂಲಕ ಮಗುವಿನ ಲಿಂಗವನ್ನು ಊಹಿಸಿ

ದ್ರಾಕ್ಷಿ ಹಣ್ಣು

ದ್ರಾಕ್ಷಿ ಹಣ್ಣು

ರಾಸಾಯನಿಕ ಭರಿತವಾದ ದ್ರಾಕ್ಷಿಯನ್ನು ಸೇವಿಸುವುದರಿಂದ ಅದರಲ್ಲಿ ಇರುವ ರೆಸ್ವೆರಾಟ್ರೋಲ್ ಮತ್ತು ರಾಶಯನಿಕ ಪದಾರ್ಥಗಳು ತಾಯಿಗೆ ವಿಷವಾಗಿ ಪರಿಣಮಿಸುವುದು. ಗರ್ಭಾವಸ್ಥೆಯಲ್ಲಿ ದ್ರಾಕ್ಷಿಯನ್ನು ಸೇವಿಸಿದರೆ ಉತ್ತಮವಾದ ವಿಟಮಿನ್ ಸಿ ಹಾಗೂ ಉತ್ತಮವಾದ ಪೋಷಕಾಂಶಗಳು ಸಹ ದೊರೆಯುತ್ತವೆ. ಹಾಗಾಗಿ ನೀವು ಗರ್ಭಾವಸ್ಥೆಯಲ್ಲಿ ಇದ್ದೀರಿ ಅಥವಾ ನಿಮ್ಮವರು ಗರ್ಭಾವಸ್ಥೆಯಲ್ಲಿ ಇದ್ದಾರೆ ಎಂದಾದರೆ ನಿಮ್ಮ ವೈದ್ಯರೊಂದಿಗೆ ಸೂಕ್ತ ಸಲಹೆ ಪಡೆದು ಸೇವಿಸುವುದು ಯೋಗ್ಯವಾದದ್ದು.

ತೊಳೆಯದೆ ಇರುವ ಹಣ್ಣನ್ನು ಸೇವಿಸದಿರಿ

ತೊಳೆಯದೆ ಇರುವ ಹಣ್ಣನ್ನು ಸೇವಿಸದಿರಿ

ಗರ್ಭಾವಸ್ಥೆಯಲ್ಲಿ ತೊಳೆಯದ ಮತ್ತು ಪಾಶ್ಚೀಕರಿಸದ ಹಣ್ಣುಗಳನ್ನು ತಪ್ಪಿಸಲು ಗರ್ಭಿಣಿ ಮಹಿಳೆಯರಿಗೆ ಪ್ರಮುಖವಾದ ಸಲಹೆ. ಟಕ್ಸೊಪ್ಲಾಸ್ಮಾಸಿಸ್ನಿಂದ ಸೋಂಕು ತಡೆಗಟ್ಟಲು ಆಹಾರ ನೈರ್ಮಲ್ಯವು ಗರ್ಭಾವಸ್ಥೆಯಲ್ಲಿ ಪ್ರೈಮಲ್ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಎಂದು ಇದು ವಿಮರ್ಶಿಸುತ್ತದೆ. ಪ್ರತಿ ಗರ್ಭಾವಸ್ಥೆಯ ಆಹಾರದಲ್ಲೂ ಹಣ್ಣುಗಳು ಒಂದು ಅವಿಭಾಜ್ಯ ಅಂಗವಾಗಿರಬೇಕು, ಆದಾಗ್ಯೂ ಒಂದು ಗರ್ಭಾವಸ್ಥೆಯಲ್ಲಿ ಯಾವುದೇ ತೊಡಕುಗಳನ್ನು ತಪ್ಪಿಸಲು, ಎಚ್ಚರಿಕೆಯಿಂದ ಮತ್ತು ಅನಾನಸ್, ದ್ರಾಕ್ಷಿ ಮತ್ತು ಪಪ್ಪಾಯಗಳಂತಹ ಹಣ್ಣುಗಳನ್ನು ತಿನ್ನುವುದನ್ನು ತಡೆಯಬೇಕು.

ಸರಿಯಾದ ಮಾರ್ಗ ಇಲ್ಲಿದೆ

ಸರಿಯಾದ ಮಾರ್ಗ ಇಲ್ಲಿದೆ

ಕಚ್ಚಾ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವ ಮುನ್ನ ಅಥವಾ ತಯಾರಿಸುವುದರ ಮುಂಚೆ ವಿಶೇಷವಾಗಿ ಕ್ಯಾಂಟಲೌಪ್ ಮತ್ತು ಇತರ ಕಲ್ಲಂಗಡಿಗಳಂತೆ ಸಿಪ್ಪೆಸುಲಿಯುವ ಅಥವಾ ಕತ್ತರಿಸುವ ಅಗತ್ಯವಿರುವ ಹಣ್ಣುಗಳನ್ನು ತೊಳೆಯಿರಿ. ಬಾಹ್ಯ ತೊಗಟೆಯಲ್ಲಿ ಅಥವಾ ಸಿಪ್ಪೆಯಲ್ಲಿ ಬ್ಯಾಕ್ಟೀರಿಯಾವನ್ನು ಕಾಣಬಹುದು.

•ಸೋಪ್, ಡಿಟರ್ಜೆಂಟ್ಸ್ ಅಥವಾ ಬ್ಲೀಚ್ ದ್ರಾವಣಗಳನ್ನು ಉತ್ಪನ್ನಗಳನ್ನು ತೊಳೆಯಲು ಬಳಸಬೇಡಿ.

•ಅಧಿಕ ಮುನ್ನೆಚ್ಚರಿಕೆಯಾಗಿ, ಮೇಲ್ಮೈ ಧೂಳನ್ನು ತೆಗೆದುಹಾಕಲು ಸಣ್ಣ ಸಸ್ಯದ ಕುಂಚವನ್ನು ಬಳಸಿ.

•ಹಾನಿಗೊಳಗಾದ ಅಥವಾ ಮೂಗೇಟಿಗೊಳಗಾದ ಪ್ರದೇಶಗಳನ್ನು ಕತ್ತರಿಸಲು ಪ್ರಯತ್ನಿಸಿ - ಬ್ಯಾಕ್ಟೀರಿಯಾಗಳು ಈ ಸ್ಥಳಗಳಲ್ಲಿ ವೃದ್ಧಿಯಾಗಬಹುದು.

ಹಣ್ಣುಗಳು ನಿಮ್ಮ ಆಹಾರಕ್ರಮದ ಪ್ರಮುಖ ಭಾಗವಾಗಿರಬೇಕು. ಏಕೆಂದರೆ ಗರ್ಭಿಣಿಯರಿಗೆ ಪೋಷಕಾಂಶದಿಂದ ಸಮೃದ್ಧವಾಗಿರುವ ಆಹಾರ, ತರಕಾರಿ ಮತ್ತು ಹಣ್ಣುಹಂಪಲುಗಳು ಬಹುಮುಖ್ಯವಾಗಿರುತ್ತವೆ. ನಿಮ್ಮ ಮಗುವಿಗಾಗಿ ನೀವು ಹಣ್ಣುಗಳ ವಿಷಯದಲ್ಲಿ ಅಥವಾ ಆಹಾರದ ವಿಷಯದಲ್ಲಿ ಸಾಕಷ್ಟು ಕಾಳಜಿಯನ್ನು ತೆಗೆದುಕೊಳ್ಳುವುದು ಸೂಕ್ತ. ಇದರಿಂದ ನಿಮ್ಮ ಗರ್ಭಾವಸ್ಥೆಯು ಸಂತೋಷದಿಂದ ಹಾಗೂ ಆರೋಗ್ಯಕರವಾಗಿರುತ್ತದೆ.

English summary

Fruits to Avoid During Pregnancy: Grapes, Papaya, Pineapple ...

Pregnancy affects your immune system and makes you and your child more susceptible to the bacteria and viruses that cause foodborne illnesses. There are certain fruits that need to be avoided during pregnancy. You want the best for your baby, so, in case you have missed out this instruction, here is a checklist of fruits to avoid during pregnancy. Keep this handy to ensure that you and your unborn baby stay healthy and safe.
X
Desktop Bottom Promotion