ಸೆಕ್ಸ್ ಬಳಿಕ, ಕೂಡಲೇ ಗರ್ಭಧಾರಣೆ ಆಗುವ ಲಕ್ಷಣ ಕಾಣಿಸುವುದೇ?

Subscribe to Boldsky

ಗರ್ಭಧಾರಣೆ ಎನ್ನುವುದು ಲೈಂಗಿಕ ಕ್ರಿಯೆ ಬಳಿಕ ನಡೆಯುವಂತಹ ಕ್ರಿಯೆ. ಆದರೆ ಇದಕ್ಕೆ ಕೆಲವು ದಿನಗಳು ಬೇಕಾಗುವುದು. ಆದರೆ ಕೆಲವರಲ್ಲಿ ಗರ್ಭಧಾರಣೆಯ ಲಕ್ಷಣಗಳು ಬೇಗನೆ ಕಂಡುಬರುವುದು. ಲೈಂಗಿಕ ಕ್ರಿಯೆ ಬಳಿಕ ತಕ್ಷಣಕ್ಕೆ ಕಂಡುಬರುವಂತಹ ರಕ್ತದ ಕಲೆಗಳು ಅಥವಾ ಡಿಸ್ಚಾರ್ಚ್ ಗರ್ಭಧಾರಣೆಯ ಲಕ್ಷಣಗಳಲ್ಲ.

ಋತುಚಕ್ರ ಆಗದೆ ಇರುವುದರಿಂದ ಹಿಡಿದು ಗರ್ಭಧಾರಣೆಯ ಲಕ್ಷಣಗಳು ಕಂಡುಬರಲು ಸುಮಾರು 5ರಿಂದ ಆರು ವಾರಗಳು ಬೇಕಾಗುವುದು. ನೀವು ಅಂತಿಮ ಋತುಚಕ್ರ ಕಳೆದುಕೊಂಡ ಬಳಿಕ ಅಥವಾ ಋತುಚಕ್ರವಾದ ಆರು ವಾರಗಳ ಬಳಿಕ ನಿಮಗೆ ಈ ಲಕ್ಷಣಗಳು ಕಂಡುಬರುವುದು. ಋತುಚಕ್ರ ಕಳೆದುಕೊಂಡ ತಕ್ಷಣವೇ ಕೆಲವು ಮಹಿಳೆಯರಲ್ಲಿ ಈ ಲಕ್ಷಣಗಳು ಕಂಡುಬರಬಹುದು.

ಗರ್ಭಧಾರಣೆ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದರೆ ಅಥವಾ ಗರ್ಭಧಾರಣೆಯಾಗುತ್ತಿದೆ ಎನ್ನುವ ಭೀತಿಯಿದ್ದರೆ ನಿಮ್ಮಲ್ಲಿ ಗರ್ಭಧಾರಣೆಯ ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳಬಹುದು. ಆದರೆ ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡ ಒಂದೆರಡು ದಿನಗಳಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ ಮತ್ತು ಇಂತಹ ಲಕ್ಷಣಗಳು ಕಾಣಿಸಿಕೊಂಡರೆ ಅದು ಗರ್ಭಧಾರಣೆಯ ಲಕ್ಷಣಗಳು ಕೂಡ ಅಲ್ಲ.

ವಾಕರಿಕೆ

ವಾಕರಿಕೆ

ಸೆಕ್ಸ್ ಬಳಿಕ ಕೆಲವೊಂದು ಸಲ ತಕ್ಷಣ ಬರುವಂತಹ ವಾಕರಿಕೆಯು ಗರ್ಭಧಾರಣೆಯ ಲಕ್ಷಣವೇ ಎಂದು ಕೆಲವು ಮಹಿಳೆಯರು ಪ್ರಶ್ನಿಸುವರು. ಅದಾಗ್ಯೂ, ಸೆಕ್ಸ್ ಬಳಿಕ ನಿಮ್ಮ ದೇಹವು ಗರ್ಭಧಾರಣೆಗೆ ತಯಾರಾಗಿದೆ ಎಂದು ಲಕ್ಷಣವನ್ನು ತೋರಿಸಲು ದೇಹಕ್ಕೆ ಹೇಳಲು ಅಷ್ಟು ಸಮಯವು ಸಿಗುವುದಿಲ್ಲ. ಗರ್ಭಧಾರಣೆಯ 5-6 ವಾರಗಳ ತನಕ ಕೆಲವು ಮಹಿಳೆಯರಿಗೆ ವಾಕರಿಕೆಯ ಲಕ್ಷಣಗಳು ಕಾಣಿಸುವುದಿಲ್ಲ. ಇದು ಅವರ ಅನುಭವಕ್ಕೆ ಕೂಡ ಬರುವುದಿಲ್ಲ. ನಿಮಗೆ ಗರ್ಭಧಾರಣೆಗೆ ಸಂಬಂಧಿಸಿದ ವಾಕರಿಕೆ ಕಾಣಿಸಿಕೊಳ್ಳುತ್ತಾ ಇದ್ದರೆ ಆಗ ನೀವು ಕೆಲವು ವಾರಗಳ ಮೊದಲೇ ಗರ್ಭ ಧರಿಸಿರಬೇಕು.

Most Read: ಗರ್ಭಿಣಿಯಾಗಿರುವಾಗ ಸೆಕ್ಸ್: ಇಂತಹ ಸಮಯದಲ್ಲಿ ಕೇಳಲಾಗುವ ಸಾಮಾನ್ಯ ಪ್ರಶ್ನೆಗಳು

ಗರ್ಭಧಾರಣೆ ಪರೀಕ್ಷೆ

ಗರ್ಭಧಾರಣೆ ಪರೀಕ್ಷೆ

ಗರ್ಭಧಾರಣೆ ಪರೀಕ್ಷೆಯು ನೀವು ಗರ್ಭ ಧರಿಸಿದ್ದೀರಾ ಅಥವಾ ಇಲ್ಲವಾ ಎಂದು ತಿಳಿಯಲು ಸರಿಯಾದ ವಿಧಾನವಾಗಿದೆ. ಆದರೂ ನೀವು ನಿಖರ ಫಲಿತಾಂಶ ಬೇಕೆಂದು ನಿರೀಕ್ಷೆ ಮಾಡಿದ್ದರೆ ಆಗ ಋತುಚಕ್ರ ಆಗದೆ ಇರುವ ತನಕ ಕಾಯಬೇಕು. ನೀವು ಗರ್ಭಧಾರಣೆ ಬಗ್ಗೆ ಮನೆಯಲ್ಲೇ ಪರೀಕ್ಷೆ ಮಾಡಿಕೊಳ್ಳಬಹುದು ಅಥವಾ ವೈದ್ಯರ ಬಳಿಗೆ ತೆರಳಿ ಪರೀಕ್ಷೆ ಮಾಡಿಸಿಕೊಳ್ಳಬಹುದು.

ದೇಹದ ಉಷ್ಣತೆ ಮಾಪಕ

ದೇಹದ ಉಷ್ಣತೆ ಮಾಪಕ

ಆದರೆ ಇದು ನಿಮಗೆ ಗರ್ಭಧಾರಣೆಯನ್ನು ಖಚಿತಪಡಿಸುವುದಿಲ್ಲ. ನೀವು ದೇಹದಲ್ಲಿನ ತಾಪಮಾನವನ್ನು ಗಮನದಲ್ಲಿಟ್ಟುಕೊಂಡು ಗರ್ಭಧಾರಣೆಯ ಕೆಲವೊಂದು ಲಕ್ಷಣಗಳನ್ನು ಕಂಡುಹಿಡಿಯಬಹುದಾಗಿದೆ. ಅಂಡೋತ್ಪತ್ತಿಗೆ ಮೊದಲು ನೀವು ದೇಹದ ತಾಪಮಾನವನ್ನು ಲೆಕ್ಕ ಹಾಕಿದ್ದರೆ ಆಗ ನೀವು ಇದನ್ನು ಪತ್ತೆ ಮಾಡಿಕೊಳ್ಳಬಹುದು. ನೀವು ದೀರ್ಘ ಕಾಲ ತನಕ ದೇಹದ ತಾಪಮಾನದ ಲೆಕ್ಕ ಹಾಕಿದಂತೆ ನಿಮಗೆ ಇದನ್ನು ಕಂಡುಕೊಳ್ಳಲು ಸುಲಭವಾಗುವುದು. ಇದರಿಂದ ನೀವು ಗರ್ಭ ಧರಿಸಿರುವುದನ್ನು ತಿಳಿಯಬಹುದು. ಋತುಚಕ್ರ ಕಳೆದುಕೊಂಡ ಸಮಯದಲ್ಲಿ ಇದು ತುಂಬಾ ನಿಖರವಾಗಿರುವುದು ಮತ್ತು ಮನೆಯಲ್ಲೇ ನೀವು ಮಾಡುವಂತಹ ಗರ್ಭಧಾರಣೆ ಪರೀಕ್ಷೆಯಲ್ಲಿ ನಿಮಗೆ ಧನಾತ್ಮಕ ಫಲಿತಾಂಶ ಬರಬಹುದು.

ನಿಮಗೆ ಗರ್ಭ ಧರಿಸಿದ್ದೀರಿ ಎನ್ನುವ ಭಾವನೆ ಆಗುವುದು ಹೇಗೆ?

ನಿಮಗೆ ಗರ್ಭ ಧರಿಸಿದ್ದೀರಿ ಎನ್ನುವ ಭಾವನೆ ಆಗುವುದು ಹೇಗೆ?

ಎರಡು ವಾರಗಳ ಬಳಿಕ ನಿಮಗೆ ಕೆಲವೊಂದು ದೈಹಿಕ ಲಕ್ಷಣಗಳ ಅನುಭವ ಆಗುವುದು ಸಹಜ ಎಂದು ಕೆಲವು ಮಹಿಳೆಯರು ಹೇಳುತ್ತಾರೆ. ಇದು ನಿಮ್ಮ ಅಂಡೋತ್ಪತ್ತಿ ಮತ್ತು ಋತುಚಕ್ರದ ನಿರೀಕ್ಷೆಯ ಮಧ್ಯದ ಅವಧಿಯಲ್ಲಿ ಇರುವುದು. ಈ ಕೆಲವೊಂದು ಲಕ್ಷಣಗಳು ಹೀಗೆ ಇರುವುದು...

ಹೊಟ್ಟೆ ಉಬ್ಬರ

ಹೊಟ್ಟೆ ಉಬ್ಬರ

*ಮನಸ್ಥಿತಿ ಬದಲಾಗುವ ಅನುಭವ

*ತಲೆನೋವಿನಲ್ಲಿ ಹೆಚ್ಚಳ

*ಹಸಿವು ಹೆಚ್ಚಾಗುವುದು

*ಸ್ತನಗಳ ಬದಲಾವಣೆ

ಹೊಟ್ಟೆ ಭಾರವಾದಂತೆ ಆಗುವುದು

ಈ ಎಲ್ಲಾ ಲಕ್ಷಣಗಳು ಗರ್ಭಧಾರಣೆಯ ಲಕ್ಷಣಗಳೇ ಆಗಿರಬೇಕು ಎಂದೇನಿಲ್ಲ. ಇದು ಋತುಚಕ್ರದ ಸಂದರ್ಭದಲ್ಲಿ ನಿಮ್ಮ ದೇಹದಲ್ಲಿ ಆಗುವಂತಹ ಹಾರ್ಮೋನು ವೈಪರಿತ್ಯದಿಂದಲೂ ಆಗಬಹುದು ಅಥವಾ ಕೆಲವೊಂದು ಜೀವನಶೈಲಿ ಬದಲಾವಣೆಯು ಕಾರಣವಾಗಬಹುದು. ಇದು ಅನಾರೋಗ್ಯ, ಒತ್ತಡ ಅಥವಾ ಕೆಲವೊಂದು ಸಂದರ್ಭದಲ್ಲಿ ಇದು ಸರಿಯಾಗಿ ನಿದ್ರೆ ಮಾಡದೆ ಇರುವುದು ಅಥವಾ ಅತಿಯಾಗಿ ವ್ಯಾಯಾಮದಿಂದಲೂ ಆಗಬಹುದು.

MOst Read : ಒಂದು ಗಂಟೆಯಲ್ಲಿ ಎರಡು ಬಾರಿ ಸೆಕ್ಸ್ ನಡೆಸಿದರೆ ಗರ್ಭಿಣಿಯಾಗುವ ಸಾಧ್ಯತೆಗಳು ಹೆಚ್ಚು!

ಋತುಚಕ್ರಕ್ಕೆ ಮೊದಲಿನ ಕೆಲವೊಂದು ಲಕ್ಷಣಗಳು ಕಾಣಿಸುವುದು

ಋತುಚಕ್ರಕ್ಕೆ ಮೊದಲಿನ ಕೆಲವೊಂದು ಲಕ್ಷಣಗಳು ಕಾಣಿಸುವುದು

ಕೆಲವು ಮಹಿಳೆಯರಲ್ಲಿ ಋತುಚಕ್ರಕ್ಕೆ ಮೊದಲಿನ ಕೆಲವೊಂದು ಲಕ್ಷಣಗಳು ಕಾಣಿಸುವುದು. ಇದು ಗರ್ಭಧಾರಣೆಯ ಲಕ್ಷಣಗಳಂತೆ ಇರುವುದು. ಕೆಲವೊಂದು ಮಹಿಳೆಯರಲ್ಲಿ ಪ್ರತಿಯೊಂದು ಋತುಚಕ್ರದ ವೇಳೆ ಇಂತಹ ಲಕ್ಷಣಗಳು ಕಾಣಿಸಿಕೊಳ್ಳದೆ ಇರಬಹುದು. ಋತುಚಕ್ರಕ್ಕೆ ಬರುವಂತಹ ಕೆಲವೊಂದು ಲಕ್ಷಣಗಳಂತೆ ಇದು ಇಲ್ಲದೆ ಇದ್ದರೆ ಆಗ ಇವುಗಳು ಗರ್ಭಧಾರಣೆಯ ಲಕ್ಷಣಗಳು ಎಂದು ಸುಲಭವಾಗಿ ತಪ್ಪಾಗಿ ಅರ್ಥ ಮಾಡಿಕೊಳ್ಳುವರು.

ಪೋಷಕಾಂಶಗಳು ಇರುವಂತಹ ಆಹಾರ ಸೇವಿಸಿ

ಪೋಷಕಾಂಶಗಳು ಇರುವಂತಹ ಆಹಾರ ಸೇವಿಸಿ

ಈ ಲಕ್ಷಣಗಳು ನೀವು ನಿವಾರಣೆ ಮಾಡಲು ಕೆಲವೊಂದು ದೈಹಿಕ ಹಾಗೂ ಭಾವನಾತ್ಮಕವಾಗಿ ಕೆಲವೊಂದು ಧನಾತ್ಮಕ ವಾಗಿರುವ ಹೆಜ್ಜೆಗಳನ್ನು ಇಡಬೇಕಾಗುತ್ತದೆ. ಇದರಲ್ಲಿ ಮುಖ್ಯವಾಗಿ ನೀವು ಪೋಷಕಾಂಶಗಳು ಇರುವಂತಹ ಆಹಾರ ಸೇವನೆ ಮಾಡಬೇಕು, ಧೂಮಪಾನ ಮಾಡಬಾರದು ಮತ್ತು ಆಲ್ಕೋಹಾಲ್ ಸೇವನೆ ಕಡಿಮೆ ಮಾಡಬೇಕು ಅಥವಾ ಕಡೆಗಣಿಸಬೇಕು. ಇದರಿಂದ ನಿಮ್ಮ ಆರೋಗ್ಯವು ಚೆನ್ನಾಗಿರುವುದು ಮತ್ತು ಗರ್ಭಧರಿಸದೆ ಇದ್ದರೂ ನಿಮ್ಮ ಆರೊಗ್ಯವು ಸುಸ್ಥಿತಿಯಲ್ಲಿ ಇರುವುದು.

ನಿಮಗೆ ಗರ್ಭ ಧರಿಸಲು ಇಚ್ಛೆ ಇಲ್ಲದೆ ಇದ್ದರೆ…

ನಿಮಗೆ ಗರ್ಭ ಧರಿಸಲು ಇಚ್ಛೆ ಇಲ್ಲದೆ ಇದ್ದರೆ…

ನೀವು ಅಸುರಕ್ಷಿತವಾ ಸೆಕ್ಸ್ ನಡೆಸಿದ್ದರೆ ಅಥವಾ ಗರ್ಭ ನಿರೋಧಕ ಸಾಧನಗಳು ವಿಫಲವಾಗಿದೆ ಎಂದು ಭೀತಿ ನಿಮ್ಮಲ್ಲಿ ಕಾಡುತ್ತಲಿದ್ದರೆ ಆಗ ನೀವು ತುರ್ತು ಗರ್ಭ ನಿರೋಧಕವನ್ನು ಬಳಸಿಕೊಳ್ಳಬಹುದು. ಇದನ್ನು ಸಾಮಾನ್ಯವಾಗಿ ಮಾರ್ನಿಂಗ್ ಆಫ್ಟರ್ ಪಿಲ್ ಎಂದು ಕರೆಯಲಾಗುತ್ತದೆ. ಅಸುರಕ್ಷಿತ ಸೆಕ್ಸ್ ನಡೆಸಿರುವ ಕೆಲವು ದಿನಗಳ ಬಳಿಕ ಇದನ್ನು ನೀವು ತೆಗೆದುಕೊಂಡರೂ ನೀವು ಗರ್ಭ ಧರಿಸುವುದನ್ನು ತಪ್ಪಿಸಿಕೊಳ್ಳಬಹುದು. ನೀವು ಇದನ್ನು ಎಷ್ಟು ಬೇಗ ತೆಗೆದುಕೊಳ್ಳುತ್ತೀರೋ ಅಷ್ಟು ಬೇಗನೆ ನೀವು ಗರ್ಭ ಧರಿಸುವುದನ್ನು ತಪ್ಪಿಸಬಹುದು. ಇದು ಗರ್ಭಪಾತ ಮಾಡಿಸುವುದಿಲ್ಲ. ಆದರೆ ಇದು ಗರ್ಭ ಧರಿಸದಂತೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುವುದು.

Most Read: ಸೈಲೆಂಟ್ ಆಗಿ ಕಾಡುವ 'ಮೌನ ಗರ್ಭಪಾತ'! ಇದನ್ನು ಪತ್ತೆ ಹಚ್ಚುವುದು ಹೇಗೆ?

ಕೊನೆಯದಾಗಿ ಒಂದು ಮಾತು

ಕೊನೆಯದಾಗಿ ಒಂದು ಮಾತು

ಗರ್ಭ ಧರಿಸುವಂತಹ ಭೀತಿ ಅಥವಾ ನಿರೀಕ್ಷೆಯು ಒಂದು ಭಾವನಾತ್ಮಕ ಏರಿಳಿತವನ್ನು ಉಂಟು ಮಾಡುವುದು. ಗರ್ಭ ಧಾರಣೆ ಮಾಡಿದ ಕೆಲವು ವಾರಗಳ ಕಾಲ ನಿಮಗೆ ಗರ್ಭ ಧರಿಸಿದ್ದೀರಾ ಎಂದು ತಿಳಿಯುವುದಿಲ್ಲ. ಇಂತಹ ಸಂದರ್ಭದಲ್ಲಿ ನೀವು ದೇಹದ ಬಗ್ಗೆ ಸರಿಯಾದ ಕಾಳಜಿ ವಹಿಸಿ ಮತ್ತು ಗರ್ಭಧಾರಣೆಯ ಲಕ್ಷಣಗಳ ಬಗ್ಗೆ ಅತಿಯಾಗಿ ತಲೆಕೆಡಿಸಿಕೊಳ್ಳಲು ಹೋಗಬೇಡಿ.

For Quick Alerts
ALLOW NOTIFICATIONS
For Daily Alerts

    English summary

    Can You Feel Pregnancy Symptoms Soon After Sex?

    While some pregnancy symptoms start very early, most of the time, you won't notice anything right away. Anything that happens immediately after having sex, like spotting or increased discharge, is usually not related to pregnancy. Other than a missed period, pregnancy symptoms tend to really kick in around week five or six of pregnancy. This is about two weeks from when you missed your last period or six weeks since you actually had a period.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more