For Quick Alerts
ALLOW NOTIFICATIONS  
For Daily Alerts

ಎದೆಹಾಲು ಉಣಿಸುವ ತಾಯಿ ಯಾಕೆ ಖಾರದ ಆಹಾರ ಸೇವಿಸಬಾರದು?

By Sushma Charhra
|

ಆರೋಗ್ಯಕಾರಿ ಎದೆಹಾಲಿಗಿಂತ ಶ್ರೇಷ್ಠವಾದ ಆಹಾರ ಶಿಶುವಿಗೆ ಮತ್ತೊಂದಿಲ್ಲ.ಹಾಗಾಗಿ ಎದೆಹಾಲು ಉಣಿಸುವ ತಾಯಿ ಆರೋಗ್ಯಕಾರಿಯಾದ ಜೀವನಶೈಲಿ ಮತ್ತು ಸಮತೋಲಿತ ಪೋಷಕಾಂಶ ಭರಿತ ಆಹಾರ ಸೇವನೆಯನ್ನು ಮಾಡುವುದು ಬಹಳ ಮುಖ್ಯ. ನಿಮ್ಮ ಮಗು ಈ ಭೂಮಿಗೆ ಕಾಲಿಟ್ಟ ನಂತರ ಆತನ/ಳ ಸರಿಯಾದ ಬೆಳವಣಿಗೆ ಮತ್ತು ಅಭಿವೃದ್ಧಿ ತಾಯಿಯಾದ ನಿಮ್ಮ ಮೊದಲ ಕರ್ತವ್ಯವಾಗಿರುತ್ತದೆ.

ಇತ್ತೀಚೆಗೆ ಕೆಲಸಕ್ಕೆ ಹೋಗುವ ತಾಯಂದಿರಿಗೆ ಮಗುವಿಗೆ ಸರಿಯಾಗಿ ಎದೆಹಾಲು ಉಣಿಸುವುದಕ್ಕೂ ಸಮಯವಿರುವುದಿಲ್ಲ. ಆದರೆ ಕೆಲಸ ಮತ್ತು ದುಡ್ಡು ಯಾವಾಗ ಬೇಕಾದರೂ ಮಾಡಬಹುದು ಆದರೆ ಎದೆಹಾಲು ಉಣಿಸುವ ಪ್ರಕ್ರಿಯೆ ಕೇವಲ ನಿಮ್ಮ ಮಗು ಎರಡು ವರ್ಷ ಬೇಡುತ್ತದೆ. ಅದನ್ನು ಪೂರೈಸಿದರೆ ನಿಮ್ಮ ಮಗುವಿನ ಬೆಳವಣಿಗೆ ಅತ್ಯಂತ ಶ್ರೇಷ್ಟವಾಗಿರುತ್ತದೆ ಎಂಬುದನ್ನು ಪ್ರತಿಯೊಬ್ಬ ತಾಯಿಯೂ ನೆನಪಿನಲ್ಲಿ ಇಡುವುದು ಒಳ್ಳೆಯದು.

ನೀವು ಯಾವ ಆಹಾರಗಳನ್ನು ಸೇವಿಸಿದರೆ, ಮಗುವಿಗೆ ಉತ್ತಮ ನ್ಯೂಟ್ರೀಷಿಯಸ್ ಲಭ್ಯವಾಗುತ್ತದೆ ಎಂಬುದು ನಿಮಗೆ ತಿಳಿದಿದೆಯಾ? ವಿಶ್ವದ ಅತ್ಯಂತ ಉತ್ತಮ ನ್ಯೂಟ್ರೀಷಿಯಸ್ ಆಹಾರವನ್ನು ನೀವು ನಿಮ್ಮ ಮಗುವಿಗೆ ದಯಪಾಲಿಸುತ್ತಿದ್ದೀರಿ ಎಂದು ನೀವು ಅಂದುಕೊಳ್ಳುತ್ತಿರಬಹುದು.

ಆದರೂ ಎದೆಹಾಲು ಉಣಿಸುವ ತಾಯಂದಿರು ಕೆಲವು ಆಹಾರಗಳನ್ನು ನಿರ್ಭಂದಿಸಬೇಕಾಗುತ್ತದೆ. ಇಲ್ಲದೇ ಇದ್ದರೆ ಅದು ಮಗುವಿಗೆ ಸಮಸ್ಯೆಯೊಡ್ಡಬಹುದು. ಕೆಲವು ತಾಯಂದಿರು ತಮ್ಮ ಆಹಾರದ ಪಟ್ಟಿಯ ಅದೆಷ್ಟೋ ಆಹಾರಗಳನ್ನು ಸಂಪೂರ್ಣವಾಗಿ ನಿಗ್ರಹಿಸಿಕೊಂಡು ಬಿಡುತ್ತಾರೆ. ಆದರೆ ಹಾಗೆ ಯಾವುದೇ ಆಹಾರವನ್ನೂ ಪರಿಪೂರ್ಣವಾಗಿ ತ್ಯಜಿಸಿಬಿಡುವ ಅಗತ್ಯವಿಲ್ಲ. ತಿನ್ನವು ಯೋಗ್ಯವಾದ ಎಲ್ಲಾ ಆಹಾರವೂ ನಿಮ್ಮ ಮಗುವಿನ ಬೆಳವಣಿಗೆಗೆ ಅಗತ್ಯವಿರುತ್ತದೆ.

Spicy foods

ಆದರೆ, ಎದೆಹಾಲು ಉಣಿಸುವ ತಾಯಂದಿರಿಗೆ ಯಾವ ಆಹಾರವು ನಿಮ್ಮ ಮಗುವಿಗೆ ಹೊಂದಿಕೆ ಆಗುವುದಿಲ್ಲ ಎಂಬುದು ತಿಳಿದಿರಬೇಕು. ಕೆಲವು ಆಹಾರಗಳು ನಿಮ್ಮ ಮಗುವಿನ ಮೇಲೆ ಋಣಾತ್ಮಕ ಪರಿಣಾಮಗಳನ್ನು ಉಂಟು ಮಾಡಬಹುದು. ಹಾಗಂದ ಮಾತ್ರಕ್ಕೆ ನೀವು ಎದೆಹಾಲು ಉಣಿಸುವ ಸಂದರ್ಬದಲ್ಲಿ ವಿಶೇಷ ಆಹಾರ ಪಥ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದೇನಿಲ್ಲ, ಆದರೆ ಕೆಲವು ಆಹಾರ ಪದಾರ್ಥಗಳಿಗೆ ನಿಮ್ಮ ಮಗು ಸೂಕ್ಷ್ಮವಾಗಿದ್ದರೆ ಆಗ ಕೇವಲ ನಿಮ್ಮ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಸಾಕಾಗುತ್ತದೆ.
ಯಾಕೆಂದರೆ, ನೀವು ತಿನ್ನುವ ಅಥವಾ ಕುಡಿಯುವ ಆಹಾರ ಪದಾರ್ಥವು ಎದೆಹಾಲಾಗಿ ತಯಾರಾಗುತ್ತದೆ ಮತ್ತು ನಿಮ್ಮ ಮಗು ಕೆಲವು ನಿರ್ಧಿಷ್ಟ ಆಹಾರಗಳಿಗೆ ಸೂಕ್ಷ್ಮವಾಗಿದ್ದರೆ, ಆ ಆಹಾರದಿಂದ ತಯಾರಾದ ಎದೆಹಾಲು ಮಗುವಿಗೆ ಎಫೆಕ್ಟ್ ಮಾಡುವ ಸಾಧ್ಯತೆಗಳಿರುತ್ತದೆ.

ಉದಾಹರಣೆಗೆ ನೀವು ಖಾರದ ಆಹಾರವನ್ನು ಇಷ್ಟಪಡುತ್ತೀರಾ? ನೀವು ಸೇವಿಸುವ ಖಾರದ ಆಹಾರವು ನಿಮ್ಮ ಮಗುವಿಗೆ ತೊಂದರೆದಾಯಕವಾಗುತ್ತಿದೆಯಾ? ಹಾಗಾದರೆ,ಈ ಲೇಖನವನ್ನು ಸಂಪೂರ್ಣವಾಗಿ ಓದಿ. ಹೀಗೆ ಯಾಕಾಗುತ್ತದೆ, ಇದಕ್ಕೆ ಪರಿಹಾರವೇನು , ಎಲ್ಲವನ್ನೂ ಸೂಕ್ಷ್ಮವಾಗಿ ವಿವರಿಸಲಾಗಿದೆ.

ಎದೆಹಾಲು ನೀವು ಸೇವಿಸುವ ಆಹಾರದ ಆಧಾರದಲ್ಲಿ ವ್ಯತ್ಯಾಸವಾಗುತ್ತದೆಯಾ?

ಹೌದು, ನೀವು ಸೇವಿಸುವ ಆಹಾರದ ಆಧಾರದಲ್ಲಿ ಎದೆಹಾಲಿನ ರುಚಿಯೂ ಬದಲಾಗುತ್ತದೆ. ಇದು ಎದೆಹಾಲು ತಯಾರಾಗುವ ಒಂದು ಸೂತ್ರವಾಗಿದೆ. ಒಂದು ವೇಳೆ ನೀವು ಆಹಾರದಲ್ಲಿ ಅತೀ ಹೆಚ್ಚು ಬೆಳ್ಳುಳ್ಳಿ ಬಳಸಿದ್ದರೆ, ಹಾಲಿನ ರುಚಿಯೂ ಹಾಗೆಯೇ ಇರುತ್ತದೆ. ಹಾಗಾಗಿ ಹಾಲು ರುಚಿ ರುಚಿ ಅನ್ನಿಸಿದರೆ ಮಗುವು ಅತೀ ಹೆಚ್ಚು ಕುಡಿಯಲು ಇಚ್ಛಿಸಬಹುದು, ಒಂದು ವೇಳೆ ಹಾಲು ಅಷ್ಟುರುಚಿ ಇಲ್ಲದೇ ಇದ್ದರೆ ಕುಡಿಯಲು ಇಷ್ಟವಿಲ್ಲದಂತೆ ವರ್ತಿಸಬಹುದು.

ಆದರೆ, ಎದೆಹಾಲಿನ ಮೂಲಕ ನೀವು ನಿಮ್ಮ ಮಗುವಿಗೆ ಆಹಾರದ ರುಚಿಯನ್ನು ತೋರಿಸಬಹುದು ಮತ್ತು ಇದು ಅತ್ಯುತ್ತಮ ವಿಧಾನ ಎಂದು ಅಭಿಪ್ರಾಯ ಪಡುತ್ತಾರೆ ತಜ್ಞರು. ಸಿಹಿ ಮತ್ತು ನೈಸರ್ಗಿಕವಾಗಿ ಲಭ್ಯವಿರುವ ಸಕ್ಕರೆ ಅಂಶವು ಎದೆಹಾಲಿನ ರುಚಿಯನ್ನು ಹೆಚ್ಚಿಸುತ್ತದೆ ಮತ್ತು ಇತರೆ ರುಚಿಗಿಂತ ಅದು ಅಧಿಕವಾಗಿ ರುಚಿಯನ್ನು ಹಾಲಿಗೆ ಕರುಣಿಸಿರುತ್ತದೆ.

ಅಧ್ಯಯನಗಳು ತಿಳಿಸಿರುವಂತೆ ಮಗು ಹೊಟ್ಟೆಯಲ್ಲಿದ್ದಾಗ ಯಾವ ಆಹಾರಗಳಿಗೆ ಅಥವಾ ರುಚಿ, ವಾಸನೆಗಳಿಗೆ ಹೆಚ್ಚು ತೆರೆದುಕೊಂಡಿವೆಯೋ ಅಂದರೆ ಇಷ್ಟ ಪಡುತ್ತಿದ್ದವೋ , ಅಂತಹ ಆಹಾರಗಳು ಮಗು ಹುಟ್ಟಿದ ಮೇಲೂ ಕೂಡ ಅದೇ ಆಹಾರವು ಆ ಮಗುವಿಗೆ ಹೆಚ್ಚು ಇಷ್ಟ ಆಗುತ್ತದೆಯಂತೆ. ಮಾನಸಿಕ ತಜ್ಞರು ವಿವರಣೆ ನೀಡುವಂತೆ, ಎದೆಹಾಲು ಉಣಿಸುವ ಸಂದರ್ಬದಲ್ಲಿ ಬೇರೆಬೇರೆ ಆಹಾರದ ರುಚಿಯನ್ನು ಸೇವಿಸುವಂತೆ ಮಾಡಿ ರುಚಿಯ ಅನುಭವಕ್ಕೆ ಹೆಚ್ಚು ತೆರೆದುಕೊಂಡ ಮಗುವಿಗೆ ಅವು ಬೆಳೆದ ಮೇಲೆ ಬೇರೆಬೇರೆ ರುಚಿಯ ಆಹಾರಗಳನ್ನು ತಿನ್ನಿಸುವುದು ಬಹಳ ಸುಲಭವಾಗುತ್ತದೆಯಂತೆ. ಒಟ್ಟಾರೆ ಎದೆಹಾಲಿನ ವಿಚಾರದಲ್ಲೂ ಕೂಡ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯನ್ನು ಹೇಳಬಹುದು.

ಎದೆಹಾಲಿನಲ್ಲಿ ರುಚಿ ಕಂಡ ಮಗು ದೊಡ್ಡವರಾದ ಮೇಲೆ ಎಲ್ಲಾ ರೀತಿಯ ಆಹಾರದಲ್ಲೂ ರುಚಿಯನ್ನು ಅನುಭವಿಸುತ್ತದೆ ಮತ್ತು ತಿನ್ನಲು ಆಸೆ ಪಡುತ್ತದೆ. ಆದರೆ ಎದೆಹಾಲಿನಲ್ಲಿ ಒಂದೇ ರೀತಿಯ ರುಚಿಯನ್ನು ಕಂಡ ಮಗುವಿಗೆ ಬೆಳೆದು ದೊಡ್ಡವರಾದ ಮೇಲೆ ಬೇರೆಬೇರೆ ರೀತಿಯ ರುಚಿಯ ಅನುಭವವನ್ನು ನೀಡುವುದು ಕಷ್ಟ ಅಂದರೆ ತಾಯಿ ಆ ಮಗುವಿಗೆ ಊಟ ಮಾಡಿಸಲು ಹೆಣಗಬೇಕಾಗುತ್ತದೆ.

ಹಾಗಾಗಿ ಎದೆಹಾಲು ಉಣಿಸುವ ಸಂದರ್ಬದಲ್ಲೂ ಕೂಡ ನಿಮ್ಮ ಆಹಾರ ಕ್ರಮದಲ್ಲಿ ಬೇರೆಬೇರೆ ವಿಧಾನಗಳನ್ನು ಅಂದರೆ ರುಚಿಯನ್ನು ನೀವು ಪ್ರಯೋಗ ಮಾಡಬೇಕು. ಆದರೆ ನಿಮ್ಮ ಯಾವುದೇ ಆಹಾರ ಕ್ರಮವು ಮಗುವಿಗೆ ತೊಂದರೆ ನೀಡುತ್ತಿದ್ದರೆ, ಕಿರಿಕಿರಿ ಉಂಟು ಮಾಡುತ್ತಿದ್ದರೆ ದಯವಿಟ್ಟು ಆ ಆಹಾರ ಕ್ರಮಗಳನ್ನು ಅನುಸರಿಸಬೇಡಿ. ಅಂದರೆ ಹೊಸ ಆಸ್ವಾದನೆಗೆ ನಿಮ್ಮ ಮಗು ತೆರೆದುಕೊಳ್ಳಲು ನೀವು ಹೆಚ್ಚು ಸಮಯ ನೀಡಬೇಕು ಎಂದರ್ಥ. ಖಾರದ ಆಹಾರಗಳಿಗೆ ನಿಮ್ಮ ಮಗು ಸೂಕ್ಷ್ಮವಾಗಿದೆ ಎಂದು ಅರ್ಥೈಸಿಕೊಳ್ಳುವುದು ಹೇಗೆ?

ಸಾಕಷ್ಟು ಸಂಪ್ರದಾಯದಲ್ಲಿ, ತಾಯಿಯು ಖಾರದ ಆಹಾರವನ್ನು ಸೇವಿಸುವುದನ್ನು ಮುಂದುವರಿಸಲಾಗುತ್ತದೆ ಮತ್ತು ಯಾವುದೇ ಪ್ರಮುಖ ಬದಲಾವಣೆಯನ್ನೂ ಅವರ ಆಹಾರದಲ್ಲಿ ಎದೆಹಾಲು ಉಣಿಸುವ ಸಂದರ್ಬದಲ್ಲಿ ಮಾಡಿಕೊಳ್ಳುವುದಿಲ್ಲ. ಆದರೆ ಇದುವರೆಗೂ ಯಾವುದೇ ಅಧ್ಯಯನವಾಗಲಿ, ಸಾಕ್ಷಿಗಳಾಗಲಿ ತಾಯಿಯು ಖಾರದ ಆಹಾರ ಸೇವಿಸಿದಾಗ ಮಗುವಿಗೆ ಕಿರಿಕಿರಿಯಾಗುತ್ತದೆ ಅಥವಾ ತೊಂದರೆಯಾಗುತ್ತದೆ ಎಂಬುದನ್ನು ಸಾಬೀತು ಪಡಿಸಲು ಸಾಧ್ಯವಾಗಿಲ್ಲ. ಆದರೆ ಒಂದು ವೇಳೆ ನಿಮ್ಮ ಮಗುವು ಈ ಕೆಳಗಿನ ಚಿಹ್ನೆಗಳನ್ನು ನೀಡಿದರೆ, ನೀವು ನಿಮ್ಮ ಖಾರದ ಆಹಾರದ ಬಗ್ಗೆ ಅಥವಾ ನೀವು ಸೇವಿಸಿರುವ ಯಾವುದೇ ಆಹಾರದ ಬಗ್ಗೆ ಪುನರ್ ಯೋಚನೆ ಮಾಡಬೇಕು ಎಂಬುದು ಮಾತ್ರ ದಿಟವಾದ ವಿಚಾರವಾಗಿದೆ.
• ಒಂದು ವೇಳೆ ಮಗುವು ತುಂಬಾ ಹೊತ್ತು ಅಳುತ್ತಿದ್ದರೆ
• ಮಗುವು ಅನಾನುಕೂಲವಾಗಿದ್ದಂತೆ ತೋರುವುದು
• ಎದೆಹಾಲು ಸೇವಿಸಿದ ನಂತರ ಕಿರಿಕಿಯಾಗುವುದು
• ನಿಮ್ಮ ಮಗುವಿನ ಚರ್ಮದಲ್ಲಿ ಯಾವುದೇ ಚರ್ಮ ಸಂಬಂಧಿ ಸಮಸ್ಯೆಗಳು ಗೋಚರಿಸಿದೆಯಾ?
• ನಿಮ್ಮ ಮಗು ನಿದ್ದೆಯಿಂದ ಪದೇ ಪದೇ ಏಳುತ್ತಿದ್ದರೆ
• ನಿಮ್ಮ ಮಗುವಿನ ಮಲದಲ್ಲಿ ತೀರಾ ಲೋಳೆ ಅಥವಾ ಹಸಿರು ಕೋಶಗಳನ್ನು ಗಮನಿಸಿದರೆ
• ಅತಿಸಾರ
• ಸೀನುವಿಕೆ

ನೆನಪಿನಲ್ಲಿಡಿ, ಮೇಲಿನ ಎಲ್ಲಾ ಚಿಹ್ನೆಗಳು ಖಾರದ ಆಹಾರ ಪದಾರ್ಥಗಳ ಪರಿಣಾಮದಿಂದ ಆಗಿರಬಹುದು. ಖಾರ ಮಾತ್ರವೆಂದು ಹೇಳಲಾಗುವುದಿಲ್ಲ, ಬದಲಾಗಿ ಸಿಟ್ರಸ್ ಆಹಾರ, ಡೈರಿ ಆಹಾರ ಅಥವಾ ಜೋಳದಂತ ಆಹಾರಗಳಿಂದಾದ ಅಲರ್ಜಿ ಕೂಡ ಆಗಿರಬಹುದು. ಅದನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿರುವುದು ತಾಯಿಯ ಜವಾಬ್ದಾರಿಯಾಗಿರುತ್ತದೆ.

ಒಂದು ವೇಳೆ ಎದೆಹಾಲು ಸೇವಿಸುವ ನಿಮ್ಮ ಮಗು ಖಾರದ ಆಹಾರಕ್ಕೆ ಸೂಕ್ಷ್ಮವಾಗಿದ್ದರೆ ಏನು ಮಾಡಬೇಕು?
ಒಂದು ವೇಳೆ ಎದೆಹಾಲು ಉಣಿಸುವ ತಾಯಿಯಾಗಿದ್ದು, ನೀವು ಖಾರದ ಆಹಾರ ಸೇವಿಸಿರುವುದರ ಪರಿಣಾಮದಿಂದ ಮೇಲಿನ ಯಾವುದೇ ಚಿಹ್ನೆಗಳು ಮಗುವಿನಲ್ಲಿ ಕಂಡು ಬಂದರೆ, ಮುಂದಿನ ಒಂದು ವಾರದವರೆಗೆ ಅಂತಹ ಆಹಾರವನ್ನು ಸೇವಿಸಬೇಡಿ. ಮತ್ತೆ ಆ ಆಹಾರವನ್ನು ಪುನರ್-ಪರಿಚಯ ಮಾಡಿ ಆಗ ಮತ್ತೆ ಮಗುವಿನ ವರ್ತನೆಯನ್ನು ಪರೀಕ್ಷೆ ಮಾಡಿ.

ಕೆಲವು ಶಿಶುಗಳು ತಾಯಿಯು ಖಾರದ ಆಹಾರ ಸೇವಿಸಿದಾಗ ಅನಾರೋಗ್ಯಕ್ಕೆ ಒಳಗಾಗುತ್ತವೆ, ಆದರೆ ಇನ್ನೂ ಕೆಲವು ಶಿಶುಗಳು ನಿಧಾನವಾಗಿ ಆ ಖಾರದ ಆಹಾರದ ಎದೆಹಾಲಿನ ರುಚಿಗೆ ಒಗ್ಗಿಕೊಳ್ಳಲು ಆರಂಭಿಸುತ್ತದೆ. ಆದರೆ ಒಂದು ವೇಳೆ ನಿಮ್ಮ ಮಗು ತೀರಾ ಕಿರಿಕಿರಿ ಅನುಭವಿಸಿ, ಅಸಮಾಧಾನಗೊಂಡರೆ, ಅದಕ್ಕೆ ಒಗ್ಗಿಕೊಳ್ಳಲು ಮಗುವಿಗೆ ಹೆಚ್ಚು ಸಮಯ ನೀಡಿ. ಪ್ರಯೋಗ ಮೇಲೆ ಪ್ರಯೋಗ ವಿಧಾನವನ್ನು ಆಗಾಗ ಅನುಸರಿಸಿ ಮಗುವನ್ನು ಹೊಂದಿಕೊಳ್ಳುವಂತೆ ಮಾಡಬಹುದು.

ಖಾರವೇ ಇಲ್ಲದೆ ಆಹಾರ ಸೇವಿಸುವುದು ಬಹಳ ಕಷ್ಟ. ಹಾಗಾಗಿ ಸ್ವಲ್ಪ ಪ್ರಮಾಣದ ಖಾರವನ್ನು ಸೇವನೆ ಮಾಡಿ. ಉತ್ತಮ ವಿಧಾನ ಯಾವುದೆಂದರೆ ಆರೋಗ್ಯಕಾರಿ ಡಯಟ್, ಆಹಾರದಲ್ಲಿ ಬದಲಾವಣೆಗಳು, ಭಿನ್ನವಿಭಿನ್ನಗಳ ಆಹಾರ ಸೇವನೆಯಿಂದ ಮಗುವನ್ನು ಆರಾಮದಾಯವಾಗಿರುವಂತೆ ಮಾಡಬಹುದು. ನಿಮ್ಮ ಪಥ್ಯ ಕ್ರಮಗಳ ಬಗ್ಗೆ ಯಾವುದೇ ಅನುಮಾನಗಳು ಕಾಡುತ್ತಿದ್ದರೂ ಕೂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಪರಿಹಾರ ಪಡೆದುಕೊಳ್ಳಿ.. ಸುಮ್ಮನೆ ನಿಮ್ಮ ಮಗು ಕಿರಿಕಿರಿ ಅನುಭವಿಸುವಂತೆ ಮಾಡಬೇಡಿ.

ಒಟ್ಟಿನಲ್ಲಿ ಮಗು ಹುಟ್ಟಿದ ಮೇಲೆ ತಾಯಿಯ ಜವಾಬ್ದಾರಿ ಅಧಿಕವಾಗುತ್ತದೆ ಮತ್ತು ಆಕೆಯು ಮಗುವಿನ ಮೇಲೆ ಪ್ರತಿಕ್ಷಣವೂ ಕೂಡ ಒಂದು ಕಣ್ಣಿಡಬೇಕಾಗುತ್ತದೆ. ಸೂಕ್ಷ್ಮಾತಿಸೂಕ್ಷ್ಮ ವಿಚಾರವನ್ನೂ ಕೂಡ ತಾಯಿ ತನ್ನ ಮಗುವಿನ ವಿಚಾರದಲ್ಲಿ ಗಣನೆಗೆ ತೆಗೆದುಕೊಂಡು ಆಲೋಚಿಸಬೇಕಾಗುತ್ತದೆ. ನಿಮ್ಮ ಮಗುವೂ ಕೂಡ ಖಾರದ ಆಹಾರಕ್ಕೆ ಸೂಕ್ಷ್ಮವಾಗಿದೆಯಾ? ಕಾಳುಮೆಣಸು, ಕೆಂಪುಮೆಣಸು,ಹಸಿಮೆಣಸು, ಬೆಳ್ಳುಳ್ಳಿ, ಶುಂಠಿ ಇಂತಹ ಆಹಾರವನ್ನು ಸೇವಿಸಿದಾಗ ಹೆಚ್ಚು ಕಿರಿಕಿರಿ ಅನುಭವಿಸುತ್ತದೆಯಾ? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ ತಿಳಿಸುವುದನ್ನು ಮರೆಯಬೇಡಿ.

English summary

Why You Should Not Have Spicy Food While Breastfeeding

There are certain reasons on why you should not have spicy food while breastfeeding, since the taste of the breast milk depends on the taste of the food the mother has. So, read to know which are the foods that you need to have while you are breastfeeding.
X
Desktop Bottom Promotion