For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರು ತಮಗೆ ಇಷ್ಟವಾದ ಆಹಾರಗಳನ್ನು ಏಕೆ ತಿರಸ್ಕರಿಸುತ್ತಾರೆ?

By Padmini
|

ಗರ್ಭಿಣಿಯರ ವಿಷಯಕ್ಕೆ ಬಂದರೆ ಅಲ್ಲಿ ನಮಗೆ ಮುಖ್ಯವಾಗಿ ಕಾಣುವುದೇ ಅವರ ಆಹಾರದ ಬಯಕೆಗಳು.ಅವರು ಮುಖ್ಯವಾಗಿ ಮಾವಿನಕಾಯಿ,ಹುಣಸೆಕಾಯಿ ಮುಂತಾದ ಆಹಾರಗಳನ್ನು ಹೆಚ್ಚಾಗಿ ಇಷ್ಟಪಟ್ಟು ತಿನ್ನುತ್ತಾರೆ.

ಹಾಗೆಯೇ ಗರ್ಭಿಣಿ ಮಹಿಳೆಯರು ವಿಚಿತ್ರವಾದ ಆಹಾರಗಳ ಮಿಶ್ರಣವನ್ನು ಕೂಡ ತುಂಬಾ ಇಷ್ಟ ಪಡುತ್ತಾರೆ ಎಂಬ ವಿಷಯ ತಿಳಿದು ಬಂದಿದೆ.ಕೆಲವು ಸ್ತ್ರೀಯರು ಐಸ್ಕ್ರೀಂ ಮತ್ತು ಉಪ್ಪಿನಕಾಯಿಯನ್ನು ಒಟ್ಟಿಗೆ ತಿನ್ನಬೇಕು ಎಂದು ಬಯಸುತ್ತಾರಂತೆ. ಇದೆಲ್ಲಾ ಸರಿ ಆದರೆ ಕೆಲವರು ದೇಹಕ್ಕೆ ಹಾನಿಕರವಾದ ಕೆಲವು ಪದಾರ್ಥಗಳನ್ನು ಇಷ್ಟ ಪಡುತ್ತಾರೆಂದು ತಿಳಿದು ಬಂದಿದೆ.ಅವುಗಳೆಂದರೆ ಮಣ್ಣು ,ಕಬ್ಬಿಣ ಹಾಗು ಪ್ಲಾಸ್ಟರ್ ನಂತಹ ಕೆಲವು ವಸ್ತುಗಳು.

ಇದರ ಜೊತೆಗೆ ಗರ್ಭಧಾರಣೆಯ ಸಮಯದಲ್ಲಿ ಸ್ತ್ರೀಯರು ಆಹಾರವನ್ನು ಹೆಚ್ಚಾಗಿ ತಿರಸ್ಕರಿಸುತ್ತಾರೆ ಎಂಬ ವಿಷಯ ನಿಮಗೆಲ್ಲಾ ತಿಳಿದಿದೆಯೇ?ಬೇರೆ ಸಮಯಗಳಿಗಿಂತ ಈ ಸಮಯದಲ್ಲಿ ಅವರು ಹೆಚ್ಚಾಗಿಯೇ ಆಹಾರವನ್ನು ತಿರಸ್ಕರಿಸುತ್ತಾರೆ ಎಂಬುದು ಸಾಮಾನ್ಯವಾದ ವಿಷಯ.

favourite food during pregnancy

ಗರ್ಭಿಣಿಯರು ಪ್ರತಿನಿತ್ಯ ಸೇವಿಸುವ ಆಹಾರವನ್ನು ಹೆಚ್ಚಾಗಿ ಇಷ್ಟ ಪಡುವುದಿಲ್ಲ.ಅವರು ಮೊದಲು ಇಷ್ಟಪಟ್ಟು ತಿನ್ನುತ್ತಿದ್ದ ಆಹಾರಗಳು ಈ ಸಮಯದಲ್ಲಿ ಅವರಿಗೆ ಇಷ್ಟವಾಗದೇ ಇರಬಹುದು.ಬಹಳಷ್ಟು ಮಹಿಳೆಯರಿಗೆ ಮೊದಲನೇ ತ್ರೈಮಾಸಿಕದಲ್ಲಿ ಆಹಾರದ ಮೇಲೆ ಈ ಸಮಸ್ಯೆ ಉಂಟಾಗುತ್ತದೆ. ಆದರೆ ಇದು ಎಲ್ಲರಲ್ಲೂ ಒಂದೇ ತೆರನಾಗಿ ಇರುವುದಿಲ್ಲ.ಮಹಿಳೆಯರಿಂದ ಮಹಿಳೆಯರಿಗೆ ಇದು ವ್ಯತ್ಯಾಸವಾಗುತ್ತದೆ.

ನಿಮಗೆ ಇಷ್ಟವಾಗುವ ಆಹಾರ ಪದಾರ್ಥಗಳನ್ನು ಗರ್ಭವಾಸ್ಥೆಯ ಸಮಯದಲ್ಲಿ ಏಕೆ ನೀವು ದ್ವೇಷಿಸುತ್ತೀರಾ ಎಂಬುದಕ್ಕೆ ಸರಿಯಾದ ಕಾರಣಗಳು ಇನ್ನೂ ತಿಳಿದಿಲ್ಲ.ಇದರ ಬಗ್ಗೆ ಹಲವು ರೀತಿಯ ಊಹಾಪೋಹಗಳು ಮತ್ತು ಸಿದ್ಧಾಂತಗಳು ಇದ್ದರೂ ಇದಕ್ಕೆ ಸರಿಯಾದ ಕಾರಣ ಏನಿರಬಹುದು ಎಂದು ನಿರ್ಣಯ ಮಾಡಲು ಸಾಧ್ಯವಿಲ್ಲ. ಈ ಲೇಖನದಲ್ಲಿ ನಾವು ಗರ್ಭಧಾರಣೆಯ ಸಮಯದಲ್ಲಿ ಆಹಾರದ ತಿರಸ್ಕಾರದ ಬಗ್ಗೆ ಇರುವ ಕೆಲವು ಸಿದ್ಧಾಂತಗಳ ಬಗ್ಗೆ ತಿಳಿದುಕೊಳ್ಳೋಣ.ಹಾಗೆಯೇ ಇಂತಹ ಸಮಯದಲ್ಲಿ ನಿಮಗೆ ಸಹಾಯವಾಗುವಂತಹ ಕೆಲವು ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ. ಗರ್ಭಿಣಿಯರಿಗೆ ಹೇಗೆ ಆಹಾರದ ಬಗ್ಗೆ ತಿರಸ್ಕಾರ ಶುರುವಾಗುತ್ತದೆ?

ಬಹಳಷ್ಟು ಮಹಿಳೆಯರಿಗೆ ತಾವು ಗರ್ಭಿಣಿ ಎಂದು ತಿಳಿಯುವ ಮೊದಲೇ ಆಹಾರದ ಬಗ್ಗೆ ತಿರಸ್ಕಾರ ಉಂಟಾಗಲು ಶುರುವಾಗಿರುತ್ತದೆ.ಸಾಮಾನ್ಯವಾಗಿ ಅವರಿಗೆ ಬೆಳಗಿನ ಹೊತ್ತು ಆಗುವ ಸುಸ್ತು ಸಂಕಟಗಳೊಂದಿಗೆ ಇದೂ ಕೂಡ ಗರ್ಭಧಾರಣೆಯ ಒಂದು ಸೂಚನೆಯಾಗಿದೆ. ನಿಮಗೆ ಊಟದ ಬಗ್ಗೆ ತಿರಸ್ಕಾರ ಶುರುವಾದ ಸಮಯದಲ್ಲಿ ನಿಮ್ಮ ಬಾಯಿಯಲ್ಲಿ ಲಾಲಾರಸ ಹೆಚ್ಚಾಗಿ ಉತ್ಪತ್ತಿಯಾಗುತ್ತದೆ.ಮತ್ತು ಇದು ನಿಮ್ಮ ಬಾಯಿಯಲ್ಲಿ ಲೋಹದ ರುಚಿಯನ್ನು ನೀಡಲು ಪ್ರಾರಂಭಿಸುತ್ತದೆ.ಬಹಳ ಸ್ತ್ರೀಯರ ಪ್ರಕಾರ ಅವರ ಬಾಯಿಯಲ್ಲಿ ಕಹಿ ಕಹಿಯಾದ ಅನುಭವವಾದಂತೆ ಅನಿಸುತ್ತದೆ ಮತ್ತು ಇದು ಏನು ಮಾಡಿದರೂ ಹೋಗುವುದಿಲ್ಲವೇನೋ ಎಂದೆನಿಸುತ್ತದೆ.

ದಿನಗಳು ಕಳೆದಂತೆ ನಿಮಗೆ ಬಹಳವೇ ಇಷ್ಟವಾಗುತ್ತಿದ್ದ ಕೆಲವೊಂದು ಆಹಾರಗಳು ನಿಮಗೆ ಇಷ್ಟವೇ ಆಗದೇ ಇರುವಂತೆ ಅನಿಸಲು ಶುರುವಾಗುತ್ತದೆ. ಬೆಳಗಿನ ಹೊತ್ತು ಸುಸ್ತು ಸಂಕಟದೊಂದಿಗೆ ನಿಮಗೆ ಆ ಆಹಾರವನ್ನು ತೆಗೆದುಕೊಂಡರೆ ತಲೆಸುತ್ತು ಹಾಗೂ ವಾಂತಿ ಕೂಡ ಆಗಬಹುದು.ಇದಲ್ಲದೆ ಆ ಆಹಾರದ ವಾಸನೆ ಅಥವಾ ಅದರ ಬಗ್ಗೆ ಯೋಚಿಸಿದರೂ ಕೂಡ ನಿಮಗೆ ವಾಂತಿಯಾಗಬಹುದು. ಗರ್ಭವಾಸ್ಥೆಯ ಸಮಯದಲ್ಲಿ ಆಹಾರ ತಿರಸ್ಕಾರ:

ಬಹಳಷ್ಟು ಮಹಿಳೆಯರಲ್ಲಿ ಮೊದಲನೇ ತ್ರೈಮಾಸಿಕದಲ್ಲಿ ಈ ಸಮಸ್ಯೆ ಎದುರಾಗಬಹುದು ಹಾಗು ನಂತರ ಅವರು ಯಥಾಸ್ಥಿತಿಗೆ ಮರಳುತ್ತಾರೆ.ಆದರೆ ಕೆಲವರಿಗೆ ತಾವು ಮಗುವಿಗೆ ಜನ್ಮ ಕೊಡುವ ಸಮಯದ ತನಕವೂ ಇದು ಮುಂದುವರೆಯಬಹುದು.ಅತಿ ವಿರಳವಾದ ಸಂದರ್ಭಗಳಲ್ಲಿ ಮಗುವಿನ ಜನನದ ನಂತರವೂ ಇದು ಮುಂದುವರೆಯಬಹುದು.

ಗರ್ಭಿಣಿಯರಿಗೆ ಯಾವ ಯಾವ ಆಹಾರದ ಮೇಲೆ ಹೆಚ್ಚು ತಿರಸ್ಕಾರ ಉಂಟಾಗುತ್ತದೆ?

ಹೆಚ್ಚು ವಾಸನೆಯುಳ್ಳ ಮತ್ತು ರುಚಿಯಿರುವ ಆಹಾರ ಪದಾರ್ಥಗಳ ಮೇಲೆ ಗರ್ಭಿಣಿಯರಿಗೆ ಹೆಚ್ಚಾಗಿ ತಿರಸ್ಕಾರ ಉಂಟಾಗುತ್ತದೆ.ಆದರೆ ಇದು ಸಮಯ ಕಳೆದಂತೆ ಬದಲಾಗಲೂಬಹುದು.ಗರ್ಭಿಣಿಯಾದ ಆರಂಭದಲ್ಲಿ ಕೆಲವು ಪದಾರ್ಥಗಳು ಇಷ್ಟವಾಗದೇ ಇರಬಹುದು ಆದರೆ ದಿನಗಳು ಕಳೆದಂತೆ ಅದೇ ಆಹಾರದ ಮೇಲೆ ಅವರಿಗೆ ಹೆಚ್ಚು ಆಸೆ ಆಗುವ ಸಾಧ್ಯತೆಗಳು ಕೂಡ ಇದೆ.
ಏಕೆ ಹೀಗೆ ಆಗುತ್ತದೆ ಎಂಬುದಕ್ಕೆ ಯಾವುದೇ ಸರಿಯಾದ ಕಾರಣಗಳು ಇಲ್ಲದಿದ್ದರೂ ಕೆಳಗೆ ಇರುವ ಈ ಪದಾರ್ಥಗಳು ಹೆಚ್ಚಾಗಿ ಗರ್ಭಿಣಿಯರಿಂದ ತಿರಸ್ಕೃತಪಟ್ಟಿವೆ ಎಂದು ಹೇಳಲಾಗುತ್ತದೆ.

*ಹಾಲು ಮತ್ತು ಅದರ ಉತ್ಪನ್ನಗಳು
*ಮೊಟ್ಟೆಗಳು ವೈದ್ಯರು
*ಮಾಂಸ ಪದಾರ್ಥಗಳು
*ಪೌಲ್ಟ್ರಿ
*ಬೆಳ್ಳುಳ್ಳಿ
*ಮಸಾಲೆಯುಕ್ತ ಆಹಾರ
*ಕಾಫಿ ಮತ್ತು ಟೀ
*ಜಿಡ್ಡಿನ ಆಹಾರ

ಆದರೆ ಇದೇ ಆಹಾರಗಳನ್ನು ಹಲವು ಸ್ತ್ರೀಯರು ಇಷ್ಟ ಪಡಲುಬಹುದು. ಗರ್ಭಾವಸ್ಥೆಯಲ್ಲಿ ಆಹಾರವನ್ನು ತಿರಸ್ಕಾರ ಮಾಡಲು ಇರಬಹುದಾದ ಕಾರಣಗಳು: ಇದುವರೆಗೂ ಹೀಗೆ ಆಗುವುದಕ್ಕೆ ಇದೇ ಕಾರಣ ಎಂದು ಯಾರಿಂದಲೂ ಹೇಳಲು ಸಾಧ್ಯವಾಗಿಲ್ಲ.ಆದರೆ ಕೆಲವು ವೈದ್ಯರು ಮತ್ತು ತಜ್ಞರ ಪ್ರಕಾರ ಕೆಲವು ಸಿದ್ಧಾಂತಗಳಿವೆ.ಅದರಿಂದ ಹೀಗೆ ಆಗುತ್ತಿದೆ ಎಂದು ಅವರು ಹೇಳುತ್ತಾರೆ.ನೀವು ಇಷ್ಟ ಪಟ್ಟ ಕೆಲವು ಆಹಾರವನ್ನು ಈಗ ತಿರಸ್ಕರಿಸುತ್ತಿರುವುದು ಈ ಯಾವುದಾದರೂ ಸಿದ್ಧಾಂತದ ಪ್ರಕರವಾಗಿರಬಹುದು ಅಥವಾ ಕೆಲವು ಸಿದ್ಧಾಂತಗಳ ಮಿಶ್ರಣವಾಗಿರಬಹುದು. ನೀವು ಮಗುವನ್ನು ನಿರೀಕ್ಷಿಸುತ್ತಿರುವ ತಾಯಿಯಾಗಿದ್ದರೆ ಈ ಕೆಳಗಿನ ಕೆಲವು ಸಿದ್ಧಾಂತಗಳ ಬಗ್ಗೆ ತಿಳಿದುಕೊಳ್ಳಿ.

ಎಚ್ಸಿಜಿ - ಹ್ಯೂಮನ್ ಕೋರಿಯಾನಿಕ್ ಗೋನಾಡೋಟ್ರೋಪಿನ್(hcg)

ಎಚ್ಸಿಜಿ - ಹ್ಯೂಮನ್ ಕೋರಿಯಾನಿಕ್ ಗೋನಾಡೋಟ್ರೋಪಿನ್(hcg)

ಎಚ್ಸಿಜಿ ಒಂದು ಹಾರ್ಮೋನ್.ಇದು ಗರ್ಭವಾಸ್ಥೆಯಲ್ಲಿ ಹಲವಾರು ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ.೧೧ನೇ ವಾರದಲ್ಲಿ ಇದರ ಪರಿಣಾಮ ಹೆಚ್ಚಾಗಿರುತ್ತದೆ.ಹಾಗಾಗಿ ಈ ಹಾರ್ಮೋನ್ ಕಾರಣದಿಂದ ಆಹಾರ ಪದಾರ್ಥಗಳನ್ನು ತಿರಸ್ಕರಿಸುವಂತೆ ಆಗುತ್ತದೆ ಎಂದು ಹೇಳಬಹುದು.

ಬೆಳಗಿನ ಸುಸ್ತು

ಬೆಳಗಿನ ಸುಸ್ತು

ಮಹಿಳೆಯರು ಬೆಳಗ್ಗಿನ ಹೊತ್ತು ಸುಸ್ತು ಸಂಕಟ ಅನುಭವಿಸುವದರ ಜೊತೆಗೆ ಅವರಿಗೆ ಆಹಾರ ಪದಾರ್ಥಗಳ ಮೇಲೂ ತಿರಸ್ಕಾರ ಉಂಟಾಗುತ್ತದೆ.ಆದ್ದರಿಂದ ಬೆಳಗಿನ ಸುಸ್ತಿನಿಂದ ಅವರಿಗೆ ಊಟದ ಮೇಲೆ ಆಸಕ್ತಿ ಕಡಿಮೆ ಆಗುತ್ತದೆ ಎಂಬ ಮಾತುಗಳು ಇವೆ.ಇವೆರಡೂ ಒಂದಕ್ಕೊಂದು ಸಂಬಂಧವಾಗಿ ಇರಬಹುದು ಅಥವಾ ಒಂದೇ ಕಾರಣದಿಂದ ಹೀಗೆ ಆಗುತ್ತಾ ಇರಬಹುದು.

ವಾಸನೆಯನ್ನು ಗ್ರಹಿಸುವ ಮತ್ತು ಆಹಾರವನ್ನು ರುಚಿಸುವ ಶಕ್ತಿ ಹೆಚ್ಚಾಗಿರುತ್ತದೆ :

ವಾಸನೆಯನ್ನು ಗ್ರಹಿಸುವ ಮತ್ತು ಆಹಾರವನ್ನು ರುಚಿಸುವ ಶಕ್ತಿ ಹೆಚ್ಚಾಗಿರುತ್ತದೆ :

ಮಹಿಳೆಯರು ಗರ್ಭಧಾರಣೆಯನ್ನು ಮಾಡಿದಾಗ ಅವರಿಗೆ ರುಚಿಸುವ ಶಕ್ತಿ ಮತ್ತು ವಿವಿಧ ವಾಸನೆಗಳನ್ನು ಗ್ರಹಿಸುವ ಶಕ್ತಿ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ.ಆಹಾರ ಪದಾರ್ಥಗಳು ಸ್ವಲ್ಪ ಹೆಚ್ಚಿನ ವಾಸನೆಯನ್ನು ಹೊಂದಿದ್ದರೆ ಅವರಿಗೆ ಅದರ ವಾಸನೆಗೆ ವಾಂತಿ ಬಂದಂತೆ ಆಗುತ್ತದೆ.ಹೆಚ್ಚಾದ ರುಚಿ ಮತ್ತು ವಾಸನೆಯ ಗ್ರಹಣ ಶಕ್ತಿ ಅವರಿಗೆ ಊಟದ ಮೇಲಿನ ತಿರಸ್ಕಾರಕ್ಕೆ ಒಂದು ಕಾರಣವಾಗಿದೆ ಎಂದು ಹೇಳಬಹುದು.

ಲಾಲಾರಸದ ಹೆಚ್ಚು ಉತ್ಪಾದನೆ

ಲಾಲಾರಸದ ಹೆಚ್ಚು ಉತ್ಪಾದನೆ

ಕೆಲವೊಂದು ಹಾರ್ಮೋನ್ ಗಳು ಗರ್ಭಾವಸ್ಥೆಯಲ್ಲಿ ಹೆಚ್ಚಾದ ಲಾಲಾರಸ ಉತ್ಪಾದನೆಯಾಗಲು ಕಾರಣವಾಗಿವೆ.ಇದರಿಂದ ಬಾಯಿಯಲ್ಲಿ ಕಹಿಯಾದ ಅನುಭವವಾಗುತ್ತದೆ ಮತ್ತು ಲೋಹದ ರುಚಿ ಇದ್ದಂತೆ ಅನಿಸುತ್ತದೆ.ಇದೇ ಕಾರಣದಿಂದಾಗಿ ಅವರು ತಮಗೆ ಯಾವುದೇ ಊಟವೂ ರುಚಿಸುವುದಿಲ್ಲ.ಮತ್ತು ಏನು ತಿನ್ನಲೂ ಇಷ್ಟವಾಗುವುದಿಲ್ಲ ಎಂದು ಹೇಳುವುದು ಕಂಡುಬಂದಿದೆ.

ಉದ್ದೇಶಪೂರ್ವಕ ತಿರಸ್ಕಾರಗಳು

ಉದ್ದೇಶಪೂರ್ವಕ ತಿರಸ್ಕಾರಗಳು

ನಾವು ನಮ್ಮ ದೇಹಕ್ಕೆ ಒಳ್ಳೆಯಾಗುವುದರೆ ಅದರಂತೆ ಕೆಲವೊಮ್ಮೆ ನಡೆಯಬೇಕಾಗುತ್ತದೆ.ನಮ್ಮ ದೇಹವೇ ಅದಕ್ಕೆ ಏನು ಸರಿಹೊಂದುತ್ತದೆ ಮತ್ತು ಯಾವುದು ಸರಿಹೊಂದುವುದಿಲ್ಲ ಎಂಬುದರ ಬಗ್ಗೆ ಸೂಚನೆಗಳನ್ನು ನೀಡುತ್ತಾ ಇರುತ್ತದೆ.ಅದೇ ರೀತಿ ಗರ್ಭಿಣಿಯರಿಗೂ ಅದರ ಸನ್ನೆಗಳು ಗೊತ್ತಾಗುತ್ತವೆ.ಅವರು ಆಹಾರದ ಬಗ್ಗೆ ತಿರಸ್ಕಾರವನ್ನು ವ್ಯಕ್ತ ಪಡಿಸುವುದೂ ಕೂಡ ದೇಹ ಅವರಿಗೆ ನೀಡುವ ಒಂದು ರಕ್ಷಣಾ ಕಾರ್ಯವಿಧಾನ.ಇದು ಅವರು ತಿರಸ್ಕರಿಸುವ ಆಹಾರಗಳು ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ತಿಳಿಸಿಕೊಡುವ ಒಂದು ರೀತಿಯಾಗಿದೆ.

ಕೆಲವು ಸಂಶೋಧನೆಗಳ ಪ್ರಕಾರ ಈ ರೀತಿ ಆಹಾರವನ್ನು ತಿರಸ್ಕರಿಸುವ ಮಹಿಳೆಯರಿಗೆ ಗರ್ಭಪಾತ, ಸಮಯಕ್ಕೆ ಮೊದಲೇ ಹುಟ್ಟುವ ಮಕ್ಕಳು,ಚಲನೆ ಇಲ್ಲದೇ ಇರುವ ಮಗುವಿನ ಜನನ ಇಂತಹ ಸಮಸ್ಯೆಗಳು ಕಡಿಮೆ ಎಂದು ಹೇಳುತ್ತಾರೆ. ಆಹಾರದ ತಿರಸ್ಕಾರ ಹೆಚ್ಚಾಗಿ ಮೊದಲನೇ ತ್ರೈಮಾಸಿಕದಲ್ಲಿ ಇರುತ್ತದೆ.ಈ ಸಮಯದಲ್ಲಿ ಮಗು ಅತ್ಯಂತ ದುರ್ಬಲ ಸ್ಥಿತಿಯಲ್ಲಿರುತ್ತದೆ.ಹಾಗಾಗಿ ಇದು ಈ ಸಿದ್ಧಾಂತವನ್ನು ಸಮರ್ಥಿಸುತ್ತದೆ.

ಆಹಾರ ತಿರಸ್ಕಾರದ ಸಮಸ್ಯೆಗಳಿಂದ ಹೇಗೆ ಹೊರಬರಬಹುದು?

ಆಹಾರ ತಿರಸ್ಕಾರದ ಸಮಸ್ಯೆಗಳಿಂದ ಹೇಗೆ ಹೊರಬರಬಹುದು?

ನಿಮ್ಮ ಇಷ್ಟವಾದ ಆಹಾರಗಳನ್ನು ತಿರಸ್ಕರಿಸುವ ಪರಿಸ್ಥಿತಿ ನಿಮಗೆ ಗರ್ಭಧಾರಣೆಯ ಸಮಯದಲ್ಲಿ ಬರುತ್ತದೆ ಎಂದು ನಿಮಗೆ ಬೇಸರವಾಗಬಹುದು.ಆದರೆ ಅದನ್ನು ತಿರಸ್ಕರಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂಬುದು ಒಳ್ಳೆಯ ಸಂಗತಿ.

ನಿಮ್ಮ ದೇಹದ ಮಾತುಗಳನ್ನು ಕೇಳಿ

ನಿಮ್ಮ ದೇಹದ ಮಾತುಗಳನ್ನು ಕೇಳಿ

ನಿಮ್ಮ ದೇಹದ ಮಾತನ್ನು ನೀವು ಕೇಳುವುದು ಖಂಡಿವಾಗಿಯೂ ಒಳ್ಳೆಯದು.ನಿಮಗೆ ಯಾವುದಾದರೂ ಆಹಾರವನ್ನು ಹೆಚ್ಚು ತಿನ್ನಬೇಕು ಎನ್ನಿಸಿದರೆ ಅದನ್ನು ತಿನ್ನಿರಿ.ಅದು ನಿಮ್ಮ ದೇಹಕ್ಕೆ ಬೇಕಾಗಿರುತ್ತದೆ.ಬೇಡ ಎನಿಸಿದ ಆಹಾರದಿಂದ ದೂರವಿರಿ.ಏಕೆಂದರೆ ಅದು ನಿಮ್ಮ ದೇಹಕ್ಕೆ ಬೇಕಾಗಿಲ್ಲ.ತಲೆ ಸುತ್ತು ಮತ್ತು ವಾಂತಿಯಿಂದ ನಿಮ್ಮನ್ನು ನೀವು ದೂರ ಇರಿಸಿಕೊಳ್ಳಿ.

ನಿಮಗೆ ಇಷ್ಟವಾಗದ ಪದಾರ್ಥಗಳಿಗೆ ಬದಲಿ ಆಹಾರವನ್ನು ಸೇವಿಸಿ

ನಿಮಗೆ ಇಷ್ಟವಾಗದ ಪದಾರ್ಥಗಳಿಗೆ ಬದಲಿ ಆಹಾರವನ್ನು ಸೇವಿಸಿ

ಕೆಲವೊಮ್ಮೆ ನಿಮಗೆ ಇಷ್ಟವಾಗದೇ ಇರುವ ಆಹಾರಗಳಿಂದ ಅತ್ಯಾವಶ್ಯಕವಾದ ಪೋಷಕಾಂಶಗಳು ಇರುತ್ತವೆ ಅವುಗಳನ್ನು ನೀವು ನಿರ್ಲಕ್ಷಿಸುವಂತಿಲ್ಲ. ಅಂತಹ ಸಂದರ್ಭದಲ್ಲಿ ನೀವು ಅದೇ ಪೋಷಕಾಂಶಗಳನ್ನು ಹೊಂದಿರುವ ಬದಲಿ ಆಹಾರವನ್ನು ಸೇವಿಸಬೇಕಾಗುತ್ತದೆ.ಉದಾಹರಣೆಗೆ ನಿಮಗೆ ಪಾಲಕ್ ಸೊಪ್ಪು ಇಷ್ಟವಾಗದಿದ್ದರೆ ಆದರ ಬದಲಿಗೆ ಅಮರನಾಥ ಎಳೆಗಳು,ನುಗ್ಗೆ ಸೊಪ್ಪು ಅಥವಾ ಮೆಂತೆ ಸೊಪ್ಪು ಸೇವಿಸಬಹುದು. ನಿಮಗೆ ಇಷ್ಟವಾಗದೇ

ಇರುವ ಆಹಾರ ಪದಾರ್ಥಗಳನ್ನು ಮರೆ ಮಾಡಿ ತಿನ್ನಿ:

ನೀವು ತಿರಸ್ಕರಿಸುವಂತಹ ಆಹಾರ ಪದಾರ್ಥಗಳನ್ನು ಬೇರೆ ಆಹಾರದೊಂದಿಗೆ ಕಾಣದಂತೆ ಸೇರಿಸಿ ತಿನ್ನಲು ಪ್ರಯತ್ನಿಸಿ.ಇದರ ಹಿಂದೆ ಇರುವ ಉಪಾಯವೇನೆಂದರೆ ನೀವು ಅದರ ಪೌಷ್ಟಿಕಾಂಶದ ಅಂಶವನ್ನು ಕಡಿಮೆ ಮಾಡದೇ ಅದರ ವಾಸನೆಯನ್ನು ಕಡಿಮೆ ಮಾಡಿ ರುಚಿಯನ್ನು ನಿಮಗೆ ಹಿಡಿಸುವಂತೆ ಮಾಡಿ ಸೇವಿಸುವುದು.ಉದಾಹರಣೆಗೆ ನಿಮಗೆ ಕೆಲವು ತರಕಾರಿಗಳು ಸೇರದೆ ಇದ್ದಾರೆ ಅದನ್ನು ಹಣ್ಣುಗಳೊಂದಿಗೆ ಬೆರಿಸಿ ದ್ರವ ರೂಪದಲ್ಲಿ ಸೇವಿಸಿರಿ.ಅದಕ್ಕೆ ವೆನಿಲ್ಲಾ ಹಾಗು ಏಲಕ್ಕಿಯಂತಹ ಪದಾರ್ಥಗಳನ್ನು ಹಾಕಿ ಗಾಢತೆಯನ್ನು ಕಡಿಮೆ ಮಾಡಿ ಸೇವಿಸಿ.

ನಿಮ್ಮ ಹೊಟ್ಟೆಯನ್ನು ಎಂದಿಗೂ ಖಾಲಿ ಬಿಡಬೇಡಿ

ನಿಮ್ಮ ಹೊಟ್ಟೆಯನ್ನು ಎಂದಿಗೂ ಖಾಲಿ ಬಿಡಬೇಡಿ

ನೀವು ಹಸಿದುಕೊಂಡಿರುವಾಗ ಅಥವಾ ಹಸಿವಾಗಲಿ ಎಂದು ಕಾದುಕೊಂಡಿದ್ದರೆ ಅಂಥಹ ಸಂದರ್ಭದಲ್ಲಿ ಆಹಾರದ ಬಗ್ಗೆ ನಿಮಗೆ ಹೆಚ್ಚು ತಿರಸ್ಕಾರ ಉಂಟಾಗುತ್ತದೆ.ಚಹಾ,ನೈಸರ್ಗಿಕ ಚಹಾ ಮುಂತಾದವುಗಳನ್ನು ಸೇವಿಸುತ್ತಾ ಇರಿ.ನಿಮ್ಮ ಹೊಟ್ಟೆಯನ್ನು ಖಾಲಿ ಬಿಡಬೇಡಿ.ಒಣ ಹಣ್ಣುಗಳಾದ ದ್ರಾಕ್ಷಿ ಗೋಡಂಬಿ ಮತ್ತು ಉಪ್ಪಿನ ಬಿಸ್ಕತ್ ಗಳಿಂದ ಬಾಯಾಡಿಸುತ್ತ ಇರಿ.

ಪೂರಕವಾದ ಆಹಾರಗಳನ್ನು ಸೇವಿಸುತ್ತಾ ಇರಿ

ಪೂರಕವಾದ ಆಹಾರಗಳನ್ನು ಸೇವಿಸುತ್ತಾ ಇರಿ

ಈ ಯಾವುದೇ ಪರಿಹಾರಗಳು ನಿಮಗೆ ಹೊಂದಿಕೆ ಆಗದೆ ಇದ್ದ ಪಕ್ಷದಲ್ಲಿ ನಿಮಗೆ ಕೆಲ ಆಹಾರಗಳನ್ನು ತಿನ್ನದೇ ಇರುವಂತೆಯೇ ಆಗಬಹುದು.ಅಂತಹ ಸಮಯದಲ್ಲಿ ನೀವು ನಿಮ್ಮ ವೈದ್ಯರನ್ನು ಭೇಟಿ ಮಾಡಿ ಅವರಿಗೆ ಇದರ ಬಗ್ಗೆ ತಿಳಿಸಿ.ಅವರು ನಿಮಗೆ ಆಹಾರದ ಬದಲಿಗೆ ತೆಗೆದುಕೊಳ್ಳಬಹುದಾದ ಕೆಲವು ಪೂರಕಗಳನ್ನು ನೀಡುತ್ತಾರೆ.ಅವುಗಳು ನಿಮ್ಮ ಪೋಷಕಾಂಶಕ ಕೊರತೆಗಳನ್ನು ನೀಗಿಸುತ್ತವೆ.ನೀವು ಅದಾಗಲೇ ಪ್ರಸವ ಪೂರ್ವ ವಿಟಮಿನ್ ಮಾತ್ರೆಗಳು,ನಿಯಾಸಿನ್ ಮಾತ್ರೆಗಳು,ಕಬ್ಬಿಣ ಮತ್ತು ಕ್ಯಾಲ್ಸಿಯಂ ಹೊಂದಿರುವ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾ ಇರಬಹುದು.ಅದರೊಂದಿಗೆ ಮೀನಿನ ಎಣ್ಣೆಯ ಮಾತ್ರೆಗಳು ಹಾಗು ಇನ್ನೂ ಹಲವು ಪೂರಕಗಳನ್ನು ವೈದ್ಯರು ನಿಮಗೆ ನೀಡಬಹುದು.

English summary

Why You Disliking Your Favourite Food During Pregnancy?

During pregnancy, some women tend to crave weird combinations of foods like ice creams and pickles. But the case may differ from woman to woman and pregnancy to pregnancy. There are many theories and speculations that try to explain why women develop aversions to food, but none of these can be considered to be conclusive.
Story first published: Monday, September 10, 2018, 16:37 [IST]
X
Desktop Bottom Promotion