For Quick Alerts
ALLOW NOTIFICATIONS  
For Daily Alerts

ಗರ್ಭಿಣಿ ಮಹಿಳೆಯರು ವ್ಯಾಯಾಮ ಮಾಡಬಹುದೇ?

By Hemanth
|

ಮಹಿಳೆಯ ತನ್ನ ಪತಿ ಹಾಗೂ ಕುಟುಂಬದವರಿಗೆ ನೀಡುವಂತಹ ಸಂತೋಷದ ವಿಷಯವೇ ತಾನು ತಾಯಿಯಾಗುತ್ತಿದ್ದೇನೆ ಎನ್ನುವುದು. ಇಂತಹ ಸಂದರ್ಭದಲ್ಲಿ ಮಹಿಳೆಯ ಆರೈಕೆಗೆ ಕುಟುಂಬದವರು ನಾ ಮುಂದು, ತಾಮುಂದು ಎಂದು ಬರುವರು. ಇಷ್ಟು ಮಾತ್ರವಲ್ಲದೆ ಮಹಿಳೆಗೆ ಸಾಕಷ್ಟು ಸಲಹೆಗಳನ್ನು ಕೂಡ ನೀಡುವರು. ಬಂದಿರುವಂತಹ ಸಾವಿರಾರು ಸಲಹೆ ಹಾಗೂ ಸೂಚನೆಗಳಲ್ಲಿ ಯಾವುದನ್ನು ಪಾಲಿಸುವುದು ಮತ್ತು ಬಿಡುವುದು ಎನ್ನುವ ಗೊಂದಲಕ್ಕೆ ಗರ್ಭಿಣಿ ಮಹಿಳೆ ಸಿಲುಕುವುದು ಖಚಿತ. ಇದರಿಂದಾಗಿ ಗರ್ಭಿಣಿ ಮಹಿಳೆಯು ತುಂಬಾ ಗೊಂದಲಕ್ಕೆ ಒಳಗಾಗುವಳು. ಜನರು ಸಲಹೆ ನೀಡುವುದು ನಿಮ್ಮ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ.

ಆದರೆ ಪ್ರತಿಯೊಬ್ಬ ಗರ್ಭಿಣಿಯ ಸಮಸ್ಯೆಯು ಭಿನ್ನವಾಗಿರುವುದು. ಇದರಿಂದ ನೀವು ಜನರ ಸಲಹೆಗಳನ್ನು ಕೇಳುವ ಬದಲು ವೈದ್ಯರ ಬಳಿಗೆ ಹೋಗಿ ಸಲಹೆ ಪಡೆದರೆ ಉತ್ತಮ. ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯು ತನ್ನ ಆಹಾರಕ್ರಮದ ಬಗ್ಗೆ ಹೆಚ್ಚಿನ ಗಮನಹರಿಸಬೇಕು. ಆದರೆ ಏನು ತಿನ್ನಬೇಕು ಮತ್ತು ಬಿಡಬೇಕು ಎನ್ನುವುದು ಕೂಡ ಗೊಂದಲವೇ. ಇನ್ನೊಂದು ಪ್ರಶ್ನೆಯೆಂದರೆ ಗರ್ಭಿಣಿ ಮಹಿಳೆಯರು ವ್ಯಾಯಾಮ ಮಾಡಬಹುದೇ ಎನ್ನುವುದು.

Pregnancy exercise

ಕ್ರೀಡಾಪಟುಗಳ ಸಹಿತ ಗರ್ಭಿಣಿ ಮಹಿಳೆಯರು ವ್ಯಾಯಾಮ ಮಾಡುವುದಕ್ಕೆ ನಿರ್ಬಂಧವಿದೆ. ಆದರೆ ಕೆಲವು ಗರ್ಭಿಣಿ ಮಹಿಳೆಯರು ದಿನನಿತ್ಯದ ಸಾಮಾನ್ಯ ವ್ಯಾಯಾಮಗಳನ್ನು ಮಾಡುತ್ತಲಿರುತ್ತಾರೆ. ಹಾಗಾದರೆ ಗರ್ಭಧಾರಣೆಯ ಸಮಯದಲ್ಲಿ ಯಾವ ಹಂತದಲ್ಲಿ ವ್ಯಾಯಾಮ ಮಾಡುವುದನ್ನು ನಿಲ್ಲಿಸಬಹುದು ಎನ್ನುವ ಪ್ರಶ್ನೆ ಕಾಡುವುದು. ಗರ್ಭಿಣಿ ಮಹಿಳೆಯರು ಯಾವ ಸಮಯದಲ್ಲಿ ವ್ಯಾಯಾಮ ಮಾಡಬಹುದು ಎನ್ನುವ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ವ್ಯಾಯಾಮದಿಂದಾಗಿ ನಮ್ಮ ದೇಹ ಹಾಗೂ ಮನಸ್ಸು ಎರಡಕ್ಕೂ ತುಂಬಾ ಲಾಭವಿದೆ. ಇದು ದೇಹದ ಸ್ನಾಯುಗಳನ್ನು ಬಲಗೊಳಿಸುವುದು ಮತ್ತು ತೂಕವನ್ನು ಸಮತೋಲನದಲ್ಲಿಡುವುದು. ಗರ್ಭಧಾರಣೆಯ ಸಮಯದಲ್ಲಿ ಇದೆಲ್ಲವೂ ಬೇಕಲ್ಲವೇ? ಇಂತಹ ಸಮಯದಲ್ಲಿ ಮಹಿಳೆಯು ತನ್ನ ದೇಹದ ಬಗ್ಗೆ ಹೆಚ್ಚು ಗಮನಹರಿಸಬೇಕು ತಾನೇ? ಎಚ್ಚರಿಕೆಯಿಂದ ಕೆಲವೊಂದು ವ್ಯಾಯಾಮ ಮಾಡುವುದರಿಂದ ಗರ್ಭಿಣಿ ಮಹಿಳೆಯರಿಗೆ ಹಲವಾರು ರೀತಿಯ ಲಾಭಗಳು ಇವೆ.

ಪ್ರಥಮ ಮೂರು ತಿಂಗಳುಗಳಲ್ಲಿ ಮೆಟ್ಟಿಲು ಇಳಿಯುವಂತಹ ಮತ್ತು ನೆಗೆಯುವ (ಸ್ಕಿಪ್ಪಿಂಗ್) ಚಟುವಟಿಕೆ ಇರುವ ವ್ಯಾಯಾಮಗಳನ್ನು ಬಿಟ್ಟು ಬೇರೆ ಸರಳ ವ್ಯಾಯಾಮಗಳನ್ನು ಮಾಡಬೇಕು. (ಈ ವ್ಯಾಯಾಮಗಳಿಂದ ಗರ್ಭಪಾತವಾಗುವ ಸಂಭವ ಹೆಚ್ಚುತ್ತದೆ) ನಾಲ್ಕರಿಂದ ಆರು ತಿಂಗಳವರೆಗೆ ಮೈ ಸೆಳೆಯುವ ಮತ್ತು ನಡಿಗೆ, ಕಸ ಗುಡಿಸಲು ಬಗ್ಗುವಂತಹ ವ್ಯಾಯಾಮಗಳು ಸಾಕು.

ಏಳನೆಯ ತಿಂಗಳಿನಿಂದ ಒಂಬತ್ತನೆಯ ತಿಂಗಳವರೆಗೆ ನಿಧಾನಗತಿಯ ನಡಿಗೆ ಮತ್ತು ಸರಳ ವ್ಯಾಯಾಮಗಳನ್ನು ಮಾಡಬೇಕು. ಯಾವುದೇ ಕಾರಣಕ್ಕೆ ಆರನೆಯ ತಿಂಗಳ ಬಳಿಕ ಭಾರ ಎತ್ತಬಾರದು. ನಿಮ್ಮ ಕುಟುಂಬ ವೈದ್ಯರ ಸಲಹೆಯನ್ನು ಅನುಸರಿಸಿ ನಿಮಗೆ ಯಾವುದು ಹೆಚ್ಚು ಸೂಕ್ತವೋ ಆ ವ್ಯಾಯಾಮಗಳನ್ನು ಮಾತ್ರ ಖಂಡಿತಾ ಮಾಡಬೇಕು. ಒಂದು ವೇಳೆ ಹೆಚ್ಚಿನವರು ನೀಡಿದ ಪುಕ್ಕಟೆ ಸಲಹೆಯನ್ನು ಸರ್ವಥಾ ಅನುಸರಿಸಿದರೆ ದೇಹ ಅಗತ್ಯಕ್ಕಿಂತ ಹೆಚ್ಚಿಗೆ ದಪ್ಪಗಾಗುವುದು, ಹೆರಿಗೆಯಲ್ಲಿ ಕಷ್ಟವಾಗುವುದು, ಹೆರಿಗೆಯ ಬಳಿಕ ಕಾಣಿಸಿಕೊಳ್ಳುವ ಇತರ ತೊಂದರೆಗಳು, ಹೀಗೆ ಮೊದಲಾದ ಸಮಸ್ಯೆಗಳು ಎದುರಾಗಬಹುದು. ವ್ಯಾಯಾಮದಿಂದ ಗರ್ಭಿಣಿ ಮಹಿಳೆಯರಿಗೆ ಆಗುವ ಆರೋಗ್ಯ ಲಾಭಗಳು.

Pregnancy women

1.ಮಿತವಾದ ವ್ಯಾಯಾಮದಿಂದ ಗರ್ಭಿಣಿ ಮಹಿಳೆಯರಿಗೆ ಬೆನ್ನು ನೋವು ಮತ್ತು ಹೊಟ್ಟೆ ಉಬ್ಬರ ಕಡಿಮೆ ಮಾಡಬಹುದು.

2. ನಿಯಮಿತವಾಗಿ ವ್ಯಾಯಾಮ ಮಾಡುವಂತಹ ಮಹಿಳೆಯರಲ್ಲಿ ಗರ್ಭಧಾರಣೆ ವೇಳೆ ಕಂಡುಬರುವ ಮಧುಮೇಹ ಬರುವುದಿಲ್ಲ.

3. ವ್ಯಾಯಾಮದಿಂದಾಗಿ ರಕ್ತಪರಿಚಲನೆಯು ಹೆಚ್ಚಾಗುವುದು. ಇದರಿಂದ ಮನಸ್ಥಿತಿ ಮತ್ತು ಶಕ್ತಿ ಹೆಚ್ಚಾಗುವುದು.

4. ಸ್ನಾಯುಗಳ ಬಲಗೊಳ್ಳುವಂತೆ ಮಾಡುವುದು ಮತ್ತು ಹೆರಿಗೆ ಬಳಿಕ ನಿಮ್ಮ ಮೊದಲಿನ ಸ್ಥಿತಿಗೆ ಮರಳಲು ಸಹಕಾರಿ.

5. ಸ್ನಾಯುಗಳಿಗೆ ಹೆಚ್ಚಿನ ಚಲನೆ ಸಿಗುವ ಕಾರಣದಿಂದಾಗಿ ಯೋನಿ ಗರ್ಭಧಾರಣೆಯ ಸಾಧ್ಯತೆಯು ಹೆಚ್ಚಾಗಿರುವುದು.

6. ಮಲಬದ್ಧತೆಯಾಗುವುದನ್ನು ತಡೆಯುತ್ತದೆ

ಗರ್ಭಾವಸ್ಥೆಯಲ್ಲಿ ದೇಹ ಆಹಾರಕ್ಕಿಂತಲೂ ಹೆಚ್ಚು ನೀರನ್ನು ಬೇಡುವುದರಿಂದ ಹಾಗೂ ಬಹಳಷ್ಟು ನೀರು ಶಿಶುವಿನ ಬೆಳವಣಿಗೆಗೆ ಉಪಯೋಗಿಸಲ್ಪಡುವುದರಿಂದ ಮಲಬದ್ಧತೆಯ ಸಾಧ್ಯತೆಗಳು ಹೆಚ್ಚಾಗುತ್ತವೆ. ವ್ಯಾಯಾಮ ಇಲ್ಲದೇ ಇರುವುದರಿಂದ ಮಲವಿಸರ್ಜನೆ ತುಂಬಾ ತಡವಾಗುತ್ತದೆ, ತನ್ಮೂಲಕ ಇತರೇ ತೊಂದರೆಗಳನ್ನು ತಂದೊಡ್ಡುತ್ತದೆ. ಪ್ರತಿದಿನದ ವ್ಯಾಯಾಮದಿಂದ ಹಾಗೂ ನಿಮ್ಮ ಆಹಾರದಲ್ಲಿ ಸಾಕಷ್ಟು ನಾರು ಇರುವಂತೆ ನೋಡಿಕೊಳ್ಳುವುದರಿಂದ ವಿಸರ್ಜನಾ ಕಾರ್ಯ ಸುಲಭಗೊಂಡು ಮಲಬದ್ಧತೆಯಿಂದಾಗಬಹುದಾಗಿದ್ದ ಎಲ್ಲಾ ತೊಂದರೆಗಳಿಂದ ಕಾಪಾಡಿಕೊಂಡತಾಗುತ್ತದೆ.

Pregnancy women exercise

6. ಗರ್ಭಾವಸ್ಥೆಯ ಮಧುಮೇಹದಿಂದ ರಕ್ಷಣೆ ದೊರಕುತ್ತದೆ

ಅನುವಂಶಿಕವಾಗಿ ಅಥವಾ ಸ್ಥೂಲಕಾಯದಿಂದಾಗಿ ಗರ್ಭಾವಸ್ಥೆಯ ಮಧುಮೇಹಕ್ಕೆ (gestational diabetes) ಒಳಗಾಗುವ ಸಾಧ್ಯತೆ ಇದ್ದಲ್ಲಿ ವ್ಯಾಯಾಮಗಳು ನಿಮಗೆ ಅನಿವಾರ್ಯ. ಏಕೆಂದರೆ ಗರ್ಭಕಾಲದಲ್ಲಿ ರಕ್ತದಲ್ಲಿ ಇನ್ಸುಲಿನ್ ಸ್ರವಿಕೆ ಏರುಪೇರಾಗಿ ಮಧುಮೇಹದ ತಾತ್ಕಾಲಿಕ ಪ್ರಭಾವಕ್ಕೆ ಒಳಗಾಗಬೇಕಾಗುತ್ತದೆ. ಪ್ರತಿಯೊಬ್ಬ ಗರ್ಭಿಣಿ ಮಹಿಳೆಯು ಇತರ ಗರ್ಭಿಣಿ ಮಹಿಳೆಗಿಂತ ಭಿನ್ನವಾಗಿರುತ್ತಾಳೆ ಎಂದು ಮೇಲೆ ಹೇಳಿದ್ದೇವೆ. ಇದರಿಂದ ನಿಮ್ಮ ವೈದ್ಯರ ಸಲಹೆ ಪಡೆಯುವುದು ತುಂಬಾ ಒಳ್ಳೆಯದು. ನೀವು ಕ್ರೀಡಾಪಟುವಾಗಿದ್ದರೆ ಅಥವಾ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವವರಾದರೆ, ಆಗ ನಿಮಗೆ ವೈದ್ಯರು ವ್ಯಾಯಾಮ ಮಾಡಲು ಸೂಚಿಸಬಹುದು. ಕೆಲವೊಂದು ಪರಿಸ್ಥಿತಿಗಳಲ್ಲಿ ಗರ್ಭಿಣಿ ಮಹಿಳೆಯರು ವ್ಯಾಯಾಮ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು.

1. ಅವಳಿ ಅಥವಾ ತ್ರಿವಳಿ

ಅವಳಿ ಅಥವಾ ತ್ರಿವಳಿ ಭ್ರೂಣವಿರುವ ಗರ್ಭಿಣಿಯರು ದೈಹಿಕ ಚಟುವಟಿಕೆ ಹಾಗೂ ವ್ಯಾಯಾಮ ಮಾಡುವುದು ನಿಷಿದ್ಧ.

2. ರಕ್ತಸ್ರಾವ

ಎರಡನೇ ಅಥವಾ ಮೂರನೇ ತ್ರೈಮಾಸಿಕದಲ್ಲಿ ನಿಮಗೆ ರಕ್ತಸ್ರಾವವಾಗುತ್ತಿದ್ದರೆ ಆಗ ದೈಹಿಕ ಚಟುವಟಿಕೆಗಳನ್ನು ನಿಲ್ಲಿಸಿ. ಇದರಿಂದ ಮಗುವಿನ ಆರೋಗ್ಯದ ಮೇಲೆ ಪರಿಣಾಮವಾಗಬಹುದು.

3. ರಕ್ತಹೀನತೆ

ರಕ್ತಹೀನತೆ ಅಥವಾ ಕಬ್ಬಿನಾಂಶ ಕಡಿಮೆ ಇರುವಂತಹ ಮಹಿಳೆಯರು ವ್ಯಾಯಾಮದ ವೇಳೆ ಗಾಯಾಳುವಾಗುವ ಮತ್ತು ರಕ್ತಸ್ರಾವವಾಗುವ ಸಾಧ್ಯತೆಯಿದೆ. ಇದರಿಂದ

ರಕ್ತಹೀನತೆ ಇರುವಂತಹ ಮಹಿಳೆಯರು ವ್ಯಾಯಾಮದಿಂದ ದೂರ ಉಳಿಯಬೇಕು.

4. ಹೃದಯದ ಸಮಸ್ಯೆ

ಹೃದಯದ ಸಮಸ್ಯೆ ಇರುವಂತಹ ಮಹಿಳೆಯರು ಯಾವುದೇ ರೀತಿಯ ದೈಹಿಕ ಚಟುವಟಿಕೆಗಳಲ್ಲಿ ಒಳಗೊಳ್ಳಬಾರದು. ಇದರಿಂದ ಹೃದಯದ ಮೇಲೆ ಅತಿಯಾದ ಒತ್ತಡ ಬೀಳುವುದು.

5. ರಕ್ತದೊತ್ತಡ

ಗರ್ಭಧಾರಣೆ ವೇಳೆ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಅಧಿಕ ರಕ್ತದೊತ್ತಡವು ತುಂಬಾ ಅಪಾಯಕಾರಿ. ಇಂತಹ ಸಮಸ್ಯೆ ಕಾಣಿಸಿಕೊಂಡಿದ್ದರೆ ಆಗ ನಿಮ್ಮ ದೇಹಕ್ಕೆ ವಿಶ್ರಾಂತಿನೀಡುವುದು ಒಳ್ಳೆಯದು.

6. ಅವಧಿಪೂರ್ವ ಹಿಗ್ಗುವಿಕೆ

ಅವಧಿಪೂರ್ವ ಹಿಗ್ಗುವಿಕೆ ಹೊಂದಿರುವವರಿಗೆ ದೈಹಿಕ ವ್ಯಾಯಾಮವು ನಿಷಿದ್ಧ. ವ್ಯಾಯಾಮವು ದೇಹದಲ್ಲಿ ಆಕ್ಸಿಟೊಸಿನ್ ಹೆಚ್ಚಿಸುವುದು. ಇದು ಹೆರಿಗೆಗೆ ಕಾರಣವಾಗುವಂತಹ ಹಾರ್ಮೋನು ಆಗಿದೆ.

7. ಬಿರುಕಿನ ಪೊರೆಗಳು

ಗರ್ಭದಲ್ಲಿರುವ ಮಗುವನ್ನು ಅಮಿಯೊಟಿಕ್ ದ್ರವವು ಸುತ್ತುವರಿದಿರುವುದು. ಇದು ಅಮಿಯೋಟಿಕ್ ಪ್ಲಗ್ ಮೂಲಕ ಗರ್ಭದಲ್ಲಿರುವುದು. ವ್ಯಾಯಾಮದಿಂದಾಗಿ ಈ ಪ್ಲಗ್ ಸಡಿಲಗೊಂಡು ಅದರಿಂದ ದ್ರವ ಸೋರಿಕೆಯಾಗುವ ಸಾಧ್ಯತೆಯಿದೆ. ಇದು ಮಗುವಿಗೆ ತುಂಬಾ ಅಪಾಯಕಾರಿ. ಇಂತಹ ಸಮಯದಲ್ಲಿ ನೀವು ವ್ಯಾಯಾಮವನ್ನು ಸಂಪೂರ್ಣವಾಗಿ ಕಡೆಗಣಿಸಬೇಕು. ನಿಮ್ಮ ಗರ್ಭಧಾರಣೆಯು ಸಾಮಾನ್ಯವಾಗಿದ್ದರೆ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುತ್ತಲಿದ್ದರೆ ಆಗ ನೀವು ಕೆಲವೊಂದು ವಿಚಾರಗಳನ್ನು ತಿಳಿದುಕೊಳ್ಳಬೇಕು.

1. ನಿಮಗೆ ವ್ಯಾಯಾಮದ ಬಳಿಕ ಉಸಿರಾಡಲು ಸಮಸ್ಯೆಯಾಗುತ್ತಿದ್ದರೆ...

2. ಯಾವುದೇ ರೀತಿಯ ಎದೆನೋವು ಕಾಣಿಸುತ್ತಲಿದ್ದರೆ

3. ಸ್ನಾಯುಗಳಲ್ಲಿ ಊತ ಮತ್ತು ಪಾದಗಳು ಊದಿಕೊಂಡಿರುವಾಗ

4. ಹೊಟ್ಟೆ ಅಥವಾ ಗರ್ಭಕಂಠದಲ್ಲಿ ನೋವು

5. ಅತಿಯಾದ ತಲೆನೋವು ಅಥವಾ ನಿಶ್ಯಕ್ತಿ ಈ ಲಕ್ಷಣಗಳು ನಿಮ್ಮಲ್ಲಿದ್ದರೆ ಆಗ ಗರ್ಭದಲ್ಲಿರುವ ಮಗುವು ನಿಮ್ಮ ವ್ಯಾಯಾಮಕ್ಕೆ ಹೊಂದಿಕೊಂಡಿಲ್ಲವೆಂದು ಅರ್ಥ. ಗರ್ಭಧಾರಣೆಯ ಸಮಯದಲ್ಲಿ ನಿಮ್ಮ ಕಠಿಣ ವ್ಯಾಯಾಮ ಕ್ರಮವನ್ನು ಬಿಟ್ಟು, ಮಗು ಹಾಗೂ ನಿಮಗಾಗಿ ಸರಿಯಾದ ಆಹಾರ ಸೇವನೆ ಮಾಡಿ. ವ್ಯಾಯಾಮದ ಬಗ್ಗೆ ಮತ್ತೆ ಕೂಡ ಯೋಚನೆ ಮಾಡಬಹುದು. ನಿಮಗೆ ಮಗು ಸಂತೋಷವಾಗಿರುವುದು ಮುಖ್ಯ ತಾನೇ? ಹಾಗಿದ್ದರೆ ವ್ಯಾಯಾಮಕ್ಕೆ ಸ್ವಲ್ಪ ಸಮಯ ವಿರಾಮ ನೀಡಿ.

English summary

When Should You Not Exercise During Pregnancy

Pregnancy is a wonderful phase in a woman's life and all of us certainly look forward to it. If you have recently given the good news to your friends and family, chances are there are suggestions galore pouring in from every near or distant relative you probably never even have met before. The advices they give may be absurd but surely with good intentions of well-being to your baby and you. But all these suggestions may leave you thinking of what rules to follow and what not to.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more