For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಲ್ಲಿ ತೂಕ ಹೆಚ್ಚಳವಾಗುವಿಕೆಯ ಬಗ್ಗೆ ನೀವು ಏನೆಲ್ಲ ತಿಳಿದಿರಬೇಕು ಗೊತ್ತಾ?

By Sushma Charhra
|

ಗರ್ಭಿಣಿಯರಲ್ಲಿ ತೂಕ ಹೆಚ್ಚಳವಾಗುವಿಕೆಯು ಸರ್ವೇಸಾಮಾನ್ಯವಾಗಿದ್ದು, ನಿಮ್ಮ ಮಗು ಬೆಳೆದಂತೆಲ್ಲಾ ಗರ್ಭಿಣಿಯ ತೂಕವೂ ಹೆಚ್ಚಳವಾಗುತ್ತದೆ. ಆದರೆ ಇದು ಕೇವಲ ನಿಮ್ಮ ಮಗುವಿನ ಬೆಳವಣಿಗೆಯಿಂದಾಗಿ ಮಾತ್ರ ನಿಮ್ಮಲ್ಲೂ ತೂಕ ಅಧಿಕವಾಗುವುದಿಲ್ಲ. ನಿಮ್ಮ ದೇಹದಲ್ಲಿ ಹೆಚ್ಚಿನ ಟಿಶ್ಯೂಗಳು ಅಭಿವೃದ್ಧಿ ಹೊಂದುತ್ತವೆ ಅದರಲ್ಲಿ ಸ್ತನಗಳ ಆಕಾರದಲ್ಲಿ ಬದಲಾವಣೆ ಮತ್ತು ಗರ್ಭಾಶಯದ ಬದಲಾವಣೆಯೂ ಸೇರಿದೆ. ಇದರಲ್ಲಿ ಹೆಚ್ಚಿನ ರಕ್ತ, ಫ್ಯೂಯಿಡ್ ಮತ್ತು ಪ್ಲಸೆಂಟಾಗಳು ಕೂಡ ಸೇರಿಕೊಂಡಿವೆ.

ಗರ್ಭಿಣಿಯರು ನಿಮ್ಮ ಮಗುವಿಗಾಗಿ ಉತ್ತಮ ಆಹಾರಗಳನ್ನು ಸೇವಿಸಬೇಕು ಮತ್ತು ಚೆನ್ನಾಗಿ ತಿನ್ನಬೇಕು ಎಂಬುದು ನಿಜವೇ. ಆದರೆ ಇಬ್ಬರಿಗಾಗಿ ತಿನ್ನಬೇಕು ಎಂಬ ನಂಬಿಕೆ ನಿಜವಲ್ಲ. ಅಂತಹ ಯೋಚನೆಯಿಂದ ಕೇವಲ ನಿಮ್ಮಲ್ಲಿ ತೂಕ ಹೆಚ್ಚಳವಾಗುತ್ತೆ ಮತ್ತು ಮುಂದಿನ ದಿನಗಳು ನಿಮಗೆ ಪ್ರಯಾಸದಾಯಕವಾಗಿರುತ್ತದೆ. ಇಲ್ಲಿ ಗರ್ಭಿಣಿಯರು ತಮ್ಮ ತೂಕ ಹೆಚ್ಚಳವಾಗುವುದರ ಬಗ್ಗೆ ಮಾಹಿತಿ ಮತ್ತು ಅದನ್ನು ನಿಭಾಯಿಸುವುದು ಹೇಗೆ ಎಂಬ ಬಗ್ಗೆ ಸಂಪೂರ್ಣ ವಿವರವನ್ನು ನೀಡಲಾಗಿದೆ. ಅದನ್ನು ತಿಳಿಯಲು ನೀವು ಲೇಖನದ ಮುಂದಿನ ಭಾಗವನ್ನು ಓದಲೇಬೇಕು. ಯಾವೆಲ್ಲ ವಿಚಾರಗಳು ಗರ್ಭಿಣಿಯರಲ್ಲಿ ತೂಕ ಹೆಚ್ಚಳವಾಗಲು ಕಾರಣವಾಗುತ್ತದೆ:

Obesity during pregnancy in kannada

ಹೆಚ್ಚಿನ ಗರ್ಭಿಣಿ ಮಹಿಳೆಯರ ತೂಕ ಹೆಚ್ಚಳವಾಗುವಿಕೆ ಅಂದರೆ ಅದು 12 ಕೆಜಿಯಿಂದ 16 ಕೆಜಿ ವರೆಗೆ ಆಗಿರುತ್ತದೆ. ಗರ್ಭಿಣಿಯರ ತೂಕ ಹೆಚ್ಚಳವಾಗುವಿಕೆಯು ಈ ಕೆಳಗಿನ ಅಂಶಗಳಿಂದ ಪ್ರಭಾವಕ್ಕೊಳಗಾಗಿರಬಹುದು.

• ಗರ್ಭಿಣಿಯ ತೂಕ ಹೆಚ್ಚಳವು ಗರ್ಭವತಿಯಾಗುವುದಕ್ಕಿಂತ ಮುಂಚಿನ ತೂಕವನ್ನೂ ಅವಲಂಬಿಸಿ ಇರಬಹುದು.ಉದಾಹರಣೆಗೆ ನೀವು ನಿಮ್ಮ ಎತ್ತರಕ್ಕೆ ಅನುಸಾರವಾದ ತೂಕವನ್ನು ಹೊಂದಿಲ್ಲದೆ ಕಡಿಮೆ ತೂಕವುಳ್ಳವರಾಗಿದ್ದರೆ, ನೀವು ಗರ್ಭವತಿಯಾದಾಗ ಸ್ವಲ್ಪ ಹೆಚ್ಚಾಗೇ ತೂಕವನ್ನು ಅಧಿಕಗೊಳಿಸಿಕೊಳ್ಳಬೇಕಾಗುತ್ತದೆ. ಒಂದು ವೇಳೆ ನೀವು ಹೆಚ್ಚು ತೂಕವುಳ್ಳವರಾಗಿದ್ದರೆ, ಪ್ರಗ್ನೆನ್ಸಿಯಲ್ಲಿ ತೂಕವನ್ನು ಬ್ಯಾಲೆನ್ಸ್ ಮಾಡುವುದನ್ನು ಕಲಿಯಬೇಕು.
• ಒಂದು ವೇಳೆ ನೀವು ಅವಳಿ ಮಕ್ಕಳ ತಾಯಿಯಾಗುತ್ತಿದ್ದರೆ, ಸಹಜ ತೂಕ ಹೆಚ್ಚಳಕ್ಕಿಂತ ನಿಮ್ಮದು ಭಿನ್ನವಾಗಿರುತ್ತದೆ.
• ನಿಮ್ಮ ಪ್ರಾಥಮಿಕ ಹಂತದ ಗರ್ಭಾವಸ್ಥೆಯಲ್ಲಿ, ನೀವು ವಾಕರಿಕೆ, ವಾಂತಿ ಮತ್ತು ಮಾರ್ನಿಂಗ್ ಸಿಕ್ ನೆಸ್ ನಿಂದ ಬಳಲಿದರೆ ನಿಮ್ಮ ತೂಕ ಹೆಚ್ಚಳವು ನಾಲ್ಕನೇ ತಿಂಗಳು ಮತ್ತು ಪ್ರಗ್ನೆನ್ಸಿಯ ನಂತರದ ದಿನಗಳಲ್ಲಿ ಆರಂಭವಾಗುತ್ತದೆ.
• ಇದು ಪ್ರೀ-ಪ್ರಗ್ನೆನ್ಸಿಯಲ್ಲಿನ ನಿಮ್ಮ ದೇಹದ ಮಾಸ್ ಇಂಡೆಕ್ಸ್ (BMI)ಮೇಲೂ ಕೂಡ ಅವಲಂಬಿಸಿದೆ ಜೊತೆಗೆ ಪ್ರತಿ ನಿತ್ಯ ನೀವು ಸೇವಿಸುವ ಶಕ್ತಿಯ ಮೇಲೂ ಅಂದರೆ ಆಹಾರದ ಮೇಲೂ ಅಲವಂಬಿಸಿರುತ್ತದೆ.

ಗರ್ಭಿಣಿಯರಲ್ಲಿ ಸಹಜವಾಗಿ ಎಷ್ಟು ತೂಕ ಹೆಚ್ಚಳ ಆಗಬೇಕು?

ಪ್ರಗ್ನೆನ್ಸಿಯೂ ಮೂರು ತ್ರೈಮಾಸಿಕಗಳಲ್ಲಿ ನೀವು ತೂಕ ಹೆಚ್ಚಳವಾಗಬಹುದು. ಆದರೆ,ಸಹಜವಾಗಿ ಪ್ರತಿ ತಿಂಗಳು ಎಷ್ಟು ತೂಕ ಹೆಚ್ಚಳವಾಗಬೇಕು ಎಂಬುದನ್ನು ನೀವು ತಿಳಿದಿರಬೇಕು, ಇದು ತಾಯಿ ಮತ್ತು ಮಗುವಿನ ಹಿತದೃಷ್ಟಿಯಿಂದ ಬಹಳ ಒಳ್ಳೆಯದು.

ಗರ್ಭಿಣಿಯಾದ ಪ್ರಾರಂಭದ ದಿನಗಳಲ್ಲಿ ನಿಮ್ಮ ದೇಹದ ಬಾಡಿ ಮಾಸ್ ಇಂಡೆಕ್ಸ್ (ಭೌತಿಕ ದ್ರವ್ಯರಾಶಿ ಸೂಚಿ ಅಥವಾ BMI)ನ್ನು ಪರೀಕ್ಷಿಸಿಕೊಳ್ಳಬೇಕು. ಅದರ ಆಧಾರದ ಮೇಲೆ ನೀವು ಆರೋಗ್ಯಕಾರಿಯಾಗಿ ತೂಕ ಹೆಚ್ಚಳವಾಗುವಿಕೆಯನ್ನು ಪ್ಲಾನ್ ಮಾಡಬಹುದು. ಭೌತಿಕ ದ್ರವ್ಯರಾಶಿ ಸೂಚಿಯು ನಿಮ್ಮ ದೇಹದ ಫ್ಯಾಟ್ ಮತ್ತು ನಿಮ್ಮ ಎತ್ತರ ಮತ್ತು ತೂಕದ ಆಧಾರದ ಮೇಲೆ ನಿರ್ಧಾರವಾಗುತ್ತದೆ ಮತ್ತು ಅದು ನೀವು ಅತಿಯಾದ ತೂಕ ಹೊಂದಿದ್ದೀರಾ ಅಥವಾ ಕಡಿಮೆ ತೂಕ ಹೊಂದಿರುವವರಾ ಇಲ್ಲವೇ ಸಹಜವಾದ ತೂಕ ನಿಮ್ಮದಾಗಿದೆಯಾ ಎಂದು ಕಂಡು ಹಿಡಿಯಲು ಸಾಧ್ಯವಾಗುತ್ತದೆ.

ಭೌತಿಕ ದ್ರವ್ಯರಾಶಿ ಸೂಚಿಯನ್ನು ಕಂಡುಹಿಡಿಯಲು, ನಿಮ್ಮ ದೇಹದ ಎತ್ತರದ ವರ್ಗವನ್ನು ನಿಮ್ಮ ಒಟ್ಟು ತೂಕದ ಕಿಲೋಗ್ರಾಂಗಳಲ್ಲಿ ಭಾಗಿಸಿದರೆ ನಿಮ್ಮ ದೇಹದ BMI ನಿಮಗೆ ಲಭ್ಯವಾಗುತ್ತದೆ. ಅಥವಾ ಆನ್ ಲೈನ್ BMI ಕ್ಯಾಲ್ಕುಲೇಟರ್ ನ್ನು ಬಳಕೆ ಮಾಡಿ ಕಂಡು ಹಿಡಿಯಿರಿ. ಒಂದು ವೇಳೆ ಗರ್ಭಿಣಿಯಾಗುವುದಕ್ಕೂ ಮುನ್ನ ನಿಮ್ಮ ತೂಕ ಸಹಜವಾಗಿದ್ದರೆ, ನಂತರ ಪ್ರಗ್ನೆನ್ಸಿಯ ಒಟ್ಟು ಎಲ್ಲಾ ತ್ರೈಮಾಸಿಕಗಳಿಂದ ಸೇರಿ ನೀವು 11.5 ನಿಂದ 16 ಕೆಜಿ ವರೆಗೆ ತೂಕ ಹೆಚ್ಚಳವಾಗಬಹುದು. ಇದನ್ನು ಪ್ರತಿ ತಿಂಗಳಿಗೂ ಹೇಳುವುದಾದರೆ 1.5 ಕೆಜಿಯಿಂದ 2 ಕೆಜಿ ವರೆಗೆ ಪ್ರತಿ ತಿಂಗಳು ನಿಮ್ಮ ತೂಕ ಹೆಚ್ಚಳವಾಗಬೇಕು. ಒಂದು ವೇಳೆ ಪ್ರಗ್ನೆನ್ಸಿಗೂ ಮುನ್ನ ನಿಮ್ಮ ತೂಕ ಎತ್ತರಕ್ಕೆ ಅನುಗುಣವಾಗಿ ಇಲ್ಲದೆ ಅಧಿಕವಾಗಿದ್ದರೆ, ನೀವು ಗರ್ಭ ಧರಿಸಿದಾಗ ಕಡಿಮೆ ತೂಕ ಹೆಚ್ಚಳವಾಗಬೇಕು. ತೂಕವನ್ನು ಆದಷ್ಟು ಹೆಚ್ಚಾಗದಂತೆ ಕಂಟ್ರೋಲ್ ಮಾಡಬೇಕು. ಒಂದು ವೇಳೆ ನೀವು ಕಡಿಮೆ ತೂಕದವರಾಗಿದ್ದರೆ, ಪ್ರಗ್ನೆನ್ಸಿಯಲ್ಲಿ ತೂಕವು ಅಧಿಕವಾಗುವಂತೆ ಆಹಾರ ಸೇವಿಸುವುದು ಒಳ್ಳೆಯದು.

ಗರ್ಭಿಣಿಯರು ತೂಕ ಹೆಚ್ಚಳವಾಗುವಿಕೆಯನ್ನು ಮ್ಯಾನೇಜ್ ಮಾಡುವುದು ಹೇಗೆ?

ನಿಮ್ಮ ತೂಕವನ್ನು ಗಣನೆಗೆ ತೆಗೆದುಕೊಳ್ಳದೆ ಹೇಳುವುದಾದರೆ, ನೀವು ಆರೋಗ್ಯವಾಗಿರುವ ಆಹಾರ ಸೇವನೆ ಮಾಡುವುದು ಬಹಳ ಮುಖ್ಯ, ಪೋಷಕಾಂಶ ಭರಿತ ಆಹಾರಗಳಿರಬೇಕು. ತಾಜಾ ತರಕಾರಿಗಳು, ಕಾಳುಗಳು ಮತ್ತು ತಾಜಾ ಹಣ್ಣುಗಳು,ದ್ವಿದಳ ಧಾನ್ಯಗಳು,ಧಾನ್ಯಗಳು, ಮೀನು, ಮಾಂಸ, ಕಡಿಮೆ ಕೊಬ್ಬಿನಾಂಶವಿರುವ ಡೈರಿ ಪದಾರ್ಥಗಳು ಇತ್ಯಾದಿ.ಯಾಕೆಂದರೆ ಈ ಎಲ್ಲಾ ಪದಾರ್ಥಗಳು ಗರ್ಭಿಣಿಯರು ಸೇವಿಸುವುದು ತುಂಬಾ ಸೇಫ್. ಅವರು ಹೆಚ್ಚು ತೂಕ ಪಡೆಯಲು ಇವುಗಳು ಅವಕಾಶ ಮಾಡಿಕೊಡುವುದಿಲ್ಲ.

ಯಾವಾಗಲೂ ಪೋಷಕಾಂಶ ಭರಿತ ಆಹಾರ ಸೇವನೆ ಮಾಡುವುದರಿಂದ ನೀವು ಮತ್ತು ನಿಮ್ಮ ಹೊಟ್ಟೆಯಲ್ಲಿರುವ ಮಗು ಇಬ್ಬರೂ ಆರೋಗ್ಯವಾಗಿರಲು ಸಾಧ್ಯವಾಗುತ್ತದೆ. ಸರಿಯಾದ ಪ್ರಮಾಣದ ಕಬ್ಬಿಣಾಂಶ, ಫೋಲಿಕ್ ಆಸಿಡ್, ಕ್ಯಾಲ್ಸಿಯಂ, ಅಯೋಡಿನ್ ಮತ್ತು ಪ್ರೋಟೀನ್ ನಿಮ್ಮ ಮಗುವಿನ ಬೆಳವಣಿಗೆಯ ಪ್ರಾರಂಭಿಕ ಹಂತದಲ್ಲೇ ಲಭ್ಯವಾದರೆ, ಮಗುವು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ.

ಅದೇ ರೀತಿ, ನೀವು ಯಾವಾಗಲೂ ವ್ಯಾಯಾಮವನ್ನು ನಿಯಮಿತವಾಗಿ ಗರ್ಭಿಣಿಯಾದಾಗಲೂ ಮಾಡುವ ಅಭ್ಯಾಸವಿಟ್ಟುಕೊಳ್ಳಬೇಕು. ನಡೆದಾಡುವುದು ಮತ್ತು ಗರ್ಭಿಣಿಯಾದಾಗ ಮಾಡಬಹುದಾದ ವ್ಯಾಯಾಮಗಳು ನಿಮ್ಮ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಒಂದು ವೇಳೆ ನೀವು ಯೋಗ ಮಾಡಲು ಇಚ್ಛಿಸುವವರಾದರೆ, ನಿಮ್ಮ ವೈದ್ಯರ ಬಳಿ ಯೋಗದ ಬಗ್ಗೆ ಸರಿಯಾದ ಮಾಹಿತಿ ಪಡೆದು ಯಾವೆಲ್ಲ ಭಂಗಿಗಳನ್ನು ಮಾಡುವುದು ಒಳ್ಳೆಯದು ಎಂಬ ಬಗ್ಗೆ ತಿಳಿದುಕೊಳ್ಳಿ. ಆ ಮೂಲಕ ನಿಮ್ಮ ದೇಹಕ್ಕೆ ಹೆಚ್ಚಿನ ಕಿಲೋಗ್ರಾಮ್ ಅನ್ನು ಸೇರಿಸದೆ ನೀವು ಹೆಚ್ಚು ಫ್ಲೆಕ್ಸಿಬಲ್ ಆಗಿರಲು ಸಾಧ್ಯವಾಗುತ್ತದೆ.
ಆದರೆ ಅತಿಯಾಗಿ ಯೋಗ ಮಾಡುವುದು ಈ ಸಂದರ್ಭದಲ್ಲಿ ಒಳ್ಳೆಯದಲ್ಲ ಎಂಬುದು ಚೆನ್ನಾಗಿ ನೆನಪಿರಲಿ.

ಗಂಭಿರವಾಗಿ ಕರಿದ ಆಹಾರಗಳು, ಘನೀಕೃತ ಆಹಾರಗಳು, ಕೊಬ್ಬು ಮತ್ತು ಸಕ್ಕರೆ ಅಧಿಕವಾಗಿರುವ ಆಹಾರ ಅಥವಾ ಪಾನೀಯವನ್ನು ಸೇವಿಸಬೇಡಿ. ಪ್ರತಿದಿನ ಎರಡು ಲೀಟರ್ ನೀರನ್ನು ಸೇವಿಸುವುದು ಬಹಳ ಮುಖ್ಯ, ಮೊದಮೊದಲು ಪ್ರಗ್ನೆನ್ಸಿಯ ಆರಂಭಿಕ ದಿನಗಳಲ್ಲಿ ನಿಮಗೆ ಮುಂಜಾವಿನ ಕಾಯಿಲೆಗಳು ಇರಬಹುದು ಮತ್ತು ಅದು ನಿಮ್ಮನ್ನು ಡಿಹೈಡ್ರೇಟ್ ಮಾಡುವ ಸಾಧ್ಯತೆಗಳಿರುತ್ತದೆ. ಹಾಗಾಗಿ ನಿಮ್ಮ ವೈದ್ಯರ ಬಳಿ ಪರೀಕ್ಷಿಸಿ ಮತ್ತು ನೀವು ಹೇಗೆ ಕಳೆದುಕೊಂಡಿರುವ ದ್ರವಾಂಶವನ್ನುಪುನಃ ಪಡೆಯಬಹುದು ಎಂಬ ಬಗ್ಗೆ ಚರ್ಚಿಸಿ.

ಸರಿಯಾದ ಪ್ರಮಾಣದಲ್ಲಿ ಗರ್ಭಿಣಿಯರು ತೂಕ ಹೆಚ್ಚಳವಾಗುವುದು ಬಹಳ ಮುಖ್ಯ, ಸಹಜವಾದ ಪ್ರಮಾಣದಲ್ಲಿ ತೂಕ ಹೆಚ್ಚಳವಾಗದೇ ಅತಿಯಾಗಿ ತೂಕ ಹೆಚ್ಚಿಸಿಕೊಂಡರೆ ಅದು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಕೆಲವು ರೀತಿಯ ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ.

ಉದಾಹರಣೆಗೆ- ಗರ್ಭಾವಸ್ಥೆಯ ಮಧುಮೇಹ, ಅಧಿಕ ಒತ್ತಡದ ಅಸ್ವಸ್ಥತೆಗಳು ಮತ್ತು ಪೂರ್ವ-ಅವಧಿಯಯಲ್ಲೇ ಡೆಲಿವರಿ ಆಗುವುದು ಇತ್ಯಾದಿ ಇನ್ನು ಕಡಿಮೆ ತೂಕವು ಶಿಶುಗಳಲ್ಲಿ ಕಡಿಮೆ-ತೂಕದ ಮಗುವಿನ ಜನನಕ್ಕೆ ಕಾರಣವಾಗಬಹುದು.

ಹಾಗಾಗಿ, ಈ ಮಹತ್ವದ ವಿಚಾರವನ್ನು ನಿಮ್ಮ ವೈದ್ಯರ ಬಳಿ ಚರ್ಚಿಸಿ ಮತ್ತು ಪ್ರಸವಪೂರ್ವ ಪರೀಕ್ಷೆಗಳಿಗೆ ನಿಯಮಿತವಾಗಿ ತೆರಳಿ ಮತ್ತು ಸಹಜವಾದ ತೂಕ ಹೆಚ್ಚಳದ ಬಗ್ಗೆ ಪರೀಕ್ಷೆ ಮಾಡಿಕೊಳ್ಳಿ. ಆದರೆ, ಇದೇ ತೂಕದ ವಿಚಾರವನ್ನು ಒತ್ತಡಕ್ಕೆ ತೆಗೆದುಕೊಳ್ಳಬೇಡಿ. ಆರೋಗ್ಯಯುತ ಆಹಾರ ಸೇವಿಸಿ, ಆರಾಮವಾಗಿರಿ,ಸಕ್ರಿಯವಾಗಿರಿ ಮತ್ತು ಗರ್ಭಿಣಿಯರಲ್ಲಿ ತೂಕದ ವಿಚಾರಕ್ಕೆ ನಿಮ್ಮ ವೈದ್ಯರು ಹೇಳುವ ಸಲಹೆಗಳನ್ನು ಪಾಲಿಸಿ ಮತ್ತು ಒಟ್ಟಾರೆ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳಿ.

Read more about: weight pregnancy
English summary

What You Should Know About Weight Gain During Pregnancy

Weight gain during pregnancy is common. But you need to check if the weight gain is ideal or not.If you belong to the healthy weight range during pre-pregnancy, then your weight gain should ideally be between 11.5 and 16 kg. If your pre-pregnancy weight is more than the healthy weight range, you should gain less.
X
Desktop Bottom Promotion