For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಇದೆಲ್ಲಾ ಮಾಮೂಲು! ಸುಮ್ ಸುಮ್ನೆ ಟೆನ್ಷನ್ ಮಾಡಿಕೊಳ್ಳಬೇಡಿ!!

|

ಮಹಿಳೆಯ ತನ್ನ ಪತಿ ಹಾಗೂ ಕುಟುಂಬದವರಿಗೆ ನೀಡುವಂತಹ ಸಂತೋಷದ ವಿಷಯವೇ ತಾನು ತಾಯಿಯಾಗುತ್ತಿದ್ದೇನೆ ಎನ್ನುವುದು. ಇಂತಹ ಸಂದರ್ಭದಲ್ಲಿ ಮಹಿಳೆಯ ಆರೈಕೆಗೆ ಕುಟುಂಬದವರು ನಾ ಮುಂದು, ತಾಮುಂದು ಎಂದು ಬರುವರು. ಇಷ್ಟು ಮಾತ್ರವಲ್ಲದೆ ಮಹಿಳೆಗೆ ಸಾಕಷ್ಟು ಸಲಹೆಗಳನ್ನು ಕೂಡ ನೀಡುವರು. ಬಂದಿರುವಂತಹ ಸಾವಿರಾರು ಸಲಹೆ ಹಾಗೂ ಸೂಚನೆಗಳಲ್ಲಿ ಯಾವುದನ್ನು ಪಾಲಿಸುವುದು ಮತ್ತು ಬಿಡುವುದು ಎನ್ನುವ ಗೊಂದಲಕ್ಕೆ ಗರ್ಭಿಣಿ ಮಹಿಳೆ ಸಿಲುಕುವುದು ಖಚಿತ. ಇದರಿಂದಾಗಿ ಗರ್ಭಿಣಿ ಮಹಿಳೆಯು ತುಂಬಾ ಗೊಂದಲಕ್ಕೆ ಒಳಗಾಗುವಳು. ಜನರು ಸಲಹೆ ನೀಡುವುದು ನಿಮ್ಮ ಹಾಗೂ ಮಗುವಿನ ಆರೋಗ್ಯದ ದೃಷ್ಟಿಯಿಂದ.

ಗರ್ಭಧಾರಣೆಯೆನ್ನುವುದು ಮಹಿಳೆಯ ಜೀವನದಲ್ಲಿ ಬರುವಂತಹ ಒಂದು ಸುಂದರ ಹಾಗೂ ತುಂಬಾ ಬದಲಾವಣೆ ಉಂಟು ಮಾಡುವಂತಹ ಘಟ್ಟ. ಗರ್ಭಧರಿಸುವಂತಹ ಮಹಿಳೆಯರಲ್ಲಿ ಹೆಚ್ಚಾಗಿ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು ಕಂಡುಬರುವುದು. ಇದರಿಂದ ಕೆಲವು ಮಹಿಳೆಯರು ಭಯಭೀತರಾಗುವರು. ಆದರೆ ಇಂತಹ ಸಂದರ್ಭದಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗದೆ ತುಂಬಾ ಆರಾಮವಾಗಿ ಇರಬೇಕು. ಹುಟ್ಟುವ ಮಗುವಿಗೆ ಕೂಡ ಹಲವಾರು ತಯಾರಿ ನಡೆಯುತ್ತಿರುತ್ತದೆ. ಆದರೆ ಮಹಿಳೆಯ ದೇಹದಲ್ಲಿ ಕೆಲವೊಂದು ವಿಚಿತ್ರ ಹಾಗೂ ವಿಭಿನ್ನ ಬದಲಾವಣೆಗಳು ಆಗುವುದು.

health care tips in kannada

ಇದರಿಂದ ಹಲವಾರು ಸಮಸ್ಯೆಗಳನ್ನು ಗರ್ಭ ಧರಿಸಿರುವ ಮಹಿಳೆಯು ಎದುರಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ತುಂಬಾ ಎಚ್ಚರಿಕೆ ವಹಿಸಿ, ಗರ್ಭಿಣಿ ಮಹಿಳೆ ಹಾಗೂ ಮಗುವಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಗರ್ಭಿಣಿ ಮಹಿಳೆಯರಿಗೆ ಏನಾದರೂ ಸಮಸ್ಯೆಯಾಗುತ್ತಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣ ವೈದ್ಯರನ್ನು ಭೇಟಿಯಾಗುವುದು ತುಂಬಾ ಒಳ್ಳೆಯದು. ಗರ್ಭಧರಿಸಿರುವ ಮಹಿಳೆಯರು ಯಾವೆಲ್ಲಾ ಸಮಸ್ಯೆಗಳನ್ನು ಎದುರಿಸಬಹುದು ಎಂದು ಈ ಲೇಖನದ ಮೂಲಕ ನಿಮಗೆ ತಿಳಿಸಿಕೊಡಲಿದ್ದೇವೆ. ಇದರಿಂದ ನೀವು ಮತ್ತಷ್ಟು ಎಚ್ಚರಿಕೆ ವಹಿಸಿಕೊಂಡು ಗರ್ಭಧಾರಣೆಯ ಸಮಯವನ್ನು ತುಂಬಾ ಆರಾಮವಾಗಿ ಕಳೆಯಬಹುದು.

ಸೆಳೆತ

ಋತುಚಕ್ರದ ಸಮಯದಲ್ಲಿ ಆಗುತ್ತಿದ್ದಂತಹ ಸೆಳೆತವು ಈಗ ಕೂಡ ಕಾಣಿಸಿಕೊಳ್ಳಬಹುದು. ಆದರೆ ಗರ್ಭ ಧರಿಸಿದ ವೇಳೆ ಉಂಟಾಗುವ ಸೆಳೆತವು ಸಾಮಾನ್ಯವಾಗಿರುವುದು. ಮೊದಲ ಮೂರು ತಿಂಗಳಲ್ಲಿ ಇದು ಎಲ್ಲರಲ್ಲೂ ಕಂಡುಬರುವುದು. ಗರ್ಭಕೋಶದಲ್ಲಿ ಅತಿಯಾಗಿ ನೀರು ತುಂಬಿಕೊಂಡ ಪರಿಣಾಮ ಹೀಗೆ ಸೆಳೆತವು ಉಂಟಾಗುವುದು. ಭ್ರೂಣದ ತೂಕ ಕೂಡ ಸೆಳೆತಕ್ಕೆ ಕಾರಣವಾಗುವುದು.
ಯಾವಾಗ ಚಿಂತಿಸಬೇಕು: ಸೆಳೆತವು ದೇಹದ ಒಂದು ಭಾಗದಲ್ಲಿ ಮಾತ್ರ ಆಗುತ್ತಲಿದ್ದರೆ ಆಥವಾ ಸೆಳೆತದೊಂದಿಗೆ ರಕ್ತಸ್ರಾವವಾದರೆ ಆಗ ವೈದ್ಯರನ್ನು ಭೇಟಿಯಾಗಿ. ಗರ್ಭಧಾರಣೆಯ ಅಂತಿಮ ಹಂತದಲ್ಲಿ ಸೆಳೆತ ಕಾಣಿಸುವುದು ಚಿಂತೆಯ ವಿಚಾರ.

ಚರ್ಮದ ಸಮಸ್ಯೆಗಳು

ಗರ್ಭಧಾರಣೆಯಾದಾಗ ದೇಹದಲ್ಲಿ ಹಲವಾರು ರೀತಿಯ ಹಾರ್ಮೋನು ವೈಪರಿತ್ಯ ಉಂಟಾಗುವುದು. ದೇಹದ ಅತೀ ದೊಡ್ಡ ಅಂಗವಾಗಿರುವ ಚರ್ಮದ ಮೇಲೆ ಕೂಡ ಇದರ ಪರಿಣಾಮ ಬೀರುವುದು ಖಚಿತ. ಮೊದಲ ತ್ರೈಮಾಸಿಕದಲ್ಲಿ ನಿಮಗೆ ದೇಹದಲ್ಲಿ ಇಸುಬಿನಂತಹ ಸಮಸ್ಯೆ ಕಂಡುಬರಬಹುದು. ಚರ್ಮವು ತುಂಬಾ ತುರಿಸಲು ಆರಂಭಿಸಬಹುದು. ಇದರಿಂದ ಚರ್ಮದಲ್ಲಿ ಕಜ್ಜಿಗಳಂತೆ ಬೀಳಬಹುದು. ಇದೆಲ್ಲವೂ ಸಾಮಾನ್ಯ ಮತ್ತು ಹೆರಿಗೆ ಕೆಲವೇ ತಿಂಗಳಲ್ಲಿ ಮಾಯವಾಗುವುದು. ತುರಿಕೆಗೆ ವೈದ್ಯರಿಂದ ಕ್ರೀಮ್ ಅಥವಾ

ಲೋಷನ್ ಪಡೆದುಕೊಳ್ಳಿ

ಯಾವಾಗ ಚಿಂತೆ ಮಾಡಬೇಕು: ತುರಿಕೆ ತುಂಬಾ ಜಾಸ್ತಿಯಾಗಿದ್ದರೆ ಮತ್ತು ದೇಹದ ಸಂಪೂರ್ಣ ಭಾಗಕ್ಕೆ ಆವರಿಸಿದ್ದರೆ ಇದರ ಬಗ್ಗೆ ನೀವು ವೈದ್ಯರನ್ನು ಭೇಟಿಯಾಗಿ. ಇಂತಹ ಪರಿಸ್ಥಿತಿಯನ್ನು ಒಬಸ್ಟೆಟ್ರಿಕ್ ಕೊಲೆಸ್ಟ್ರಾಸಿಸ್ ಎಂದು ಕರೆಯಲಾಗುತ್ತದೆ.

ಕುಗ್ಗುವಿಕೆ ಅಭ್ಯಾಸ

ಬ್ರಾಕ್ಸಟನ್ ಹಿಕ್ಸ್ ಕುಗ್ಗುವಿಕೆಯು ಗರ್ಭಕೋಶವು ಮಾಡುವಂತಹ ತಯಾರಿಯಾಗಿದೆ. ಹೆರಿಗೆ ವೇಳೆ ಯಾವ ರೀತಿಯಿಂದ ಕುಗ್ಗಬೇಕು ಎನ್ನುವುದನ್ನು ಇದು ಅಭ್ಯಾಸ ಮಾಡುತ್ತಿರುವುದು. ಮೊದಲ ಸಲ ಗರ್ಭಧರಿಸುತ್ತಿದ್ದರೆ ಇದು ನಿಮಗೆ ತುಂಬಾ ಕಿರಿಕಿರಿ ಉಂಟು ಮಾಡಬಹುದು. ಗರ್ಭ ಧರಿಸಿ 28 ವಾರಗಳಾದಾಗ ಇಂತಹ ಸಮಸ್ಯೆ ಬರುವುದು. ಲಯಬದ್ಧವಾಗಿ ಉಸಿರಾಡುವುದು, ನಿಮ್ಮ ಭಂಗಿ ಬದಲಾಯಿಸುವುದು ಮತ್ತು ಶೌಚಾಲಯಕ್ಕೆ ಹೋಗಿ ಬರುವುದನ್ನು ಮಾಡಬೇಕು. ಚಿಂತೆ ಯಾವಾಗ: ಪದೇ ಪದೇ ನಿಮಗೆ ಇಂತಹ ಅನುಭವವಾಗುತ್ತಲಿದ್ದರೆ ವೈದ್ಯರನ್ನು ಭೇಟಿಯಾಗಿ.

ಮೈಗ್ರೇನ್

ಗರ್ಭಧಾರಣೆ ವೇಳೆ ಮಹಿಳೆಯರು ಮೈಗ್ರೇನ್ ಸಮಸ್ಯೆಗೆ ಒಳಗಾಗುವುದು ಸಾಮಾನ್ಯ. ಗರ್ಭಧಾರಣೆ ವೇಳೆ ಹಾರ್ಮೋನು ಹೆಚ್ಚಾಗುವ ಕಾರಣದಿಂದ ಮೈಗ್ರೇನ್ ಉಂಟಾಗುವುದು. ನೀವು ಕಾಫಿ ಸೇವನೆ ಮಾಡುತ್ತಲಿದ್ದು, ಗರ್ಭ ಧರಿಸಿದ ಕಾರಣಕ್ಕಾಗಿ ತ್ಯಜಿಸಿದ್ದರೆ ಮೈಗ್ರೇನ್ ಮತ್ತಷ್ಟು ಹೆಚ್ಚಾಗುವುದು. ನಿಮಗೆ ಹೆರಿಗೆಯಾಗುತ್ತಿದ್ದಂತೆ ಅಥವಾ ಕೆಲವೇ ತಿಂಗಳಲ್ಲಿ ಮೈಗ್ರೇನ್ ಮಾಯವಾಗುವುದು. ಯಾವಾಗ ಚಿಂತೆ ಮಾಡಬೇಕು: ಎರಡನೇ ಅಥವಾ ಮೂರನೇ ತ್ರೈಮಾಸಿಕದ ವೇಳೆ ಮೈಗ್ರೇನ್ ನೊಂದಿಗೆ ಆಯಾಸವು ಕಂಡುಬರುವುದು. ಇಂತಹ ಸಮಯದಲ್ಲಿ ಚಿಂತಿಸಬೇಕು. ಇದು ಪ್ರಿಕ್ಲಾಂಪ್ಸಿಯದ ಲಕ್ಷಣವಾಗಿರಹುದು.

ಗಲ್ಲದ ಮೇಲೆ ಜೇಡನ ನಾಳಗಳು!

ಗರ್ಭಧಾರಣೆ ವೇಳೆ ಕೂದಲು ತುಂಬಾ ಕಾಂತಿಯುತ ಹಾಗೂ ಸುಂದರವಾಗಿ ಕಾಣುವುದು. ಆದರೆ ಜೇಡನ ನಾಳಗಳು ಮುಖದಲ್ಲಿ ಕಾಣಿಸಿಕೊಂಡು ಅಂದ ಕೆಡಿಸಬಹುದು. ರಕ್ತನಾಳಗಳಿಗೆ ಹೆಚ್ಚಿನ ರಕ್ತ ಸಂಚಾರವಾಗುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಅತಿಯಾದ ಒತ್ತಡದಿಂದಾಗಿ ನಾಳಗಳು ಸಿಡಿಯಬಹುದು. ಇದರಿಂದಾಗಿ ಮುಖದ ಮೇಲೆ ನಾಳಗಳು ಕಾಣಬಹುದು. ಇಂತಹ ಸಮಸ್ಯೆಯಿಂದ ಹೊರಬರಲು ನಿಮಗೆ ಕಷ್ಟವಾಗುತ್ತಿದ್ದರೆ ನೀವು ಅತಿಯಾದ ಉಷ್ಣಾಂಶ ಕಡೆಗಣಿಸಬೇಕು. ಅತಿ ಬಿಸಿ ಅಥವಾ ತಂಪು ಇದಕ್ಕೆ ಮಾರಕ. ಹೆರಿಗೆಯಾದ ಬಳಿಕ ನಿಮ್ಮ ಮುಖದ ಮೇಲಿನ ಈ ಸಮಸ್ಯೆಯು ಕಡಿಮೆಯಾಗುವುದು.

ದ್ರವ ಸೋರಿಕೆ

ಗರ್ಭಕೋಶವು ಹಿಗ್ಗುವ ಕಾರಣದಿಂದ ಇದು ಮೂತ್ರನಾಳಗಳ ಮೇಲೆ ಅತಿಯಾದ ಒತ್ತಡ ಹಾಕುವುದು. ಇದರಿಂದಾಗಿ ದ್ರವವು ಸೋರಿಕೆಯಾಗುವುದು ಸಾಮಾನ್ಯ. ಗರ್ಭಿಣಿ ಮಹಿಳೆಯ ಈ ಭಾಗವು ತುಂಬಾ ಒಣಗಿದರೆ ಆಗ ಹೆರಿಗೆಯಾಗಲಿದೆ ಎಂದು ತಿಳಿಯಬೇಕು. ಆದರೆ ಇದು ಮಲವಾಗಿರುವುದು. ಗರ್ಭಧಾರಣೆಯ ಅಂತಿಮ ಹಂತದಲ್ಲಿ ಇದು ಕಾಣಿಸಿಕೊಳ್ಳುವುದು ಸಾಮಾನ್ಯ. ಚಿಂತೆ ಯಾವಾಗ: ಈ ಜಾಗವು ತುಂಬಾ ಒಣಗಿದ್ದರೆ ಅಥವಾ ಸಾಮಾನ್ಯ ಮಲಕ್ಕಿಂತ ಇದು ಭಿನ್ನವಾಗಿದ್ದರೆ ಇದರ ಬಗ್ಗೆ ವೈದ್ಯರೊಂದಿಗೆ ಮಾತನಾಡಿ. ಅವರು ನಿಮಗೆ ಸಲಹೆ ನೀಡುವರು.

ಸ್ತನ ತೊಟ್ಟುಗಳಲ್ಲಿ ಸ್ರಾವ

ಗರ್ಭಧಾರಣೆ ವೇಳೆ ಸ್ತನ ತೊಟ್ಟುಗಳಲ್ಲಿ ಸ್ರಾವ ಕಾಣಿಸಿಕೊಳ್ಳಬಹುದು. ಗರ್ಭಧಾರಣೆಯ ವೇಳೆ ನಿಮ್ಮ ಸ್ತನದ ಗ್ರಂಥಿಗಳು ಪ್ರೌಢವಾಗುವುದು ಮತ್ತು ಹಾಲುಣಿಸಲು ಅದು ತಯಾರಾಗುವುದು. ಅತಿಯಾದ ಚಟುವಟಿಕೆಯಿಂದಾಗಿ ತೊಟ್ಟುಗಳು ದೊಡ್ಡದಾಗಿ ಸ್ರಾವ ಕಂಡುಬರಬಹುದು. ಹಾಲು ಅಥವಾ ರಕ್ತಸ್ರಾವ ಕಂಡುಬರಬಹುದು. ಗರ್ಭಧಾರಣೆಯ ದಿನಗಳಲ್ಲಿ ನಿಮ್ಮ ದೇಹವು ಗರ್ಭದಲ್ಲಿರುವ ಮಗುವಿಗೆ ಸರಿಯಾದ ಪೋಷಣೆ ನೀಡಬೇಕು ಎನ್ನುವುದನ್ನು ಗಮನಿಸಿ.

ತ್ವಚೆಯಲ್ಲಿ ಮೊಡವೆ

ಜಿಡ್ಡಿನ ತ್ವಚೆಯನ್ನು ಹೊಂದಿರುವವರಿಗೆ ಈ ಸಂದರ್ಭದಲ್ಲಿ ಮೊಡವೆ ಸಾಮಾನ್ಯವಾಗಿರುತ್ತದೆ. ಮೇದೋ ಗ್ರಂಥಿಯಲ್ಲಿ ಹಾರ್ಮೋನು ಪ್ರೊಜೆಸ್ಟರಾನ್ ಅಧಿಕ ಜಿಡ್ಡನ್ನು ಉತ್ಪಾದಿಸುತ್ತದೆ. ಇದರಿಂದ ತ್ವಚೆಯು ಮುರಿತಕ್ಕೊಳಗಾಗಿ ಮೊಡವೆ ಕಾಣಿಸಿಕೊಳ್ಳುತ್ತದೆ.

ಆರೋಗ್ಯವಂತ ಹೊಳಪುಳ್ಳ ತ್ವಚೆ

ಗರ್ಭಾವಸ್ಥೆ ಸಂದರ್ಭದಲ್ಲಿ ಸ್ತ್ರೀಯ ದೇಹವು ಹಲವಾರು ಹಾರ್ಮೋನು ಬದಲಾವಣೆಗಳಿಗೆ ಒಳಗಾಗುತ್ತದೆ. ಹಾರ್ಮೋನು ಹಂತಗಳ ಈ ಬದಲಾವಣೆಯಿಂದಾಗಿ ತ್ವಚೆಯು ಎಣ್ಣೆಯ ಉತ್ಪನ್ನವನ್ನು ಅಧಿಕವಾಗಿಸುತ್ತದೆ ಮತ್ತು ಇದರಿಂದ ತ್ವಚೆಯು ಹೊಳೆಯುತ್ತದೆ. ಹಾರ್ಮೋನುಗಳ ಈ ಬದಲಾವಣೆಯಿಂದಾಗಿ ತ್ವಚೆಯು ಸುಂದರವಾಗಿ ಹೊಳೆಯುತ್ತದೆ.

ನಸುನೀಲಿ ಬಣ್ಣದ ರಕ್ತನಾಳ ಕಾಣಿಸಿಕೊಳ್ಳಬಹುದು!

ಗರ್ಭಿಣಿಯಾಗಿರುವಾಗ ನಿಮ್ಮ ಸ್ತನಗಳ ಮೇಲೆ ನಸುನೀಲಿ ಬಣ್ಣದ ರಕ್ತನಾಳಗಳು ಎದ್ದು ಕಾಣಿಸಿಕೊಳ್ಳಬಹುದು. ಹೆಚ್ಚುವರಿ ರಕ್ತದ ಅರಿವನ್ನು ಸರಿಯಾಗಿಸಲು ಅವುಗಳು ಹಿಗ್ಗಿಕೊಳ್ಳುತ್ತದೆ.

ಸ್ತನದ ತೊಟ್ಟು

ಗರ್ಭಧಾರಣೆ ವೇಳೆ ಸ್ತನದ ತೊಟ್ಟು ದೊಡ್ಡದಾಗುತ್ತದೆ. ಈ ಭಾಗದಲ್ಲಿ ಗ್ರಂಥಿಗಳು ಹಿಗ್ಗುವ ಕಾರಣದಿಂದಾಗಿ ಕೆಲವು ಮಹಿಳೆಯರ ಸ್ತನದ ತೊಟ್ಟು ಗಡಸು ಮತ್ತು ದೊಡ್ಡದಾಗುತ್ತದೆ.

English summary

What are the things that seem scary during pregnancy?

If you are pregnant, you will always encounter people who tell you to relax and not worry about anything. This is easier said than done. Pregnancy is synonymous with worry and tensions. A new mother constantly worries if her baby is doing well within her and if the baby is healthy. Today, we will be talking about a few things that may cause concern when you are expecting. These things, though scary, are perfectly normal to happen during pregnancy....
X
Desktop Bottom Promotion