ಗರ್ಭದಲ್ಲಿ ಬೆಳೆಯುತ್ತಿರುವ ಮಗು ಹೆಣ್ಣಾ? ತಿಳಿದುಕೊಳ್ಳುವ ಕುತೂಹಲವಿದೆಯೇ?

Subscribe to Boldsky

ಗರ್ಭದಲ್ಲಿ ಬೆಳೆಯುತ್ತಿರುವ ಮಗು ಯಾವುದೆಂದು ಹೇಳಲು ಕಷ್ಟ. ಏಕೆಂದರೆ ಪ್ರತಿಯೊಬ್ಬ ಗರ್ಭಿಣಿಯ ದೈಹಿಕ ಗುಣಲಕ್ಷಣಗಳು ವಿಭಿನ್ನವಾಗಿರುತ್ತವೆ. ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ಹೆಣ್ಣು ಅಥವಾ ಗಂಡು ಎಂದು ನಿರ್ಧರಿಸಲು ಸಹಾಯ ಮಾಡುವುದು ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಎಂದು ಹೇಳಬಹುದು. ಈ ಆಧುನಿಕ ತಂತ್ರಜ್ಞಾನದಿಂದ ಮಗುವಿನ ಲಿಂಗ ಗುರುತಿಸಬೇಕು ಎಂದರೆ ಗರ್ಭಧಾರಣೆಯಾಗಿ 20 ವಾರ ತುಂಬಿರಬೇಕು. ಈ ಸಮಯಕ್ಕಿಂತ ಮೊದಲು ನಿರ್ಧರಿಸಲು ಸಾಧ್ಯವಿಲ್ಲ.

ವೈಜ್ಞಾನಿಕ ಪುರಾವೆಗಳ ಸಹಾಯ ವಿಲ್ಲದೆ ಕೇವಲ ಸಾಂಪ್ರದಾಯಿಕ ಚಿಹ್ನೆಗಳ ಅಡಿಯಲ್ಲಿ ಗರ್ಭದಲ್ಲಿ ಬೆಳೆಯುತ್ತಿರುವ ಮಗು ಹೆಣ್ಣಾ? ಅಥವಾ ಗಂಡಾ? ಎನ್ನುವುದನ್ನು ನಿರ್ಧರಿಸಲು ಸಾಧ್ಯವಿದೆ ಎಂದು ಹೇಳಲಾಗುವುದು. ಕೆಲವೊಮ್ಮೆ ವೈಜ್ಞಾನಿಕವಾಗಿ ಸಹಾಯ ಮಾಡದ ಸಂಗತಿಗಳು ಆಧ್ಯಾತ್ಮ ಹಾಗೂ ಸಂಪ್ರದಾಯಗಳ ಅಡಿಯಲ್ಲಿ ಸುಲಭವಾಗಿ ನಿರ್ವಹಿಸಲಾಗುವುದು ಎಂದು ಅನೇಕ ಸಂಗತಿಗಳನ್ನು ಸಾಧಿಸಿ ತೋರಿಸಲಾಗಿವೆ. ಹಾಗೆಯೇ ತಾಯಿಯ ಗರ್ಭದಲ್ಲಿ ಬೆಳೆಯುತ್ತಿರುವ ಮಗು ಹೆಣ್ಣಾ? ಎನ್ನುವುದನ್ನು ತಿಳಿದುಕೊಳ್ಳಲು ಸಾಧ್ಯವಿದೆ ಎನ್ನುವುದರ ಕುರಿತು ಲೇಖನದಲ್ಲಿ ಹೇಳಲಾಗಿದೆ. ತಾಯಿಯ ಮಡಿಲೊಳಗೆ ಬೆಚ್ಚಗಿನ ಭದ್ರತೆಯಲ್ಲಿ ಬೆಳೆಯುವ ಮಗು ಹೆಣ್ಣು ಎಂದು ನಿರ್ಧರಿಸಲು ಪ್ರಮುಖವಾಗಿ ಎಂಟು ಚಿಹ್ನೆಗಳಿರುತ್ತವೆ ಎಂದು ಹೇಳಲಾಗುವುದು. ಹಾಗಾದರೆ ಆ ಎಂಟು ಚಿಹ್ನೆಗಳು ಮತ್ತು ಅವುಗಳ ವಿವರಣೆಯನ್ನು ತಿಳಿಯೋಣ ಬನ್ನಿ...

ಮುಂಜಾನೆಯ ಕಾಯಿಲೆ

ಮುಂಜಾನೆಯ ಕಾಯಿಲೆ

ಮುಂಜಾನೆಯ ಆರೋಗ್ಯ ಸಮಸ್ಯೆ ಅಥವಾ ಅತಿಯಾದ ಅಸಹನೀಯ ಸ್ಥಿತಿಯು ಗರ್ಭದಲ್ಲಿ ಹೆಣ್ಣು ಮಗುವಿನ ಬೆಳವಣಿಗೆಯನ್ನು ಸೂಚಿಸುತ್ತವೆ. ಇತ್ತೀಚೆಗೆ ನಡೆಸಿದ ಕೆಲವು ಸಂಶೋಧನೆಯ ಪ್ರಕಾರ ಮುಂಜಾನೆ ಗರ್ಭಿಣಿಯರಿಗೆ ಆರೋಗ್ಯದಲ್ಲಿ ಅಸಹನೀಯತೆ ಅಥವಾ ಅಸ್ವಸ್ಥತೆ ಕಾಣಿಸಿಕೊಂಡರೆ ಅದು ಹೆಣ್ಣು ಮಗುವಿನ ಬೆಳವಣಿಗೆ ಎಂದು ಹೇಳಲಾಗುವುದು. ಅಲ್ಲದೆ ಗರ್ಭದಲ್ಲಿ ಹೆಣ್ಣು ಮಗುವಿನ ಬೆಳವಣಿಗೆಯಾಗುತ್ತಿದ್ದರೆ ಮಹಿಳೆಯರು ಹೆಚ್ಚು ಉರಿಯೂತವನ್ನು ಅನುಭವಿಸುತ್ತಾರೆ ಎಂದು ಸಹ ಹೇಳುತ್ತಾರೆ. ಮುಂಜಾನೆ ಹೆಚ್ಚು ಅಸ್ವಸ್ಥತೆ ಕಾಣಿಸಿಕೊಳ್ಳುವುದು ಹೆಣ್ಣು ಮಗುವಿನ ಬೆಳವಣಿಗೆಯ ಸಂಕೇತ.

Most Read: ಗರ್ಭಾವಸ್ಥೆಯಲ್ಲಿರುವ ಮಹಿಳೆಯರು ಆದಷ್ಟು ಬೀಟ್‌ರೂಟ್ ಸೇವಿಸಬೇಕು

ಅತಿಯಾದ ಭಾವನೆಗಳ ಬದಲಾವಣೆ

ಅತಿಯಾದ ಭಾವನೆಗಳ ಬದಲಾವಣೆ

ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಬದಲಾವಣೆಯಿಂದ ಹೆಚ್ಚು ಭಾವನಾತ್ಮಕ ವ್ಯತ್ಯಾಸಗಳು ಕಾಣಿಸಿಕೊಳ್ಳುತ್ತವೆ. ಕೆಲವು ಮಹಿಳೆಯರಿಗೆ ಹೆಣ್ಣು ಭ್ರೂಣದ ಬೆಳವಣಿಗೆಯಾಗುತ್ತಿದ್ದರೆ ಈಸ್ಟ್ರೊಜೆನ್ ಮಟ್ಟ ಹೆಚ್ಚುವುದು. ಆಗ ಭಾವನೆಗಳಲ್ಲಿ ಅತಿಯಾದ ವ್ಯತ್ಯಾಸ ಉಂಟಾಗುವುದು ಎನ್ನಲಾಗುತ್ತದೆ. ಈ ಸಿದ್ಧಾಂತ ಯಾವುದೇ ಸಂಶೋಧನೆಯನ್ನು ಬೆಂಬಲಿಸುವುದಿಲ್ಲ. ಸಾಮಾನ್ಯವಾಗಿ ಹಾರ್ಮೋನ್‍ಗಳು ಪ್ರಸವದ ನಂತರ ಹಾಗೂ ವಾತಾವರಣಕ್ಕೆ ಅನುಗುಣವಾಗಿ ಬದಲಾವಣೆ ಕಾಣುವುದು ಎಂದು ಹೇಳಲಾಗುತ್ತದೆ.

ಸೊಂಟದ ಸುತ್ತ ತೂಕ ಹೆಚ್ಚುವುದು

ಸೊಂಟದ ಸುತ್ತ ತೂಕ ಹೆಚ್ಚುವುದು

ಗರ್ಭಾವಸ್ಥೆಯಲ್ಲಿ ಹೆಣ್ಣು ಮಗುವಿನ ಬೆಳವಣಿಗೆಯಾಗುತ್ತಿದೆ ಎಂದರೆ ತಾಯಿಯ ಮಧ್ಯ ಅಥವಾ ಸೊಂಟದ ಸುತ್ತಲೂ ಅಧಿಕ ತೂಕ ಸಂಗ್ರಹವಾಗುವುದು. ಈ ಸಂಕೇತವು ಹೆಣ್ಣು ಮಗುವಿನ ಸಂಕೇತ ಹಾಗೂ ಹೊಟ್ಟೆಯ ಮುಂಭಾಗದಲ್ಲಿ ಹೆಚ್ಚಿನ ತೂಕ ಕಾಣಿಸಿಕೊಂಡರೆ ಅದು ಗಂಡು ಮಗುವಿನ ಬೆಳವಣಿಗೆ ಎಂದು ಅಂದಾಜಿಸಲಾಗುವುದು. ಗರ್ಭಾವಸ್ಥೆಯಲ್ಲಿ ಮಹಿಳೆಯ ತೂಕ ಹೆಚ್ಚುವುದು ಅವರ ದೇಹ ಪ್ರಕಾರವನ್ನು ಅವಲಂಬಿಸಿರುತ್ತದೆ.

Most Read: ಗರ್ಭಿಣಿಯರಿಗೆ ಕಾಡುವ ಯೋನಿ ವಿಸರ್ಜನೆ ಸಮಸ್ಯೆ- ಇದಕ್ಕೆ ಕಾರಣವೇನು?

ಹೊಟ್ಟೆ ಮೇಲ್ಭಾಗದಲ್ಲಿ ಇರುವುದು

ಹೊಟ್ಟೆ ಮೇಲ್ಭಾಗದಲ್ಲಿ ಇರುವುದು

ಹೆಣ್ಣು ಮಗುವಿನ ಬೆಳವಣಿಗೆಯಾಗುತ್ತಿದ್ದರೆ ತಾಯಿಯ ಹೊಟ್ಟೆಯ ಮೇಲ್ಭಾಗ ಹೆಚ್ಚಾಗಿ ಕಾಣುವುದು. ಈ ಸಂಕೇತವು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಗರ್ಭಿಣಿಯ ದೇಹ ಹಾಗೂ ಹೊಟ್ಟೆಯ ಬದಲಾವಣೆಯು ದೇಹದ ಪ್ರಕಾರ, ತೂಕದ ಹೆಚ್ಚಳ, ಸ್ನಾಯುವಿನ ಬಲಗಳನ್ನು ಒಳಗೊಂಡಿರುತ್ತದೆ.

ಸಿಹಿ ತಿಂಡಿಯ ಬಯಕೆ

ಸಿಹಿ ತಿಂಡಿಯ ಬಯಕೆ

ಗರ್ಭಿಣಿಯರಿಗೆ ಸಾಮಾನ್ಯವಾಗಿ ಬಾಯಿರುಚಿಯ ಬದಲಾವಣೆ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಗರ್ಭಿಣಿ ಹೆಚ್ಚು ಸಿಹಿಯನ್ನು ತಿನ್ನಲು ಬಯಸಿದರೆ ಅದು ಹೆಣ್ಣು ಭ್ರೂಣದ ಬೆಳವಣಿಗೆಯ ಸಂಕೇತ ಎಂದು ಹೇಳಲಾಗುವುದು. ಉಪ್ಪು ತಿನ್ನುವ ಬಯಕೆಯಾದರೆ ಅದು ಗಂಡು ಮಗುವಿನ ಬೆಳವಣಿಗೆಯ ಸಂಕೇತ ಎಂದು ಕೆಲವರು ಹೇಳುತ್ತಾರೆ. ಗರ್ಭಾವಸ್ಥೆಯಲ್ಲಿ ಆಹಾರದ ಕಡುಬಯಕೆಗಳು ಮಗುವಿನ ಲಿಂಗವನ್ನು ಸೂಚಿಸುತ್ತವೆ ಎಂದು ಹೇಳಲು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.

Most Read: ಗರ್ಭಾವಸ್ಥೆಯಲ್ಲಿ 'ಮಧುಮೇಹ' ಸಮಸ್ಯೆ ಇದ್ದರೆ-ಪಥ್ಯಾಹಾರ ಹೀಗಿರಲಿ

ಒತ್ತಡದ ಮಟ್ಟ

ಒತ್ತಡದ ಮಟ್ಟ

ಮಹಿಳೆಯರಲ್ಲಿರುವ ಒತ್ತಡದ ಮಟ್ಟವು ಮಗುವಿನ ಲೈಂಗಿಕತೆಯನ್ನು ಪ್ರಭಾವಿಸುತ್ತದೆ. 2012ರ ಅಧ್ಯಯನದ ಪ್ರಕಾರ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ನ ಮಟ್ಟ ಹೆಚ್ಚಾಗಿದ್ದರೆ ಹೆಣ್ಣು ಮಗುವಿಗೆ ಜನ್ಮ ನೀಡುವರು ಎಂದು ಹೇಳಲಾಗುತ್ತದೆ. ಮಹಿಳೆಯರಲ್ಲಿ ಮಾನಸಿಕ ಒತ್ತಡ ಕಡಿಮೆ ಪ್ರಮಾಣದಲ್ಲಿ ಇದ್ದರೆ ಗಂಡು ಮಗು ಜನಿಸುವುದು ಎನ್ನಲಾಗುವುದು. 2013ರ ಅಧ್ಯಯನದ ಪ್ರಕಾರ ಗ್ರೀಕ್ ದ್ವೀಪ ಜಾಕಿಂಟೋಸ್ ಅಲ್ಲಿ ಭೂಕಂಪನ ಸಂಭವಿಸಿತು. ಇದಾದ ನಂತರ ಪುರುಷರ ಜನನ ಪ್ರಮಾಣ ಕುಸಿತ ಕಂಡಿತು. ಇದಕ್ಕೆ ಕಾರಣ ದ್ವೀಪದ ಸಮುದಾಯದ ಜನರು ಅತ್ಯಂತ ಆತಂಕ ಹಾಗೂ ಒತ್ತಡಕ್ಕೆ ಒಳಗಾಗಿದ್ದರು. ಅದರ ಪರಿಣಾಮ ಜನನದ ಅನುಪಾತದ ಮೇಲೆ ಪ್ರಭಾವ ಬೀರಿತು ಎಂದು ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಎಣ್ಣೆಯುಕ್ತ ಚರ್ಮ ಮತ್ತು ಮಂಕಾದ ಕೂದಲು

ಎಣ್ಣೆಯುಕ್ತ ಚರ್ಮ ಮತ್ತು ಮಂಕಾದ ಕೂದಲು

ಗರ್ಭಿಣಿಯ ಚರ್ಮವು ಎಣ್ಣೆಯುಕ್ತವಾಗಿದ್ದು, ಕೂದಲು ಮಂಕಾಗಿದ್ದರೆ ಅದು ಹೆಣ್ಣು ಭ್ರೂಣದ ಬೆಳವಣಿಗೆಯ ಲಕ್ಷಣ ಎಂದು ಪರಿಗಣಿಸಲಾಗುವುದು. ಈ ನಂಬಿಕೆಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಆದರೆ ಇನ್ನೊಂದು ವಿಚಾರದಡಿಯಲ್ಲಿ ಅಂದರೆ ಗರ್ಭಾವಸ್ಥೆಯಲ್ಲಿ ಎಣ್ಣೆಯುಕ್ತ ತ್ವಚೆ ಹಾಗೂ ಮಂಕಾದ ಕೂದಲುಗಳು ಹಾರ್ಮೋನ್‍ಗಳ ವ್ಯತ್ಯಾಸ ಹಾಗೂ ಆಹಾರದಲ್ಲಿ ಉಂಟಾದ ಬದಲಾವಣೆಯೇ ಕಾರಣವಾಗಿರುತ್ತದೆ ಎಂದು ಹೇಳಲಾಗುವುದು.

ಮಗುವಿನ ಹೃದಯದ ಬಡಿತ

ಮಗುವಿನ ಹೃದಯದ ಬಡಿತ

ಗಂಡು ಮಗುವಿನ ಹೃದಯದ ಬಡಿತವು ಹೆಣ್ಣು ಮಗುವಿನ ಹೃದಯ ಬಡಿತಕ್ಕಿಂತ ಕಡಿಮೆ ಇರುತ್ತದೆ ಎಂದು ಹೇಳುತ್ತಾರೆ. ಮಗುವಿನ ಹೃದಯ ಬಡಿತ ತೀವ್ರವಾಗಿದ್ದರೆ ಅದು ಹೆಣ್ಣು ಮಗುವಿನ ಬೆಳವಣಿಗೆ ಎಂದು ಕೆಲವರು ನಂಬುತ್ತಾರೆ. ಆದರೆ ದಶಕಗಳ ಹಿಂದೆ ಗಂಡು ಮತ್ತು ಹೆಣ್ಣು ಮಗುವಿನ ಹೃದಯ ಬಡಿತದಲ್ಲಿ ಯಾವುದೇ ಮಹತ್ತರವಾದ ವ್ಯತ್ಯಾಸವನ್ನು ಕಂಡುಹಿಡಿಯಲಿಲ್ಲ ಎಂದು ಹೇಳಲಾಗುವುದು.

For Quick Alerts
ALLOW NOTIFICATIONS
For Daily Alerts

    English summary

    What are the signs of having a girl?

    Friends and family may point out signs of having a girl or boy, but most of these will probably be based on folklore rather than science. An ultrasound at 20 weeks into the pregnancy is the most reliable way to tell a baby's sex. This article discusses some of the traditionally held signs that someone is having a girl, as well as whether they have any scientific evidence to support them.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more