For Quick Alerts
ALLOW NOTIFICATIONS  
For Daily Alerts

ಮಹಿಳೆಯರಿಗೆ ಸಂತಾನಭಾಗ್ಯ ಕರುಣಿಸುವ ಆಹಾರಗಳು

|

ಆಧುನಿಕ ಯುಗದಲ್ಲಿ ಹಲವಾರು ಕಾರಣಗಳಿಂದ ಪುರುಷರು ಹಾಗೂ ಮಹಿಳೆಯರಲ್ಲಿ ಫಲವತ್ತತೆಯು ಕಡಿಮೆಯಾಗುತ್ತಾ ಇದೆ ಎಂದು ಹಲವಾರು ಅಧ್ಯಯನಗಳು ಕೂಡ ಕಂಡುಕೊಂಡಿವೆ. ಒತ್ತಡ, ಕೆಟ್ಟ ಆಹಾರ ಕ್ರಮ, ದೀರ್ಘ ಸಮಯದ ತನಕ ಕೆಲಸ ಮಾಡುತ್ತಿರುವುದು ಇತ್ಯಾದಿಗಳು ಇದಕ್ಕೆ ಕಾರಣವೆಂದು ಹೇಳಲಾಗುತ್ತಿದೆ. ನಮ್ಮ ಹಾರ್ಮೋನುಗಳು ಇಂದು ಮೊಂಡುತನ ಪ್ರದರ್ಶಿಸುತ್ತಿದೆ ಮತ್ತು ಅಸಮತೋಲನದ ಹಾರ್ಮೋನುಗಳಿಂದಾಗಿ ಫಲವತ್ತತೆ ಮೇಲೆ ಪರಿಣಾಮವಾಗುತ್ತಿದೆ. ಬೇಗನೆ ಗರ್ಭಧರಿಸಬೇಕೆಂದು ಬಯಸುವಂತಹ ಮಹಿಳೆಯು ಈ ಕೆಳಗಿನ ಆಹಾರಗಳನ್ನು ಸೇವಿಸಬೇಕು. ಇದರಲ್ಲಿ ಇರುವ ಪ್ರಮುಖ ವಿಟಮಿನ್ ಗಳು ಬೇಗನೆ ಗರ್ಭ ಧರಿಸುವಂತೆ ಮಾಡುವುದು. ಈ ಆಹಾರಗಳು ಅಂಡಾಣುವಿನ ಗುಣಮಟ್ಟ ಸುಧಾರಿಸುವುದು, ಹಾರ್ಮೋನುಗಳನ್ನು ಸಮತೋಲನದಲ್ಲಿಡುವುದು, ಗರ್ಭಕಂಠದ ಲೋಳೆ ಹೆಚ್ಚಿಸುವುದು ಮತ್ತು ಅಂಡೋತ್ಪತ್ತಿ ಸುಧಾರಣೆ ಮಾಡುವುದು.

ಇದು ಪುರುಷರಿಗೆ ತುಂಬಾ ಪರಿಣಾಮಕಾರಿ ಆಹಾರ. ಈ ಆಹಾರಗಳು ಪುರುಷರ ವೀರ್ಯದ ಗುಣಮಟ್ಟ ಹಾಗೂ ಚತುರತೆ ಹೆಚ್ಚಿಸುವುದು. ಗರ್ಭ ಧರಿಸಿದ ಬಳಿಕವೂ ಈ ಆಹಾರ ಸೇವನೆ ಮಾಡಿದರೆ ಮಗುವಿನ ಬೆಳವಣಿಗೆಗೆ ಸಹಕಾರಿ. ಈ ಲೇಖನದಲ್ಲಿ ಬೇಗನೆ ಗರ್ಭಧರಿಸಲು ನೆರವಾಗುವ ಆಹಾರದ ಬಗ್ಗೆ ತಿಳಿಸಿದ್ದೇವೆ. ಈ ಆಹಾರಗಳನ್ನು ಸೇವಿಸಿ.

ವಿಟಮಿನ್ ಸಿ ಆಹಾರಗಳು

ವಿಟಮಿನ್ ಸಿ ಆಹಾರಗಳು

ಇದು ಮಹಿಳೆಯರ ಸಂತಾನೋತ್ಪತ್ತಿಯ ಹಾರ್ಮೋನುಗಳನ್ನು ಸಮತೋಲನದಲ್ಲಿಟ್ಟುಕೊಂಡು ಪ್ರೊಜೆಸ್ಟರಾನ್ ಮಟ್ಟ ಕಡಿಮೆ ಇರುವ ಮಹಿಳೆಯರ ಫಲವತ್ತತೆ ಹೆಚ್ಚು ಮಾಡುವುದು. ಫಲವತ್ತತೆ ಇಲ್ಲದೆ ಇರುವ ಮಹಿಳೆಯರಲ್ಲೂ ಇದು ಗರ್ಭಧಾರಣೆ ಸಾಧ್ಯತೆ ಹೆಚ್ಚಿಸುವುದು. ವಿಟಮಿನ್ ಸಿ ಇರುವಂತಹ ಆಹಾರಗಳಾದ ಕಿತ್ತಳೆ, ಲಿಂಬೆ, ಬ್ರಾಕೋಲಿ, ಕ್ರಾನ್ಬೆರಿ ಮತ್ತು ಟೊಮೆಟೋ ಹೆಚ್ಚು ಸೇವಿಸಿ.

ಫಾಲಿಕ್ ಆಮ್ಲವಿರುವ ಆಹಾರಗಳು

ಫಾಲಿಕ್ ಆಮ್ಲವಿರುವ ಆಹಾರಗಳು

ಫಾಲಿಕ್ ಆಮ್ಲವಿರುವ ಆಹಾರಗಳು ಗರ್ಭಧಾರಣೆಗೆ ಮೊದಲು ಮತ್ತು ಬಳಿಕ ಅತೀ ಅಗತ್ಯವಾಗಿ ಬೇಕು. ಇದು ಫಲವತ್ತತೆ ಹೆಚ್ಚಿಸುವುದು ಮತ್ತು ಮಹಿಳೆಯರ ದೇಹವನ್ನು ಗರ್ಭಧಾರಣೆಗೆ ಸಜ್ಜುಗೊಳಿಸುವುದು. ಫಾಲಿಕ್ ಆಮ್ಲ ಹೊಂದಿರುವಂತಹ ಬ್ರಾಕೋಲಿ, ಬೀಟ್, ಶತಾವರಿ, ಪಾಲಕ ಇತ್ಯಾದಿ ಸೇವಿಸಿ.

ವಿಟಮಿನ್ ಬಿ6 ಇರುವ ಆಹಾರಗಳು

ವಿಟಮಿನ್ ಬಿ6 ಇರುವ ಆಹಾರಗಳು

ಈ ಆಹಾರಗಳೂ ಫಲವತ್ತತೆ ಹೆಚ್ಚು ಮಾಡಿ ಹಾರ್ಮೋನು ಸಮತೋಲನ ಕಾಪಾಡುವುದು. ಪ್ರೊಜೆಸ್ಟರಾನ್ ಕಡಿಮೆ ಇರುವ ಮಹಿಳೆಯರು ವಿಟಮಿನ್ ಬಿ6 ಇರುವ ಆಹಾರ ಸೇವಿಸಬೇಕು. ಬಾಳೆಹಣ್ಣು, ಇಡೀ ಧಾನ್ಯಗಳು ಇತ್ಯಾದಿಯಲ್ಲಿ ವಿಟಮಿನ್ ಬಿ6 ಇದೆ.

ವಿಟಮಿನ್ ಡಿ ಆಹಾರಗಳು

ವಿಟಮಿನ್ ಡಿ ಆಹಾರಗಳು

ಒಸ್ಟ್ರಾಜನ್ ಮತ್ತು ಪ್ರೊಜೆಸ್ಟರಾನ್ ಮಟ್ಟವನ್ನು ದೇಹದಲ್ಲಿ ಹೆಚ್ಚು ಮಾಡಿ ಬೇಗನೆ ಗರ್ಭಿಣಿಯಾಗುವಂತೆ ಮಾಡುವುದು. ಇದು ವೀರ್ಯದ ಗುಣಮಟ್ಟ ಹೆಚ್ಚು ಮಾಡುವುದು. ವಿಟಮಿನ್ ಡಿ ಇರುವಂತಹ ಬೀಫ್ ಯಕೃತ್, ಚೀಸ್, ಮೊಟ್ಟೆಯ ಲೋಳೆ ಮತ್ತು ಟುನಾ, ಬಂಗುಡೆ, ಸಾಲ್ಮನ್ ಇತ್ಯಾದಿ ಕೊಬ್ಬಿನಾಮ್ಲವಿರುವ ಮೀನುಗಳ ಸೇವನೆ ಮಾಡಬೇಕು.

ವಿಟಮಿನ್ ಬಿ12 ಇರುವ ಆಹಾರಗಳು

ವಿಟಮಿನ್ ಬಿ12 ಇರುವ ಆಹಾರಗಳು

ಅಂಡೋತ್ಪತ್ತಿ ಕಡಿಮೆ ಇರುವಂತಹ ಮಹಿಳೆಯರಿಗೆ ಇದು ತುಂಬಾ ಒಳ್ಳೆಯ ಆಹಾರ. ಇದು ಮಹಿಳೆಯರಲ್ಲಿ ಅಂಡೋತ್ಪತ್ತಿ ಹೆಚ್ಚಿಸುವುದು. ವಿಟಮಿನ್ ಬಿ12 ಇರುವಂತಹ ಆಹಾರಗಳು ಗರ್ಭಕೋಶದ ಪದರವನ್ನು ಸುಧಾರಣೆ ಮಾಡುವುದು. ಇದರಿಂದ ಫಲವತ್ತತೆ ಹೊಂದಿರುವ ಅಂಡಾಣುಗಳು ಸರಿಯಾದ ವಾತಾವರಣದಲ್ಲಿರುವುದು. ವಿಟಮಿನ್ ಬಿ12 ಇರುವ ಆಹಾರಗಳೆಂದರೆ ಮಾಂಸ, ಮೀನು, ಕೋಳಿ, ಮೊಟ್ಟೆ, ಮಾಂಸದ ಅಂಗಾಂಗಗಳು, ಹಾಲಿನ ಉತ್ಪನ್ನಗಳು ಇತ್ಯಾದಿ.

ಒಮೆಗಾ-3, ಒಮೆಗಾ-6 ಕೊಬ್ಬಿನಾಮ್ಲವಿರುವ ಆಹಾರಗಳು

ಒಮೆಗಾ-3, ಒಮೆಗಾ-6 ಕೊಬ್ಬಿನಾಮ್ಲವಿರುವ ಆಹಾರಗಳು

ಒಮೆಗಾ-3 ಮತ್ತು ಒಮೆಗಾ-6ನಲ್ಲಿ ಇರುವಂತಹ ಕೊಬ್ಬಿನಾಮ್ಲಗಳು ಫಲವತ್ತತೆ ಹೆಚ್ಚು ಮಾಡುವುದು. ಇದರಿಂದ ಬೇಗನೆ ಗರ್ಭ ಧರಿಸಲು ಸಾಧ್ಯವಾಗುವುದು. ಈ ಕೊಬ್ಬಿನಾಮ್ಲಗಳು ಇರುವ ಆಹಾರ ಸೇವನೆ ಮಾಡುವುದರಿಂದ ಗರ್ಭಪಾತ ತಡೆಯಬಹುದು. ಆಲಿವ್ ತೈಲ, ಫ್ಲ್ಯಾಕ್ಸ್ ಬೀಜಗಳು, ಮೀನಿನ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಅವಕಾಡೋ ಇತ್ಯಾದಿಗಳಲ್ಲಿ ಈ ಎರಡು ಕೊಬ್ಬಿನಾಮ್ಲಗಳು ಇವೆ.

English summary

Top-Foods That Help You Get Pregnant Fast

These foods improve the quality of eggs, balance hormones, increase cervical mucus and also promote ovulation. These foods are also beneficial for males, as they increase the life, motility and quality of the sperms. You must include these foods in your diet to increase your fertility, so that you can conceive faster. These foods can also be taken during your pregnancy, as they are much needed for the growing baby. In this article, we have mentioned some foods that will increase your fertility and help you in getting pregnant faster. Have a look at some best fertility foods to get pregnant faster.
X
Desktop Bottom Promotion