For Quick Alerts
ALLOW NOTIFICATIONS  
For Daily Alerts

ಸ್ತನ ಜೋತು ಬೀಳುವುದನ್ನು ತಡೆಯಲು ಸರಳ ಮನೆಮದ್ದುಗಳು

|

ಸ್ತನಗಳ ಜೋತು ಬೀಳುವುದು ಒಂದು ಪ್ರಾಕೃತಿಕ ಹಾಗೂ ಸಾಮಾನ್ಯವಾಗಿ ಎಲ್ಲ ಹೆಂಗಸರು ತಮ್ಮ ಜೀವನದಲ್ಲಿ ಅನುಭವಿಸುವ ಹತ್ತು ಹಲವಾರು ತರಹೇವಾರಿ ಬದಲಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೆಣ್ಣು ಮಕ್ಕಳಿಗೆ ತಮ್ಮ ಸೌಂದರ್ಯ ಪ್ರಜ್ಞೆ ಬಹಳ ಹೆಚ್ಚು, ಇದರಲ್ಲಿ ಅವರು ತಮ್ಮ ಅರ್ಧ ಆಯುಷ್ಯವನ್ನೇ ಕಳೆಯುತ್ತಾರೆ. ಹೀಗಾಗಿ ಅವರು ತಮ್ಮ ಆಂತರಿಕ ಹಾಗೂ ದೈಹಿಕ ಸೌಂದರ್ಯದ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ. ಅದಕ್ಕಾಗಿ ಅವರು ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧ.

ಸ್ತನ ಜೋತು ಬೀಳುವುದು ಪ್ರಮುಖ ಕಾರಣ ವಯಸ್ಸು. ನಲವತ್ತರ ನಂತರ ಹೆಚ್ಚಾಗಿ ಕಂಡುಬರುತ್ತದೆ. ಸ್ತನಗಳ ಸದೃಢತೆ ಹಾಗೂ ಚರ್ಮದ ಸುಕ್ಕು ಕಾರಣ. ಸ್ತನಗಳ ಜಗ್ಗುವಿಕೆಗೆ ಹತ್ತು ಹಲವಾರು ಕಾರಣಗಳಿವೆ. ಅದರಲ್ಲಿ ಬಸರಿಯಾದಗ, ಸ್ತನ ಪಾನ ಮಾಡುವ ಸಂದರ್ಭದಲ್ಲಿ, ಋತು ಕ್ರಿಯೆ ನಿಲ್ಲುವ ಸಂದರ್ಭದಲ್ಲಿ, ತೂಕವನ್ನು ಕಡಿಮೆ ಮಾಡುವ ಅಥವಾ ಹೆಚ್ಚಿದ ಸಂದರ್ಭದಲ್ಲಿ, ದೇಹದ ಆರೋಗ್ಯಕ್ಕೆ ತುಂಬಾ ಹೆಚ್ಚಿನ ವ್ಯಾಯಾಮ ಮಾಡುವುದರಿಂದ, ಸರಿಯಾದ ಪೋಷಕಾಂಶಗಳು ಇರದ ಆಹಾರವನ್ನು ಸೇವಿಸಿದರೆ ಹಾಗೂ ಒಳ್ಳೆಯ ಗುಣಮಟ್ಟದ ಸ್ತನ ಬಂದ ಹಾಕಿಕೊಳ್ಳದೇ ಇರುವುದು.

ಕೆಲವೊಮ್ಮೆ ಕೆಲವು ಕಾಯಿಲೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ರೀತಿಯ ಕಾಯಿಲೆಗಳಲ್ಲಿ ಮೊದಲನೆಯದು ಸ್ತನ ಕ್ಯಾನ್ಸರ್ ಅಥವಾ ಉಸಿರಾಟದ ತೊಂದರೆ ಕೊಡುವ ಕ್ಷಯರೋಗ (tuberculosis).ಇದರ ಜೊತೆಗೆ ಧೂಮಪಾನ, ಮದ್ಯಪಾನ ಹಾಗೂ ಸೋಡ ಇರುವ ಪಾನೀಯ(Pepsi,coca cola)ಗಳೂ ಕಾರಣ....

ಮಾರುಕಟ್ಟೆಯ ಕ್ರೀಮ್ ಬಳಸಬೇಡಿ

ಮಾರುಕಟ್ಟೆಯ ಕ್ರೀಮ್ ಬಳಸಬೇಡಿ

ಸ್ತನಗಳಿಗೆ ಯಾವುದೇ ತರಹದ ಮಾಂಸ ಖಂಡ ಇಲ್ಲ. ಅವುಗಳು ದೇಹದ ಕೊಬ್ಬು ಸೇರಿ ಆದಂತಹ ಅಂಗ, ಇದರ ಮೂಲ ಅಂಶ ಹಾಲು ಉತ್ಪಾದನೆ ಮಾಡುವ ಗ್ರಂತಿಯ ಜೊತೆ ಮೈತ್ರಿ ಹಾಗೂ ಎದೆಯ ಮತ್ತು ಭುಜಗಳ ಅಂಗಾಂಗಗಳು ಸಾಥ್ ನೀಡಿದ್ದಾರೆ. ಇವುಗಳ ರಕ್ಷಣೆ ಅತಿ ಮುಖ್ಯ. ಮಾರುಕಟ್ಟೆಯಲ್ಲಿ ಹತ್ತು ಹಲವು ಬಗೆಯ ಕ್ರೀಮ್ ಗಳು ಸ್ತನ ಜಗ್ಗುವಿಕೆಯನ್ನು ತಡೆಯಲು ಸಿಗುತ್ತದೆ, ಆದರೆ ಆದಷ್ಟೂ ನೈಸರ್ಗಿಕವಾಗಿಯೂ, ಆರೋಗ್ಯದ ದೃಷ್ಟಿಯಿಂದ, ಹಾಗೂ ಪೌಷ್ಟಿಕ ಆಹಾರ ಪದಾರ್ಥಗಳ ಸೇವನೆಯಿಂದ ಸರಿಪಡಿಸಿ ಕೊಳ್ಳಬಹುದು. ಈ ರೀತಿಯ ಬದಲಾವಣೆಯನ್ನು ತಡೆಯಲು ಬಹಳಷ್ಟು ನೈಸರ್ಗಿಕ ಉಪಾಯಗಳು ಇವೆ. ಅದನ್ನು ಚಾಚೂತಪ್ಪದೆ ಮಾಡುವ ಮೂಲಕ ತಮ್ಮ ಸುಂದರವಾದ ಸ್ತನಗಳನ್ನು ಕಾಪಾಡಿಕೊಳ್ಳಲು ಸಾಧ್ಯತೆ ಹೆಚ್ಚು.

ನಡಿಗೆ, ಲಘು ಓಟ, ನಾಟ್ಯದ ಮೂಲಕ ಮಾಡುವ ವ್ಯಾಯಾಮ

ನಡಿಗೆ, ಲಘು ಓಟ, ನಾಟ್ಯದ ಮೂಲಕ ಮಾಡುವ ವ್ಯಾಯಾಮ

ಸಾಮಾನ್ಯವಾಗಿ ಎಲ್ಲರೂ ವ್ಯಾಯಾಮ ಮಾಡುವುದರಿಂದ ದೇಹದಲ್ಲಿನ ಬೊಜ್ಜು ಕರಗಿಸಿ, ಮಾನಸಿಕ ಸೌಂದರ್ಯ ವೃದ್ಧಿಸಿಕೊಳ್ಳುತ್ತಾರೆ. ಬಹಳ ಸುಲಭವಾಗಿ ಮಾಡುವ ವಿಧಾನಗಳೆಂದರೆ ನಡಿಗೆ (walking),ಲಘು ಓಟ(jogging),ನಾಟ್ಯದ ಮೂಲಕ ಮಾಡುವ ವ್ಯಾಯಾಮ (aerobics),ಇತ್ಯಾದಿ. ಆದಷ್ಟೂ ಸ್ತನಗಳ ಸದೃಢವಾಗಿ ಇರುವಂತಹ ಹಾಗೂ ಎದೆಯ ಅಕ್ಕ ಪಕ್ಕದ ಅಂಗಾಂಗಗಳಿಗೆ ಸಹಾಯ ಮಾಡುವ ವ್ಯಾಯಾಮ ಮಾಡಿ. ಇವುಗಳ ಸಹಾಯದಿಂದ ಮಾಂಸ ಖಂಡಗಳು ಬಲಿಷ್ಠಗೊಂಡು ಸ್ತನಗಳ ಜಗ್ಗುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ತೋಳುಗಳ ಬಲವನ್ನು ಬಲಿಷ್ಠಗೊಳಿಸಲು ಭಾರ ಎತ್ತುವ ಮೂಲಕ (weight lifting) ಭುಜದ ಸ್ನಾಯುಗಳು ಹಾಗೂ ಸ್ತನದ ಸ್ನಾಯುಗಳು ಬಲಗೊಂಡು ಜಗ್ಗುವಿಕೆಯನ್ನು ಕಡಿಮೆಯಾಗಿಸುತ್ತದೆ.

ಧೂಮಪಾನ ಮಾಡಬೇಡಿ

ಧೂಮಪಾನ ಮಾಡಬೇಡಿ

ಒಳ್ಳೆಯ ಉತ್ತಮ ಗುಣಮಟ್ಟದ ದುಬಾರಿ ಆದರೂ ಯೋಚಿಸದೇ ಸ್ತನ ಬಂದ (bracier)ಹಾಕಿ ಕೊಳ್ಳುವುದರಿಂದ ಜಗ್ಗುವಿಕೆಯನ್ನು ತಡೆಯಲು ಸಾಧ್ಯ. ಈ ರೀತಿಯ ಸ್ತನ ಬಂದಗಳು ಬಿಗಿಯಾದ ಕೆಳ ಪಟ್ಟಿಯಿಂದ ಕೂಡಿರುತ್ತದೆ ಮತ್ತು ಸ್ತನಗಳನ್ನು ಪೂರ್ತಿ ಮುಚ್ಚಿ ಹಾಕುತ್ತದೆ. ವ್ಯಾಯಾಮ ಮಾಡುವಾಗ ಈ ಸ್ತನ ಬಂದಗಳು ಸ್ತನಗಳ ಕುಲುಕುವಿಕೆಯನ್ನು ಕಡಿಮೆ ಮಾಡುತ್ತದೆ. ಧೂಮಪಾನ ಮಾಡುವ ಮೂಲಕ ನಮ್ಮ ದೇಹದ ರಕ್ತ ನಾಳಗಳಲ್ಲಿ ನಿಕೋಟಿನ್ ಪ್ರಮಾಣ ಹೆಚ್ಚಾಗಿ, ಆಮ್ಲಜನಕ ಹಾಗೂ ಪೋಷಕಾಂಶಗಳ ಕೊರತೆ ಹೆಚ್ಚಿ ಚರ್ಮದ ಸುಕ್ಕು ಹೆಚ್ಚಿ, ಇದರ ಪರಿಣಾಮವಾಗಿ ಸ್ತನಗಳ ಜಗ್ಗುವಿಕೆಗೂ ಕಾರಣವಾಗುತ್ತದೆ. ಧೂಮಪಾನ ತ್ಯಜಿಸಿ ಸುಂದರವಾದ ದೇಹ ಮತ್ತು ಆರೋಗ್ಯ ನಿಮ್ಮದಾಗಿಸಿಕೊಳ್ಳಿ. ಫ್ಯಾಷನ್ ಪ್ರಿಯರು, ಸಮುದ್ರ ತೀರದಲ್ಲಿ ಬಟ್ಟೆ ಬಿಚ್ಚಿ ಬೆತ್ತಲೆ ಮಲಗುವವರು ಹಾಗೂ ಸೂರ್ಯನ ನೇರಳಾತೀತ ಕಿರಣಗಳು ನಿಮ್ಮ ದೇಹದ ಮೇಲೆ ಬಟ್ಟೆ ಇಲ್ಲದ ಜಾಗಕ್ಕೆ ಬೀಳುವುದರಿಂದ ಮೇಲ್ಪದರ ಕಾಂತಿ ಹೀನವಾಗಿ ಚರ್ಮದ ಸುಕ್ಕು ಹೆಚ್ಚಿ, ಅದು ಸ್ತನಗಳ ಮೇಲೆ ಪರಿಣಾಮ ಬೀರುತ್ತದೆ. ಆದ ಕಾರಣ ಅತಿಯಾದ v ಆಕಾರದ ಎದೆ ಕಾಣುವ ಉಡುಪುಗಳನ್ನು ಹಾಕಬೇಡಿ. ಸ್ತನಗಳ ಸೌಂದರ್ಯ ಹೆಚ್ಚಿಸಲು ಸ್ನಾನ ಮಾಡುವಾಗ ಕೊಳೆ ಮತ್ತು ಬೆವರನ್ನು ತೆಗೆಯಿರಿ. ನಂತರ ಒಳ್ಳೆಯ ಗುಣಮಟ್ಟದ ಕ್ರೀಮ್ ಹಾಕಿ.

ಪ್ರೋಟೀನ್ ಯುಕ್ತ ಆಹಾರಗಳನ್ನು ಸೇವಿಸಿ

ಪ್ರೋಟೀನ್ ಯುಕ್ತ ಆಹಾರಗಳನ್ನು ಸೇವಿಸಿ

ದೇಹದ ಆರೋಗ್ಯಕ್ಕೆ ಹಾಗೂ ಚರ್ಮದ ಕಾಂತಿಗಾಗಿ ಬಹಳಷ್ಟು ಪ್ರಮಾಣದಲ್ಲಿ ಪ್ರೋಟೀನ್ ಅಂಶ ಹೆಚ್ಚಾಗಿ ಇರುವ ಆಹಾರವನ್ನು ಸೇವಿಸಬೇಕು. ಇದು ಚರ್ಮಕ್ಕೆ ಸಂಬಂಧಿಸಿದಂತೆ (ಹೊಳಪು, ಬಿರುಕು, ಸುಕ್ಕುಗಳು ಹಾಗೂ ಜಗ್ಗದ ಹಾಗೆ) ಎಲ್ಲಾ ತೊಂದರೆಗೂ ರಾಮಬಾಣ. ಪ್ರೋಟೀನ್ ಹೇರಳವಾಗಿ ಇರುವ ಆಹಾರ: ಮಾಂಸ, ಮೀನು, ಪನ್ನೀರ್, ಸೋಯಾಬೀನ್, ಮೊಟ್ಟೆ, ಬಟಾಣಿ ಇತ್ಯಾದಿ. ಹೆಚ್ಚು ಹೆಚ್ಚು ತರಕಾರಿ ಹಾಗೂ ಹಣ್ಣುಗಳನ್ನು ಸೇವಿಸುವುದರಿಂದ ಅದರಲ್ಲಿನ ಪೋಷಕಾಂಶಗಳು ಸ್ತನಗಳ ಒಳ ಪದರ ಹಾಗೂ ಮೇಲ್ಪದರದ ಚರ್ಮದ ಬಲಿಷ್ಠತೆಯನ್ನು ಕಾಪಾಡಲು ಸಹಕಾರ ಮಾಡುತ್ತದೆ. ಹಣ್ಣುಗಳಲ್ಲಿ ಹೆಚ್ಚಾಗಿ ದ್ರಾಕ್ಷಿ, ಪರಂಗಿ, ಸೇಬು ಹಾಗೂ ಬಾಳೆಹಣ್ಣು ಉಪಯೋಗಿಸಿ. ತರಕಾರಿಗಳಲ್ಲಿ ಹೆಚ್ಚಾಗಿ ಬೀಟ್ರೂಟ್, ಕ್ಯಾರೆಟ್, ಹೂ ಕೋಸು, ಎಲ್ಲಾ ಬಗೆಯ ಸೊಪ್ಪು ಹಾಗೂ ಆಲೂಗಡ್ಡೆ ಬಳಸಿ. ಅತಿಯಾದ ತೂಕವನ್ನು ಕಡಿಮೆ ಮಾಡುವ ಅಥವಾ ಗಳಿಸುವ ಪ್ರಕ್ರಿಯೆಯಲ್ಲಿ ತೊಡಗಿಸಿ ಕೊಳ್ಳುಬೇಡಿ. ಇದರಿಂದ ದೇಹದ ಮೇಲೆ ಬಹಳಷ್ಟು ವ್ಯತ್ಯಾಸವನ್ನು ಕಾಣಬಹುದು. ಈ ಪ್ರಕ್ರಿಯೆ ಇಂದ ಚರ್ಮದ ಸುಕ್ಕುಗಳು ಹೆಚ್ಚಾಗಿ ಕಂಡುಬರುತ್ತದೆ. ಬಹಳಷ್ಟು ತೂಕವನ್ನು ನಿಮ್ಮ ದೇಹದ ಸಮತೋಲನೆಗಿಂತ (over weight) ಹೆಚ್ಚು ಆಗದ ಹಾಗೆ ನೋಡಿದರೆ ಒಳ್ಳೆಯದು. ಇದರಿಂದ ಸ್ತನದ ಗಾತ್ರ ಹೆಚ್ಚಾಗುತ್ತದೆ ಹಾಗೂ ಅಗಲವಾಗಿ ಕಾಣಬಹುದು. ಇದರಿಂದಾಗಿ ಬೇಗ ಜಗ್ಗಿದ ಹಾಗೆ ಕಾಣುತ್ತದೆ.

ಎದೆ ಹಾಲು ಕುಡಿಸುವುದರಿಂದ ಯಾವುದೇ ಸಮಸ್ಯೆ ಬರಲ್ಲ

ಎದೆ ಹಾಲು ಕುಡಿಸುವುದರಿಂದ ಯಾವುದೇ ಸಮಸ್ಯೆ ಬರಲ್ಲ

ಎಲ್ಲಾ ಮಹಿಳೆಯರು ತಾಯಿ ಆಗಲು ಬಹಳ ಹೆದರುತ್ತಾರೆ. ಈ ಹೆದರಿಕೆಗೆ ಸ್ತನ ಪಾನ ಮಾಡುವುದರಿಂದ ತನ್ನ ದೇಹದ ಮೇಲೆ ಹಾಗೂ ಸೌಂದರ್ಯ ಹಾಳಾಗುತ್ತದೆ ಎಂಬ ನಂಬಿಕೆ. ಇದು ಅಕ್ಷರ ಸಹ ತಪ್ಪು, ಎಷ್ಟು ಸಮಯ ಸ್ತನ ಪಾನ ಮಾಡುತೇವೋ ಅಷ್ಟೇ ಬೇಗ ನಮ್ಮ ದೇಹ ಮೊದಲ ಸ್ಥಿತಿಗೆ ಬರುತ್ತದೆ. ಹಾಗಾಗಿ ಇದು ಒಂದು ನೈಸರ್ಗಿಕ ಕ್ರಿಯೆ. ಯಾವುದೇ ಹೆಣ್ಣು ಮಕ್ಕಳು ಹೆದರದೇ ತಮ್ಮ ತಾಯ್ತನವನ್ನು ಖುಷಿ ಇಂದ ಸ್ವೀಕರಿಸಿ. ಕೆಲವು ರೀತಿಯ ಮಸಾಜ್ ಮಾಡುವುದರಿಂದ ಸ್ತನದ ಜಗ್ಗುವಿಕೆಗೆ ಕಡಿವಾಣ ಹಾಕಬಹುದು. ಅವುಗಳ ಪಟ್ಟಿ ಇಲ್ಲಿದೆ:

ಎದೆಹಾಲು ಉಣ್ಣಿಸುವುದರಿಂದ ತಾಯಿ-ಮಗು ಇಬ್ಬರಿಗೂ ಒಳ್ಳೆಯದು

1 ಮಂಜು ಗಡ್ಡೆ ಮಸಾಜ್

1 ಮಂಜು ಗಡ್ಡೆ ಮಸಾಜ್

ಮಂಜು ಗಡ್ಡೆ ಮಸಾಜ್ ಮಾಡುವುದರಿಂದ ಬಹಳ ಹೆಚ್ಚು ಲಾಭದಾಯಕ. ಶೀತಲ ಉಷ್ಣತೆ ಸ್ತನದ ಸುತ್ತಲಿನ ಗೊಳಿಸುತ್ತದೆ. ಇದರಿಂದಾಗಿ ಸ್ತನಗಳು ಗಟ್ಟಿಯಾಗಿ, ಮೇಲೆ ನಿಲ್ಲುತ್ತದೆ. ಈ ಪ್ರಯೋಗ ಮಾಡುವ ವಿಧಾನ:

*2 ಮಂಜು ಗಡ್ಡೆ ತೆಗೆದುಕೊಂಡು ವೃತ್ತಾಕಾರವಾಗಿ ಸ್ತನದ ಸುತ್ತಲೂ ಒಂದು ನಿಮಿಷ ಮಸಾಜ್ ಮಾಡಿ.

*. ನುಣುಪಾದ ಮೆತ್ತನೆಯ ಟವೆಲ್ನಿಂದ ಒರೆಸಿ ತಕ್ಷಣವೇ ಒಳ್ಳೆಯ ಸರಿಯಾದ ಬ್ರಾ ಹಾಕಿಕೊಳ್ಳಿ.

*. ಸುಖಾಸೀನ ( reclining position) ಸ್ಥಿತಿಯಲ್ಲಿ ಅರ್ಧ ಗಂಟೆ ಇರಿ.

ಈ ರೀತಿಯ ಮಸಾಜ್ ಅನ್ನು ದಿನಕ್ಕೆ ಎರಡು ಮೂರು ಬಾರಿ ಮಾಡಬಹುದು. ಆದರೆ ಒಂದು ನಿಮಿಷಕಿಂತ ಹೆಚ್ಚಿನ ಮಸಾಜ್ ಮಾಡಬೇಡಿ ಹಾಗೂ ಸ್ತನಗಳನ್ನು ಎಕ್ಸ್ ಪೋಸ್ ಮಾಡಬೇಡಿ, ಇದರಿಂದ ಜೋಮು (numbness) ಕಟ್ಟಿದ ಹಾಗೆ ಭಾಸವಾಗುತ್ತದೆ ಇದು ಅತ್ಯಂತ ಅಪಾಯಕಾರಿ.

2. ಆಲಿವ್ ಎಣ್ಣೆ ಮಸಾಜ್

2. ಆಲಿವ್ ಎಣ್ಣೆ ಮಸಾಜ್

ಆಲಿವ್ ಎಣ್ಣೆ ಉತ್ಕರ್ಷಣ ನಿರೋಧಕ(antioxidant),ಹಾಗೂ ಕೊಬ್ಬಿನ ಆಮ್ಲದಿಂದ ಕೂಡಿದ(fatty acids)ನಿಂದ ಕೂಡಿದ. ಇದರ ಪರಿಣಾಮವಾಗಿ ಜಗ್ಗುವಿಕೆಗೆ ಜೊತೆಗೆ ಚರ್ಮದ ಕಾಂತಿಯನ್ನೂ ಹೆಚ್ಚಿಸುತ್ತದೆ. ಇದನ್ನು ಮಾಡಲು ಕೈಗೆ ಎಣ್ಣೆ ಸವರಿಕೊಂಡು ಸ್ತನಗಳ ಮೇಲೆ ಬಿಸಿ ಬರುವವರೆಗೂ ಉಜ್ಜಿ. ಉಜ್ಜುವ ಪ್ರತಿಕ್ರಿಯೆ ಮೇಲ್ಮುಖವಾಗಿ ಇರಲಿ. ಹದಿನೈದು ನಿಮಿಷಗಳ ಕಾಲ ಮಸಾಜ್ ಮಾಡುವುದರಿಂದ ರಕ್ತ ಸಂಚಾರ ಹಾಗೂ ಜಗ್ಗಿದ ಜಾಗವನ್ನು ಸರಿಪಡಿಸಲು ಕಾರಣವಾಗುತ್ತದೆ. ಈ ರೀತಿಯ ಪ್ರಕ್ರಿಯೆಯನ್ನು ವಾರದಲ್ಲಿ 4 ರಿಂದ 5 ಬಾರಿ ಮಾಡಿ. ಆಲೀವ್ ಎಣ್ಣೆ ಬದಲು ಬಾದಾಮಿ ಎಣ್ಣೆ, ಜೊಜೊಬಾ ಎಣ್ಣೆ ಬಳಸ ಬಹುದು.

3. ಮತ್ತು ಮೊಟ್ಟೆಯ ಹಳದಿ ಬಣ್ಣದ ಮಸಾಜ್

3. ಮತ್ತು ಮೊಟ್ಟೆಯ ಹಳದಿ ಬಣ್ಣದ ಮಸಾಜ್

ಈ ಮಸಾಜ್ ಸ್ತನಗಳ ಜಗ್ಗುವಿಕೆಗೆ ರಾಮಬಾಣ. ಸೌತೆಕಾಯಿ ಅತಿ ಹೆಚ್ಚಿನ ಚರ್ಮದ ಕಾಂತಿ ಹೆಚ್ಚಿಸಿ ಹಾಗೂ ಮೊಟ್ಟೆಯ ಹಳದಿ ಬಣ್ಣ ಬಿಗಿಯಾಗಿಸುತ್ತದೆ. ಇದರ ಮಿಶ್ರಣಕ್ಕೆ ಒಂದು ಚಮಚ ಬೆಣ್ಣೆ ಅಥವಾ ಕ್ರೀಮ್ ಹಾಕಿ ಸ್ತನದ ಮೇಲೆ ಹಚ್ಚಿ 30 ನಿಮಿಷ ಹಾಗೆ ಬಿಟ್ಟು ನಂತರ ತಣ್ಣನೆಯ ನೀರಿನಿಂದ ತೊಳೆದು ಕೊಳ್ಳಿ. ಈ ಪ್ರಯತ್ನವನ್ನು ವಾರದಲ್ಲಿ ಒಂದು ಬಾರಿ ಮಾಡಿ. ಈ ರೀತಿಯ ಮಾಹಿತಿಗಳಿಂದ ನಿಮ್ಮ ಆಂತರಿಕ ಹಾಗೂ ದೈಹಿಕ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು.

English summary

Tips To Prevent Breasts From Sagging

Breastfeeding your baby is perhaps one of the best things you can do for your baby. Breastfeeding makes sure that your baby is well nourished and is free of diseases. It also gives your baby the strength to fight off any infections that may come his way.The benefits of breast feeding are immense not just for the baby but also for the breast feeding mother. Did you know that breast feeding is also said to help ward off postpartum depression? It also helps your body and specifically your uterus to go back to its normal size after birth.
Story first published: Monday, July 30, 2018, 9:31 [IST]
X