For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಬೆಡ್ ರೆಸ್ಟ್ ಏಕೆ ಹೇಳುತ್ತಾರೆ?

By Divya Pandith
|

ಗರ್ಭಾವಸ್ಥೆಯಲ್ಲಿ ಇರುವಾಗ ಕಾಳಜಿ ಹಾಗೂ ಆರೈಕೆ ಎನ್ನುವುದು ಬಹಳ ಮುಖ್ಯ. ಇಲ್ಲವಾದರೆ ಅನೇಕ ಸಮಸ್ಯೆಗಳು ಕಾಡಬಹುದು. ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾ ಹೋದಂತೆ ದೊಡ್ಡ ಅಪಾಯಕ್ಕೆ ದಾರಿಯಾಗುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಪ್ರತಿ ತಿಂಗಳು ಹಾಗೂ ಸಮಸ್ಯೆಗಳು ಎದುರಾದಾಗ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳುವುದನ್ನು ಮರೆಯಬಾರದು. ಪ್ರತಿಯೊಬ್ಬ ಗರ್ಭಿಣಿಯ ಆರೋಗ್ಯ ಸ್ಥಿತಿಯು ಒಬ್ಬರಿಂದ ಒಬ್ಬರಿಗೆ ಬಹಳ ವಿಭಿನ್ನತೆಯನ್ನು ಹೊಂದಿರುತ್ತದೆ. ಕೆಲವು ಸಂದರ್ಭದಲ್ಲಿ ವೈದ್ಯರಲ್ಲಿ ತಪಾಸಣೆ ನಡೆಸಿದಾಗ ವೈದ್ಯರು ಬೆಡ್ ರೆಸ್ಟ್ ಸಲಹೆ ನೀಡಬಹುದು.

ವೈದ್ಯರು ನಿಮಗೆ ಬೆಡ್ ರೆಸ್ಟ್ ಸಲಹೆ ನೀಡುತ್ತಿದ್ದಾರೆ ಎಂದರೆ ಅದಕ್ಕೆ ಪ್ರಮುಖ ಕಾರಣವೇನು? ಅತಿಯಾದ ಆಯಾಸಕ್ಕೆ ಒಳಗಾಗುವ ನಿಮ್ಮನ್ನು ವಿಶ್ರಾಂತಿಗೆ ಒಳಪಡಿಸುವಂತಹ ಸರಳ ಕಾರಣವಾಗಿರಬಹುದು ಅಥವಾ ಅಕಾಲಿಕ ಪ್ರಸವ ಉಂಟಾಗುವ ಸಾಧ್ಯತೆಗಳಿರುವ ಗಂಭೀರ ಕಾರಣಕ್ಕೂ ಬೆಡ್ ರೆಸ್ಟ್ ಹೇಳಬಹುದು. ನಿಮಗೆ ಬೆಡ್ ರೆಸ್ಟ್ ಹೇಳಿರುವುದಕ್ಕೆ ನಿಜವಾದ ಕಾರಣವೇನು? ಎನ್ನುವುದನ್ನು ತಿಳಿದುಕೊಳ್ಳಬೇಕು. ವೈದ್ಯರು ನಿಮಗೆ ಈ ಮಾರ್ಗವನ್ನು ಸೂಚಿಸುತ್ತಿದ್ದಾರೆ ಎಂದಾದರೆ ಅದನ್ನು ನಿರ್ಲಕ್ಷಿಸಬಾರದು.

ಹಿಂದಿನ ಕಾಲದಲ್ಲಿ ಅಂದರೆ ಸುಮಾರು 20 ದಶಕಗಳಷ್ಟು ಹಿಂದೆ ವಾತಾವರಣ ಹಾಗೂ ಆಹಾರ ಇಂದಿನ ಸ್ಥಿತಿಯಷ್ಟು ಕಲುಷಿತವಾಗಿರಲಿಲ್ಲ. ಹಾಗಾಗಿ ಬಹುತೇಕ ಗರ್ಭಿಣಿಯರು ಶಕ್ತಿಯಿಂದ ಕೂಡಿರುವ ಉತ್ತಮ ಆರೋಗ್ಯವನ್ನು ಹೊಂದಿರುತ್ತಿದ್ದರು. ಆದರೆ ಇಂದು ಎಲ್ಲವೂ ಕಲುಷಿತಗೊಂಡಿರುವ ಆರೋಗ್ಯದ ಮಟ್ಟವೂ ಕುಸಿದಿರುತ್ತದೆ. ಹಾಗಾಗಿ ಸಣ್ಣ-ಪುಟ್ಟ ಸಮಸ್ಯೆಗಳು ಬಹುಬೇಗ ಗಂಭೀರ ಸಮಸ್ಯೆಯನ್ನು ಸೃಷ್ಟಿಸುವ ಸಾಧ್ಯತೆಗಳಿರುತ್ತವೆ. ಸಮಸ್ಯೆಗಳು ಇವೆ ಎಂದಾಗ ಅದಕ್ಕೆ ಸೂಕ್ತ ರೀತಿಯ ಎಚ್ಚರಿಕೆ ವಹಿಸುವುದು ಸೂಕ್ತ.

Bed Rest During Pregnancy

ಬೆಡ್ ರೆಸ್ಟ್ ಅಥವಾ ಹಾಸಿಗೆ ವಿಶ್ರಾಂತಿ ಎಂದರೇನು? ಗರ್ಭಾವಸ್ಥೆಯಲ್ಲಿ ವೈದ್ಯರು ಏಕೆ ಈ ಸಲಹೆಯನ್ನು ನೀಡುತ್ತಾರೆ? ಈ ಸಲಹೆ ನೀಡುತ್ತಿದ್ದಾರೆ ಎಂದರೆ ಸಾಮಾನ್ಯವಾಗಿ ಎಂತಹ ಸಮಸ್ಯೆಗಳು ಒಳಗೊಂಡಿರುತ್ತವೆ? ಬೆಡ್ ರೆಸ್ಟ್ ಪಡೆಯುವಾಗ ನಾವು ಹೇಗಿರಬೇಕು? ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ಮಾನಸಿಕ ಮತ್ತು ದೈಹಿಕ ಆರೋಗ್ಯ ಎಷ್ಟು ಪ್ರಮುಖವಾಗಿರುತ್ತದೆ? ಎನ್ನುವುದರ ಸೂಕ್ತ ವಿವರಣೆಯನ್ನು ಬೋಲ್ಡ್ ಸ್ಕೈ ನಿಮ್ಮ ಮುಂದೆ ತೆರೆದಿಡುತ್ತಿದೆ.

ಬೆಡ್ ರೆಸ್ಟ್ ಎಂದರೇನು?

ಬೆಡ್ ರೆಸ್ಟ್ ಎಂದರೇನು?

ಬೆಡ್ ರೆಸ್ಟ್ ಸಾಮಾನ್ಯವಾಗಿ ಗರ್ಭಾವಸ್ಥೆಯ ಸಮಯದಲ್ಲಿ ಕೆಲವರಿಗೆ ವೈದ್ಯರು ಸಲಹೆ ನೀಡುತ್ತಾರೆ. ಕೆಲವು ಚಟುವಟಿಕೆಗಳನ್ನು ನಿರ್ಬಂಧಿಸುವ ಉದ್ದೇಶವಾಗಿರುತ್ತದೆ. ಹಿಂದಿನ ಕಾಲದಲ್ಲಿ ಅತ್ಯಂತ ಅಪಾಯದ ಸಮಯದಲ್ಲಿ ಮಾತ್ರ ಬೆಡ್ ರೆಸ್ಟ್ ಸಲಹೆ ನೀಡಲಾಗುತ್ತಿತ್ತು. ಆದರೆ ಇಂದಿನ ದಿನಮಾನದಲ್ಲಿ ತಾಯಿಯ ಆರೋಗ್ಯವು ಬಹಳ ಸೂಕ್ಷ್ಮ ಸ್ಥಿತಿಯಲ್ಲಿ ಇರುತ್ತದೆ. ಈ ಕಾರಣಕ್ಕಾಗಿ ಕೆಲವು ಸೀಮಿತ ಅವಧಿಯವರೆಗೆ ವೈದ್ಯರು ಬೆಡ್‍ರೆಸ್ಟ್ ಹೇಳುವ ಸಾಧ್ಯತೆಗಳಿರುತ್ತವೆ. ಬೆಡ್ ರೆಸ್ಟ್ ಗರ್ಭಿಣಿಯ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಸಮತೋಲನದಲ್ಲಿ ಇರುವಂತೆ ಕಾಯ್ದುಕೊಳ್ಳಬಹುದು.

ಪ್ರಿಕ್ಲಾಂಪ್ಸಿಯ

ಪ್ರಿಕ್ಲಾಂಪ್ಸಿಯ

ಈ ಸ್ಥಿತಿಯನ್ನು ಟಾಕ್ಸಿಮಿಯಾ ಎಂದು ಕರೆಯಲಾಗುತ್ತದೆ. ಇದರ ಸಾಮಾನ್ಯ ಲಕ್ಷಣವೆಂದರೆ ಅಧಿಕ ರಕ್ತದ ಒತ್ತಡ. ಇತರ ಲಕ್ಷಣ ವೆಂದರೆ ಮೂತ್ರದಲ್ಲಿ ಪ್ರೋಟೀನ್ ಹೊಂದುವುದು, ಕೈ, ಕಾಲು ಮತ್ತು ಮುಖ ಊತದಿಂದ ಕೂಡಿರುವುದು. ಪ್ರಿಕ್ಲಾಂಪ್ಸಿಯ ಹೊಂದಿರುವ ಗರ್ಭಿಣಿಯರಿಗೆ ಸಾಮಾನ್ಯವಾಗಿ ಬೆಡ್ ರೆಸ್ಟ್ ಸಲಹೆ ನೀಡುತ್ತಾರೆ. ಇದು ಗಂಭೀರ ಸಮಸ್ಯೆಯಾಗಿರುವುದರಿಂದ ನಿಯಮಿತವಾಗಿ ಮೇಲ್ವಿಚಾರಣೆ ನಡೆಸುತ್ತಲಿರಬೇಕಾಗುವುದು.

ಗರ್ಭಕಂಠದ ತೊಂದರೆ:

ಗರ್ಭಕಂಠದ ತೊಂದರೆ:

ಗರ್ಭಿಣಿಯ ಗರ್ಭಕಂಠವು ಮೃದುತ್ವ, ತೆಳುವಾಗಿರುವುದು, ಗರ್ಭಕಂಠ ತೆರೆದುಕೊಳ್ಳುವಂತೆ ಇದ್ದರೆ ಅಥವಾ ಅಸಮರ್ಥವಾದ ಗರ್ಭಕಂಠ ಹೊಂದಿದ್ದರೆ ಬೆಡ್ ರೆಸ್ಟ್ ಹೇಳುತ್ತಾರೆ. ಇಲ್ಲವಾದರೆ ಅಕಾಲಿಕ ಪ್ರಸವ ಆಗುವ ಸಾಧ್ಯತೆಗಳಿರುತ್ತವೆ.

ರಕ್ತಸ್ರಾವ

ರಕ್ತಸ್ರಾವ

ಗರ್ಭಾವಸ್ಥೆಯಲ್ಲಿ ರಕ್ತಸ್ರಾವವು ಅಪಾರದರ್ಶಕ ಜರಾಯು ಅಥವಾ ಜರಾಯು ಹೊರಳುವಿಕೆಯ ಚಿಹ್ನೆಯಾಗಿರುತ್ತವೆ. ಇದು ಮೊದಲ ಮೂರು ತಿಂಗಳಲ್ಲಿ ಸಂಭವಿಸುವ ಸಾಧ್ಯತೆಗಳಿರುತ್ತವೆ. ಇದು ಗರ್ಭಪಾತವಾಗುವ ಲಕ್ಷಣವೂ ಆಗಿರಬಹುದು. ಇತರ ಎರಡು ತಿಂಗಳನ್ನು ಗಮನಿಸಿ ನಿಮಗೆ ಬೆಡ್ ರೆಸ್ಟ್ ಹೇಳಲಾಗುವುದು.

ಅಕಾಲಿಕ ಪ್ರಸವ

ಅಕಾಲಿಕ ಪ್ರಸವ

ಅಕಾಳಿಕ ಪ್ರಸವ ಅಥವಾ ಪ್ರಸವ ಪೂರ್ವದಲ್ಲಿಯೇ ಉಂಟಾಗುವ ಹೆರಿಗೆಯ ಲಕ್ಷಣಗಳಿದ್ದರೆ ವೈದ್ಯರು ಬೆಡ್ ರೆಸ್ಟ್ ಹೇಳುತ್ತಾರೆ. ಬೆಡ್ ರೆಸ್ಟ್ ಹೊಂದುವುದರಿಂದ ಉಂಟಾಗುವ ಅಪಾಯವನ್ನು ತಡೆಯಬಹುದು.

ಬಹು ಶಿಶುಗಳನ್ನು ಹೊಂದಿರುವುದು

ಬಹು ಶಿಶುಗಳನ್ನು ಹೊಂದಿರುವುದು

ಗರ್ಭಿಣಿಯ ಹೊಟ್ಟೆಯಲ್ಲಿ ಅವಳಿ ಅಥವಾ ಅನೇಕ ಶಿಶುಗಳು ಇದ್ದಾಗ ಬೆಡ್‍ರೆಸ್ಟ್ ಹೇಳುತ್ತಾರೆ. ಹೀಗೆ ಮಾಡುವುದರಿಂದ ಅನೇಕ ಸಮಸ್ಯೆಗಳನ್ನು ತಡೆಗಟ್ಟಬಹುದು ಮತ್ತು ಅಕಾಲಿಕ ಪ್ರಸವವನ್ನು ತಡೆಯಬಹುದು.

ತೊಡಕಿನ ಇತಿಹಾಸ ಹೊಂದಿದ್ದರೆ:

ತೊಡಕಿನ ಇತಿಹಾಸ ಹೊಂದಿದ್ದರೆ:

ಈ ಹಿಂದೆ ಅಕಾಲಿಕ ಗರ್ಭಪಾತವನ್ನು ಅನುಭವಿಸಿದವರಾಗಿದ್ದರೆ ಅಥವಾ ಅಕಾಲಿಕ ಪ್ರಸವವನ್ನು ಹೊಂದಿರುವವರಾಗಿದ್ದರೆ ಅಂತಹ ಗರ್ಭಿಣಿಯರಿಗೆ ಮುನ್ನೆಚ್ಚರಿಕೆಯ ಕ್ರಮವಾಗಿ ಬೆಡ್ ರೆಸ್ಟ್ ಹೇಳುತ್ತಾರೆ.

ಗರ್ಭಾವಸ್ಥೆಯಲ್ಲಿ ಮಧುಮೇಹ

ಗರ್ಭಾವಸ್ಥೆಯಲ್ಲಿ ಮಧುಮೇಹ

ಕೆಲವು ಗರ್ಭಿಣಿಯರಿಗೆ ಗರ್ಭಾವಸ್ಥೆಯಲ್ಲಿ ಮಧುಮೇಹ ಕಾಣಿಸಿಕೊಳ್ಳುತ್ತದೆ. ಅತ್ಯಧಿಕ ಪ್ರಮಾಣದ ಉತ್ತಮ ಆಹಾರ ಮತ್ತು ಉಳಿದ ಸಂಯೋಜನೆಳನ್ನು ಹೊಂದಿದ್ದರೆ, ಅದು ಮಗುವಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಅಂತಹ ಸಂದರ್ಭದಲ್ಲೂ ಬೆಡ್ ರೆಸ್ಟ್ ಸಲಹೆ ಮಾಡಲಾಗುವುದು.

ಪ್ಲೆಸೆಂಟಾ ಪೆರ್ವಿಯಾ

ಪ್ಲೆಸೆಂಟಾ ಪೆರ್ವಿಯಾ

ಗರ್ಭಕಂಠದ ಕೆಳಭಾಗದಲ್ಲಿ ಜರಾಯು ಗರ್ಭಕಂಠವನ್ನು ನಿರ್ಬಂಧಿಸಿರುತ್ತದೆ. ನೈಸರ್ಗಿಕ ಪ್ರಸವಕ್ಕೆ ಇದು ತೊಂದರೆಯನ್ನು ಉಂಟುಮಾಡಬಹುದು. ಮಗುವಿನ ಜನ್ಮಕ್ಕೆ ಸಿದ್ಧವಾಗುವ ತನಕ ಜರಾಯುಗಳ ಮೇಲೆ ಒತ್ತಡವನ್ನು ತಡೆಗಟ್ಟಲು ಮಹಿಳೆಯರಿಗೆ ಬೆಡ್ ರೆಸ್ಟ್ ವಿಶ್ರಾಂತಿ ಹೇಳಲಾಗುವುದು.

ಕಡಿಮೆ ಪ್ರಮಾಣದ ಆಮ್ನಿಯೋಟಿಕ್ ದ್ರವ

ಕಡಿಮೆ ಪ್ರಮಾಣದ ಆಮ್ನಿಯೋಟಿಕ್ ದ್ರವ

ಕೆಲವು ಮಹಿಳೆಯರಿಗೆ ಗರ್ಭಾಶಯದಲ್ಲಿ ಆಮ್ನಿಯೋಟಿಕ್ ದ್ರವ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಇದು ನಿಮ್ಮ ಮಗುವಿಗೆ ಮಾರಣಾಂತಿಕವಾಗಬಹುದು. ನಿಮ್ಮ ಮಗುವಿನ ರಕ್ಷಣೆ ಮತ್ತು ಚಲನೆಗೆ ಸಹಾಯ ಮಾಡುವ ದ್ರವವಾಗಿರುತ್ತದೆ. ಹಾಗಾಗಿ ಇಂತಹ ಪರಿಸ್ಥಿತಿಯಲ್ಲಿರುವಾಗ ಕಡ್ಡಾಯವಾಗಿ ಬೆಡ್ ರೆಸ್ಟ್ ಹೇಳಲಾಗುತ್ತದೆ.

ದುರ್ಬಲ ಭ್ರೂಣ

ದುರ್ಬಲ ಭ್ರೂಣ

ಗರ್ಭದಲ್ಲಿರುವ ಭ್ರೂಣವು ದುರ್ಬಲ ಸ್ಥಿತಿಯಲ್ಲಿದ್ದರೆ ಆಗ ಪೌಷ್ಟಿಕ ಆಹಾರದ ಸೇವನೆ ಹಾಗೂ ಬೆಡ್ ರೆಸ್ಟ್ ಗೆ ಸಲಹೆ ನೀಡುತ್ತಾರೆ. ಇಲ್ಲವಾದರೆ ಮಗುವಿಗೆ ಹಾಗೂ ತಾಯಿಗೆ ಇಬ್ಬರಿಗೂ ಅಪಾಯ ಉಂಟಾಗುವ ಸಾಧ್ಯತೆಗಳಿರುತ್ತವೆ.

ಬೆಡ್ ರೆಸ್ಟ್ ನ ಅಪಾಯಗಳು

ಬೆಡ್ ರೆಸ್ಟ್ ನ ಅಪಾಯಗಳು

ಕೆಲವು ಗರ್ಭಿಣಿಯರು ಕೊಂಚ ಆಯಾಸಕ್ಕೆ ಅಥವಾ ಕೊಂಚ ಬದಲಾವಣೆಗಳಿಗೂ ಹೆದರುತ್ತಾರೆ. ಜೊತೆಗೆ ವೈದ್ಯರ ಸಲಹೆ ಇಲ್ಲದೆ ಇರುವಾಗಲೂ ಸಹ ಅಧಿಕ ಪ್ರಮಾಣದ ಬೆಡ್ ರೆಸ್ಟ್ ಹೊಂದುತ್ತಾರೆ. ಸಮಸ್ಯೆ ಇರುವಾಗ ಅನಿವಾರ್ಯಕಾರಣಕ್ಕೆ ಬೆಡ್ ರೆಸ್ಟ್ ಹೊಂದುವುದು ಸಹಜ ಹಾಗೂ ಸೂಕ್ತವಾಗಿರುತ್ತದೆ. ಆದರೆ ಅನಗತ್ಯವಾಗಿ ಅಧಿಕ ಪ್ರಮಾಣದ ಬೆಡ್ ರೆಸ್ಟ್ ಹೊಂದುವುದರಿಂದ ಅನೇಕ ಸಮಸ್ಯೆಗಳು ಉಂಟಾಗುವುದು. ಅಗತ್ಯವಿದ್ದಾಗಲೂ ಬೆಡ್ ರೆಸ್ಟ್ ನಿಂದ ಕೆಲವು ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುವುದು ಎಂದು ಹೇಳಲಾಗುವುದು. ಅಧಿಕ ಪ್ರಮಾಣದ ಹಾಸಿಗೆ ವಿಶ್ರಾಂತಿ ಪಡೆದುಕೊಂಡರೆ ಅತಿಯಾದ ಶಿಶುವಿನ ಬೆಳವಣಿಗೆ, ಪ್ರಸವದ ನಂತರ ಶಿಶುವಿಗೆ ದುರ್ಬಲ ಸ್ನಾಯುಗಳು, ದುರ್ಬಲ ಮೂಳೆಯನ್ನು ಹೊಂದಿರುತ್ತವೆ. ಬೆಡ್ ರೆಸ್ಟ್

ನಿಂದ ರಕ್ತ ಹೆಪ್ಪುಗಟ್ಟುವಿಕೆ, ಆತಂಕ, ಖಿನ್ನತೆ, ದುಬಾರಿ ಹಣ ವ್ಯಯ, ಅತಿ ಕಡಿಮೆ ಜನನ ತೂಕ ಹೊಂದಿರುವ ನವಜಾತ ಶಿಶು ಹಾಗೂ ತಾಯಿಯ ಆರೋಗ್ಯದಲ್ಲೂ ಕೆಲವು ತೊಂದರೆ ಉಂಟಾಗುವ ಸಾಧ್ಯತೆಗಳಿವೆ.

ಹಾಗಾಗಿ ಗರ್ಭಾವಸ್ಥೆಯಲ್ಲಿ ನಿಮ್ಮ ಮಾನಸಿಕ ಸ್ಥಿತಿ ಹೇಗಿರಬೇಕು? ಆರೋಗ್ಯದ ಬಗ್ಗೆ ಯಾವ ರೀತಿಯಲ್ಲಿ ಆರೈಕೆ ಮತ್ತು ಚಿಂತನೆ ನಡೆಸಬೇಕು? ಎನ್ನುವುದರ ಕುರಿತು ಈ ಮುಂದೆ ನೀಡಿರುವ ವಿವರಣೆಯನ್ನು ಅರಿಯಿರಿ.

ಬೆಡ್ ರೆಸ್ಟ್ ನಿರ್ವಹಿಸಲು ಸಲಹೆಗಳು

ಬೆಡ್ ರೆಸ್ಟ್ ನಿರ್ವಹಿಸಲು ಸಲಹೆಗಳು

ಬೆಡ್ ರೆಸ್ಟ್ ನಿರ್ವಹಿಸಲು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಷ್ಟವಾಗಬಹುದು. ಹಾಗಾಗಿ ಈ ಮುಂದೆ ನೀಡಿರುವ ಕೆಲವು ಸಲಹೆಗಳನ್ನು ಪರಿಗಣಿಸಿ. ನಿಮ್ಮ ಆರೋಗ್ಯ ಮತ್ತು ಗರ್ಭಾವಸ್ಥೆಯ ಸಮಯದವನ್ನು ಸೂಕ್ತ ರೀತಿಯಲ್ಲಿ ಕಳೆಯಿರಿ.

ಹೊಸ ವಿಷಯ ತಿಳಿಯಿರಿ

ಹೊಸ ವಿಷಯ ತಿಳಿಯಿರಿ

ಹೊಸ ವಿಚಾರವನ್ನು ತಿಳಿದುಕೊಳ್ಳಲು ಬೆಡ್ ರೆಸ್ಟ್ ಸಮಯ ಸಹಕರಿಸುವುದು. ಯಾವುದಾದರೂ ಪರೀಕ್ಷೆಯನ್ನು ತೆಗೆದುಕೊಳ್ಳಿ. ಇಲ್ಲವೇ ಆನ್‍ಲೈನ್ ಮೂಲಕ ಹೊಸ ಭಾಷೆಯನ್ನು ಕಲಿಯಲು ಪ್ರಯತ್ನಿಸಿ. ನೈಗೆ ಗಳಂತಹ ಕೆಲವು ನೈಪುಣ್ಯತೆಯ ಕಲಿಕೆಯನ್ನು ಯೂಟ್ಯೂಬ್‍ಗಳ ಮೂಲಕ ಕಲಿಯಿರಿ.

ವ್ಯಾಯಾಮ

ವ್ಯಾಯಾಮ

ಹಾಸಿಗೆಯಲ್ಲಿರುವಾಗ ಕೆಲವು ವ್ಯಾಯಾಮಗಳನ್ನು ಮಾಡಬಹುದು. ಹಾಸಿಗೆಯ ಸೌಕರ್ಯದಿಂದ ಮಾಡಬಹುದಾದ ಸರಳ ಮತ್ತು ಸುರಕ್ಷಿತ ವ್ಯಾಯಾಮದ ಬಗ್ಗೆ ವೈದ್ಯರ ಸಲಹೆಯ ಮೇರೆಗೆ ಪ್ರಾರಂಭಿಸಿ.

ವೇಳಾಪಟ್ಟಿ ಹೊಂದಿ

ವೇಳಾಪಟ್ಟಿ ಹೊಂದಿ

ಬೆಡ್ ರೆಸ್ಟ್ ಹೊಂದಿದ್ದೀರಿ ಎಂದ ಮಾತ್ರಕ್ಕೆ ನಿಮ್ಮ ಮಾನಸಿಕ ಚಿಂತನೆಗಳನ್ನು ವಿಶ್ರಾಂತಿಗೊಳಿಸಬೇಕಿಲ್ಲ. ಊಟ, ಉಪಹಾರ ಹೇರಿದಂತೆ ಇನ್ನಿತರ ಕೆಲಸ ಕಾರ್ಯಗಳಿಗೆ ಹಾಗೂ ಹವ್ಯಾಸಗಳಿಗೆ ಸೂಕ್ತ ವೇಳಾಪಟ್ಟಿಯನ್ನು ಮಾಡಿ. ಅದರಂತೆಯೇ ನಿತ್ಯವೂ ಕೆಲಸವನ್ನು ನಿರ್ವಹಿಸಿ. ಇದರಿಂದ ನಿಮ್ಮ ಗರ್ಭಾವಸ್ಥೆಯ ಸಮಯ ಉತ್ತಮ ಆರೋಗ್ಯದೊಂದಿಗೆ ಸುಂದರ ಅನುಭವ ನೀಡುವುದು.

ಸಹಾಯ ಪಡೆದುಕೊಳ್ಳಿ:

ಸಹಾಯ ಪಡೆದುಕೊಳ್ಳಿ:

ಬೆಡ್ ರೆಸ್ಟ್ ಅಲ್ಲಿ ಇರುವಾಗ ನೀವು ಸ್ವತಃ ಯಾರಿಗೂ ಸಹಾಯ ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ನಿಮಗೆ ಅಗತ್ಯವಿದ್ದ ವಿಚಾರ ಹಾಗೂ ಕೆಲಸಗಳಿಗೆ ಮನೆ ಮಂದಿಯ ಸಹಾಯವನ್ನು ಕೇಳಿ ಪಡೆದುಕೊಳ್ಳಿ. ಸಹಾಯದ ಅಗತ್ಯ ಹೆಚ್ಚಾಗಿದ್ದರೂ ಅದಕ್ಕಾಗಿ ಮುಜುಗರ ಪಡೆದುಕೊಳ್ಳಬೇಕಾಗಿಲ್ಲ.

ಪೌಷ್ಟಿಕ ಆಹಾರವನ್ನು ಸೇವಿಸಿ:

ಪೌಷ್ಟಿಕ ಆಹಾರವನ್ನು ಸೇವಿಸಿ:

ಬೆಡ್ ರೆಸ್ಟ್ ಪಡೆಯುವಾಗ ಉತ್ತಮ ಆಹಾರವನ್ನು ಸೇವಿಸಬೇಕು. ಜಂಕ್ ಆಹಾರ ಅಥವಾ ಕುರುಕಲು ಆಹಾರ ಪದಾರ್ಥಗಳಿಗೆ ಮನಸ್ಸು ಬಯಸಬಹುದು. ಆದರೆ ಅದರಿಂದ ದೂರವಿರಿ. ಸಮತೋಲಿತ ಆಹಾರ ಸೇವನೆ ಮಾಡುವುದರಿಂದ ತೂಕವು ಹತೋಟಿಯಲ್ಲಿರುವುದು. ಜೊತೆಗೆ ಮಲಬದ್ಧತೆಯಂತಹ ಸಮಸ್ಯೆಯನ್ನು ತಡೆಯಬಹುದು.

ಮಂದಿಯೊಡನೆ ಮಾತನಾಡಿ:

ಮಂದಿಯೊಡನೆ ಮಾತನಾಡಿ:

ಬೆಡ್ ರೆಸ್ಟ್ ಹೊಂದಿದ್ದೀರಿ ಎಂದರೆ ನೀವು ಪ್ರಪಂಚದಿಂದ ಪ್ರತ್ಯೇಕವಾಗಿದ್ದೀರಿ ಎಂದರ್ಥವಲ್ಲ. ಸುಮ್ಮನೆ ವಿಶ್ರಾಂತಿಯಲ್ಲಿದ್ದರೆ ಖಿನ್ನತೆ ಉಂಟಾಗಬಹುದು. ಹಾಗಿ ಮನೆ ಮಂದಿ, ಸ್ನೇಹಿತರು, ನೆಂಟರು ಸೇರಿದಂತೆ ಇನ್ನಿತರ ವ್ಯಕ್ತಿಗಳೊಂದಿಗೆ ಮಾತನಾಡುತ್ತಿರಿ.

ನೀವು ಸಂತೋಷದಿಂದ ಇರಿ:

ನಿಮಗೆ ಇಷ್ಟವಾಗುವ ಕೆಲಸಗಳನ್ನು ಮಾಡುವುದು, ನಿಮಗೆ ಇಷ್ಟವಾದವರೊಂದಿಗೆ ಮಾತನಾಡುವುದು, ಹಾಸ್ಯ, ಚಲನ ಚಿತ್ರಗಳ ವೀಕ್ಷಣೆ, ಆಸಕ್ತಿ ದಾಯಕ ಪುಸ್ತಕಗಳನ್ನು ಓದುವುದರಿಂದ ನೀವು ನಿಮ್ಮನ್ನು ಸಂತೋಷದಿಂದ ಇಟ್ಟುಕೊಳ್ಳಬಹುದು. ನಿಮ್ಮನ್ನು ನೀವು ಚಟುವಟಿಕೆಯಿಂದ ಕೂಡಿರುವಂತೆ ನೋಡಿಕೊಳ್ಳುವುದರ ಮೂಲಕ ಮಾನಸಿಕವಾಗಿ ಹೆಚ್ಚು ಸಮಾಧಾನ ಹೊಂದಬಹುದು.

English summary

Things To Know About Bed Rest During Pregnancy

Most women are advised to remain active during their pregnancy. But under some circumstances, the doctor may advise you to be on bed rest. There are many reasons for being asked to be on bed rest when pregnant. The reasons may be as simple as fatigue or be as serious as a risk of premature labor. If the doctor asks you to be on bed rest, what does it really mean? Are you supposed to just lie on the bed and do absolutely nothing? In reality, bed rest can have a very different meaning depending on the seriousness of the trouble you may be dealing with during your pregnancy
X
Desktop Bottom Promotion