For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೆ ಇದೆಲ್ಲಾ ಸಮಸ್ಯೆ ಕಾಡುತ್ತದೆ! ಆದರೆ ಎಂದೂ ಹೇಳಿಕೊಳ್ಳುವುದಿಲ್ಲ!

By Divya Pandit
|

ಗರ್ಭಿಣಿ ಎಂದ ತಕ್ಷಣ ಆಪ್ತರು ಮತ್ತು ಬಂಧು ಮಿತ್ರರೆಲ್ಲಾ ಸಂತೋಷದಿಂದ ಹಿಗ್ಗುತ್ತಾರೆ. ತಾಯ್ತನ ಎನ್ನುವ ವಿಶೇಷವಾದ ಹಂತವನ್ನು ಮೆಟ್ಟುತ್ತಿರುವುದಕ್ಕೆ ಪ್ರಶಂಸಿಸುತ್ತಾರೆ. ಈ ಸಂಭ್ರಮವು ಎಲ್ಲಾ ಉತ್ಸಾಹ ಮತ್ತು ಸಂತೋಷಕ್ಕಿಂತಲೂ ಇದು ಹಿರಿದಾಗಿರುತ್ತದೆ. ಗರ್ಭಿಣಿಯಾದಾಗಿನಿಂದ ಪ್ರಸವದ ನಂತರವೂ ಸಂತೋಷದ ದಿನಗಳಾಗಿರುತ್ತವೆ. ಗರ್ಭಧಾರಣೆಯ ನಂತರದ ದಿನಗಳು ಸದಾ ಸಂತೋಷದಿಂದ ಕೂಡಿರುತ್ತದೆ ಎನ್ನುವ ಕಲ್ಪನೆಯ ಲೋಕವನ್ನು ಅನೇಕರು ಹೊಂದಿರುತ್ತಾರೆ. ಆದರೆ ಅದು ವಾಸ್ತವಕ್ಕೆ ಅಷ್ಟು ಹತ್ತಿರವಾಗಿಲ್ಲ ಎನ್ನುವುದನ್ನು ತಿಳಿದಿರುವುದೇ ಇಲ್ಲ.

ಗರ್ಭಧಾರಣೆ ಎನ್ನುವುದು ಅಷ್ಟು ಸುಲಭ ಅಥವಾ ಸರಳವಾದ ವಿಚಾರವಲ್ಲ. ಗರ್ಭಾವಸ್ಥೆಯಲ್ಲಿ ಉಂಟಾಗುವ ಪ್ರತಿಯೊಂದು ಆರೋಗ್ಯ ಸಮಸ್ಯೆಯೂ ಬಹಳ ಸೂಕ್ಷ್ಮವಾಗಿರುತ್ತದೆ. ಆ ಸಂದರ್ಭದಲ್ಲಿ ಎಲ್ಲಾ ಬಗೆಯ ಔಷಧಗಳನ್ನು ಸೇವಿಸುವಂತೆಯೂ ಇರುವುದಿಲ್ಲ. ತಾಯಿಯಾದವಳು ಅನೇಕ ನೋವುಗಳನ್ನು ಸಹಿಸಿಕೊಳ್ಳಬೇಕಾಗುವುದು. ಇಲ್ಲವಾದರೆ ಮಗುವಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಬೀರುವ ಸಾಧ್ಯತೆಗಳಿರುತ್ತವೆ. ಅಂತೆಯೇ ಕೆಲವೊಮ್ಮೆ ಆರೋಗ್ಯವನ್ನು ನಿರ್ಲಕ್ಷಿಸಿದರೆ ತಾಯಿಯ ಜೀವಕ್ಕೂ ಅಪಾಯ ಉಂಟಾಗುವ ಸಾಧ್ಯತೆಗಳೂ ಇರುತ್ತವೆ...

 ಜೇಡದಂತಹ ನಾಡಿಗಳು

ಜೇಡದಂತಹ ನಾಡಿಗಳು

ಜೇಡದ ಕಾಲಿನಂತೆ ಕಾಣುವ ನಾಡಿಗಳು ಗರ್ಭಿಣಿಯರಲ್ಲಿ ಗೋಚರವಾಗುತ್ತವೆ. ಅವು ಪ್ರಮುಖವಾಗಿ ಗರ್ಭಿಣಿಯ ಕಾಲಿನ ಮೇಲೆ ಕಾಣಿಸಿಕೊಳ್ಳುವುದು. ಇದು ಕಾಣಿಸಿಕೊಂಡ ಪರಿಯನ್ನು ನೋಡಿದರೆ ಹತ್ತು ವರ್ಷ ಹೆಚ್ಚು ವಯಸ್ಸಾದವರಂತೆ ತೋರುವುದು. ಇದು ಸಾಮಾನ್ಯವಾಗಿ ಗರ್ಭಿಣಿಯರಲ್ಲಿ ಮಾನಸಿಕ ಒತ್ತಡ ಮತ್ತು ಗರ್ಭಧಾರಣೆಯ ಒತ್ತಡದ ಕಾರಣದಿಂದ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುವುದು. ರಕ್ತ ನಾಳಗಳು ಹೀಗೆ ಗೋಚರವಾಗುತ್ತದೆ. ಗರ್ಭಧಾರಣೆಯ 4ನೇ ತಿಂಗಳಲ್ಲಿ ಇದು ಕಾಣಿಸಿಕೊಳ್ಳುವುದು. ಇದು ಪ್ರಸವದ ನಂತರ ಮಾಯವಾಗುವುದು. ಹಾಗೊಮ್ಮೆ ಯಾವುದೇ ಬಗೆಯಲ್ಲಿ ಗುಣಮುಖವನ್ನು ಹೊಂದಿಲ್ಲ ಎಂದಾದರೆ ಲೇಸರ್ ಚಿಕಿತ್ಸೆ ಮತ್ತು ಸಲೈನ್ ಚುಚ್ಚುಮದ್ದುಗಳನ್ನು ಹೊಂದುವುದರಿಂದ ಗುಣಪಡಿಸಬಹುದು. ಇದು ನೋಡಲು ಸ್ವಲ್ಪ ಅಹಿತಕರವಾಗಿರುತ್ತದೆ ಎನ್ನುವುದನ್ನು ಬಿಟ್ಟರೆ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಉಂಟುಮಾಡದು.

ತುರಿಕೆ

ತುರಿಕೆ

ಕೆಲವು ಮಹಿಳೆಯರಿಗೆ ಮೂರನೇ ತ್ರೈಮಾಸಿಕದಲ್ಲಿ ತುರಿಕೆಯಂತಹ ಆಘಾತಕಾರಿ ಲಕ್ಷಣ ಕಾಣಿಸಿಕೊಳ್ಳುತ್ತದೆ. 7ನೇ ತಿಂಗಳ ಸುಮಾರಿಗೆ ಗರ್ಭಿಣಿಯ ಹೊಟ್ಟೆಯ ಸುತ್ತ ತೀವ್ರವಾದ ತುರಿಕೆಯನ್ನು ಅನುಭವಿಸುತ್ತಾರೆ. ಇದು ಎಲ್ಲಾ ಮಹಿಳೆಯರಲ್ಲೂ ಕಾಣಿಸಿಕೊಳ್ಳುವುದಿಲ್ಲ. ಆದರೆ ಸಾಮಾನ್ಯವಾದ ಸಮಸ್ಯೆ ಎಂದು ಪರಿಗಣಿಸಲಾಗಿದೆ. ಮಗುವಿನ ಬೆಳವಣಿಗೆ ಉಂಟಾದಂತೆ ಚರ್ಮವು ವಿಸ್ತ್ರಣೆಗೆ ಒಳಗಾಗುತ್ತದೆ. ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಹಾರ್ಮೋನ್‍ಗಳ ಬದಲಾವಣೆಯಿಂದ ಚರ್ಮವು ಶುಷ್ಕತೆಗೆ ಒಳಗಾಗಿರುತ್ತದೆ. ಆಗ ಹಿಗ್ಗುವಿಕೆ ಉಂಟಾದಾಗ ಚರ್ಮ ಬಿರಿದು ತುರಿಕೆ ಹಾಗೂ ನೋವು ಕಾಣಿಸಿಕೊಳ್ಳುವುದು. ಅಂತಹ ಸಂದರ್ಭದಲ್ಲಿ ವೈದ್ಯರ ಸಲಹೆಯ ಮೇರೆಗೆ ಸೂಕ್ತವಾದ ಮಾಯ್ಚುರೈಸ್ ಕ್ರೀಮ್ ಅಥವಾ ವಿಟಮಿನ್ ಇ ಭರಿತವಾದ ಎಣ್ಣೆಯನ್ನು ಅನ್ವಯಿಸಬೇಕಾಗುವುದು.

ಪಿಂಕ್ ಟೂತ್‍ಬ್ರಷ್

ಪಿಂಕ್ ಟೂತ್‍ಬ್ರಷ್

ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಇನ್ನೊಂದು ಸಮಸ್ಯೆಯೆಂದರೆ ಪಿಂಕ್ ಟೂತ್ ಬ್ರಷ್. ಗರ್ಭಾವಸ್ಥೆಯಲ್ಲಿ ಉಂಟಾಗುವ ಹಾರ್ಮೋನ್ ಬದಲಾವಣೆಯಿಂದ ಕೆಲ ಮಹಿಳೆಯರಲ್ಲಿ ಮೂಗು ಮತ್ತು ಬಾಯಲ್ಲಿ ರಕ್ತ ಬರುವ ಸಾಧ್ಯತೆಗಳಿರುತ್ತವೆ. ಬಾಯಲ್ಲಿ ಒಸಡುಗಳಿಂದ ರಕ್ತಬರುವುದು. ಈ ಸಮಸ್ಯೆಯ ನಿವಾರಣೆಗೆ ಮೌಖಿಕವಾದ ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು. ರಕ್ತಸ್ರಾವದ ಒಸಡು ಇದೆಯೆಂದು ಹಲ್ಲುಜ್ಜುವುದನ್ನು ಬಿಡಬಾರದು.

ಬದಲಾವಣೆಯನ್ನು ಕಾಣುವ ಸೆಕ್ಸ್ ಡ್ರೈವ್

ಬದಲಾವಣೆಯನ್ನು ಕಾಣುವ ಸೆಕ್ಸ್ ಡ್ರೈವ್

ಕೆಲವು ಗರ್ಭಿಣಿಯರು ತಮ್ಮ ಲೈಂಗಿಕ ಡ್ರೈವ್‍ಗಳಲ್ಲಿ ಆಶ್ಚರ್ಯಕರವಾದ ಹೆಚ್ಚಳವನ್ನು ಅನುಭವಿಸುತ್ತಾರೆ. ತಮ್ಮ ಪಾಲುದಾರರೊಂದಿಗೆ ನಿಕಟವಾಗಿರುವ ಹಠಾತ್ ಬಯಕೆ ಮಹಿಳೆಯರಿಗೆ ಆಶ್ಚರ್ಯವನ್ನುಂಟುಮಾಡಬಹುದು. ಸಾಮಾನ್ಯವಾಗಿ ಮಹಿಳೆಯರು ಗರ್ಭಾವಸ್ಥೆಯಲ್ಲಿ ಆಕರ್ಷಣೆಯನ್ನು ಹೊಂದಿರುವುದಿಲ್ಲ. ತಿಂಗಳು ಕಳೆದಂತೆ ಹಾರ್ಮೋನ್‍ಗಳ ಬದಲಾವಣೆಯಿಂದ ಲೈಗಿಕ ಆಸಕ್ತಿ ಹೆಚಬಹುದು. ಆದರೆ ವೈದ್ಯರ ಸಲಹೆ ಪಡೆದು ಪ್ರವೃತ್ತಿಯನ್ನು ಹೊಂದಬಹುದು.

ಕೆಟ್ಟ ಕನಸುಗಳು

ಕೆಟ್ಟ ಕನಸುಗಳು

ಗರ್ಭಾವಸ್ಥೆಯಲ್ಲಿ ಕನಸು ಕಾಣುವುದು ಸಾಮಾನ್ಯವಾಗಿದೆ. ಕೆಲ ಮಹಿಳೆಯರು ಸಂತೋಷಕರವಾದ ಕನಸನ್ನು ಕಾಣಬಹುದು. ಇನ್ನೂ ಕೆಲವರು ಕೆಟ್ಟ ಕನಸನ್ನು ಕಾಣುವ ಸಾಧ್ಯತೆಗಳಿವೆ. ಕೆಲವರಿಗೆ ಮಗುವಿನ ಲಿಂಗ ಯಾವುದೆಂದು ಕನಸಿನಲ್ಲಿ ಕಾಣುತ್ತದೆ ಎಂದು ಹೇಳಲಾಗುವುದು. ಕೆಲವು ಬಾರಿ ಗರ್ಭಿಣಿಯರಿಗೆ ಭ್ರಮೆ ಉಂಟಾಗುವ ಸಾಧ್ಯತೆಗಳೂ ಇರುತ್ತವೆ. ಕೆಟ್ಟ ಶಕುನದ ಕನಸು ಕಾಣುವ ಸಾಧ್ಯತೆಗಳೂ ಇರುತ್ತವೆ. ಇದು ಕೆಲವೊಮ್ಮೆ ಭೀತಿಯನ್ನು ಉಂಟುಮಾಡಬಹುದು. ಮಾನಸಿಕವಾಗಿ ಉತ್ತಮ ಉತ್ತಮ ಚಿಂತನೆ ಹಾಗೂ ವಿಚಾರಗಳನ್ನು ಹೊಂದಲು ಪ್ರಯತ್ನಿಸಿ.

ಕೆಟ್ಟ ಆಲೋಚನೆಗಳು

ಕೆಟ್ಟ ಆಲೋಚನೆಗಳು

ಗರ್ಭಿಣಿಯಾಗಿರುವಾ ಸಾಮಾನ್ಯವಾಗಿ ಮಾನಸಿಕ ಒತ್ತಡ ಹಾಗೂ ಅನೇಕ ಚಿಂತನೆಗಳು ಕಾಡುವುದು ಸಹಜ. ಹಾಗಾಗಿ ಯಾವ ಸಮಯದಲ್ಲಿ ಮನಸ್ಸನ್ನು ಕಾಲಿ ಬಿಡದಿರಿ. ಇದರಿಂದ ಬೇಡದ ಚಿಂತನೆ ಹಾಗೂ ಕೆಟ್ಟ ಆಲೋಚನೆಗಳು ಮನಸ್ಸನ್ನು ಕಾಡುತ್ತದೆ. ಕೆಲವೊಮ್ಮೆ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿರುತ್ತವೆ. ಅದು ಮಗುವಿನ ಬೆಳವಣಿಗೆಯ ಮೇಲೂ ಪ್ರಭಾವ ಬೀರುವುದು. ಹಾಗಾಗಿ ಒಳ್ಳೆಯ ವಿಚಾರದಿಂದ ಕೂಡಿರುವ ಪುಸ್ತಕಗಳು ಹಾಗೂ ವ್ಯಕ್ತಿಗಳೊಂದಿಗೆ ಮಾತನಾಡುವುದರ ಮೂಲಕ ಮಾನಸಿಕವಾಗಿ ಸ್ಥಿರತೆಯನ್ನು ಹೊಂದಿರ ಬೇಕು.

ಎದೆ ಹಾಲುಣಿಸುವಿಕೆ...

ಎದೆ ಹಾಲುಣಿಸುವಿಕೆ...

ಗರ್ಭಾವಸ್ಥೆಯ ಎರಡನೇ ಅಥವಾ ಮೂರನೇ ತಿಂಗಳಲ್ಲಿ ತಾಯಿಗೆ ಎದೆಹಾಲು ಉತ್ಪತ್ತಿಯಾಗುವುದು. ಗರ್ಭಿಣಿಯ ದೇಹದಲ್ಲಿ ಪ್ರೋಲ್ಯಾಕ್ಟಿನ್ ಹಾರ್ಮೋನ್ ಉನ್ನತ ಮಟ್ಟದಲ್ಲಿ ಹೊಂದಿದ್ದರೆ ಹಾಲಿನ ಹಠಾತ್ ಉತ್ಪತ್ತಿಯನ್ನು ಕಾಣಬಹುದು. ಅಂತಹ ಸಂದರ್ಭನರ್ಸಿಂಗ್ ಪ್ಯಾಡಗಳನ್ನು ಬಳಸುವುದರ ಮೂಲಕ ಉತ್ತಮ ನಿರ್ವಹಣೆಯನ್ನು ಕಾಣಬಹುದು. ಇದರಿಂದ ನೀವು ಪ್ರಸವದ ನಂತರ ಮಗುವಿಗೆ ಅತ್ಯುತ್ತಮ ರೀತಿಯಲ್ಲಿ ಹಾಲಿನ ಉತ್ಪಾದನೆ ಇರುತ್ತದೆ ಎಂದು ತಿಳಿಯಬಹುದು.

ಶಕ್ತಿಯ ಕೊರತೆ

ಶಕ್ತಿಯ ಕೊರತೆ

ಗರ್ಭಾವಸ್ಥೆಯ ಅವಧಿಯಲ್ಲಿ ಗರ್ಭಿಣಿಯರು ಹೆಚ್ಚಿನ ಶಕ್ತಿಯನ್ನು ಹೊಂದಿರುವುದಿಲ್ಲ ಎನ್ನುವುದು ಸಾಮಾನ್ಯ ವಿಚಾರ. ನೀವು ಮೊದಲ ಬಾರಿಗೆ ಗರ್ಭಿಣಿಯಾಗಿದ್ದರೆ ನಿಮ್ಮಲ್ಲಿ ಶಕ್ತಿಯಿಲ್ಲ ಎಂದು ಚಿಂತಿಸಬೇಡಿ. ಕೆಲವು ಸಮಯದಲ್ಲಿ ವಿಶ್ರಾಂತಿಯನ್ನು ಪಡೆಯಿರಿ. ಮೊದಲ ಮತ್ತು ಮೂರನೇ ತಿಂಗಳಲ್ಲಿ ಹೆಚ್ಚು ಆಯಾಸವನ್ನು ಕಾಣುವುದು. ಅಂತಹ ಸಂದರ್ಭದಲ್ಲಿ ಆದಷ್ಟು ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಲಘುವಾದ ವ್ಯಾಯಾಮ ಮಾಡುವುದರ ಮೂಲಕ ಆಯಾಸವನ್ನು ಎದುರಿಸಬಹುದು. ನಿಮ್ಮಲ್ಲಿ ಅಧಿಕ ಆತಂಕ ಅಥವಾ ಅನುಮಾನವಿದ್ದರೆ ರಕ್ತಹೀನತೆಯ ಪರೀಕ್ಷೆಯನ್ನು ಮಾಡಿಸಬೇಕು. ರಕ್ತ ಹೀನತೆ ಉಂಟಾದಾಗ ತೀವ್ರವಾದ ಆಯಾಸ ಉಂಟಾಗುವುದು. ಅಂತಹ ಸಂದರ್ಭದಲ್ಲಿ ಕಬ್ಬಿಣದ ಪೂರಕ ಆಹಾರ ಔಷಧವನ್ನು ನೀಡಲಾಗುವುದು. ಕೆಲವು ಮಹಿಳೆಯರಲ್ಲಿ ಮಲಬದ್ಧತೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಪ್ರೊಜೆಸ್ಟರಾನ್ ಎನ್ನುವ ಹಾರ್ಮೋನ್ ಮಲಬದ್ಧತೆಯನ್ನು ಉಂಟುಮಾಡುವುದು. ನಾರಿನಂಶ ಹೊಂದಿರುವ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸಬೇಕು. ಅಲ್ಲದೆ ಸಾಕಷ್ಟು ನೀರನ್ನು ಸೇವಿಸಬೇಕು. ಸಮಸ್ಯೆಗಳ ನಿವಾರಣೆಗೆ ವೈದ್ಯರಲ್ಲಿ ಸೂಕ್ತ ಸಲಹೆಯನ್ನು ಪಡೆದುಕೊಳ್ಳುವುದನ್ನು ಮರೆಯಬಾರದು.

English summary

Things That No One Tells You About Pregnancy

When you are pregnant, people flock to you to tell you how great being pregnant is. While all the excitement and happiness is more than justified, it is a great folly to believe that pregnancy and the days after child birth are going to be a bed of roses.Every pregnancy is different from the other. Even the same mother will experience each of her pregnancies as very different from the other. The adage "expect the unexpected" is very apt when it comes to the topic of pregnancy and child birth.
X
Desktop Bottom Promotion