For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ ಹೋಳಿ ಆಚರಿಸಿ! ಆದರೆ ಈ ಮುನ್ನೆಚ್ಚರಿಕೆಗಳನ್ನು ಅನುಸರಿಸಿ

By Hemanth
|

ಮಗು ಪಡೆಯಬೇಕೆಂಬ ಬಯಕೆ ಇರುವ ಮಹಿಳೆಗೆ ಗರ್ಭಧರಿಸಿದಾಗ ಆಗುವಂತಹ ಸಂತಸ, ಸಂಭ್ರಮ ಅಷ್ಟಿಷ್ಟಲ್ಲ. ಮಹಿಳೆ ಗರ್ಭವತಿಯಾದಾಗ ಆಕೆಗೆ ಕೆಲವೊಂದು ಕಟ್ಟುಪಾಡುಗಳನ್ನು ಕೂಡ ವಿಧಿಸಲಾಗುತ್ತದೆ. ಇದು ಆಕೆ ಮಗುವಿನ ಆರೋಗ್ಯದ ದೃಷ್ಟಿಯಿಂದ. ಗರ್ಭಧಾರಣೆಯ ಸಮಯದಲ್ಲಿ ಆಕೆ ತನ್ನ ಆರೋಗ್ಯದ ಬಗ್ಗೆ ದುಪ್ಪಟ್ಟು ಕಾಳಜಿ ವಹಿಸಬೇಕು. ದೇಹದಲ್ಲಿ ಆಗುವಂತಹ ಕೆಲವು ಬದಲಾವಣೆಗಳು ಕೂಡ ಮಗುವಿನ ಮೇಲೆ ಪರಿಣಾಮ ಬೀರುವುದು.

ಇಂತಹ ಕಟ್ಟುಪಾಡುಗಳಿಂದ ಗರ್ಭಿಣಿ ಮಹಿಳೆಯರಿಗೆ ಕೆಲವೊಂದು ಹಬ್ಬ ಹಾಗೂ ಇತರ ಸಂಭ್ರಮವನ್ನು ಸಂಪೂರ್ಣವಾಗಿ ಆನಂದಿಸಲು ಆಗಲ್ಲ. ಎಲ್ಲರೂ ಹಬ್ಬ ಆಚರಿಸುತ್ತಾ ಇರುವಾಗ ಗರ್ಭಿಣಿ ಮಹಿಳೆ ದೂರದಲ್ಲಿ ಕುಳಿತುಕೊಂಡಿದ್ದರೆ ಅದರಿಂದ ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವುದು. ಇದರಿಂದ ಕೆಲವೊಂದು ಮುಂಜಾಗ್ರತೆ ತೆಗೆದುಕೊಂಡು ಹಬ್ಬದಲ್ಲಿ ಭಾಗಿಯಾಗಬಹುದು. ಮುಂಬರುವ ಹೋಳಿ ಹಬ್ಬ ಎನ್ನುವುದು ಬಣ್ಣಗಳ ಹಬ್ಬ.

ಬಣ್ಣದ ಹಬ್ಬ 'ಹೋಳಿಯ' ಹಿಂದಿದೆ, ಒಂದು ರೋಚಕ ಕಥೆ...

ಇದರಲ್ಲಿ ಭಾಗಿಯಾಗಲು ಮಕ್ಕಳಿಂದ ಹಿಡಿದ ವಯೋವೃದ್ಧರ ತನಕ ಪ್ರತಿಯೊಬ್ಬರು ಬಯಸುವರು. ಇದಕ್ಕೆ ಗರ್ಭಿಣಿ ಮಹಿಳೆಯರು ಹೊರತಲ್ಲ. ಆದರೆ ಬಣ್ಣಗಳಲ್ಲಿ ಇರುವಂತಹ ಕೆಲವೊಂದು ರಾಸಾಯನಿಕಗಳು ಗರ್ಭಿಣಿ ಮಹಿಳೆ ಮೇಲೆ ಪರಿಣಾಮ ಬೀರಬಹುದು. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ನೀವು ಹೋಳಿ ಹಬ್ಬದ ಆನಂದ ಪಡೆಯಬಹುದು. ಅದು ಹೇಗೆ ಎಂದು ನೀವು ತಿಳಿಯಿರಿ....

ಡ್ಯಾನ್ಸ್ ಮಾಡಬೇಡಿ

ಡ್ಯಾನ್ಸ್ ಮಾಡಬೇಡಿ

ನೀವು ಗರ್ಭಧಾರಣೆಯ ಮೊದಲು ಅವಧಿಯಲ್ಲಿದ್ದರೆ ಆಗ ಇದನ್ನು ನೀವು ಯಾರಿಗೂ ಹೇಳದೆ ಇದ್ದರೆ ಸ್ನೇಹಿತರು ನಿಮ್ಮನ್ನು ಡ್ಯಾನ್ಸ್ ಮಾಡಲು ಕರೆಯುವುದು ಖಚಿತ. ಆದರೆ ನೀವು ಡ್ಯಾನ್ಸ್ ಮಾಡಲು ಹೋಗದೆ ಅದರಿಂದ ದೂರ ಉಳಿಯುವುದು ಅತೀ ಅಗತ್ಯ. ಯಾಕೆಂದರೆ ಡ್ಯಾನ್ಸ್ ಮಾಡಿದರೆ ಗರ್ಭಪಾತವಾಗುವ ಸಾಧ್ಯತೆ ಇರುವುದು. ಇದರಿಂದ ನೀವು ಆದಷ್ಟು ದೂರವಿರುವುದು ಒಳ್ಳೆಯದು. ನೀವು ಡ್ಯಾನ್ಸ್ ಮಾಡುವುದಿಲ್ಲವೆಂಬ ಕಾರಣಕ್ಕೆ ಕುಟುಂಬದ ಸದಸ್ಯರಿಗೆ ಕುತೂಹಲ ಮೂಡಬಹುದು. ಇಂತಹ ಸಮಯದಲ್ಲಿ ಮಗುವಿನ ಆಗಮನದ ಶುಭಸಮಾಚಾರ ಘೋಷಿಸಿ.

ಸರಿಯಾಗಿ ತಿನ್ನಿ

ಸರಿಯಾಗಿ ತಿನ್ನಿ

ದಿನವಿಡಿ ದೇಹದಲ್ಲಿ ತುಂಬಾ ನೀರಿನಾಂಶವಿರುವ ಹಾಗೆ ನೋಡಿಕೊಳ್ಳಿ. ಗರ್ಭಧಾರಣೆ ಸಮಯದಲ್ಲಿನ ಮಧುಮೇಹ ನಿಮ್ಮನ್ನು ಕಾಡುತ್ತಲಿದ್ದರೆ ಆಗ ಕರಿದ ಮತ್ತು ಕೊಬ್ಬಿನ ಆಹಾರದಿಂದ ದೂರವಿರಿ. ಸಿಹಿ ತಿನ್ನುವುದನ್ನು ನೀವು ತುಂಬಾ ಕಡಿಮೆ ಮಾಡಿ. ಅತಿಯಾದ ಆಹಾರ ಸೇವನೆಯಿಂದ ಜೀರ್ಣಕ್ರಿಯೆಗೆ ಸಮಸ್ಯೆಯಾಗಿ, ಅಜೀರ್ಣ, ಅಸಿಡಿಟಿ ಮತ್ತು ಎದೆ ಉರಿ ಉಂಟಾಗಬಹುದು. ಇದರ ಬಗ್ಗೆ ಎಚ್ಚರ ವಹಿಸಿ. ಇಂತಹ ಸಮಸ್ಯೆ ಉಂಟು ಮಾಡುವ ಆಹಾರಗಳನ್ನು ಸೇವಿಸಬೇಡಿ.

ಗುಂಪುಗಳಲ್ಲಿ ಇರುವುದನ್ನು ಕಡೆಗಣಿಸಿ

ಗುಂಪುಗಳಲ್ಲಿ ಇರುವುದನ್ನು ಕಡೆಗಣಿಸಿ

ಹೆಚ್ಚು ಜನರು ಸೇರಿದಂತೆ ಅಲ್ಲಿ ಗೊಂದಲ ನಿರ್ಮಾಣವಾವುದು ಸಹಜ. ಇಂತಹ ಸಮಯದಲ್ಲಿ ನಿಮ್ಮ ಪರಿಸ್ಥಿತಿಯಲ್ಲಿ ಅರ್ಥ ಮಾಡಿಕೊಳ್ಳಲು ಅವರಿಗೆ ಸಾಧ್ಯವಾಗುವುದಿಲ್ಲ. ಇದರಿಂದ ದೊಡ್ಡ ಗುಂಪಿನಲ್ಲಿ ನೀವು ಹೋಲಿ ಆಚರಿಸುವ ಬದಲು ಕೇವಲ ಮನೆಯ ಸದಸ್ಯರೊಂದಿಗೆ ಆಚರಿಸಿದರೆ ಒಳ್ಳೆಯದು.

 ನೀರಿನ ಬಣ್ಣದೊಂದಿಗೆ ಆಡಬೇಡಿ

ನೀರಿನ ಬಣ್ಣದೊಂದಿಗೆ ಆಡಬೇಡಿ

ನೀರಿನೊಂದಿಗೆ ಹೋಳಿ ಆಡುವಾಗ ಅಲ್ಲಿ ಜಾರುವ ಸಾಧ್ಯತೆಯು ಹೆಚ್ಚಾಗಿರುವುದು. ನೀವು ನೀರಿನಿಂದಾಗಿ ಜಾರಿ ಬಿದ್ದು ಗಾಯಗೊಂಡರೆ ಆಗ ಅದರ ನೇರ ಪರಿಣಾಮ ಮಗುವಿನ ಮೆದುಳಿನ ಮೇಲೆ ಆಗುವುದು. ಇಂತಹ ಸಮಯದಲ್ಲಿ ಗರ್ಭಪಾತವಾಗುವ ಸಾಧ್ಯತೆಯು ಹೆಚ್ಚಾಗಿರುವುದು. ಇಂತಹ ಕೆಟ್ಟ ಪ್ರಸಂಗಗಳನ್ನು ತಡೆಯುವ ಸಲುವಾಗಿ ನೀವು ನೀರಿನ ಹೋಳಿಯಿಂದ ದೂರವಿದ್ದರೆ ಉತ್ತಮ.

ಎಣ್ಣೆ ಮತ್ತು ಮಾಯಿಶ್ಚರೈಸರ್ ಬಳಸಿ

ಎಣ್ಣೆ ಮತ್ತು ಮಾಯಿಶ್ಚರೈಸರ್ ಬಳಸಿ

ಹೋಳಿ ಆಡುವಾಗ ನೀವು ಮೈಗೆ ಎಣ್ಣೆ ಹಚ್ಚಿಕೊಳ್ಳುವುದು ಅತೀ ಅಗತ್ಯ. ದೇಹಕ್ಕೆ ಎಣ್ಣೆ ಹಚ್ಚಿಕೊಳ್ಳಲು ನಿಮಗೆ ಕಿರಿಕಿರಿಯಾಗುತ್ತಾ ಇದ್ದರೆ ಆಗ ನೀವು ಮೊಶ್ಚಿರೈಸರ್ ಅಥವಾ ಪೆಟ್ರೋಲಿಯಂ ಜೆಲ್ ಬಳಸಿ. ಇದರಿಂದ ಚರ್ಮಕ್ಕೆ ಬಣ್ಣ ಹಚ್ಚಿಕೊಳ್ಳುವುದಿಲ್ಲ ಮತ್ತು ಅದನ್ನು ತೆಗೆಯಲು ಸುಲಭವಾಗುವುದು.

ಸರಿಯಾದ ಬಟ್ಟೆ ಧರಿಸಿ

ಸರಿಯಾದ ಬಟ್ಟೆ ಧರಿಸಿ

ಹೋಳಿ ಆಡುವಾಗ ತುಂಬಾ ಗ್ಲ್ಯಾಮರಸ್ ಆಗಿ ಕಾಣಿಸಬೇಕೆಂದು ಎಲ್ಲರು ಬಯಸುವುದು ಇದೆ. ಆದರೆ ಜೀವನದ ತುಂಬಾ ಸೂಕ್ಷ್ಮ ಘಟ್ಟದಲ್ಲಿ ನೀವು ತುಂಬಾ ಎಚ್ಚರಿಕೆ ವಹಿಸಿಕೊಳ್ಳಬೇಕು. ಇದರಿಂದ ಬಿಗಿಯಾದ ಬಟ್ಟೆ ಧರಿಸಬೇಡಿ. ಹೈಹಿಲ್ಡ್ ಚಪ್ಪಲಿ ಧರಿಸಬೇಡಿ. ನೀವು ಧರಿಸುವ ಚಪ್ಪಲಿಯು ನಿಮಗೆ ಆರಾಮದಾಯಕವಾಗಿರಲಿ.

ಬೆಂಕಿಯಿಂದ ದೂರವಿರಿ

ಬೆಂಕಿಯಿಂದ ದೂರವಿರಿ

ಹೋಳಿ ಸಂದರ್ಭದಲ್ಲಿ ಕಾಮದಹನ ಮಾಡುವಾಗ ಕಟ್ಟಿಗೆಗೆ ಬೆಂಕಿ ಹಚ್ಚುತ್ತಾರೆ. ಇದರಿಂದ ಸಹಜವಾಗಿ ಅತಿಯಾದ ಬೆಂಕಿ ಬರುವುದು. ಈ ವೇಳೆ ನೀವು ಬೆಂಕಿಯಿಂದ ಆದಷ್ಟು ದೂರವಿರಿ. ಮೈದಾನದಲ್ಲಿ ಕಾಮದಹನ ಮಾಡುವ ಕಾರ್ಯಕ್ರಮ ಆಯೋಜಿಸಿ. ತುಂಬಾ ಇಕ್ಕಟ್ಟಾಗಿರುವ ಜಾಗದಲ್ಲಿ ಇದನ್ನು ಮಾಡಬೇಡಿ. ಬೆಂಕಿಯಾಡುವ ವೇಳೆ ಹೊಗೆ ಬರುವುದು. ಇದರಿಂದ ನಿಮಗೆ ಉಸಿರುಗಟ್ಟಿದಂತೆ ಆಗುವುದು. ನೈಲನ್ ಅಥವಾ ಸಿಂಥೆಟಿಕ್ ಬಟ್ಟೆ ಧರಿಸಬೇಡಿ. ಇದಕ್ಕೆ ಬೇಗನೆ ಬೆಂಕಿ ಹತ್ತಿಕೊಳ್ಳುವುದು.

ಮದ್ಯ ಕಡೆಗಣಿಸಿ

ಮದ್ಯ ಕಡೆಗಣಿಸಿ

ಗರ್ಭಧರಿಸಿರುವ ಮಹಿಳೆಯರು ಮದ್ಯಪಾನದಿಂದ ದೂರವಿರಬೇಕೆಂದು ಹೇಳಲಾಗುತ್ತದೆ. ಹೋಳಿ ವೇಳೆ ನೀವು ಬಾಂಗ್ ಕುಡಿದರೆ ಆಗ ಅದು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಇದರಿಂದ ನಿಮಗೆ ಆಯಾಸವಾದಂತೆ ಭಾಸವಾಗುವುದು. ಇಂತಹ ಸಂದರ್ಭದಲ್ಲಿ ಇದು ಗರ್ಭದಲ್ಲಿರುವ ಮಗುವಿನ ನರಕೋಶದ ಮೇಲೆ ಪರಿಣಾಮ ಬೀರಬಹುದು. ಇದರಿಂದ ಹೋಳಿ ಸಂದರ್ಭದಲ್ಲಿ ಬಾಂಗ್ ಸೇವನೆಯಿಂದ ದೂರವಿರಿ.

ಸಣ್ಣ ಬಟ್ಟೆಗಳನ್ನು ಧರಿಸಬೇಡಿ

ಸಣ್ಣ ಬಟ್ಟೆಗಳನ್ನು ಧರಿಸಬೇಡಿ

ಹೋಳಿ ಆಡುವ ವೇಳೆ ಸಂಪೂರ್ಣ ಮೈ ಮುಚ್ಚಿಕೊಳ್ಳುವ ಸಲ್ವಾರ್ ಕಮೀಜ್ ಅಥವಾ ಚೂಡಿದಾರ ಧರಿಸಿ. ಇದರಿಂದ ದೇಹದ ಮೇಲೆ ಕಡಿಮೆ ಬಣ್ಣ ಬೀಳುವುದು ಮತ್ತು ರಾಸಾಯನಿಕದಿಂದ ದೇಹಕ್ಕೆ ಹಾನಿಯಾಗುವುದನ್ನು ತಡೆಯಬಹುದು.

ಸಂತೋಷವಾಗಿರಿ

ಸಂತೋಷವಾಗಿರಿ

ಗರ್ಭದಲ್ಲಿರುವ ಮಗುವಿನ ಆರೋಗ್ಯವು ತಾಯಿಯ ಮಾನಸಿಕ ಆರೋಗ್ಯದ ಮೇಲೆ ಅವಲಂಬಿತವಾಗಿರುವುದು ಎನ್ನುವುದು ತಿಳಿದಿರುವ ಸತ್ಯ. ಎಲ್ಲರೂ ಹೋಳಿ ಸಂಭ್ರಮದಲ್ಲಿ ಮಿಂದೇಳುವಾಗ ನೀವು ಅದರಿಂದ ದೂರವಿದ್ದು ಬೇಸರ ಮಾಡಬೇಡಿ. ಕೆಲವು ವಿಷಯಗಳನ್ನು ಪಾಲಿಸಿಕೊಂಡು ನೀವು ಕೂಡ ಹೋಳಿ ಆಡಿ ಸಂಭ್ರಮಿಸಿ. ಆದರೆ ಎಚ್ಚರ ಅಗತ್ಯ.

English summary

Safe Ways To Celebrate Holi When Pregnant

One of the most beautiful periods of a woman's life is when she is pregnant and is about to bring in a new life. This period is when she needs to be all the way more careful about her health. It is at this time (and post delivery even during the period when she is lactating) that what she eats and how much physical care she takes of her body have a direct impact on her child.
X
Desktop Bottom Promotion