For Quick Alerts
ALLOW NOTIFICATIONS  
For Daily Alerts

ಇದೇ ಕಾರಣಕ್ಕೆ ಕೆಲವೊಮ್ಮೆ ಗರ್ಭಿಣಿಯರು ಸರಿಯಾಗಿ ನಿದ್ದೆ ಮಾಡದಿರುವುದು!

|

ಗರ್ಭಾವಸ್ಥೆಯಲ್ಲಿ ಗರ್ಭಿಣಿಯರಿಗೆ ಹಚ್ಚಿನ ವಿಶ್ರಾಂತಿಯನ್ನು ತೆಗೆದುಕೊಳ್ಳಲು ತಿಳಿಸಲಾಗುತ್ತದೆ ಅಂತೆಯೇ ಸಾಕಷ್ಟು ನಿದ್ದೆ ಮಾಡುವಂತೆ ಸಲಹೆ ಮಾಡಲಾಗುತ್ತದೆ. ವಿಶ್ರಾಂತಿಯಿಂದ ದೇಹದಲ್ಲಾಗುವ ಬದಲಾವಣೆಯ ಸಮಯದಲ್ಲಿ ದೇಹಕ್ಕೆ ಹೊಂದಿಕೊಳ್ಳಲು ಸಮಯ ಸಿಗುತ್ತದೆ. ಇದು ನಿಮ್ಮ ಭ್ರೂಣದ ಬೆಳವಣಿಗೆಗೂ ಅತ್ಯುತ್ತಮವಾಗಿದೆ.

ನಿಮ್ಮ ಮಗುವಿನ ಆಗಮನದ ನಂತರ ನಿಮಗೆ ಒಳ್ಳೆಯ ನಿದ್ದೆ ಸಿಗುವುದಂತೂ ಸುಳ್ಳು. ಆದರೆ ಗರ್ಭಿಣಿಯಾಗಿದ್ದಾಗ ಒಳ್ಳೆಯ ನಿದ್ದೆ ಸಿಗುವುದು ಕಷ್ಟವೇ ಆಗಿದೆ. ಆರಾಮವಾಗಿ ನಿದ್ದೆ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಆಕೆಗೆ ಒಳ್ಳೆಯ ನಿದ್ದೆ ಬಂತೆಂದರೆ ಆಕೆ ಅದೃಷ್ಟಶಾಲಿಯೆ ಸರಿ. ಇಂದಿನ ಲೇಖನದಲ್ಲಿ ನಿದ್ರಾಕೊರತೆಗೆ ಕಾರಣವಾಗಿರುವ ಕೆಲವೊಂದು ಅಂಶಗಳನ್ನು ಚರ್ಚಿಸೋಣ....

ಆಗಾಗ ಬರುವ ಮೂತ್ರಶಂಕೆ

ಆಗಾಗ ಬರುವ ಮೂತ್ರಶಂಕೆ

ಗರ್ಭಾವಸ್ಥೆಯಲ್ಲಿ ಹೆಚ್ಚು ಕಾಡುವುದು ಮೂತ್ರಶಂಕೆಯಾಗಿದೆ. ಆಗಾಗ ಬಾತ್‌ರೂಮ್‌ಗೆ ಹೋಗಬೇಕಾದ ಅನಿವಾರ್ಯತೆಯಿಂದಾಗಿ ನಿದ್ದೆಗೆ ಭಂಗ ವುಂಟಾಗುವುದು ಖಂಡಿತ. ಹೆಚ್ಚುವರಿ ಮಟ್ಟದ ಹಾರ್ಮೊನು ಎಚ್‌ಸಿಜಿಯಿಂದಾಗಿ ಇದು ಸಂಭವಿಸುತ್ತದೆ. ಇನ್ನೊಂದು ಕಾರಣವೆಂದರೆ ಸಾಮಾನ್ಯಕ್ಕಿಂತ 50 ಪಟ್ಟು ಹೆಚ್ಚಾಗಿ ಕಿಡ್ನಿಗಳು ರಕ್ತವನ್ನು ಉತ್ಪಾದಿಸುತ್ತವೆ. ಇದರಿಂದ ನೀವು ಅಗತ್ಯಕ್ಕಿಂತ ಹೆಚ್ಚಾಗಿಯೇ ಮೂತ್ರ ಮಾಡುತ್ತೀರಿ. ಗರ್ಭಾವಸ್ಥೆಯು ಮುಂದುವರೆದಂತೆ, ಬೆಳೆಯುತ್ತಿರುವ ಗರ್ಭಾಶಯವು ಮೂತ್ರಕೋಶವನ್ನು ಕೆಳಗೆ ತಳ್ಳುತ್ತದೆ, ಮೂತ್ರವನ್ನು ಶೇಖರಿಸಿಡಲು ಕಡಿಮೆ ಜಾಗವನ್ನು ಬಿಟ್ಟುಬಿಡುತ್ತದೆ. ಇದರಿಂದ ಆಗಾಗ್ಗೆ ಮೂತ್ರಶಂಕೆ ನಿಮಗುಂಟಾಗುತ್ತದೆ.

ಸಮಸ್ಯೆಯನ್ನು ಸರಿಪಡಿಸುವುದು ಹೇಗೆ?

ನೀವು ದಿನದ ಮೊದಲಾರ್ಧದಲ್ಲಿ ಹೆಚ್ಚು ಕುಡಿಯುವ ರೀತಿಯಲ್ಲಿ ರಾತ್ರಿ ಸೇವಿಸುವ ನೀರು ಕಡಿಮೆ ಮಾಡಿ. ಮಲಗುವ ಸಮಯದಲ್ಲಿ ಕಡಿಮೆ ಪ್ರಮಾಣದಲ್ಲಿ ದ್ರವಗಳನ್ನು ಸೇವಿಸಿ. ಆದಾಗ್ಯೂ, ನೀವು ರಾತ್ರಿಯಲ್ಲಿ ಕನಿಷ್ಠ ಎರಡು ಬಾರಿ ಸ್ನಾನಮಾಡಿ. ನಿಮ್ಮ ಬಾತ್‌ರೂಮ್‌ನಲ್ಲಿ ರಾತ್ರಿಯ ಬೆಳಕನ್ನು ಬದಲಿಸಿ ಇಟ್ಟುಕೊಳ್ಳಿ, ಇದರಿಂದಾಗಿ ನಿಮ್ಮ ಕೆಲಸವನ್ನು ಬೀಳದೆಯೇ ಗಾಯಗೊಳ್ಳದೆಯೇ ಯಾವುದೇ ಅಪಾಯವಿಲ್ಲದೆ ಮಾಡಬಹುದು. ಸಾಮಾನ್ಯ ದೀಪಗಳನ್ನು ಬದಲಾಯಿಸುವುದರಿಂದ ನಿದ್ರೆಗೆ ಹಿಂತಿರುಗಲು ತೊಂದರೆ ಉಂಟುಮಾಡಬಹುದು.

ಗರ್ಭಿಣಿಯರೇ ಜೋಕೆ, ಮಲಗುವ ವಿಷಯದಲ್ಲಿ ಎಚ್ಚರ ತಪ್ಪದಿರಿ!

ಅಸ್ವಸ್ಥತೆ

ಅಸ್ವಸ್ಥತೆ

ಅಸ್ವಸ್ಥತೆ ಗರ್ಭಿಣಿ ಮಹಿಳೆಯ ನಿರಂತರ ಸಂಗಾತಿ. ಗರ್ಭಧಾರಣೆಯ ಎರಡನೆಯ ಮತ್ತು ಮೂರನೆಯ ತ್ರೈಮಾಸಗಳಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ. ನಿದ್ರೆ ಸಮಯದಲ್ಲಿ ಅಸ್ವಸ್ಥತೆ ಗರ್ಭಿಣಿಯರನ್ನು ಒಮ್ಮೊಮ್ಮೆ ಕಾಡುತ್ತದೆ, ತಮ್ಮ ಬೆನ್ನಿನ ಮೇಲೆ ನಿದ್ರಿಸುವ ಜನರು ಸಹ ಬದಿಗಳಲ್ಲಿ ನಿದ್ದೆ ಮಾಡಲು ಸಲಹೆ ನೀಡುತ್ತಾರೆ, ಪರಿಚಯವಿಲ್ಲದ ಸ್ಥಾನದಲ್ಲಿ ನಿದ್ದೆ ಮಾಡಲು ಕಷ್ಟವಾಗುತ್ತದೆ. ಈ ಸ್ಥಿತಿಯಲ್ಲಿರುವಂತೆ, ಗರ್ಭಾಶಯ ಮತ್ತು ಮಗುವಿನ ಒತ್ತಡವನ್ನು ಉಂಟುಮಾಡುತ್ತದೆ ಮತ್ತು ಇದು ನಿಮ್ಮ ದೇಹದಲ್ಲಿನ ಕೆಳಗಿನ ಅರ್ಧದಿಂದ ನಿಮ್ಮ ಹೃದಯಕ್ಕೆ ರಕ್ತವನ್ನು ತೆಗೆದುಕೊಳ್ಳುವ ರಕ್ತನಾಳದ ಮೇಲೆ ತೂಕವನ್ನು ಉಂಟುಮಾಡುತ್ತದೆ.

ಪರಿಹಾರ

ಒಂದೇ ಭಾಗದಲ್ಲಿ ನಿದ್ದೆ ಮಾಡುವುದು ನಿದ್ದೆಯ ಸಮಯದಲ್ಲಿ ನಿಮಗೆ ಆರಾಮವನ್ನು ನೀಡುತ್ತದೆ. ನಿಮ್ಮ ಎಡಭಾಗವನ್ನು ಇದಕ್ಕಾಗಿ ಆಯ್ಕೆಮಾಡಿಕೊಳ್ಳಿ. ಇದರಿಂದ ನಿಮ್ಮ ಕಿಡ್ನಿ ಕ್ರಿಯೆಗಳು ಸಾಂಗವಾಗಿ ನಡೆಯುತ್ತದೆ. ಅಂತೆಯೇ ತಲೆದಿಂಬನ್ನು ಕೂಡ ನೀವು ಬಳಸಿಕೊಳ್ಳಬಹುದು...

ಎದೆಯುರಿ

ಎದೆಯುರಿ

ಎದೆಯುರಿಯಂತಹ ಸಮಸ್ಯೆಯನ್ನು ಗರ್ಭಿಣಿ ಸ್ತ್ರೀಯರು ಅನುಭವಿಸಬೇಕಾಗುತ್ತದೆ. ರಾತ್ರಿಯ ಸಮಯದಲ್ಲಿ ಇದು ಹೆಚ್ಚಿನ ತೊಂದರೆಯನ್ನುಂಟು ಮಾಡುತ್ತದೆ. ಗ್ಯಾಸ್ಟ್ರಿಕ್ ಕೂಡ ಇದಕ್ಕೆ ಕಾರಣವಾಗುತ್ತದೆ.

ಸಮಸ್ಯೆಗೆ ಪರಿಹಾರ

ಹೆಚ್ಚು ಖಾರ, ಮಸಾಲೆ ಒಳಗೊಂಡಿರುವ ಆಹಾರ ಪದಾರ್ಥಗಳನ್ನು ತಿನ್ನಬೇಡಿ. ದಿನಪೂರ್ತಿ ಸಣ್ಣ ಪ್ರಮಾಣದ ಆಹಾರಗಳನ್ನು ಸೇವಿಸುವುದನ್ನು ಆರಂಭಿಸಿ. ರಾತ್ರಿಯ ಕೊನೆಯ ಊಟವನ್ನು ಎರಡು ಗಂಟೆಯ ಮೊದಲು ತೆಗೆದುಕೊಳ್ಳಿ. ತಲೆದಿಂಬನ್ನು ಬಳಸಿ ನಿದ್ದೆ ಮಾಡಿ. ಇನ್ನೂ ನೀವು ಸಮಸ್ಯೆಯನ್ನು ಎದುರಿಸುತ್ತಿದ್ದೀರಿ ಎಂದಾದಲ್ಲಿ ವೈದ್ಯರನ್ನು ಭೇಟಿಯಾಗಿ ಮತ್ತು ಅವರ ಸಲಹೆಯನ್ನು ಪಾಲಿಸಿ.

ಖಿನ್ನತೆ

ಖಿನ್ನತೆ

ಖಿನ್ನತೆ ಯಾವುದೇ ಸಮಯದಲ್ಲಿ ನಿಮ್ಮನ್ನು ಕಾಡಬಹುದು. ಗರ್ಭಾವಸ್ಥೆ ಹಾರ್ಮೋನು ಮತ್ತು ಒತ್ತಡದ ಕಾರಣದಿಂದಾಗಿ ಖಿನ್ನತೆ ನಿಮಗುಂಟಾಗಬಹುದು. ಹೆಚ್ಚಿನ ಸಮಯದಲ್ಲಿ ಗರ್ಭಾವತಿ ಮಹಿಳೆಯರು ಈ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಹೇಗೆ

ನಿಮ್ಮ ನಿದ್ದೆಗಿಂತ ಮುಂಚೆ ಸರಿಯಾದ ದಿನಚರಿಯನ್ನು ರೂಢಿಸಿಕೊಳ್ಳಿ. ಯೋಗ ಪ್ರಾಣಾಯಾಮ ಮೊದಲಾದವುಗಳನ್ನು ಅಭ್ಯಾಸ ನಡೆಸಿ.

ಕಾಲಿನ ಸೆಳೆತಗಳು

ಕಾಲಿನ ಸೆಳೆತಗಳು

ಎರಡನೇ ಮತ್ತು ಮೂರನೇ ಮಾಸಿಕದಲ್ಲಿ ಕಾಲಿನ ಸೆಳೆತಗಳಂತಹ ಸಮಸ್ಯೆಗಳನ್ನು ಹೆಚ್ಚಿನ ಗರ್ಭಿಣಿಯರು ಅನುಭವಿಸುತ್ತಾರೆ. ರಕ್ತನಾಳಗಳ ಸೆಳೆಯುವಿಕೆಯಿಂದ ಈ ಸೆಳೆತ ಉಂಟಾಗುತ್ತದೆ. ಪಾದ ಊದಿದಂತಹ ಅನುಭವ ಕೂಡ ನಿಮಗಾಗಬಹುದು. ಗರ್ಭಾವಸ್ಥೆಯಲ್ಲಿ ಹೆಚ್ಚಿನ ತೂಕವನ್ನು ನೀವು ಹೊರುವುದರಿಂದ ಈ ಸಮಸ್ಯೆ ಉಂಟಾಗುತ್ತದೆ. ದಿನದ ಸಮಯಕ್ಕಿಂತ ರಾತ್ರಿ ವೇಳೆಯೇ ಇದು ಹೆಚ್ಚು ಗಮನಕ್ಕೆ ಬರುತ್ತದೆ.

ಸಮಸ್ಯೆಗೆ ಪರಿಹಾರ

ಕ್ಯಾಲ್ಶಿಯಂ ಮತ್ತು ಮೆಗ್ನೇಶಿಯಂ ಅಧಿಕ ಪ್ರಮಾಣದಲ್ಲಿರುವ ಆಹಾರಗಳನ್ನು ಸೇವಿಸಬೇಕೆಂಬುದಾಗಿ ವೈದ್ಯರು ಈ ಸಮಯದಲ್ಲಿ ತಿಳಿಸುತ್ತಾರೆ. ಹಾಲು, ಮೊಸರು, ಸೋಯಾ ಬೀನ್ಸ್ ಮತ್ತು ಬಾಳೆಹಣ್ಣುಗಳನ್ನು ಸೇವಿಸಬೇಕು. ಹೆಚ್ಚಿನ ಪೂರೈಕೆ ಆಹಾರ ಬೇಕಾದಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಹೆಚ್ಚಿನ ನೀರು ಸೇವನೆ ನಿಮ್ಮ ಸಮಸ್ಯೆಗೆ ಪರಿಹಾರವನ್ನು ನೀಡಬಹುದು. ಕಾಲಿನ ಸೆಳೆತಗಳಂತಹ ಸಮಸ್ಯೆಯನ್ನು ಇದು ನಿವಾರಿಸುತ್ತದೆ.ಅದಾಗ್ಯೂ ಈ ಸಮಸ್ಯೆ ಹೆಚ್ಚು ಉಂಟಾಗುತ್ತಿದೆ ಎಂದಾದಲ್ಲಿ ನಿಮ್ಮ ವೈದ್ಯರನ್ನು ಕಾಣಿ.

ಶೀತ ನೆಗಡಿ ಸಮಸ್ಯೆ

ಶೀತ ನೆಗಡಿ ಸಮಸ್ಯೆ

ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಏರಿಳಿತ ನಿಮ್ಮ ದೇಹದಲ್ಲಿ ಉಂಟಾಗುತ್ತಿರುತ್ತದೆ. ಇದು ರಕ್ತದ ಪ್ರಮಾಣವನ್ನು ಹೆಚ್ಚಿಸುತ್ತದೆ. ಕಟ್ಟಿದ ಮೂಗು, ಶೀತ ಆಗಾಗ ನಿಮ್ಮನ್ನು ಕಾಡಬಹುದು.

ಸಮಸ್ಯೆಗೆ ಪರಿಹಾರ

ಮೂಗಿಗೆ ಅನ್ವಯಿಸುವ ಔಷಧಗಳನ್ನು ಬಳಸಿ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ. ನಿಮ್ಮ ವೈದ್ಯರೊಂದಿಗೆ ಸಮಾಲೋಚಿಸಿ ನಂತರವೇ ಈ ಔಷಧದ ಬಳಕೆಯನ್ನು ಮಾಡಿ.

ಗೊರಕೆ

ಗೊರಕೆ

ಕಟ್ಟಿದ ಮೂಗಿನಿಂದಾಗಿ ನಿಮ್ಮ ಮೂರನೇ ತ್ರೈಮಾಸಿಕದಲ್ಲಿ ನಿಮಗೆ ಗೊರಕೆ ಸಮಸ್ಯೆ ಉಂಟಾಗಬಹುದು. ತೂಕದಲ್ಲಿ ಏರಿಕೆ ಕೂಡ ಇದಕ್ಕೆ ಕಾರಣವಾಗುತ್ತದೆ. ಹೆಚ್ಚಿನ ರಕ್ತದೊತ್ತಡ ಮತ್ತು ಮಧುಮೇಹದಂತಹ ಸಮಸ್ಯೆಗಳು ಈ ನಿದ್ದೆಯ ಸಮಸ್ಯೆಯೊಂದಿಗೆ ಸಂಬಂಧವನ್ನು ಹೊಂದಿರುತ್ತದೆ.

ಸಮಸ್ಯೆಗೆ ಪರಿಹಾರ

ಕಟ್ಟಿದ ಮೂಗು ಮತ್ತು ಗೊರಕೆ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಲು ಮೂಗಿಗೆ ಧರಿಸುವ ಔಷಧಗಳನ್ನು ಬಳಸಿ. ಕೆಲವು ತಲೆದಿಂಬುಗಳನ್ನು ಬಳಸಿ ನಿದ್ದೆ ಮಾಡಿ.

ಕಾಲು ನೋವು

ಕಾಲು ನೋವು

ಮೂರನೇ ತ್ರೈಮಾಸಿಕದಲ್ಲಿ ಹೆಚ್ಚಿನ ಗರ್ಭಿಣಿಯರಿಗೆ ಪಾದದ ನೋವು ಮತ್ತು ಕಾಲು ನೋವು ಉಂಟಾಗುತ್ತದೆ. ಕಾಲುಗಳಲ್ಲಿನ ಜೋಮು ನಿದ್ದೆಗೆ ಭಂಗವನ್ನುಂಟು ಮಾಡುತ್ತದೆ. ಒಮ್ಮೊಮ್ಮೆ ಇದು ನಿಮ್ಮ ನಿದ್ದೆಗೆ ಅಡಚಣೆಯನ್ನುಂಟು ಮಾಡುತ್ತದೆ.

ಸಮಸ್ಯೆಗೆ ಪರಿಹಾರ

ಕಬ್ಬಿಣದ ಸಮಸ್ಯೆಯಿಂದಾಗಿ ಈ ಸಮಸ್ಯೆ ಉಂಟಾಗುತ್ತದೆ. ನಿಮ್ಮ ರಕ್ತದಲ್ಲಿ ಕಬ್ಬಿಣದ ಪೂರೈಕೆಯನ್ನು ಮಾಡಿಕೊಳ್ಳುವ ಆಹಾರವನ್ನು ಸೇವಿಸಿ. ಯೋಗ, ಅಕ್ಯುಪಂಕ್ಚರ್ ಮತ್ತು ಪ್ರಾಣಾಯಾಮವನ್ನು ಮಾಡಿ. ನಿಮ್ಮ ಕಾಲುಗಳಿಗೆ ಬಿಸಿ ಇಲ್ಲವೇ ತಣ್ಣಗಿನ ಪ್ಯಾಕ್‌ಗಳನ್ನು ಬಳಸಿ.

ಮಹಿಳೆಯರಿಗೆ ಸಂತಾನಭಾಗ್ಯ ಕರುಣಿಸುವ ಆಹಾರಗಳು

English summary

Reasons For Lack Of Sleep During Pregnancy

Sleeping well during pregnancy is an advice easier given than practiced. If you see a pregnant woman who claims to be able to sleep as comfortably as she did earlier, tell her that she is the luckiest pregnant woman around. Most pregnant women deal with various problems that make sound sleep difficult, if not impossible. Today, we shall talk about the various problems that pregnant women face while sleeping. The problems range from a simple heartburn to the very terrifying sleep apnoea. We shall also talk about the ways in which the problems can be tackled. Let's dive in.
X
Desktop Bottom Promotion