For Quick Alerts
ALLOW NOTIFICATIONS  
For Daily Alerts

ಜೋತುಬಿದ್ದ ಸ್ತನಕ್ಕೆ ಮನೆಯಲ್ಲೇ ಮಾಡಿಕೊಳ್ಳಿ ಪರಿಹಾರಗಳು

|

ಬ್ರಹ್ಮನ ಅದ್ಭುತ ಸೃಷ್ಟಿಗಳಲ್ಲಿ ಹೆಣ್ಣು ಕೂಡ ಒಂದಾಗಿದ್ದು ಹೆಣ್ಣಿನ ಸೃಷ್ಟಿಗೆ ಬ್ರಹ್ಮನು ಹೆಚ್ಚಿನ ಸಮಯವನ್ನು ತೆಗೆದುಕೊಂಡಿದ್ದರು ಎಂಬುದಾಗಿ ಪುರಾಣಗಳಲ್ಲಿ ಬಣ್ಣಿಸಲಾಗಿದೆ! ಹೆಣ್ಣು ಆಕರ್ಷಣೆಯ ಕೇಂದ್ರಬಿಂದುವಾಗಿದ್ದು ಭೂಮಿಯಲ್ಲಿ ಹೆಣ್ಣಿಗೆ ಅಕೆಯದೇ ಆದ ಸ್ಥಾನಮಾನವಿದೆ. ಸೌಂದರ್ಯದಲ್ಲಿ ಆಕೆಯನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ.

ಹಿಂದಿನ ಕಾಲದಲ್ಲಿ ಕೂಡ ಹೆಣ್ಣಿನ ಸೌಂದರ್ಯಕ್ಕೆ ಮನಸೋತು ಎಷ್ಟೋ ಯುದ್ಧಗಳೇ ನಡೆದುಹೋಗಿವೆ. ದುಷ್ಟರ ನಾಶವಾಗಿದೆ. ಹೀಗೆ ಹೆಣ್ಣ ಮನಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಎಂಬುದನ್ನು ಅಂದೂ ತೋರಿಸಿದ್ದಾಳೆ ಇಂದು ತೋರಿಸಿಕೊಡುತ್ತಿದ್ದಾಳೆ.

ಆದರೆ ಹೆಣ್ಣಿಗೆ ಮುಖ್ಯವಾಗಿ ಗುಣದೊಂದಿಗೆ ರೂಪು ಕೂಡ ಸಾಥ್ ಕೊಟ್ಟರೆ ಆಕೆಯ ಬೆಲೆ ಮೇಲೇರುತ್ತದೆ. ಇಂದು ರೂಪಕ್ಕಿಂತ ಗುಣ ಮುಖ್ಯವಾಗಿದ್ದರೂ ದೈಹಿಕ ಸೌಂದರ್ಯ ಇರಲೇಬೇಕು. ಅದರಲ್ಲೂ ಹೆಣ್ಣಿನ ಸೌಂದರ್ಯಕ್ಕೆ ಮೆರುಗು ತರುವ ಸ್ತನದ ಸೌಂದರ್ಯ ಅತಿಮುಖ್ಯವಾದುದು. ಸ್ತನಗಳು ಜೋತು ಬೀಳದೆಯೇ ನೈಸರ್ಗಿಕವಾಗಿ ದೃಢವಾಗಿದ್ದರೆ ಒಂದು ರೀತಿಯ ಆಕರ್ಷಣೆಯನ್ನುಂಟು ಮಾಡುತ್ತದೆ ಹೆಣ್ಣಿನ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.

ಸ್ತನಗಳನ್ನು ಬಿಗಿಗೊಳಿಸುವ ಕೆಲವು ನೈಸರ್ಗಿಕ ಮನೆಮದ್ದುಗಳು

ಇಂದಿನ ದಿನಗಳಲ್ಲಿ ಸ್ತನದ ಜೋತುಬೀಳುವಿಕೆಗೆ ಹಲವಾರು ಕಾರಣಗಳನ್ನು ನಾವು ಪಟ್ಟಿ ಮಾಡಬಹುದು. ಜೀವನ ಶೈಲಿ, ಔಷಧಿ, ಗರ್ಭಾವಸ್ಥೆ ಹೀಗೆ ಬೇರೆ ಬೇರೆ ಕಾರಣಗಳಿಂದ ಸ್ತನ ಜೋತುಬೀಳುವ ಸಮಸ್ಯೆಗೆ ಒಳಗಾಗುತ್ತಿದೆ. ಆದರೆ ನಿಮ್ಮ ಈ ಸಮಸ್ಯೆಯನ್ನು ಹೋಗಲಾಡಿಸಲು ಮನೆಯಲ್ಲೇ ಕೆಲವೊಂದು ಔಷಧಗಳನ್ನು ನೀವು ಮಾಡಬಹುದಾಗಿದ್ದು ಸ್ತನ ಜೋತುಬೀಳುವಿಕೆಯ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು...

 ಐಸ್ ಮಸಾಜ್

ಐಸ್ ಮಸಾಜ್

ನಿಮ್ಮ ಸ್ತನಕ್ಕೆ ಐಸ್ ಮಸಾಜ್‌ ಅನ್ನು ನೀಡಿ ಜೋತುಬೀಳುವಿಕೆಗೆ ಮಂಗಳ ಹಾಡಬಹುದು. ಇದು ಸ್ತನವನ್ನು ದೃಢಗೊಳಿಸುತ್ತದೆ. ಎರಡು ಐಸ್ ತುಂಡುಗಳನ್ನು ಬಳಸಿಕೊಂಡು ಕೆಲವು ನಿಮಿಷ ಸ್ತನಕ್ಕೆ ಮಸಾಜ್ ಮಾಡಿ. ಬಟ್ಟೆಯಿಂದ ತೇವವನ್ನು ಒರೆಸಿ ಕೂಡಲೇ ನಿಮ್ಮ ಬ್ರಾ ಧರಿಸಿ. ನಂತರ ಹಿಂದಕ್ಕೆ ಒರಗಿ 20 ನಿಮಿಷ ಮಲಗಿ. ದಿನದಲ್ಲಿ ಕೆಲವು ಕಾಲ ಈ ಪ್ರಯೋಗ ಅನುಸರಿಸಿ.

*2 ಮಂಜು ಗಡ್ಡೆ ತೆಗೆದುಕೊಂಡು ವೃತ್ತಾಕಾರವಾಗಿ ಸ್ತನದ ಸುತ್ತಲೂ ಒಂದು ನಿಮಿಷ ಮಸಾಜ್ ಮಾಡಿ.

*. ನುಣುಪಾದ ಮೆತ್ತನೆಯ ಟವೆಲ್ನಿಂದ ಒರೆಸಿ ತಕ್ಷಣವೇ ಒಳ್ಳೆಯ ಸರಿಯಾದ ಬ್ರಾ ಹಾಕಿಕೊಳ್ಳಿ.

*. ಸುಖಾಸೀನ ( reclining position) ಸ್ಥಿತಿಯಲ್ಲಿ ಅರ್ಧ ಗಂಟೆ ಇರಿ. ಈ ರೀತಿಯ ಮಸಾಜ್ ಅನ್ನು ದಿನಕ್ಕೆ ಎರಡು ಮೂರು ಬಾರಿ ಮಾಡಬಹುದು. ಆದರೆ ಒಂದು ನಿಮಿಷಕಿಂತ ಹೆಚ್ಚಿನ ಮಸಾಜ್ ಮಾಡಬೇಡಿ ಹಾಗೂ ಸ್ತನಗಳನ್ನು ಎಕ್ಸ್ ಪೋಸ್ ಮಾಡಬೇಡಿ, ಇದರಿಂದ ಜೋಮು (numbness) ಕಟ್ಟಿದ ಹಾಗೆ ಭಾಸವಾಗುತ್ತದೆ ಇದು ಅತ್ಯಂತ ಅಪಾಯಕಾರಿ.

ಮೆಂತೆ ಪುಡಿ

ಮೆಂತೆ ಪುಡಿ

ಮೆಂತೆ ಕೂಡ ಉತ್ತಮ ಔ‍ಷಧವಾಗಿದೆ. ನಿಮ್ಮ ತ್ವಚೆಯನ್ನು ಮೃದುವಾಗಿಸುತ್ತದೆ ಕೂಡ. 4 ಚಮಚ ಮೆಂತ್ಯ ಪುಡಿಯನ್ನು ತೆಗೆದುಕೊಂಡು ಅದನ್ನು ಪೇಸ್ಟ್ ಮಾಡಿ. ನಿಮ್ಮ ಸ್ತನಕ್ಕೆ ಇದನ್ನು ಹಚ್ಚಿ 15 ನಿಮಿಷ ಕಾಯಿರಿ ನಂತರ ತೊಳೆದುಕೊಳ್ಳಿ. ವಾರಕ್ಕೆ 2 ಬಾರಿ ಪ್ರಯೋಗಿಸಿ ವಾರ ಬಿಟ್ಟು ಫಲಿತಾಂಶ ನೋಡಿ.

ಮೊಟ್ಟೆ ಮತ್ತು ಮುಳ್ಳುಸೌತೆ

ಮೊಟ್ಟೆ ಮತ್ತು ಮುಳ್ಳುಸೌತೆ

ಮೊಟ್ಟೆಯ ಹಳದಿ ಭಾಗ ಮತ್ತು ಮುಳ್ಳುಸೌತೆಯನ್ನು ಮಿಶ್ರ ಮಾಡಿ ಆ ಮಿಶ್ರಣವನ್ನು ಸ್ತನಕ್ಕೆ ಹಚ್ಚುವುದು. ಮೊಟ್ಟೆಯು ವಿಟಮಿನ್‌ಗಳು ಮತ್ತು ಪ್ರೊಟೀನ್‌ಗಳನ್ನು ಒಳಗೊಂಡಿದ್ದು ಮುಳ್ಳು ಸೌತೆ ನಿಮ್ಮ ತ್ವಚೆಯನ್ನು ಕಾಯಗೊಳಿಸುತ್ತದೆ. ಮುಳ್ಳುಸೌತೆ ತುಂಡು ಮತ್ತು ಮೊಟ್ಟೆಯ ಹಳದಿ ಭಾಗವನ್ನು ರುಬ್ಬಿ. ನಂತರ ಆ ಪೇಸ್ಟ್‌ನಿಂದ ಸ್ತನಕ್ಕೆ ಮಸಾಜ್ ಮಾಡಿ. ವಾರಕ್ಕೊಮ್ಮೆ ಇದನ್ನು ಮಾಡಿ.

ಎಸನ್ಶಿಯಲ್ ತೈಲಗಳು

ಎಸನ್ಶಿಯಲ್ ತೈಲಗಳು

ಜೋತುಬಿದ್ದ ಸ್ತನಕ್ಕೆ ಉತ್ತಮ ಪರಿಹಾರವಾಗಿದೆ ಆಲೀವ್ ಆಯಿಲ್. ನಿಮ್ಮ ಸ್ತನಗಳಿಗೆ ಮಸಾಜ್ ಮಾಡಲು ಈ ಎಣ್ಣೆ ಬಳಸಿ. ಇದರಲ್ಲಿರುವ ಕೊಬ್ಬಿನ ಆಸಿಡ್ ಮತ್ತು ಉತ್ಕರ್ಷಣನಿರೋಧಿ ಅಂಶಗಳು ತ್ವಚೆಯನ್ನು ಸುಂದರಗೊಳಿಸುತ್ತವೆ ಮತ್ತು ಸ್ತನಕ್ಕೆ ಬಲವನ್ನು ನೀಡುತ್ತವೆ. ಕೆಲವು ಹನಿಗಳಷ್ಟು ಅಲೀವ್ ಎಣ್ಣೆಯನ್ನು ತೆಗೆದುಕೊಂಡು ನಿಮ್ಮ ಸ್ತನಕ್ಕೆ 15 ನಿಮಿಷಗಳ ಕಾಲ ಮೇಲ್ಮುಖವಾಗಿ ಮಸಾಜ್ ಮಾಡಿ. ಇದು ರಕ್ತದಹರಿವನ್ನು ಉಂಟುಮಾಡುತ್ತದೆ ಮತ್ತು ಕೋಶವನ್ನು ರಿಪೇರಿ ಮಾಡುತ್ತದೆ. ವಾರಕ್ಕೆ ಮೂರು ಬಾರಿ ಇದನ್ನು ಪ್ರಯೋಗಿಸಿ ಮತ್ತು ಫಲಿತಾಂಶ ತಿಳಿದುಕೊಳ್ಳಿ.

ಅಲೊವೇರಾ ಮಸಾಜ್

ಅಲೊವೇರಾ ಮಸಾಜ್

ಅಲೊವೇರಾ ಮಸಾಜ್‌ನಿಂದ ನಿಮ್ಮ ಜೋತುಬಿದ್ದ ಸ್ತನಕ್ಕೆ ಬಲವನ್ನು ನೀಡಬಹುದು. ಇದು ಸಾಕಷ್ಟು ಪ್ರಮಾಣದಲ್ಲಿ ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದ್ದು ನಿಮ್ಮ ಸ್ತನವನ್ನು ಬಿಗಿಯಾಗಿಸಿ ಸುಂದರತೆಯನ್ನು ನೀಡುತ್ತದೆ. ತಂಪಾದ ಅಲೊವೇರಾ ಜೆಲ್ ತೆಗೆದುಕೊಳ್ಳಿ ಮತ್ತು ನಿಮ್ಮ ಸ್ತನಗಳಿಗೆ ಮಸಾಜ್ ಮಾಡಿ. ವೃತ್ತಾಕಾರವಾಗಿ 10-15 ನಿಮಿಷ ಮಸಾಜ್ ಮಾಡಿ ನಂತರ ತಣ್ಣೀರಿನಿಂದ ಸ್ತನವನ್ನು ತೊಳೆದುಕೊಳ್ಳಿ.

ಪಪ್ಪಾಯ ಮಾಸ್ಕ್

ಪಪ್ಪಾಯ ಮಾಸ್ಕ್

ನಿಮ್ಮ ಸ್ತನವನ್ನು ಸುಂದರಗೊಳಿಸುವಲ್ಲಿ ಪಪ್ಪಾಯ ಮಾಸ್ಕ್ ಸಹಕಾರಿಯಾಗಿದೆ. ಸಣ್ಣ ತುಂಡು ಪಪ್ಪಾಯ ತೆಗೆದುಕೊಳ್ಳಿ ಮತ್ತು ಪೇಸ್ಟ್ ಮಾಡಿ. ಇದಕ್ಕೆ 1/2 ಚಿಟಿಕೆ ಅರಶಿನ ಸೇರಿಸಿ ಮತ್ತು ಒಂದು ಚಮಚ ಲಿಂಬೆ ರಸ ಬೆರೆಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರ ಮಾಡಿ. ನಿಮ್ಮ ಸ್ತನಕ್ಕೆ ಈ ಮಾಸ್ಕ್ ಹಚ್ಚಿ ಮತ್ತು 10 ನಿಮಿಷ ಮಸಾಜ್ ಮಾಡಿ. ನಂತರ ನೀರಿನಿಂದ ತೊಳೆದುಕೊಳ್ಳಿ.

 ಆಲಿವ್ ತೈಲದಿಂದ ಮಸಾಜ್ ಮಾಡಿ

ಆಲಿವ್ ತೈಲದಿಂದ ಮಸಾಜ್ ಮಾಡಿ

ಎರಡು ದಿನಕ್ಕೊಮ್ಮೆ ಆಲಿವ್ ತೈಲದಿಂದ ಸ್ತನಗಳಿಗೆ ಮಸಾಜ್ ಮಾಡಿ, ಬಳಿಕ ಸ್ಥಾನ ಮಾಡಿ. ಆಲಿವ್ ತೈಲವು ಚರ್ಮದ ಸ್ಥಿತಿಸ್ಥಾಪಕತ್ವ ಕಾಪಾಡುವುದು ಮತ್ತು ಅದನ್ನು ಸುಂದರಗೊಳಿಸುವುದು. ಮೇಲ್ಮುಖವಾಗಿ ಮಸಾಜ್ ಮಾಡಿದರೆ ಅದರಿಂದ ರಕ್ತ ಪರಿಚಲನೆ ಸರಾಗವಾಗುವುದು, ಕೋಶಗಳ ಸರಿಪಡಿಸುವಿಕೆ ಉತ್ತೇಜಿಸುವುದು, ಇದರಿಂದ ಸುಂದರ ಸ್ತನಗಳನ್ನು ಪಡೆಯಬಹುದು. ಐಸ್ ಮಸಾಜ್ ಇದರಲ್ಲಿ ತುಂಬಾ ಒಳ್ಳೆಯದೆಂದು ಪರಿಗಣಿಸಲಾಗಿದೆ. ತಂಪಿನಿಂದಾಗಿ ಚರ್ಮವು ನೈಸರ್ಗಿಕವಾಗಿ ಬಿಗಿತ ಪಡೆಯುವುದು.

ಲಿಂಬೆರಸದ ಮಸಾಜ್

ಲಿಂಬೆರಸದ ಮಸಾಜ್

ತಾಜಾ ಲಿಂಬೆರಸದಿಂದ ಸ್ತನವನ್ನು ಮಸಾಜ್ ಮಾಡುವುದರಿಂದ ಕೂಡ ಸ್ತನದ ಜೋತುಬೀಳುವಿಕೆ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ. ಇದರಿಂದ ನಿಮ್ಮ ಸ್ತನ ಮಾತ್ರವಲ್ಲದೆ ತ್ವಚೆಗೂ ಸಹಕಾರಿ ವಿಧಾನ ಎಂದೆನಿಸಲಿದೆ. ಯುವ ಮತ್ತು ಹೊಳೆಯುವ ಮೈಕಾಂತಿಯನ್ನು ಲಿಂಬೆ ರಸದ ಮಸಾಜ್ ನಿಮಗೆ ನೀಡುತ್ತದೆ. ಲಿಂಬೆಯಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ಮತ್ತು ವಿಟಮಿನ್ ಸಿ ಜೋತಾಡುತ್ತಿರುವ ಸ್ತನ ಸಮಸ್ಯೆಗೆ ಉತ್ತಮ ಪರಿಹಾರವನ್ನು ನೀಡಲಿದೆ. ಲಿಂಬೆ ಹಣ್ಣು: ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು..!

English summary

quick ways to firm your breasts naturally

Firm, beautiful breasts are a dream of many women. But unfortunately, breasts tend to sag after a particular age. The tissues lose their elasticity and suppleness. This problem is mainly seen in women who cross their 40s, but sadly it can also occur much before that age due to many other reasons. Are there any home remedies for sagging breasts? Lifestyle habits, medication, pregnancy and many other reasons also contribute to sagging breasts. Irrespective of the reasons, if you wish to make your breasts firm, you can try certain home remedies for sagging breasts as they don't carry any side effects.
X
Desktop Bottom Promotion