For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರಿಗೆ ಹಿತವಲ್ಲದ ಕೆಲವು ಬಯಕೆಗಳಿವು

By Sushma Charhra
|

ನೀವು ಈಗಾಗಲೇ ಗರ್ಭಿಣಿಯಾಗಿದ್ದರೆ ಖಂಡಿತ ನಿಮಗೆ ಬಯಕೆ ಅಂದರೆ ಏನು ಎಂಬ ಬಗ್ಗೆ ಅರ್ಥವಾಗಿರುತ್ತದೆ. ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಬಯಕೆಗಳು ಮಹಿಳೆಯಿಂದ ಮಹಿಳೆಗೆ ಭಿನ್ನವಾಗಿರುತ್ತದೆ. ಕೆಲವರಿಗೆ ಭಯಾನಕ ಆಸೆಗಳು,ಬಯಕೆಗಳು ಹುಟ್ಟಿಕೊಳ್ಳುತ್ತದೆ ಮತ್ತು ಅದನ್ನು ನಿಗ್ರಹಿಸಿಕೊಳ್ಳಲು ಸಾಧ್ಯವೇ ಆಗುವುದಿಲ್ಲ ಮತ್ತು ಕೆಲವರು ಅದನ್ನು ನಿಗ್ರಹಿಸಿಕೊಂಡು ಆರೋಗ್ಯಕಾರಿಯಾದ ಮತ್ತು ಉತ್ತಮವಾದ ಆಹಾರಗಳನ್ನು ಸೇವಿಸಿ ಬಿಡುತ್ತಾರೆ.

ಗರ್ಭಿಣಿಯರ ಕಡುಬಯಕೆಗಳು ಆಹಾರ ಪದಾರ್ಥಗಳಲ್ಲೂ ಕೂಡ ಭಿನ್ನವಾಗಿರುತ್ತದೆ. ಕೆಲವು ಆಶ್ಚರ್ಯ ಹುಟ್ಟಿಸೋ ಬಯಕೆಗಳು ಹಲವು ಮಹಿಳೆಯರಲ್ಲಿ ಕಾಣಿಸಿಕೊಳ್ಳಬಹುದು. ಉಪ್ಪಿನಕಾಯಿ, ಹುಣಸೆ ಹಣ್ಣು, ಹಸಿ ಮಾವಿನಕಾಯಿ ಇವೆಲ್ಲ ಸಾಮಾನ್ಯ ಕ್ರೇವಿಂಗ್ ಗಳಾಗಿದ್ದು ಪ್ರತಿ ಮಹಿಳೆಯರಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆಶ್ಚರ್ಯವೆಂದರೆ ಕೆಲವು ಗರ್ಭಿಣಿ ಮಹಿಳೆಯರಿಗೆ ಐಸ್ ಕ್ರೀಮ್ ನ್ನು ಉಪ್ಪಿನಕಾಯಿ ಜೊತೆ ತಿನ್ನಬೇಕು ಎಂದೂ ಕೂಡ ಅನ್ನಿಸಬಹುದು. ಅಷ್ಟು ವಿಚಿತ್ರ ಬಯಕೆಗಳೂ ಕೂಡ ಹುಟ್ಟಿಕೊಂಡು ಬಿಡಬಹುದು. ಕೆಲವೊಮ್ಮೆ ಗರ್ಭಿಣಿಯರಿಗೆ ತಮ್ಮ ಜೀವಮಾನವಿಡೀ ಇಷ್ಟ ಪಡದ ಆಹಾರವೊಂದನ್ನು ತಮ್ಮ ಗರ್ಭಾವಸ್ಥೆಯಲ್ಲಿ ತಿನ್ನಬೇಕು ಅನ್ನಿಸಬಹುದು ಮತ್ತು ಅದು ಅವರಿಗೆ ಬಹಳ ರುಚಿಯಾಗಿದೆ ಎಂದು ಅನ್ನಿಸುವ ಸಂದರ್ಭವೂ ಇದೆ.

ಗರ್ಭಿಣಿಯಾಗಿದ್ದಾಗ ಆಹಾರದ ಕಡುಬಯಕೆಗಳು

ಇನ್ನು ಕೆಲವು ಪ್ರಕರಣಗಳಲ್ಲಿ ಸಸ್ಯಾಹಾರಿಯಾಗಿ ಪರಿವರ್ತನೆಗೊಂಡ ಮಹಿಳೆಯರಿಗೆ ಮಾಂಸಹಾರ ತಿನ್ನಬೇಕು ಎಂದು ಅನ್ನಿಸಿರುವುದೂ ಉಂಟು. ದೇಹವು ತನ್ನ ಅಗತ್ಯತೆಯನ್ನು ಸಂವಹನಗೊಳಿಸುವ ಪ್ರಕ್ರಿಯೆಯಿಂದಾಗಿ ಈ ರೀತಿ ಬಯಕೆಗಳು ಗರ್ಭಿಣಿಯರಿಗೆ ಹುಟ್ಟಿಕೊಳ್ಳುತ್ತದೆ. ಹೀಗೆ ಬಯಕೆ ಉಂಟಾದ ಆಹಾರಗಳನ್ನು ಗರ್ಭಿಣಿಯರು ಸೇವಿಸುವುದು ಒಳ್ಳೆಯದೇ ಆಗಿದೆ. ಆದರೆ ಕೆಲವು ಆಹಾರ ಪದಾರ್ಥಗಳಿವೆ ಅವು ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಬಯಕೆಯಾಗಿದೆ ಎಂದಾಕ್ಷಣ ಸೇವಿಸುವುದು ಒಳ್ಳೆಯದಲ್ಲ. ಅವು ಅವರಿಬ್ಬರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆಗಳಿವೆ.

ಹಾಗಾಗಿ ಈ ಆಹಾರಗಳನ್ನು ಗರ್ಭಿಣಿಯರು ನಿಗ್ರಹಿಸಿಕೊಳ್ಳುವುದು ಬಹಳ ಒಳ್ಳೆಯದು. ನೀವು ಈ ಆಹಾರಗಳ ಬಗ್ಗೆ ಅದೆಷ್ಟೆ ಬಯಕೆ ಹೊಂದಿದರೂ ಸರಿ, ಸೇವನೆಯಿಂದ ಒಳ್ಳೆಯದಾಗುವುದಕ್ಕಿಂತ ಹೆಚ್ಚಾಗಿ ಕೆಟ್ಟದ್ದಾಗುವುದೇ ಜಾಸ್ತಿ. ಹಾಗಾಗಿ ನಿಮ್ಮ ಬಯಕೆಯಲ್ಲಿ ಯಾವೆಲ್ಲ ಆಹಾರಗಳು ಇರಬಾರದು. ಅದರಿಂದಾಗುವ ಪರಿಣಾಗಳೇನು? ಬಯಕೆ ಹುಟ್ಟಿಸುವ ಯಾವೆಲ್ಲ ಆಹಾರಗಳು ಗರ್ಭಿಣಿಯರಿಗೆ ಹಿತವಲ್ಲ ಎಂಬ ಪಟ್ಟಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ, ಒಂದು ವೇಳೆ ನಿಮಗೆ ಈ ಕೆಳಗಿನ ಆಹಾರಗಳ ಬಗ್ಗೆ ಬಯಕೆಗಳು ಉಂಟಾದಲ್ಲಿ ದಯವಿಟ್ಟು ಅದನ್ನು ಸೇವಿಸಬೇಡಿ ಮತ್ತು ಆ ಮೂಲಕ ನೀವು ಮತ್ತು ನಿಮ್ಮ ಮಗು ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ.

1.ಕಚ್ಚಾ ಕೇಕ್ ಗಳು ಅಥವಾ ಹಿಟ್ಟಿನ ಕುಕ್ಕೀಗಳು
2.ಜಂಕ್ ಫುಡ್
3.ಪೂರ್ವ ನಿರ್ಮಿತ ಸಲಾಡ್ ಗಳು ಅಥವಾ ಪ್ಯಾಕ್ ಮಾಡಿಟ್ಟ ಸಲಾಡ್ ಗಳು
4.ಕೆಫೀನ್
5.ಪಾಶ್ಚರೀಕರಿಸಿದ ಡೈರಿ ಉತ್ಪನ್ನಗಳು
6.ಹಸಿ ಮಾಂಸ
7.ಕೆಲವು ವಿಧಧ ಮೀನುಗಳು
8.ಯಕೃತ್ತು
9.ಆಲ್ಕೋಹಾಲ್

• ಕಚ್ಚಾ ಕೇಕ್ ಗಳು ಅಥವಾ ಹಿಟ್ಟಿನ ಕುಕ್ಕೀಗಳು

ಗರ್ಭಿಣಿ ಅಲ್ಲದಿದ್ದರೂ ಕೂಡ, ಇಂತಹ ಪದಾರ್ಥಗಳನ್ನು ತಿನ್ನುವ ಬಯಕೆ ಮತ್ತು ತಿಂದ ನಂತರ ಕಾಡುವ ಅಪರಾಧಿ ಭಾವ ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಆದರೆ ಗರ್ಭಿಣಿಯರು ಒಂದು ವೇಳೆ ಇಂತಹ ಪದಾರ್ಥಗಳ ಬಗ್ಗೆ ಬಯಕೆಯಾದರೆ, ಖಂಡಿತ ಸೇವನೆ ಮಾಡುವುದು ಒಳ್ಳೆಯದಲ್ಲ. ಇದು ನಿಮ್ಮ ಮತ್ತು ನಿಮ್ಮ ಮಗುವಿನ ಮೇಲೆ ಕೆಟ್ಟ ಪರಿಣಾಮಗಳನ್ನು ಉಂಟು ಮಾಡುತ್ತದೆ. ಹಸಿಯಾದ ಮತ್ತು ರೆಡಿಯಾದ ಕೇಕ್ ಗಳು ಅಥವಾ ಕುಕ್ಕಿಗಳ ಬಯಕೆ ಆಗುವುದು ಸರ್ವೇಸಾಮಾನ್ಯ, ಆದರೆ ಹೀಗೆ ತಯಾರಿಸಿದ ಆಹಾರಗಳಲ್ಲಿ ಹಸಿ ಮೊಟ್ಟೆ ಮತ್ತು ಇತರೆ ಹಸಿ ಪದಾರ್ಥಗಳಿದ್ದು ಅವುಗಳು ಅನಾರೋಗ್ಯಕಾರಿ ಬ್ಯಾಕ್ಟೀರಿಯಾಗಳ ವಾಸಸ್ಥಾನವಾಗಿರುತ್ತದೆ.ಇವುಗಳ ಗಂಭೀರ ಸೋಂಕುಗಳನ್ನು ಹರಡುವ ಸಾಧ್ಯತೆ ಇದ್ದು, ಗರ್ಭಪಾತಕ್ಕೂ ಕಾರಣವಾಗಬಹುದು.

• ಜಂಕ್ ಫುಡ್

ಬಹುಷ್ಯಃ ಜಂಕ್ ಫುಡ್ ನ ಬಯಕೆ ಆಗದೇ ಇರುವ ಗರ್ಭಿಣಿ ಸ್ತ್ರೀಯರು ನೂರಕ್ಕೆ ಒಬ್ಬರಿರಬಹುದೇನೋ ಅಷ್ಟೇ. ಒಂದಲ್ಲ ಒಂದು ಸಮಯಕ್ಕೆ ಅವರಿಗೆ ಜಂಕ್ ಫುಡ್ ಸೇವಿಸಬೇಕು ಎಂಬ ಬಯಕೆ ಆಗಿಯೇ ತೀರುತ್ತದೆ. ಆದರೆ ಹೆಚ್ಚಿನ ಜಂಕ್ ಫುಡ್ ಗಳು ನಿಮಗೆ ನೇರವಾಗಿ ಯಾವುದೇ ಪರಿಣಾಮವನ್ನೂ ಮಾಡುವುದಿಲ್ಲ. ಬದಲಾಗಿ ಆರೋಗ್ಯಕಾರಿ ಆಹಾರ ಪದಾರ್ಥಗಳಿಂದ ಪಡೆದುಕೊಳ್ಳಬೇಕಾದ ಪೋಷಕಾಂಶಗಳು ಜಂಕ್ ಫುಡ್ ನಿಂದ ನಿಮಗೆ ಸಿಗದೇ ಇರುವ ಕಾರಣದಿಂದಾಗಿ ನಿಮಗೆ ಸಮಸ್ಯೆ ಉಂಟಾಗುತ್ತದೆ.. ಅಷ್ಟೇ ಅಲ್ಲ, ಯಾವ ಮಹಿಳೆಯರು ಗರ್ಭಾವಸ್ಥೆಯಲ್ಲಿ ಜಂಕ್ ಫುಡ್ ಸೇವಿಸುತ್ತಾರೋ ಅವರ ಮಕ್ಕಳೂ ಕೂಡ ಹುಟ್ಟಿದ ನಂತರ ಜಂಕ್ ಫುಡ್ ಗಳನ್ನು ಹೆಚ್ಚಾಗಿ ಇಷ್ಟ ಪಡುವುದನ್ನು ಗಮನಿಸಬಹುದಂತೆ.ಹಾಗಾಗಿ ಅಡಿಪಾಯ ಗಟ್ಟಿಯಿದ್ದರೆ ಮನೆಯೂ ಬಲಿಷ್ಟವಾಗುತ್ತದೆ ಎಂಬಂತೆ ತಾಯಿಯು ಈ ಅಭ್ಯಾಸವನ್ನು ಗರ್ಭಾವಸ್ಥೆಯಲ್ಲಿಯೇ ಬಿಟ್ಟರೆ, ನಂತರ ಮಗುವೂ ಕೂಡ ಇದನ್ನು ಸೇವಿಸುವುದಿಲ್ಲ ಮತ್ತು ಹೆಚ್ಚು ಆರೋಗ್ಯಯುತವಾಗಿ ಹುಟ್ಟಲು ಕಾರಣವಾಗುತ್ತದೆ. ನಿಮ್ಮ ನಿಗ್ರಹಿಸಿಕೊಳ್ಳಲಾಗದ ಬಯಕೆಗಳನ್ನು ತೀರಿಸಿಕೊಳ್ಳುವುದು ಒಳ್ಳೆಯದೇ ಆದರೆ ಅತಿರೇಕಕ್ಕೆ ಹೋಗದಿರುವುದು ಬಹಳ ಒಳ್ಳೆಯದು.

• ಪೂರ್ವ ನಿರ್ಮಿತ ಸಲಾಡ್ ಗಳು / ಪ್ಯಾಕ್ ಮಾಡಿಟ್ಟ ಸಲಾಡ್ ಗಳು

ಒಂದು ಬೌಲ್ ನಷ್ಟು ಹಸಿರು ತರಕಾರಿಗಳು, ಹಣ್ಣುಗಳು ಮತ್ತು ಕಾಳುಗಳನ್ನು ಸೇವಿಸುವುದು ಬಹಳ ಒಳ್ಳೆಯದು.ಆದರೆ ಇದನ್ನು ನೀವೇ ನಿಮ್ಮ ಕೈಯಾರೆ ಮನೆಯಲ್ಲೇ ತಯಾರಿಸಿಕೊಳ್ಳುವುದು ಬಹಳ ಮುಖ್ಯ, ಪೂರ್ವ ನಿರ್ಮಿತ ಅಥವಾ ಪ್ಯಾಕ್ ಆಗಿ ಬರುವ ಸಲಾಡ್ ಗಳನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ. ಇದರಲ್ಲಿ ಬ್ಯಾಕ್ಟೀರಿಯಾಗಳಿದ್ದು ಇವುಗಳು ನಿಮಗೆ ಸೋಂಕನ್ನು ಹರಡಬಲ್ಲವು ಎಂಬುದು ಚೆನ್ನಾಗಿ ನೆನಪಿರಲಿ. ಈ ರೀತಿಯ ಪೂರ್ವ ನಿರ್ಮಿತ ಸಲಾಡ್ ಗಳು ಶುದ್ಧವಾಗಿ ತಯಾರಿಸಲಾಗಿವೆ ಎಂಬ ಬಗ್ಗೆ ಯಾವುದೇ ಖಾತ್ರಿ ಇರುವುದಿಲ್ಲ ಮತ್ತು ಅದನ್ನು ಸರಿಯಾದ ಹವಾಮಾನದಲ್ಲಿ ಶೇಖರಿಸಿ ಇಡಲಾಗಿರುತ್ತದೆ ಎಂಬುದೂ ಕೂಡ ತಿಳಿದಿರುವುದಿಲ್ಲ. ಹಾಗಾಗಿ ಇದರಿಂದ ದೂರವಿದ್ದು ಸುರಕ್ಷಿತವಾಗಿರುವುದು ಬಹಳ ಒಳ್ಳೆಯದು.

• ಕೆಫೀನ್

ಹೆಚ್ಚಿನವರಿಗೆ, ಒಂದು ಲೋಟ ಬೆಳಗಿನ ಕಾಫಿ ಅವರನ್ನು ದಿನವಿಡೀ ಚೈತನ್ಯ ಭರಿತವಾಗಿ ಇರುವಂತೆ ನೋಡಿಕೊಳ್ಳುತ್ತದೆ.ಆದರೆ ನೀವು ಗರ್ಭಿಣಿಯಾದರೆ, ಈ ಒಂದು ಲೋಟ ಕಾಫಿ ನಿಮ್ಮ ಮಗುವಿಗೆ ಕೆಟ್ಟದ್ದು ಮಾಡುವ ಸಾಧ್ಯತೆಯನ್ನು ಈಗಾಗಲೇ ಅಧ್ಯಯನಗಳು ಸಾಧಿಸಿ ತೋರಿಸಿ ಆಗಿದೆ. ಕಾಫಿಯಲ್ಲಿರುವ ಕೆಫೀನ್ ಅಂಶವು ಮಹಿಳೆಯರಲ್ಲಿ ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ. ಇದು ನಿಮ್ಮನ್ನೂ ಕೂಡ ಪದೇ ಪದೇ ಮೂತ್ರ ವಿಸರ್ಜನೆಗೆ ತೆರಳಬೇಕು ಎಂಬಂತೆ ಮಾಡುತ್ತದೆ ಮತ್ತು ದೇಹದಿಂದ ನೀರಿನ ಅಂಶವನ್ನು ಹೊರಹಾಕಿ ನಿರ್ಜಲೀಕರಣ ಸಮಸ್ಯೆಯನ್ನ ಉಂಟು ಮಾಡುತ್ತದೆ. ಕೆಫಿನ್ ಗಳು ಜರಾಯುವಿನ ತಡೆಗೋಡೆಗಳನ್ನು ದಾಟಿ ಹೋಗುವ ಸಾಮರ್ಥ್ಯವನ್ನೂ ಹೊಂದಿರುತ್ತದೆ. ಇದರ ಅರ್ಥ ನಿಮ್ಮ ಮಗುವಿಗೂ ಇದರ ಡೋಸ್ ಗಳು ಲಭ್ಯವಾಗಿ ಅವುಗಳು ಸರಿಯಾಗಿ ಪ್ರತಿಕ್ರಿಯೆಗೆ ಒಳಪಡದೇ ಇರುವ ಸಾಧ್ಯಗಳಿರುತ್ತದೆ.

• ಪಾಶ್ಚರೀಕರಿಸದ ಡೈರಿ ಉತ್ಪನ್ನಗಳು

ಡೈರಿ ಆಹಾರಗಳು ಆರೋಗ್ಯಕಾರಿ ಪ್ರಗ್ನೆನ್ಸಿಯ ಒಂದು ಭಾಗವಾಗಿರುತ್ತದೆ ಮತ್ತು ಪ್ರತಿ ಮಹಿಳೆಯೂ ಕೂಡ ಹಾಲು, ಮೊಸರು, ತುಪ್ಪ, ಬೆಣ್ಣೆ ಇವುಗಳನ್ನು ಸೇವಿಸಬೇಕು. ಇದರಿಂದ ಆಕೆಗೆ ಕ್ಯಾಲ್ಸಿಯಂ ಲಭ್ಯವಾಗುತ್ತದೆ. ಆದರೆ ನಿಮಗೆ ನೆನಪಿರಲಿ ಯಾವುದೇ ಕಾರಣಕ್ಕೂ ಪಾಶ್ಚರೀಕರಿಸದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಬೇಡಿ. ಪಾಶ್ಚರೀಕರಿಸದ ಹಾಲಿನ ಉತ್ಪನ್ನಗಳು ಹೆಚ್ಚಿನ ಬ್ಯಾಕ್ಟೀರಿಯಾಗಳನ್ನು ಒಳಗೊಂಡಿರುತ್ತದೆ ಮತ್ತು ಇದು ವಿಷಕಾರಿಯಾಗಿರಬಹುದು ಜೊತೆಗೆ ವಾಂತಿ, ಅತಿಸಾರದಂತ ಸಮಸ್ಯೆಗಳಿಗೆ ಕಾರಣವಾಗಬಹುದು. ಒಂದು ವೇಳೆ ಇಂತಹ ಸಮಸ್ಯೆಗಳು ಗರ್ಭಿಣಿಯರಲ್ಲಿ ಕಾಣಿಸಿಕೊಂಡರೆ ನಿರ್ಜಲೀಕರಣ ಸಮಸ್ಯೆ ಮಹಿಳೆಯರನ್ನುಕಾಡುತ್ತದೆ. ಇದು ಕಿಡ್ನಿ ಪೆಲ್ಯೂರ್ ಸಮಸ್ಯೆಗೂ ಕಾರಣವಾಗಬಹುದು. ಒಂದು ವೇಳೆ ನಿಮಗೆ ಡೈರಿ ಉತ್ಪನ್ನಗಳ ಬಗ್ಗೆ ಬಯಕೆ ಉಂಟಾದರೆ ಪಾಶ್ಚರೀಕರಿಸಿದ ಉತ್ಪನ್ನಗಳನ್ನೇ ಸೇವಿಸುತ್ತಿದ್ದೀರಿ ಎಂಬ ಬಗ್ಗೆ ಖಾತ್ರಿ ಇರಲಿ.

• ಹಸಿ ಮಾಂಸ

ನಿರೀಕ್ಷಿತ ಗರ್ಭಿಣಿ ಸ್ತ್ರೀಯರು ಕಚ್ಚಾ ಮಾಂಸದಿಂದ ತಯಾರಿಸಿದ ಆಹಾರಗಳನ್ನು ಹಂಬಲಿಸುತ್ತಾರೆ. ಬಹಳ ಸಾಮಾನ್ಯವಾದ ಉದಾಹರಣೆಗಳು ಎಂದರೆ ಸ್ಟೀಕ್ ಟಾರ್ಟರ್, ಅಪರೂಪದ ಬೇಯಿಸಿದ ಸ್ಟೀಕ್ ಮತ್ತು ಸುಶಿ. ಆದರೆ ಈ ಆಹಾರ ಪದಾರ್ಥಗಳು ಹೆಚ್ಚಿನ ಬ್ಯಾಕ್ಟೀರಿಯಾಗಳನ್ನು ಮತ್ತು ಪರಾವಲಂಬಿ ಜೀವಿಗಳನ್ನು ಒಳಗೊಂಡಿರುತ್ತದೆ.ಆರೋಗ್ಯವಾಗಿರುವ ದೇಹವು ಇದನ್ನು ಸಂಸ್ಕರಿಸಿ ಸೇವಿಸಿ ಜೀರ್ಣಿಸಿಕೊಳ್ಳಲು ಸಮರ್ಥವಾಗಿದ್ದರೂ ಕೂಡ ಗರ್ಭಿಣಿ ಸ್ತ್ರೀಯರಿಗೆ ಇದು ಅಸಾಧ್ಯವಾಗಬಹುದು ಮತ್ತು ಅದು ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿಗಂತೂ ಸಹಿಸಲು ಸಾಧ್ಯವೇ ಆಗುವುದಿಲ್ಲ.ಒಂದು ವೇಳೆ ನಿಮಗೆ ಮಾಂಸ ತಿನ್ನುವ ಹೆಬ್ಬಯಕೆ ಉಂಟಾದರೆ ಬೇಯಿಸಿದ ಮಾಂಸವನ್ನು ಅಥವಾ ಸಮುದ್ರ ಆಹಾರಗಳನ್ನು ಸೇವಿಸಿ ಆ ಮೂಲಕ ಕಾಯಿಲೆ ಮತ್ತು ಅಪಾಯದಿಂದ ದೂರವಿರಿ.

• ಕೆಲವು ವಿಧಧ ಮೀನುಗಳು

ನಿಮ್ಮ ಮಗುವಿನ ಆರೋಗ್ಯವನ್ನು ಮತ್ತು ಬೆಳವಣಿಗೆಯನ್ನು ಹೆಚ್ಚಿಸುವ ದೃಷ್ಟಿಯಲ್ಲಿ ಮೀನುಗಳು ಅತ್ಯುತ್ತಮ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಆದರೆ ಅವುಗಳಲ್ಲಿ ಯಾವ ಜಾತಿಯ ಮೀನುಗಳನ್ನು ಗರ್ಭಿಣಿಯಾದಾಗ ಸೇವಿಸುವುದು ಹಿತ ಎಂಬ ಬಗ್ಗೆ ಸರಿಯಾದ ಮಾಹಿತಿಯನ್ನು ಗರ್ಭಿಣಿಯರು ಪಡೆದಿರುವುದು ಬಹಳ ಒಳ್ಳೆಯದು.ಹಸಿ ಮೀನುಗಳನ್ನು ಸಂಪೂರ್ಣವಾಗಿ ನಿಮ್ಮ ಆಹಾರ ಕ್ರಮದಿಂದ ತಪ್ಪಿಸುವುದು ಒಳ್ಳೆಯದು . ಮಾಕೆರೆಲ್, ಬಿಳಿ ಟ್ಯೂನಾ ಮೀನು, ಕತ್ತಿ ಮೀನು ಮತ್ತು ಶಾರ್ಕ್ ಮೀನುಗಳು ಗರ್ಭಾವಸ್ಥೆಯಲ್ಲಿ ತಿನ್ನುವುದು ಅಷ್ಟು ಶ್ರೇಯಸ್ಕರವಲ್ಲ ಯಾಕೆಂದರೆ ಅವುಗಳಲ್ಲಿ ಹೆಚ್ಚಿನ ಮರ್ಕ್ಯೂರಿ ಅಂಶವಿರುತ್ತದೆ. ಮರ್ಕ್ಯೂರಿ ನಿಮ್ಮ ಬೆಳೆಯುತ್ತಿರುವ ಮಗುವಿನ ನರವ್ಯೂಹ ರಚನೆಯ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುವ ಸಾಧ್ಯತೆಗಳಿವೆ. ಇವು ಹುಟ್ಟು ಸಮಸ್ಯೆಗಳಿಗೆ ಮತ್ತು ಬೆಳವಣಿಗೆಯ ಹಂತದ ವೈಪರೀತ್ಯಗಳಿಗೆ ಕಾರಣವಾಗುವ ಸಾಧ್ಯತೆಗಳಿರುತ್ತದೆ.

• ಯಕೃತ್ತು

ಕೆಲವು ಗರ್ಭಿಣಿ ಮಹಿಳೆಯರಿಗೆ ಪ್ರಾಣಿಗಳ ಲಿವರ್ ನಿಂದ ತಯಾರಿಸಿರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು ಎಂಬ ಬಯಕೆ ಉಂಟಾಗುತ್ತದೆ. ಲಿವರ್ ನಲ್ಲಿ ಅನನ್ಯವಾದ ರುಚಿ ಇರುತ್ತದೆ ಮತ್ತು ಪರಿಮಳ, ವಿನ್ಯಾಸ ಇವುಗಳ ಗರ್ಭಿಣಿಯರಲ್ಲಿ ಅದನ್ನು ತಿನ್ನಬೇಕು ಎಂಬ ಬಯಕೆಯನ್ನು ವೃದ್ಧಿಸುತ್ತದೆ. ಆದರೆ ಲಿವರ್ ನ ಸ್ವಲ್ಪವೇ ಸ್ವಲ್ಪ ಪ್ರಮಾಣ ಸೇವನೆ ಓಕೆ ಆದರೆ ಅತಿಯಾಗಿ ಲಿವರ್ ನಿಂದ ತಯಾರಿಸಿದ ಆಹಾರಗಳನ್ನು ಸೇವನೆ ಮಾಡುವುದು ಗರ್ಭಿಣಿಗೆ ಹಿತವಲ್ಲ. ಈ ಲಿವರ್ ನಲ್ಲಿ ವಿಟಮಿನ್ ಎ ಅಂಶ ಅಧಿಕವಾಗಿರುತ್ತದೆ. ಅತಿಯಾದ ವಿಟಮಿನ್ ಎ ಪ್ರಮಾಣವು ವಿಷತ್ವವನ್ನು ಹೆಚ್ಚಿಸುತ್ತದೆ ಮತ್ತು ಇದು ನಿಮ್ಮ ಮಗುವಿಗೆ ಅಪಾಯಕಾರಿಯಾಗಿರುತ್ತದೆ ಎಂಬುದು ನಿಮ್ಮ ಮನದಲ್ಲಿರಲಿ.

• ಆಲ್ಕೋಹಾಲ್

ಆಲ್ಕೋಹಾಲ್ ಯಾವುದೇ ಗರ್ಭವತಿಯೂ ಸೇವಿಸಲೇ ಬಾರದು. ಆಲ್ಕೋಹಾಲ್ ಸೇವನೆಯು ಆಲ್ಕೋಹಾಲ್ ಸ್ಪೆಕ್ಟ್ರಮ್ ಡಿಸಾರ್ಡರ್ ಗಳಿಗೆ ಕಾರಣವಾಗುತ್ತದೆ. ಅಂದರೆ ಇದು ನಿಮ್ಮ ಮಗುವನ್ನು ಜೀವನ ಪರ್ಯಂತ ಕಾಡುವ ಸಮಸ್ಯೆಗಳಿಗೆ ಕಾರಣವಾಗಬಹುದು. ಕೆಲವು ಮಹಿಳೆಯರಿಗೆ ದಿನವೂ ಆಲ್ಕೋಹಾನ್ ಬೇಕೇಬೇಕು. ಕೆಲವರಿಗೆ ವೈನ್ ಸೇವಿಸದೇ ಇರಲು ಸಾಧ್ಯವೇ ಇಲ್ಲ. ಅಂತವರು ಕೂಡಲೇ ತಮ್ಮ ಈ ಕೆಟ್ಟ ಬಯಕೆಯ ಬಗ್ಗೆ ವೈದ್ಯರ ಬಳಿ ಚರ್ಚಿಸಿ ಅದಕ್ಕೊಂದು ಸೂಕ್ತ ಪರಿಹಾರವನ್ನು ಕಂಡುಕೊಳ್ಳಬೇಕು.

English summary

Pregnancy Cravings That Are Not Good For You

If you are or have ever been pregnant, you will surely know what a craving is. Cravings can differ from woman to woman. Some have intense cravings that are hard to ignore and others manage to brush the craving away and opt for something better and healthier. Cravings during pregnancy also vary in the food item that the pregnant woman craves for. Weird cravings are not unusual to have in most women. Today, we shall talk about the foods that pregnant women crave for, but do note these are not safe for them. Read on to know more.
Story first published: Saturday, June 30, 2018, 12:14 [IST]
X
Desktop Bottom Promotion