For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಇರುವಾಗ ಮೂಗಿನಲ್ಲಿ ರಕ್ತ ಬರುತ್ತಿದ್ದರೆ, ಕೂಡಲೇ ಈ ಟಿಪ್ಸ್ ಅನುಸರಿಸಿ

|

ಗರ್ಭಿಣಿ ಎಂದರೆ ಸಾಮಾನ್ಯವಾಗಿ ಮನಸ್ಸಿಗೆ ಮೊದಲು ಬರುವ ಚಿತ್ರಣವೆಂದರೆ ಸೂಕ್ಷ್ಮವಾದ ಆರೋಗ್ಯ ಸ್ಥಿತಿ. ಮುಂಜಾನೆಯ ಸಮಯದಲ್ಲಿ ವಾಂತಿ, ತಲೆ ಸುತ್ತು, ತಲೆ ನೋವು, ಆಹಾರ ರುಚಿಯಲ್ಲಿ ವ್ಯತ್ಯಾಸ ಹೀಗೆ ವಿವಿಧ ಬಗೆಯ ಆರೋಗ್ಯ ಸಮಸ್ಯೆಗಳು ನೆನಪಾಗುತ್ತವೆ. ತನ್ನ ದೇಹದಲ್ಲಿ ಇನ್ನೊಂದು ಜೀವವನ್ನು ಹೊತ್ತು ಆರೈಕೆ ನಡೆಸುವಾಗ ತಾಯಿಯ ಜೀವದಲ್ಲಿ ಈ ಬಗೆಯ ಅನೇಕ ಬದಲಾವಣೆಗಳು ಉಂಟಾಗುವದು ಸಹಜ. ಅವುಗಳಲ್ಲಿ ಮೂಗಿನಿಂದ ರಕ್ತ ಸೋರಿಕೆಯ ಸಮಸ್ಯೆಯೂ ಒಂದು.

ಗರ್ಭಾವಸ್ಥೆಯಲ್ಲಿ ಇರುವಾಗ ಮೂಗಿನಲ್ಲಿ ರಕ್ತಸ್ರಾವ ಉಂಟಾದರೆ ಒಂದು ಬಗೆಯ ಭಯ ಹಾಗೂ ಗಾಬರಿ ಉಂಟಾಗುವುದು ಸಹಜ. ಆದರೆ ಇದರಿಂದ ಮಗುವಿನ ಬೆಳವಣಿಗೆಯ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ತಾಯಿಯ ಆರೋಗ್ಯದಲ್ಲಿ ಕೊಂಚ ತೊಂದರೆ ಉಂಟುಮಾಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಮೂಗಿನಲ್ಲಿ ರಕ್ತಸ್ರಾವ ಉಂಟಾಗುತ್ತಿದೆ ಎಂದಾಗ ಕೆಲವು ಸೂಕ್ತ ಮುನ್ನೆಚ್ಚರಿಕೆ ಕ್ರಮ ಅಥವಾ ಆರೈಕೆಯನ್ನು ಕೈಗೊಳ್ಳಬೇಕು.

ಮೂಗಿನಲ್ಲಿ ರಕ್ತಸ್ರಾವ ಉಂಟಾಗಲು ಕಾರಣ

ಗರ್ಭಾವಸ್ಥೆಯಲ್ಲಿ ರಕ್ತ ನಾಳಗಳ ಮೇಲೆ ಒತ್ತಡ ಉಂಟಾಗುವುದು ಸಹಜ. ಈ ರಕ್ತನಾಳದ ಒತ್ತಡವು ಮೂಗಿನ ರಕ್ತನಾಳಗಳ ಮೇಲೂ ಪ್ರಭಾವ ಬೀರುತ್ತದೆ. ಈ ಸಂದರ್ಭದಲ್ಲಿ ಮೂಗಿನ ರಕ್ತನಾಳಗಳು ವಿಸ್ತಾರಗೊಳ್ಳುತ್ತವೆ. ಹೆಚ್ಚಿನ ರಕ್ತ ಪೂರೈಕೆ ಉಂಟಾದಾಗ ಸೂಕ್ಷ್ಮ ರಕ್ತನಾಳಗಳು ಹೆಚ್ಚು ಒತ್ತಡವನ್ನು ತಡೆದುಕೊಳ್ಳುವುದಿಲ್ಲ. ಈ ಕಾರಣದಿಂದ ನಾಳಗಳು ಛಿದ್ರವಾಗಬಹುದು. ಆಗ ಮೂಗಿನಲ್ಲಿ ಸೌಮ್ಯವಾದ ರಕ್ತ ಸ್ರಾವ ಕಾಣಿಸಿಕೊಳ್ಳುವುದು.

ಒಣಗಿದ ಮೂಗು

ಮೂಗಿನ ಶುಷ್ಕತೆಯು ಗರ್ಭಾವಸ್ಥೆಯಲ್ಲಿ ಮೂಗಿನ ರಕ್ತಸ್ರಾವ ಉಂಟಾಗುವ ಕಾರಣಗಳಲ್ಲಿ ಒಂದು. ಶೀತ, ಸೈನಸ್ ಸೋಂಕು, ಅಲರ್ಜಿ ಅಥವಾ ಹವಾಮಾನದ ಬದಲಾವಣೆಯ ಕಾರಣದಿಂದ ಈ ಸಮಸ್ಯೆ ಉಂಟಾಗುತ್ತದೆ. ಅಲ್ಲದೆ ಹೆಚ್ಚು ಸಮಯಗಳ ಕಾಲ ಕಚೇರಿಯಲ್ಲಿ ಕುಳಿತುಕೊಳ್ಳುವುದು, ಕ್ಯಾಬ್‍ಗಳಲ್ಲಿ ಪ್ರಯಾಣ ಬೆಳೆಸುವುದು, ಗಾಳಿಯಲ್ಲಿ ಮೂಗನ್ನು ತೆರೆದುಕೊಳ್ಳುವ ಕಾರಣದಿಂದಲೂ ಉಂಟಾಗುವುದು.

Nose Bleeding During Pregnancy

ಮಧುಮೇಹ ಮತ್ತು ಅಧಿಕ ರಕ್ತದೊತ್ತಡ

ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಗಳಿಗೆ ಮೂಗಲ್ಲಿ ರಕ್ತಸ್ರಾವ ಉಂಟಾಗುವುದು ಒಂದು ಸಾಮಾನ್ಯವಾದ ಸ್ಥಿತಿ. ಗರ್ಭಾವಸ್ಥೆಯಲ್ಲಿ ಇರುವಾಗ ರಕ್ತದ ಒತ್ತಡವು ಬಹುದ್ವಾರವನ್ನು ಹೆಚ್ಚಿಸುತ್ತದೆ. ಗರ್ಭಾವಸ್ಥೆಯ ಪೂರ್ವದಲ್ಲಿ ಈ ಸಮಸ್ಯೆಯನ್ನು ಅನುಭವಿಸಿದ್ದರೆ, ಗರ್ಭಾವಸ್ಥೆಯ ಸಂದರ್ಭದಲ್ಲೂ ರಕ್ತ ಸ್ರಾವ ಕಾಣಿಸಿಕೊಳ್ಳುವುದು. ಕೆಲವರಿಗೆ 9 ತಿಂಗಳ ವರೆಗೂ ಆಗಾಗ ಉಂಟಾಗುವ ಸಾಧ್ಯತೆಗಳಿರುತ್ತವೆ. ಮೂಗಿನ ರಕ್ತ ಸ್ರಾವಕ್ಕೆ ಆರೈಕೆಯ ವಿಧಾನ ಗರ್ಭಾವಸ್ಥೆಯಲ್ಲಿ ಇರುವ ಮಹಿಳೆಯರು ಮೂಗಿನಿಂದ ರಕ್ತಸ್ರಾವವನ್ನು ಅನುಭವಿಸುತ್ತಿದ್ದರೆ ಅದಕ್ಕೆ ಕೆಲವು ಸೂಕ್ತ ಆರೈಕೆಯನ್ನು ಕೈಗೊಳ್ಳಬಹುದು. ಆಗ ಸಮಸ್ಯೆಯನ್ನು ಸುಲಭವಾಗಿ ನಿಯಂತ್ರಣದಲ್ಲಿ ಇಡಬಹುದು.

ಜೀವನ ಶೈಲಿಯ ಬದಲಾವಣೆ

ಮೂಗಿನಿಂದ ರಕ್ತ ಸ್ರಾವ ಉಂಟಾಗುತ್ತಿದ್ದರೆ ಒಂದು ಪ್ರಜ್ಞಾಪೂರಕವಾದ ಪ್ರಯತ್ನಗಳನ್ನು ಮಾಡಬೇಕು. ಸೀನುವಾಗ ಬಾಯನ್ನು ತೆರೆದು ಸೀನಬೇಕು. ಹೀಗೆ ಮಾಡುವುದರಿಂದ ಮೂಗಿನ ನರ ವ್ಯವಸ್ಥೆಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗದು. ಒತ್ತಡವು ಸಮಪ್ರಮಾಣದಲ್ಲಿ ಎಲ್ಲೆಡೆ ಹಂಚಿಕೆಯಾಗುತ್ತದೆ. ಆಗ ಕಡಿಮೆ ಪ್ರಮಾಣದಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳುವುದು. ಮೂಗಿನ ಶುಷ್ಕತೆಯನ್ನು ತಡೆಯುವುದು. ಹೆಚ್ಚು ನೀರನ್ನು ಸೇವಿಸುವುದರ ಮೂಲಕ ಸಮಸ್ಯೆಯನ್ನು ತಡೆಯಬಹುದು.

ಐಸ್ ಪ್ಯಾಕ್ ಬಳಕೆ

ಐಸ್ ಪ್ಯಾಕ್ ಬಳಕೆಯಿಂದ ಮೂಗಿನ ರಕ್ತನಾಳಗಳನ್ನು ನಿರ್ಬಂಧಿಸುವುದನ್ನು ತಡೆಯುತ್ತದೆ. ಅಲ್ಲದೆ ರಕ್ತ ಸ್ರಾವವನ್ನು ಸಹ ತಗ್ಗಿಸುವುದು. ಐಸ್ ಪ್ಯಾಕ್ ಅನ್ನು ಮೂಗಿನ ಮೇಲ್ಭಾಗದಲ್ಲಿ ಹಾಗೂ ಮೂಗಿನ ಹೊಳ್ಳೆಯಲ್ಲಿ ಇಟ್ಟುಕೊಳ್ಳುವಂತೆ ಮಾಡಿ. ಆಗ ಮೂಗಿನಲ್ಲಿ ರಕ್ತ ಸ್ರಾವ ತಡೆಯಬಹುದು. ಬಟಾಣಿ ಆಕಾರದ ಐಸ್ ಕ್ಯೂಬ್‍ಗಳನ್ನು ಪ್ಯಾಕ್ ರೂಪದಲ್ಲಿ ಬಳಸಬಹುದು.

ತೈಲಗಳನ್ನು ಬಳಸಿ

ಮೂಗಿನ ಶುಷ್ಕತೆಯನ್ನು ತಡೆಯಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಆರೋಗ್ಯಕರ ತೈಲಗಳನ್ನು ಬಳಸಿ. ಅಪಾಯಕಾರಿ ತೈಲಗಳು ಗರ್ಭದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಸರಳವಾದ ಪೆಟ್ರೋಲಿಯಂ ಜೆಲ್ಲಿಯನ್ನು ನೀವು ಬಳಸಬಹುದು. ಗರ್ಭಾವಸ್ಥೆಯಲ್ಲಿ ಇರುವಾಗ ಕೆಲವು ಸುವಾಸನೆಗಳು ತೊಂದರೆಯನ್ನುಂಟುಮಾಡುತ್ತವೆ. ಹಾಗಾಗಿ ಪರಿಮಳದಿಂದ ಮುಕ್ತವಾಗಿರುವ ತೈಲವನ್ನು ಬಳಸಿ. ಇಲ್ಲವೇ ನೀರು ಆಧಾರಿತ ಲೂಬ್ರಿಕೆಂಟ್ಸ್/ತೈಲ ಬಳಸಬಹುದು. ಇವು ನಿಮಗೆ ಸ್ಪ್ರೇ ರೂಪದಲ್ಲಿ ಹಾಗೂ ಡ್ರಾಪ್ಸ್‍ಗಳ ರೂಪದಲ್ಲೂ ದೊರೆಯುತ್ತವೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು.

ಭಂಗಿಯನ್ನು ಬದಲಿಸಿ

ಮೂಗಿನಲ್ಲಿ ರಕ್ತ ಸ್ರಾವ ಉಂಟಾದಾಗ ತಡೆಯಬಹುದಾದ ಉತ್ತಮ ವಿಧಾನವೆಂದರೆ ಭಂಗಿಯನ್ನು ಬದಲಿಸುವುದು. ರಕ್ತ ಸ್ರಾವ ಉಂಟಾದಾಗ ಆರಾಮ ಕುರ್ಚಿಯಲ್ಲಿ ಅಥವಾ ಹಾಸಿಗೆಯ ಮೇಲೆ ಕುಳಿತು ಮುಖವನ್ನು ಎತ್ತಿ. ಗಲ್ಲವು ಎದೆಯ ಭಾಗಕ್ಕಿಂತ ಎತ್ತರದ ವಿಧಾನದಲ್ಲಿ ಇರಬೇಕು. ಮೂಗಿನಲ್ಲಿ ತುಂಬಿಕೊಂಡ ಕೊಳಕನ್ನು ತೆಗೆದು, ಮೂಗನ್ನು ಕೈಗಳಿಂದ ಕಟ್ಟಿ, ಬಾಯಿಯಿಂದ ಉಸಿರಾಡಿ. ಹೀಗೆ 10-15 ನಿಮಿಷಗಳ ಕಾಲ ಮಾಡುವುದರಿಂದ ರಕ್ತಸ್ರಾವವನ್ನು ನಿಯಂತ್ರಿಸಬಹುದು.

ಧೂಳು ಮತ್ತು ಧೂಮಪಾನದಿಂದ ದೂರವಿರಿ

ಶುಷ್ಕ ಹವಾಗುಣದ ಕಾರಣದಿಂದ ಗರ್ಭಾವಸ್ಥೆಯಲ್ಲಿ ಮೂಗಿನ ಶುಷ್ಕತೆಯು ಸಂಭವಿಸುತ್ತದೆ. ಚಳಿಗಾಲದ ಸಮಯದಲ್ಲಿ ಗರ್ಭಾವಸ್ಥೆಯಲ್ಲಿರುವ ಮಹಿಳೆಯರಿಗೆ ಇದು ಸಾಮಾನ್ಯ ಸಮಸ್ಯೆಯಾಗಿರುತ್ತದೆ. ಇಂತಹ ಸಮಯದಲ್ಲಿ ಮನೆಯೊಳಗೆ ಒಂದು ಆದ್ರಕವನ್ನು ಬಳಸುವುದು ಸುಲಭವಾದ ಪರಿಹಾರ. ಗರ್ಭಿಣಿಯರು ಆದಷ್ಟು ಧೂಳು ಮತ್ತು ಧೂಮಪಾನದಿಂದ ದೂರವಿರಬೇಕು. ಮಲಗುವ ಕೋಣೆ ಹಾಗೂ ಅವರು ಇರುವ ಸ್ಥಳಗಳು ಹೆಚ್ಚು ಶುಚಿಯಿಂದ ಇರುವಂತೆ ನೋಡಿಕೊಳ್ಳಬೇಕು.

ಔಷಧಿಗಳು

ಗರ್ಭಾವಸ್ಥೆಯಲ್ಲಿ ಮೂಗಿನಿಂದ ರಕ್ತ ಸ್ರಾವ ಉಂಟಾದರೆ ಅದನ್ನು ತಡೆಯಲು ಸುರಕ್ಷಿತವಾದ ಹಲವಾರು ಔಷಧಗಳಿವೆ. ಹಾಗಾಗಿ ನಿಮ್ಮ ವೈದ್ಯರಲ್ಲಿ ಸೂಕ್ತ ತಪಾಸಣೆ ಹಾಗೂ ಸಮಾಲೋಚನೆ ನಡೆಸುವುದರ ಮೂಲಕ ಉತ್ತಮ ಔಷಧಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಔಷಧಗಳ ಆಯ್ಕೆ ಮಾಡುವಾಗ ವೈದ್ಯರ ಸಲಹೆಯನ್ನು ಪಡೆದುಕೊಳ್ಳಲು ಮರೆಯದಿರಿ.

ಮೂಗಿನ ರಕ್ತಸ್ರಾವ ನಿಲ್ಲಿಸಲು ಇಲ್ಲಿದೆ ನೋಡಿ ಒಂದಿಷ್ಟು ಸರಳ ಟಿಪ್ಸ್

*ಹೆಚ್ಚು ನೀರು ಕುಡಿಯಿರಿ, ಆಗ ನಿಮ್ಮ ಎಲ್ಲಾ ನಾಸಿಕ ಪೊರೆಗಳಿಗೆ ನೀರಿನಂಶ ದೊರೆಯುತ್ತದೆ. ನಿಧಾನವಾಗಿ ನಿಮ್ಮ ಮೂಗಿನಿಂದ ಗಾಳಿಯನ್ನು ಸೀನಿ. ಜೋರಾಗಿ ಮಾಡಬೇಡಿ. ಇದರಿಂದ ರಕ್ತಸ್ರಾವ ಹೆಚ್ಚಾಗಬಹುದು.
*ಸೀನು ಬಂದಾಗ ನಿಮ್ಮ ಬಾಯಿಯನ್ನು ತೆರೆದಿಡಲು ಪ್ರಯತ್ನಿಸಿ.
*ಆದಷ್ಟು ಒಣಗಾಳಿಯಲ್ಲಿ ಓಡಾಡಬೇಡಿ. ವಿಶೇಷವಾಗಿ ಚಳಿಗಾಲ ಅಥವಾ ಒಣ ಹವಾಮಾನದಲ್ಲಿ ಎಚ್ಚರಿಕೆಯಿಂದ ಇರಿ. ಮನೆಯಲ್ಲಿ ಹ್ಯುಮಿಡಿಫೈರ್ ಅಥವಾ ಹೀಟರ್ ಹೆಚ್ಚು ಬಳಸಬೇಡಿ. ಧೂಮಪಾನ ಮಾಡಬೇಡಿ, ಮಾಡುವವರಿಂದ ದೂರವಿರಿ.
*ನಾಸಿಕಗಳ ಒಣಗುವಿಕೆಯನ್ನು ತಡೆಯಲು ಲೂಬ್ರಿಕೆಂಟ್ ಬಳಸಿ. ಕೆಲವು ತಜ್ಞರು ಇದಕ್ಕಾಗಿ ಪೆಟ್ರೋಲಿಯಂ ಜೆಲ್ಲಿಯನ್ನು ಬಳಸಲು ಸೂಚಿಸುತ್ತಾರೆ. ಇನ್ನೂ ಕೆಲವರು ವಿಶೇಷವಾದ ಮೂಗಿನ ಲೂಬ್ರಿಕೆಂಟ್ ಬಳಸಲು ತಿಳಿಸುತ್ತಾರೆ. ಇದು ಔಷಧಿ ಅಂಗಡಿಗಳಲ್ಲಿ ಲಭ್ಯವಿರುತ್ತದೆ. ಸಲೈನ್ ನಾಸಲ್ ಸ್ಪ್ರೇಗಳು ಸಹ ಲಭ್ಯವಿರುತ್ತವೆ. ಇವು ಸಹ ನಿಮಗೆ ಸಹಕಾರಿ, ಆದರೆ ಈ ಔಷಧಿಗಳನ್ನು ಅಧಿಕವಾಗಿ ಬಳಸಬೇಡಿ. ಏಕೆಂದರೆ ಇವುಗಳು ನಿಮ್ಮ ಮೂಗನ್ನು ಮತ್ತಷ್ಟು ಒಣಗಿಸಿಬಿಡುತ್ತವೆ.

English summary

Nose Bleeding During Pregnancy – Causes And Remedies

Whenever we talk of a pregnancy, the first image that strikes most of us is that of a woman with a large belly. Other physical symptoms that we would associate with a pregnant woman would be that of swollen ankles, vomiting and being out of breath. It is the smaller nuances of pregnancy that often end up being neglected. However, most pregnant women (or women who were pregnant in the past) would agree that it is these apparently insignificant symptoms that are responsible for greater discomfort.
Story first published: Friday, July 13, 2018, 18:12 [IST]
X
Desktop Bottom Promotion