For Quick Alerts
ALLOW NOTIFICATIONS  
For Daily Alerts

ಗರ್ಭಿಣಿ ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ಸರಿಯೇ?

|

ನೀವು ತಂದೆಯಾಗುವವರಿದ್ದೀರೇ? ಅಭಿನಂದನೆಗಳು. ನಿಮ್ಮ ಪತ್ನಿ ಗರ್ಭಿಣಿ ಎಂದು ತಿಳಿದ ಕ್ಷಣದಿಂದ ನಿಮ್ಮದೇ ವಂಶದ ಕುಡಿ ನಿಮ್ಮ ಮನೆಯನ್ನು ತುಂಬುವ ಕ್ಷಣವನ್ನು ನೀವು ಕಾತುರದಿಂದ ಕಾಯುತ್ತಿರುವಿರಿ. ಆದರೆ ಇದಕ್ಕೆ ಒಂಭತ್ತು ತಿಂಗಳು ತುಂಬುವುದು ಅನಿವಾರ್ಯ. ಅಷ್ಟೂ ಕಾಲ ನಿಮ್ಮ ಮತ್ತು ನಿಮ್ಮ ಕುಟುಂಬ ಸದಸ್ಯರ ಗಮನ ನಿಮ್ಮ ಪತ್ನಿಯ ಆರೋಗ್ಯದ ಕಡೆಗೇ ಇರುತ್ತದೆ. ಗರ್ಭಾವಸ್ಥೆಯ ಅವಧಿ ಆಕೆಯ ಜೀವನದ ಅತ್ಯಂತ ಪ್ರಮುಖ ಘಟ್ಟವಾಗಿದ್ದು ಭಾವಾತ್ಮಕವಾಗಿಯೂ ದೈಹಿಕವಾಗಿಯೂ ಆಕೆ ಹಲವಾರು ಬದಲಾವಣೆಗಳಿಗೆ ಒಳಗಾಗುತ್ತಾಳೆ. ಈ ಅವಧಿಯಲ್ಲಿ ಪತಿಯ ಬೆಂಬಲ ಹಾಗೂ ಆಸರೆ ಆಕೆಗೆ ಅತ್ಯಮೂಲ್ಯವಾಗಿದೆ.

ನಿಮಗೂ ನಿಮ್ಮ ಜೀವನದಲ್ಲಿ ಕೈಗೊಳ್ಳಬೇಕಾದ ಕೆಲವಾರು ನಿರ್ಧಾರಗಳನ್ನು ಹಾಗೂ ಬದಲಾವಣೆಗಳನ್ನು ಈ ಅವಧಿಯಲ್ಲಿ ಮಾಡಿಕೊಳ್ಳಬೇಕಾಗುತ್ತದೆ. ದಂಪತಿಗಳ ನಡುವಣ ಲೈಂಗಿಕ ಜೀವನಕ್ಕೂ ಕೊಂಚ ಬದಲಾವಣೆ ಬೇಕಾಗುತ್ತದೆ. ಈ ತಿಂಗಳುಗಳಲ್ಲಿ ಹಿಂದಿನಂತೆಯೇ ಲೈಂಗಿಕ ಕ್ರಿಯೆಯಲ್ಲಿ ಮುಂದುವರೆಯುವುದು ಸರಿಯೇ ಅಲ್ಲವೇ ಎಂಬ ದ್ವಂದ್ವ ನಿಮಗೆ ಖಂಡಿತವಾಗಿಯೂ ಎದುರಾಗಿರಬಹುದು.

ಕೆಲವರಿಗೆ ಗರ್ಭಿಣಿಯಾದ ತಮ್ಮ ಪತ್ನಿಯನ್ನು ಕಂಡಾಗ ಹೆಚ್ಚು ಭಾವೋದ್ರೇಕವಾಗುವುದನ್ನು ಗಮನಿಸಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಕೆಲವು ಪುರುಷರು ಗರ್ಭಿಣಿಯಾಗಿರುವ ತಮ್ಮ ಪತ್ನಿಯರನ್ನು ಹೊಸ ಜೀವವೊಂದನ್ನು ಒಡಲಲ್ಲಿ ಪೋಷಿಸುತ್ತಿರುವ ಕಾರಣ ಆಕೆಯನ್ನು ದೇವತೆಗೆ ಸಮಾನರಾಗಿ ಕಾಣುವ ಮೂಲಕ ಆಕೆಯ ಬಗ್ಗೆ ಗೌರವಭಾವನೆಯನ್ನು ಹೆಚ್ಚಾಗಿ ಬೆಳೆಸಿಕೊಳ್ಳುತ್ತಾರೆ. ಈ ಸಮಯದಲ್ಲಿ ಲೈಂಗಿಕ ಕ್ರಿಯೆಯಿಂದ ಗರ್ಭದಲ್ಲಿರುವ ಮಗುವಿಗೆ ತೊಂದರೆಯಾಗಬಹುದು ಎಂಬ ಕಾರಣದಿಂದ ಇವರು ದೂರವನ್ನು ಕಾಯ್ದುಕೊಳ್ಳುತ್ತಾರೆ. ಈ ವಿಷಯದಲ್ಲಿ ತಜ್ಞರು ಏನು ಹೇಳುತ್ತಾರೆ ಎಂಬುದನ್ನು ಚರ್ಚಿಸೋಣ. ಈ ಬಗ್ಗೆ ಬೇರೂರಿರುವ ತಪ್ಪು ಕಲ್ಪನೆಗಳನ್ನು ಹಾಗೂ ಎದುರಾಗುವ ಅನುಮಾನಗಳನ್ನೂ ಪರಿಹರಿಸಿಕೊಳ್ಳುವತ್ತ ಅಮೂಲ್ಯ ಮಾಹಿತಿಗಳನ್ನು ನೋಡೋಣ. ಈ ಅವಧಿಯಲ್ಲಿ ಸಮಾಗಮ ಸೂಕ್ತವೇ, ಅಲ್ಲವೇ ಎಂಬುದನ್ನೂ ಅರಿಯೋಣ...

ಈ ಸಮಯದಲ್ಲಿ ಆಕೆ ಇತರ ದಿನಗಳಿಗಿಂತಲೂ ಹೆಚ್ಚು ಆಯಾಸಗೊಳ್ಳುತ್ತಾಳೆ

ಈ ಸಮಯದಲ್ಲಿ ಆಕೆ ಇತರ ದಿನಗಳಿಗಿಂತಲೂ ಹೆಚ್ಚು ಆಯಾಸಗೊಳ್ಳುತ್ತಾಳೆ

ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹದಲ್ಲಿ ಮಗುವಿನ ಬೆಳವಣಿಗೆಯ ಕಾರಣದಿಂದ ಹಲವಾರು ಕ್ರಿಯೆಗಳು ಜರುಗುತ್ತಿರುತ್ತವೆ. ಅಷ್ಟೂ ಕಾಲ ಆಕೆ ದೈಹಿಕವಾಗಿಯೂ ಮಾನಸಿಕವಾಗಿಯೂ ಬದಲಾವಣೆಗೆ ಒಳಪಡುತ್ತಿರುತ್ತಾಳೆ. ಆಕೆಯ ದೇಹದಲ್ಲಿ ಸ್ರವಿಸುತ್ತಿರುವ ಕೆಲವು ಹಾರ್ಮೋನುಗಳ ಪ್ರಭಾವದಿಂದ ಆಕೆ ಸದಾ ಆಯಾಸಗೊಂಡೇ ಇರುತ್ತಾಳೆ ಹಾಗೂ ವಿಶೇಷವಾಗಿ ಪ್ರಥಮ ಮೂರು ತಿಂಗಳುಗಳಲ್ಲಿ ಈ ಆಯಾಸ ಗರಿಷ್ಟವಾಗಿರುತ್ತದೆ. ಈಕೆಗೆ ಹೆಚ್ಚು ಕಾಲ ನಿದ್ರಿಸುವ ಅಗತ್ಯವಿದೆ ಹಾಗೂ ಹೆಚ್ಚು ನಡೆದಾಡುವುದು ಮತ್ತು ಮೆಟ್ಟಿಲು ಏರುವಂತಹ ಕ್ರಿಯೆಗಳಿಂದ ದೂರವಿರುವುದು ಈ ಸಮಯದಲ್ಲಿ ಅಗತ್ಯ (ಪ್ರಥಮ ಮೂರು ತಿಂಗಳುಗಳಲ್ಲಿ ಈ ಚಟುವಟಿಕೆಗಳು ಗರ್ಭಾಪಾತದ ಸಾಧ್ಯತೆ ಹೆಚ್ಚಿಸುತ್ತವೆ). ಹಾಗಾಗಿ ಈ ಅವಧಿಯಲ್ಲಿ ಆಕೆ ಬೇಗನೇ ನಿದ್ದೆಹೋಗಬಯಸಿದರೆ ಇದನ್ನು ತಡೆಯಬಾರದು. ಒಂದು ವೇಳೆ ಆಕೆ ಇಡಿಯ ದಿನ ಆಯಾಸಗೊಂಡಂತಿದ್ದರೆ ನಿಮ್ಮ ವೈದ್ಯರ ಬಳಿ ಸಮಾಲೋಚಿಸಿ. ಆಕೆ ಕಬ್ಬಿಣದ ಕೊರತೆಯಿಂದ ರಕ್ತಹೀನತೆಗೂ ಒಳಗಾಗಿರಬಹುದು.

 ಕೆಲವು ಮಹಿಳೆಯರಿಗೆ ಕಾಮಾಸಕ್ತಿ ಹೆಚ್ಚಬಹುದು

ಕೆಲವು ಮಹಿಳೆಯರಿಗೆ ಕಾಮಾಸಕ್ತಿ ಹೆಚ್ಚಬಹುದು

ಗರ್ಭಾವಸ್ಥೆಯಲ್ಲಿ ಕೆಲವು ಮಹಿಳೆಯರಿಗೆ ಕಾಮಾಸಕ್ತಿ ಹೆಚ್ಚುತ್ತದೆ. ಏಕೆಂದರೆ ಈ ಅವಧಿಯಲ್ಲಿ ಜನನಾಂಗಗಳಲ್ಲಿ ಹೆಚ್ಚುವ ರಕ್ತಸಂಚಾರ ಹೆಚ್ಚು ಸೂಕ್ಷ್ಮ ಸಂವೇದಿಯಾಗಿಸುತ್ತದೆ ಹಾಗೂ ಮಿಲನಕ್ಕೆ ಎಂದಿಗಿಂತಲೂ ಹೆಚ್ಚಾಗಿಯೇ ಮನ ಹಾತೊರೆಯುತ್ತದೆ.

ಸಮಾಗಮಕ್ಕೆ ಸೂಕ್ತವಾದ ಅವಧಿ ನಾಲ್ಕರಿಂದ ಆರನೆಯ ತಿಂಗಳು

ಸಮಾಗಮಕ್ಕೆ ಸೂಕ್ತವಾದ ಅವಧಿ ನಾಲ್ಕರಿಂದ ಆರನೆಯ ತಿಂಗಳು

ಗರ್ಭಾವಸ್ಥೆಯ ಎರಡನೆಯ ತ್ರೈಮಾಸಿಕದ ಅವಧಿ ದಂಪತಿಗಳಿಗೆ ಸುರಕ್ಷಿತವಾಗಿದೆ. ಪ್ರಥಮ ತ್ರೈಮಾಸಿಕದಲ್ಲಿ ಗರ್ಭಿಣಿಯ ದೇಹ ಇನ್ನೂ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಾ ಇರುವ ಕಾರಣ ಬೆಳಗ್ಗಿನ ವಾಕರಿಕೆ, ವಾಂತಿ, ಶಕ್ತಿಹೀನಗೆ, ಸುಸ್ತು, ರಸದೂತಗಳ ಅಡಚಣೆ, ಉದ್ವೇಗ ಮೊದಲಾದವು ಕಂಡುಬರುತ್ತವೆ. ಮೂರನೆಯ ತ್ರೈಮಾಸಿಕದಲ್ಲಿ ಮಗುವಿನ ಬೆಳವಣಿಗೆ ಪ್ರಮುಖ ಹಂತ ಪಡೆದಿದ್ದು ಹೆರಿಗೆಗಾಗಿ ತಯಾರಿ ನಡೆಸಬೇಕಾಗುತ್ತದೆ. ಈ ಸಮಯದಲ್ಲಿ ಹೊಟ್ಟೆಯ ಗಾತ್ರವೂ ಬಹಳವೇ ದೊಡ್ಡದಾಗಿರುತ್ತದೆ ಹಾಗೂ ಆಕೆ ಹಲವಾರು ನೋವುಗಳನ್ನು ಅನುಭವಿಸುತ್ತಾಳೆ. ಇದು ದೈಹಿಕವಾದರೆ, ಬರಲಿರುವ ಮಗುವಿನ ಬಗ್ಗೆ ಮನಸ್ಸಿನಲ್ಲಿ ಮೂಡುವ ಯೋಚನೆಗಳು ಭಾವಾತ್ಮಕವಾಗಿ ಆವರಿಸುತ್ತವೆ. ಆದ್ದರಿಂದ ಸಮಾಗಮಕ್ಕೆ ಎರಡನೆಯ ತ್ರೈಮಾಸಿಕವೇ ಅತ್ಯುತ್ತಮವಾಗಿದ್ದು ಉಳಿದೆರಡು ತ್ರೈಮಾಸಿಕದಲ್ಲಿ ದೂರ ಕಾಯ್ದುಕೊಳ್ಳುವುದು ಅಗತ್ಯ. ಎರಡನೆಯ ತ್ರೈಮಾಸಿಕದಲ್ಲಿ ಆಕೆಯ ದೇಹ ಗರ್ಭಾವಸ್ಥೆಯ ನಡುವಣ ಹಂತದಲ್ಲಿದ್ದು ಹೊಸ ಶಕ್ತಿ ಪಡೆದಿರುತ್ತಾಳೆ ಹಾಗೂ ಗರ್ಭಾವಸ್ಥೆಯಲ್ಲಿ ಸ್ರವಿಸುವ ರಸದೂತಗಳಿಗೆ ಈಗ ಆಕೆಯ ದೇಹ ಒಗ್ಗಿಕೊಂಡಿರುತ್ತದೆ. ಹಾಗಾಗಿ ಆಕೆಗೂ ಲೈಂಗಿಕ ಕಾಮಾಸಕ್ತಿ ಹೆಚ್ಚಿರುತ್ತದೆ.

ಲೈಂಗಿಕ ಕ್ರಿಯೆಯಲ್ಲಿ ಮಗುವಿನ ಮೇಲೆ ಭಾರ ಬೀಳದಂತೆ ಎಚ್ಚರ ಅಗತ್ಯ

ಲೈಂಗಿಕ ಕ್ರಿಯೆಯಲ್ಲಿ ಮಗುವಿನ ಮೇಲೆ ಭಾರ ಬೀಳದಂತೆ ಎಚ್ಚರ ಅಗತ್ಯ

ಹೆಚ್ಚಿನ ಪುರುಷರಿಗೆ ಎದುರಾಗುವ ಆತಂಕವೆಂದರೆ ತಮ್ಮಿಂದಾಗಿ ಗರ್ಭಿಣಿ ಪತ್ನಿಯ ಒಡಲಲ್ಲಿರುವ ಮಗುವಿನ ಮೇಲೆ ಏನಾದರೂ ಭಾರ ಬಿದ್ದರೆ ಎಂಬುದಾಗಿದೆ. ನಿಸರ್ಗ ಮಗುವಿನ ರಕ್ಷಣೆಗೆ ಅತ್ಯಂತ ಸೂಕ್ತವಾದ ಕ್ರಮಗಳನ್ನು ಕೈಗೊಂಡಿದ್ದು ನೀವು ಆತಂಕಪಡಲು ಕಾರಣವಿಲ್ಲ. ಗರ್ಭವತಿಯಾದ ಬಳಿಕ ಗರ್ಭಕಂಠದಲ್ಲಿ ಸ್ನಿಗ್ದವಾದ ದ್ರವರೂಪದ ಪದರವೊಂದು ಮೂಡುತ್ತದೆ ಹಾಗೂ ಗರ್ಭಕಂಠವನ್ನು ಸೋಂಕುಗಳಿಗೆ ಎದುರಾಗದಂತೆ ಮುಚ್ಚಿಬಿಡುತ್ತದೆ. ಹೆರಿಗೆಯ ಸಮಯದಲ್ಲಿ ಅಥವಾ ಇದಕ್ಕೂ ಕೆಲವು ದಿನಗಳ ಹಿಂದೆಯಷ್ಟೇ ಇದು ತೆರೆದುಕೊಳ್ಳುತ್ತದೆ. ಹಾಗಾಗಿ ಪುರುಷರಿಂದ ಗರ್ಭದಲ್ಲಿರುವ ಮಗುವಿಗೆ ಸೋಂಕು ಎದುರಾಗುವ ಸಾಧ್ಯತೆ ಕಡಿಮೆ. ಆದರೆ ಈ ಕ್ರಿಯೆಯಲ್ಲಿ ಮೈಭಾರ ಮಗುವಿನ ಮೇಲೆ ನೇರವಾಗಿ ಬೀಳದಂತೆ ಎಚ್ಚರವಹಿಸಬೇಕು.

ನಿಮ್ಮ ಕ್ರಿಯೆ ಮಗುವನ್ನು ಹೆದರಿಸಬಹುದು

ನಿಮ್ಮ ಕ್ರಿಯೆ ಮಗುವನ್ನು ಹೆದರಿಸಬಹುದು

ಇದೊಂದು ತಪ್ಪು ಕಲ್ಪನೆಯಾಗಿದೆ. ಗರ್ಭದಲ್ಲಿರುವ ಮಗುವಿನ್ನೂ ಭಾವನೆಗಳನ್ನು ವ್ಯಕ್ತಪಡಿಸುವ ಅಥವಾ ಸಂವೇದನೆಯನ್ನು ಸ್ವೀಕರಿಸುವ ಮಟ್ಟಕ್ಕೆ ಬೆಳೆದಿರುವುದಿಲ್ಲ. ಮಗು ಕೇವಲ ತನ್ನ ತಾಯಿಯ ಚಲನೆಯನ್ನು ಮಾತ್ರವೇ ಗ್ರಹಿಸುತ್ತದೆ ಹಾಗೂ ಆಕೆಯ ನಡಿಗೆ ಅಥವಾ ಬಸ್ ಪ್ರಯಾಣದ ಅವಧಿಯ ಕುಲುಕಾಟವನ್ನು ಮಾತ್ರವೇ ಅನುಭಸುತ್ತದೆ.

ಮುಖಮೈಥುನದಲ್ಲಿ ಪಾಲಿಸಬೇಕಾದ ಎಚ್ಚರಿಕೆಗಳು

ಮುಖಮೈಥುನದಲ್ಲಿ ಪಾಲಿಸಬೇಕಾದ ಎಚ್ಚರಿಕೆಗಳು

ಹಲವು ದಂಪತಿಗಳು ಮುಖಮೈಥುನವನ್ನು ಇಷ್ಟಪಡುತ್ತಾರೆ. ಆದರೆ ಗರ್ಭಾವಸ್ಥೆಯಲ್ಲಿ ಮುಖಮೈಥುನ ತಪ್ಪಲ್ಲವಾದರೂ ಕೆಲವು ಎಚ್ಚರಿಕೆಗಳನ್ನು ಮಾತ್ರ ತಪ್ಪದೇ ಅನುಸರಿಸಬೇಕು. ಆಕೆಯ ಜನನಾಂಗಗಳಲ್ಲಿ ತಪ್ಪಿಯೂ ಗಾಳಿ ಹೋಗಬಾರದು. ಏಕೆಂದರೆ ಈ ಮೂಲಕ ಅಪ್ಪಿ ತಪ್ಪಿ ಗಾಳಿಗುಳ್ಳೆಯೊಂದು ಆಕೆಯ ದೇಹ ಪ್ರವೇಶಿಸಿದರೆ ಇದು embolism ಅಥವಾ ರಕ್ತನಾಳದಲ್ಲಿ ಗಾಳಿಗುಳ್ಳೆ ತುಂಬಿ ರಕ್ತಸಂಚಾರಕ್ಕೆ ತಡೆಯೊಡ್ಡಬಹುದು ಹಾಗೂ ಇದು ಆಕೆಯ ಪ್ರಾಣಕ್ಕೇ ಕುತ್ತು ತರಬಹುದು.

ಬಲು ವಿಜೃಂಭಣೆಯೂ ಬೇಡ

ಬಲು ವಿಜೃಂಭಣೆಯೂ ಬೇಡ

ಕೆಲವು ಪುರುಷರಿಗೆ ಹಾಸಿಗೆಯಲ್ಲಿ ವಿಜೃಂಭಿಸುವ ಹಂಬಲವಿರುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ಈ ಬಯಕೆಯನ್ನು ಅದುಮಿಡಬೇಕು. ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹದ ಮೇಲೆ ಅಥವಾ ಜನನಾಂಗಗಳ ಮೇಲೆ ಬೀಳುವ ಒತ್ತಡ ಆಕೆಗೆ ನೋವು ತರಿಸಬಹುದು ಹಾಗೂ ಆಕೆಗೆ ಅಸುಖಕರ ಹಾಗೂ ಅನಾನುಕೂಲವಾಗಿರಬಹುದು.

ಭಾರ ಬೀಳದ ಹೊಸ ಭಂಗಿಗಳನ್ನು ಯತ್ನಿಸಿ

ಭಾರ ಬೀಳದ ಹೊಸ ಭಂಗಿಗಳನ್ನು ಯತ್ನಿಸಿ

ದಂಪತಿಗಳಿಗೆ ಇದುವರೆಗೆ ಸೂಕ್ತವಾಗಿದ್ದ ಭಂಗಿ ಗರ್ಭಾವಸ್ಥೆಯ ಸಮಯದಲ್ಲಿ ಸೂಕ್ತವಾಗದೇ ಹೋಗಬಹುದು ಅಥವಾ ಸಮಂಜಸವಲ್ಲದೇ ಇರಬಹುದು. ಗರ್ಭಾವಸ್ಥೆಯಲ್ಲಿ ಆಕೆ ತನ್ನ ದೇಹದ ಕೋಮಲತೆಯನ್ನು ಕಳೆದುಕೊಳ್ಳುತ್ತಾಳೆ ಹಾಗೂ ಬೆಳೆಯುತ್ತಿರುವ ಮಗುವಿಗಾಗಿ ಆಕೆಯ ಗರ್ಭಾಶಯವೂ ಹಿಗ್ಗಬೇಕಾಗುತ್ತದೆ. ಈ ಅವಧಿಯಲ್ಲಿ ಆಕೆ ಹಲವಾರು ನೋವು, ಸೆಡೆತಗಳು ಹಾಗೂ ಸೂಕ್ಷ್ಮ ಸಂವೇದನೆಗಳಿಗೆ ಒಳಗಾಗುತ್ತಾಳೆ. ಆದ್ದರಿಂದ ಕೆಲವಾರು ಭಂಗಿಗಳು ಆಕೆಗೆ ಸೂಕ್ತವಲ್ಲ ಹಾಗೂ ಅನಾನೂಕೂಲಕರವೂ ನೋವನ್ನು ಹೆಚ್ಚಿಸುವಂತಹದ್ದೂ ಆಗಿರುತ್ತವೆ. ಆದ್ದರಿಂದ ಆಕೆಗೆ ಅಪ್ಯಾಯಮಾನವಾಗುವ ಭಂಗಿಗಳನ್ನು ಮಾತ್ರವೇ ಅನುಸರಿಸಬೇಕು. ದಂಪತಿಗಳಿಬ್ಬರಿಗೂ ಸೂಕ್ತ ಎನಿಸುವ ಭಂಗಿಗಳನ್ನೇ ಅನುಸರಿಸುವುದು ಒಳ್ಳೆಯದು. ಅದರಲ್ಲೂ ಮೊದಲ ನಾಲ್ಕು ತಿಂಗಳುಗಳಲ್ಲಿ ಆಕೆ ಬೆನ್ನ ಮೇಲಿರುವ ಭಂಗಿ ಬೇಡವೇ ಬೇಡ. ಈ ಕ್ರಿಯೆಯಲ್ಲಿ ಆಕೆಯ ಪ್ರಮುಖ ರಕ್ತನಾಳಗಳ ಮೇಲೆ ಅಪಾರವಾದ ಒತ್ತಡ ಬೀಳುತ್ತದೆ. ಇದೇ ಕಾರಣಕ್ಕೆ ಗರ್ಭಿಣಿಯರನ್ನು ಬೆನ್ನ ಮೇಲೆ ಮಲಗದಿರುವಂತೆ ವೈದ್ಯರು ಸಲಹೆ ನೀಡುತ್ತಾರೆ.

ಈ ಅವಧಿಯಲ್ಲಿ ವಾಸನೆ ಇರಕೂಡದು

ಈ ಅವಧಿಯಲ್ಲಿ ವಾಸನೆ ಇರಕೂಡದು

ಗರ್ಭಾವಸ್ಥೆಯಲ್ಲಿ ಆಕೆಯ ಘ್ರಾಣಶಕ್ತಿ ಅಪಾರವಾಗಿ ಹೆಚ್ಚುತ್ತದೆ. ಒಂದು ವೇಳೆ ನೀವು ಚಿಕ್ಕದಾಗಿ ಬೆವರುತ್ತಿದ್ದರೂ ಸಹಾ, ಆಕೆಗೆ ಇದು ಅಸಹನೀಯವಾಗಬಹುದು ಹಾಗೂ ಆಕೆ ನಿಮ್ಮಿಂದ ದೂರಹೋಗಬಯಸಬಹುದು. ಆಕೆ ಇದುವರೆಗೆ ಇಷ್ಟಪಡುತ್ತಿದ್ದ ಸುಗಂಧಗಳೂ ಈಗ ಆಕೆಗೆ ಅಹಿತಕರವಾಗಬಹುದು. ಒಂದು ವೇಳೆ ಆಕೆ ನಿಮ್ಮ ಬೆವರು ಅಥವಾ ನೀವು ಪೂಸಿಕೊಂಡ ಸುಗಂಧದ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರೆ ಇದಕ್ಕೆ ಆಕೆಯ ದೇಹದ ಬದಲಾವಣೆಯೇ ಕಾರಣ ಹೊರತು ವೈಯಕ್ತಿಕವಾದ ಭಾವನೆಯಲ್ಲ! ಆದ್ದರಿಂದ ಈ ಸಮಯದಲ್ಲಿ ನೀವು ನೈರ್ಮಲ್ಯವನ್ನು ಕಾಪಾಡಿಕೊಳ್ಳಬೇಕು ಹಾಗೂ ಸುಗಂಧಗಳಿಂದ ದೂರವಿರಬೇಕು.

ಮಿಲನದಿಂದ ಅವಧಿಗೂ ಮುಂಚಿನ ಹೆರಿಗೆಗೆ ಪ್ರಚೋದನೆ ಸಿಗುತ್ತದೆಯೇ?

ಮಿಲನದಿಂದ ಅವಧಿಗೂ ಮುಂಚಿನ ಹೆರಿಗೆಗೆ ಪ್ರಚೋದನೆ ಸಿಗುತ್ತದೆಯೇ?

ಪುರುಷರ ವೀರ್ಯದ್ರವದಲ್ಲಿ ಪ್ರೋಸ್ಟಾಗ್ಲಾಂಡಿನ್ ಎಂಬ ರಸದೂತವಿದೆ. ಇದರ ಕೆಲಸವೇನೆಂದರೆ ಗರ್ಭವತಿಯ ಗರ್ಭಕಂಠವನ್ನು ಪ್ರಚೋದಿಸಿ ಗರ್ಭಾಶಯ ಹೆರಿಗೆಗಾಗಿ ಸಂಕುಚಿತಗೊಳ್ಳುವಂತೆ ಮಾಡುವುದು. ಆದರೆ ಹೆರಿಗೆಗೆ ದೇಹ ಸಿದ್ದವಾಗಿಲ್ಲದಿದ್ದರೆ ಹಾಗೂ ಗರ್ಭವತಿ ಆರೋಗ್ಯವಾಗಿದ್ದರೆ ಗರ್ಭಾಶಯ ಸಂಕುಚಿತಗೊಳ್ಳುವುದಿಲ್ಲ ಹಾಗೂ ಅವಧಿಗೂ ಮುನ್ನ ಹೆರಿಗೆಯಾಗುವ ಸಾಧ್ಯತೆ ಇಲ್ಲವೇ ಇಲ್ಲ. ಆದರೆ ಈ ಮಾಹಿತಿ ನಿಮಗೆ ಪರೋಕ್ಷವಾಗಿ ನೆರವಾಗಬಹುದು. ಒಂದು ವೇಳೆ ಗರ್ಭವತಿ ನವಮಾಸಗಳನ್ನು ಪೂರೈಸಿಯೂ ಹೆರಿಗೆಯಾಗದೇ ಇದ್ದರೆ ಈ ದಿನದ ಸಮಾಗಮ ಹೆರಿಗೆಯಾಗಲು ನೆರವು ನೀಡಬಹುದು.

ಈ ಸಮಯಗಳಲ್ಲಿ ಸಮಾಗಮ ನಿಷಿದ್ಧ

ಈ ಸಮಯಗಳಲ್ಲಿ ಸಮಾಗಮ ನಿಷಿದ್ಧ

ಒಂದು ವೇಳೆ ನಿಮ್ಮ ಪತ್ನಿಯ ಆರೋಗ್ಯ ಇತಿಹಾಸದಲ್ಲಿ ಅವಧಿಗೂ ಮುನ್ನ ಹೆರಿಗೆಯಾಗಿದ್ದರೆ ಗರ್ಭಾವಸ್ಥೆಯಲ್ಲಿ ಸಮಾಗಮ ನಿಷಿದ್ಧವಾಗಿದೆ. ಒಂದು ವೇಳೆ ನಿಮ್ಮ ಪತ್ನಿಯ ಆರೋಗ್ಯದಲ್ಲಿ placenta pervia ಅಥವಾ ಜರಾಯು ಅಗತ್ಯಕ್ಕೂ ಹೆಚ್ಚೇ ಕೆಳಗೆ ಜಾರಿದ್ದರೆ ಅಥವಾ cervical insufficiency(ಗರ್ಭಕಂಠ ತನ್ನ ಸೆಳೆತವನ್ನು ಕಳೆದುಕೊಂಡು ಶಿಥಿಲವಾಗಿರುವುದು) ಮೊದಲಾದ ತೊಂದರೆಗಳಿದ್ದರೆ ಈ ದಂಪತಿಗಳಿಗೆ ಸಮಾಗಮ ಸೂಕ್ತವಲ್ಲ. ಅಲ್ಲದೇ ಲೈಂಗಿಕ ರೋಗ ಅಥವಾ ಇತರ ಸೋಂಕುಗಳಿದ್ದರೂ ಸಮಾಗಮ ಸಲ್ಲದು.

English summary

Is It Okay Being Intimate With Your Pregnant Wife?

It is seen that some men find their pregnant wives irresistible. And there are some others who see their wives as a sacred body that is nurturing a life and hence, cannot be attracted to them while they are pregnant. A different set of men avoid being sexually intimate with their wives just because they are scared that they may hurt their baby in the stomach. Today, we shall talk about the things that you should keep in mind as a dad-to-be when the topic of being intimate with your pregnant wife arises. We shall take a look at the various misconceptions, erase the doubts you may have and find solutions to the problems that may arise while in bed with your pregnant wife.
X
Desktop Bottom Promotion