For Quick Alerts
ALLOW NOTIFICATIONS  
For Daily Alerts

ಗರ್ಭಧಾರಣೆಯ ಸಮಯದಲ್ಲಿ ಸ್ತನದಲ್ಲಿ ಹಾಲು ಕಾಣಿಸುವುದು ಸಹಜವೇ?

By Sushma Charhra
|

ನಿಜವಾಗಿ ಹೇಳಬೇಕು ಅಂದರೆ, ಗರ್ಭಿಣಿಯರಲ್ಲಾಗುವ ಬದಲಾವಣೆಗಳು ದೈಹಿಕವಾಗಿರಬಹುದು ಮತ್ತು ಮಾನಸಿಕವಾಗಿಯೂ ಇರಬಹುದು. ಇದು ಪ್ರಕೃತಿದತ್ತವಾಗಿರುವ ವಿಚಾರವಾಗಿದೆ. ದೈಹಿಕ ವಿಚಾರಗಳ ಬಗ್ಗೆಯೇ ಪ್ರಸ್ತಾಪಿಸುವುದಾದರೆ, ಪ್ರಮುಖವಾಗಿ ದೇಹದ ಒಳಭಾಗದಲ್ಲಿ ಹಲವು ಬದಲಾವಣೆಗಳಾಗುತ್ತದೆ. ಬಾಹ್ಯವಾಗಿ ಕಾಣುವುದು ಕೆಲವಾದರೆ, ಆಂತರಿಕವಾಗಿ ಆಗುವ ಕೆಲವು ದೇಹದ ಬದಲಾವಣೆಗಳನ್ನು ನೀವು ಮಾತ್ರ ಅನುಭವಿಸಬೇಕಾಗುತ್ತದೆ.

ಆದರೆ, ಹೀಗೆ ಆಗುವ ಕೆಲವು ಬಾಹ್ಯ ಬದಲಾವಣೆಗಳನ್ನು ನೀವು ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ. ಉದಾಹರಣೆಗೆ ಹೊಟ್ಟೆ ಮುಂದೆ ಬರುವುದು, ಮುಖದಲ್ಲಿ ಹೊಳಪು ಬರುವುದು, ಕಾಲುಗಳು ಊದಿಕೊಳ್ಳುವುದು ಇತ್ಯಾದಿ. ಇದನ್ನೆಲ್ಲ ತಿಳಿದುಕೊಂಡ ಮೇಲೆ ಬರುವ ಪ್ರಶ್ನೆ ಎಂದರೆ ಗರ್ಭಿಣಿಯಲ್ಲಿ ಯಾವುದು ಸಹಜ ಬದಲಾವಣೆ ಮತ್ತು ಯಾವುದು ಅಸಹಜವಾದ ಬದಲಾವಣೆಗಳು ಎಂಬ ವಿಚಾರ.

Is it normal for breasts to leak in pregnancy in kannada

ಪ್ರತಿ ಗರ್ಭಾವಸ್ಥೆಯೂ ವಿಭಿನ್ನವಾಗಿರುತ್ತದೆ ಮತ್ತು ಅದನ್ನು ಹೀಗಿಯೇ ಎಂದು ವರ್ಣನೆ ಮಾಡಲು ಸಾಧ್ಯವಿಲ್ಲ. ಯಾವೆಲ್ಲ ಪ್ರಮುಖ ವಿಚಾರಗಳು ನಿಮ್ಮನ್ನು ಪರೀಕ್ಷಿಸಿ ನಿಮ್ಮ ಗರ್ಭಾವಸ್ಥೆಯಲ್ಲಿ ಹೀಗಿಯೇ ಆಗುತ್ತದೆ ಎಂದು ಗುರುತಿಸಲು ಸಾಧ್ಯವಿಲ್ಲ. ಪ್ರತಿ ಮಹಿಳೆಯರಲ್ಲೂ ಭಿನ್ನ ವಿಭಿನ್ನ ಗರ್ಭಾವಸ್ಥೆಯ ಬದಲಾವಣೆಗಳಿರುತ್ತದೆ.

ಈಗ, ನೀವು ನಿಮ್ಮನ್ನ ಇನ್ನೊಬ್ಬ ಗರ್ಭಿಣಿ ಮಹಿಳೆಯರ ಅನುಭವಕ್ಕೆ ಹೋಲಿಸಿದಾಗ,ನಿಮ್ಮ ಅನುಭವ ವಿಭಿನ್ನವಾಗಿರಬಹುದು ಮತ್ತು ನಿಮಗೆ ನನ್ನಲ್ಲಿ ಆ ಬದಲಾವಣೆ ಆಗಿಲ್ಲವಲ್ಲ, ಏನೋ ತಪ್ಪಾಗಿರಬೇಕು ಎಂಬ ಭಾವನೆ ಮೂಡುವ ಸಾಧ್ಯತೆಯೂ ಇದೆ. ಯಾಕೆಂದರೆ ನೂರಕ್ಕೂ ಹೆಚ್ಚು ಮಹಿಳೆಯರಲ್ಲಿ ಒಂದೇ ರೀತಿಯ ಕೆಲವು ಅನುಭವಗಳು ಇರಬಹುದು ಮತ್ತು ಸಹಜವಾಗಿಯೂ ಇರಬಹುದು. ಇಂತಹ ಅನುಭವವನ್ನು ಅಥವಾ ಭಯವನ್ನು ಹೆಚ್ಚಿನ ಸಂದರ್ಭದಲ್ಲಿ ಮೊದಲ ಬಾರಿ ಗರ್ಭಧಾರಣೆಗೆ ಒಳಗಾದ ಸ್ತ್ರೀ ಅನುಭವಿಸುತ್ತಾರೆ.

ನಿಮ್ಮನ್ನು ಅಂತಹದ್ದೇ ಒಂದು ಚಿಂತೆಯಿಂದ ಮುಕ್ತಿ ನೀಡಲು ಈ ಲೇಖನವನ್ನು ಬರೆಯಲಾಗುತ್ತಿದೆ. ನಾವು ಈ ಲೇಖನದಲ್ಲಿ ಗರ್ಭಿಣಿಯರ ಸ್ತನಗಳ ಸೋರುವಿಕೆ ಬಗ್ಗೆ ಪ್ರಸ್ತಾಪಿಸುತ್ತಿದ್ದೇವೆ. ಸಹಜವಾಗಿ ಎದೆಹಾಲು ಮಗು ಹುಟ್ಟಿದ ಮೇಲೆ ಅಗತ್ಯವಿರುತ್ತೆ. ಆದರೆ ಅದು ಮಗುವಿನ ಜನನಕ್ಕಿಂತ ಮುಂಚೆಯೇ ಕಾಣಿಸಿಕೊಳ್ಳುವುದು ಸಹಜವೇ ಅಥವಾ ಅಸಹಜವೇ? ಹಾಗಾದರೆ ಅದನ್ನು ಎದುರಿಸೋದು ಹೇಗೆ? ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬಿತ್ಯಾದಿ ವಿಚಾರಗಳನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಮುಂದೆ ಓದಿ.

1. ಮೂರನೇ ತ್ರೈಮಾಸಿಕದಲ್ಲೇ ಸ್ತನಗಳಲ್ಲಿ ಸೋರಿಕೆ
2. ಯಾವಾಗ ಚಿಂತಿಸಬೇಕು
3. ಸ್ತನಗಳ ಸೋರಿಕೆಯನ್ನು ನಿಭಾಯಿಸುವುದು ಹೇಗೆ
4. ನೀವು ಉತ್ಪಾದಿಸುತ್ತಿರುವ ಹಾಲನ್ನು ಸಂರಕ್ಷಿಸುವುದು
5. ಇದು ಹೊಟ್ಟೆ ನೋವಿನ ಸಂಕೇತವಲ್ಲ
6. ಇದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ

• ಮೂರನೇ ತ್ರೈಮಾಸಿಕದಲ್ಲಿ ಸ್ತನಗಳಲ್ಲಿ ಸೋರಿಕೆ

ಮೊದಲ ಮತ್ತು ಪ್ರಮುಖ ವಿಚಾರವೇನೆಂದರೆ, ಹೌದು, ಗರ್ಭಾವಸ್ಥೆಯ ಕೊನೆಯ ಮೂರು ತಿಂಗಳಿನ ಯಾವುದೇ ಸಂದರ್ಬದಲ್ಲಿ ಬೇಕಾದರೂ ಸ್ತನಗಳಲ್ಲಿ ಹಾಲಿನ ಸೋರಿಕೆ ಕಾಣಿಸಿಕೊಳ್ಳುವುದು ಒಂದು ಸಹಜ ಕ್ರಿಯೆ. ಆದರೆ ಇದು ಪ್ರತಿಯೊಬ್ಬ ಗರ್ಭಿಣಿ ಸ್ತ್ರೀ ಅನುಭವಕ್ಕೂ ಬರುವುದಿಲ್ಲ, ವರದಿಯ ಅನ್ವಯ 5 ರಲ್ಲಿ ಒಬ್ಬ ಮಹಿಳೆಗೆ ಈ ಅನುಭವವಾಗುತ್ತೆ ಎಂದು ಹೇಳಲಾಗುತ್ತದೆ.
ಎಲ್ಲಾ ರೀತಿಯಲ್ಲೂ ಸಹಜವಾಗಿರುವ ಈ ಕ್ರಿಯೆಯು ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮವನ್ನು ಉಂಟು ಮಾಡುವುದಿಲ್ಲ. ಪ್ರಮುಖವಾಗಿ ಅರ್ಥ ಮಾಡಿಕೊಳ್ಳಬೇಕಾಗಿರುವುದು ಏನೆಂದರೆ ಗರ್ಭಿಣಿಯರಲ್ಲಿ ಪ್ರಸವ ಪೂರ್ವ ಹಾಲು ಸೋರುವಿಕೆ ಕಾಣಿಸಲಿ ಅಥವಾ ಕಾಣಿಸದೇ ಇರಲಿ , ಮಗುವಿನ ಜನನಕ್ಕೂ ಮುನ್ನ ನಿಮಗೆ ಹಾಲಿನ ಅಗತ್ಯವೇ ಇಲ್ಲ. ಮಗು ಹುಟ್ಟಿದ ಮೇಲೆ ಮಾತ್ರ ನಿಮ್ಮ ಮಗುವಿಗೆ ನಿಮ್ಮ ಸ್ತನಗಳಲ್ಲಿನ ಹಾಲು ಬೇಕು.
ಮತ್ತೊಂದು ವಿಚಾರ ನೆನಪಿರಲಿ, ನೀವು ಗರ್ಭಾವಸ್ಥೆಯಲ್ಲಿ ಲೈಂಗಿಕ ಸಂಪರ್ಕದಲ್ಲಿ ಹೆಚ್ಚು ತೊಡಗಿದರೆ, ಎದೆಹಾಲು ಗರ್ಭಿಣಿಯಿದ್ದಾಗಲೇ ಸೋರಿಕೆಯಾಗುವ ಸಾಧ್ಯತೆ ಹೆಚ್ಚು ಇರುತ್ತದೆ.

• ಯಾವಾಗ ಚಿಂತಿಸಬೇಕು

ನಿಮ್ಮ ಪ್ರಗ್ನೆನ್ಸಿಯಲ್ಲಿ ಸ್ತನಗಳಿಗಿಂದ ಸೋರಿಕೆಯಾಗುವುದು ಹಾಲಲ್ಲ ಬದಲಾಗಿ ಅದನ್ನು ಕೊಲೆಸ್ಟ್ರಾಮ್ ಎಂದು ಕರೆಯಲಾಗುತ್ತೆ. ಇದು ಸಹಜ ಹಾಲಿಗಿಂತ ಸ್ವಲ್ಪ ದಪ್ಪವಾಗಿರುತ್ತದೆ ಮತ್ತು ಹಳದಿ ಬಣ್ಣದಲ್ಲಿರುತ್ತದೆ. ಇದು ಅತೀ ಹೆಚ್ಚು ಪೋಷಕಾಂಶಗಳಿಂದ ಕೂಡಿರುತ್ತದೆ ಮತ್ತು ಇದು ನಿಮ್ಮ ಮಗುವಿಗೆ ಅಗತ್ಯವಾಗಿ ನೀಡಲೇಬೇಕಾಗಿರುವ ವಸ್ತುವಾಗಿದೆ.ಒಂದು ವೇಳೆ ನೀವು ನಿಮ್ಮ ಬ್ರಾ ಮತ್ತು ನೀವು ಧರಿಸುವ ಬಟ್ಟೆಯಲ್ಲಿ ಬಿಳಿಯ ಮತ್ತು ಹಳದಿ ಬಣ್ಣದ ಹಾಲಿನ ಪದರಗಳನ್ನು ಗಮನಿಸಿಕೊಂಡರೆ ಯಾವುದೇ ಕಾರಣಕ್ಕೂ ಚಿಂತಿಸುವ ಅಗತ್ಯವಿಲ್ಲ. ಇದು ನಿಮಗೆ ಮತ್ತು ನಿಮ್ಮ ಮಗುವಿಗೆ ಯಾವುದೇ ಹಾನಿಯನ್ನೂ ಮಾಡುವುದಿಲ್ಲ.
ಆದರೆ, ಒಂದು ವೇಳೆ ನೀವು ನಿಮ್ಮ ಹಾಲಿನ ಬದಲಾಗಿ ಅಥವಾ ಹಾಲಿನ ಜೊತೆಯಲ್ಲಿ ರಕ್ತದ ಕಲೆಗಳನ್ನು ಗಮನಿಸಿಕೊಡರೆ ಕೂಡಲೇ ನಿಮ್ಮ ವೈದ್ಯರನ್ನು ನೀವು ಸಂಪರ್ಕಿಸಬೇಕು. ಒಂದುವೇಳೆ ಕಲೆಗಳು ಕಪ್ಪು ಹಸಿರು ಮತ್ತು ಕಪ್ಪು ಬಣ್ಣದಲ್ಲಿದ್ದರೆ, ನೀವು ಸಮಯವನ್ನು ವ್ಯರ್ಥ ಮಾಡುವಂತೆಯೇ ಇಲ್ಲ, ಕೂಡಲೇ ವೈದ್ಯರ ಬಳಿ ತೆರಳಿ.

• ಸ್ತನಗಳ ಸೋರಿಕೆಯನ್ನು ನಿಭಾಯಿಸುವುದು ಹೇಗೆ

ಇದೊಂದು ಸಹಜ ಪ್ರಕ್ರಿಯೆಯೇ ಆಗಿದ್ದರೂ ಕೂಡ ಸ್ತನಗಳಲ್ಲಿ ಸೋರಿಕೆಯಾಗುತ್ತಿರುವುದನ್ನು ನಿಭಾಯಿಸುವುದು ನಿಮಗೆ ಕಷ್ಟದ ಕೆಲಸ ಆಗಿರಬಹುದು. ಹೀಗೆ ವಾಸನೆಯುಕ್ತ ಅನ್ನಿಸುವ ಹಾಲು ನಿಮಗೆ ವಾಕರಿಕೆಯ ಅನುಭವವನ್ನು ನೀಡಬಹುದು.ಇಂತಹ ಸಂದರ್ಬಗಳಲ್ಲಿ, ಉತ್ತಮ ವಿಧಾನ ನೀವೇನು ಮಾಡಬಹುದು ಎಂದರೆ ಪ್ಯಾಡೆಡ್ ಬ್ರಾಗಳನ್ನು ಹಗಲಿನಲ್ಲಿ ದಿನಪೂರ್ತಿ ಧರಿಸಿ ಇರಿ. ಆ ಮೂಲಕ ಸಣ್ಣ ಪ್ಯಾಚ್ ಗಳು ಬ್ರಾ ಒಳಗೆ ಆಗಬಹುದು .
ಇದು ಬಿಡುಗಡೆಗೊಂಡ ಸಂಪೂರ್ಣ ಹಾಲನ್ನು ಹೀರಿಕೊಳ್ಳುತ್ತದೆ ಮತ್ತು ನಿಮ್ಮ ಬಟ್ಟೆಯ ಮೇಲೆ ಬಿಳಿ ಕಲೆಗಳಾಗುವುದನ್ನು ತಡೆಯುತ್ತದೆ. ಗರ್ಭಿಣಿಯರೇ ಧರಿಸಬಹುದಾದಂತಹ ಬ್ರಾ ಗಳು ಪ್ರಮುಖವಾಗಿ ಕಾಟನ್ ಬಟ್ಟೆಯಿಂದ ತಯಾರಿಸದ ಬ್ರಾಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು ಅದು ನಿಮಗೆ ಹೆಚ್ಚು ಆರಾಮದಾಯಕ ಅನ್ನಿಸಬಹುದು. ಅವು ಕೇವಲ ಚರ್ಮದ ಉಸಿರಾಟಕ್ಕೆ ಅನುಕೂಲ ಮಾಡಿಕೊಡುವುದು ಮಾತ್ರವಲ್ಲ ನಿಮ್ಮನ್ನು ಈ ಸಮಸ್ಯೆಯಿಂದ ಹೆಚ್ಚು ವಿಚಲಿತರಾಗದಂತೆ ಮತ್ತು ಒತ್ತಡಕ್ಕೆ ಸಿಲುಕದಂತೆ ನೋಡಿಕೊಳ್ಳುತ್ತದೆ. ಹಲವು ಬ್ರ್ಯಾಂಡ್ ಗಳು ಮಹಿಳೆಯರ ಅನುಕೂಲಕ್ಕೆ ತಕ್ಕಂತೆ ಡಿಸೈನ್ ಕೂಡ ಮಾಡಿವೆ.

• ನೀವು ಉತ್ಪಾದಿಸುತ್ತಿರುವ ಹಾಲನ್ನು ಸಂರಕ್ಷಿಸುವುದು

ಮುಂದುವರಿದಿರುವ ವೈದ್ಯಕೀಯ ತಂತ್ರಜ್ಞಾನಗಳಿಗೆ ಖಂಡಿತ ಧನ್ಯವಾದ ಸಲ್ಲಿಸಲೇಬೇಕು. ಹಿಂದಿನ ಕಾಲಕ್ಕೆ ಹೋಲಿಸಿದರೆ ಈಗಿನ ಕಾಲದಲ್ಲಿ ಗರ್ಭಾವಸ್ಥೆಯ ತೊಂದರೆಗಳನ್ನು ಎದುರಿಸಲು ಅವು ನಮಗೆ ಬಹಳವಾಗಿ ಸಹಕಾರ ನೀಡುತ್ತವೆ . ನಿಮ್ಮ ಗರ್ಭಾವಸ್ಥೆಯ ಕೆಲವೇ ತಿಂಗಳಿನಲ್ಲಿ ವೈದ್ಯರು ನಿಮ್ಮ ಮಗು ತಿಂಗಳಿಗೆ ಸರಿಯಾಗಿ ಬೆಳವಣಿಗೆ ಹೊಂದುತ್ತಿದೆಯೇ ಅಥವಾ ಸಣ್ಣದಾಗಿದೆಯಾ? ದೊಡ್ಡದಾಗಿದೆಯಾ?, ಕಡಿಮೆ ಪ್ಲೇಟ್ಲೆಟ್ ಗಳನ್ನು ಹೊಂದಿದೆಯಾ , ಡೌನ್ ಸಿಂಡ್ರೋಮ್ ಗಳಿವೆಯಾ ಹೀಗೆ ಹಲವು ವಿಚಾರಗಳನ್ನು ತಿಳಿದುಕೊಳ್ಳಲು ತಂತ್ರಜ್ಞಾನ ಸಹಕಾರ ನೀಡುತ್ತದೆ.
ಇಂತಹ ಯಾವುದೇ ಸಂದರ್ಬದಲ್ಲೇ ಆದರೂ ಮಗುವು ಹೆಚ್ಚಿನ ಆರೈಕೆಯನ್ನು ಹುಟ್ಟಿದ ನಂತರ ಬೇಡುತ್ತದೆ.ಈ ಸಂದರ್ಬಗಳಲ್ಲಿ ನಿಮ್ಮ ವೈದ್ಯರುಕೈ ಎಕ್ಸ್ ಪ್ರೆಸ್ ಕೊಲೆಸ್ಟ್ರಾಮ್ ಗಳಿಗೆ ಸಲಹೆ ನೀಡಬಹುದು. ಹೀಗೆ ಕೈ ಎಕ್ಸ್ ಪ್ರೆಸ್ ಕೊಲೆಸ್ಟ್ರಾಮ್ ಗಳ ಗುಣಗಳಿಂದಾಗಿ ನೀವು ಅದನ್ನು ಸರಿಯಾಗಿ ಸಂಗ್ರಹಿಸಬಹುದು ಮತ್ತು ನಿಮ್ಮ ಮಗು ಹುಟ್ಟುತ್ತಿದ್ದರೆ ಆ ಕೊಲೊಸ್ಟ್ರಾಮ್ ಗಳನ್ನು ಮಗುವಿಗೆ ಕರುಣಿಸಬಹುದು.. ಇದು ಅವಳ ಅಥವಾ ಅವಳ ಬದುಕುಳಿಯುವ ಸಾಧ್ಯತೆಯನ್ನು ಮಾತ್ರ ಹೆಚ್ಚಿಸುವುದಿಲ್ಲ ಬದಲಾಗಿ ವೇಗದ ವಿತರಣೆಗೂ ಕೂಡ ನೆರವಿಗೆ ಬರುತ್ತದೆ.

• ಇದು ಹೊಟ್ಟೆ ನೋವಿನ ಸಂಕೇತವಲ್ಲ

ಇದು ನಿಮ್ಮ ಗರ್ಭಾವಸ್ಥೆಯ ಕೊನೆಯ ದಿನಗಳಲ್ಲಿ ಕಾಣಿಸಿಕೊಳ್ಳುವುದರಿಂದಾಗಿ, ಹಲವು ಮಹಿಳೆಯರು ಇದನ್ನು ಹೊಟ್ಟೆ ನೋವು ಬರುವುದರ ಸಂಕೇತ ಎಂದು ಭಾವಿಸಿದ್ದಾರೆ.ಆದರೆ, ಸತ್ಯಕ್ಕೆ ತುಂಬಾ ದೂರವಾಗಿರುವ ವಿಚಾರವಾಗಿದೆ. ಲೈಂಗಿಕ ಸಂಪರ್ಕದ ಸಮಯದಲ್ಲಿ, ಸ್ತನಗಳಲ್ಲಿ ಸೋರಿಕೆ ಕಾಣಿಸಿಕೊಳ್ಳುವಿಕೆಯು ಜೊತೆಯಾಗುವುದು ಸಾಮಾನ್ಯವಾಗಿದೆ ಎಂದು ಬ್ರಾಕ್ಸ್ಟನ್ ಬ್ರಿಕ್ಸ್ ಹೇಳುತ್ತದೆ. ಆದರೆ, ಒಂದು ಅರ್ಥೈಸಿಕೊಳ್ಳಿ, ಲೈಂಗಿಕ ಸಂಪರ್ಕಕ್ಕೂ ಇದಕ್ಕೂ ಆ ಮಟ್ಟದ ಸಂಬಂಧವಿಲ್ಲ ಎಂಬುದನ್ನು ನೀವು ತಿಳಿದುಕೊಳ್ಳುವುದು ಮುಖ್ಯ.ನಿಪ್ಪಲ್ ಸ್ಟಿಮುಲೇಷನ್ ನಿಂದಾಗಿ ಕೂಡ ಈ ರೀತಿ ಸ್ತನಗಳಲ್ಲಿ ಸೋರಿಕೆ ಕಾಣಿಸಿಕೊಳ್ಳಬಹುದು. ಆದರೆ ಇದು ಕೆಟ್ಟದಲ್ಲ ಮತ್ತು ಇದು ನಿಮ್ಮ ಮಗುವಿಗೂ ಯಾವುದೇ ತೊಂದರೆ ಕೊಡುವುದಿಲ್ಲ, ಅಷ್ಟೇ ಅಲ್ಲ ಇದರಿಂದಾಗಿ ಪ್ರಸವದ ಹೊಟ್ಟೆನೋವು ಬರುವುದಿಲ್ಲ.

• ಇದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ

ನಿಮ್ಮ ದೇಹವು ಹಾಲಿನ ಉತ್ಪಾದನೆಯನ್ನು ಸುಲಭಗೊಳಿಸಿಕೊಂಡು ಬೇಗನೆ ಆರಂಭ ಮಾಡಿರಬಹುದು. ಇದು ಸಹಜವಾಗಿ ಕೇಳಿ ಬರುವ ವಿಚಾರವೇ. ಕೆಲವರಿಗೆ ಬೇಗ, ಕೆಲವರಿಗೆ ಪ್ರಸವದ ನಂತರ. ಅನೇಕ ಬಾರಿ ಗರ್ಭಧಾರಣೆಗೆ ಒಳಪಟ್ಟ ಮಹಿಳೆಯರಿಗೆ ಇದೊಂದು ಚಿಂತಿಸುವ ವಿಚಾರವಾಗಿರುವುದಿಲ್ಲ, ಯಾಕೆಂದರೆ ಅವರು ತಮ್ಮ ಹಿಂದಿನ ಪ್ರಗ್ನೆನ್ಸಿಯಲ್ಲಿ ಇದನ್ನು ಅನುಭವಿಸಿ ಕಂಡುಕೊಂಡಿರಬಹುದು. ಆದರೆ ಒಂದು ವೇಳೆ ನೀವು ಮೊದಲ ಬಾರಿ ತಾಯಿಯಾಗುತ್ತಿರುವವರಾದರೆ, ನೀವು ನಿಮ್ಮನ್ನ ಮತ್ತೊಬ್ಬ ಗರ್ಭಿಣಿಯ ಜೊತೆ ಹೋಲಿಸಿಕೊಳ್ಳಬೇಡಿ ಮತ್ತು ಅದರಿಂದ ಭಯಕ್ಕೆ ಒಳಗಾಗಬೇಡಿ. ನಿಮ್ಮ ಮಗು ನಿಮ್ಮ ಹೊಟ್ಟೆಯೊಳಗೆ ಸುರಕ್ಷಿತವಾಗಿದೆ ಎಂಬುದು ನೆನಪಿರಲಿ. ಪ್ರಕೃತಿಯು ನೈಸರ್ಗಿಕ ಕ್ರಿಯೆಗಳನ್ನು ತನ್ನಷ್ಟಕ್ಕೇ ತಾನೆ ಮಾಡುತ್ತದೆ. ನೀವು ಮತ್ತು ನಿಮ್ಮ ಮಗು ಆರೋಗ್ಯಯುತವಾದ ದೀರ್ಘಾಯುಷ್ಯವನ್ನೇ ಪಡೆದಿರುತ್ತೀರಿ. ಖುಷಿಯಾಗಿರಿ.

English summary

Is It Normal For Breasts To Leak During Pregnancy?

Broadly speaking, the changes that happen to you during your pregnancy may be physical or emotional in nature. Talking about the physical aspect, a major chunk of all that happens actually goes on inside the body with you being the only one experiencing the same. However, there are a few other changes that happen to your body that is not that well hidden. We are talking about things like your expanding belly, your glowing face, and your swollen legs. Having said all of it, the next question that arises here is what is normal in a pregnancy and what is not.
X
Desktop Bottom Promotion