For Quick Alerts
ALLOW NOTIFICATIONS  
For Daily Alerts

ಒಂದೆರಡು ಚಮಚ ತುಪ್ಪ- ಗರ್ಭಿಣಿಯರಿಗೆ ನಾರ್ಮಲ್ ಡೆಲಿವರಿಗೆ ಸಹಕಾರಿ

|

ಹೆಣ್ಣಿಗೊಂದು ಪರಿಪೂರ್ಣತೆಯ ಭಾವನೆ ಬರುವುದು ತಾನು ತಾಯ್ತನದ ಅನುಭವವನ್ನು ಹೊಂದಿದಾಗ. ತನ್ನ ಮಡಿಲಲ್ಲಿಯೇ ಒಂದು ಜೀವಕ್ಕೆ ಜೀವ ಹಾಗೂ ಪ್ರೀತಿಯನ್ನು ಎರೆದು, ಸಮಾಜಕ್ಕೊಂದು ಆಸ್ತಿಯನ್ನು ನೀಡುವ ಹೆಮ್ಮೆಯ ಭಾವನೆ ಅವಳದ್ದಾಗಿರುತ್ತದೆ. ಇಂತಹ ಒಂದು ಸುಮಧುರವಾದ ಬಾಂಧವ್ಯದ ಬೆಸುಗೆ ಹಾಗೂ ಪ್ರೀತಿಯ ಅನುಭವದ ಹಿಂದೆ ಸಾಕಷ್ಟು ನೋವುಗಳು ಇರುತ್ತವೆ ಎನ್ನುವುದು ಸಹ ಅಷ್ಟೇ ಸತ್ಯ. ಗರ್ಭದಲ್ಲಿ ಭ್ರೂಣವು ಬೆಳವಣಿಗೆ ಹೊಂದುತ್ತಿದ್ದಂತೆಯೇ ತಾಯಿಯ ಜೀವದಲ್ಲೂ ಅನೇಕ ಬದಲಾವಣೆಗಳು ಏರ್ಪಡುತ್ತವೆ.

ಗರ್ಭಾವಸ್ಥೆ ಎಂಬುದು ಹೆಣ್ಣಿನ ಬಾಳಿನಲ್ಲಿ ಅತ್ಯಾನಂದವನ್ನುಂಟು ಮಾಡುವ ಸಮಯವಾಗಿದೆ. ಈ ಸಮಯದಲ್ಲಿ ತನ್ನ ಆರೋಗ್ಯ ಮಾತ್ರವಲ್ಲದೆ ಗರ್ಭದೊಳಗಿರುವ ಕೂಸಿನ ಕಾಳಜಿಯನ್ನು ಆಕೆ ಮಾಡಬೇಕು. ನವಮಾಸವೂ ಆ ಮಗುವನ್ನು ಗರ್ಭದಲ್ಲಿ ಹೊತ್ತು ತನ್ನ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಬೇಕಾಗುತ್ತದೆ. ಕೆಲವೊಂದು ನಿಯಮಗಳನ್ನು ಚಾಚೂ ತಪ್ಪದೆ ಅನುಸರಿಸಬೇಕಾಗುತ್ತದೆ. ಏನು ತಿನ್ನಬೇಕು ಏನು ತಿನ್ನಬಾರದು ಎಂಬುದಾಗಿ ಪಟ್ಟಿ ಮಾಡಿ ಆ ರೀತಿಯೇ ಸೇವಿಸಬೇಕು. ನಿಮಗಿಷ್ಟವಿದ್ದರೂ ಅದು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರಬಹುದಾದ್ದರಿಂದ ಕೆಲವು ಆಹಾರಗಳನ್ನು ಕೆಲವೊಂದು ಚಟುವಟಿಕೆಗಳನ್ನು ನೀವು ಮಾಡಲೇಬಾರದು.

ವೈದ್ಯರ ಸಲಹೆಯನ್ನು ಪ್ರತಿಯೊಂದು ಹೆಜ್ಜೆಹೆಜ್ಜೆಯಲ್ಲೂ ಪಡೆದುಕೊಳ್ಳುತ್ತಿರಬೇಕಾಗುತ್ತದೆ. ನಿಮ್ಮ ಗರ್ಭಾವಸ್ಥೆಯ ಸಮಯದಲ್ಲಿ ನಿಮಗೆ ತಿಳಿಯದಂತೆ ನಿಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತಿರುತ್ತವೆ. ಈ ಸಮಯದಲ್ಲಿ ಮನೆಯ ಇತರ ಸದಸ್ಯರುಗಳಿಗಿಂತ ಹೆಚ್ಚಾಗಿ ನೀವು ನಿಮ್ಮ ಗರ್ಭದೊಳಗಿರುವ ಕಂದನಿಗೆ ಹೆಚ್ಚಿನ ಅಸ್ಥೆ ಕಾಳಜಿಯನ್ನು ನೀಡಬೇಕಾಗುತ್ತದೆ. ನಿಮ್ಮ ಆಹಾರದ ಕಡೆಗೆ ಗಮನ ಹರಿಸುವುದರ ಜೊತೆಗೆ ಮದ್ಯಪಾನ, ಧೂಮಪಾನ , ಹೆಚ್ಚಿನ ಕೆಫೀನ್ ಅಂಶಗಳ ಸೇವನೆಯನ್ನು ನೀವು ತ್ಯಜಿಸಬೇಕಾಗುತ್ತದೆ. ಇದರೊಂದಿಗೆ ಇನ್ನೂ ಹೆಚ್ಚಿನ ಚಟುವಟಿಕೆಗಳನ್ನು ನೀವು ಮಾಡುತ್ತಿದ್ದಲ್ಲಿ ಅದಕ್ಕೆಲ್ಲಾ ಪೂರ್ಣವಿರಾಮ ಇಡುವ ಸಮಯ ಇದಾಗಿದೆ.

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸಿದರೆ ಏನಾಗುತ್ತೆ ನೋಡಿ...

ಗರ್ಭಾವಸ್ಥೆಯಲ್ಲಿ ಆರೋಗ್ಯಕರ ಆಹಾರ ಸೇವನೆಯು ಅತಿ ಪ್ರಮುಖವಾಗಿದ್ದು ನಿಮ್ಮ ದೇಹದ ಕಾಳಜಿಯೊಂದಿಗೆ ಗರ್ಭದೊಳಗಿರುವ ಶಿಶುವಿನ ಕಡೆಗೂ ನೀವು ಗಮನ ನೀಡಬೇಕು. ನೀವು ಸೇವಿಸುವ ಆಹಾರವು ನಿಮ್ಮ ಮಗುವಿಗೆ ಯಾವುದೇ ರೀತಿಯ ಹಾನಿಯನ್ನುಂಟು ಮಾಡುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ನೀವು ಆಹಾರವನ್ನು ಸೇವಿಸಬೇಕು. ಆ ಆಹಾರ ನಿಮ್ಮ ಆರೋಗ್ಯವನ್ನು ಉತ್ತಮವಾಗಿಸುವುದರ ಜೊತೆಗೆ ನಿಮ್ಮ ಮಗುವಿನ ಕಾಳಜಿಯನ್ನು ಮಾಡಬೇಕು. ಅಂತಹುದೇ ಒಂದು ಅದ್ಭುತ ಆಹಾರದ ಬಗ್ಗೆ ಇಂದಿನ ಲೇಖನದಲ್ಲಿ ನಾವು ನೀಡುತ್ತಿದ್ದು ಅದರ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಅರಿತುಕೊಳ್ಳಿ. ಅದುವೇ ತುಪ್ಪವಾಗಿದೆ. ಗರ್ಭಿಣಿಯರು ತುಪ್ಪ ಸೇವಿಸುವುದರಿಂದ ದೊರೆಯುವ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ....

*ಸುಲಭವಾಗಿ ಸಹಿಸಬಹುದು
*ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ
*ಮಗುವಿನ ಮೆದುಳಿಗೆ ಒಳ್ಳೆಯದು
*ನಿಯಮಿತ ವೈದ್ಯಕೀಯ ಶಿಫಾರಸು
*ವಿಶೇಷ ಅವಕಾಶ

ಸುಲಭವಾಗಿ ಸಹಿಸಬಹುದು

ಸುಲಭವಾಗಿ ಸಹಿಸಬಹುದು

ನಿಯಮಿತವಾಗಿ ತುಪ್ಪದಂತಹ ಹೈನು ಉತ್ಪನ್ನವನ್ನು ವಯಸ್ಕರು ಸೇವಿಸಬೇಕು. ಇಂದಿನ ದಿನಗಳಲ್ಲಿ ಲ್ಯಾಕ್ಟೀಸ್ ಅಸಹಿಷ್ಣುತೆಯನ್ನು ಹೆಚ್ಚಿನ ಗರ್ಭಿಣಿಯರು ಅನುಭವಿಸುತ್ತಿದ್ದಾರೆ. ಈ ಸಮಯದಲ್ಲಿ ಅತ್ಯಗತ್ಯವಾದ ನ್ಯೂಟ್ರಿಶನ್ ಅಂಶವನ್ನು ಗರ್ಭಿಣಿಯರಿಗೆ ತುಪ್ಪವು ನೀಡುತ್ತದೆ. ಲ್ಯಾಕ್ಟೋಸ್ ಅಸಹಿಷ್ಣುತೆ ಅನುಭವಿಸುತ್ತಿರುವವರಿಗೆ ತುಪ್ಪವು ಉತ್ತಮವಾದುದು.

ಜೀರ್ಣಕ್ರಿಯೆಗೆ ಸಹಕಾರಿ

ಜೀರ್ಣಕ್ರಿಯೆಗೆ ಸಹಕಾರಿ

ಮಗುವಿನ ಜನನ ಮತ್ತು ಮಗುವು ಜನಿಸಿದ ಸಂದರ್ಭದಲ್ಲಿ ನಿಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಉಂಟಾಗುತ್ತಿರುತ್ತವೆ. ಕೊನೆಯ ಮಾಸದಲ್ಲಿ ಜೀರ್ಣಕ್ರಿಯೆ ಸಮಸ್ಯೆಗಳು ಗರ್ಭಿಣಿಯರಿಗೆ ತಲೆದೋರುತ್ತಲೇ ಇರುತ್ತದೆ. ಈ ಸಮಯದಲ್ಲಿ ತುಪ್ಪವನ್ನು ಸೇವಿಸುವುದು ಗರ್ಭಿಣಿಯರಿಗೆ ಅತ್ಯವಶ್ಯಕವಾದುದಾಗಿದೆ. ನೈಸರ್ಗಿಕ ಹೆರಿಗೆಯನ್ನು ನೀವು ಬಯಸುತ್ತಿದ್ದೀರಿ ಎಂದಾದಲ್ಲಿ ತುಸು ಹೆಚ್ಚು ಪ್ರಮಾಣದಲ್ಲಿಯೇ ತುಪ್ಪವನ್ನು ಸೇವಿಸಿ. ನೀವು ಸೇವಿಸುವ ಫೈಬರ್ ಅಂಶವನ್ನು ತುಪ್ಪವು ಬ್ಯುಟಿರಿಕ್ ಆ್ಯಸಿಡ್ ಆಗಿ ಮಾರ್ಪಡಿಸುತ್ತದೆ. ಇದು ಹಾನಿಕಾರಕ ಟ್ಯೂಮರ್ ಅನ್ನು ತಡೆಗಟ್ಟುತ್ತದೆ ಮತ್ತು ಹೊಟ್ಟೆಯಲ್ಲಿ ಆರೋಗ್ಯವಂತ ಬ್ಯಾಕ್ಟೀರಿಯಾ ಉತ್ಪಾದನೆಯನ್ನು ಮಾಡುತ್ತದೆ. ಗರ್ಭಿಣಿಯರಿಗೆ ಇದು ವಿಶೇಷವಾಗಿ ಉತ್ತಮವಾದುದು ಮತ್ತು ಇದರಿಂದ ನಿಮ್ಮ ಕರುಳಿನ ಚಲನೆ ನಿರಾಳಗೊಳ್ಳುತ್ತದೆ ಹಾಗೂ ದೇಹವನ್ನು ಇದು ಗಟ್ಟಿಯಾಗಿಸುತ್ತದೆ.

 ಮಗುವಿನ ಮೆದುಳಿಗೆ ಉತ್ತಮ

ಮಗುವಿನ ಮೆದುಳಿಗೆ ಉತ್ತಮ

ತುಪ್ಪವು ಒಮೆಗಾ - 3 ಮತ್ತು ಒಮೆಗಾ - 6 ಅನ್ನು ಒಳಗೊಂಡಿದೆ. ತುಪ್ಪವು ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಿರುವ ಕೊಬ್ಬನ್ನು ಹೊಂದಿದೆ. ನಿಮ್ಮ ಮಗುವಿನ ನರಕೋಶ ಮತ್ತು ಸ್ಮರಣೆ ಶಕ್ತಿಯನ್ನು ತುಪ್ಪವು ಹೆಚ್ಚಿಸುತ್ತದೆ. ಗರ್ಭಾವಸ್ಥೆಯ ಕೊನೆಯ ಅವಧಿಯಲ್ಲಿ ಮರೆಯದೇ ತುಪ್ಪವನ್ನು ಸೇವಿಸಿ. ಇದರಿಂದ ಮಗುವಿನ ಮೆದುಳು ಚೆನ್ನಾಗಿ ಬೆಳವಣಿಗೆಯಾಗುತ್ತದೆ ಹಾಗೂ ತುಪ್ಪದಲ್ಲಿರುವ ಎಲ್ಲಾ ಧನಾತ್ಮಕ ಅಂಶಗಳನ್ನು ಮಗುವು ಹೀರಿಕೊಳ್ಳುತ್ತದೆ. ನಿಮ್ಮ ಮಗುವಿನ ದೀರ್ಘ ಅವಧಿಯ ಮೆದುಳಿನ ಬೆಳವಣಿಗೆಗೆ ತುಪ್ಪವು ಸಹಕಾರಿಯಾಗಿದೆ.

ನಿಯಮಿತ ವೈದ್ಯಕೀಯ ಶಿಫಾರಸು

ನಿಯಮಿತ ವೈದ್ಯಕೀಯ ಶಿಫಾರಸು

ಗರ್ಭಾವಸ್ಥೆಯ ಸಮಯದಲ್ಲಿ ದೈನಂದಿನ ದೇಹಸ್ಥಿತಿಗಿಂತ ಗರ್ಭಿಣಿಯರ ದೇಹವು ತುಂಬಾ ಸೂಕ್ಷ್ಮವಾಗಿರುತ್ತದೆ ಮತ್ತು ಈ ಸಮಯದಲ್ಲಿ ಹೆಚ್ಚಿನ ಕಾಳಜಿ ಪೋಷಣೆಯನ್ನು ಅವರಿಗೆ ಮಾಡಬೇಕಾಗುತ್ತದೆ. 10, 20 ಶೇಕಡಾದಷ್ಟು ಗರ್ಭಿಣಿಯರು ಕೊಬ್ಬನ್ನು ತೆಗೆದುಕೊಳ್ಳಬೇಕು ಎಂದು ವೈದ್ಯರು ಶಿಫಾರಸು ಮಾಡುತ್ತಾರೆ. ಈ ಕೊಬ್ಬು ದೊರೆಯುವುದು ತುಪ್ಪದಿಂದಾಗಿದೆ. ದೈನಂದಿನ ಆಹಾರದಲ್ಲಿ ಗರ್ಭಿಣಿಯರು 5 ರಿಂದ 8 ಚಮಚ ತುಪ್ಪವನ್ನು ಸೇವಿಸಬೇಕು. ದಿನವೂ ಸೇವಿಸುವ ಪರೋಟ, ಚಪಾತಿ, ಅನ್ನ ಮತ್ತು ದೋಸೆಯ ಮೇಲೆ ತುಪ್ಪವನ್ನು ಮೇಲ್ಭಾಗದಲ್ಲಿ ಹಾಕಿ ಸೇವಿಸಬೇಕು. ಇಲ್ಲದ್ದಿದ್ದರೆ ಹಾಲಲ್ಲಿ ಕೂಡ ತುಪ್ಪ ಸೇರಿಸಿ ಸೇವಿಸಬಹುದಾಗಿದೆ.

ವಿಶೇಷ ಸವಲತ್ತು

ವಿಶೇಷ ಸವಲತ್ತು

ಇನ್ನು ಕೆಲವೊಂದು ಸಂದರ್ಭಗಳಲ್ಲಿ ವೈದ್ಯರು ನಿರ್ದಿಷ್ಟ ಗರ್ಭಿಣಿಯರಿಗೆ ತುಪ್ಪ ಸೇವನೆಯನ್ನು ಮಾಡಬೇಡಿ ಎಂದು ಹೇಳುತ್ತಾರೆ. ಏಕೆಂದರೆ ಕೆಲವೊಂದು ಗರ್ಭಾವಸ್ಥೆಯಲ್ಲಿ ತುಪ್ಪ ಸೇವನೆ ಅಷ್ಟೊಂದು ಹಿತಕಾರಿಯಾಗಿರುವುದಿಲ್ಲ. ದಢೂತಿ ದೇಹ ಹೊಂದಿರುವವರು ಮತ್ತು ಮಗುವಿನ ಜನನಕ್ಕೆ ದೇಹದ ಕೊಬ್ಬು ಸಹಕಾರಿಯಾಗಿಲ್ಲದ ಸಮಯದಲ್ಲಿ ವೈದ್ಯರು ತುಪ್ಪ ಸೇವನೆಯನ್ನು ಮಾಡಬೇಡಿ ಎಂದು ಹೇಳುತ್ತಾರೆ. ಮೂತ್ರಕೋಶದಲ್ಲಿ ಕಲ್ಲುಗಳಿದ್ದರೆ ತುಪ್ಪ ಸೇವನೆಯನ್ನು ನಿರ್ಬಂಧಿಸಲಾಗುತ್ತದೆ. ವೈದ್ಯರ ಸಲಹೆಯನ್ನು ಪಡೆದುಕೊಂಡು ನೀವು ತುಪ್ಪವನ್ನು ಸೇವಿಸಬಹುದಾಗಿದೆ. ಈ ರೀತಿ ನಿಮಗೆ ನಿರ್ಬಂಧ ಇಲ್ಲ ಎಂದಾದಲ್ಲಿ ತುಪ್ಪವನ್ನು ನೀವು ನಿರ್ಭಯವಾಗಿ ಸೇವಿಸಬಹುದಾಗಿದೆ.

ತುಪ್ಪ ಖರಿದಿಸುವಾಗ ಮೋಸ ಹೋಗದಿರಿ.. ಇಲ್ಲಿದೆ ನೋಡಿ ಶುದ್ಧ ತುಪ್ಪ ಪರೀಕ್ಷಿಸುವ ವಿಧಾನ

ತುಪ್ಪ ಖರಿದಿಸುವಾಗ ಮೋಸ ಹೋಗದಿರಿ.. ಇಲ್ಲಿದೆ ನೋಡಿ ಶುದ್ಧ ತುಪ್ಪ ಪರೀಕ್ಷಿಸುವ ವಿಧಾನ

*ಶುದ್ಧ ತುಪ್ಪದ ಬಾಟಲಿಯ ಮೇಲ್ಭಾಗದಲ್ಲಿ ಕರಗಿದ್ದು ಇದರ ಕೊಂಚವೇ ಕೆಳಗೆ ತುಪ್ಪ ಮರಳು ಮರಳಾಗಿರುತ್ತದೆ. ಆದರೆ ಇದು ಹಸುವಿನ ಮತ್ತು ಎಮ್ಮೆಹಾಲಿನ ತುಪ್ಪದಲ್ಲಿ ಎರಡರಲ್ಲೂ ಕಂಡುಬರುತ್ತದೆ. ಒಂದು ವೇಳೆ ಡಾಲ್ಡಾ ಬೆರೆಸಿದ್ದರೆ ಮೇಲ್ಭಾಗ ಕರಗುವುದಿಲ್ಲ, ಗಟ್ಟಿಯಾಗಿಯೇ ಇರುತ್ತದೆ.

*ಶುದ್ಧ ತುಪ್ಪ ಬಿಸಿ ಅಂಗೈಯಲ್ಲಿ ತಕ್ಷಣ ಕರಗುತ್ತದೆ. ಇದಕ್ಕಾಗಿ ಎರಡೂ ಹಸ್ತಗಳನ್ನು ಸುಮಾರು ಇಪ್ಪತ್ತು ಸೆಕೆಂಡ್ ಉಜ್ಜಿ ತಕ್ಷಣ ಒಂದು ಚಿಕ್ಕ ಪ್ರಮಾಣದ ಗಟ್ಟಿ ತುಪ್ಪವನ್ನು ಕೈ ಮೇಲೆ ಇಟ್ಟಾಕ್ಷವೇ ಕರಗಲು ಪ್ರಾರಂಭವಾಗಬೇಕು. ಹಾಗೂ ಕೆಲವೇ ಸೆಕೆಂಡುಗಳಲ್ಲಿ ದ್ರವವಾಗಬೇಕು. ಒಂದು ವೇಳೆ ಕರಗಲು ಹೆಚ್ಚು ಸಮಯ ತೆಗೆದುಕೊಂಡರೆ ಇದು ಅಪ್ಪಟವಲ್ಲ ಎಂದು ಖಾತ್ರಿಯಾಗುತ್ತದೆ.

English summary

Is Ghee Helpful During Pregnancy For Normal Delivery?

Discussing from a medical point of view, not all food items are suitable to be consumed at all points of time. The reason for the same may vary, depending on the physical state of the person concerned and whether he or she is suffering from some form of illness. Indian culture has recognized the same and that is why it encourages (or in some cases, prohibits) the consumption of certain food items at certain points of time. While there is medical explanation for most of them, some of the things that are prescribed by our traditions and culture have been proven to be false by modern science.
X
Desktop Bottom Promotion