For Quick Alerts
ALLOW NOTIFICATIONS  
For Daily Alerts

ಗರ್ಭಾವಸ್ಥೆಯಲ್ಲಿ ಕಬ್ಬಿಣದ ಪೂರಕ ಪ್ರಮಾಣವನ್ನು ಸೇವಿಸುವ ಮಹತ್ವ

By Arshad
|

ಗರ್ಭವತಿಯಾಗುವುದು ಪ್ರತಿಯೊಬ್ಬ ಹೆಣ್ಣಿನ ಕನಸಾಗಿದ್ದು ಇದೊಂದು ಅಪೂರ್ವ ಅನುಭವವೂ ಆಗಿದೆ. ಸಂತತಿ ಮುಂದುವರೆಯಲು ಇದು ಅನಿವಾರ್ಯವೂ ಆಗಿದೆ. ಗರ್ಭಾವಸ್ಥೆಯಲ್ಲಿ ಗರ್ಭವತಿ ತನ್ನ ಆಹಾರದ ಬಗ್ಗೆ ಅಲಕ್ಷ್ಯ ವಹಿಸುವಂತೆಯೇ ಇಲ್ಲ. ಈ ಸಮಯದಲ್ಲಿ ಉತ್ತಮ ಪೌಷ್ಟಿಕ ಆಹಾರ ಪಡೆಯುವುದು ಆದ್ಯತೆಯ ವಿಷಯವಾಗಬೇಕು.

ಪೌಷ್ಟಿಕ ಆಹಾರ ಸೇವನೆಯಿಂದಲೇ ಆರೋಗ್ಯವಂತ ಮಗುವನ್ನು ಪಡೆಯಲು ಸಾಧ್ಯ. ಗರ್ಭ ಧರಿಸಿದ ಕ್ಷಣದಿಂದ ಹೆರಿಗೆಯವರೆಗೂ ಗರ್ಭವತಿಯ ದೇಹ ಅಪಾರವಾದ ಬದಲಾವಣೆಗಳಿಗೆ ಒಳಗಾಗುತ್ತದೆ ಹಾಗೂ ಈ ಅವಧಿಗಳಲ್ಲಿ ಮಗುವಿನ ಆರೋಗ್ಯಕರ ಬೆಳವಣಿಗಾಗಿ ವಿಶೇಷವಾದ ಆಹಾರಕ್ರಮವನ್ನು ಅನುಸರಿಸಬೇಕಾಗುತ್ತದೆ.

ಗರ್ಭಾವಸ್ಥೆಯಲ್ಲಿ ಸೇವಿಸಲು ನಿಮ್ಮ ಸ್ತ್ರೀರೋಗ ತಜ್ಞವೈದ್ಯರು ನಿಮ್ಮ ಆಹಾರದಲ್ಲಿ ಹೆಚ್ಚಿನ ಕ್ಯಾಲೋರಿಗಳಿರುವಂತೆ ಸಲಹೆ ಮಾಡ ಬಹುದು. ಅಲ್ಲದೇ ಸಾಕಷ್ಟು ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವ ಮೂಲಕ ದಿನದ ಅಗತ್ಯದ ಖನಿಜ ಮತ್ತು ವಿಟಮಿನ್ನುಗಳ ಅಗತ್ಯತೆಯನ್ನು ಪೂರೈಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹದ ಮೇಲೆ ಅಪಾರವಾದ ಒತ್ತಡ ಬೀಳುತ್ತದೆ ಹಾಗೂ ಈ ಸಮಯದಲ್ಲಿ ಸಂತುಲಿತ ಹಾಗೂ ಆರೋಗ್ಯಕರ ಆಹಾರವನ್ನೇ ಸೇವಿಸಬೇಕಾಗುತ್ತದೆ. ಅಲ್ಲದೇ ಹೆಚ್ಚಿನ ರಕ್ತ ಉತ್ಪಾದನೆಗಾಗಿ ಕಬ್ಬಿಣದ ಪ್ರಮಾಣ ಹೆಚ್ಚಿರುವ ಆಹಾರಗಳನ್ನೂ ಸೇವಿಸಬೇಕಾಗಿ ಬರುತ್ತದೆ. ಒಂದು ವೇಳೆ ರಕ್ತದಲ್ಲಿ ಕಬ್ಬಿಣದ ಕೊರತೆ ಇದ್ದರೆ ಕಬ್ಬಿಣದ ಪೂರಕ ಪ್ರಮಾಣವನ್ನು ಗುಳಿಗೆಗಳ ಮೂಲಕ ಪಡೆಯಲು ವೈದ್ಯರು ಸಲಹೆ ಮಾಡುತ್ತಾರೆ. ಇದರ ಮಹತ್ವವೇನು ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ....

ಇದು ರಕ್ತದ ಮೂಲಧಾತುಗಳಲ್ಲೊಂದಾಗಿದೆ

ಇದು ರಕ್ತದ ಮೂಲಧಾತುಗಳಲ್ಲೊಂದಾಗಿದೆ

ರಕ್ತದಲ್ಲಿ ಹೀಮೋಗ್ಲೋಬಿನ್ ಎಂಬ ಕಣವಿದ್ದು ರಕ್ತದ ಪ್ರಮುಖ ಧಾತುವಾಗಿದೆ. ಆಮ್ಲಜನಕವನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೊತ್ತೊಯ್ಯುವ ಹಾಗೂ ಜೀವಕೋಶಗಳಿಗೆ ತಲುಪಿಸುವ ಮುಖ್ಯ ಕೆಲಸ ಇದರದ್ದು. ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೂ ರಕ್ತದ ಅಗತ್ಯವಿದ್ದು ಈ ರಕ್ತದ ಉತ್ಪಾದನೆಗೂ ಕಬ್ಬಿಣದ ಅಗತ್ಯವಿದೆ.

ಉತ್ತಮ ರೋಗ ನಿರೋಧಕ ಶಕ್ತಿಗೂ ಅಗತ್ಯವಾಗಿದೆ

ಉತ್ತಮ ರೋಗ ನಿರೋಧಕ ಶಕ್ತಿಗೂ ಅಗತ್ಯವಾಗಿದೆ

ಮಗುವಿನ ಹಾಗೂ ಗರ್ಭಿಣಿಯ ಇಬ್ಬರ ದೇಹದ ರೋಗ ನಿರೋಧಕ ಶಕ್ತಿ ಉತ್ತಮವಾಗಿರಲು ಕಬ್ಬಿಣ ಅಗತ್ಯವಾಗಿ ಬೇಕಾಗಿದೆ. ರೋಗಗಳನ್ನು ದೂರವಿರಿಸಲು ಈ ಶಕ್ತಿ ಉತ್ತಮವಾಗಿರುವುದು ಅವಶ್ಯ. ತಾಯಿಯ ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದಷ್ಟೂ ಮಗುವಿನ ರೋಗ ನಿರೋಧಕ ಶಕ್ತಿಯೂ ಉತ್ತಮವಾಗಿಯೇ ಇರುತ್ತದೆ.

ಕಿಣ್ವಗಳ ಉತ್ಪಾದನೆಗೂ ಅಗತ್ಯವಾಗಿದೆ

ಕಿಣ್ವಗಳ ಉತ್ಪಾದನೆಗೂ ಅಗತ್ಯವಾಗಿದೆ

ಗರ್ಭಿಣಿಯ ದೇಹಕ್ಕೆ ಅವಶ್ಯವಾಗಿರುವ ವಿವಿಧ ಕಿಣ್ವಗಳ ಉತ್ಪಾದನೆಗೂ ಕಬ್ಬಿಣದ ಅಗತ್ಯವಿದೆ. ದೇಹದ ಹಲವು ಪ್ರಮುಖ ಕಾರ್ಯಗಳು ಈ ಕಿಣ್ವಗಳನ್ನು ಅವಲಂಬಿಸಿದೆ.

ಜೋಡಣಾ ಅಂಗಾಂಶಗಳ ಬೆಳವಣಿಗೆಗೆ ನೆರವಾಗುತ್ತದೆ

ಜೋಡಣಾ ಅಂಗಾಂಶಗಳ ಬೆಳವಣಿಗೆಗೆ ನೆರವಾಗುತ್ತದೆ

ಮಯೋಗ್ಲೋಬಿನ್ ಎಂಬ ಪ್ರೋಟೀನ್‌ನ ಸಂಶ್ಲೇಷಣೆಗೂ ಕಬ್ಬಿಣ ಅಗತ್ಯವಾಗಿ ಬೇಕು. ಇದು ಸ್ನಾಯು ಹಾಗೂ ಇತರ ಜೋಡಣಾ ಅಂಗಾಂಶಗಳಿಗೆ ಆಮ್ಲಜನಕ ನೀಡುವ ಕೆಲಸ ಮಾಡುತ್ತದೆ.

ಹೆಚ್ಚುವರಿ ರಕ್ತದ ಉತ್ಪಾದನೆಗೆ ನೆರವಾಗುತ್ತದೆ

ಹೆಚ್ಚುವರಿ ರಕ್ತದ ಉತ್ಪಾದನೆಗೆ ನೆರವಾಗುತ್ತದೆ

ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹಕ್ಕೆ ಇತರ ಸಮಯಕ್ಕಿಂತ ಹೆಚ್ಚಿನ ರಕ್ತದ ಅಗತ್ಯವಿದೆ. ಆದ್ದರಿಂದ ದೇಹದಲ್ಲಿ ಹೆಚ್ಚುವರಿ ರಕ್ತವನ್ನು ಉತ್ಪಾದಿಸಬೇಕಾಗುತ್ತದೆ. ಹೆಚ್ಚುವರಿ ರಕ್ತದ ಉತ್ಪಾದನೆಗೆ ಹೆಚ್ಚುವರಿ ಕಬ್ಬಿಣದ ಅಗತ್ಯವಿದೆ.

ಎರಡನೆ ಹಾಗೂ ಮೂರನೆಯ ತ್ರೈಮಾಸಿಕ ಅವಧಿಯಲ್ಲಿ ಮಗುವಿಗೆ ಹೆಚ್ಚಿನ ಕಬ್ಬಿಣದ ಅಗತ್ಯವಿದೆ

ಎರಡನೆ ಹಾಗೂ ಮೂರನೆಯ ತ್ರೈಮಾಸಿಕ ಅವಧಿಯಲ್ಲಿ ಮಗುವಿಗೆ ಹೆಚ್ಚಿನ ಕಬ್ಬಿಣದ ಅಗತ್ಯವಿದೆ

ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯ ಪ್ರತಿ ಹಂತ ದಾಟಲೂ ತಾಯಿಯ ರಕ್ತದಲ್ಲಿರುವ ಕಬ್ಬಿಣವನ್ನು ಬಳಸಿಕೊಳ್ಳಲಾಗುತ್ತದೆ. ತನ್ಮೂಲಕ ಸ್ನಾಯು ಹಾಗೂ ಪ್ರೋಟೀನುಗಳ ಸಂಶ್ಲೇಷಣೆಯನ್ನು ಪೂರೈಸಿಕೊಳ್ಳುತ್ತದೆ. ಇದೇ ಕಾರಣಕ್ಕೆ ಹೆಚ್ಚಿನ ವೈದ್ಯರು ಈ ಅವಧಿಯಲ್ಲಿ ಹೆಚ್ಚುವರಿ ಕಬ್ಬಿಣದ ಪ್ರಮಾಣವನ್ನು ಸೇವಿಸುವಂತೆ ಸಲಹೆ ಮಾಡುತ್ತಾರೆ.

ಗರ್ಭವತಿಯ ದೇಹದಲ್ಲಿ ಸಮರ್ಪಕ ಪ್ರಮಾಣದ ಕಬ್ಬಿಣವಿದ್ದರೆ ಹಲವಾರು ತೊಡಕುಗಳ ಸಾಧ್ಯತೆ ಇಲ್ಲವಾಗುತ್ತದೆ

ಗರ್ಭವತಿಯ ದೇಹದಲ್ಲಿ ಸಮರ್ಪಕ ಪ್ರಮಾಣದ ಕಬ್ಬಿಣವಿದ್ದರೆ ಹಲವಾರು ತೊಡಕುಗಳ ಸಾಧ್ಯತೆ ಇಲ್ಲವಾಗುತ್ತದೆ

ಗರ್ಭವತಿಯ ದೇಹದಲ್ಲಿ ಸಾಕಷ್ಟು ಕಬ್ಬಿಣವಿದ್ದರೆ ಗರ್ಭಾವಸ್ಥೆಯಲ್ಲಿ ಎದುರಾಗುವ ಇತರ ತೊಡಕುಗಳ ಸಾಧ್ಯತೆ ಕಡಿಮೆ ಇರುತ್ತದೆ. ರಕ್ತದಲ್ಲಿ ಸಾಕಷ್ಟು ಪ್ರಮಾಣದ ಕಬ್ಬಿಣವಿದ್ದರೆ ತಾಯಿಯ ಆರೋಗ್ಯವೂ ಉತ್ತಮವಾಗಿರುತ್ತದೆ. ಹೆರಿಗೆಯ ಸಮಯದಲ್ಲಿ ದೇಹ ಬಹಳಷ್ಟು ರಕ್ತವನ್ನು ಕಳೆದುಕೊಂಡರೂ ಶೀಘ್ರವೇ ದೇಹ ಮರುಚೈತನ್ಯ ಪಡೆಯಲು ಸಾಧ್ಯವಾಗುತ್ತದೆ.

ಆರೋಗ್ಯವಂತ ಮಗುವಿಗೂ ಅಗತ್ಯವಿದೆ

ಆರೋಗ್ಯವಂತ ಮಗುವಿಗೂ ಅಗತ್ಯವಿದೆ

ಗರ್ಭಾವಸ್ಥೆಯಲ್ಲಿ ಮಗುವಿನ ದೇಹದ ಪ್ರತಿ ಅಂಗದ ಆರೋಗ್ಯಕರ ಬೆಳವಣಿಗೆ ಹಾಗೂ ಸರಿಯಾಗಿ ಕಾರ್ಯನಿರ್ವಹಿಸಲೂ ಕಬ್ಬಿಣದ ಅಗತ್ಯವಿದೆ. ಅಲ್ಲದೇ ಅವಧಿ ಪೂರ್ಣಗೊಳ್ಳುವ ಮುನ್ನವೇ ಹೆರಿಗೆಯಾಗುವ ಸಂಭವವನ್ನು ಹಾಗೂ ಹೆರಿಗೆ ಕಷ್ಟಕರವಾಗುವ ಸಂಭವವನ್ನೂ ಕಡಿಮೆಗೊಳಿಸುತ್ತದೆ.

ಮಗುವಿನ ತೂಕ ಆರೋಗ್ಯಕರವಾಗಿರಲು ಅಗತ್ಯವಾಗಿದೆ

ಮಗುವಿನ ತೂಕ ಆರೋಗ್ಯಕರವಾಗಿರಲು ಅಗತ್ಯವಾಗಿದೆ

ಜನನವಾಗುವ ಸಮಯದಲ್ಲಿ ಮಗುವಿನ ತೂಕ ಆರೋಗ್ಯಕರ ಮಟ್ಟದಲ್ಲಿರಬೇಕು. ಇದಕ್ಕೂ ಕಡಿಮೆ ಇದ್ದರೆ ಬದುಕುಳಿಯುವ ಸಾಧ್ಯತೆಯೂ ಇಳಿಮುಖವಾಗುತ್ತದೆ. ಗರ್ಭಾವಸ್ಥೆಯಲ್ಲಿ ಸಾಕಷ್ಟು ಕಬ್ಬಿಣದ ಲಭ್ಯತೆಯಿಂದ ಮಗು ಆರೋಗ್ಯಕರ ಬೆಳವಣಿಗೆ ಪಡೆಯುತ್ತದೆ ಹಾಗೂ ಹೆರಿಗೆಯ ಸಮಯದಲ್ಲಿ ಸೂಕ್ತ ತೂಕ ಪಡೆಯಲು ಸಾಧ್ಯವಾಗುತ್ತದೆ.

ಹೆರಿಗೆಯ ಬಳಿಕ ಬಾಣಂತನದಿಂದ ಶೀಘ್ರವಾಗಿ ಚೇತರಿಸಲು ನೆರವಾಗುತ್ತದೆ

ಹೆರಿಗೆಯ ಬಳಿಕ ಬಾಣಂತನದಿಂದ ಶೀಘ್ರವಾಗಿ ಚೇತರಿಸಲು ನೆರವಾಗುತ್ತದೆ

ಹೆರಿಗೆಯ ಬಳಿಕ ಎದುರಾಗುವ ಬಾಣಂತನದ ಅವಧಿಯಲ್ಲಿ ಮಹಿಳೆ ನಿಧಾನವಾಗಿ ಚೇತರಿಸಿಕೊಳ್ಳಬೇಕು. ಈ ಅವಧಿಯಲ್ಲಿ ಗರ್ಭಾವಸ್ಥೆಯಲ್ಲಿ ದೇಹ ಪಡೆದಿದ್ದ ಬದಲಾವಣೆಗಳಿಂದ ಮೂಲ ಸ್ಥಿತಿಗೆ ಮರಳಲು ಸಹಾ ಹೆಚ್ಚಿನ ಕಬ್ಬಿಣದ ಅಗತ್ಯವಿದೆ.

ನೆನಪಿಡಬೇಕಾದ ಪ್ರಮುಖ ವಿಷಯಗಳು

ನೆನಪಿಡಬೇಕಾದ ಪ್ರಮುಖ ವಿಷಯಗಳು

-ಕಬ್ಬಿಣದ ಪೂರಕ ಪ್ರಮಾಣವನ್ನು ಕೇವಲ ಮತ್ತು ಕೇವಲ ವೈದ್ಯರ ಸಲಹೆಯ ಮೇರೆಗೆ ಹಾಗೂ ಸಲಹೆ ಮಾಡಿದ ಪ್ರಮಾಣದಲ್ಲಿ ಮಾತ್ರವೇ ಸೇವಿಸಿ. ನೀವೇ ಸ್ವತಃ ಕಬ್ಬಿಣದ ಪೂರಕಪ್ರಮಾಣವನ್ನು ಎಂದಿಗೂ ನಿರ್ಧರಿಸಬೇಡಿ. ನಿಮ್ಮ ಆರೋಗ್ಯದ ಸ್ಥಿತಿಯನ್ನು ಪರಿಶೀಲಿಸಿ ವೈದ್ಯರೇ ಈ ಪ್ರಮಾಣವನ್ನೂ ನಿರ್ಧರಿಸುತ್ತಾರೆ.

ಒಂದು ದಿನಕ್ಕೆ ಎಷ್ಟು ಪ್ರಮಾಣವನ್ನು ವೈದ್ಯರು ಸಲಹೆ ಮಾಡಿದ್ದಾರೋ ಅಷ್ಟನ್ನು ಮಾತ್ರವೇ ಸೇವಿಸಿ. ಇದಕ್ಕೂ ಹೆಚ್ಚಾದರೆ ಇದು ಒಳ್ಳೆಯದು ಮಾಡುವ ಬದಲು ಕೆಟ್ಟದ್ದನ್ನೇ ಮಾಡಬಹುದು ಹಾಗೂ ನಿಮ್ಮ ಗರ್ಭಾವಸ್ಥೆಗೇ ಅಪಾಯ ಒಡ್ಡಬಲ್ಲುದು. ರಕ್ತದಲ್ಲಿ ಹೆಚ್ಚಿನ ಕಬ್ಬಿಣವಿದ್ದರೆ ಇದು ತಾತ್ಕಾಲಿಕ ಗರ್ಭಾವಸ್ಥೆಯ ಮಧುಮೇಹ (gestational diabetes), ಗರ್ಭಾವಸ್ಥೆಯ ಅಧಿಕ ರಕ್ತದೊತ್ತಡ (preeclampsia) ಹಾಗೂ ಗರ್ಭಾಪಾತದ ಸಾಧ್ಯತೆಯೂ ಹೆಚ್ಚುತ್ತದೆ.ಕೆಲವು ಪೂರಕ ಕಬ್ಬಿಣದ ಗುಳಿಗೆಗಳ ಸೇವನೆಯಿಂದ ಕೆಲವು ಅಡ್ಡಪರಿಣಾಮಗಳೂ ಎದುರಾಗಬಹುದು. ಮಲಬದ್ಧತೆ, ಅತೀವವಾದ ವಾಕರಿಕೆ ಇತ್ಯಾದಿ. ಆದ್ದರಿಂದ ಸದಾ ವೈದ್ಯರ ಸೂಚನೆಗಳನ್ನು ಸರಿಯಾಗಿ ಪಾಲಿಸಿ ಹಾಗೂ ನಿಮ್ಮ ಆರೋಗ್ಯ ಅತ್ಯುತ್ತಮವಾಗಿರಲು ಹಾಗೂ ಆರೋಗ್ಯವಂತ ಮಗುವಿನ ತಾಯಿಯಾಗಲು ಸಹಕರಿಸಿ.

English summary

Importance Of Taking Iron Supplements During Pregnancy

Pregnancy is a wonderful phase of life for women. And important too. During pregnancy, women cannot take their diets lightly. They need to ensure that they get the best of nutrition for an easy pregnancy and a healthy baby. From the beginning of conception to the time of delivery and after that too, a woman's body requires a special diet to ensure the healthy growth of the baby.
X
Desktop Bottom Promotion