For Quick Alerts
ALLOW NOTIFICATIONS  
For Daily Alerts

ಸುವರ್ಣ ಪ್ರಾಶನ ಗರ್ಭಿಣಿಯರ ಹಾಗೂ ಮಕ್ಕಳ ಪಂಚಾಮೃತ!

|

ಯಾವುದಾದರೂ ಅಪಾಯ ಎದುರಾಗುವ ಮುನ್ನ ಅದಕ್ಕೆ ಸೂಕ್ತವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ ಎಂಬುದು ಲೋಕರೂಢಿಯಾಗಿರುವ ಮಾತಾಗಿದೆ. ಇದರರ್ಥವೇನೆಂದರೆ ಅಪಾಯ ಬಂದ ಮೇಲೆ ಎದುರಿಸುವ ಬದಲಿಗೆ ಅಪಾಯ ಎದುರಾಗುವ ಮುನ್ನವೇ ಅದಕ್ಕೆ ಸೂಕ್ತವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಸುರಕ್ಷಿತವಾಗಿರುವುದು ಎಂದಾಗಿದೆ.

ಪುರಾತನ ಭಾರತೀಯ ಸಂಸ್ಕೃತಿಯಲ್ಲಿ ಜ್ಞಾನ ಮತ್ತು ತಿಳುವಳಿಕೆಗಳನ್ನು ನೀಡಿದ್ದು ಅವುಗಳು ನಮ್ಮ ನಿತ್ಯದ ಬದುಕಿಗೆ ಸಹಾಯಕವಾಗಿವೆ. ಆಯುರ್ವೇದವೆಂಬುದು ನಮ್ಮ ಜೀವನದ ಪ್ರಮುಖ ಸೂತ್ರವಾಗಿದ್ದು ಇದರಲ್ಲಿ ಹೇಳಿರುವ ಅಂಶಗಳನ್ನೇ ನಾವು ನಿತ್ಯದ ಜೀವನದಲ್ಲಿ ಅಳವಡಿಸುತ್ತಿದ್ದೇವೆ. ಮನುಷ್ಯನ ಯಾವುದೇ ರೀತಿಯ ಕಾಯಿಲೆಗಳಿಗೆ ಆಯುರ್ವೇದವು ಉತ್ತಮ ತಿಳುವಳಿಕೆಯನ್ನು ಪರಿಹಾರವನ್ನು ನೀಡುತ್ತದೆ. ಪ್ರಕೃತಿಯಲ್ಲಿ ದೊರೆಯುವ ಸರಳ ಔಷಧಗಳನ್ನೇ ನಾವು ಆಯುರ್ವೇದದಲ್ಲಿ ಕಂಡುಕೊಳ್ಳಬಹುದು.

suvarna prashan during pregnancy

ಅದಾಗ್ಯೂ ರೋಗನಿರೋಧಕ ವ್ಯವಸ್ಥೆಯನ್ನು ನಮ್ಮಲ್ಲಿ ಬೆಳೆಸಿಕೊಂಡು ಯಾವುದೇ ರೀತಿಯ ರೋಗದ ವಿರುದ್ಧ ನಾವು ಹೋರಾಡಬೇಕಾಗುತ್ತದೆ. ಯಾವುದೇ ರೋಗಗಳೊಂದಿಗೆ ಹೋರಾಡುವ ಶಕ್ತಿ ಕೂಡ ನಮ್ಮಲ್ಲಿಯೇ ಇದ್ದು ಇದರಿಂದ ನಾವು ಆರೋಗ್ಯಯುತ ರೋಗ ನಿರೋಧಕ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬಹುದಾಗಿದೆ.

ಗರ್ಭಿಣಿಯರು ಮತ್ತು ಹೊಸದಾಗಿ ಜನಿಸಿದ ಮಕ್ಕಳು ಶೀಘ್ರವೇ ರೋಗಗಳಿಗೆ ತುತ್ತಾಗುತ್ತಾರೆ. ಸುವರ್ಣ ಪ್ರಾಶನದಂತಹ ಆಯುರ್ವೇದಿಕ್ ಔಷಧಗಳನ್ನು ತೆಗೆದುಕೊಂಡು ಈ ಸಮಸ್ಯೆಗಳನ್ನು ನಿಯಂತ್ರಿಸಬಹುದಾಗಿದೆ.

ಸುವರ್ಣ ಪ್ರಾಶನ ಎಂದರೇನು?

ಚಿನ್ನ ಮತ್ತು ಬೆಳ್ಳಿಯಂತಹ ಲೋಹಗಳನ್ನು ಆಯುರ್ವೇದದಲ್ಲಿ ಅತ್ಯಂತ ಪವಿತ್ರ ಮತ್ತು ಮುಖ್ಯವಾದುದು ಎಂದು ಬಣ್ಣಿಸಲಾಗಿದೆ. ಇದು ಅತ್ಯದ್ಭುತ ರೋಗ ಪರಿಹಾರಗಳನ್ನು ಒಳಗೊಂಡಿದ್ದು ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ದೈಹಿಕ ಮತ್ತು ಮಾನಸಿಕ ಕಾಳಜಿಯನ್ನು ಮಾಡುತ್ತದೆ. ಮಾನವರಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸಲು ಉಲ್ಲೇಖಿಸಿರುವ ಹದಿನಾರು ಸಂಪ್ರದಾಯಗಳಲ್ಲಿ ಒಂದಾಗಿದೆ. ಚಿನ್ನದ ಬೂದಿಯನ್ನು ಬೇರೆ ಬೇರೆ ಗಿಡಮೂಲಿಕೆಗಳೊಂದಿಗೆ ಸೇರಿಸಿಕೊಂಡು ಸ್ವಲ್ಪ ಗಟ್ಟಿ ಅಥವಾ ದ್ರವ ರೂಪದಲ್ಲಿ ಸೇವಿಸುವುದಾಗಿದೆ. ಇನ್ನಷ್ಟು ಸರಳಗೊಳಿಸಲು ಇದು ಆಯುರ್ವೇದಿಕ್ ಅಂಗಡಿಗಳಲ್ಲಿ ದೊರೆಯುತ್ತದೆ ಮತ್ತು ಡ್ರಾಪ್ ಮಾದರಿಯಲ್ಲಿ ಇದನ್ನು ಸೇವಿಸಬಹುದಾಗಿದೆ.

ಗರ್ಭಿಣಿ ಸ್ತ್ರೀಯರು ಮತ್ತು ಮಗುವಿಗೆ ಸುವರ್ಣ ಪ್ರಾಶನವನ್ನು ಸೇವಿಸುವುದರ ಪ್ರಯೋಜನ

ಗರ್ಭಿಣಿ ಸ್ತ್ರೀಗೆ ಮತ್ತು ಮಗುವಿಗೆ ಸರಿಯಾದ ರೀತಿಯ ನ್ಯೂಟ್ರಿಶನ್ ಅನ್ನು ನೀಡುವುದು ಮುಖ್ಯವಾಗಿದೆ. ಸರಿಯಾದ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಸರಿಯಾದ ಪೋಷಣೆ ಅತ್ಯಗತ್ಯವಾದುದು. ಆದ್ದರಿಂದ ಗರ್ಭಾವಸ್ಥೆಯ 5 ತಿಂಗಳಿನಿಂದ ಸುವರ್ಣ ಪ್ರಾಶನವನ್ನು ಗರ್ಭಿಣಿಯರು ಸೇವಿಸಬೇಕು ಎಂದು ಹೇಳಲಾಗಿದೆ. ಮಗುವಿನ ಜನನದ ನಂತರ ಹದಿನಾರು ವರ್ಷದವರೆಗೆ ಈ ಪ್ರಾಶನವನ್ನು ಮಾಡಿಸಬೇಕು. ನಿತ್ಯವೂ ಸುವರ್ಣ ಪ್ರಾಶನವನ್ನು ಸೇವಿಸುವ ಮಕ್ಕಳು ಆರೋಗ್ಯವಂತರಾಗಿರುತ್ತಾರೆ ಅಂತೆಯೇ ಮಾನಸಿಕ ಆರೋಗ್ಯವನ್ನು ಬೆಳೆಸಿಕೊಳ್ಳುತ್ತಾರೆ ಮತ್ತು ವಯಸ್ಸಾದರೂ ಆರೋಗ್ಯವಂತರಾಗಿರುತ್ತಾರೆ.

ಸುವರ್ಣ ಪ್ರಾಶನದ ಇನ್ನಷ್ಟು ಆರೋಗ್ಯಪೂರ್ಣ ಅಂಶಗಳನ್ನು ತಿಳಿದುಕೊಳ್ಳೋಣ:

1. ರೋಗನಿರೋಧಕ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ

1. ರೋಗನಿರೋಧಕ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ

ಸುವರ್ಣ ಪ್ರಾಶನದಲ್ಲಿ ಚಿನ್ನದ ಬೂದಿ ಇರುವುದರಿಂದ ಅದರೊಂದಿಗೆ ಬೇರೆ ಬೇರೆ ಗಿಡಮೂಲಿಕೆಗಳು ಸಮ್ಮಿಶ್ರಗೊಂಡಿರುವುದರಿಂದ ಮಕ್ಕಳಲ್ಲಿ ಆರೋಗ್ಯಯುತ ರೋಗನಿರೋಧಕ ಶಕ್ತಿ ಉಂಟಾಗುತ್ತದೆ ಇದರಿಂದ ಅವರಿಗೆ ಸೋಂಕುಗಳು ಕಾಡುವುದಿಲ್ಲ.

2.ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

2.ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ

ಸುವರ್ಣ ಪ್ರಾಶನದಲ್ಲಿರುವ ಗಿಡಮೂಲಿಕೆಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹೊಟ್ಟೆಯಲ್ಲಿರುವ ಆಹಾರವು ಸರಿಯಾಗಿ ಜೀರ್ಣವಾಗಲು ಇದು ನೆರವಾಗುತ್ತದೆ ಮತ್ತು ಸಾಕಷ್ಟು ನ್ಯೂಟ್ರಿನ್ ಅಂಶಗಳನ್ನು ಒಳಗೊಂಡಿದೆ. ಕೋಲಿಕ್‌ನಂತಹ ಜೀರ್ಣಕ್ರಿಯೆ ಸಮಸ್ಯೆಗಳನ್ನು ಇದು ನಿವಾರಿಸುತ್ತದೆ. ಸುವರ್ಣ ಪ್ರಾಶನವನ್ನು ಸೇವಿಸುವುದು ಹಾಲಿನ ಸೇವನೆಯನ್ನು ನಿತ್ಯವೂ ಮಗು ಸೇವಿಸುವಂತೆ ಮಾಡುತ್ತದೆ.

3. ತ್ವಚೆಯ ಪೋಷಣೆಯನ್ನು ಮಾಡುತ್ತದೆ

3. ತ್ವಚೆಯ ಪೋಷಣೆಯನ್ನು ಮಾಡುತ್ತದೆ

ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಸುವರ್ಣ ಪ್ರಾಶನದ ಮಹತ್ವ ಅತ್ಯಂತ ಹಿರಿದು. ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ. ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ ಮತ್ತು ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ.

4. ಶ್ರವ್ಯ ಮತ್ತು ದೃಷ್ಟಿಯನ್ನು ಸುಧಾರಿಸುತ್ತದೆ

4. ಶ್ರವ್ಯ ಮತ್ತು ದೃಷ್ಟಿಯನ್ನು ಸುಧಾರಿಸುತ್ತದೆ

ಸುವರ್ಣ ಪ್ರಾಶನದಲ್ಲಿರುವ ಗಿಡಮೂಲಿಕೆಗಳು ಮಗುವಿನ ಶ್ರವ್ಯ ಮತ್ತು ದೃಷ್ಟಿ ಸುಧಾರಣೆಗೆ ಸಹಕಾರಿಯಾಗಿದೆ. ವಯಸ್ಸಾದಾಗ ಈ ರೀತಿಯ ಸಮಸ್ಯೆಯುಂಟಾದರೂ ಸುವರ್ಣ ಪ್ರಾಶನ ಆ ರೀತಿಯಾಗದಂತೆ ವ್ಯಕ್ತಿಯನ್ನು ಕಾಪಾಡುತ್ತದೆ.

5. ಮಗುವನ್ನು ಶಾಂತಗೊಳಿಸುತ್ತದೆ

5. ಮಗುವನ್ನು ಶಾಂತಗೊಳಿಸುತ್ತದೆ

ಮಕ್ಕಳಲ್ಲಿ ಉಂಟಾಗುವ ಕಿರಿಕಿರಿಯನ್ನು ತಡೆಗಟ್ಟಲು ಸುವರ್ಣ ಪ್ರಾಶನದಲ್ಲಿರುವ ಗಿಡಮೂಲಿಕೆಗಳು ಸಹಕಾರಿಯಾಗಿದೆ. ಜೀರ್ಣಕ್ರಿಯೆ ಸಮಸ್ಯೆಯನ್ನು ಇದು ನಿವಾರಿಸುತ್ತದೆ ಮತ್ತು ಮಕ್ಕಳಲ್ಲಿ ಇದರಿಂದ ಉಂಟಾಗುವ ಕಿರಿಕಿರಿಯನ್ನು ದೂರಮಾಡುತ್ತದೆ. ಸುವರ್ಣ ಪ್ರಾಶನವನ್ನು ಮಕ್ಕಳಿಗೆ ಕುಡಿಸುವುದರಿಂದ ಮಕ್ಕಳು ಕಿರಿಕಿರಿ ಮಾಡುವುದಾಗಲೀ, ಹಠ ಮಾಡುವುದಾಗಲೀ ಮಾಡುವುದಿಲ್ಲ. ಮಕ್ಕಳು ಆರೋಗ್ಯವಂತರಾಗಿರುತ್ತಾರೆ.

6. ವಿಶೇಷ ಆವಶ್ಯಕತೆಗಳೊಂದಿಗೆ ಮಕ್ಕಳಿಗೆ ಪ್ರಯೋಜನಕಾರಿಯಾಗಿದೆ

6. ವಿಶೇಷ ಆವಶ್ಯಕತೆಗಳೊಂದಿಗೆ ಮಕ್ಕಳಿಗೆ ಪ್ರಯೋಜನಕಾರಿಯಾಗಿದೆ

ಈಗಿನ ಶತಮಾನದಲ್ಲಿ ಮಕ್ಕಳಲ್ಲಿ ಚಟುವಟಿಕೆ ಇಲ್ಲದಿರುವುದು, ಕಲಿಕೆಯಲ್ಲಿ ಹಿನ್ನಡೆ ಹೆಚ್ಚಾಗಿ ಕಂಡುಬರುತ್ತಿದೆ. ಮಗುವಿನ ಬೆಳವಣಿಗೆಗೆ ಸುವರ್ಣ ಪ್ರಾಶನ ವರದಾನವಾಗಿದೆ. ಇದರಿಂದ ಇಂತಹ ಸಮಸ್ಯೆಗಳು ಎಳವೆಯಲ್ಲಿಯೇ ನಿವಾರಣೆಯಾಗುತ್ತದೆ.

7. ಉತ್ತಮ ತೂಕ ಮತ್ತು ಎತ್ತರ

7. ಉತ್ತಮ ತೂಕ ಮತ್ತು ಎತ್ತರ

ತಮ್ಮ ಮಕ್ಕಳು ಉತ್ತಮ ತೂಕ ಮತ್ತು ಎತ್ತರವನ್ನು ಹೊಂದಿರಬೇಕು ಎಂಬುದು ತಾಯಿಯ ಬಯಕೆಯಾಗಿರುತ್ತದೆ. ಸುವರ್ಣ ಪ್ರಾಶನವನ್ನು ಸೇವಿಸುವುದರಿಂದ ಮಕ್ಕಳು ಆರೋಗ್ಯವಂತ ತೂಕ ಮತ್ತು ಎತ್ತರವನ್ನು ಹೊಂದುತ್ತಾರೆ.

ಸುವರ್ಣ ಪ್ರಾಶನ ಸೇವನೆಯ ಸರಿಯಾದ ವಿಧಾನ

ಸುವರ್ಣ ಪ್ರಾಶನ ಸೇವನೆಯ ಸರಿಯಾದ ವಿಧಾನ

ಆಯುರ್ವೇದದಲ್ಲಿ ಹೇಳಿರುವಂತೆ ಗರ್ಭಿಣಿ ಸ್ತ್ರೀಯರು ಮತ್ತು ಮಕ್ಕಳು ಸುವರ್ಣ ಪ್ರಾಶನವನ್ನು ಸರಿಯಾದ ಅಳತೆಯಲ್ಲಿ ಸೇವಿಸಬೇಕು: ಪುಷ್ಯ ನಕ್ಷತ್ರದ ದಿನದಂದು ಅಂದರೆ 27 ದಿನಗಳಿಗೆ ಒಮ್ಮೆ ಈ ನಕ್ಷತ್ರ ಬರುತ್ತದೆ ಆ ದಿನ ಸುವರ್ಣ ಪ್ರಾಶನವನ್ನು ಸೇವಿಸಬೇಕು. ಪ್ರಾತಃಕಾಲ ಬರಿಯ ಹೊಟ್ಟೆಗೆ ಈ ಔಷಧವನ್ನು ಸೇವಿಸಬೇಕು

ಗರ್ಭಿಣಿಯರು 5 ತಿಂಗಳನ್ನು ತಲುಪಿದ ನಂತರ ಇದನ್ನು ಸೇವಿಸಬೇಕು. ಮಗುವಿನ ಜನನದ ನಂತರ ಔಷಧವನ್ನು ನೀಡಬೇಕು. ಇದಕ್ಕೂ ಮುನ್ನ ವೈದ್ಯರನ್ನು ಕಾಣುವುದು ಒಳಿತು.

ಔಷಧ ಸೇವನೆ

ಔಷಧ ಸೇವನೆ

ಮಗುವಿಗೆ 5 ವರ್ಷಗಳಿಗೆ - 1 ಹನಿ

5 ರಿಂದ 10 ವರ್ಷ - ದಿನವೂ 2 ಹನಿಗಳು

10 ರಿಂದ 16 ವರ್ಷ - ದಿನವೂ 3 ಹನಿಗಳು

ಗರ್ಭಿಣಿ ಸ್ತ್ರೀಯರು - ನಿತ್ಯವೂ 3 ಹನಿಗಳು

English summary

Importance Of Suvarna Prashan For Babies And Pregnant Mothers

Pure metals such as gold and silver are said to be very important in Ayurveda, as they have amazing healing properties. They are known to be the most potent immunity boosters and are also known to improve the overall physical and mental health. Suvarna prashana or swarna bindu prashana is given to babies, kids and also to pregnant mothers.
X
Desktop Bottom Promotion