For Quick Alerts
ALLOW NOTIFICATIONS  
For Daily Alerts

ಶಿಲೀಂಧ್ರಗಳ ಸೋಂಕನ್ನು ಗರ್ಭಿಣಿಯರು ನಿವಾರಿಸಿಕೊಳ್ಳುವುದು ಹೇಗೆ ?

By Sushma Charhra
|

ಗರ್ಭಾವಸ್ಥೆಯು ಎಷ್ಟು ಖುಷಿ ನೀಡುತ್ತಿರುತ್ತೋ ಅಷ್ಟೇ ಸಮಸ್ಯೆಗಳನ್ನೂ ಕೂಡ ಕೆಲವರಿಗೆ ನೀಡುತ್ತಿರಬಹುದು. ಅವುಗಳ ಪೈಕಿ ಗರ್ಭಿಣಿಯರಲ್ಲಿ ಕಾಡುವ ಅತ್ಯಂತ ಕೆಟ್ಟ ಸಮಸ್ಯೆ ಎಂದರೆ ಅದು ಶಿಲೀಂಧ್ರಗಳ ಸೋಂಕು. ಯಾಕೆಂದರೆ ಇದು ಸಾಕಷ್ಟು ನೋವು ನೀಡುತ್ತದೆ, ತೊಂದರೆ ಉಂಟು ಮಾಡುತ್ತದೆ ಮತ್ತು ಕೆಲವೊಮ್ಮೆ ಅಸಾಧ್ಯವಾದ ಹಿಂಸೆಗೂ ಕಾರಣವಾಗುತ್ತದೆ.

ಶಿಲೀಂಧ್ರಗಳ ಸೋಂಕಿನ ಕೆಲವು ಚಿಹ್ನೆಗಳೆಂದರೆ ಅದು ತುರಿಕೆ, ಕೆಂಪಗಾಗುವುದು, ನೋವು, ಉರಿಯುವುದು, ಸುಟ್ಟಂತೆ ಭಾಸವಾಗುವುದು ಮತ್ತು ಗಟ್ಟಿಯಾದ ಬಿಳಿ ಬಣ್ಣದ ಹೊರಹೋಗುವಿಕೆಯೂ ಕೂಡ ಶಿಲೀಂದ್ರಗಳ ಸೋಂಕಿನ ಲಕ್ಷಣಗಳಾಗಿರುತ್ತದೆ. ಅದು ಯಾವುದೇ ಕಾರಣವಾಗಿರಬಹುದು, ಶಿಲೀಂಧ್ರಗಳ ಸೋಂಕು ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯದ ಕಾರಣದಿಂದ ಹಿತವಾದುದ್ದಲ್ಲ. ಹಾಗಾಗಿ ನಿಮ್ಮ ಡೆಲಿವರಿಗೂ ಮುನ್ನ ಇದನ್ನು ಪರಿಹರಿಸಿ ಕೊಳ್ಳುವುದು ಬಹಳ ಮುಖ್ಯವಾದ ವಿಚಾರವಾಗಿದೆ ಇಲ್ಲದೇ ಇದ್ದರೆ ನಿಮ್ಮ ಮಗುವಿಗೂ ಸೋಂಕು ತಗುಲುವ ಸಾಧ್ಯತೆಗಳಿರುತ್ತದೆ. ಈ ಕೆಳಗೆ ಕೆಲವು ಸರಳ ಮಾರ್ಗಗಳನ್ನು ನಾವು ತಿಳಿಸಿದ್ದ, ಆ ಮೂಲಕ ಶಿಲೀಂದ್ರಗಳ ಸೋಂಕಿನ ನಿವಾರಣೆಯನ್ನು ಗರ್ಭಿಣಿ ಸ್ತ್ರೀಯರು ಮಾಡಿಕೊಳ್ಳಬಹುದಾಗಿದೆ.

pregnancy third trimester

ಗರ್ಭಿಣಿ ಮಹಿಳೆಯರಲ್ಲಿ ಶಿಲೀಂದ್ರಗಳ ಸೋಂಕನ್ನು ನಿವಾರಿಸುವ ಕೆಲವು ನೈಸರ್ಗಿಕ ಮಾರ್ಗಗಳು :

• ಚಮೋಮೈಲ್
• ಬೆಳ್ಳುಳ್ಳಿ
• ಮೊಸರು
• ಆಪಲ್ ಸಿಡರ್ ವಿನೆಗರ್
• ಕೊಬ್ಬರಿ ಎಣ್ಣೆ
• ಸಕ್ಕರೆಯಂಶ ಸೇವಿಸುವುದನ್ನು ಕಡಿಮೆ ಮಾಡಿ
• ಶಿಲೀಂದ್ರಗಳ ಸೋಂಕಿಗೆ ಇತರೆ ಚಿಕಿತ್ಸೆಗಳು

• ಚಮೋಮೈಲ್

ಗರ್ಭಿಣಿಯರಿಗೆ ತುಂಬಾ ಸುರಕ್ಷಿತವಾದ ಮತ್ತು ಹಿತಕರವಾದ ಅನುಭವವನ್ನು ಚಮೋಮೈಲ್ ಒದಗಿಸುತ್ತದೆ.ಒಂದು ಕಪ್ ಚಮೋಮೈಲ್ ಟೀ ಸೇವನೆ ಅಥವಾ ಅದರ ಸಪ್ಲಿಮೆಂಟ್ ಗಳನ್ನು ನೀವು ತೆಗೆದಕೊಳ್ಳಬಹುದು. ಇದೊಂದು ಫಂಗಸ್ ನಿವಾರಣೆಗೆ ಗರ್ಭಿಣಿಯರಿಗಿರುವ ನೈಸರ್ಗಿಕ ವಿಧಾನವಾಗಿದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ ಒಂದು ಸಾಂಬಾರ ಪದಾರ್ಥವಾಗಿದ್ದು, ತನ್ನ ಔಷಧೀಯ ಗುಣಗಳಿಂದ ಭಾರೀ ಪ್ರಸಿದ್ಧಿ ಗಳಿಸಿದೆ. ಬೆಳ್ಳುಳ್ಳಿಯನ್ನು ಫಂಗಸ್ ಗಳ ನಿವಾರಣೆಗೆ ಬಳಸಲಾಗುತ್ತದೆ ಯಾಕೆಂದರೆ ಇದರಲ್ಲಿ ಆಂಟಿ ಫಂಗಲ್ ಗುಣಗಳನ್ನು ಇದು ಹೊಂದಿದೆ. ಇದು ಕೇವಲ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಮಾತ್ರವಲ್ಲ ಬದಲಾಗಿ ಫಂಗಸ್ ಗಳನ್ನು ಸಾಯಿಸಿ ಅವುಗಳ ಬೆಳವಣಿಗೆಯನ್ನು ಕುಂಠಿತ ಮಾಡುವ ಸಾಮರ್ಥ್ಯ ಹೊಂದಿದೆ.
ಯಾವಾಗ ನೀವು ಶಿಲೀಂದ್ರಗಳ ಸೋಂಕಿನ ಮೊದಲ ಚಿಹ್ನೆಗಳನ್ನು ಗಮನಿಸುತ್ತೀರೋ ಆ ಕೂಡಲೇ ಒಂದು ಎಸಳು ಬೆಳ್ಳುಳ್ಳಿಯನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಸೋಂಕಿಗೆ ಒಳಗಾದ ವಜಿನಾದಲ್ಲಿ ಇಟ್ಟುಕೊಳ್ಳಿ. ನೀವು ರಾತ್ರಿ ಅದನ್ನು ಇಟ್ಟುಕೊಂಡು ಬೆಳ್ಳಿಗ್ಗೆಯೂ ತೆಗೆಯಬಹುದು. ಈ ರೀತಿ ಫಂಗಸ್ ಗಳನ್ನು ಸಾಯಿಸಲು ಸಾಧ್ಯವಾಗುತ್ತೆ ಆದರೆ ಇದು ಕೇವಲ ಪ್ರಾಥಮಿಕ ಹಂತದಲ್ಲಿ ಇದ್ದಾಗ ಮಾತ್ರ ಎಂಬುದು ನೆನಪಿರಲಿ. ಒಂದರಿಂದ ಎರಡು ರಾತ್ರಿ ಇದನ್ನು ನೀವು ಪುನರಾವರ್ತಿಸಬಹುದು. ಹಸಿ ಬೆಳ್ಳುಳ್ಳಿ ಯಾರಿಗೆ ಇಷ್ಟವಾಗುವುದಿಲ್ಲವೋ ಅವರು ಬೆಳ್ಳುಳ್ಳಿಯ ಸಪ್ಲಿಮೆಂಟ್ಸ್ ಗಳನ್ನು ಕೂಡ ಬಳಕೆ ಮಾಡಬಹುದು.

ಯೋಗರ್ಟ್ ಅಥವಾ ಮೊಸರು

ಲ್ಯಾಕ್ಟೋಬಾಸಿಲ್ಲಸ್ ಅಸಿಡೋಫಿಲಸ್ ಎಂಬ ಬ್ಯಾಕ್ಟೀರಿಯಾವನ್ನು ಮೊಸರು ಹೊಂದಿರುತ್ತದೆ. ಈ ಬ್ಯಾಕ್ಟೀರಿಯಾವು ನೈಸರ್ಗಿಕವಾಗಿ ಫಂಗಸ್ ಗಳನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಫಂಗಲ್ ಇನ್ ಫೆಕ್ಷನ್ ನಿಂದ ದೂರವಿರಲು ಗರ್ಭಧಾರಣೆಯ ಸಂದರ್ಬದಲ್ಲಿ ಪ್ರತಿದಿನ ಮೊಸರನ್ನು ಸೇವಿಸುವುದು ಬಹಳ ಒಳ್ಳೆಯದು.

ಇನ್ನೊಂದು ವಿಧಾನವೆಂದರೆ, ಸ್ವಲ್ಪ ಮೊಸರನ್ನು ತೆಗೆದುಕೊಂಡು ಯೋನಿಯೊಳಗೆ ಹಾಕಿಕೊಳ್ಳುವುದು. ಕೆಲವು ಮಹಿಳೆಯರು ಇದಕ್ಕಾಗಿ ಸಿರಿಂಜ್ ಗಳನ್ನು ಬಳಕೆ ಮಾಡಿ ಯೋನಿಗೆ ಒಳಗೆ ಹಾಕಿಕೊಳ್ಳುತ್ತಾರೆ.

ಮೊಸರಿನಿಂದ ತಯಾರಿಸಿದ ಪಾಪ್ಸಿಕಲ್ಸ್ ಗಳು ಗರ್ಭಿಣಿಯರಿಗೆ ಸುರಕ್ಷಿತ ಮತ್ತು ಅತ್ಯತ್ತುಮ ವಿಧಾನವಾಗಿದ್ದು ಯೋನಿಯೊಳಗೆ ತೂರಿಸುವುದು ಸುಲಭವಾಗಿರುತ್ತದೆ.ಹೆಪ್ಪುಗಟ್ಟಿದ ಪಾಪ್ಸಿಕಲ್ಸ್ ಗಳು ನಿಮ್ಮ ವಜಿನಾವನ್ನು ಆರಾಮಗೊಳಿಸುತ್ತದೆ, ಫಂಗಸ್ ನಿಂದಾಗುವ ಕಿರಿಕಿರಿ ಮತ್ತು ನೋವಿನಿಂದ ಮುಕ್ತಿಗೊಳಿಸುತ್ತದೆ.ಆದರೆ ಯಾವುದೇ ಫ್ಲೇವರ್ ಇಲ್ಲದ, ಸಕ್ಕರೆ ಅಂಶವಿಲ್ಲದ ತಾಜಾ ಯೋಗರ್ಟ್ ನ್ನು ಬಳಕೆ ಮಾಡಬೇಕು. ಸಿಹಿಯಾಗಿರುವ ಯೋಗರ್ಟ್ ನಿಮ್ಮ ನೋವು ಮತ್ತು ಫಂಗಸ್ ನ್ನು ಅಧಿಕಗೊಳಿಸುತ್ತದೆ ಎಂಬುದು ನೆನಪಿರಲಿ.

ಆಪಲ್ ಸಿಡರ್ ವಿನೆಗರ್

ನೀವು ನಿರಂತರವಾಗಿ ಶಿಲೀಂದ್ರಗಳ ಸೋಂಕಿನಿಂದ ಬಳಲುತ್ತಿದ್ದರೆ ಆಪಲ್ ಸಿಡರ್ ವಿನೆಗರ್ ನಿಮಗೆ ಅತ್ಯುತ್ತಮ ಪರಿಹಾರವಾಗಲಿದೆ. ಆಪಲ್ ಸಿಡರ್ ಆಂಟಿ ಫಂಗಲ್, ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ವೈರಲ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ಎಲ್ಲಾ ತ್ಯಾಜ್ಯಗಳನ್ನು ಸುಲಭದಲ್ಲಿ ಹೊರ ಹಾಕುತ್ತದೆ.
ಆಪಲ್ ಸಿಡರ್ ವಿನೆಗರ್ ನಲ್ಲಿ ಅಸೆಟೋಲಿಸಿಸ್ ಅನ್ನು ಉತ್ತೇಜಿಸುವ ಗುಣವಿದೆ ಮತ್ತು ಇದು ಎಲ್ಲಾ ತ್ಯಾಜ್ಯಗಳನ್ನು ಒಡೆದು, ನಿಮಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತದೆ.

ಒಂದು ಸ್ಪ್ರೇ ಬಾಟಲ್ ನಲ್ಲಿ ಎರಡು ಟೇಬಲ್ ಸ್ಪೂನ್ ಆಪಲ್ ಸಿಡರ್ ವಿನೆಗರ್ ಹಾಕಿ ತುಂಬಾ ನೀರನ್ನು ಹಾಕಿ ನಿಮ್ಮ ಬಾತ್ ರೂಮ್ ನಲ್ಲಿ ಇಟ್ಟುಕೊಳ್ಳಿ. ಸೋಂಕಿಗೆ ಒಳಗಾದ ಭಾಗವನ್ನು ತೊಳೆದಾಗಲೆಲ್ಲ ಕೊನೆಗೆ ಈ ಸೆಲ್ಯೂಷನ್ ನ್ನು ಸ್ಪ್ರೇ ಮಾಡಿಕೊಂಡು ಬನ್ನಿ. ಅದು ಒಣಗುವ ವರೆಗೆ ಬಾತ್ ರೂಮ್ ನಲ್ಲೇ ಇರಿ. ಇದನ್ನು ಒಂದು ಅಥವಾ ಎರಡು ವಾರ ಮಾಡಿ ನೋಡಿ. ನಿಮ್ಮ ಸೋಂಕಿನ ಚಿಹ್ನೆಗಳು ಕಡಿಮೆಯಾಗುತ್ತದೆ.

ಕೊಬ್ಬರಿ ಎಣ್ಣೆ

ಕೊಬ್ಬರಿ ಎಣ್ಣೆಯು ಲುರಿಕ್ ಆಮ್ಲ,ಕೆಪ್ರೈಲಿಕ್ ಆಮ್ಲ, ಕಪ್ರಿಕ್ ಆಮ್ಲಗಳನ್ನು ಒಳಗೊಂಡಿರುತ್ತದೆ. ಇವೆಲ್ಲವೂ ಫ್ಯಾಟಿ ಆಸಿಡ್ ಗಳಾಗಿದ್ದು ಆಂಟಿಫಂಗಲ್ ಗುಣಗಳನ್ನು ಹೊಂದಿದೆ. ಈ ಫ್ಯಾಟಿ ಆಸಿಡ್ ಗಳು ಜೀವಕೋಶದ ಪೊರೆಗಳಲ್ಲಿ ಸಿಲುಕಿಕೊಳ್ಳುವ ಅನಗತ್ಯ ಶಿಲೀಂದ್ರಗಳನ್ನು ದುರ್ಬಲಗೊಳಿಸಿ, ಅಗತ್ಯ ಅಂಶಗಳನ್ನು ವೃದ್ಧಿಸುತ್ತದೆ ಮತ್ತು ಬಿಳಿ ರಕ್ತಕಣಗಳ ಮೂಲಕ ತ್ಯಾಜ್ಯ ಸಾಮಗ್ರಿಗಳು ಹೊರದೂಡಲ್ಪಡುತ್ತದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ನೀವು ಫಂಗಲ್ ಇನ್ಫೆಕ್ಷನ್ ವಿರುದ್ಧ ಹೋರಾಡಬೇಕು ಎಂದರೆ ನಿಮ್ಮ ಆಹಾರಗಳನ್ನು ಕೊಬ್ಬರಿ ಎಣ್ಣೆಯಲ್ಲಿ ತಯಾರಿಸಿಕೊಳ್ಳಿ. ಆ ಮೂಲಕ ನೈಸರ್ಗಿಕವಾಗಿ ನೀವು ಗುಣವಾಗಲು ಸಾಧ್ಯವಾಗುತ್ತದೆ. ಮತ್ತೊಂದು ವಿಧಾನವೆಂದರೆ ಕೆಪ್ರಿಲಿಕ್ ಆಮ್ಲದ ಮಾತ್ರೆಗಳು ಕೂಡ ಸಿಗುತ್ತದೆ. ಆದರೆ ಯಾವುದಕ್ಕೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸರಿಯಾದ ಮಾರ್ಗದರ್ಶನ ಪಡೆಯುವುದನ್ನು ಮರೆಯಬೇಡಿ.

ಸಕ್ಕರೆ ಅಂಶವನ್ನು ಸೇವನೆ ಕಡಿಮೆ ಮಾಡಿ

ಸಕ್ಕರೆ ಅಂಶದ ಸೇವನೆಯನ್ನು ಆದಷ್ಟು ಕಡಿಮೆ ಮಾಡಿದರೆ ಫಂಗಲ್ ಸೋಂಕಾಗುವುದನ್ನು ತಡೆಗಟ್ಟಿಕೊಳ್ಳಬಹುದು. ಯಾವಾಗ ನೀವು ಸಕ್ಕರೆಯುಕ್ತ ಆಹಾರವನ್ನು ಸೇವಿಸುತ್ತೀರೋ ಆಗ ಫಂಗನ್ ಗಳು ತನ್ನಿಂದ ತಾನೆ ಆಕ್ರಮಿಸಿಕೊಳ್ಳಲು ತಯಾರಾಗುತ್ತದೆ. ಹಾಗಾಗಿ ಆದಷ್ಟು ಅತಿಯಾದ ಸಕ್ಕರೆ ಅಂಶದ ಸೇವನೆಯನ್ನು ಮಾಡಬೇಡಿ.

ಶಿಲೀಂಧ್ರಗಳ ಸೋಂಕಿಗೆ ಇತರೆ ಚಿಕಿತ್ಸೆಗಳು

ಸೋಂಕಿನ ನಿವಾರಣೆಗೆ ನಿಮ್ಮ ಬಳಿ ಹಲವಾರು ಮೆಡಿಸಿನ್ ಗಳು ಇರಬಹುದು,ಆದರೆ ಗರ್ಭಾವಸ್ಥೆಯಲ್ಲಿ ಇವೆಲ್ಲವನ್ನು ತೆಗೆದುಕೊಳ್ಳುವ ಸಲಹೆ ಇಲ್ಲ. ಯಾಕೆಂದರೆ ಎಲ್ಲಾ ಪ್ರಗ್ನೆನ್ಸಿಯ ಸಂದರ್ಬದಲ್ಲಿ ಉತ್ತಮವಾದುದ್ದಾಗಿರುವುದಿಲ್ಲ. ನಿಮ್ಮ ವೈದ್ಯರ ಸಲಹೆ ಪಡೆದು ಮುಂದುವರಿಯಿರಿ. ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳುವಾಗ ನಿಮ್ಮ ವೈದ್ಯರ ಬಳಿ ಒಮ್ಮೆ ಚರ್ಚೆ ನಡೆಸಿ. ಯಾವುದೇ ಕಾರಣಕ್ಕೂ ಶಾರ್ಟ್ ಟರ್ಮ್ ಟ್ರೀಟ್ ಮೆಂಟ್ ಗಳ ಮೊರೆ ಹೋಗಬೇಡಿ. ಅದ್ಯಾವುದೂ ಕೂಡ ಗರ್ಭಿಣಿಯಾಗಿದ್ದಾಗ ಅಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ.

ವೈದ್ಯರೂ ಕೂಡ ಈ ಸಮಸ್ಯೆಗೆ 7 ದಿನಗಳ ಚಿಕಿತ್ಸೆಯನ್ನು ಮಾಡಿಸುತ್ತಾರೆ. ಅದರ ಸಂಪೂರ್ಣ ಡೋಸೇಜ್ ನ್ನು ತೆಗೆದುಕೊಳ್ಳಿ. ಮಧ್ಯದಲ್ಲೇ ನಿಲ್ಲಿಸಿದರೆ ಪುನಃ ಸೋಂಕು ಮರುಕಳಿಸುವ ಸಾಧ್ಯತೆ ಇರುತ್ತದೆ. ವೈದ್ಯರು ನಿಮ್ಮ ಯೋನಿಗೆ ರಾತ್ರಿಯ ವೇಳೆಯಲ್ಲಿ ಹಚ್ಚಿಕೊಳ್ಳಲು ಯಾವುದಾದರೂ ಕ್ರೀಮ್ ನೀಡಬಹುದು. ರಾತ್ರಿ ಮಲಗಿದ್ದಾಗಲೂ ಅದು ನಿಮ್ಮ ಸಮಸ್ಯೆಯ ವಿರುದ್ಧ ಸೆಣಸಾಡುತ್ತದೆ . ಆದರೆ ನಿಮ್ಮ ಮೆಡಿಸಿನ್ ಸೋರಿ ಹೋಗದಂತೆ ಪ್ಯಾಂಟಿ ಧರಿಸುವುದನ್ನು ಮರೆಯಬೇಡಿ.. ಸಣ್ಣ ಚಿಹ್ನೆಗಳನ್ನು ಐಸ್ ಪ್ಯಾಕ್ ಗಳಿಂದಲೂಕೂಡ ಟ್ರೀಟ್ ಮಾಡಬಹುದಾಗಿರುತ್ತದೆ. ತಣ್ಣನೆಯ ಬಾತ್ ಟಬ್ ನಲ್ಲಿ ಕುಳಿತು ರಿಲ್ಯಾಕ್ಸ್ ಆಗಿ ನಿಮ್ಮ ಯೋನಿಯನ್ನು ಸ್ವಚ್ಛಗೊಳಿಸಿಕೊಳ್ಳಿ. ಐಸ್ ಪ್ಯಾಕ್ ನಿಂದ ಕ್ಲೀನ್ ಮಾಡಿ. ಹೀಗೆ ವೈದ್ಯಕೀಯ ವಿಧಾನಗಳನ್ನು ಬಳಸಿ ಕೂಡಲೇ ಶಿಲೀಂದ್ರಗಳಿಂದ ಸೋಂಕಿನಿಂದ ಗರ್ಭಿಣಿಯರು ಮುಕ್ತಿ ಪಡೆಯುವುದು ಮುಂದಿನ ದಿನಗಳಲ್ಲಿ ಅವರಿಗೆ ಬಹಳಷ್ಟು ಅನುಕೂಲ ಮಾಡುತ್ತದೆ. ತಾಯಿಯಾಗುವ ಸಂದರ್ಭದಲ್ಲಿನ ಯಾವುದೇ ಸಮಸ್ಯೆಯನ್ನು ನಿಷ್ಕಾಳಜಿ ಮಾಡಬೇಡಿ.

English summary

How To Treat Fungal Infection During Pregnancy

One of the worst experiences during pregnancy is contracting fungal infection. The reason is it can be bothersome, painful and sometimes it can be really stubborn. Some of the signs of fungal infection are redness, swelling, itching, burning and a thick white-coloured discharge. Whatever might be the reason, fungal infection is annoying for both you and your baby, so make sure you treat it before your delivery, otherwise your baby will also be affected by it. Below are the best ways to treat fungal infection during your pregnancy:
X
Desktop Bottom Promotion