For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯಾಗಿದ್ದಾಗ ಪ್ರತೀ ದಿನ ಎಷ್ಟು ನೀರು ಕುಡಿಯಬೇಕು?

|

ನೀರು ಸಾರ್ವತ್ರಿಕ ದ್ರಾವಕವಾಗಿದೆ ಮತ್ತು ಇದು ಭೂಮಿಯ ಮೇಲಿನ ಜೀವನದ ಪ್ರಮುಖ ಅಂಶವಾಗಿದೆ. ನೀರು ಇಲ್ಲದೇ ಯಾವುದೇ ಜೀವನ ಇಲ್ಲ. ವಾಸ್ತವವಾಗಿ, ಒಬ್ಬ ಮನುಷ್ಯನ ಶರೀರ ಸಾಮಾನ್ಯವಾಗಿ ಕೆಲಸ ಮಾಡಬೇಕಾದರೆ ಅವನ ಅಥವಾ ಅವಳ ದೇಹದಲ್ಲಿ ಒಂದು ನಿರ್ದಿಷ್ಟ ಪ್ರಮಾಣದ ನೀರಿನ ಅಗತ್ಯವಿದೆ.

ಈಗ ನಮ್ಮ ಮುಂದಿರುವ ಪ್ರಶ್ನೆ, ಒಂದು ಹೆಣ್ಣು ಅವಳೊಳಗೆ ಇನ್ನೊಂದು ಜೀವವನ್ನು ಒಳಗೊಂಡಾಗ, ನೀರಿನ ಬಳಕೆ, ಪ್ರಮಾಣ ಮತ್ತು ಪ್ರಾಮುಖ್ಯತೆಯು ಮತ್ತಷ್ಟು ಹೆಚ್ಚಾಗುತ್ತದೆ. ಈ ಲೇಖನವು ನಿಮ್ಮ ಗರ್ಭಾವಸ್ಥೆಯಲ್ಲಿ ನೀವು ಕುಡಿಯಬೇಕಾದ ನೀರಿನ ಪ್ರಮಾಣ ಮತ್ತು ಸರಿಯಾಗಿ ನೀರು ಕುಡಿಯದಿದ್ದರೆ ಆಗುವ ಪರಿಣಾಮಗಳನ್ನು ತಿಳಿದುಕೊಳ್ಳಬೇಕಾದ ಎಲ್ಲ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ...

1.ದಿನನಿತ್ಯದ ನೀರಿನ ಅಗತ್ಯ

2.ಗರ್ಭಿಣಿ ಮಹಿಳೆ ಸಾಕಷ್ಟು ನೀರು ಕುಡಿಯದಿದ್ದರೆ ಏನಾಗುತ್ತದೆ?

3.ನಿರ್ಜಲೀಕರಣ ಮತ್ತು ಮಗುವಿನ ಮೇಲೆ ಇದರ ಪರಿಣಾಮ

4.ಗರ್ಭಿಣಿ ಮಹಿಳೆ ಕುಡಿಯಬಹುದಾದ ಇತರೆ ದ್ರವಗಳು ಯಾವುವು?

5.ನೀವು ತುಂಬಾ ಹೆಚ್ಚು ನೀರು ಸೇವಿಸಿದರೆ ಏನಾಗುತ್ತದೆ?

ಗರ್ಭಿಣಿ ಮಹಿಳೆ ಸಾಕಷ್ಟು ನೀರು ಕುಡಿಯದಿದ್ದರೆ ಏನಾಗುತ್ತದೆ?

ಗರ್ಭಿಣಿ ಮಹಿಳೆ ಸಾಕಷ್ಟು ನೀರು ಕುಡಿಯದಿದ್ದರೆ ಏನಾಗುತ್ತದೆ?

ಗರ್ಭಿಣಿ ಮಹಿಳೆ ಸಾಕಷ್ಟು ನೀರನ್ನು ಕುಡಿಯದಿದ್ದರೆ, ಅದು ಸ್ವತಃ ಅವಳಿಗೆ ಮತ್ತು ಅವಳ ಹುಟ್ಟಲಿರುವ ಮಗುವಿನ ಮೇಲೆ ಮಹತ್ತರ ಪ್ರಭಾವವನ್ನು ಉಂಟುಮಾಡಬಹುದು. ನಮ್ಮ ಕಡೆಯಿಂದ ಉತ್ತಮ ಪ್ರಯತ್ನಗಳ ಹೊರತಾಗಿಯೂ ಇವುಗಳಲ್ಲಿ ಕೆಲವನ್ನು ತಡೆಗಟ್ಟಲಾಗುವುದಿಲ್ಲ.

 ದೇಹ ಅತಿಯಾಗಿ ಉಷ್ಣ ಗೊಳ್ಳುತ್ತದೆ

ದೇಹ ಅತಿಯಾಗಿ ಉಷ್ಣ ಗೊಳ್ಳುತ್ತದೆ

ಗರ್ಭಿಣಿ ಮಹಿಳೆಯು ಸಾಕಷ್ಟು ನೀರು ಕುಡಿಯದಿದ್ದಾಗ, ದೇಹದಲ್ಲಿ ಉತ್ಪತ್ತಿಯಾಗುವ ಶಾಖವನ್ನು ನಿಯಂತ್ರಿಸಲು ನಿಜವಾಗಿಯೂ ಕಷ್ಟಕರವಾಗುತ್ತದೆ. ನೈಸರ್ಗಿಕವಾಗಿ, ಗರ್ಭಿಣಿ ಮಹಿಳೆಯ ದೇಹದಲ್ಲಿ ಉತ್ಪತ್ತಿಯಾಗುವ ಉಷ್ಣವು ಸಾಮಾನ್ಯ ದೇಹದಲ್ಲಿ ಉತ್ಪತ್ತಿಯಾಗುವುದಕ್ಕಿಂತ ಹೆಚ್ಚಾಗಿರುತ್ತದೆ. ಪರಿಣಾಮವಾಗಿ, ಅದನ್ನು ಸರಿಯಾಗಿ ನಿಯಂತ್ರಿಸದಿದ್ದರೆ, ಮಹಿಳೆಯು ಮಿತಿಮೀರಿದ ಉಷ್ಣತೆಗೆ ಒಳಗಾಗುತ್ತಾಳೆ. ಇದು ಮೊದಲ ತ್ರೈಮಾಸಿಕದಲ್ಲಿ ಸಂಭವಿಸಿದರೆ, ಅದು ನರ ,ಕೊಳವೆ ದೋಷಗಳಿಗೆ ಮತ್ತು ಕೆಲವೊಮ್ಮೆ ಗರ್ಭಪಾತಕ್ಕೆ ಕಾರಣವಾಗಬಹುದು.

ಎದೆಹಾಲು ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ

ಎದೆಹಾಲು ಉತ್ಪಾದನೆಯ ಮೇಲೆ ಪರಿಣಾಮ ಬೀರುತ್ತದೆ

ಗರ್ಭಾವಸ್ಥೆಯಲ್ಲಿ ನೀರಿನ ಬಳಕೆಯ ಕೊರತೆಯು ಮಹಿಳೆಯ ಎದೆಹಾಲು ಉತ್ಪಾದನೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಪರಿಸ್ಥಿತಿ ವಿಪರೀತವಾದಲ್ಲಿ, ತಾಯಿಯ ದೇಹವು ಸಾಕಷ್ಟು ಹಾಲು ಉತ್ಪಾದಿಸದೆ ನವಜಾತ ಮಗುವಿಗೆ ಆರೋಗ್ಯಕರ ಪೌಷ್ಠಿಕಾಂಶವನ್ನು ಒದಗಿಸಲು ಸಾಧ್ಯವಾಗದ ಪರಿಸ್ಥಿತಿಗೆ ಕಾರಣವಾಗಬಹುದು. ಇಂತಹ ವಿಷಯವನ್ನು ತಪ್ಪಿಸಲು, ನೀವು ದಿನನಿತ್ಯಕ್ಕೆ ಶಿಫಾರಸು ಮಾಡಿರುವ ನೀರಿನ ಪ್ರಮಾಣವನ್ನು ಸೇವಿಸುತ್ತಿರುವುದಾಗಿ ಖಚಿತಪಡಿಸಿಕೊಳ್ಳಿ.

ಕೇಂದ್ರೀಕೃತ(concentrated)ಮೂತ್ರ

ಕೇಂದ್ರೀಕೃತ(concentrated)ಮೂತ್ರ

ಕಡಿಮೆ ನೀರನ್ನು ಕುಡಿಯುವುದರಿಂದ ದೇಹವು ಮೂತ್ರವನ್ನು ನೀವು ಬಯಸುವುದಕ್ಕಿಂತ ಹೆಚ್ಚು ಕೇಂದ್ರೀಕರಿಸುತ್ತದೆ. ಇದು ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಕೊನೆಯ ತ್ರೈಮಾಸಿಕದ ತನಕ ಇದೇ ರೀತಿ ಹೋದರೆ, ಅದು ಸಂಕೋಚನಗಳನ್ನು ಪ್ರಚೋದಿಸುತ್ತದೆ. ಈ ಸಂಕೋಚನಗಳು ಪೂರ್ವ ಪ್ರಸವವನ್ನು ತರುವ ಸಾಧ್ಯತೆಯಿದೆ.

ನಿರ್ಜಲೀಕರಣ(dehydration) ಮತ್ತು ಮಗುವಿನ ಮೇಲೆ ಇದರ ಪರಿಣಾಮ

ನಿರ್ಜಲೀಕರಣ(dehydration) ಮತ್ತು ಮಗುವಿನ ಮೇಲೆ ಇದರ ಪರಿಣಾಮ

ನಿರ್ಜಲೀಕರಣವು ತಾಯಿಗಿಂತ ಹೆಚ್ಚು, ಮಗುವಿನ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಜನ್ಮ ದೋಷಗಳ ಸಾಧ್ಯತೆ ಬಹುಪಾಲು ಹೆಚ್ಚಿಸುತ್ತದೆ. ಇದರ ಮೊದಲ ಪ್ರಮುಖ ಪರಿಣಾಮವೆಂದರೆ ದೇಹದಲ್ಲಿನ ಆಮ್ನಿಯೋಟಿಕ್ ದ್ರವದ ಮಟ್ಟವು ಕೆಳಕ್ಕೆ ಬರುವುದು. ನಮ್ಮಲ್ಲಿ ಹೆಚ್ಚಿನವರು ತಿಳಿದಿರುವುದರಂತೆ ಆಮ್ನಿಯೋಟಿಕ್ ದ್ರವ ರಕ್ಷಕ ಕವಚವನ್ನು ರೂಪಿಸುತ್ತದೆ ಮತ್ತು ದೇಹದ ಹೊರಗಿನ ಪರಿಸ್ಥಿತಿಗಳ ವಿರುದ್ಧ ದೇಹವನ್ನು ರಕ್ಷಿಸುತ್ತದೆ. ಆದ್ದರಿಂದ ಅದರ ಪ್ರಮಾಣ ಕಡಿಮೆಯಾಗುವುದರಿಂದ ನೈಸರ್ಗಿಕವಾಗಿ ದೇಹದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಇದಲ್ಲದೆ, ನರ ಕೊಳವೆ ದೋಷಗಳಂತಹ ಪರಿಸ್ಥಿತಿಗಳ ಅಪಾಯ ಹೆಚ್ಚಿರುತ್ತದೆ, ಇದು ಪೂರ್ವ ಪ್ರಸವದಂತಹ ಪರಿಸ್ಥಿತಿಗಳನ್ನು ಪ್ರಚೋದಿಸಬಹುದು.

ಗರ್ಭಿಣಿ ಮಹಿಳೆ ಕುಡಿಯಬಹುದಾದ ಇತರೆ ದ್ರವಗಳು ಯಾವುವು?

ಗರ್ಭಿಣಿ ಮಹಿಳೆ ಕುಡಿಯಬಹುದಾದ ಇತರೆ ದ್ರವಗಳು ಯಾವುವು?

ಹೆಚ್ಚಿನ ಜನರಿಗೆ ಗರ್ಭಿಣಿ ಮಹಿಳೆ ಯಾವುದೇ ರೀತಿಯ ಆಲ್ಕೊಹಾಲಿಕ್ ಪಾನೀಯಗಳನ್ನು ಸೇವಿಸಬಾರದು ಎನ್ನುವುದರ ಬಗ್ಗೆ ತಿಳಿದಿರುತ್ತದೆ. ಆದಾಗ್ಯೂ, ಆಕೆಯ ದೈನಂದಿನ ಪೋಷಣೆಯ ಪ್ರಮಾಣವನ್ನು ಪೂರೈಸಲು ಇತರ ದ್ರವಗಳನ್ನು ಕೊಡಬೇಕಾಗುತ್ತದೆ ಎಂಬುದು ವಾಸ್ತವ ಸತ್ಯ.

ತಾಜಾ ಹಣ್ಣಿನ ರಸ

ತಾಜಾ ಹಣ್ಣಿನ ರಸ

ತಾಜಾ ಹಣ್ಣಿನ ರಸವು ವಿಟಮಿನ್ ಗಳಿಂದ ಸಮೃದ್ಧವಾಗಿದೆ ಮತ್ತು ಗರ್ಭಿಣಿಯರಿಗೆ ಇದರ ಅವಶ್ಯಕತೆಯಿದೆ. ಈ ಅವಧಿಯಲ್ಲಿ ನೀವು ತಾಜಾ ಹಣ್ಣಿನ ರಸವನ್ನು ಮಾತ್ರ ಸೇವಿಸುತ್ತೀರಿ ಮತ್ತು ಹಣ್ಣಿನ ಸುವಾಸನೆಯ ಪಾನೀಯಗಳನ್ನು ಸೇವಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ, ಇದು ಹೆಚ್ಚಿನ ಸಕ್ಕರೆಯ ಪ್ರಮಾಣವನ್ನು ಒಳಗೊಂಡಿರುತ್ತದೆ ಮತ್ತು ಇದು ನಿಮ್ಮ ಮತ್ತು ನಿಮ್ಮ ಹುಟ್ಟಲಿರುವ ಮಗುವಿಗೆ ಒಳ್ಳೆಯದಲ್ಲ.

ಹಾಲು

ಹಾಲು

ಈ ದ್ರವವು ಪ್ರೋಟೀನ್ ಮತ್ತು ಕ್ಯಾಲ್ಸಿಯಂನ ಒಳ್ಳೆಯತನದಿಂದ ತುಂಬಿರುತ್ತದೆ ಮತ್ತು ಗರ್ಭಿಣಿ ಮಹಿಳೆಯರಿಗೆ ಹೆಚ್ಚು ಶಿಫಾರಸು ಮಾಡಲಾಗಿದೆ. ಪ್ರತಿದಿನವೂ ನೀವು ಕನಿಷ್ಠ ಒಂದು ಕಪ್ ಹಾಲು ಸೇವಿಸುವಿರಿ ಎಂದು ಖಚಿತಪಡಿಸಿಕೊಳ್ಳಿ. ಲ್ಯಾಕ್ಟೋಸ್ ಅಸಹಿಷ್ಣುತೆ ಹೊಂದಿರುವ ಮಹಿಳೆಯರಿಗೆ, ಕ್ಯಾಲ್ಸಿಯಂ ಪುಷ್ಟೀಕರಿಸಿದ ಸೋಯಾ ರಿಂಕ್ ಸಹ ಒಂದು ಕಾರ್ಯಸಾಧ್ಯವಾದ ಆಯ್ಕೆಯಾಗಿದೆ.

ಸೂಪ್ ಮತ್ತು ಸಾರು

ಸೂಪ್ ಮತ್ತು ಸಾರು

ನಿಮ್ಮ ದಿನನಿತ್ಯದ ದ್ರವದ ಅವಶ್ಯಕತೆಗಳನ್ನು ಪೂರೈಸಲು ಒಂದು ಕಪ್ ಸೂಪ್ ಅಥವಾ ಸಾರನ್ನು ಪ್ರತಿದಿನವೂ ಸೇವಿಸುವುದು ಒಂದು ಕೆಟ್ಟ ಅಭ್ಯಾಸ ಅಲ್ಲ.

ನೀವು ತುಂಬಾ ಹೆಚ್ಚು ನೀರು ಸೇವಿಸಿದರೆ ಏನು ಸಂಭವಿಸುತ್ತದೆ?

ನೀವು ತುಂಬಾ ಹೆಚ್ಚು ನೀರು ಸೇವಿಸಿದರೆ ಏನು ಸಂಭವಿಸುತ್ತದೆ?

ಗರ್ಭಾವಸ್ಥೆಯಲ್ಲಿ ಕುಡಿಯುವ ನೀರಿನ ಪ್ರಾಮುಖ್ಯತೆಯನ್ನು ತಿಳಿದ ನಂತರ, ಗರ್ಭಿಣಿ ಮಹಿಳೆಯ ಕುಡಿಯುವ ಸಾಮರ್ಥ್ಯಕ್ಕೆ ಯಾವುದೇ ನಿರ್ದಿಷ್ಟ ಮಿತಿ ಇಲ್ಲ ಎಂದು ಅರಿತುಕೊಳ್ಳುವುದು ಮುಖ್ಯ. ತುಂಬಾ ನೀರು ಕುಡಿಯುವುದರಿಂದ ಮಗುವಿಗೆ ಸುತ್ತಮುತ್ತಲಿನ ಆಮ್ನಿಯೋಟಿಕ್ ದ್ರವದ ಹೆಚ್ಚಳ ಉಂಟಾಗುವುದಿಲ್ಲ.

ವಾಸ್ತವವಾಗಿ, ಜನಪ್ರಿಯ ನಂಬಿಕೆಗಳಿಗೆ ವಿರುದ್ಧವಾಗಿ, ಇದು ಊದಿಕೊಂಡ ಜನನಾಂಗಗಳು ಅಥವಾ ತಾಯಿಗೆ ದೈಹಿಕವಾಗಿ ನೋವುಂಟುಮಾಡುವಂತಹ ಇತರೆ ಯಾವುದೇ ವಿಷಯಗಳಿಗೆ ಕಾರಣವಾಗುವುದಿಲ್ಲ. ನೀರಿನ ಕುಡಿಯುವಿಕೆಯು ವಾಸ್ತವವಾಗಿ ಗರ್ಭಿಣಿ ಮಹಿಳೆಯ ಆರೋಗ್ಯಕರ ವಿಷಯಗಳಲ್ಲಿ ಒಂದಾಗಿದೆ. ನೀವು ಸರಾಸರಿ ಶಿಫಾರಸು ಮಾಡಿದ್ದಕ್ಕಿಂತ ಹೆಚ್ಚು ನೀರು ಕುಡಿಯುತ್ತಿದ್ದೀರಿ ಎಂದಾದರೆ, ಭಯಪಡಬೇಕಾದ ಅವಶ್ಯಕತೆ ಇಲ್ಲ. ಇದು ಯಾವುದೇ ತೊಂದರೆಗಳಿಗೆ ಕಾರಣವಾಗುವುದಿಲ್ಲ ಅಥವಾ ಸುರಕ್ಷಿತ ಮತ್ತು ಆರೋಗ್ಯಕರ ಪ್ರಸವಕ್ಕೆ, ನಿಮ್ಮನ್ನು ತಡೆಯುವುದಿಲ್ಲ.

ಈಗ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ನೀರನ್ನು ಕುಡಿಯುವ ಮಹತ್ವವನ್ನು ನೀವು ತಿಳಿದಿರುವಿರಿ, ನೀವು ಒಂದು ಲೋಟ ನೀರನ್ನು ತೆಗೆದುಕೊಂಡು ನಿಮ್ಮ ದೈನಂದಿನ ಶಿಫಾರಸುಗಳನ್ನು ಪೂರೈಸುತ್ತೀರೆಂದು ಖಚಿತಪಡಿಸಿಕೊಳ್ಳಿ. ಈ ಸಣ್ಣ ಕೆಲಸವನ್ನು ನೀವು ನಿತ್ಯವೂ, ನಿರ್ವಹಿಸಿದಾಗ ನಿಮ್ಮ ಮತ್ತು ನಿಮ್ಮ ಮಗುವಿಗೆ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಎದುರುನೋಡಬಹುದು ಎಂದು ಅರ್ಥಮಾಡಿಕೊಳ್ಳಿ.

English summary

How Much Water To Drink A Day While Pregnant?

Water is a universal solvent and is an essential component of life on earth. Without it, there can be no life. Indeed, a normal human being needs a certain amount of water in his or her body in order to function normally. Now when the person in question is sustaining another human being within her, the magnitude and importance of water consumption increases by leaps and bounds. This article brings to you all that you need to know about drinking water during your pregnancy and the consequences of not doing the same.
X
Desktop Bottom Promotion