For Quick Alerts
ALLOW NOTIFICATIONS  
For Daily Alerts

ಮೊದಲ ಹೆರಿಗೆಯಲ್ಲಿ ಕಾಡುವಷ್ಟು ಭಯ, ತಳಮಳ ನಂತರ ಇರುವುದಿಲ್ಲ!

|

ಗರ್ಭಾವಸ್ಥೆ ಎಂಬುದು ಹೆಣ್ಣಿನ ಜೀವನದಲ್ಲಿ ಅತ್ಯಂತ ಪ್ರಮುಖವಾದ ಘಟ್ಟವಾಗಿದೆ. ದೇವರ ಅತ್ಯದ್ಭುತವಾದ ಕೊಡುಗೆಯೊಂದನ್ನು ಸ್ತ್ರೀಯು ತನ್ನ ಒಡಲಲ್ಲಿ ಹೊತ್ತು ಅದಕ್ಕೆ ಜನ್ಮ ನೀಡುವಂತಹ ಆ ಸಮಯ ಹೆಣ್ಣಿಗೆ ಒಂದು ರೀತಿಯಲ್ಲಿ ಮರುಜನ್ಮವನ್ನು ನೀಡುತ್ತದೆ. ಈ ಸಮಯದಲ್ಲಿ ಆಕೆ ಸಹಿಸುವ ನೋವು, ಅನುಭವಿಸುವ ಸಂಕಟ ಯಮಯಾತನೆಯನ್ನು ನೀಡಿದರೂ ಒಂದು ಕಡೆ ಖುಷಿ ಇದ್ದೇ ಇರುತ್ತದೆ. ಅದಾಗ್ಯೂ ಹೆಣ್ಣಿಗೆ ಗರ್ಭಾವಸ್ಥೆ ಎಂಬುದು ಒಂದು ಪರೀಕ್ಷಾ ಸಮಯದಂತೆ. ಈ ಸಮಯದಲ್ಲಿ ಉಂಟಾಗುವ ಶಾರೀರಿಕ ಮತ್ತು ಮಾನಸಿಕ ಬದಲಾವಣೆಗಳಿಗೆ ತನ್ನನ್ನು ಮಾರ್ಪಡಿಸಿಕೊಂಡು ಆಕೆ ಪುಟ್ಟ ಕಂದನ ಆಗಮನವನ್ನು ಕಣ್ತುಂಬಿಕೊಳ್ಳಬೇಕು. ಮೊದಲ ಗರ್ಭಾವಸ್ಥೆಯಲ್ಲಿ ಹೆಣ್ಣು ಹೆಚ್ಚಿನ ತಳಮಳ ಮತ್ತು ಕಾತರವನ್ನು ಹೊಂದಿರುತ್ತಾಳೆ. ಗರ್ಭಾವಸ್ಥೆಯ ಸರಿಯಾದ ರೂಪುರೇಷೆ ಈ ಸಮಯದಲ್ಲಿ ಆಕೆಗೆ ಇರುವುದಿಲ್ಲ. ಇತರರಿಂದ ಕೇಳಿ ತಿಳಿದುಕೊಂಡು ಆಕೆ ತನ್ನಷ್ಟಕ್ಕೆ ಒಂದು ಚಿತ್ರಣವನ್ನು ರೂಪಿಸಿಕೊಂಡಿರುತ್ತಾಳೆ. ಇಂದಿನ ಲೇಖನದಲ್ಲಿ ನಾವು ತಿಳಿಸುತ್ತಿರುವ ಮಾಹಿತಿ ಮಹಿಳೆಯ ಎರಡನೆಯ ಹೆರಿಗೆಯದ್ದಾಗಿದೆ. ಮೊದಲ ಹೆರಿಗೆಯ ಸಮಯದಲ್ಲಿ ಇದ್ದಂತಹ ತಳಮಳವನ್ನು ಆಕೆ ತನ್ನ ಎರಡನೆಯ ಹೆರಿಗೆಯಲ್ಲಿ ಅನುಭವಿಸುದಿಲ್ಲ ಆ ಭಯ ಆಕೆಯಲ್ಲಿ ಇರುವುದಿಲ್ಲ. ಏಕೆಂದರೆ ಮೊದಲ ಹೆರಿಗೆಯ ಸಮಯದಲ್ಲಿ ಆಕೆ ಈ ಎಲ್ಲಾ ಮಾನಸಿಕ ಶಾರೀರಿಕ ತಳಮಳವನ್ನು ಅನುಭವಿಸಿರುವುದರಿಂದ ಇದು ಆಕೆಗೆ ಸಮಸ್ಯೆ ಎಂದೆನಿಸುವುದಿಲ್ಲ.

ಆದರೆ ಮೊದಲ ಮತ್ತು ಎರಡನೆಯ ಹೆರಿಗೆಯ ಸಮಯದಲ್ಲಿ ಕೂಡ ಕೆಲವೊಂದು ವ್ಯತ್ಯಾಸಗಳಿದ್ದು ಅದನ್ನು ಸ್ತ್ರೀ ಅರಿತುಕೊಳ್ಳಬೇಕಾಗಿದೆ. ಇಂದಿನ ಲೇಖನದಲ್ಲಿ ಆ ವ್ಯತ್ಯಾಸಗಳೇನು ಎಂಬುದನ್ನು ನಾವು ತಿಳಿದುಕೊಳ್ಳಬಹುದಾಗಿದ್ದು ಆ ಅಂಶಗಳೇನು ಎಂಬುದನ್ನು ತಿಳಿಸಲಿದ್ದವೆ.

1. ನೀವು ಮೊದಲೇ ತೋರಿಸಿಕೊಳ್ಳುತ್ತೀರಿ

1. ನೀವು ಮೊದಲೇ ತೋರಿಸಿಕೊಳ್ಳುತ್ತೀರಿ

ನಿಮ್ಮ ಮಗು ವೇಗವಾಗಿ ಬೆಳೆಯುತ್ತದೆ ಅಥವಾ ನಿಮ್ಮ ಮೊದಲ ಮಗುವಿನಿಂದ ದೊಡ್ಡದಾಗಿ ಬೆಳೆಯುತ್ತದೆ ಎಂದು ಅರ್ಥವಲ್ಲ. ನಿಜವಾಗಿ ಏನಾಗುತ್ತದೆ ಎಂದರೆ ನಿಮ್ಮ ಸ್ನಾಯುಗಳು ನಿಮ್ಮ ಮೊದಲ ಗರ್ಭಾವಸ್ಥೆಯ ಸಮಯಕ್ಕಿಂತಲೂ ಹೆಚ್ಚು ಸಡಿಲವಾಗಿರುತ್ತವೆ. ಹೀಗಾಗಿ, ಅವರು ಗರ್ಭಾವಸ್ಥೆಯನ್ನು ಪರಿಣಾಮಕಾರಿಯಾಗಿ ಹೊಂದಿರುವುದಿಲ್ಲ ಮತ್ತು ನೀವು ಹೆಚ್ಚು ಮುಂಚಿತವಾಗಿ ಗರ್ಭಾವಸ್ಥೆಯನ್ನು ತೋರಿಸಿಕೊಳ್ಳುತ್ತೀರಿ.

ಆಹಾರದ ಆಯ್ಕೆಗಳು

ಆಹಾರದ ಆಯ್ಕೆಗಳು

ನಿಮ್ಮ ಮೊದಲ ಗರ್ಭಾವಸ್ಥೆಯಲ್ಲಿ, ಸರಿಯಾದ ಆಹಾರವನ್ನು ಹೊಂದಿರುವ ಬಗ್ಗೆ ನೀವು ಸಂಶಯಗ್ರಸ್ತರಾಗಿದ್ದೀರಿ ಎಂದು ನೀವು ಗಮನಿಸಬೇಕು. ನೀವು ಬಹಳಷ್ಟು ಕಡುಬಯಕೆಗಳು ಮತ್ತು ಆ ರೀತಿಯ ವಿಷಯಗಳನ್ನು ಕೂಡಾ ಹೊಂದಿದ್ದೀರಿ. ಈ ಸಮಯದಲ್ಲಿ ಯಾವುದನ್ನಾದರೂ ನೀವು ನಿರೀಕ್ಷಿಸಬಹುದು. ನೀವು ಗರ್ಭಿಣಿಯಾಗಿದ್ದೀರಿ ಎಂಬ ಅಂಶ ಕೂಡ ನಿಮಗೆ ಮರೆತು ಹೋಗಬಹುದು. ಯಾವ ಆಹಾರ ಒಳ್ಳೆಯದು ಕೆಟ್ಟದ್ದು ಎಂಬ ಅಂಶ ನಿಮ್ಮ ಮನದಲ್ಲಿ ಇರುತ್ತದೆ.

ಹೆಚ್ಚು ನೋವುಗಳು

ಹೆಚ್ಚು ನೋವುಗಳು

ಈ ಸಮಯದಲ್ಲಿ ನಿಮ್ಮನ್ನು ಕಾಡುವ ನೋವುಗಳು ಅತಿಯಾಗಿರುತ್ತದೆ. ಸಾಕಷ್ಟು ವ್ಯಾಯಾಮಗಳನ್ನು ಮಾಡುವುದರಿಂದ ಈ ನೋವನ್ನು ನೀವು ನಿಯಂತ್ರಿಸಿಕೊಳ್ಳಬಹುದಾಗಿದೆ. ನಿಮ್ಮ ಕಾಲುಗಳನ್ನು ಆದಷ್ಟು ಮಡಚಿಕೊಂಡು ನಿಮ್ಮ ಹಿಂಭಾಗದ ನೋವನ್ನು ನಿಗ್ರಹಿಸಲು ಪ್ರಯತ್ನಿಸಿ.

ಹೆಚ್ಚು ಕಾಳಜಿ

ಹೆಚ್ಚು ಕಾಳಜಿ

ನಿಮ್ಮ ಎರಡನೆಯ ಹೆರಿಗೆಯ ಸಮಯದಲ್ಲಿ ನೀವು ಅಷ್ಟೊಂದು ಭಾವನೆಗಳಿಗೆ ಒಳಗಾಗಿರುವುದಿಲ್ಲ. ಈಗಾಗಲೇ ಮೊದಲ ಹೆರಿಗೆ ಹೇಗಿರುತ್ತದೆ ಎಂಬ ಅನುಭವ ನಿಮಗಿರುವುದರಿಂದ ನಿಮ್ಮ ಎರಡನೆಯ ಹೆರಿಗೆ ಸುಸೂತ್ರವಾಗಿರುತ್ತದೆ ಎಂಬ ನಂಬಿಕೆ ನಿಮ್ಮಲ್ಲಿ ಇದ್ದೇ ಇರುತ್ತದೆ. ಅದಾಗ್ಯೂ ಸಾಕಷ್ಟು ಕಾಳಜಿಯನ್ನು ನಿಮ್ಮ ಗರ್ಭಾವಸ್ಥೆಯಲ್ಲಿ ನೀವು ತೆಗೆದುಕೊಳ್ಳಬೇಕಾಗುತ್ತದೆ. ಹೆಚ್ಚಿನ ಪ್ರೊಟೀನ್, ವಿಟಮಿನ್‌ಗಳ ಸೇವನೆಯನ್ನು ನೀವು ಮಾಡಬೇಕು.

ಮೇಕಪ್ ಮಾಡುವಿಕೆ

ಮೇಕಪ್ ಮಾಡುವಿಕೆ

ಮೊದಲ ಹೆರಿಗೆಯಲ್ಲಿ ನೀವು ಮೇಕಪ್ ಮತ್ತು ದಿರಿಸುಗಳ ಧರಿಸುವಿಕೆಗೆ ಹೆಚ್ಚಿನ ಗಮನ ನೀಡದೇ ಇರಬಹುದು. ಆದರೆ ಎರಡನೆಯ ಗರ್ಭಾಸ್ಥೆಯ ಸಮಯದಲ್ಲಿ ಅತಿಯಾದ ಮೇಕಪ್ ಮತ್ತು ದಿರಿಸುಗಳ ಕಡೆಗೆ ನೀವು ಗಮನ ನೀಡುತ್ತೀರಿ. ಯಾವುದು ಹೆಚ್ಚು ಆರಾಮವಾಗಿರುತ್ತದೆಯೋ ಅಂತಹುದಕ್ಕೆ ನೀವು ಗಮನ ನೀಡುತ್ತೀರಿ.

ಅತಿಯಾಗಿ ಖರ್ಚು ಮಾಡುವುದಿಲ್ಲ

ಅತಿಯಾಗಿ ಖರ್ಚು ಮಾಡುವುದಿಲ್ಲ

ನಿಮ್ಮ ಮೊದಲ ಹೆರಿಗೆಯ ಸಮಯದಲ್ಲಿ ನೀವು ಹೆಚ್ಚು ಉತ್ಸುಕರಾಗಿರುತ್ತೀರಿ ಮತ್ತು ಆ ಪುಟ್ಟ ಕಂದನಿಗೆ ಬೇಕಾದುದೆಲ್ಲವನ್ನೂ ತೆಗೆದುಕೊಳ್ಳುತ್ತೀರಿ. ನಿಮಗೆ ಇದರ ಬಗ್ಗೆ ಒಂದು ಯೋಚನೆ, ಯೋಜನೆ ಇರುವುದಿಲ್ಲ. ಆದರೆ ಎರಡನೆಯ ಹೆರಿಗೆಯ ಸಮಯದಲ್ಲಿ ನಿಮ್ಮ ಖರ್ಚುಗಳು ಹಿತಮಿತವಾಗಿರುತ್ತದೆ. ನಿಮ್ಮ ಮೊದಲ ಕಂದನದ್ದೇ ಅದೇ ಉಡುಪುಗಳನ್ನು ನಿಮ್ಮ ಎರಡನೆಯ ಮಗುವಿಗೆ ನೀವು ತೆಗೆದಿಡುವ ಸಾಧ್ಯತೆ ಕೂಡ ಇರುತ್ತದೆ.

ಅತಿಯಾಗಿ ಭಾವುಕಾಗಿರುವುದಿಲ್ಲ

ಅತಿಯಾಗಿ ಭಾವುಕಾಗಿರುವುದಿಲ್ಲ

ಮೊದಲ ಗರ್ಭಾವಸ್ಥೆಯಲ್ಲಿ ಇದ್ದಂತಹ ಅತಿಯಾದ ಭಾವುಕತೆಗೆ ನೀವು ಒಳಗಾಗುವುದಿಲ್ಲ. ಏಕೆಂದರೆ ಈಗಾಗಲೇ ಒಂದು ಕಂದ ನಿಮ್ಮ ಮನೆಯಲ್ಲಿ ಇರುವುದರಿಂದ ನಿಮ್ಮ ನಿಯಂತ್ರಣದಲ್ಲಿ ವಸ್ತುಗಳನ್ನು ಹೇಗೆ ಮಾರ್ಪಡಿಸಬೇಕು ಎಂಬ ಯೋಜನೆ ನಿಮ್ಮಲ್ಲಿರುತ್ತದೆ. ನಿಮ್ಮ ಮೊದಲ ಹೆರಿಗೆಗಿಂತ ಎರಡನೆಯ ಹೆರಿಗೆ ತುಂಬಾ ಸರಳವಾಗಿರುತ್ತದೆ ಸುಲಭವಾಗಿರುತ್ತದೆ.

ಹೆರಿಗೆ ಘೋಷಣೆ

ಹೆರಿಗೆ ಘೋಷಣೆ

ಮೊದಲ ಗರ್ಭಾವಸ್ಥೆಯ ಸಮಯದಲ್ಲಿ ನೀವು ತಾಯಿಯಾಗುತ್ತಿದ್ದೀರಿ ಎಂಬ ಸುದ್ದಿಯನ್ನು ನಿಮ್ಮ ಪತಿ ಇಲ್ಲವೇ ಮನೆಯವರಲ್ಲಿ ಹೇಳುವಾಗ ಹೆಚ್ಚಿನ ಉತ್ಸಾಹವನ್ನು ಹೊಂದಿರುತ್ತೀರಿ. ಎರಡನೆಯ ಹೆರಿಗೆಯ ಸಮಯದಲ್ಲಿ ಅಷ್ಟೊಂದು ಉತ್ಸಾಹ ನಿಮ್ಮಲ್ಲಿರುವುದಿಲ್ಲ. ನೀವು ಅಷ್ಟೊಂದು ಭಾವುಕರೂ ಆಗಿರುವುದಿಲ್ಲ.

ಕೊಠಡಿಯ ಸಿದ್ಧತೆ

ಕೊಠಡಿಯ ಸಿದ್ಧತೆ

ನಿಮ್ಮ ಮೊದಲ ಕಂದಮ್ಮನ ಬರುವಿಕೆಯ ಸಮಯದಲ್ಲಿ ನಿಮ್ಮ ಮನೆಯ ಸಿಂಗಾರಕ್ಕೆ ನೀವು ಹೆಚ್ಚಿನ ಆದ್ಯತೆಯನ್ನು ನೀಡುತ್ತೀರಿ. ಇದಕ್ಕಾಗಿ ಹೆಚ್ಚಿನ ಖರ್ಚನ್ನು ಮಾಡಿರುತ್ತೀರಿ. ಆದರೆ ಎರಡನೆಯ ಮಗುವಿನ ಸಮಯದಲ್ಲಿ ಈ ಖರ್ಚಿಗೆ ಕೊಂಚ ವಿರಮವನ್ನು ನೀವು ನೀಡುವುದು ಖಂಡಿತ. ಏಕೆಂದರೆ ಹೆಚ್ಚಿನ ವಸ್ತುಗಳು ಮನೆಯಲ್ಲಿ ಈಗಾಗಲೇ ಇರುವುದರಿಂದ ನೀವು ಎರಡನೆಯ ಕಂದನಿಗಾಗಿ ಸಾಕಷ್ಟು ಖರ್ಚು ಮಾಡುವುದಿಲ್ಲ.

ನಿರೀಕ್ಷೆಗಳು ಹೆಚ್ಚು ವಾಸ್ತವಿಕ

ನಿರೀಕ್ಷೆಗಳು ಹೆಚ್ಚು ವಾಸ್ತವಿಕ

ಗರ್ಭಧಾರಣೆ ಮತ್ತು ಮಗುವಿನ ಜನನದ ಬಗ್ಗೆ ಬಹಳಷ್ಟು ವಿಷಯಗಳು ಸುಲಭವಾಗಿ ಲಭ್ಯವಿವೆ ಎಂಬ ಅಂಶವನ್ನು ಪರಿಗಣಿಸಿ, ನಿಮ್ಮ ಮೊದಲ ಗರ್ಭಾವಸ್ಥೆಯಲ್ಲಿ, ಅದೇ ರೀತಿಯ ಬಗ್ಗೆ ಕೆಲವು ಅಪರಿಪೂರ್ಣ ನಿರೀಕ್ಷೆಗಳನ್ನು ನೀವು ಹೊಂದಿದ್ದೀರಿ. ನಿಮ್ಮ ಎರಡನೆಯ ಗರ್ಭಧಾರಣೆಯೊಂದಿಗೆ, ಇಂಟರ್ನೆಟ್‌ನಲ್ಲಿ ಹೆರಿಗೆಯ ಬಗ್ಗೆ ನೀವು ಓದಿಕೊಂಡು ನೀವು ಇದಕ್ಕೆ ಸಿದ್ಧರಾಗಿರುತ್ತೀರಿ. ಆದ್ದರಿಂದ, ಈ ಬಾರಿ ನಿಮ್ಮ ನಿರೀಕ್ಷೆಗಳು ಹೆಚ್ಚು ವಾಸ್ತವಿಕವಾಗುತ್ತವೆ ಎಂಬುದು ಸ್ಪಷ್ಟವಾಗುತ್ತದೆ.

Read more about: pregnancy
English summary

How Is A Second Pregnancy Different From The First?

It is obvious that women who are pregnant for the first time have a surrounding excitement that engulfs them because of the simple fact that they are unaware of what is happening to their body and all of it is very new to them. However, when this happens for the second time, it is way different from that of the first, in matters more than one.
X
Desktop Bottom Promotion